Tag: Dalai Lama

  • 2 ವರ್ಷಗಳ ನಂತ್ರ ಸಾರ್ವಜನಿಕವಾಗಿ ಕಾಣಿಸಿಕೊಂಡ ಬೌದ್ಧ ಗುರು

    2 ವರ್ಷಗಳ ನಂತ್ರ ಸಾರ್ವಜನಿಕವಾಗಿ ಕಾಣಿಸಿಕೊಂಡ ಬೌದ್ಧ ಗುರು

    ಶಿಮ್ಲಾ: ಕೋವಿಡ್ ಸಾಂಕ್ರಾಮಿಕ ರೋಗ ಹರಡಿ ಮಾನವರು ಒಬ್ಬರನ್ನೊಬ್ಬರು ಸಂಪರ್ಕ ಮಾಡುವುದು ಕಡಿಮೆಯಾಗಿತ್ತು. ಎರಡಕ್ಕೂ ಹೆಚ್ಚು ವರ್ಷಗಳಕಾಲ ಬೌದ್ಧ ಧರ್ಮ ಗುರು ದಲೈ ಲಾಮಾ (Dalai Lama) ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಕೊರೊನಾ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

    ಬಳಿಕ ಪ್ರತಿಕ್ರಿಯಿಸಿರುವ ಅವರು, ನಾನೀಗ ಆರೋಗ್ಯವಂತನಾಗಿದ್ದು, ವೈದ್ಯರೊಂದಿಗೆ ಬಾಕ್ಸಿಂಗ್ ಕೂಡಾ ಆಡಬಹುದು. ನಾನು ನಿಯಮಿತವಾಗಿ ವೈದ್ಯಕೀಯ ತಪಾಸಣೆಗಾಗಿ ದೆಹಲಿಯ ಆಸ್ಪತ್ರೆಗೆ ಹೋಗಬೇಕಿತ್ತು. ಆದರೆ ಉತ್ತಮ ಆರೋಗ್ಯ ಹೊಂದಿರುವುದರಿಂದ ಈಗ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.

    ಟಿಬೆಟಿಯನ್ ದೇವಾಲಯದಲ್ಲಿ ಅನುಯಾಯಿಗಳಿಗೆ ‘ಜಟಕ’ ಕಥೆಗಳ ಕಿರು ಬೋಧನೆಯನ್ನು ನೀಡಿದರು. ಕೇಂದ್ರ ಟಿಬೆಟಿಯನ್ ಆಡಳಿತದ (ಸಿಟಿಎ) ಸದಸ್ಯರು ಹಾಗೂ ಸಾವಿರಾರು ಬಿಕ್ಕುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

    ಸನ್ಯಾಸಿಗಳು ಮತ್ತು ಕೇಂದ್ರದ ಸದಸ್ಯರು ಸೇರಿದಂತೆ ಸಾವಿರಾರು ಟಿಬೆಟಿಯನ್ನರು, ಟಿಬೆಟಿಯನ್ ಅಡ್ಮಿನಿಸ್ಟ್ರೇಷನ್ (CTA), ಕೂಟದ ಭಾಗವಾಗಿದ್ದಾರೆ. (CTA) ಚಾರ್ಟರ್ ಆಫ್ ದಿ ಟಿಬೆಟಿಯನ್ಸ್ ಇನ್-ಎಕ್ಸೈಲ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನೂ ಓದಿ: ಗುಜರಾತ್ ಶಾಲಾ, ಕಾಲೇಜ್‍ಗಳಲ್ಲಿ ಭಗವದ್ಗೀತೆ ಕಡ್ಡಾಯ

    (CTA) ಸದಸ್ಯ ತೇನ್ಸಿಂಗ್ ಜಿಗ್ಮೆ ಮಾತನಾಡಿ, ಇದು ಅತ್ಯಂತ ಸುಂದರವಾದ ದಿನ. ನಾವು ಎರಡು ವರ್ಷಗಳ ನಂತರ ಅವರನ್ನು ನೋಡುತ್ತಿದ್ದೇವೆ. ಇದು ಇಂದಿನ ಅತ್ಯಂತ ಅದೃಷ್ಟದ ಸಂಗತಿಯಾಗಿದೆ. ಅವರು ಆರೋಗ್ಯವಾಗಿದ್ದಾರೆ ಆದ್ದರಿಂದ ನಾವು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇವೆ ಎಂದು ಹೇಳಿದರು. ನಾವು ನಿಜವಾಗಿಯೂ ಸಂತೋಷವನ್ನು ಅನುಭವಿಸುತ್ತಿದ್ದೇವೆ ಮತ್ತು ಅವರ ಪವಿತ್ರತೆಯನ್ನು ಉತ್ತಮವಾಗಿ ನೋಡಲು ಆಶೀರ್ವದಿಸುತ್ತೇವೆ ಎಂದು ಹೇಳಿದ್ದಾರೆ.

  • ಬಿಕ್ಕಟ್ಟನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಿ: ದಲೈಲಾಮಾ

    ಬಿಕ್ಕಟ್ಟನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಿ: ದಲೈಲಾಮಾ

    ನವದೆಹಲಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಸಮಸ್ಯೆ ಹಾಗೂ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಟಿಬೆಟಿಯನ್ ಗುರು ದಲೈ ಲಾಮಾ ಸಲಹೆ ನೀಡಿದರು.

    ಈ ಬಗ್ಗೆ ಟ್ವೀಟ್ ಮಾಡಿದ ಅವರು ಉಕ್ರೇನ್‍ನಲ್ಲಿನ ಸಂಘರ್ಷದಿಂದ ತುಂಬಾ ಬೇಸರವಾಗಿದೆ. ನಮ್ಮ ಪ್ರಪಂಚವು ಪರಸ್ಪರ ಅವಲಂಬಿತವಾಗಿದೆ. ಆದರೆ ಎರಡು ದೇಶಗಳ ನಡುವಿನ ಹಿಂಸಾತ್ಮಕ ಸಂಘರ್ಷವು ಅನಿವಾರ್ಯವಾಗಿ ಉಳಿದ ದೇಶಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಯುದ್ಧವು ಹಳೆದಾಗಿದ್ದು, ಅಹಿಂಸೆಯೊಂದೇ ಏಕೈಕ ಮಾರ್ಗವಾಗಿದೆ. ಇತರರನ್ನು ಸಹೋದರ, ಸಹೋದರಿಯರಂತೆ ಪರಿಗಣಿಸುವ ಮೂಲಕ ನಾವು ಏಕತೆಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.

    ಸಮಸ್ಯೆಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಉತ್ತಮವಾಗಿ ಪರಿಹರಿಸಲಾಗುತ್ತದೆ. ಪರಸ್ಪರ ತಿಳುವಳಿಕೆ ಮತ್ತು ಯೋಗಕ್ಷೇಮವನ್ನು ಗೌರವಿಸದರೆ ಮಾತ್ರ ನಿಜವಾದ ಶಾಂತಿ ಸಿಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಭಾರತೀಯರನ್ನು ತಾಯ್ನಾಡಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮೋದಿ ಸರ್ಕಾರ ಮಾಡುತ್ತಿದೆ: ಖೂಬಾ

    ಉಕ್ರೇನ್‍ನಲ್ಲಿ ಶಾಂತಿ ಶೀಘ್ರದಲ್ಲಿ ಮರುಸ್ಥಾಪಿಸಲಿ ಎಂದ ಅವರು, ನಾವು ಈ ಬಗ್ಗೆ ಭರವಸೆ ಕಳೆದುಕೊಳ್ಳಬಾರದು. 20ನೇ ಶತಮಾನವು ಯುದ್ಧ ಮತ್ತು ರಕ್ತಪಾತದ ಶತಮಾನವಾಗಿತ್ತು. ಆದರೆ 21ನೇ ಶತಮಾನವು ಸಂಭಾಷಣೆಯ ಶತಮಾನವಾಗಿರಬೇಕು ಎಂದರು. ಇದನ್ನೂ ಓದಿ:  ಯುದ್ಧ ಭೂಮಿಯಿಂದ ಇನ್ನೂ ಬಾರದ ಮಗಳ ನೆನೆದೆ ಇಡೀ ಕುಟುಂಬ ಕಣ್ಣೀರು

  • ಕೊರೊನಾದಿಂದ ಪಾರಾಗಲು ಹರ್ಬಲ್ ತಾಯತ ಮೊರೆ ಹೋದ ಟಿಬೆಟಿಯನ್ನರು

    ಕೊರೊನಾದಿಂದ ಪಾರಾಗಲು ಹರ್ಬಲ್ ತಾಯತ ಮೊರೆ ಹೋದ ಟಿಬೆಟಿಯನ್ನರು

    ಮಡಿಕೇರಿ: ವಿಶ್ವದೆಲ್ಲೆಡೆ ಭಾರೀ ಸದ್ದು ಮೂಡಿಸಿರುವ ಕೊರೊನಾ ವೈರಸ್ ಟಿಬೆಟಿಯನ್ ಕ್ಯಾಂಪ್‍ಗಳಲ್ಲಿ ಆಚರಿಸುವ ಹೊಸವರ್ಷಾಚರಣೆ ಮೇಲು ಕರಿನೆರಳು ಬೀರಿದೆ. ಹೀಗಾಗಿ ಇದೇ 24 ರಂದು ಹೊಸವರ್ಷಾಚರಣೆಗೆ ಬರಬೇಕಾಗಿದ್ದ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರ ಭೇಟಿಯನ್ನೂ ಮುಂದೂಡಲಾಗಿದೆ. ಟಿಬೆಟಿಯನ್ನರು ವೈರಸ್‍ನಿಂದ ರಕ್ಷಿಸಿಕೊಳ್ಳಲು ಹರ್ಬಲ್ ಮಾತ್ರೆ ಮತ್ತು ಔಷಧಿಗಳ ಮೊರೆಹೋಗಿದ್ದು ಅದು ಕ್ಯಾಂಪಿನೆಲ್ಲೆಡೆ ಸದ್ದು ಮಾಡುತ್ತಿದೆ.

    ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಬೈಲುಕುಪ್ಪೆಯಲ್ಲೂ ಟಿಬೆಟಿಯನ್ ಕ್ಯಾಂಪ್ ಇದ್ದು, ಫೆಬ್ರವರಿ 24 ರಿಂದ ಇಲ್ಲಿ ಹೊಸವರ್ಷಾಚರಣೆ ನಡೆಯಲಿದೆ. ಥೈವಾನ್, ಹಾಂಕಾಂಗ್, ಚೀನಾ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿರುವ ತಮ್ಮ ಸಂಬಂಧಿಕರನ್ನು ಆಹ್ವಾನಿಸಿ ಇಲ್ಲಿಯ ಜನರು ವಾರಗಳ ಕಾಲ ಹೊಸವರ್ಷಾಚರಣೆ ಮಾಡುತ್ತಾರೆ. ಆದರೆ ಕೊರೊನಾ ವೈರಸ್‍ನ ಆತಂಕ ಮನೆ ಮಾಡಿದ್ದು, ಇಲ್ಲಿಯ ಜನರು ಧರ್ಮಶಾಲಾದಿಂದ ಬಂದಿರುವ ಹರ್ಬಲ್ ಮಾತ್ರೆ, ಔಷಧಿಗಳ ಮೊರೆ ಹೋಗಿದ್ದಾರೆ.

    ಧರ್ಮಗುರು ದಲೈಲಾಮಾ ಅವರಿಂದ ಪೂಜಿಸಲ್ಪಿಟ್ಟಿರುವ ಹಿಮಾಚಲ ಪ್ರದೇಶದ ಧರ್ಮಶಾಲಾದಿಂದ ತಂದಿರುವ ಹರ್ಬಲ್ ಮಾತ್ರೆಯೊಂದನ್ನು ಕ್ಯಾಂಪಿನಲ್ಲಿರುವ 15 ರಿಂದ 20 ಸಾವಿರ ಟಿಬೆಟಿಯನ್ನರಿಗೂ ವಿತರಣೆ ಮಾಡಲಾಗಿದೆ. ಎಲ್ಲರೂ ಈ ಹರ್ಬಲ್ ಮಾತ್ರೆಯನ್ನು ತಾಯತದಂತೆ ಕೊರಳಿಗೆ ಕಟ್ಟಿಕೊಂಡಿದ್ದು ಜನನಿಬಿಡಿ ಪ್ರದೇಶದಲ್ಲಿರುವಾಗ ಅದನ್ನು ದಿನಕ್ಕೆ ಐದರಿಂದ ಆರು ಬಾರಿ ವಾಸನೆ ತೆಗೆದುಕೊಂಡರೆ ಕೊರೊನಾ ಅಷ್ಟೇ ಅಲ್ಲ ಬೇರೆ ಎಲ್ಲಾ ವೈರಸ್‍ಗಳಿಂದಲೂ ರಕ್ಷಣೆ ಪಡೆಯಬಹುದು ಎನ್ನಲಾಗುತ್ತಿದೆ.

    ಹೀಗಾಗಿ ಈ ಮಾತ್ರೆಗೆ ಬೈಲುಕುಪ್ಪದಲ್ಲಿ ಭಾರೀ ಬೇಡಿಕೆ ಇದೆ. ಜೊತೆಗೆ ನೆಗೋಗ್ ಧುಯೆಸ್ತಿ ಹೆಸರಿನ ಲೋಷನ್ ಒಂದನ್ನು ಮೂಗಿನ ಬಳಿ ಹಚ್ಚಿಕೊಂಡರೆ ಕೊರೊನಾ ವೈರಸ್ ದೇಹದ ಮೇಲೆ ದಾಳಿ ಮಾಡದಂತೆ ರಕ್ಷಣೆ ಪಡೆದುಕೊಳ್ಳಬಹುದು ಎನ್ನಲಾಗಿದೆ. ಹೀಗಾಗಿ ಈ ಎರಡು ಔಷಧಿಗಳಿಗೆ ಇಲ್ಲಿ ಬಾರೀ ಬೇಡಿಕೆ ಇದ್ದು, ಟಿಬೆಟಿಯನ್ನರ ಯಾರ ಕೊರಳಿನಲ್ಲಿ ನೋಡಿದರೂ ಹರ್ಬಲ್ ಮಾತ್ರೆಯ ತಾಯತ ಕಾಣಸಿಗುತ್ತದೆ.

  • ಮಂಗಳೂರಿಗೆ ಆಗಮಿಸಿದ ದಲೈ ಲಾಮಾ

    ಮಂಗಳೂರಿಗೆ ಆಗಮಿಸಿದ ದಲೈ ಲಾಮಾ

    – ಝೀರೋ ಟ್ರಾಫಿಕ್ ಮೂಲಕ ಕರೆತಂದ ಅಧಿಕಾರಿಗಳು

    ಮಂಗಳೂರು: ಟಿಬೆಟಿಯನ್ ಧರ್ಮ ಗುರು ದಲೈ ಲಾಮಾ ಅವರು ಇಂದು ಮಂಗಳೂರಿಗೆ ಆಗಮಿಸಿದ್ದು, ಮೂರು ದಿನಗಳ ಕಾಲ ಮಂಗಳೂರಿನಲ್ಲಿಯೇ ತಂಗಲಿದ್ದಾರೆ.

    ದಲೈ ಲಾಮಾ ಆಗಮಿಸುವ ಸೂಚನೆ ತಿಳಿದಿದ್ದರಿಂದ ಮಂಗಳೂರು ವಿಮಾನ ನಿಲ್ದಾಣದ ಹೊರಗಡೆ ಟಿಬೆಟಿಯನ್ ಸಾಂಪ್ರದಾಯಿಕ ನೃತ್ಯದ ಮೂಲಕ ಅವರನ್ನು ಸ್ವಾಗತಿಸಲಾಯಿತು. ಅಲ್ಲದೆ ವಿಮಾನ ನಿಲ್ದಾಣದ ಸುತ್ತ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರದ ಖಾಸಗಿ ಹೋಟೆಲ್‍ನಲ್ಲಿ ತಂಗಿರುವ ಅವರನ್ನು ಭಾರೀ ಭದ್ರತೆಯಲ್ಲಿ ಝೀರೋ ಟ್ರಾಫಿಕ್ ಮೂಲಕ ವಿಮಾನ ನಿಲ್ದಾಣದಿಂದ ನಗರಕ್ಕೆ ಕರೆ ತರಲಾಯಿತು.

    ಆಗಸ್ಟ್ 30 ರಂದು ನಗರದ ಫಾದರ್ ಮುಲ್ಲರ್ ಸಭಾಂಗಣದಲ್ಲಿ ನಡೆಯಲಿರುವ ನಯನ ಅಖಿಲ ಭಾರತ ಕ್ಯಾಥೊಲಿಕ್ ಶಾಲಾ ಒಕ್ಕೂಟದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲಿದ್ದು, 31 ರಂದು ಅವರು ಬೆಂಗಳೂರಿಗೆ ತೆರಳಲಿದ್ದಾರೆ.

    ಮಧ್ಯಾಹ್ನ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಮಂಗಳೂರು ಉಪವಿಭಾಗಾಧಿಕಾರಿ ರವಿಚಂದ್ರ ನಾಯ್ಕ್, ಉಪ ಪೊಲೀಸ್ ಆಯುಕ್ತ ಅರುಣಾಂಶು ಗಿರಿ, ಲಕ್ಷ್ಮೀ ಗಣೇಶ್ ಅವರು ಜಿಲ್ಲಾಡಳಿತದ ಪರವಾಗಿ ಸ್ವಾಗತಿಸಿದರು.

  • ಬೌದ್ಧ ಧರ್ಮಗುರು ದಲೈಲಾಮ ಹತ್ಯೆಗೆ ಸಂಚು – ರಾಮನಗರದಲ್ಲಿ ಸೆರೆ ಸಿಕ್ಕ ಉಗ್ರರಿಂದ ಸ್ಫೋಟಕ ಮಾಹಿತಿ

    ಬೌದ್ಧ ಧರ್ಮಗುರು ದಲೈಲಾಮ ಹತ್ಯೆಗೆ ಸಂಚು – ರಾಮನಗರದಲ್ಲಿ ಸೆರೆ ಸಿಕ್ಕ ಉಗ್ರರಿಂದ ಸ್ಫೋಟಕ ಮಾಹಿತಿ

    ಬೆಂಗಳೂರು: ಬೌದ್ಧ ಧರ್ಮಗುರು ದಲೈಲಾಮ ಹತ್ಯೆಗೆ ಸಂಚು ರೂಪಿಸಿಲಾಗಿತ್ತು ಅನ್ನೋ ಭಯಾನಕ ಮಾಹಿತಿ ಎನ್‍ಐಎ ತನಿಖೆಯಿಂದ ಬಯಲಾಗಿದೆ.

    ಉಗ್ರರ ಸಂಚಿನ ಕುರಿತಂತೆ ಎನ್‍ಐಎ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ದಲೈಲಾಮ ಅವರನ್ನು ಮುಗಿಸಲು ರಾಜ್ಯದ ರಾಮನಗರದಲ್ಲೇ ಸಂಚು ರೂಪಿಸಿರುವುದಾಗಿ ಎನ್‍ಐಎ ನಡೆಸಿದ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಪರಿಣಾಮ ಬೌದ್ಧ ಧರ್ಮಗುರು ದಲೈಲಾಮ ಪ್ರಾಣ ಉಳಿದಿದೆ.

    ಚಾರ್ಜ್ ಶೀಟ್ ನಲ್ಲಿ ಏನಿದೆ?
    2018ರ ಜನವರಿ 18ರಂದು ಬಿಹಾರದ ಬೋಧ್ ಗಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಲೈಲಾಮ ಮತ್ತು ಬಿಹಾರ ರಾಜ್ಯಪಾಲರನ್ನು ಜೊತೆಯಲ್ಲೇ ಬಾಂಬ್ ಬಿಟ್ಟು ಉಡಾಯಿಸಲು ಸ್ಕೆಚ್ ರೂಪಿಸಿದ್ದರು. ಇದರ ಮಾಹಿತಿ ಅರಿತ ಎನ್‍ಐಎ ರಂಗಕ್ಕಿಳಿದು ಮೂವರನ್ನು ಅರೆಸ್ಟ್ ಮಾಡಿತ್ತು. ಇದು ವಿಫಲವಾದ ಬೆನ್ನಲ್ಲೇ ಲಾಮ ಹತ್ಯೆಗೆ ಮತ್ತೊಂದು ಸ್ಕೆಚ್ ಅನ್ನು ಕರ್ನಾಟಕದಲ್ಲಿ ರೂಪಿಸಲಾಗ್ತಿತ್ತು. ಅದರಲ್ಲೂ ರಾಮನಗರದ ಮನೆಯೊಂದರಲ್ಲಿ ಲಾಮ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಬೋಧ್‍ಗಯಾದಲ್ಲಿ ಬಂಧಿಸಲ್ಪಟ್ಟಿದ್ದ ಮೂವರು ಉಗ್ರರ ವಿಚಾರಣೆ ವೇಳೆ ರಾಮನಗರದಲ್ಲಿ ರೂಪಿಸಲಾಗ್ತಿದ್ದ ಸಂಚಿನ ಬಗ್ಗೆ ಬಾಯ್ಬಿಟ್ಟಿದ್ದರು.

    ಆಗಸ್ಟ್ 7ರಂದು ರಾಜ್ಯಕ್ಕೆ ಧಾವಿಸಿದ ಎನ್‍ಐಎ ತಂಡ, ರಾಮನಗರಕ್ಕೆ ತೆರಳಿ ಜೆಎಂಬಿ ಉಗ್ರ ಮುನೀರ್‍ನನ್ನು ಯಶಸ್ವಿಯಾಗಿ ಬೇಟೆಯಾಡಿತ್ತು. ಮುನೀರ್ ನನ್ನು ವಶಕ್ಕೆ ಪಡೆದಿದ್ದರಿಂದ ಸಂಭವಿಸಬಹುದಾಗಿದ್ದ ಘನಘೋರ ದುರಂತವನ್ನ ಎನ್‍ಐಎ ತಪ್ಪಿಸಿತ್ತು. ಬಾಂಬ್ ಸ್ಫೋಟಿಸಿ ದಲೈಲಾಮ ಹತ್ಯೆಗೆ ಮುನೀರ್ ಸಂಚು ನಡೆಸಿದ್ದ ವಿಚಾರ ಎನ್‍ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    1959ರಲ್ಲಿ ಚೀನಾದಿಂದ ಎದುರಾಗಿದ್ದ ಪ್ರಾಣಕಂಟಕದಿಂದ ಪಾರಾಗಲು ಟಿಬೆಟ್‍ನಿಂದ ದಲೈಲಾಮ ರಾತ್ರೋರಾತ್ರಿ ಆಶ್ರಯ ಅರಸಿ ಭಾರತಕ್ಕೆ ಬಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv