Tag: Dalit Man

  • ವ್ಯಕ್ತಿಯ ಮುಖ, ದೇಹಕ್ಕೆ ಮಲ ಮೆತ್ತಿಸಿ ವಿಕೃತಿ ಮೆರೆದ!

    ವ್ಯಕ್ತಿಯ ಮುಖ, ದೇಹಕ್ಕೆ ಮಲ ಮೆತ್ತಿಸಿ ವಿಕೃತಿ ಮೆರೆದ!

    ಭೋಪಾಲ್: ಮೇಲ್ಜಾತಿ ವ್ಯಕ್ತಿಯೊಬ್ಬ ದಲಿತ ವ್ಯಕ್ತಿಯ (Dalit Man) ಮುಖ ಹಾಗೂ ದೇಹಕ್ಕೆ ಮಲ (Human Excreta) ಮೆತ್ತಿಸಿ ವಿಕೃತಿ ಮೆರೆದ ಆರೋಪವೊಂದು ಮಧ್ಯಪ್ರದೇಶದ ಛತ್ತರ್‍ಪುರ ಜಿಲ್ಲೆಯಲ್ಲಿ ಕೇಳಿಬಂದಿದೆ.

    ಆರೋಪಿಯನ್ನು ರಾಮಕೃಪಾಲ್ ಪಟೇಲ್ ಹಾಗೂ ಸಂತ್ರಸ್ತನನ್ನು ದಶರತ್ ಅಹಿರ್ವಾರ್ ಎಂದು ಗುರುತಿಸಲಾಗಿದೆ. ಆರೋಪಿ ವಿರುದ್ಧ ದೂರು ದಾಖಲಾದ ಹಿನ್ನೆಲೆಯಲ್ಲಿ ಇದೀಗ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ನಡೆದಿದ್ದೇನು..?: ಶುಕ್ರವಾರ ಛತ್ತರ್‍ಪುರ ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿಮೀ ದೂರದಲ್ಲಿರುವ ಬಿಕೌರಾ ಗ್ರಾಮದಲ್ಲಿ ಪಂಚಾಯತ್‍ಗೆ ಚರಂಡಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅಹಿರ್ವಾರ್ ಹೇಳಿದ್ದಾರೆ. ಇದನ್ನೂ ಓದಿ: ಶಾಪಿಂಗ್ ಮಾಲ್‍ನಲ್ಲಿ ಬಿಸಿನೀರಿನ ಪೈಪ್ ಬ್ಲಾಸ್ಟ್- ನಾಲ್ವರು ಸಾವು

    ಘಟನೆ ಸಂಬಂಧ ಮಹಾರಾಜಪುರ ಪೊಲೀಸ್ ಠಾಣೆ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಹಿರ್ವಾರ್, ರಾಮಕೃಪಾಲ್ ಪಟೇಲ್ ಸಮೀಪದ ಹ್ಯಾಂಡ್ ಪಂಪ್‍ನಲ್ಲಿ ಸ್ನಾನ ಮಾಡುತ್ತಿದ್ದರು. ಈ ವೇಳೆ ನಿರ್ಮಾಣ ಕಾರ್ಯದಲ್ಲಿ ಬಳಸುತ್ತಿದ್ದ ಗ್ರೀಸ್ ಅನ್ನು ತಪ್ಪಿ ಅವರು ಸ್ಪರ್ಶಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಪಟೇಲ್, ಮಲವನ್ನು ತಂದು ನನ್ನ ತಲೆ ಮತ್ತು ಮುಖ ಸೇರಿದಂತೆ ಮೈಮೇಲೆ ಬಳಿದಿದ್ದಾರೆ ಎಂದು ಆರೋಪಿಸಿದ್ದಾರೆ.

    ಅಲ್ಲದೆ ಪಟೇಲ್ ನನ್ನ ಜಾತಿಯನ್ನು ನಿಂದಿಸಿದ್ದಾರೆ. ಈ ವಿಚಾರವನ್ನು ಪಂಚಾಯತ್‍ನವರ ಗಮನಕ್ಕೆ ಶುಕ್ರವಾರವೇ ತಂದಿದ್ದೇನೆ. ಆದರೆ ಪಂಚಾಯತ್ ಸಿಬ್ಬಂದಿ ಕೂಡ ನನಗೆ 600 ರೂಪಾಯಿ ದಂಡವನ್ನು ವಿಧಿಸಿದ್ದಾರೆ ಎಂದು ಅಹಿರ್ವಾರ್ ಬೇಸರ ಹೊರಹಾಕಿದ್ದಾರೆ.

    ಈ ಸಂಬಂಧ ಶುಕ್ರವಾರವೇ ಯಾಕೆ ಪೊಲೀಸರಿಗೆ ದೂರು ನೀಡಲಿಲ್ಲ ಎಂದು ಪ್ರಶ್ನಿಸಿದಾಗ, ಕೆಲಸವನ್ನು ಮಧ್ಯದಲ್ಲಿ ಬಿಡಲು ಸಾಧ್ಯವಿಲ್ಲ. ಹೀಗಾಗಿ ದೂರು ನೀಡಲು ಆಗಿಲ್ಲ ಎಂದು ಅಹಿರ್ವಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಓವರ್‌ಲೋಡ್‌ನಿಂದ ಕೊಳಕ್ಕೆ ಉರುಳಿದ ಬಸ್ – 17 ಮಂದಿ ಸಾವು, 35 ಮಂದಿಗೆ ಗಾಯ

    ಸದ್ಯ ಆರೋಪಿ ರಾಮಕೃಪಾಲ್ ಪಟೇಲ್ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು ಅಥವಾ ಸಾರ್ವಜನಿಕ ಪದಗಳಿಗೆ ಶಿಕ್ಷೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಪೊಲೀಸ್ ಉಪವಿಭಾಗಾಧಿಕಾರಿ ಮನ್ಮೋಹನ್ ಸಿಂಗ್ ಬಘೇಲ್ ತಿಳಿಸಿದ್ದಾರೆ.

    ಅಹಿರ್ವಾರ್ ಕೆಲಸ ಮಾಡುತ್ತಿದ್ದಾಗ ಸಮೀಪದಲ್ಲಿ ಸ್ನಾನ ಮಾಡುತ್ತಿದ್ದ ಪಟೇಲ್ ಅವರೊಂದಿಗೆ ತಮಾಷೆಯ ಮಾತುಗಳನ್ನಾಡುತ್ತಿದ್ದರು. ಪಟೇಲ್ ಅವರ ಕೈಗೆ ಗ್ರೀಸ್ ತಾಗಿದಾಗ ತಮಾಷೆಯಾಗಿ ಪರಸ್ಪರ ವಸ್ತುಗಳನ್ನು ಎಸೆದುಕೊಂಡರು. ನಂತರ ಪಟೇಲ್, ಮಲವನ್ನು ತಂದು ಅಹಿರ್ವಾರ್ ಅವರ ಬೆನ್ನಿನ ಮೇಲೆ ಎಸೆದರು ಎಂದು ಪೊಲೀಸ್ ಅಧಿಕಾರಿ ವಿವುರಿಸಿದ್ದಾರೆ.

    ಇತ್ತೀಚೆಗೆ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ಯುವಕನ ಮೇಲೆ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆ ಮಾಡಿದ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಭಾರೀ ಆಕ್ರೋಶಕ್ಕೆ ಕಾರಣವಾಯಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ರಿಕೆಟ್ ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳನ್ನೇ ಕತ್ತರಿಸಿದ ದುರುಳರು

    ಕ್ರಿಕೆಟ್ ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳನ್ನೇ ಕತ್ತರಿಸಿದ ದುರುಳರು

    ಗಾಂಧೀನಗರ: ಕ್ರಿಕೆಟ್ (Cricket) ಆಡುತ್ತಿದ್ದ ಸಂದರ್ಭ ದಲಿತ ಬಾಲಕನೊಬ್ಬ (Dalit Boy) ಚೆಂಡನ್ನು (Ball) ಮುಟ್ಟಿದ್ದಕ್ಕೆ ಗಲಾಟೆ ನಡೆದು, ಇದನ್ನು ಪ್ರಶ್ನಿಸಿದ ದಲಿತ ವ್ಯಕ್ತಿಯ (Dalit Man)  ಹೆಬ್ಬೆರಳನ್ನೇ ( ಕತ್ತರಿಸಿರುವ ವಿಕೃತ ಘಟನೆ ಗುಜರಾತ್‌ನಲ್ಲಿ ನಡೆದಿದೆ.

    ಗುಜರಾತ್‌ನ ಪಟಾನ್ ಜಿಲ್ಲೆಯ ಗ್ರಾಮಸ್ಥರು ಭಾನುವಾರ ಶಾಲೆಯೊಂದರ ಆಟದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ದಲಿತ ಬಾಲಕನೊಬ್ಬ ಚೆಂಡನ್ನು ಮುಟ್ಟಿದ್ದ. ಇದರಿಂದ ಕೋಪಗೊಂಡ ಗ್ರಾಮಸ್ಥರು ಬಾಲಕನಿಗೆ ಜಾತಿ ನಿಂದನೆ ಮಾಡಿದ್ದಲ್ಲದೇ ಬೆದರಿಕೆ ಹಾಕಿದ್ದಾರೆ.

    ಈ ವಿಚಾರ ತಿಳಿದ ಬಾಲಕನ ಸಂಬಂಧಿ ಧೀರಜ್ ಪರ್ಮಾರ್ ಗ್ರಾಮಸ್ಥರಲ್ಲಿ ಬಾಲಕನಿಗೆ ನಿಂದಿಸಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಕ್ಷಣಕ್ಕೆ ಗಲಾಟೆಯನ್ನು ಇತ್ಯರ್ಥಗೊಳಿಸಲಾಯಿತಾದರೂ ಬಳಿಕ ಸಂಜೆ 7 ಜನರ ಗುಂಪು ಹರಿತವಾದ ಆಯುಧಗಳೊಂದಿಗೆ ಬಂದು ಧೀರಜ್ ಹಾಗೂ ಆತನ ಸಹೋದರ ಕೀರ್ತಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳಲ್ಲಿ ಒಬ್ಬ ಕೀರ್ತಿ ಅವರ ಹೆಬ್ಬೆರಳನ್ನೇ ಕತ್ತರಿಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ. ಇದನ್ನೂ ಓದಿ: ಒಡಿಶಾ ರೈಲು ದುರಂತವಾಗಿ 4 ದಿನ ಕಳೆದರೂ 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ

    ಇದೀಗ ಘಟನೆ ಬಗ್ಗೆ ಪೊಲೀಸರು ಭಾರತೀಯ ದಂಡಸಂಹಿತೆ (ಐಪಿಸಿ) ಹಾಗೂ ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ ಕಾಯ್ದೆ) ಸೆಕ್ಷನ್ 326 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಆಯುಧಗಳಿಂದ ಗಂಭೀರ ಗಾಯವನ್ನು ಉಂಟುಮಾಡುವುದು), 506 (ಕ್ರಿಮಿನಲ್ ಬೆದರಿಕೆ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಚಾಕ್ಲೇಟ್, ಆಟಿಕೆ ಬೇಕೆಂದು ಹಠ ಹಿಡಿದ ಮಗಳನ್ನು ಕಲ್ಲು ಎತ್ತಿ ಹಾಕಿ ಕೊಂದೇ ಬಿಟ್ಟ ಪಾಪಿ ತಂದೆ

  • ಒಳ್ಳೆಯ ಬಟ್ಟೆ,‌ ದುಬಾರಿ ಸನ್‌ ಗ್ಲಾಸ್ ಧರಿಸಿದ್ದಕ್ಕೆ ದಲಿತ ವ್ಯಕ್ತಿಯ ಮೇಲೆ ಹಲ್ಲೆ- 7 ಮಂದಿ ವಿರುದ್ಧ FIR

    ಒಳ್ಳೆಯ ಬಟ್ಟೆ,‌ ದುಬಾರಿ ಸನ್‌ ಗ್ಲಾಸ್ ಧರಿಸಿದ್ದಕ್ಕೆ ದಲಿತ ವ್ಯಕ್ತಿಯ ಮೇಲೆ ಹಲ್ಲೆ- 7 ಮಂದಿ ವಿರುದ್ಧ FIR

    ಗಾಂಧಿನಗರ: ದಲಿತ ವ್ಯಕ್ತಿಯೊಬ್ಬ ಒಳ್ಳೆಯ ಬಟ್ಟೆ ಹಾಗೂ ದುಬಾರಿ ಸನ್‍ಗ್ಲಾಸ್ (Sunglass) ಧರಿಸಿದ್ದ ಎಂಬ ಕಾರಣಕ್ಕೆ ತಂಡವೊಂದು ಹಲ್ಲೆ ಮಾಡಿ ಘಟನೆ ಗುಜರಾತ್‍ನಲ್ಲಿ ನಡೆದಿದೆ.

    ಗುಜರಾತ್‍ (Gujrat) ನ ಬನಸ್ ಕಾಂತ ಜಿಲ್ಲೆಯ ಪಾಲನ್‍ಪುರ ತಾಲೂಕಿನ ಮೋಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಗರ್ ಶೆಖಾಲಿಯಾ ಹಲ್ಲೆಗೊಳಗಾದ ವ್ಯಕ್ತಿ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಏಳು ಮಂದಿ ಆರೋಪಿಗಳ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಶಕುನಿ ಪಾತ್ರಧಾರಿ ಗೂಫಿ ಆರೋಗ್ಯ ಸ್ಥಿತಿ ಗಂಭೀರ

    ನಡೆದಿದ್ದೇನು..?: ಮಂಗಳವಾರ ಬೆಳಗ್ಗೆ ಜಿಗರ್ ತಮ್ಮ ಮನೆ ಮುಂದೆ ನಿಂತಿದ್ದರು. ಈ ವೇಳೆ ಓರ್ವ ಆರೋಪಿ ಬಂದು ಇತ್ತೀಚಿನ ದಿನಗಳಲ್ಲಿ ನಿನ್ನದು ಅತಿಯಾಯ್ತು. ಇದೇ ರೀತಿ ಮುಂದುವರಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೊರಟು ಹೋಗಿದ್ದಾನೆ.

    ಅದೇ ದಿನ ರಾತ್ರಿ ಜಿಗರ್ ಗ್ರಾಮದ ಹೊರಭಾಗದ ದೇವಾಲಯದ ಬಳಿ ನಿಂತಿದ್ದ ವೇಳೆ ಬಂದ 7 ಮಂದಿ ಆರೋಪಿಗಳು ಏಕಾಏಕಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ತನ್ನನ್ನು ಯಾಕೆ ಹೊಡೆಯುತ್ತಿದ್ದೀರಾ ಎಂದು ಕೇಳಿದಾಗ ಒಳ್ಳೆಯ ಬಟ್ಟೆ ಹಾಗೂ ಸನ್ ಗ್ಲಾಸ್ ಧರಿಸಿದ್ದಕ್ಕಾಗಿ ಎಂದು ಹೇಳಿ ಮನಬಂದಂತೆ ಥಳಿಸಿದ್ದಾರೆ.

    ಇತ್ತ ಮಗನ ಮೇಲೆ ಹಲ್ಲೆ ನಡೆಯುತ್ತಿರುವ ವಿಚಾರ ತಿಳಿದ ತಾಯಿ ಸ್ಥಳಕ್ಕೆ ದೌಡಾಯಿಸಿ ಹಲ್ಲೆ ಮಾಡದಂತೆ ಮನವಿ ಮಾಡಿದ್ದಾರೆ. ಅಲ್ಲದೆ ಮಗನ ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಆರೋಪಿಗಳು ಜಿಗರ್ ತಾಯಿ ಮೇಲೆಯೂ ಹಲ್ಲೆ ನಡೆಸಿ ಆಕೆಯ ಬಟ್ಟೆಯನ್ನು ಹರಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೊರಟು ಹೋಗಿದ್ದಾರೆ.

    ಗಾಯಾಳು ತಾಯಿ-ಮಗ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

  • ಮೇಲ್ಜಾತಿಯ ಜನರಿಗೆ ಸೇರಿದ ಮಡಿಕೆಯಿಂದ ನೀರು ಕುಡಿದ ದಲಿತನ ಮೇಲೆ ಹಲ್ಲೆ

    ಮೇಲ್ಜಾತಿಯ ಜನರಿಗೆ ಸೇರಿದ ಮಡಿಕೆಯಿಂದ ನೀರು ಕುಡಿದ ದಲಿತನ ಮೇಲೆ ಹಲ್ಲೆ

    ಜೈಪುರ: ಮೇಲ್ವರ್ಗದ ಜನರಿಗೆ (Upper Castes) ಮೀಸಲಾಗಿದ್ದ ಮಡಿಕೆಯಿಂದ ನೀರು ತೆಗೆದುಕೊಂಡು ಕುಡಿದಿದ್ದಕ್ಕೆ ದಲಿತ ಸಮುದಾಯದ ವ್ಯಕ್ತಿಯ (Dalit Man) ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ದಾರುಣ ಘಟನೆ ರಾಜಸ್ಥಾನದಲ್ಲಿ (Rajasthan) ನಡೆದಿದೆ.

    ಜೈಸಲ್ಮೇರ್‌ ಜಿಲ್ಲೆಯ ದಿಗ್ಗಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಬ್ಬಿಣದ ರಾಡ್‌ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಾಲೆಗೆ ನುಗ್ಗಿ ಶಿಕ್ಷಕಿ ಮೇಲೆ ಕುಡುಕನಿಂದ ಹಲ್ಲೆ

    ಮಂಗಳವಾರ ಸಂಜೆ ಚತುರ ರಾಮ್ ತನ್ನ ಹೆಂಡತಿಯೊಂದಿಗೆ ದಿಗ್ಗಾಕ್ಕೆ ಹೋಗುತ್ತಿದ್ದಾಗ ಕಿರಾಣಿ ಅಂಗಡಿಯೊಂದರ ಬಳಿ ಅಂಗಡಿಯ ಹೊರಗೆ ಇಟ್ಟಿದ್ದ ಮಡಿಕೆಯಲ್ಲಿ ನೀರು ತೆಗೆದುಕೊಂಡು ಕುಡಿದಿದ್ದಾನೆ. ಈ ವೇಳೆ ನಾಲ್ಕೈದು ಜನ ಆತನನ್ನು ನಿಂದಿಸಿ, ಮೇಲ್ಜಾತಿಗೆ ಸೇರಿದವರು ಎಂದು ಹೇಳಿಕೊಂಡ ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಥಳಿಸಿದ್ದಾರೆ.

    ರಾಮ್ ಅವರ ಒಂದು ಕಿವಿಯ ಹಿಂಭಾಗ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ಕರೆದೊಯ್ದು ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಂತ್ರಸ್ತನ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ನ್ಯಾಯಾಧೀಶರ ವಯೋಮಿತಿ ಹೆಚ್ಚಿಸಿ – ಸಂವಿಧಾನಿಕ ತಿದ್ದುಪಡಿಗೆ ಬಾರ್ ಕೌನ್ಸಿಲ್ ಮನವಿ

    Live Tv
    [brid partner=56869869 player=32851 video=960834 autoplay=true]

  • ಹಳೆ ದ್ವೇಷಕ್ಕೆ ಯುವಕನನ್ನು ಅಪಹರಿಸಿ ಹಲ್ಲೆ ಮಾಡಿ ಮೂತ್ರ ಕುಡಿಸಿದ್ರು

    ಹಳೆ ದ್ವೇಷಕ್ಕೆ ಯುವಕನನ್ನು ಅಪಹರಿಸಿ ಹಲ್ಲೆ ಮಾಡಿ ಮೂತ್ರ ಕುಡಿಸಿದ್ರು

    ಜೈಪುರ: ಹಳೆ ದ್ವೇಷದ ಹಿನ್ನೆಲೆ ದಲಿತ ಯುವಕನನ್ನು ಅಪಹರಿಸಿ ಹಲ್ಲೆ ಮಾಡಿ, ಆತನಿಗೆ ಮೂತ್ರ ಕುಡಿಸಿರುವ ಘಟನೆ ಚೂರು ಜಿಲ್ಲೆಯಲ್ಲಿ ನಡೆದಿದೆ.

    ಉಮೆಶ್, ಬೀರ್‍ಬಲ್ ಬಂಧಿತ ಆರೋಪಿಗಳಾಗಿದ್ದಾರೆ. ರುಖಾಸರ್ ಗ್ರಾಮದ ನಿವಾಸಿ  ರಾಕೇಶ್ ಮೇಘವಾಲ್ ಸಂತ್ರಸ್ತ ಯುವಕನಾಗಿದ್ದಾನೆ. ದನ್ನೂ ಓದಿ: ವೇಶ್ಯಾವಾಟಿಕೆ ನಡೆಯುತ್ತಿದ್ದ ಲಾಡ್ಜ್ ಮೇಲೆ ಪೊಲೀಸರ ದಾಳಿ

    ನಡೆದಿದ್ದೇನು?: ಸಂತ್ರಸ್ತ ರಾಕೇಶ್ ಮೇಘವಾಲ್ ನೀಡಿದ ಪೊಲೀಸ್ ದೂರಿನ ಪ್ರಕಾರ, ಆರೋಪಿಗಳು ರಾತ್ರಿ 11 ಗಂಟೆಯ ಸುಮಾರಿಗೆ ಮನೆಯಿಂದ ಅಪಹರಿಸಿ ಹೊಲಕ್ಕೆ ಕರೆದೊಯ್ದಿದ್ದರು. ಬಲವಂತವಾಗಿ ಮದ್ಯ ಕುಡಿಸಿ ನಂತರ ಅದೇ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡಿ ನನಗೆ ಕುಡಿಸಿದ್ದಾರೆ. ಆರೋಪಿಗಳು ಜಾತಿ ನಿಂದನೆ ಮತ್ತು ಇತರ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ಮೇಘವಾಲ್ ರತನ್‍ಗಢ ಪೊಲೀಸ್ ಠಾಣೆಯಲ್ಲಿ ದೂರಿನಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿ: ಫೆಬ್ರವರಿಯಲ್ಲಿ 12 ದಿನ ಬ್ಯಾಂಕುಗಳಿಗೆ ರಜೆ

    POLICE JEEP

    ಜನವರಿ 27ರಂದು ಗ್ರಾಮದ ಮೇಲ್ವರ್ಗದ 8 ಜನ ಕ್ಷುಲ್ಲಕ ಕಾಣರಣಕ್ಕೆ ಹಲ್ಲೆಮಾಡಿದ್ದಾರೆ. 8 ಜನಗಳ ಗುಂಪು ಈ ಕೃತ್ಯ ಎಸಗಿದ್ದಾರೆ. ಮೇಘವಾಲ್ ಅವರ ಬೆನ್ನಿನ ಮೇಲಿನ ಗಾಯದ ಗುರುತುಗಳಾಗಿವೆ. ಹಲ್ಲೆ ನಡೆದಿರುವುದನ್ನು ಖಚಿತವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದೇವೆ. ಇತರ 6 ಮಂದಿ ಆರೋಪಿಗಳಿಗಾಗಿ ಬಲೆ ಬೀಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.