Tag: Dalapathy Vijay

  • ಕೇರಳದಲ್ಲಿ ನಟ ವಿಜಯ್ ನೋಡಲು ಫ್ಯಾನ್ಸ್ ನೂಕುನುಗ್ಗಲು

    ಕೇರಳದಲ್ಲಿ ನಟ ವಿಜಯ್ ನೋಡಲು ಫ್ಯಾನ್ಸ್ ನೂಕುನುಗ್ಗಲು

    ಮಿಳಿನ ಹೆಸರಾಂತ ನಟ ವಿಜಯ್ ದಳಪತಿ ಇದೀಗ ಕೇರಳದಲ್ಲಿ ಬೀಡು ಬಿಟ್ಟಿದ್ದಾರೆ. ತಮ್ಮ ಸಿನಿಮಾದ ಚಿತ್ರೀಕರಣಕ್ಕಾಗಿ ಅವರು ಅಲ್ಲಿಗೆ ತೆರಳಿದ್ದಾರೆ. ಆದರೆ, ವಿಜಯ್ ನೋಡಲು ಫ್ಯಾನ್ಸ್ ತಂಡೋಪತಂಡವಾಗಿ ಬರುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳನ್ನು ನಿಭಾಯಿಸಲು ಚಿತ್ರತಂಡ ಹರಸಾಹಸ ಪಡುತ್ತಿದೆ. ಹೋಟೆಲ್ ಮತ್ತು ಚಿತ್ರೀಕರಣದಲ್ಲಿ ಸ್ಥಳದಲ್ಲಿ ಜಾತ್ರೆಯ ರೀತಿಯಲ್ಲಿ ಅಭಿಮಾನಿಗಳು ಸೇರುತ್ತಿದ್ದಾರೆ.

    ನೂರಾರು ಕಿಲೋ ಮೀಟರ್ ಅಂತರದ ರಾಜ್ಯದಲ್ಲಿರುವ ತಮಿಳು ನಟ ವಿಜಯ್ (Vijay), ಕೇರಳಕ್ಕೆ (Kerala) ಬಾರದೇ ಬರೋಬ್ಬರಿ 14 ವರ್ಷಗಳ ಆಗಿತ್ತು. ತಮಿಳಿಗಿಂತಲೂ ಕೇರಳದಲ್ಲಿ ವಿಜಯ್ ಅವರಿಗೆ ಹೆಚ್ಚು ಅಭಿಮಾನಿಗಳು ಇದ್ದಾರೆ. ವಿಜಯ್ ಸಿನಿಮಾ ರಿಲೀಸ್ ಆದಾಗೆಲ್ಲ ಕೇರಳಾದ್ಯಂತ ವಿಜಯ್ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಆದರೂ, 14 ವರ್ಷಗಳ ಕಾಲ ಅವರು ಕೇರಳಕ್ಕೆ ಕಾಲಿಟ್ಟಿರಲಿಲ್ಲ.

    ಮೊನ್ನೆಯಷ್ಟೇ ವಿಜಯ್ ಕೇರಳಕ್ಕೆ ಬಂದಿಳಿದಿದ್ದಾರೆ. ಕಾರಣ, ಅವರ ಗ್ರೇಟೆಸ್ಟ್ ಆಫ್ ಆಲ್ ಟೈಮ್ (Greatest of all time) ಸಿನಿಮಾದ ಶೂಟಿಂಗ್ ಅಲ್ಲಿ ನಡೆಯಲಿದೆ. ಜೊತೆಗೆ ರಾಜಕಾರಣದಲ್ಲೂ ವಿಜಯ್ ಕಾಲಿಟ್ಟಿರುವುದರಿಂದ ಕೇರಳಕ್ಕೆ ಬಂದಿರುವುದಕ್ಕೆ ಮಹತ್ವವನ್ನೂ ಕಲ್ಪಿಸಲಾಗುತ್ತಿದೆ. ಸಾಕಷ್ಟು ಬಿಗಿಭದ್ರತೆಯನ್ನೂ ಅವರಿಗೆ ನೀಡಲಾಗಿದೆ.

    ಕಾಲಿವುಡ್‌ನಲ್ಲಿ (Kollywood) ವಿಜಯ್‌ಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಇದೆ. ಅವರ ಸಿನಿಮಾಗಾಗಿಯೇ ಕಾದು ಕೂರುವ ಅಭಿಮಾನಿಗಳಿದ್ದಾರೆ. ಈ ಹಿಂದೆ ‘ಲಿಯೋ’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡಿತ್ತು.  ಈ ಸಮಯದಲ್ಲೇ ಹೊಸ ಸಿನಿಮಾದತ್ತ ವಿಜಯ್ ಮುಖ ಮಾಡಿದ್ದರು.

    ವಿಜಯ್ ನಟನೆಯ ದ ಗ್ರೇಟೆಸ್ಟ್ ಆಫ್ ಆಲ್ ಟೈಮ್  ಚಿತ್ರಕ್ಕೆ ವೆಂಕಟ್ ಪ್ರಭು (Venkat Prabhu) ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ದಸರಾ ಹಬ್ಬದ (ಅ.24) ಶುಭ ಸಂದರ್ಭದಲ್ಲಿ ಅದ್ದೂರಿಯಾಗಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತ್ತು. ಚಿತ್ರದ ದೊಡ್ಡ ತಾರಾ ಬಳಗ ಈ ಸಮಾರಂಭದಲ್ಲಿ ಭಾಗಿಯಾಗಿತ್ತು.

     

    ದಳಪತಿ ವಿಜಯ್ ಜೊತೆ ಬಹುಭಾಷಾ ನಟ ಕನ್ನಡಿಗ ಪ್ರಭುದೇವ (Prabhudeva), ಸ್ನೇಹಾ, ಲೈಲಾ, ಮೀನಾಕ್ಷಿ ಚೌಧರಿ, ಜಯರಾಮ್, ಯೋಗಿ ಬಾಬು (Yogi Babu) ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಮುಹೂರ್ತ ಕಾರ್ಯಕ್ರಮದಲ್ಲಿಯೂ ಅವರೆಲ್ಲ ಭಾಗಿಯಾಗಿದ್ದರು.

  • ‘ಲಿಯೋ’ ಬಿಡುಗಡೆಗೂ ಮುನ್ನ ಮತ್ತೊಂದು ಸಿನಿಮಾ ಘೋಷಿಸಿದ ವಿಜಯ್

    ‘ಲಿಯೋ’ ಬಿಡುಗಡೆಗೂ ಮುನ್ನ ಮತ್ತೊಂದು ಸಿನಿಮಾ ಘೋಷಿಸಿದ ವಿಜಯ್

    ಮಿಳಿನ ಖ್ಯಾತ ನಟ ದಳಪತಿ ವಿಜಯ್ ಅವರ ಲಿಯೋ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕಿದೆ. ಅವರ ಅಭಿಮಾನಿಗಳು ಲಿಯೋ  ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಅಷ್ಟರಲ್ಲಿ ವಿಜಯ್ ಅವರ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. ಸದ್ಯಕ್ಕೆ ಈ ಚಿತ್ರವನ್ನು ‘ದಳಪತಿ 68’ ಹೆಸರಿನಿಂದ ಕರೆಯಲಾಗುತ್ತಿದೆ. ವೆಂಕಟ್ ಪ್ರಭು (Venkat Prabhu) ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.

    ಲಿಯೋ ಬೈಕಾಟ್

    ದಳಪತಿ ವಿಜಯ್  (Vijay) ನಟನೆಯ, ಬಹುನಿರೀಕ್ಷಿತ ‘ಲಿಯೋ’ (Leo) ಸಿನಿಮಾವನ್ನು ಬೈಕಾಟ್ (Boycott) ಮಾಡಬೇಕು ಎನ್ನುವ ಕೂಗು ಕೇರಳದಲ್ಲಿ (Kerala) ಕೇಳಿ ಬರುತ್ತಿದೆ. ಲಿಯೋ ಸಿನಿಮಾವನ್ನು ಬೈಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಬೇರೆ ಮಾಡಲಾಗುತ್ತಿದೆ. ಹೀಗಾಗಿ ಸಹಜವಾಗಿಯೇ ನಿರ್ಮಾಪಕರಿಗೆ ಆತಂಕ ಎದುರಾಗಿದೆ.

    ತಮಿಳು ನಟ ವಿಜಯ್ ಮತ್ತು ಮಲಯಾಳಂ ನಟ ಮೋಹನ್ ಲಾಲ್ (Mohanlal) ಅಭಿಮಾನಿಗಳು ಯಾವಾಗಲೂ ಕಿತ್ತಾಡುತ್ತಿರುತ್ತಾರೆ. ಈ ಜೋಡಿ ನಟನೆಯ ‘ಜಿಲ್ಲಾ’ ಸಿನಿಮಾದ ಸಂದರ್ಭದಲ್ಲಿ ವಿಜಯ್ ಅಭಿಮಾನಿಯೊಬ್ಬ ಮೋಹನ್ ಲಾಲ್ ಅವರಿಗೆ ಕೆಟ್ಟದ್ದಾಗಿ ಕಾಮೆಂಟ್ ಮಾಡಿದ್ದ, ಅಲ್ಲಿಂದ ಈ ಇಬ್ಬರ ಫ್ಯಾನ್ಸ್ ವಾರ್ ಶುರುವಾಗಿತ್ತು. ವಿಜಯ್ ಸಿನಿಮಾ ರಿಲೀಸ್ ಗೆ ಬಂದಾಗೆಲ್ಲ  ಬೈಕಾಟ್ ಕೂಗು ಕೇಳಿ ಬರುತ್ತದೆ.

    ‘ಲಿಯೋ’ ಚಿತ್ರದ ಬಿಡುಗಡೆಗೆ ಇನ್ನೊಂದು ತಿಂಗಳು ಮಾತ್ರ ಬಾಕಿ ಇದ್ದು, ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹೀಗೆ ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಈ ಮಧ್ಯೆ, ಚಿತ್ರವನ್ನು ನಿರ್ಮಿಸುತ್ತಿರುವ 7 ಸ್ಕ್ರೀನ್‍ ಸ್ಟುಡಿಯೋ ಸಂಸ್ಥೆಯು, ಚಿತ್ರದ ಕನ್ನಡ ಪೋಸ್ಟರ್ ಬಿಡುಗಡೆ ಮಾಡಿದೆ.

    ತಮಿಳಿನ ಜನಪ್ರಿಯ ನಿರ್ದೇಶಕರಾದ ಲೋಕೇಶ್‍ ಕನಕರಾಜ್‍ ನಿರ್ದೇಶಿಸಿರುವ ‘ಲಿಯೋ’ ಚಿತ್ರದಲ್ಲಿ ‘ಇಳಯದಳಪತಿ’ ವಿಜಯ್‍, ತ್ರಿಷಾ, ಸಂಜಯ್‍ ದತ್‍, ಅರ್ಜುನ್‍ ಸರ್ಜಾ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಲಿಯೋ’ ಚಿತ್ರವು ಒಂದು ಅದ್ಭುತ ಅನುಭವ ನೀಡುವ ಚಿತ್ರವಾಗಿ ರೂಪುಗೊಂಡಿದ್ದು, ಇದರಲ್ಲಿ ಆಕ್ಷನ್‍, ಡ್ರಾಮಾ, ಎಮೋಷನ್‍ ಸೇರಿದಂತೆ ಎಲ್ಲಾ ಭಾಷೆಯ ಮತ್ತು ಪ್ರದೇಶದ ಜನರನ್ನು ಆಕರ್ಷಿಸುವಂತಹ ಅಂಶಗಳಿವೆ.

     

    ಇನ್ನು, ಚಿತ್ರದ ಕರ್ನಾಟಕ ವಿತರಣೆಯ ಹಕ್ಕುಗಳನ್ನು ಸ್ವಾಗತ್‍ ಎಂಟರ್ ಪ್ರೈಸಸ್ ಸಂಸ್ಥೆಯು ತನ್ನದಾಗಿಸಿಕೊಂಡಿದ್ದು, ಚಿತ್ರವನ್ನು ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ. ‘ಲಿಯೋ’ ಚಿತ್ರವು ಅಕ್ಟೋಬರ್‍ 19ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೆನ್ನೈನಲ್ಲಿ ದುಬಾರಿ ಬೆಲೆಯ ಮನೆ ಖರೀದಿಸಿದ ನಟ ವಿಜಯ್

    ಚೆನ್ನೈನಲ್ಲಿ ದುಬಾರಿ ಬೆಲೆಯ ಮನೆ ಖರೀದಿಸಿದ ನಟ ವಿಜಯ್

    ಕಾಲಿವುಡ್ ಸೂಪರ್ ಸ್ಟಾರ್ ವಿಜಯ್, ಇದೀಗ ಮತ್ತೊಂದು ಮನೆ ಖರೀದಿಸಿದ್ದಾರೆ ಎನ್ನುವ ಸುದ್ದಿ ತಮಿಳು ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ. ಈಗಾಗಲೇ ಕಾಸ್ಟ್ಲಿ ಮನೆಯಲ್ಲೇ ವಾಸವಿರುವ ವಿಜಯ್, ಮತ್ತೊಂದು ದುಬಾರಿ ಮನೆಗೆ ಶಿಫ್ಟ್ ಆಗಲು ಬಯಸಿದ್ದಾರಂತೆ. ಕಾರಣ, ಈಗಿರುವ ಮನೆಯಲ್ಲಿ ಅವರಿಗೆ ಹಲವು ತೊಂದರೆಗಳು ಆಗುತ್ತಿವೆಯಂತೆ.

    ವಿಜಯ್ ಅವರು ಸದ್ಯ ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ ಸ್ವಂತ ಮನೆಯಲ್ಲಿ ನೆಲೆಸಿದ್ದರು. ಅವರ ಇಡೀ ಕುಟುಂಬ ಅದೇ ಮನೆಯಲ್ಲೇ ವಾಸ ಮಾಡುತ್ತಿದೆ. ಈ ರಸ್ತೆಯಲ್ಲಿ ಸಂಚಾರ ದಟ್ಟನೆಯ ಕಾರಣದಿಂದಾಗಿ ಮನೆ ಬದಲಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ದುಬಾರಿ ಅಪಾರ್ಟ್ಮೆಂಟ್ ವೊಂದನ್ನು ವಿಜಯ್ ಖರೀದಿಸಿದ್ದು ಆ ಮನೆಗೆ 35 ಕೋಟಿಗೂ ಅಧಿಕ ಎನ್ನಲಾಗುತ್ತಿದೆ. ಇದನ್ನೂ ಓದಿ:ಬಾಲಿವುಡ್‌ಗೆ ಎಂಟ್ರಿ ಕೊಟ್ಟ `ಮಾಸ್ಟರ್ ಪೀಸ್’ ನಟಿ ಶಾನ್ವಿ ಶ್ರೀವಾಸ್ತವ್

    ಸದ್ಯ ವಾರಿಸು ಸಿನಿಮಾದಲ್ಲಿ ಬ್ಯುಸಿಯಾಗಿರುವ ವಿಜಯ್, ಸದಾ ಶಾಂತವಾಗಿಯೇ ವರ್ತಿಸುವಂತಹ ನಟ ಕೂಡ. ಅಂದಹಾಗೆ ಇವರ ನಟನೆಯ ವಾರಿಸು ಸಿನಿಮಾ ಸದ್ಯ ಶೂಟಿಂಗ್ ನಡೆಯುತ್ತಿದ್ದು, ಈ ಚಿತ್ರದಲ್ಲಿ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ಕಾಂಬಿನೇಷನ್ ನಲ್ಲಿ ಸಿನಿಮಾವೊಂದು ಮೂಡಿ ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]