Tag: Dalit Community

  • ಮಂಡ್ಯ | ದಲಿತ ಸಮುದಾಯದಿಂದಲೇ ದಲಿತರಿಗೆ ಬಹಿಷ್ಕಾರ ಆರೋಪ; ಗ್ರಾಮದ 7 ಕುಟುಂಬಕ್ಕೆ ಶಿಕ್ಷೆ

    ಮಂಡ್ಯ | ದಲಿತ ಸಮುದಾಯದಿಂದಲೇ ದಲಿತರಿಗೆ ಬಹಿಷ್ಕಾರ ಆರೋಪ; ಗ್ರಾಮದ 7 ಕುಟುಂಬಕ್ಕೆ ಶಿಕ್ಷೆ

    – ಕುಲದ ವಿರುದ್ಧ ಮಾತನಾಡಿದ್ದಕ್ಕೆ ಬಹಿಷ್ಕಾರ

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ದಲಿತ ಸಮುದಾಯವೇ (Dalit Community) ದಲಿತರನ್ನು ಬಹಿಷ್ಕರಿಸಿರುವ ಆರೋಪ ಕೇಳಿ ಬಂದಿದೆ.

    ಕಾಲೋನಿಯ 7 ಕುಟುಂಬಗಳು ಬಹಿಷ್ಕಾರಕ್ಕೆ ಒಳಗಾಗಿದ್ದು, ಕುಟುಂಬಗಳ ಜೊತೆ ನೆರೆ ಹೊರೆಯವರು ಮಾತನಾಡದಂತೆ ಕುಲದ ಮುಖಂಡರು ಆದೇಶ ಮಾಡಿದ್ದಾರೆ. ಇದೀಗ ಬಹಿಷ್ಕಾರಕ್ಕೊಳಗಾದ (Social Exclusion) ಕುಟುಂಬಗಳು ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ.

    ಕುಲದ ವಿರುದ್ಧ ಮಾತನಾಡಿದ ಕಾರಣಕ್ಕೆ 7 ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಬಹಿಷ್ಕಾರಕ್ಕೊಳಗಾದ ಕುಟುಂಬಗಳ ಜೊತೆ ನೆರೆ ಹೊರೆಯವರು ಮಾತನಾಡದಂತೆ ಆದೇಶ ಮಾಡಲಾಗಿದೆ.

    ತಮ್ಮದೇ ಸಮುದಾಯದವರಿಂದ ಸಾಮಾಜಿಕ ಬಹಿಷ್ಕಾರದ ಶಿಕ್ಷೆಗೆ ಗುರಿಯಾಗಿರುವ ಕುಟುಂಬಗಳೀಗ ಸಿಡಿದೆದ್ದಿವೆ. ಈ ಹಿನ್ನೆಲೆ ತಮಗಾದ ಅನ್ಯಾಯವನ್ನು ಅರಿತು, ತಮ್ಮ ನೆರವಿಗೆ ಬರುವಂತೆ ಸರ್ಕಾರ ಸೇರಿದಂತೆ ಡಿಸಿ, ಎಸ್ಪಿ ಹಾಗೂ ತಾಲೂಕು ಆಡಳಿತಕ್ಕೆ ಬಹಿಷ್ಕಾರಕ್ಕೊಳಗಾದ ಕುಟುಂಬಗಳು ಮನವಿ ಮಾಡಿವೆ.

  • ಏನಿಲ್ಲಾ ಏನಿಲ್ಲಾ, ದಲಿತ ಯೋಜನೆಗಳ‌ ಮಾಲೀಕ ನೀನಲ್ಲಾ – ಸಿಎಂ ವಿರುದ್ಧ ಬಿಜೆಪಿ ಪ್ರತಿಭಟನೆ

    ಏನಿಲ್ಲಾ ಏನಿಲ್ಲಾ, ದಲಿತ ಯೋಜನೆಗಳ‌ ಮಾಲೀಕ ನೀನಲ್ಲಾ – ಸಿಎಂ ವಿರುದ್ಧ ಬಿಜೆಪಿ ಪ್ರತಿಭಟನೆ

    ಹಾವೇರಿ: ರಾಜ್ಯ ಸರ್ಕಾರವು ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಹಾವೇರಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ (BJP Protest) ನಡೆಸಿದರು.

    ಹಾವೇರಿ ಬಿಜೆಪಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದರಲ್ಲದೇ, ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಾನವ ಸರಪಳಿ ಮಾಡಿ ರಾಜ್ಯ ಸರ್ಕಾರದ (Government Of Karnataka) ವಿರುದ್ಧ ಧಿಕ್ಕಾರ ಕೂಗಿದರು. ಇದನ್ನೂ ಓದಿ: ವಿಜಯ್ ರಾಜಕೀಯಕ್ಕೆ ಬರೋಕೆ ನಾನೇ ಹೇಳಿದ್ದೆ: ನಟ ಕಮಲ್ ಹಾಸನ್

    ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ್ ಪೂಜಾರ್ ನೇತೃತ್ವದಲ್ಲಿ ಮಾಜಿ ಶಾಸಕರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು. ʻಏನಿಲ್ಲಾ ಏನಿಲ್ಲಾ ಸಿದ್ದರಾಮಯ್ಯ, ದಲಿತ ಯೋಜನೆಗಳ‌ ಮಾಲೀಕ ನೀನಲ್ಲಾ, ದಲಿತ ಸಮುದಾಯ (Dalit Community) ತುಳಿಯುತ್ತಿರುವ ಸರ್ಕಾರಕ್ಕೆ‌ ಧಿಕ್ಕಾರ ಧಿಕ್ಕಾರʼ ಎಂಬ ಘೋಷಣಾ ಫಲಕಗಳನ್ನ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ: ಸುಮಲತಾ ಅಂಬರೀಶ್

    ದಲಿತ ಯೋಜನೆಗಳಿಗೆ ಮೀಸಲಿಟ್ಟ 11 ಸಾವಿರ ಕೋಟಿ ರೂ. ಹಣವನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡಿದ್ದಾರೆ. ಸಮುದಾಯ ಅಭಿವೃದ್ಧಿಗೆ ಹಿನ್ನಡೆ ಮಾಡಿದ್ದೀರಿ ಎಂದು ಕಿಡಿ ಕಾರಿದರು. ಪ್ರತಿಭಟನೆಯಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

  • ದಲಿತ ನಾಯಕರ ವಿಚಾರದಲ್ಲಿ ಕಾಂಗ್ರೆಸ್‌ನದ್ದು ಅನುಕೂಲ ಸಿಂಧು ರಾಜಕಾರಣ; ದಲಿತರ‍್ಯಾರೂ ʼಕೈʼ ಪರ ಇಲ್ಲ – ಬಿಜೆಪಿ

    ದಲಿತ ನಾಯಕರ ವಿಚಾರದಲ್ಲಿ ಕಾಂಗ್ರೆಸ್‌ನದ್ದು ಅನುಕೂಲ ಸಿಂಧು ರಾಜಕಾರಣ; ದಲಿತರ‍್ಯಾರೂ ʼಕೈʼ ಪರ ಇಲ್ಲ – ಬಿಜೆಪಿ

    ಬೆಂಗಳೂರು: ದಲಿತ ಸಮುದಾಯದವರನ್ನು (Dalit Community) ಕಾಂಗ್ರೆಸ್‌ (Congress) ವೋಟ್‌ ಬ್ಯಾಂಕ್‌ ಆಗಿ ಬಳಸಿಕೊಂಡು ವಂಚಿಸಿದೆ. ಈ ಸಮುದಾಯದವರ‍್ಯಾರೂ ಈಗ ಕಾಂಗ್ರೆಸ್‌ ಪರ ಇಲ್ಲ ಎಂದು ಬಿಜೆಪಿ (BJP) ಟಾಂಗ್‌ ಕೊಟ್ಟಿದೆ.

    ಬಿಜೆಪಿ ಟ್ವೀಟ್‌ನಲ್ಲೇನಿದೆ?
    ವಾಸ್ತವ ಏನೆಂದರೆ, ಕಾಂಗ್ರೆಸ್ ತಮ್ಮನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡು ವಂಚಿಸಿರುವುದರ ಅರಿವು ದಲಿತ ಸಮುದಾಯದವರಿಗಿದೆ. ಅವರ್ಯಾರೂ ಕಾಂಗ್ರೆಸ್ ಪರ ಇಲ್ಲ, ಅವರನ್ನು ಮತ್ತೊಮ್ಮೆ ವಂಚಿಸಲಾಗದು ಎಂಬುದು ಕಾಂಗ್ರೆಸಿಗೂ ಗೊತ್ತಾಗಿದೆ. ಇದನ್ನೂ ಓದಿ: ರೌಡಿಶೀಟರ್‌ಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಜೆಡಿಎಸ್ ಶಾಸಕ

    ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರು ಪ್ರತ್ಯೇಕ ಪ್ರಜಾದ್ರೋಹ ಯಾತ್ರೆ ಕೈಗೊಂಡಿದ್ದರೆ, ಬಿ.ಕೆ.ಹರಿಪ್ರಸಾದ್‌ ಅವರು ಕರಾವಳಿ ದ್ರೋಹ ಯಾತ್ರೆ ಮಾಡುತ್ತಿದ್ದಾರೆ. ಇವುಗಳ ಮಧ್ಯೆ ಕರ್ನಾಟಕ ಕಾಂಗ್ರೆಸ್‌ಗೆ ದಲಿತ ಮುಖಂಡರ ನೆನಪೇ ಇಲ್ಲ.

    ದಲಿತ ನಾಯಕರ ವಿಚಾರದಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನದ್ದು ಅನುಕೂಲ ಸಿಂಧು ರಾಜಕಾರಣ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪ್ರಜಾಧ್ವನಿ ಹೆಸರಿನಲ್ಲಿ ನಡೆಸುತ್ತಿರುವ ಪ್ರಜಾದ್ರೋಹ ಯಾತ್ರೆಯಲ್ಲೂ ದಲಿತರಿಗೆ ಎಂದಿನಂತೆ ದ್ರೋಹ ಬಗೆಯುತ್ತಿದೆ. ಇದನ್ನೂ ಓದಿ: ಹೆಚ್‌ಡಿಕೆಯಿಂದ ಬ್ರಾಹ್ಮಣ ಸಿಎಂ ಬಾಂಬ್ – ಮೋದಿಯಿಂದ ಸೈಲೆಂಟ್ ಬ್ರಹ್ಮಾಸ್ತ್ರ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರೇಮ ವಿವಾಹವಾಗಿದ್ದಕ್ಕೆ ದಲಿತರಿಂದಲೇ ದಲಿತ ಕುಟುಂಬಕ್ಕೆ ಬಹಿಷ್ಕಾರ!

    ಪ್ರೇಮ ವಿವಾಹವಾಗಿದ್ದಕ್ಕೆ ದಲಿತರಿಂದಲೇ ದಲಿತ ಕುಟುಂಬಕ್ಕೆ ಬಹಿಷ್ಕಾರ!

    – ಬಹಿಷ್ಕಾರ ಕುಟುಂಬ ಮಾತನಾಡಿಸಿದವ್ರಿಗೆ ದಂಡ, ಶಿಕ್ಷೆಯ ಎಚ್ಚರಿಕೆ
    – ಪ್ರೀತಿಸಿ ಮದುವೆಯಾದ ಕಾರಣಕ್ಕೆ 14 ವರ್ಷ ವನವಾಸ

    ಗದಗ: ಪ್ರೀತಿ (Love) ವಿಚಾರಕ್ಕಾಗಿಯೇ ಗ್ರಾಮದ ಆ ಕುಟುಂಬದ ಮನೆಗಳು ಧ್ವಂಸವಾದವು. ಏಕಾಏಕಿ ಮನೆ ಖಾಲಿ ಮಾಡಿಸಿದ್ರು. ಇಡೀ ಸಮುದಾಯವೇ ಆ ಒಂದು ಕುಟುಂಬವನ್ನು ಕುಲದಿಂದ ಬಹಿಷ್ಕಾರ ಹಾಕಿದೆ. ದಿಕ್ಕು ಕಾಣದೇ ಕುಟುಂಬ ಬೀದಿಗೆ ಬಂದಿದೆ. ನಾವು ಸವರ್ಣಿಯರು ದಲಿತರನ್ನು ಬಹಿಷ್ಕಾರ ಹಾಕುವುದನ್ನು ನೋಡಿದ್ದೆವೆ, ಕೇಳಿದ್ದೇವೆ. ಆದರೆ ಇಲ್ಲಿ ದಲಿತರೇ ದಲಿತರನ್ನ ಬಹಿಷ್ಕಾರ ಹಾಕಿದ್ದಾರೆ. ಮನನೊಂದು ಕುಟುಂಬದ 11 ಜನ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

    ಹೌದು. ಗದಗ (Gadag) ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ಎಸ್. ಸಾಬಣ್ಣ ಮಾದರ ಎಂಬ ಕುಟುಂಬಕ್ಕೆ ಈಗ ಬಹಿಷ್ಕಾರ ಹಾಕಲಾಗಿದೆ. ಇವರ ಮಗ ಶಿವಾನಂದ ಮಾದರ ಎಂಬಾತ ಅದೇ ಜಾತಿಯ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದರು (Love Marriage). ಸಂಬಂಧದಲ್ಲಿ ಶಿವಾನಂದ ಹಾಗೂ ಯುವತಿ ತಂದೆ ಮಗಳಾಗಬೇಕಂತೆ. ಅದನ್ನು ಮರೆತು 2009 ರಲ್ಲಿ ಮದುವೆ ಆದ್ರು. ಆಗ ಯುವತಿ ಕುಟುಂಬಸ್ಥರು ಇವರ ಮೇಲೆ ಕತ್ತಿ ಮಸಿಯಲಾರಂಬಿಸಿದ್ರು. 2009 ರಲ್ಲಿ ಊರು ತೊರೆದು 14 ವರ್ಷ ವನವಾಸ ಮುಗಿಸಿ ಈಗ ಊರಿಗೆ ಬಂದಿದ್ದಾರೆ. ಆದರೂ ಇವರ ಮೇಲಿನ ಸಿಟ್ಟು, ಕೋಪ ಇನ್ನೂ ತನ್ನಗಾಗಿಲ್ಲ. ದಲಿತ ಸಮಾಜದಿಂದ ನಮ್ಮನ್ನು ಬಹಿಷ್ಕಾರ ಹಾಕಿದ್ದಾರೆ.

    ಊರಿನವರು ಯಾರೇ ನಮ್ಮನ್ನು ಮಾತನಾಡಿಸಿದ್ರೆ, ಸಹಾಯ ಮಾಡಿದ್ರೆ ಅವರಿಗೂ ಒಂದು ಸಾವಿರ ದಂಡ ಹಾಗೂ ಶಿಕ್ಷೆ ಘೋಷಣೆ ಮಾಡಿದ್ದಾರೆ. ದಲಿತರಿಂದಲೇ ದಲಿತರಿಗೆ ಬಹಿಷ್ಕಾರ ಹಾಕಿ ಅನ್ಯಾಯ ಮಾಡಿದ್ದಾರೆ. ಸಾಕಷ್ಟು ಮನನೊಂದಿದ್ದೇವೆ. ನಮಗೆ ಸಾವೊಂದೇ ಪರಿಹಾರ ಎಂದು ನೊಂದ ಕುಟುಂಬಸ್ಥರು ಹೇಳುತ್ತಿದ್ದಾರೆ. ಇದನ್ನೂ ಓದಿ: ಮೋದಿ ಹಾದಿಯಲ್ಲೆ ಸಿದ್ದರಾಮಯ್ಯ – ಜಾತಿ, ಧರ್ಮ ಸಮೀಕರಣಕ್ಕೆ ರಣತಂತ್ರ

    ಶಿವಾನಂದ ಹಾಗೂ ಯುವತಿ ಇಬ್ಬರೂ ಮಾದಿಗ ಜನಾಂಗದವರು. ಆದರೂ ಇಬ್ಬರ ಪ್ರೀತಿ ಕುಟುಂಬದ ನೆಮ್ಮದಿ ಹಾಳು ಮಾಡಿದೆ. ಇತ್ತೀಚೆಗೆ ಯುವತಿ ತಂದೆ ಮೃತಪಟ್ಟ ನಂತರ ಇವರನ್ನು ಊರಿಗೆ ಕರೆಸಿಕೊಂಡಿದ್ದಾರೆ. ಆಸ್ತಿಗೆ ಸಹಿ ಹಾಕಿಸಿಕೊಂಡಿದ್ದಾರಂತೆ. 14 ವರ್ಷದ ನಂತರ ಊರಿಗೆ ಬಂದರೂ ದಬ್ಬಾಳಿಕೆ ನಿಲ್ಲುತ್ತಿಲ್ಲವಂತೆ. ಕಳೆದ 3 ದಿನಗಳ ಹಿಂದೆಯಷ್ಟೇ ಈ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರಂತೆ. 3 ಜನ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗ ಮಾಡಿದ ತಪ್ಪಿಗೆ ಇಡೀ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಇದನ್ನೂ ಓದಿ: ಮೆಗಾ ಸ್ನಾತಕೋತ್ತರ ಶೈಕ್ಷಣಿಕ ಉತ್ಸವದ ಮೊದಲ ದಿನ ಭರ್ಜರಿ ರೆಸ್ಪಾನ್ಸ್- ಬನ್ನಿ ಭಾಗವಹಿಸಿ, ಬಹುಮಾನ ಗೆಲ್ಲಿ

    ಕುಟುಂಬದ 11 ಜನ ಕಳೆದ 3 ದಿನದಿಂದ ಬಿಸಿಲು, ಮಳೆ, ಚಳಿಯಲ್ಲಿ ರಸ್ತೆ ಬದಿ ಕಾಲ ಕಳೆಯುತ್ತಿದ್ದಾರೆ. 2009ರಲ್ಲಿ ಯುವತಿ ಕುಟುಂಬಸ್ಥರಿಂದ 2 ಮನೆ ಧ್ವಂಸಮಾಡಿದ್ದಾರೆ. ನಂತರ 1019 ರಲ್ಲಿ ನವ ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ನಿರ್ಮಾಣವಾದ ಒಂದು ಮನೆ ಸಹ ಧ್ವಂಸ ಮಾಡಿದ್ದಾರಂತೆ. ಈಗ ಇದ್ದ ಮನೆ ಸಹ ಖಾಲಿ ಮಾಡಿಸಿದ್ದಾರೆ. ಕುಟುಂಬ ಯಜಮಾನ ಸಾಬಣ್ಣ, ಶಾಂತವ್ವ, ಮಗ ಶಿವಾನಂದ, ಸೊಸೆ, ಮತ್ತೋರ್ವ ಮಗ ಮುತ್ತಣ್ಣ, ರೇಣುಕಾ, ಅಂಜನಾದೇವಿ ಸೇರಿ 5 ಜನ ಮಕ್ಕಳು ಬೀದಿಪಾಲಾಗಿವೆ. ಜೀವನವೇ ಸಾಕಾಗಿದೆ. ನೆಮ್ಮದಿಯಿಂದ ಜೀವನ ಮಾಡಲು ಅನುಕೂಲ ಕಲ್ಪಿಸಿಕೊಡಿ. ಇಲ್ಲವೆ ಸಾಯಲು ಅನುಮತಿ ಕೊಡಿ ಅಂತಿದೆ ನೊಂದ ಕುಟುಂಬ.

    ಪ್ರೀತಿಸಿ ಮದುವೆಯಾದ ಕಾರಣಕ್ಕೆ ಇಡೀ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಈಗ ನರಗುಂದ ತಹಶಿಲ್ದಾರ್, ಪೊಲೀಸ್ (Gadag Police) ಇಲಾಖೆ, ಗ್ರಾಮ ಪಂಚಾಯತಿ ಈ ಬಗ್ಗೆ ಮಾಹಿತಿ ಪಡೆದಿದ್ದಾರೆ. ಆದರೆ ಸಮಸ್ಯೆ ಬಗೆಹರಿಸುತ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ದಲಿತ ಸಂಸದರನ್ನು ನಿರ್ಬಂಧ ಮಾಡಿದ ಕ್ರಮ ಸರಿಯಲ್ಲ: ಸಿದ್ದಲಿಂಗ ಸ್ವಾಮೀಜಿ

    ದಲಿತ ಸಂಸದರನ್ನು ನಿರ್ಬಂಧ ಮಾಡಿದ ಕ್ರಮ ಸರಿಯಲ್ಲ: ಸಿದ್ದಲಿಂಗ ಸ್ವಾಮೀಜಿ

    ತುಮಕೂರು: ಸಂಸದ ನಾರಾಯಣಸ್ವಾಮಿ ಅವರನ್ನು ಗೊಲ್ಲರಹಟ್ಟಿಗೆ ನಿರ್ಬಂಧ ಮಾಡಿದ ಕ್ರಮ ಸರಿಯಲ್ಲ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ.

    ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ದಲಿತ ಸಂಸದರನ್ನು ಗೊಲ್ಲರಹಟ್ಟಿಗೆ ನಿಷೇಧ ಮಾಡಿದ್ದು, ಶೋಚನೀಯ ಹಾಗೂ ದುಃಖನೀಯ ಸಂಗತಿ ಎಂದು ಹೇಳಿದ್ದಾರೆ. ಇಂತಹ ಆಧುನಿಕ ಕಾಲದಲ್ಲೂ ಇಂತಹ ಅನಿಷ್ಟ ಪದ್ಧತಿ ಜೀವಂತವಾಗಿ ಇರುವುದು ಖಂಡನೀಯ. ಇದನ್ನು ಹೋಗಲಾಡಿಸುವ ಚಿಂತನೆ ಮಾಡಬೇಕಿದೆ ಎಂದರು.

    ಗಾಂಧಿಜೀಯ ಕನಸಿನ ಭಾರತ ಹಾಗೂ ಬಸವಣ್ಣ ಅವರ ಸಮಾಜದ ಆದರ್ಶ ನಮ್ಮಲ್ಲಿರಬೇಕು. ಒಬ್ಬ ಸಂಸದರಿಗೆ ಈ ಸ್ಥಿತಿ ಬಂದರೆ ಜನ ಸಾಮಾನ್ಯರ ಸ್ಥಿತಿ ಹೇಗಿರಬೇಡ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಘಟನೆ ವೇಳೆ ಸಂಸದರು ನಡೆದುಕೊಂಡ ರೀತಿ ಉತ್ತಮ. ನಾರಾಯಸ್ವಾಮಿ ಅವರ ಹೃದಯ ಶ್ರೀಮಂತಿಕೆ ಮೆಚ್ಚುವಂತದ್ದು, ಮುಂದಿನ ದಿನಗಳಲ್ಲಿ ಗೊಲ್ಲರಹಟ್ಟಿಯ ಜನರ ಮನಪರಿವರ್ತನೆಗೆ, ಅಭಿವೃದ್ಧಿಗೆ ಪಣತೊಡುತ್ತೇನೆ ಅಂದ ನಾರಾಯಣಸ್ವಾಮಿ ಅವರ ಕಾಳಜಿ ಮೆಚ್ಚುವಂತಹದ್ದು ಎಂದು ಶ್ಲಾಘಿಸಿದ್ದಾರೆ. ಇದನ್ನು ಓದಿ: ದಲಿತ ಸಂಸದರಿಗೆ ಗ್ರಾಮಕ್ಕೆ ಬರದಂತೆ ತಡೆದ ಗ್ರಾಮಸ್ಥರು

    ಮಠ-ಮಾನ್ಯಗಳು ಹಾಗೂ ಸಂಘ ಸಂಸ್ಥೆಗಳು ಕೂಡ ಮುಂದೆ ಬಂದು ಈ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ. ಇದೇ ವೇಳೆ ಯಾವುದೇ ನಾಯಕರು ಆರೋಪದ ಮೇಲೆ ಬಂಧನವಾದಾಗ ಆಯಾ ಸಮುದಾಯಗಳ ಪರ ನಿಂತು ಪ್ರತಿಭಟನೆ ನಡೆಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ದೇಶದ ಪ್ರತಿಯೊಬ್ಬ ಪ್ರಜೆನೂ ರಾಷ್ಟ್ರ ಧ್ವಜ, ರಾಷ್ಟ್ರಗೀತೆ ಹಾಗೂ ಸಂವಿಧಾನವನ್ನು ಗೌರವಿಸಬೇಕು. ಕಾನೂನು ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಒಂದು ಕಾನೂನು ಇಲ್ಲ. ಎಲ್ಲರೂ ಕಾನೂನಿಗೆ ತಲೆ ಬಾಗಬೇಕು ಎಂದು ಪ್ರತಿಕ್ರಿಯಿಸಿದರು.