ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ದಲಿತ ಸಮುದಾಯವೇ (Dalit Community) ದಲಿತರನ್ನು ಬಹಿಷ್ಕರಿಸಿರುವ ಆರೋಪ ಕೇಳಿ ಬಂದಿದೆ.
ಕಾಲೋನಿಯ 7 ಕುಟುಂಬಗಳು ಬಹಿಷ್ಕಾರಕ್ಕೆ ಒಳಗಾಗಿದ್ದು, ಕುಟುಂಬಗಳ ಜೊತೆ ನೆರೆ ಹೊರೆಯವರು ಮಾತನಾಡದಂತೆ ಕುಲದ ಮುಖಂಡರು ಆದೇಶ ಮಾಡಿದ್ದಾರೆ. ಇದೀಗ ಬಹಿಷ್ಕಾರಕ್ಕೊಳಗಾದ (Social Exclusion) ಕುಟುಂಬಗಳು ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ.
ಕುಲದ ವಿರುದ್ಧ ಮಾತನಾಡಿದ ಕಾರಣಕ್ಕೆ 7 ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಬಹಿಷ್ಕಾರಕ್ಕೊಳಗಾದ ಕುಟುಂಬಗಳ ಜೊತೆ ನೆರೆ ಹೊರೆಯವರು ಮಾತನಾಡದಂತೆ ಆದೇಶ ಮಾಡಲಾಗಿದೆ.
ತಮ್ಮದೇ ಸಮುದಾಯದವರಿಂದ ಸಾಮಾಜಿಕ ಬಹಿಷ್ಕಾರದ ಶಿಕ್ಷೆಗೆ ಗುರಿಯಾಗಿರುವ ಕುಟುಂಬಗಳೀಗ ಸಿಡಿದೆದ್ದಿವೆ. ಈ ಹಿನ್ನೆಲೆ ತಮಗಾದ ಅನ್ಯಾಯವನ್ನು ಅರಿತು, ತಮ್ಮ ನೆರವಿಗೆ ಬರುವಂತೆ ಸರ್ಕಾರ ಸೇರಿದಂತೆ ಡಿಸಿ, ಎಸ್ಪಿ ಹಾಗೂ ತಾಲೂಕು ಆಡಳಿತಕ್ಕೆ ಬಹಿಷ್ಕಾರಕ್ಕೊಳಗಾದ ಕುಟುಂಬಗಳು ಮನವಿ ಮಾಡಿವೆ.
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (Bengaluru University) ದಲಿತರಿಗೆ ಅನ್ಯಾಯ ಆಗ್ತಿದೆ ಅಂತ ಆರೋಪಿಸಿ ರಾಜೀನಾಮೆ ನೀಡಿದ್ದ ದಲಿತ ಪ್ರೊಫೆಸರ್‌ಗಳ ಪತ್ರಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಸ್ಪಷ್ಟನೆ ನೀಡಿದೆ. ಪತ್ರದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಯಾವುದೇ ದಲಿತ ವಿರೋಧಿ ನೀಡಿ ಮಾಡ್ತಿಲ್ಲ. ಜೊತೆಗೆ ಯಾವೆಲ್ಲ ಕ್ರಮಗಳು ಆಗಿವೆ ಅಂತ ಸ್ಪಷ್ಟನೆ ನೀಡಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶಿಕ್ಷಕರಿಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದ್ದು, ದಲಿತ ವಿರೋಧಿ ನೀತಿ ಅನುಸರಿಸಿದೆ ಎಂಬ ವಿಷಯವು ಸತ್ಯಕ್ಕೆ ದೂರವಾಗಿದೆ ಎಂದು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಶಿಕ್ಷಕರ ಸಂಘಕ್ಕೆ ವಿಶ್ವವಿದ್ಯಾಲಯ ಪತ್ರದ ಮೂಲಕ ಸ್ಪಷ್ಟನೆ ನೀಡಿದೆ. ಶಾಸನಬದ್ಧ ಹುದ್ದೆಗಳ ನೇಮಕಾತಿಯಲ್ಲಿ ಬಹುಸಂಖ್ಯಾತ ದಲಿತರಿಗೆ ತಾರತಮ್ಯ ನೀತಿ, ಸರ್ಕಾರದ ಮೀಸಲಾತಿ ನಿಯಮಗಳ ಉಲ್ಲಂಘನೆ ಮತ್ತು ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿ ಕುರಿತು ಬೆಂಗಳೂರು ವಿವಿ ಪತ್ರದ ಮೂಲಕ ಉತ್ತರಿಸಿದೆ. ಇದನ್ನೂ ಓದಿ: 2 ಬಾರಿ ಟಿಕೆಟ್ ಕ್ಯಾನ್ಸಲ್ ಮಾಡಿದ್ರೂ ಡಿಕೆಶಿ ಭೇಟಿಗೆ ಅವಕಾಶ ನೀಡದ ರಾಹುಲ್!
ಪತ್ರದಲ್ಲೇನಿದೆ?
ಕುಲಪತಿ, ಕುಲಸಚಿವರು, ವಿತ್ತಾಧಿಕಾರಿಗಳು ಮತ್ತು ಕುಲಸಚಿವರು (ಮೌಲ್ಯಮಾಪನ) ಶಾಸನಬದ್ಧ ಹುದ್ದೆಗಳಿಗೆ ಸರ್ಕಾರವೇ ನೇರವಾಗಿ ನೇಮಕಾತಿ ಮಾಡುತ್ತಾ ಬಂದಿರುವುದರಿಂದ ಈ ನೇಮಕಾತಿಯಲ್ಲಿ ಬೆಂಗಳೂರು ವಿವಿಯ ಅಥವಾ ಕುಲಪತಿಗಳ ಪಾತ್ರವೇನೂ ಇರುವುದಿಲ್ಲ. ಹಾಗಿದ್ದಾಗಿಯೂ ತಾರತಮ್ಯ ನೀತಿ ಎಂದು ತಿಳಿಸಿರುವುದು ವಿಷಾದನೀಯ. ಇದನ್ನೂ ಓದಿ: 24 ಗಂಟೆಯೊಳಗೆ ಭಟ್ಕಳ ಪಟ್ಟಣವನ್ನ ಸ್ಫೋಟಿಸುತ್ತೇವೆ – ಪೊಲೀಸ್ ಠಾಣೆಗೆ ಬೆದರಿಕೆ ಸಂದೇಶ
ಬೆಂಗಳೂರು ವಿವಿಯ ಆಡಳಿತ ಹುದ್ದೆಗಳಾದ ನಿರ್ದೇಶಕರು, ಸಂಯೋಜಕರು, ವಿಶೇಷಾಧಿಕಾರಿ ಮತ್ತು ನೋಡೆಲ್ ಅಧಿಕಾರಿಗಳ 30 ಹುದ್ದೆಗಳ ಪೈಕಿ 22 ಹುದ್ದೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶಿಕ್ಷಕರನ್ನೇ ನೇಮಿಸಲಾಗಿದೆ. ಉಳಿದ 8 ಹುದ್ದೆಗಳಿಗೆ ಇತರ ವರ್ಗದ ಶಿಕ್ಷಕರನ್ನು ನೇಮಿಸಲಾಗಿದೆ. ವಿಶ್ವವಿದ್ಯಾಲಯ ಹಂತದಲ್ಲೇ ನೇಮಕಾತಿ ಮಾಡಬಹುದಾದ ಹುದ್ದೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಪ್ರಾಧ್ಯಾಪಕರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ನೇಮಕ ಮಾಡಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇನ್ನೂ ರಾಜ್ಯ ಸರ್ಕಾರ ರಾಜ್ಯಪಾಲರ ಅನುಮೋದನೆಯೊಂದಿಗೆ 4 ಶಿಕ್ಷಕರನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಯಂ ಶಿಕ್ಷಕರ ಕೊರತೆಯಿಂದ ಮತ್ತು ಶಿಕ್ಷಣದ ಗುಣಮಟ್ಟವನ್ನು ಕಾಪಾಡುವ ದೃಷ್ಟಿಯಿಂದ ಅಂತರ್ ವಿಶ್ವವಿದ್ಯಾಲಯ ವರ್ಗಾವಣೆ ಮಾಡಿದೆ. ಆದ್ದರಿಂದ ದಲಿತ ವಿರೋಧ ನೀತಿ ಅನುಸರಿಸಿದೆ ಎಂಬ ವಿಷಯವು ಸತ್ಯಕ್ಕೆ ದೂರವಾದುದ್ದು.ಬೆಂಗಳೂರು ವಿವಿಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 126 ಶಿಕ್ಷಕರ ಪೈಕಿ 80 ಜನ ಶಿಕ್ಷಕರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಶಿಕ್ಷಕರಾಗಿರುತ್ತಾರೆ. ಅಂದರೆ 63.5%ರಷ್ಟು ಶಿಕ್ಷಕರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರುತ್ತಾರೆ. ಇದನ್ನೂ ಓದಿ: ಭಾರತದ ಹಾನಿಯ ಒಂದೇ ಒಂದು ಫೋಟೋ ತೋರಿಸಿ – ವಿದೇಶಿ ಮಾಧ್ಯಮಗಳ ವಿರುದ್ಧ ದೋವಲ್ ಕೆಂಡಾಮಂಡಲ
ಬೆಂಗಳೂರು ವಿವಿಯಲ್ಲಿ ಹೊರತುಪಡಿಸಿ ರಾಜ್ಯದ ಯಾವುದೇ ಇತರೇ ಸಾರ್ವಜನಿಕ ವಿಶ್ವವಿದ್ಯಾಲಯಗಳು ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಿರುವುದಿಲ್ಲ. ಸಮಾಜ ಕಲ್ಯಾಣ ಇಲಾಖೆ ಗುರುತಿಸಿದ್ದ 55 ಬ್ಯಾಕ್‌ಲಾಗ್ ಹುದ್ದೆಗಳಲ್ಲಿ 35 ಬ್ಯಾಕ್‌ಲಾಗ್ ಹುದ್ದೆಗಳನ್ನು ಈಗಾಗಲೇ ತುಂಬಲಾಗಿರುತ್ತದೆ. ಉಳಿದ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.
2024-25 ಸಾಲಿನಲ್ಲಿ ಸುಮಾರು 44 ಪ್ರಾಧ್ಯಾಪಕರಿಗೆ ಹಿರಿಯ ಪ್ರಾಧ್ಯಾಪಕರಾಗಿ ಮುಂಬಡ್ತಿ ನೀಡಲಾಗಿದ್ದು, ಇವರ ಪೈಕಿ 29 ಪ್ರಾಧ್ಯಾಪಕರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವಾಗಿರುತ್ತಾರೆ. ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶಿಕ್ಷಕರಿಗೆ ಪ್ರಾತಿನಿಧ್ಯ ನೀಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು: ಬಿಜೆಪಿಯವರಿಗೆ (BJP) ಈ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಬಾರದು. ಹೇಗಾದರೂ ಮಾಡಿ ಇದನ್ನು ಹತ್ತಿಕ್ಕುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಸಿಟ್ಟು ಹೊರ ಹಾಕಿದ್ದಾರೆ.
ದಲಿತರ ಹಣ ಗ್ಯಾರಂಟಿಗೆ ಬಳಸಿದ ವಿಚಾರಕ್ಕೆ ಬಿಜೆಪಿ ಜನಾಂದೋಲನ ಮಾಡಲು ಮುಂದಾಗಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿಗಳನ್ನ ಬಡವರಿಗೆ ನೀಡಲಾಗುತ್ತಿದೆ. ಬಡವರಿಗೆ (Poor) ಹಣ ಕೊಡಲು ಇವರಿಗೆ ಮನಸ್ಸಿಲ್ಲ ಅಂದರೆ ಬಿಜೆಪಿಯ ಸಿದ್ಧಾಂತ ಬಡವರ ಪರ ಇಲ್ಲ ಎಂದಾಯಿತು. ಅದನ್ನು ಅವರು ಪಬ್ಲಿಕ್ ಆಗಿ ಹೇಳಲು ಹೊರಟಿದ್ದಾರೆ. ಜನ ಇದನ್ನೆಲ್ಲಾ ಗಮನಿಸುತ್ತಾರೆ ಎಂದರು.
ಬಡವರಿಗೆ ಕೊಡುವ ಹಣಕ್ಕೂ ನೀವು ಅಡ್ಡ ಬರುತ್ತೀರಿ. ಬಿಜೆಪಿ ಬಗ್ಗೆ ಜನ ಸಮುದಾಯ ಏನು ಯೋಚನೆ ಮಾಡುತ್ತದೆ? ದಲಿತರಿಗೆ (Dalits) ಮೀಸಲಿಟ್ಟ ಹಣವನ್ನು ದಲಿತರಿಗೆ ಕೊಡುತ್ತೇವೆ. ಶಕ್ತಿ ಯೋಜನೆಯಲ್ಲಿ ದಲಿತರು ಹೋಗಲ್ವಾ? ನಾನು ಅದನ್ನ ಸಮರ್ಥನೆ ಮಾಡಲು ಹೋಗುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕೋರ್ಟ್ ಹಾಲ್‌ನಲ್ಲಿ ಪವಿತ್ರಾ, ದರ್ಶನ್ ದೂರ ದೂರಾ – ಕಣ್ಣೀರಿಡುತ್ತ ತೆರಳಿದ ಗೆಳತಿ!
ಸರ್ಕಾರದಲ್ಲಿ ಇಂಥ ಯೋಜನೆಗಳು ಮಾಡುವಾಗ ಯೋಚನೆ ಮಾಡುತ್ತೇವೆ. ಬಡವರಿಗೆ ಕೊಡುವ ಕಾರ್ಯಕ್ರಮದಲ್ಲಿ ಒಂದಿಷ್ಟು ಬದಲಾವಣೆಗಳು ಆಗುತ್ತದೆ. ಅದನ್ನೇ ದೊಡ್ಡದು ಮಾಡುತ್ತಿದ್ದಾರೆ. ನಾವು ಏನು ಹಣ ಕೊಳ್ಳೆ ಹೊಡೆದಿದ್ದೇವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಾಮರಾಜನಗರ: ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಗ್ರಾಮಾಂತರ ಪ್ರದೇಶಗಳಲ್ಲಿ ಪಾಳೆಗಾರಿಕೆ ಸಂಸ್ಕೃತಿ ಇನ್ನೂ ಮುಂದುವರಿದಿದೆ. ಅನಿಷ್ಠ ಪದ್ದತಿಗಳು ಅಮಾಯಕ ಕುಟುಂಬಗಳನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಇದಕ್ಕೆ ಉದಾಹರಣೆ ಎಂಬಂತೆ ಚಾಮರಾಜನಗರ (Chamarajanagara) ಜಿಲ್ಲೆಯಲ್ಲಿ ಪರಿಶಿಷ್ಟ ವರ್ಗದವರಿಗೆ ಮನೆ ಬಾಡಿಗೆ ನೀಡಿದ ಒಂದೇ ಕಾರಣಕ್ಕೆ ಸವರ್ಣೀಯ ಕುಟುಂಬವೊಂದಕ್ಕೆ ಸವರ್ಣೀಯರೇ ಸಾಮಾಜಿಕ ಬಹಿಷ್ಕಾರ (Social Boycott) ಹಾಕಿರುವುದು ಬೆಳಕಿಗೆ ಬಂದಿದೆ.
ದೇವರ ಕಾರ್ಯಕ್ಕೆ ಚಂದಾ ಕೊಡಲಿಲ್ಲ, ಪಂಚಾಯಿತಿ ಕಟ್ಟೆಯಲ್ಲಿ ಯಜಮಾನರ ಮಾತು ಕೇಳಲಿಲ್ಲ ಅಥವಾ ಅಂತರ್ಜಾತಿಯ ವಿವಾಹವಾದರು ಎಂಬಿತ್ಯಾದಿ ಕಾರಣಗಳಿಗೆ ಹಳ್ಳಿಗಳಲ್ಲಿ ಸಾಮಾಜಿಕ ಬಹಿಷ್ಕಾರ ಹಾಕುವುದನ್ನು ಕೇಳಿದ್ದೇವೆ.. ನೋಡಿದ್ದೇವೆ. ಆದ್ರೆ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಅಗರ ಗ್ರಾಮದಲ್ಲಿ ಪರಿಶಿಷ್ಟ ವರ್ಗದವರಿಗೆ ಮನೆ ನೀಡಿದ ಕಾರಣಕ್ಕೆ ಸವರ್ಣೀಯ ಕುಟುಂಬವೊಂದಕ್ಕೆ ಸವರ್ಣೀಯರೇ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.
ಗ್ರಾಮದ ಲಿಂಗಾಯತ ಬಡಾವಣೆಯ ವೀರಣ್ಣ 10 ತಿಂಗಳ ಹಿಂದೆ ತಮಗೆ ಸೇರಿದ ಮನೆಯನ್ನು ಪರಿಶಿಷ್ಟ ವರ್ಗದ ಕುಟುಂಬವೊಂದಕ್ಕೆ ಬಾಡಿಗೆಗೆ ನೀಡಿದ್ದರು. ಅನ್ಯ ಜಾತಿಯವರಿಗೆ ಮನೆ ಬಾಡಿಗೆ ನೀಡಿದ ಕಾರಣಕ್ಕೆ ಗ್ರಾಮದ ಲಿಂಗಾಯತ ಮುಖಂಡರು ವೀರಣ್ಣ ಅವರ ಕುಟುಂಬಕ್ಕೆ ಬಹಿಷ್ಕಾರ ಹೇರಿದ್ದಾರೆ. ತಮ್ಮ ಕುಟುಂಬವನ್ನು ಗ್ರಾಮದ ಯಾವುದೇ ಧಾರ್ಮಿಕ ಸಭೆ ಸಮಾರಂಭಗಳಿಗೆ ಕರೆಯುತ್ತಿಲ್ಲ ಹಾಗೂ ದೇವಸ್ಥಾನಕ್ಕೆ ಹೋಗಲು ತಡೆ ಒಡ್ಡಲಾಗುತ್ತಿದೆ. ತಮಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿದೆ ಇದರಿಂದ ಗ್ರಾಮದಲ್ಲಿ ಬದುಕು ನಡೆಸುವುದೇ ದುಸ್ತರವಾಗಿದೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಮಗೆ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ ಎನ್ನುತ್ತಿದ್ದಾರೆ.
ತಮಗೆ ಬಹಿಷ್ಕಾರ ಹಾಕಿದವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ತಮಗೆ ಎಂದಿನಂತೆ ಗ್ರಾಮದಲ್ಲಿ ಇತರರೊಂದಿಗೆ ಸಾಮರಸ್ಯದಿಂದ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಬಹಿಷ್ಕಾರಕ್ಕೆ ಒಳಗಾದ ವೀರಣ್ಣ ಅವರ ಕುಟುಂಬದ ಒತ್ತಾಯವಾಗಿದೆ. ಒಟ್ಟಾರೆ ನಾಗರೀಕತೆ ಎಷ್ಟೇ ಮುಂದುವರಿದಿದ್ದರೂ ಸಾಮಾಜಿಕ ಬಹಿಷ್ಕಾರ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ದತಿಗಳು ನಾಗರೀಕ ಸಮಾಜವನ್ನು ಬಾಧಿಸುತ್ತಿರುವುದು ವಿಪರ್ಯಾಸವಾಗಿದೆ.
ಮೈಸೂರು: ದಲಿತರಿಗೆ (Dalits) ಅನ್ಯ ಕೋಮಿನ ಜನ ಬಹಿಷ್ಕಾರ ಹಾಕಿದ ಅನಿಷ್ಟ ಘಟನೆಗಳನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಊರಿನಲ್ಲಿ ದಲಿತರ ಮಾದಿಗ ಸಮುದಾಯದ ಕುಟುಂಬಕ್ಕೆ ಅದೇ ಮಾದಿಗ ಸಮುದಾಯದವರು ಸೇರಿ ನಾಲ್ಕು ವರ್ಷದಿಂದ ಬಹಿಷ್ಕಾರ (Boycott) ಹಾಕಿದ್ದಾರೆ. ಈ ಘಟನೆ ಸಿಎಂ ಹುಟ್ಟೂರು ಸಿದ್ದರಾಮನ ಹುಂಡಿ ಗ್ರಾಮದಿಂದ ಕೂಗಳತೆ ದೂರದಲ್ಲಿನ ಶ್ರೀನಿವಾಸಪುರದಲ್ಲಿ (Srinivaspur) ನಡೆದಿದೆ.
ಶ್ರೀನಿವಾಸಪುರ ಗ್ರಾಮದಲ್ಲಿ ಇರುವುದೆಲ್ಲಾ ಮಾದಿಗ ಸಮುದಾಯದ ಜನ. ಸುರೇಶ್ ಕುಟುಂಬಕ್ಕೆ ಅವರದೇ ಮಾದಿಗ ಸಮುದಾಯದ ಜನರು ನಾಲ್ಕು ವರ್ಷದಿಂದ ಬಹಿಷ್ಕಾರ ಹಾಕಿದ್ದಾರೆ. ಗ್ರಾಮದಲ್ಲಿ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಸುರೇಶ್‌ಗೆ ಗ್ರಾಮದ ಹಿರಿಯರು 16,000 ರೂ. ದಂಡ ಹಾಕಿದ್ದರು. ದಂಡ ಕಟ್ಟಲು ಶಕ್ತಿ ಇಲ್ಲದ ಸುರೇಶ್ ದಂಡ ಕಟ್ಟಲು ಸಾಧ್ಯವಿಲ್ಲ ಎಂದಿದ್ದಾರೆ. ಇಷ್ಟಕ್ಕೇ ಈ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಇದನ್ನೂ ಓದಿ: ಹಾಲಿನ ದರ 10 ರೂ. ಹೆಚ್ಚಳಕ್ಕೆ ಬೇಡಿಕೆ ಇದೆ: ಸಚಿವ ವೆಂಕಟೇಶ್
ಊರಿನ ದೇವಸ್ಥಾನಕ್ಕೆ ಈ ಕುಟುಂಬಕ್ಕೆ ಪ್ರವೇಶವಿಲ್ಲ. ಊರ ದೇವರ ಮೆರವಣಿಗೆ ವೇಳೆ ದೇವರ ಉತ್ಸವ ಇವರ ಮನೆ ಮುಂದೆ ನಿಲ್ಲುವಂತಿಲ್ಲ. ಗ್ರಾಮದಲ್ಲಿ ಯಾರೂ ಈ ಕುಟುಂಬದವರನ್ನು ಮಾತನಾಡಿಸುವಂತಿಲ್ಲ. ಕೂಲಿಗೆ ಕರೆಯುವಂತಿಲ್ಲ. ಮನೆಯಲ್ಲಿ ಯಾರಾದರೂ ಸತ್ತರೆ ಹೆಣ ಹೊರಲು ಯಾರೂ ಹೋಗುವಂತಿಲ್ಲ ಎಂದು ನಿಯಮ ಜಾರಿ ಮಾಡಿ ಬಹಿಷ್ಕಾರ ಹಾಕಿದ್ದಾರೆ. ಇದನ್ನೂ ಓದಿ: ಪೀಣ್ಯ ಬಸವೇಶ್ವರ ಬಸ್ ನಿಲ್ದಾಣವಾಗುತ್ತಾ ಕಲ್ಯಾಣ ಮಂಟಪ, ಮಾಲ್?
ಚಿಕ್ಕಮಗಳೂರು: ದಲಿತರು ದೇವಸ್ಥಾನದ ಕಾಂಪೌಂಡ್ ಒಳಗೆ ಹೋದರು ಎಂಬ ಕಾರಣಕ್ಕೆ ದೇವಸ್ಥಾನಕ್ಕೆ ಬೀಗ ಹಾಕಿ ದಲಿತರಿಗೆ ದಂಡ ಹಾಕಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಸಮೀಪದ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಎರಡು ದಿನದ ಹಿಂದೆ ಬಿ.ಕೋಡಿಹಳ್ಳಿ ಗ್ರಾಮದ ಮಂಜಪ್ಪ ಹಾಗೂ ಮದನ್ ಎಂಬವರು ಗ್ರಾಮದ ಆಂಜನೇಯ ದೇವಸ್ಥಾನದ ಕಾಂಪೌಂಡ್ ಒಳಗೆ ಹೋಗಿದ್ದರು. ಅದಕ್ಕೆ ಗ್ರಾಮದ ಸವರ್ಣೀಯರು ಆ ಇಬ್ಬರಿಗೂ ದಂಡ ಹಾಕಿ ದೇವಸ್ಥಾನಕ್ಕೆ ಬೀಗ ಹಾಕಿದ್ದಾರೆ. ಇದನ್ನೂ ಓದಿ: ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಅಸಂವಿಧಾನಿಕ ಪದ ಬಳಸಿ ನಿಂದಿಸಿದ್ರಾ?
ಎರಡು ದಿನದಿಂದ ಆಂಜನೇಯನಿಗೆ ಪೂಜೆ ಕೂಡ ನಿಂತಿದೆ. ಮಂಜಪ್ಪ ಹಾಗೂ ಮದನ್ ಎಂಬ ಇಬ್ಬರಿಗೂ ಗ್ರಾಮಸ್ಥರು ದಂಡ ಹಾಕಿದ್ದಾರೆ. ದೇವಸ್ಥಾನದ ಪೂಜೆ ನಡೆಯಬೇಕು ಅಂದರೆ ಎರಡೂವರೆ ಲಕ್ಷ ಹಣ ನೀಡಬೇಕು ಎಂದು ಹೇಳಿದ್ದಾರೆ. ದೇವಸ್ಥಾನದ ಗರ್ಭಗುಡಿ ಹಾಗೂ ಕಾಂಪೌಂಡ್ ಶುದ್ಧೀಕರಣಕ್ಕಾಗಿ ಎರಡೂವರೆ ಲಕ್ಷ ಹಣ ನೀಡಿದ್ರೆ ದೇವಸ್ಥಾನದಲ್ಲಿ ಮತ್ತೆ ಪೂಜೆ ನಡೆಯಲಿದೆ ಎಂದು ಆಗ್ರಹಿಸಿದ್ದಾರೆ.
ಮೈಸೂರು: ಇಲ್ಲಿನ ಜಯಪುರ ಹೋಬಳಿ ಮಾರ್ಬಳ್ಳಿ ಗ್ರಾಮದ ಮಾರಮ್ಮ ದೇವಾಲಯದ (Maramma Temple) ಬಾಗಿಲನ್ನು 11 ವರ್ಷಗಳ ನಂತರ ತೆರೆಯಲಾಗಿದೆ.
11 ವರ್ಷಗಳ ಹಿಂದೆ ದಲಿತರ (Dalits) ಪ್ರವೇಶಕ್ಕೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಭಾರೀ ವಿವಾದ ಉಂಟಾಗಿ ಮಾರಮ್ಮನ ದೇವಾಲಯದ ಬಾಗಿಲಿಗೆ ಬೀಗ ಹಾಕಲಾಗಿತ್ತು. ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಶಾಂತಿಸಭೆ ಯಶಸ್ವಿಯಾಗಿ ದೇವಸ್ಥಾನದ ಬಾಗಿಲು ತೆರೆಯಲಾಯಿತು. ಇದನ್ನೂ ಓದಿ: ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಆಸ್ಪತ್ರೆಗೆ ದಾಖಲು
ಗ್ರಾಮದಲ್ಲಿ 11 ವರ್ಷಗಳ ನಂತರ ಸಂತಸ ಮನೆ ಮಾಡಿದೆ. ಎಲ್ಲಾ ಕೋಮಿನ 5 ಮುಖಂಡರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಸುಧೀರ್ಘ ಚರ್ಚೆ ನಂತರ ಮಾರಮ್ಮ ದೇವಾಲಯದ ಬಾಗಿಲನ್ನು ಮತ್ತೆ ತೆರೆಯುವ ನಿರ್ಧಾರಕ್ಕೆ ಬರಲಾಯಿತು. ದೇವತೆಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ವಿವಾದಕ್ಕೆ ಅಂತ್ಯ ಹಾಡಲಾಗಿದೆ. ಇದನ್ನೂ ಓದಿ: ಹೆಂಡತಿ, ಮಾವನ ಕಿರುಕುಳಕ್ಕೆ ಹೆಡ್‌ಕಾನ್‌ಸ್ಟೇಬಲ್ ಬಲಿ – ರೈಲಿಗೆ ತಲೆಕೊಟ್ಟು ಆತ್ಮಹತ್ಯೆ
ಬೆಂಗಳೂರು: ಇಡೀ ರಾಜ್ಯ ಎಸ್.ಎಂ ಕೃಷ್ಣ (SM Krishna) ಅವರ ಅವಧಿಯಲ್ಲಿ ಉತ್ತುಂಗಕ್ಕೇರಿತ್ತು. ಹಾಗಂತ ಆ ಕಾಲದಲ್ಲಿ ರಾಜ್ಯ ಏನೂ ಸಂಪದ್ಭರಿತವಾಗಿರಲಿಲ್ಲ. ತೀವ್ರತರ ಬರಗಾಲದ ಬೇಗೆಯಲ್ಲಿ ಹೈರಾಣಾಗಿತ್ತು. ಈ ಮಧ್ಯೆ ಸಮಸ್ಯೆ ಜೊತೆಗೆ ಕಾವೇರಿ ಹೋರಾಟದ ಕಾವು ಹೆಚ್ಚಾಗಿತ್ತು. ಜೊತೆಗೆ ಸರ್ಕಾರಕ್ಕೆ ಬಂದೆರಗಿದ್ದ ಬಹು ದೊಡ್ಡ ಸಮಸ್ಯೆ ಅಂದ್ರೆ ಡಾ. ರಾಜ್ ಕುಮಾರ್ ಅಪಹರಣ. ಇದೆಲ್ಲದರ ನಡುವೆಯೇ ಕೋಲಾರ ಕಂಬಾಲಪಲ್ಲಿಯಲ್ಲಿ ಜಾತಿ ವ್ಯವಸ್ಥೆಯ ಕ್ರೂರ ಘಟನೆಯೊಂದು ನಡೆದಿತ್ತು.
ಏನಿದು ಕಂಬಾಲಪಲ್ಲಿ ದುರಂತ?
2000ರ ಮಾರ್ಚ್‌ನಲ್ಲಿ ಕೋಲಾರದ ಕಂಬಾಲಪಲ್ಲಿ ದುರಂತ (Kambalapalli Incident) ಸಂಭವಿಸಿತ್ತು. ಇದು ರಾಷ್ಟ್ರಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಸವರ್ಣೀಯರು 7 ಮಂದಿ ದಲಿತರನ್ನ ಮನೆಯಲ್ಲಿ ಕೂಡಿ ಹಾಕಿ ಜೀವಂತವಾಗಿ ಸುಟ್ಟು ಹಾಕಿದ್ದರು. ಇದೊಂದು ಜಾತಿ ವ್ಯವಸ್ಥೆಯ ಕ್ರೂರ ಘಟನೆಯಾಗಿತ್ತು. ಇದನ್ನೂ ಓದಿ: ತಿಮ್ಮಪ್ಪನ ಹುಂಡಿಗೆ ವಾಚ್ ಹಾಕಿ ಬಂದ ಮೇಲೆ ಕೇಂದ್ರಮಂತ್ರಿಯಾಗಿದ್ದ ಎಸ್‌ಎಂಕೆ!
ಅಪರಾಧಿಗಳಿಗೇನೋ ಶಿಕ್ಷೆಯಾಯಿತು. ಆದ್ರೆ ಮುಖ್ಯಮಂತ್ರಿ ಅವತ್ತು ದಲಿತರ ಪರವಾಗಿ ನಿಂತು ಅವರಿಗೆ ರಕ್ಷಣೆ ನೀಡುವುದರ ಜೊತೆಗೆ ಮಾನವೀಯತೆಯ ದೃಷ್ಠಿಯಿಂದ ಸಮಸ್ಯೆ ಬಗೆಹರಿಸಿದ್ರು. ಪ್ರತಿ ದಲಿತ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟು 2 ಎಕರೆ ಜಮೀನು ಮಂಜೂರು ಮಾಡಿದ್ರು. ಆ ಬಳಿಕ ಕಂಬಾಲಪಲ್ಲಿ ದಲಿತರು ಸ್ವತಂತ್ರವಾಗಿ ಬದುಕೋ ಅವಕಾಶ ನಿರ್ಮಾಣವಾಯಿತು. ಇದನ್ನೂ ಓದಿ: ಮದುವೆಗೂ ಮುನ್ನ ಭಾವಿ ಪತ್ನಿ ಸಂದರ್ಶನ ಮಾಡಿದ್ದ ಕೃಷ್ಣ!
108 ದಿನ ತಂತಿ ಮೇಲಿನ ನಡಿಗೆ:
ತಮ್ಮ ಸ್ವಂತ ಶ್ರಮದಿಂದಲೇ ಎಸ್‌ಎಂ ಕೃಷ್ಣ ಅವರು ಸಿಎಂ ಆದ್ರು. ಆದ್ರೆ ಅವರು ಅವರು ಸಿಎಂ ಖುರ್ಚಿ ಏರಿದಾಗ ಅವರ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಸಾಲು ಸಾಲು ಸಂಕಷ್ಟಗಳು ಎದುರಾಗಿದ್ವು.. ಸಿಎಂ ಆದ ಮರು ವರ್ಷದಲ್ಲೇ ಡಾ.ರಾಜ್‌ಕುಮರ್ ಅಪಹರಣ ರಾಜ್ಯಾದ್ಯಂತ ಕಿಚ್ಚು ಹೆಚ್ಚಿಸಿತ್ತು. ತಮಿಳಿಗರು-ಕನ್ನಡಿಗರ ನಡುವೆ ಜೋರು ಗಲಾಟೆಗಳು ಆಗೋ ಲಕ್ಷಣಗಳಿದ್ದವು. ಇತ್ತ ತಮಿಳರ ಆಸ್ತಿ ಪಾಸ್ತಿ ಕಾಪಾಡೋದರ ಜೊತೆಗೆ ಕನ್ನಡಿಗರ ಆಸ್ತಿ ಪಾಸ್ತಿಯೂ ಕಾಪಾಡೋ ಜವಾಬ್ದಾರಿ ಎಸ್‌ಎಂ ಕೃಷ್ಣ ಅವರದ್ದಾಗಿತ್ತು. ತಮ್ಮ ಪಾಡಿಗೆ ತಾವು ಟೆನ್ನಿಸ್ ಆಡ್ತಿದ್ದಾಗ ಪಾರ್ವತಮ್ಮ ಅವರು ನೇರಾ ಕೃಷ್ಣ ಅವರಿಗೆ ಕಾಲ್ ಮಾಡಿ ಪತಿ ರಾಜ್‌ಕುಮಾರ್ ಕಿಡ್ನ್ಯಾಪ್ ಆಗಿರೋ ಬಗ್ಗೆ ವಿಚಾರ ತಿಳಿಸಿದ್ರು. ಆ ಕ್ಷಣ ದಿಕ್ಕು ತೋಚದಂತಾಗಿತ್ತು, 108 ದಿನಗಳ ಕಾಲ ಕೃಷ್ಣ ಅವರದ್ದು ತಂತಿಯ ಮೇಲಿನ ನಡಿಗೆ ಆಗಿತ್ತು. ಇದನ್ನೂ ಓದಿ: ಜಮ್ಮು-ಕಾಶ್ಮೀರದ ದಾಲ್ ಸರೋವರದಲ್ಲಿ ಮೊದಲ ಜಲ ಸಾರಿಗೆ ಆರಂಭಿಸಿದ ಉಬರ್ – ಬುಕ್ಕಿಂಗ್ ಹೇಗೆ?
ಇತ್ತ ದಿನ ಕಳೆಯುತ್ತಿತ್ತು. ವೀರಪ್ಪನ್ ರಾಜ್ ಕುಮಾರ್ ಬಿಡುಗಡೆ ಮಾಡೋಕೆ 50 ಕೋಟಿ ಡಿಮ್ಯಾಂಡ್ ಇಟ್ಟಿದ್ದ.. ಜೊತೆಗೆ ಜೈಲಲ್ಲಿದ್ದ ಆತನ ಸಹಚರರನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದ. ಇತ್ತ ರಾಜ್‌ಕುಮಾರ್ ಇಲ್ಲದ ಸಂದರ್ಭ ನೋಡಿಕೊಂಡು ದುರ್ಬಳಕೆ ಮಾಡಿಕೊಳ್ಳೋಕೆ ದುಷ್ಟ ಶಕ್ತಿಗಳು ಕಾದಿದ್ವು. ಅವುಗಳೆಲ್ಲವನ್ನೂ ಹತ್ತಿಕ್ಕಿ ನೇರಾ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಆಗಿದ್ದ ಕರುಣಾನಿಧಿ ಅವರನ್ನ ಭೇಟಿ ಮಾಡಿ ಅಲ್ಲಿನ ಪತ್ರಕರ್ತ ನಕೀರನ್ ಸಹಾಯ ಪಡೆದು ಏನೇನೋ ಸರ್ಕಸ್ ಮಾಡಬೇಕಾಗಿ ಬಂತು. ಅಷ್ಟೂ ದಿನಗಳ ಕಾಲ ಹಗಲೂ ರಾತ್ರಿ ಎಸ್‌ಎಂ ಕೃಷ್ಣ ಒತ್ತಡ ಅನುಭವಿಸಿದ್ರು. ಜನರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಳ್ಳೋದರ ಜೊತೆಗೆ ವೀರಪ್ಪನ್ ರಾಜ್ ಕುಮಾರ್ ಮೇಲೆ ಯಾವುದೇ ದುಷ್ಕೃತ್ಯ ಹೇರದಂತೆ ನೋಡಿಕೊಳ್ಳೋದು ಅವತ್ತಿನ ಸವಾಲಾಗಿತ್ತು. ಕೊನೆಗೂ ರಾಜ್ ಕುಮಾರ್ ಅವರನ್ನು ಬಿಡಿಸಿಕೊಳ್ಳುವಲ್ಲಿ ಕೃಷ್ಣ ಯಶಸ್ವಿಯೂ ಆಗಿದ್ರು.
ಕೃಷ್ಣ ಅವರ ಅವಧಿಯಲ್ಲಿ ರಾಜ್ಯ ತೀವ್ರತರ ಬರಗಾಲಕ್ಕೆ ಸಿಲುಕಿತ್ತು. ಮೋಡ ಬಿತ್ತನೆ ಮೂಲಕ ರಾಜ್ಯದಲ್ಲಿ ಮಳೆ ಸುರಿಸಲು ನೋಡಿದ್ರು. ಆದ್ರೆ ಆ ಪ್ಲ್ಯಾನ್ ಸಕ್ಸಸ್ ಆಗಲಿಲ್ಲ.. ಮಕ್ಕಳಿಗೇನೋ ಶಾಲೆಯಲ್ಲಿ ಬಿಸಿಯೂಟ ನೀಡೋ ಮೂಲಕ ಹಸಿವು ನೀಗಿಸಿದ್ರು. ಆದ್ರೆ ರೈತರ ಪಾಡು ಅಧೋಗತಿ ಆಗಿತ್ತು. ಅದೇ ವೇಳೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಾ ಹೋದ್ವು. ಹೀಗೆ ರಾಜ್ಯದಲ್ಲಿ ನೀರಿಲ್ಲ. ಬರಗಾಲದ ಸಮಯದಲ್ಲೇ ತಮಿಳುನಾಡು ಕಾವೇರಿ ನೀರಿಗಾಗಿ ನ್ಯಾಯಾಲಯದ ಮೊರೆ ಹೋಗಿತ್ತು. ಆದ್ರೆ ನ್ಯಾಯಾಲಯ ತಮಿಳುನಾಡಿನ ಪರ ಆದೇಶ ಕೊಟ್ಟಿತ್ತು. ಆಗ ಸಂದಿಗ್ಧ ಸ್ಥಿತಿಗೆ ಸಿಲುಕಿದ್ದ ಕೃಷ್ಣ ಅವರು ರೈತರ ಹಿತ ಕಾಪಾಡೋದಾ ಅಥವಾ ನ್ಯಾಯಾಲಯ ಹೇಳಿದಂತೆ ನೀರು ಬಿಡುವುದಾ ಎಂದು ಗೊತ್ತಾಗದೇ ರೈತರನ್ನೇ ಕೇಳೋಣ ಅಂತ ಆ 72ರ ವಯಸ್ಸಲ್ಲೂ ಪಾದಯಾತ್ರೆ ಹಮ್ಮಿಕೊಂಡಿದ್ರು. ಆದ್ರೆ ಅವರ ಅದೃಷ್ಟವೋ ಏನೋ ಇನ್ನೇನು ಪಾದಯಾತ್ರೆ ಮಂಡ್ಯ ನಗರಕ್ಕೆ ತಲುಪುತ್ತಿದ್ದಂತೆ ರಾಜ್ಯದಲ್ಲಿ ವ್ಯಾಪಕ ಮಳೆಯಾಗಿ ತಮಿಳುನಾಡಿಗೆ ಸಾಕಷ್ಟು ನೀರು ಹರಿದುಹೋಗಿತ್ತು. ಇದನ್ನೂ ಓದಿ: ಸಂಭಲ್ ಬಳಿಕ ಮತ್ತೊಂದು ಮಸೀದಿ ವಿವಾದ – ಭಾರತದಲ್ಲಿ ಮಸೀದಿ ಮಂದಿರ ಕಗ್ಗಂಟು ಎಲ್ಲೆಲ್ಲಿ ಏನು?
– ಜಾತಿ ನಿಂದನೆ ಪ್ರಕರಣದಲ್ಲಿ ಕೊಪ್ಪಳ ಜಿಲ್ಲಾ ನ್ಯಾಯಾಲಯ ತೀರ್ಪು
ಕೊಪ್ಪಳ: ಜಾತಿ ನಿಂದನೆ ಮತ್ತು ದೌರ್ಜನ್ಯ ಪ್ರಕರಣದಲ್ಲಿ (Atrocity Case) ಬರೋಬ್ಬರಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 5,000 ರೂ. ದಂಡ ವಿಧಿಸಿ ಕೊಪ್ಪಳ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಆದೇಶಿಸಿದೆ. ಪ್ರಕರಣ ಉಳಿದ 3 ಅಪರಾಧಿಗಳಿಗೆ 5 ವರ್ಷ ಜೈಲು ಹಾಗೂ ತಲಾ 2,000 ರೂ. ದಂಡ ಹಾಕಿ ಜಿಲ್ಲಾ ನ್ಯಾಯಾಧೀಶ (Koppal District Majistret) ಸಿ. ಚಂದ್ರಶೇಖರ ಐತಿಹಾಸಿಕ ಆದೇಶ ಹೊರಡಿಸಿದ್ದಾರೆ.
ಪ್ರಕರಣದಲ್ಲಿ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಒಟ್ಟು 117 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಈ ಪೈಕಿ ಹಲವರು ಮೃತಪಟ್ಟಿದ್ದಾರೆ. ಇನ್ನೂ ಕೆಲವರ ಹೆಸರು ರಿಪೀಟ್ ಆಗಿದ್ದಾರೆ. ಉಳಿದ 101 ಆರೋಪಿಗಳು ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಮಾನಿಸಿತ್ತು. ಈ ಪೈಕಿ 3 ಅಪರಾಧಿಗಳು ಎಸ್ಸಿ/ಎಸ್ಟಿ ವರ್ಗಕ್ಕೆ ಸೇರಿದ್ದಾರೆ. ಈ ಹಿನ್ನೆಲೆ ಅವರಿಗೆ ಅಟ್ರಾಸಿಟಿ ಕಾಯ್ದೆ ಅನ್ವಯವಾಗದ ಹಿನ್ನೆಲೆ ಮೂವರು ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಕಡಿಮೆ ಆಗಿದೆ ಎನ್ನಲಾಗಿದೆ.
ಇಂದು ಆದೇಶ ಪ್ರಕಟ:
ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಕಳೆದ 2014ರ ಆ.28 ರಂದು ಘಟನೆ ನಡೆದಿತ್ತು. ಬರೋಬ್ಬರಿ 10 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಅ.21 ರಂದು ಆರೋಪ ಪಟ್ಟಿಯಲ್ಲಿನ ಎಲ್ಲ ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಮಾನಿಸಿ, ಶಿಕ್ಷೆ ಪ್ರಮಾಣದ ಆದೇಶ ಕಾಯ್ದಿರಿಸಿತ್ತು. ಇಂದು (ಅ.24) ಸಂಜೆ ಸುಮಾರು 6 ಗಂಟೆಗೆ ನ್ಯಾಯಾಧೀಶರು ಆದೇಶ ಪ್ರಕಟಿಸಿದರು.
ಏನಿದು ಪ್ರಕರಣ?
ಕೊಪ್ಪಳದ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಕಳೆದ 2014ರ ಆ.29 ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಆದೇಶ ನೀಡಿದೆ. ಕ್ಷೌರದ ಅಂಗಡಿ ಮತ್ತು ಹೋಟೆಲ್‌ಗೆ ಪ್ರವೇಶಕ್ಕೆ ಸಂಬಂಧಿಸಿದಂತೆ, ದಲಿತರು ಮತ್ತು ಗ್ರಾಮದ ಸವರ್ಣೀಯರ ನಡುವೆ ಗಲಾಟೆ ನಡೆದಿತ್ತು.
ನಂತರ ಗಂಗಾವತಿಯ ಚಿತ್ರಮಂದಿರದಲ್ಲಿ ಆರಂಭವಾದ ಗಲಾಟೆ ಮರಕುಂಬಿ ಗ್ರಾಮದಲ್ಲಿ ದಲಿತರ ಕೇರಿಗೆ ನುಗ್ಗಿ ಗುಡಿಸಲಿಗೆ ಬೆಂಕಿ ಇಡುವ ಹಂತ ತಲುಪಿತ್ತು. ಗಲಾಟೆ ಹಿನ್ನೆಲೆ ಪೊಲೀಸರು ಗ್ರಾಮದಲ್ಲಿ ಬೀಡು ಬಿಟ್ಟು ತನಿಖೆ ಆರಂಭಿಸಿದ್ದರು. ಆದರೆ, ಅದೇ ರಾತ್ರಿ ಆರೋಪಿಗಳು ದಲಿತರ ಕೇರಿಗೆ ನುಗ್ಗಿ ಗುಡಿಸಲಿಗೆ ಬೆಂಕಿ ಇಟ್ಟಿದ್ದರು ಎಂದು ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿರಲಿಲ್ಲ. ತನಿಖೆ ನಡೆಸಿದ ಪೊಲೀಸರು ಒಟ್ಟು 117 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಅಪರಾಧಿಗಳ ಸಂಬಂಧಿಕರ ಆಕ್ರೋಶ:
ನ್ಯಾಯಾಧೀಶರು ಆದೇಶ ಪ್ರಕಟಿಸುತ್ತಿದ್ದಂತೆಯೇ ನ್ಯಾಯಾಲಯದ ಆವರಣದಲ್ಲಿ ಸೇರಿದ್ದ ಅಪರಾಧಿಗಳ ಸಂಬಂಧಿಕರು ಮತ್ತು ಕುಟುಂಬಸ್ಥರು ರೋಧನ ಮುಗಿಲು ಮುಟ್ಟಿತ್ತು. ಕೆಲವು ಮಹಿಳೆಯರು ಆದೇಶದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇನ್ನೂ ಹಲವರು ಘಟನೆ ನಡೆದ ದಿನ ಗ್ರಾಮದಲ್ಲಿ ಇರದ ವ್ಯಕ್ತಿಗಳಿಗೂ ಜೀವಾವಧಿ ಶಿಕ್ಷೆ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಾತಿ ನಿಂದನೆ ಹಾಗೂ ಅಸ್ಪೃಶ್ಯತೆ ಆಚರಣೆಯ ಒಂದೇ ಪ್ರಕರಣದಲ್ಲಿ ಇಷ್ಟೊಂದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಆದೇಶ ಮಾಡಿರುವುದು ದೇಶದಲ್ಲಿ ಇದೇ ಮೊದಲ ಪ್ರಕರಣ ಎನ್ನಲಾಗಿದೆ.
ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳು ಮತ್ತು ದಲಿತರೇ ಟಾರ್ಗೆಟ್ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ನಾಗಮಂಗಲ ಗಲಭೆ ಕೇಸ್‌ನಲ್ಲಿ ಹಿಂದೂ ಯುವಕರ ಮೇಲೆ ಕೇಸ್ ಹಾಕಿರೋ ವಿಚಾರಕ್ಕೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಇವತ್ತು ಮಾತ್ರವಲ್ಲ ಹಿಂದಿನಿಂದಲೂ ಒಂದು ಸಮುದಾಯದ ತುಷ್ಟೀಕರಣ ಮಾಡಿಕೊಂಡು ಬರುತ್ತಿದೆ. ಈ ಸರ್ಕಾರಕ್ಕೆ ಹಿಂದೂಗಳು, ದಲಿತರೇ ಟಾರ್ಗೆಟ್ ಆಗ್ತಿದ್ದಾರೆ. ಯಾದಗಿರಿಯಲ್ಲಿ ಊರಿನಿಂದ ದಲಿತರನ್ನ ಬಹಿಷ್ಕಾರ ಮಾಡಿದ್ದಾರೆ. ರಾಮನಗರದಲ್ಲಿ ಇಂತಹ ಘಟನೆ ಆಗಿದೆ. ಕಾಂಗ್ರೆಸ್‌ಗೆ ತುಷ್ಟೀಕರಣ ರಾಜಕೀಯದ ಭಾಗವಾಗಿದೆ ಅಂತಾ ಕಿಡಿಕಾರಿದರು. ಇದನ್ನೂ ಓದಿ: Nagamangala Violence | ರಾಜ್ಯಪಾಲರು ಮಧ್ಯ ಪ್ರವೇಶ ಮಾಡಲಿ- ರವಿಕುಮಾರ್ ಆಗ್ರಹ
ಜನರು ನೆಮ್ಮದಿಯಿಂದ ಇರಬೇಕು ಅಂತಾ ಕಾಂಗ್ರೆಸ್‌ಗೆ ಅನ್ನಿಸೋದಿಲ್ಲ. ಹಿಂದೂ ವಿಚಾರ ಬಂತು ಅಂದರೆ ಸಾಕು ಎತ್ತಿಕಟ್ಟಿ ಧಮನ ಮಾಡೋ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಹೀಗೆ ಕಾಂಗ್ರೆಸ್ ಮಾಡುತ್ತಾ ಹೋದ್ರೆ ಈ ದೇಶದಲ್ಲಿ ನಿರ್ನಾಮ ಆಗುತ್ತೆ. ಹಿಂದೂಗಳ ಪರ ಬಿಜೆಪಿ ನಿಲ್ಲುತ್ತದೆ. ಹಿಂದೂಗಳ ರಕ್ಷಣೆಗೆ ಬಿಜೆಪಿ ಇರುತ್ತದೆ. ಕಾಂಗ್ರೆಸ್ ಮಾತು ಕೇಳುವ ಮುಸ್ಲಿಮರು ಹಿಂದೂಗಳನ್ನ ವಿರೋಧ ಮಾಡೋದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.