Tag: Dalit Colony

  • ಸಚಿವೆ ಶಶಿಕಲಾ ಜೊಲ್ಲೆಗೆ ಗ್ರಾಮಸ್ಥರಿಂದ ಕ್ಲಾಸ್

    ಸಚಿವೆ ಶಶಿಕಲಾ ಜೊಲ್ಲೆಗೆ ಗ್ರಾಮಸ್ಥರಿಂದ ಕ್ಲಾಸ್

    ಚಿಕ್ಕೋಡಿ: ಚುನಾವಣಾ (Election) ಪ್ರಚಾರಕ್ಕೆ ತೆರಳಿದ್ದ ಸಚಿವೆ ಶಶಿಕಲಾ ಜೊಲ್ಲೆಯನ್ನು(Shashikala Jolle) ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ದಲಿತ ಕಾಲೋನಿಗೆ (Dalit Colony) ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಇಷ್ಟು ದಿನಗಳ ಕಾಲ ನಮ್ಮೂರಿನತ್ತ ಮುಖ ಮಾಡಿಲ್ಲ. ಚುನಾವಣೆ ಬರುತ್ತಿದ್ದಂತೆ ನಮ್ಮೂರಿಗೆ ಭೇಟಿ ನೀಡುತ್ತಿದ್ದೀರಿ. ನಮ್ಮ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳೇ ಆಗಿಲ್ಲ. ದಲಿತರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಹೀಗಾಗಿ ನೀವು ನಮ್ಮೂರಿಗೆ ಬರುವುದು ಬೇಡ ಎಂದು ಗ್ರಾಮಸ್ಥರು (Villagers) ಸಚಿವೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಮಾಡೋದು ಹರಿಕಥೆ, ತಿನ್ನೋದು ಬದನೇಕಾಯಿ – ಅಂಥವರಿಗೆ ಕೋಲಾರದ ಜನ ಮರುಳಾಗ್ಬೇಡಿ: HDK 

    ಘಟನೆಯಿಂದ ಗಲಿಬಿಲಿಗೊಂಡ ಸಚಿವರು ಜನರನ್ನು ಸಮಾಧಾನ ಪಡಿಸಲು ಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದನ್ನೂ ಓದಿ: ಮೋದಿ ಇಡೀ ವಿಶ್ವಕ್ಕೆ ಹುಲಿ: ಈಶ್ವರಪ್ಪ

  • ಜಾತಿ-ಭೇದ ಮರೆತು ಬಡವರಿಗೆ ದಿನನಿತ್ಯದ ಸಾಮಾಗ್ರಿಗಳನ್ನು ನೀಡಿದ ಅರ್ಚಕರು

    ಜಾತಿ-ಭೇದ ಮರೆತು ಬಡವರಿಗೆ ದಿನನಿತ್ಯದ ಸಾಮಾಗ್ರಿಗಳನ್ನು ನೀಡಿದ ಅರ್ಚಕರು

    ಕೋಲಾರ: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಕೋಲಾರ ವರದರಾಜ ಸ್ವಾಮಿ ದೇವಾಲಯದ ಅರ್ಚಕರು ಹಾಗೂ ಸಿಬ್ಬಂದಿ ಹಲವೆಡೆ ಬಡವರಿಗೆ ದಿನ ನಿತ್ಯದ ಸಾಮಗ್ರಿಗಳನ್ನು ವಿತರಣೆ ಮಾಡಿದರು.

    ನಿತ್ಯ ಕೂಲಿ ಮಾಡಿ ಬದುಕುತ್ತಿದ್ದ ಜನರಿಗೆ ಲಾಕ್‍ಡೌನ್ ಹಿನ್ನೆಲೆ ನಿತ್ಯದ ಬದುಕು ಕಷ್ಟವಾಗಿದೆ. ಹೀಗಾಗಿ ಸುಮಾರು ನೂರು ಜನರಿಗೆ ಅರ್ಚಕರುಗಳು ಅಕ್ಕಿ, ಬೇಳೆ, ಎಣ್ಣೆ, ಉಪ್ಪು, ತರಕಾರಿ ಸೇರಿದಂತೆ ನಿತ್ಯದ ವಸ್ತುಗಳನ್ನ ಬ್ಯಾಗ್‍ನಲ್ಲಿ ಸಂಗ್ರಹಿಸಿ, ಕೋಲಾರ ನಗರದ ವಿನೋಭ ನಗರದ ದಲಿತ ಕಾಲೋನಿಗಳಲ್ಲಿ ಹಂಚಿಕೆ ಮಾಡಿದರು.

    ಇದೇ ವೇಳೆ ಮುಂದಿನ ದಿನಗಳಲ್ಲಿ ಸರಿ ಸುಮಾರು 1,000 ಕುಟುಂಬಗಳಿಗೆ ಹೀಗೆ ದವಸ ದಾನ್ಯಗಳನ್ನು ವಿತರಣೆ ಮಾಡುವುದಾಗಿ ಹೇಳಿದರು. ಜಾತಿ-ಭೇದ ಮರೆತು ಹಸಿದವರಿಗೆ ಅನ್ನ ಕೊಡುವ ಕೆಲಸ ಮಾಡಲಾಗುತ್ತಿದೆ ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟ ಪಡಿಸಿದರು.