Tag: Dali Dhananjay

  • `ಮೊದಲು ಪ್ರಭಾಸ್ ಮದುವೆಯಾಗಲಿ ಆಮೇಲೆ ನನ್ನದು’ ಶಾಕಿಂಗ್ ಹೇಳಿಕೆ ಕೊಟ್ರು ಡಾಲಿ

    `ಮೊದಲು ಪ್ರಭಾಸ್ ಮದುವೆಯಾಗಲಿ ಆಮೇಲೆ ನನ್ನದು’ ಶಾಕಿಂಗ್ ಹೇಳಿಕೆ ಕೊಟ್ರು ಡಾಲಿ

    ಸ್ಯಾಂಡಲ್‌ವುಡ್ ನಟ ಧನಂಜಯ್‌ಗೆ(Dhananjay) ಅಪಾರ ಅಭಿಮಾನಿಗಳ ಬಳಗವಿದೆ. ನೆಚ್ಚಿನ ನಟನ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್ ಕಾಯ್ತಿದ್ದಾರೆ. ಇದೀಗ ತಮ್ಮ ಮದುವೆಯ ಬಗ್ಗೆ ಡಾಲಿ ಶಾಕಿಂಗ್ ಹೇಳಿಕೆಯೊಂದನ್ನ ಕೊಟ್ಟಿದ್ದಾರೆ.

    ಡಾಲಿ ನಟನೆಯ ವಿಚಾರಕ್ಕೆ ಬಂದ್ರೆ ನಟರಾಕ್ಷಸ ಎಂಬುದನ್ನ ಪ್ರೂವ್ ಮಾಡಿದ್ದಾರೆ. ಬಹುಮುಖ ಪ್ರತಿಭೆ ಎಂದೇ ಹೇಳಬಹುದು. ಕನ್ನಡದ ಚಿತ್ರಗಳ ಜತೆಗೆ ಪರಭಾಷೆಗಳಲ್ಲೂ ಡಾಲಿ ಈಗ ಘರ್ಜಿಸುತ್ತಿದ್ದಾರೆ. ಹೀಗಿರುವಾಗ ಧನಂಜಯ್ ಅವರ ಮದುವೆಯ ಅಪ್‌ಡೇಟ್‌ಗಾಗಿ ಕಾದು ಕೂತಿದ್ದ ಫ್ಯಾನ್ಸ್‌ಗೆ, ಡಾಲಿ(Dali) ಮಾತು ಕೇಳಿ ಶಾಕ್ ಆಗಿದ್ದಾರೆ. ಮದುವೆಯ ಬಗ್ಗೆ ತಮಗೆ ಇರುವ ಅಭಿಪ್ರಾಯವನ್ನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

    ಪ್ರಭಾಸ್ (Prabhas) ಸರ್ ಮದುವೆಯಾಗಿದ್ದಾರಾ? ಅವರು ಮದುವೆ ಆದರೆ ನಾನು ಮದುವೆಯಾಗುತ್ತೀನಿ ಎಂದು ಮಾತನಾಡಿದ್ದಾರೆ. ಇಲ್ಲವೆಂದರೆ ನನಗೂ ಮದುವೆಯೇ ಬೇಡ, ಹಾಗೆ ಇದ್ದು ಬಿಡುತ್ತೇನೆ ಎಂದಿದ್ದಾರೆ. ಹೀಗೆ ಹೇಳಿರುವುದಕ್ಕೆ ಕಾರಣ ಕೂಡ ಡಾಲಿ ತಿಳಿಸಿದ್ದಾರೆ. ಇದನ್ನೂ ಓದಿ:‘ಮದುವೆ’ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆದ ಮಹಾಲಕ್ಷ್ಮಿ ರವೀಂದರ್

    ನನ್ನ ಸ್ನೇಹಿತರು ಇದ್ದಾರೆ. ಅವರ ಮನೆಯಲ್ಲಿ ಮದುವೆಯ ಬಗ್ಗೆ ಮಾತನಾಡಿದರೆ, ಧನಂಜಯ್ ಮದುವೆ ಆದಾಗ ನಾವು ಮದುವೆಯಾಗುತ್ತೀವಿ ಎಂದಿದ್ದಾರೆ. ಅದೇ ರೀತಿ ನಾನು ಕೂಡ ಪ್ರಭಾಸ್ ಮತ್ತು ಸಲ್ಮಾನ್ ಖಾನ್ ನನ್ನ ಹಿರಿಯ ಸಹೋದರರಂತೆ. ಅವರು ಮೊದಲು ಮದುವೆ ಆಗಿಲಿ ಎಂದು ಹೇಳಿದ್ದಾರೆ.

    `ಬಡವ ರಾಸ್ಕಲ್’ ಚಿತ್ರದಲ್ಲಿ ಅಮೃತ ಮತ್ತು ಡಾಲಿ ಜೋಡಿ ನೋಡಿ, ಇವರಿಬ್ಬರು ಮದುವೆಯಾಗುತ್ತಾರೆ ಎಂದು ಕಾಯುತ್ತಿದ್ದ ಫ್ಯಾನ್ಸ್‌ಗೆ ಇದೀಗ ಧನಂಜಯ್ ಹೇಳಿಕೆ ಅಚ್ಚರಿ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಗುಡ್ ನ್ಯೂಸ್

    ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಗುಡ್ ನ್ಯೂಸ್

    ಕ್ಷಿಣದ ಸಿನಿಮಾರಂಗದಲ್ಲಿ ಹವಾ ಕ್ರಿಯೇಟ್ ಮಾಡಿರುವ `ಪುಷ್ಪ’ ಸಿನಿಮಾ. ಈ ಚಿತ್ರ ರಿಲೀಸ್ ಆದ್ಮೇಲೆ ಪ್ರೇಕ್ಷಕರಿಗೆ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ಇದೀಗ ಮತ್ತೆ ಪುಷ್ಪ ಪಾರ್ಟ್ ಜತೆ ಬರೋದಕ್ಕೆ ಸಿನಿಮಾ ಟೀಂ ಸಜ್ಜಾಗಿದೆ.

    ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ನಟನೆಯ `ಪುಷ್ಪ’ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ ಸಿನಿಮಾ. ರಿಲೀಸ್ ಬಳಿಕ ಪುಷ್ಪ ಅಂದ್ರೆ ಫ್ಲವರ್ ಅಲ್ಲಾ, ಫೈಯರ್ ಎಂಬುದನ್ನ ತೆರೆಯ ಮೇಲೆ ತೋರಿಸಿಕೊಟ್ಟಿತ್ತು. ಇದೀಗ `ಪುಷ್ಪ’ ಪಾರ್ಟ್ 2ಗಾಗಿ ಎದುರು ನೋಡ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇದನ್ನೂ ಓದಿ:ಊಟದಲ್ಲಿನ ಗರಂ ಮಸಾಲಾ ಥರ ಸೋನು ಶ್ರೀನಿವಾಸ್ ಗೌಡ: ಹೀಗ್ಯಾಕೆ ಅಂದ್ರು ಬಿಗ್ ಬಾಸ್ ಮನೆಮಂದಿ

    ಸುಕುಮಾರ್ ನಿರ್ದೇಶನದ `ಪುಷ್ಪ 2’ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಈ ವೇಳೆ ರಶ್ಮಿಕಾ ಸೇರಿದಂತೆ ಹಲವರು ಚಿತ್ರದ ಮುಹೂರ್ತಕ್ಕೆ ಭಾಗಿಯಾಗಿದ್ದರು. ಅಲ್ಲು ಅರ್ಜುನ್‌ ಮುಹೂತದ ವೇಳೆ ಗೈರಾಗಿದ್ದರು. ಇನ್ನು ಈ  ಸಿನಿಮಾದ ಚಿತ್ರೀಕರಣ  ಭರದಿಂದ ಸಾಗಲಿದೆ. ಪುಷ್ಪ 2ನಲ್ಲಿ ಅಲ್ಲು ಅರ್ಜುನ್ ಅವರ ಡಾನ್‌ನ ಖಡಕ್ ಲುಕ್ ನೋಡಲು, ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.

    Tv
    [brid partner=56869869 player=32851 video=960834 autoplay=true]

  • `ಭೈರಾಗಿ’ ಚಿತ್ರದ ಡಬ್ಬಿಂಗ್ ಪೂರ್ಣಗೊಳಿಸಿದ ನಟ ಶಿವರಾಜ್‌ಕುಮಾರ್

    `ಭೈರಾಗಿ’ ಚಿತ್ರದ ಡಬ್ಬಿಂಗ್ ಪೂರ್ಣಗೊಳಿಸಿದ ನಟ ಶಿವರಾಜ್‌ಕುಮಾರ್

    ಸ್ಯಾಂಡಲ್‌ವುಡ್‌ನಲ್ಲಿ ರಿಲೀಸ್‌ಗೂ ಮುಂಚೆನೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರೋ ಚಿತ್ರ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ `ಭೈರಾಗಿ’ ಸಿನಿಮಾ. ಇದೀಗ `ಭೈರಾಗಿ’ ಚಿತ್ರದ ಶಿವರಾಜ್‌ಕುಮಾರ್ ಪಾತ್ರದ ಡಬ್ಬಿಂಗ್ ಕಂಪ್ಲಿಟ್ ಆಗಿದೆ.

    ವಿಜಯ್ ಮಿಲ್ಟನ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಭೈರಾಗಿ’ ಚಿತ್ರದಲ್ಲಿ ನಟ ಶಿವರಾಜ್‌ಕುಮಾರ್ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಮತ್ತು ಟೀಸರ್‌ನಿಂದ ಧೂಳೆಬ್ಬಿಸಿದೆ. ಸದ್ಯ ಸೆಂಚುರಿ ಸ್ಟಾರ್ ಶಿವಣ್ಣ `ಭೈರಾಗಿ’ ಚಿತ್ರದಲ್ಲಿನ ತಮ್ಮ ಪಾತ್ರದ ಡಬ್ಬಿಂಗ್ ಪೋರ್ಷನ್ ಮುಗಿಸಿ ಕೊಟ್ಟಿದ್ದಾರೆ. ಸದ್ಯ ಈ ಫೋಟೋ ಸಖತ್ ವೈರಲ್ ಆಗ್ತಿದೆ. ಇದನ್ನೂ ಓದಿ:ಭಾರೀ ಮೊತ್ತಕ್ಕೆ ಸೇಲ್ ಆಯ್ತು ನೀನಾಸಂ ಸತೀಶ್ ನಟನೆಯ ‘ಪೆಟ್ರೊಮ್ಯಾಕ್ಸ್’

    `ಭೈರಾಗಿ’ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ಗೆ ಡಾಲಿ ಧನಂಜಯ್, ಪೃಥ್ವಿ ಅಂಬರ್, ಅಂಜಲಿ, ಯಶ ಶಿವಕುಮಾರ್, ಶಶಿಕುಮಾರ್ ಸಾಥ್ ನೀಡಿದ್ದಾರೆ. ಈಗಾಗಲೇ `ಭೈರಾರಿ’ ಚಿತ್ರೀಕರಣ ಕಂಪ್ಲಿಟ್ ಆಗಿದ್ದು, ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ. ಟೀಸರ್‌ನಿಂದ ಗಮನ ಸೆಳೆದಿರೋ ಶಿವಣ್ಣ ನಟನೆಯ ಭೈರಾಗಿ ಚಿತ್ರಕ್ಕಾಗಿ ಅಭಿಮಾನಿಗಳು ಕಾಯ್ತಿದ್ದಾರೆ.

  • ‘ಮಂಕಿ ಸೀನ’ನ ಕಟೌಟಿಗೆ ಬಿಯರ್ ಅಭಿಷೇಕ

    ‘ಮಂಕಿ ಸೀನ’ನ ಕಟೌಟಿಗೆ ಬಿಯರ್ ಅಭಿಷೇಕ

    ಬೆಂಗಳೂರು: ಶಿವರಾತ್ರಿಯ ಹಬ್ಬವಾದ ಇಂದು ‘ಪಾಪ್‍ಕಾರ್ನ್ ಮಂಕಿ ಟೈಗರ್’ ಸಿನಿಮಾ ತೆರೆಗಪ್ಪಳಿಸಿದೆ. ಈ ಹಿನ್ನೆಲೆಯಲ್ಲಿ ಡಾಲಿ ಅಭಿಮಾನಿಗಳು ಕಟೌಟಿಗೆ ಬಿಯರ್ ಅಭಿಷೇಕ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.

    ಬೆಳಗ್ಗೆ 7 ಗಂಟೆಗೆ ಪಾಪ್‍ಕಾರ್ನ್ ಮಂಕಿ ಟೈಗರ್ ಅಭಿಮಾನಿಗಳಿಗಾಗಿ ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಸ್ಪೆಷಲ್ ಶೋ ಅರೆಂಜ್ ಮಾಡಲಾಗಿದ್ದು, ಈ ವಿಶೆಷ ಪ್ರದರ್ಶನ ಹೌಸ್ ಫುಲ್ ಆಗಿದೆ. ರಾಜ್ಯದಾದ್ಯಂತ ಸುಮಾರು 300 ಚಿತ್ರಮಂದಿರಗಳಲ್ಲಿ ಸುಕ್ಕಸೂರಿ ಸಾರಥ್ಯದ ಹಾಗೂ ಡಾಲಿ ಅಭಿನಯದ ಹೊಸ ಸಿನಿಮಾ ರಿಲೀಸ್ ಆಗಿದೆ.

    ಸುದೀರ್ ಕೆ.ಎಂ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶೇಖರ್ ಕ್ಯಾಮೆರಾ ಕೈ ಚಳಕ ಚಿತ್ರಕ್ಕಿದೆ. ಧನಂಜಯ್ ಗೆ ಜೋಡಿಯಾಗಿ ನಿವೇದಿತಾ ಸ್ಕ್ರೀನ್ ಶೇರ್ ಮಾಡಿದ್ದು, ಅಮೃತ ಅಯ್ಯಂಗಾರ್, ಸುಧಿ, ಸಪ್ತಮಿ ಚಿತ್ರದ ತಾರಾ ಬಳಗದಲ್ಲಿದ್ದಾರೆ.

    ಪೋಸ್ಟರ್ ಹಾಗೂ ಟೈಟಲ್ ಮೂಲಕ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದ್ದ ಪಾಪ್ ಕಾರ್ನ್ ಮಂಕಿ ಟೈಗರ್ ಟೀಸರ್ ಮೂಲಕ ಡಾಲಿ ಹಾಗೂ ನಿರ್ದೇಶಕ ಸೂರಿ ಅಭಿಮಾನಿಗಳಲ್ಲಿ ಸಂತಸ ಹೆಚ್ಚು ಮಾಡಿತ್ತು.

  • ಈ ವಾರ ಪ್ರೇಕ್ಷಕರ ಮುಂದೆ ಅವತರಿಸಲಿದ್ದಾನೆ ಭೈರವ ಡಾಲಿ!

    ಈ ವಾರ ಪ್ರೇಕ್ಷಕರ ಮುಂದೆ ಅವತರಿಸಲಿದ್ದಾನೆ ಭೈರವ ಡಾಲಿ!

    ಬೆಂಗಳೂರು: ಟಗರು ಚಿತ್ರದಲ್ಲಿ ಡಾಲಿ ಪಾತ್ರದ ಮೂಲಕ ವಿಜೃಂಭಿಸಿದ್ದರಲ್ಲಾ ಧನಂಜಯ್? ಅದಾಗಿ ವಾರದೊಪ್ಪತ್ತಿನಲ್ಲಿಯೇ ರಾಮ್ ಗೋಪಾಲ್ ವರ್ಮಾ ಅವರನ್ನು ಹೈಜಾಕ್ ಮಾಡಿದ್ದರು. ತಾವು ನಿರ್ಮಾಣ ಮಾಡಲಿರೋ ಚಿತ್ರಕ್ಕೆ ಏಕಾಏಕಿ ಧನಂಜಯ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿ ಚಿತ್ರೀಕರಣಕ್ಕೂ ಚಾಲನೆ ನೀಡಿ ಬಿಟ್ಟಿದ್ದರು. ಹಾಗೆ ಒಂದೇ ಉಸಿರಿಗೆ ತಯಾರಾಗಿ ನಿಂತಿರೋ ಚಿತ್ರ ಭೈರವ ಗೀತಾ!

    ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಿ, ದಕ್ಷಿಣ ಭಾರತೀಯ ಚಿತ್ರರಂಗದ ಗಮನ ಸೆಳೆದುಕೊಂಡಿರೋ ಈ ಚಿತ್ರ ಇದೇ ವಾರ ಅದ್ಧೂರಿಯಾಗಿ ತೆರೆ ಕಾಣಲಿದೆ!

    ರಾಮ್ ಗೋಪಾಲ್ ವರ್ಮಾ ಯಾವುದನ್ನೂ, ಯಾರನ್ನೂ ಒಪ್ಪಿಕೊಳ್ಳುವ ಜಾಯಮಾನದವರಲ್ಲ. ಅವರು ಎಂತೆಂಥಾ ನಿರ್ದೇಶಕರನ್ನು, ನಟ ನಟಿಯರನ್ನೇ ಗೇಲಿ ಮಾಡಿ ನಕ್ಕು ವಿವಾದಕ್ಕೀಡಾದ ಅದೆಷ್ಟೋ ಉದಾಹರಣೆಗಳಿದ್ದಾವೆ. ಅಂಥಾದ್ದರಲ್ಲಿ ಟಗರು ಚಿತ್ರದಲ್ಲಿನ ಡಾಲಿ ಪಾತ್ರವನ್ನು ಅವರು ಒಪ್ಪಿಕೊಂಡಿದ್ದೇ ದೊಡ್ಡ ವಿಚಾರ.

    ಹಾಗೆ ಡಾಲಿಯನ್ನು ಮೆಚ್ಚಿ ಕೊಂಡಾಡಿದ ವರ್ಮಾ ಭೈರವ ಗೀತಾ ಚಿತ್ರದ ರಗಡ್ ಪ್ರೇಮ್ ಕಹಾನಿಯ ಪಾತ್ರವಾಗಿಸಿದ್ದಾರೆ. ಉಳ್ಳವರ ವಿರುದ್ಧ ಪ್ರೀತಿಯನ್ನಷ್ಟೇ ಬೆನ್ನಿಗಿಟ್ಟುಕೊಂಡು ತಿರುಗಿ ಬೀಳೋ ಪ್ರೇಮಿಯ ಕಥೆಯಾಧಾರಿತವಾದ ಈ ಚಿತ್ರದಲ್ಲಿ ಭರಪೂರ ರೊಮ್ಯಾನ್ಸೂ ಇದೆ ಎಂಬುದು ಪೋಸ್ಟರುಗಳ ಮೂಲಕವೇ ಸಾಬೀತಾಗಿದೆ. ಈ ಮೂಲಕವೇ ಭೈರವ ಗೀತಾ ಬಗ್ಗೆ ಎಲ್ಲೆಡೆ ಕುತೂಹಲ ನಿಗಿನಿಗಿಸೋ ಕೆಂಡದಂತಾಗಿದೆ. ಅಸಲಿಗೆ ಭೈರವನ ಖದರ್ ಎಂಥಾದ್ದೆಂಬುದು ಈ ವಾರ ಜಾಹೀರಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬಾದಾಮಿಯಲ್ಲಿ ಭೈರವಗೀತಾ!

    ಬಾದಾಮಿಯಲ್ಲಿ ಭೈರವಗೀತಾ!

    ಬೆಂಗಳೂರು: ಡಾಲಿ ಧನಂಜಯ್ ನಟನೆಯ ಭೈರವ ಗೀತಾ ಚಿತ್ರ ಅಂತಿಮ ಹಂತ ತಲುಪಿಕೊಂಡಿದೆ. ಟ್ರೈಲರ್ ಮತ್ತು ಪೋಸ್ಟರ್ ಮೂಲಕವೇ ಎಲ್ಲರನ್ನೂ ಆವರಿಸಿಕೊಂಡಿರೋ ಈ ಚಿತ್ರದ ಚಿತ್ರೀಕರಣವೀಗ ಮತ್ತೆ ಕರ್ನಾಟಕಕ್ಕೆ ಶಿಫ್ಟ್ ಆಗಿದೆ. ಇದೀಗ ಚಿತ್ರತಂಡ ಬಾದಾಮಿಯಲ್ಲಿ ಬೀಡು ಬಿಟ್ಟಿದೆ.

    ಉತ್ತರಕರ್ನಾಟಕದ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ಬಾದಾಮಿಯಲ್ಲಿ ಇದೀಗ ಭೈರವ ಗೀತಾ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇಲ್ಲಿನ ದೇವಸ್ಥಾನದ ಆವರಣದಲ್ಲಿ ವಿಶೇಷವಾದ ಹಾಡೊಂದರ ಚಿತ್ರೀಕರಣವೀಗ ನಡೆಯುತ್ತಿದೆ. ಇದರ ಜೊತೆಗೆ ಆಕ್ಷನ್ ಸೀನೊಂದರ ಚಿತ್ರೀಕರಣವನ್ನು ಬಾದಾಮಿ ಸುತ್ತಮುತ್ತಲ ಪ್ರದೇಶದಲ್ಲಿಯೇ ನಡೆಸಲು ಚಿತ್ರ ತಂಡ ಯೋಜನೆ ಹಾಕಿಕೊಂಡಿದೆ.

    ಈ ಆಕ್ಷನ್ ದೃಶ್ಯವನ್ನು ಸೆರೆ ಹಿಡಿದರೆ ಭೈರವ ಗೀತಾ ಚಿತ್ರದ ಚಿತ್ರೀಕರಣ ಸಮಾಪ್ತಿಗೊಳ್ಳಲಿದೆ. ರಾಮ್ ಗೋಪಾಲ್ ವರ್ಮಾ ನಿರ್ಮಾಣದ ಈ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿಯೇ ಚಿತ್ರೀಕರಣಗೊಳ್ಳುತ್ತಿದೆ. ಇದು ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಡಾಲಿಯ ಭೈರವಾವತಾರದ ಬಗ್ಗೆ ವರ್ಮಾ ಹೇಳಿದ್ದೇನು?

    ಡಾಲಿಯ ಭೈರವಾವತಾರದ ಬಗ್ಗೆ ವರ್ಮಾ ಹೇಳಿದ್ದೇನು?

    ಟಗರು ಚಿತ್ರದ ಡಾಲಿ ಪಾತ್ರದಲ್ಲಿ ಧನಂಜಯ ಮಿಂಚುತ್ತಲೇ ಮೀನ ಮೇಷ ಎಣಿಸದೆ ಅವರೊಂದಿಗೆ ಚಿತ್ರ ಶುರು ಮಾಡಿದ್ದವರು ರಾಂ ಗೋಪಾಲ್ ವರ್ಮಾ. ಅವರು ನಿರ್ಮಾಣ ಮಾಡಿರೋ ಭೈರವ ಗೀತಾ ಎಂಬ ಚಿತ್ರದಲ್ಲಿ ಧನಂಜಯ ನಾಯಕನಾಗಿ ನಟಿಸುತ್ತಿರೋದು ಗೊತ್ತೇ ಇದೆ. ಇದೀಗ ಅದರ ಫಸ್ಟ್ ಲುಕ್ ಆರ್‌ಜಿವಿ ಕೈ ಸೇರಿದೆ. ಅದನ್ನು ನೋಡಿ ಅವರ ಥ್ರಿಲ್ ಆಗಿದ್ದಾರೆ.

     

    ಭೈರವ ಗೀತಾ ಚಿತ್ರವನ್ನು ನಿರ್ದೇಶನ ಮಾಡುತ್ತಿರುವವರು ವರ್ಮಾ ಗರಡಿಯಲ್ಲಿ ಪಳಗಿರುವ ಸಿದ್ದಾರ್ಥ. ಅವರ ನಿರ್ದೇಶನದಲ್ಲಿ ಧನಂಜಯ್ ಅಬ್ಬರದ ನಟನೆ ನೀಡಿರೋ ಈ ಚಿತ್ರದ ಫಸ್ಟ್ ಲುಕ್ಕನ್ನು ವರ್ಮಾ ಮೆಚ್ಚಿ ಕೊಂಡಾಡಿದ್ದಾರೆ. ಡಾಲಿ ಭೈರವನಾಗಿ ನೀಡಿರೋ ನಟನೆಯನ್ನು ಮೆಚ್ಚಿಕೊಂಡಿರೋ ವರ್ಮಾ, ಧನಂಜಯನ ಪಾಲಿಗೆ ಈ ಚಿತ್ರ ನಿರ್ದಿಷ್ಟವಾದೊಂದು ಮಹಾ ತಿರುವು ನೀಡುವ ಭವಿಷ್ಯವನ್ನೂ ಹೇಳಿದ್ದಾರೆ.

    ಇನ್ನುಳಿದಂತೆ ವರ್ಮಾ ಬಹುವಾಗಿ ಹೊಗಳಿರೋದು ನಿರ್ದೇಶಕ ಸಿದ್ದಾರ್ಥ ಅವರ ಕಸುಬುದಾರಿಕೆಯನ್ನು. ಆರ್‌ಜಿವಿ ಬಹಳಷ್ಟು ನಂಬಿಕೆಯಿಟ್ಟು ಭೈರವ ಗೀತಾ ಚಿತ್ರವನ್ನು ಸಿದ್ದಾರ್ಥ ಕೈಗೊಪ್ಪಿಸಿದ್ದರು. ಆದರೆ ಫಸ್ಟ್ ಲುಕ್ಕು ನೋಡಿದ ವರ್ಮಾ ತಮ್ಮ ಶಿಷ್ಯ ನಿರೀಕ್ಷೆಗೂ ಮೀರಿ ಈ ಚಿತ್ರವನ್ನು ರೂಪಿಸಿದ್ದಾನೆಂದು ಬೆನ್ನು ತಟ್ಟಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ಸಿದ್ದಾರ್ಥನನ್ನು ನೋಡುತ್ತಿದ್ದೇನೆ. ಆತ ಪ್ರತಿಭಾವಂತ, ಶ್ರಮ ಜೀವಿ. ಆತನ ಟ್ಯಾಲೆಂಟಿನ ಮೇಲೆ ನಂಬಿಕೆ ಇಟ್ಟು ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಹೊರಿಸಿದ್ದೆ. ಅದನ್ನಾತ ಸಮರ್ಥವಾಗಿ ನಿರ್ವಹಿಸಿದ್ದಾನೆಂದೂ ವರ್ಮಾ ಹೇಳಿದ್ದಾರೆ.

    ಈ ಚಿತ್ರ ಆರಂಭದಲ್ಲಿಯೇ ಎಬ್ಬಿಸಿರೋ ಹವಾ ನೋಡಿದರೆ ಖಂಡಿತವಾಗಿಯೂ ಈ ಚಿತ್ರ ಟಗರು ಚಿತ್ರವನ್ನೇ ಸರಿಗಟ್ಟುವಂಥಾ ದಾಖಲೆ ನಿರ್ಮಿಸುವ ಲಕ್ಷಣಗಳೇ ಕಾಣಿಸುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv