









ನವದೆಹಲಿ: ಮುಂದಿನ 30-40 ವರ್ಷಗಳ ಕಾಲ ಜನರಿಗೆ ಸೇವೆ ಸಲ್ಲಿಸಲು ಬದುಕುವ ಆಶಯ ಹೊಂದಿದ್ದೇನೆ ಎಂದು ಟಿಬೆಟಿಯನ್ ಆಧ್ಯಾತ್ಮಿಕ ನಾಯಕ (Tibetan spiritual leader) ದಲೈ ಲಾಮಾ (Dalai Lama) ಹೇಳಿದ್ದಾರೆ. ಅವರ 90ನೇ ಜನ್ಮದಿನವಾದ ಇಂದು ಉತ್ತರಾಧಿಕಾರಿಯ ಘೋಷಣೆಯ ಕುರಿತಾದ ವದಂತಿಗಳ ನಡುವೆ ಈ ಹೇಳಿಕೆ ನೀಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ.
ಮೆಕ್ಲಿಯೋಡ್ಗಂಜ್‌ನ ತ್ಸುಗ್ಲಾಗ್‌ಖಾಂಗ್‌ನ ಮುಖ್ಯ ದಲೈ ಲಾಮಾ ದೇವಸ್ಥಾನದಲ್ಲಿ ತಮ್ಮ 90ನೇ ಹುಟ್ಟುಹಬ್ಬಕ್ಕೂ ಮುನ್ನ ನಡೆದ ದೀರ್ಘಾಯುಷ್ಯದ ಪ್ರಾರ್ಥನಾ ಸಮಾರಂಭದಲ್ಲಿ ದಲೈ ಲಾಮಾ ಟೆನ್ಜಿನ್ ಗ್ಯಾಟ್ಸೊ ಅವರು ಮಾತನಾಡಿದರು. ಅವಲೋಕಿತೇಶ್ವರನ ಆಶೀರ್ವಾದ ತಮ್ಮೊಂದಿಗಿದೆ ಎಂಬ ಸ್ಪಷ್ಟ ಚಿಹ್ನೆಗಳು ಸಿಗುತ್ತಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮರಾಠಿ ಕಲಿಯಲ್ಲ ಎಂದಿದ್ದಕ್ಕೆ ಉದ್ಯಮಿ ಕಚೇರಿಯೇ ಧ್ವಂಸ
ನಾನು ಇಲ್ಲಿಯವರೆಗೆ ನನ್ನ ಕೈಲಾದಷ್ಟು ಜನರ ಸೇವೆ ಮಾಡಲು ಪ್ರಯತ್ನಿಸಿದ್ದೇನೆ. ನಾನು ಇನ್ನೂ 30-40 ವರ್ಷಗಳ ಕಾಲ ಬದುಕುತ್ತೇನೆ ಎಂದು ಭಾವಿಸುತ್ತೇನೆ. ಇಲ್ಲಿಯವರೆಗೆ ನಿಮ್ಮ ಪ್ರಾರ್ಥನೆಗಳು ಫಲ ನೀಡಿವೆ. ನಾವು ನಮ್ಮ ದೇಶವನ್ನು ಕಳೆದುಕೊಂಡು ಭಾರತದಲ್ಲಿ ದೇಶಭ್ರಷ್ಟರಾಗಿ ವಾಸಿಸುತ್ತಿದ್ದರೂ, ಇಲ್ಲಿ ನಾನು ಬಹಳಷ್ಟು ಜನರಿಗೆ ಸೇವೆ ಮಾಡಲು ಸಾಧ್ಯವಾಗಿದೆ. ನಾನು ಇನ್ನಷ್ಟು ಜನರ ಸೇವೆ ಮಾಡಲು ಬಯಸುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಹೇಳಿಕೆ ವಿವಾದ | ಕೊಡವ ಸಮುದಾಯ ಎಲ್ಲರನ್ನೂ ಬೆಂಬಲಿಸಿದೆ: ನಟಿ ಪ್ರೇಮ
ದಲೈ ಲಾಮಾ ಅವರ 90ನೇ ಹುಟ್ಟುಹಬ್ಬವನ್ನು ಮೆಕ್ಲಿಯೋಡ್ಗಂಜ್‌ನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಆಚರಿಸಲಾಗುತ್ತಿದೆ. ಇಂದು ಕೇಂದ್ರ ಸಚಿವ ಕಿರಣ್ ರಿಜಿಜು, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು, ಹಾಲಿವುಡ್ ನಟ ರಿಚರ್ಡ್ ಗೆರೆ ಸೇರಿ ಇತರರು ಮುಖ್ಯ ಟಿಬೆಟಿಯನ್ ದೇವಾಲಯ ಮತ್ತು ದಲೈ ಲಾಮಾ ಅವರ ನಿವಾಸದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ʻಆಪರೇಷನ್ ಸಿಂಧೂರʼ ಯಶಸ್ಸಿನ ಬೆನ್ನಲ್ಲೇ 1 ಲಕ್ಷ ಕೋಟಿ ಮೊತ್ತದ ರಕ್ಷಣಾ ಯೋಜನೆಗಳಿಗೆ ಮೋದಿ ಸರ್ಕಾರ ಅಸ್ತು
ದಲೈ ಲಾಮಾ ಅವರ ದೀರ್ಘಾಯುಷ್ಯ ಮತ್ತು ಆರೋಗ್ಯಕ್ಕಾಗಿ ಬೆಳಗ್ಗೆ ಬೌದ್ಧ ಮಠದಲ್ಲಿ ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ 8:00ಗಂಟೆಗೆ ಪ್ರಾರಂಭವಾದ ಈ ಪ್ರಾರ್ಥನಾ ಸಭೆಯಲ್ಲಿ ದಲೈ ಲಾಮಾ ಸ್ವತಃ ಹಾಜರಿದ್ದರು. ಭಾನುವಾರ ದಲೈ ಲಾಮಾ ಅವರು ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಲಿದ್ದಾರೆ. ಈ ವೇಳೆ ತಮ್ಮ ಅನುಯಾಯಿಗಳನ್ನು ಸಹ ಅವರು ಆಶೀರ್ವದಿಸಲಿದ್ದಾರೆ. ಇದನ್ನೂ ಓದಿ: 20 ವರ್ಷಗಳ ಬಳಿಕ ಮತ್ತೆ ಒಂದಾದ ಉದ್ಧವ್-ರಾಜ್ ಠಾಕ್ರೆ
ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiran Rijiju), ದಲೈ ಲಾಮಾ ಅವರ 90ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು. ಅವರು ದಲೈ ಲಾಮಾ ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿ, ದಲೈ ಲಾಮಾ ಅವರ ಹುಟ್ಟುಹಬ್ಬದ ಆಚರಣೆಯನ್ನು ಭಾನುವಾರ ಆಚರಿಸಲಾಗುವುದು ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.

ನವದೆಹಲಿ: ಟಿಬೆಟನ್ ಧರ್ಮಗುರು ದಲೈ ಲಾಮಾ (Tibetan Spiritual leader Dalai Lama) ಅವರಿಗೆ ಜೀವ ಬೆದರಿಕೆ ಇರುವುದರಿಂದ ಕೇಂದ್ರ ಸರ್ಕಾರವು ‘ಜೆಡ್’ ಶ್ರೇಣಿಯ ಭದ್ರತೆಯನ್ನು (Z Category Protection) ಒದಗಿಸಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿದೆ.
89 ವರ್ಷದ ಆಧಾತ್ಮಿಕ ನಾಯಕನಿಗೆ ಭದ್ರತೆ ನೀಡುವಂತೆ ಕೇಂದ್ರ ಗೃಹ ಸಚಿವಾಲಯವು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ವಿಐಪಿ ಭದ್ರತಾ ವಿಭಾಗಕ್ಕೆ ಸೂಚಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: Manipur | ಬಿರೇನ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ

ದಲೈ ಲಾಮಾ ಅವರು ಹಿಮಾಚಲ ಪ್ರದೇಶ ಪೊಲೀಸರ ಭದ್ರತೆ ಹೊಂದಿದ್ದರು. ಆದ್ರೆ ದೆಹಲಿ ಮತ್ತು ಇತರ ಯಾವುದೇ ಸ್ಥಳಗಳಿಗೆ ಭೇಟಿ ನೀಡುವಾಗ ಪೊಲೀಸ್ ಭದ್ರತೆಯನ್ನು ವಿಸ್ತರಿಸಲಾಗುತ್ತಿತ್ತು. ಆದ್ರೆ ಕೇಂದ್ರ ಗುಪ್ತಚರ ಸಂಸ್ಥೆಗಳ ಪರಿಶೀಲನೆಯ ನಂತರ ಸರ್ಕಾರ ಏಕರೂಪದ ಭದ್ರತೆಗೆ ಸೂಚನೆ ನೀಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಮಾರು 30 ಸಿಆರ್‌ಪಿಎಫ್ ಕಮಾಂಡೋಗಳ ತಂಡವು ದಲೈ ಲಾಮಾಗೆ ರಕ್ಷಣೆ ನೀಡಲಿದೆ. ಅಲ್ಲದೇ ಮಣಿಪುರದ ಬಿಜೆಪಿ ನಾಯಕ ಸಂಬಿತ್ ಪಾತ್ರ ಅವರಿಗೂ ʻಜೆಡ್ʼ ಶ್ರೇಣಿಯ ಭದ್ರತೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕೈಕಾಲು ಕಟ್ಟಿ, ಕಂಪಾಸ್‌ನಿಂದ ಚುಚ್ಚಿ ಚಿತ್ರಹಿಂಸೆ – ನರ್ಸಿಂಗ್ ಕಾಲೇಜಿನಲ್ಲಿ ರ‍್ಯಾಗಿಂಗ್ ಕ್ರೂರತೆಯ ವಿಡಿಯೋ ವೈರಲ್

ಮಡಿಕೇರಿ: ಟಿಬೆಟಿಯನ್ನರ ಸಾಂಪ್ರದಾಯಿಕ ಧರ್ಮಗುರುಗಳಾದ 14ನೇ ದಲೈಲಾಮ (14th Dalai Lama) ಅವರು 30 ದಿನಗಳ ವಿಶ್ರಾಂತಿಗಾಗಿ ಬೈಲಕುಪ್ಪೆಯ ಟಿಬೆಟಿಯನ್ ಕ್ಯಾಂಪ್‌ಗೆ (Tibetan Camp) ಆಗಮಿಸಿದ್ದಾರೆ.
ಭಾನುವಾರ ಮಧ್ಯಾಹ್ನ ಬೆಂಗಳೂರಿನಿಂದ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿ, ಬೈಲಕುಪ್ಪೆಯ 4ನೇ ಕ್ಯಾಂಪಿನಲ್ಲಿರುವ ಎಲಿಫ್ಯಾಡ್‌ಗೇ ಸುರಕ್ಷಿತವಾಗಿ ಬಂದಿಳಿದರು.

ದಲೈಲಾಮ ಅವರು ಆಗಮಿಸುತ್ತಿದ್ದಂತೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಟಿಬೇಟಿಯನ್ನರು, 6 ಕಿಮೀ ರಸ್ತೆ ಯುದ್ದಕ್ಕೂ ಟಿಬೆಟಿಯನ್ ಮಾದರಿಯ ಉಡುಪುಗಳನ್ನು ಧರಿಸಿ ಬೆಳಗ್ಗೆ 6 ಗಂಟೆಯಿಂದಲೇ ತಮ್ಮ ನೆಚ್ಚಿನ ಗುರುಗಳ ದರ್ಶನಕ್ಕೆ ಕಾದುಕುಳಿತಿದ್ದರು.
ಜೆಡ್ ಪ್ಲಸ್ ಭದ್ರತೆ ಹೊಂದಿರುವ ದಲೈಲಾಮ ಅವರು ಆಗಮಿಸುತ್ತಿದ್ದಂತೆ, ಸುಮಾರು 250ಕ್ಕೂ ಹೆಚ್ಚು ಪೊಲೀಸ್ ಭದ್ರತೆಯಲ್ಲಿ ಎಲಿಫ್ಯಾಡ್ ನಿಂದ ಕಾರಿನ ಮುಖಾಂತರ ಲಕ್ಷ್ಮಿಪುರ ಗ್ರಾಮದಲ್ಲಿರುವ ತಶಿಲಾಂಪು ದೇವಸ್ಥಾನಕ್ಕೆ ತೆರಳಿದರು. ಈ ವೇಳೆ ಬೌದ್ಧ ಬಿಕ್ಕುಗಳು ಬಗೆ-ಬಗೆಯ ಹೂಗಳನ್ನು ಚೆಲ್ಲುತ್ತಾ ಆತ್ಮೀಯವಾಗಿ ದೇವಸ್ಥಾನದ ಒಳಗೆ ಬರಮಾಡಿಕೊಂಡರು. ಇಲ್ಲಿನ ಸ್ಥಳೀಯ ಟಿಬೆಟಿಯನ್ನರು ಸಾಂಪ್ರದಾಯಿಕ ನೃತ್ಯಗಳನ್ನು ಸಹ ಮಾಡಿದ ದೃಶ್ಯ ಕಂಡುಬಂದಿತು.

ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಹೆಚ್ಚುವರಿ ಎಸ್‌ಪಿ ನಾಗೇಶ್, ಡಿವೈಎಸ್ಪಿ ಗೋಪಾಲಕೃಷ್ಣ, ವೃತ್ತ ನಿರೀಕ್ಷಕ ದೀಪಕ್, ಬೈಲಕುಪ್ಪೆ ಠಾಣಾಧಿಕಾರಿ ಅಜಯ್ ಕುಮಾರ್, ಸ್ಥಳೀಯ ಸೆಟಲ್ಮೆಂಟ್ ಅಧಿಕಾರಿಗಳಾದ ಗ್ಯಾಲಕ್, ಚಿಮ್ಮಿ ದೊರ್ಜಿ, ಟಿಡಿಎಲ್ ಸೊಸೈಟಿ ಅಧ್ಯಕ್ಷ ಜೋಡೆನ್, ಇಂಡೋ ಟಿಬೆಟಿಯನ್ ಫ್ರೆಂಡ್ಶಿಪ್ ಅಧ್ಯಕ್ಷ ಜವರೇಗೌಡ, ಸುತ್ತ ಮುತ್ತ ಟಿಬೆಟಿಯನ್ ದೇವಸ್ಥಾನದ ಹಿರಿಯ ಬೌದ್ಧ ಗುರುಗಳು ಇದ್ದರು.

ನವದೆಹಲಿ: ಭಾರತ ಪ್ರವಾಸದಲ್ಲಿರುವ ಅಮೆರಿಕಾದ ಹಿರಿಯ ರಾಜಕಾರಣಿ ನ್ಯಾನ್ಸಿ ಪೆಲೋಸಿ (Nancy Pelosi) ನೇತೃತ್ವದ ನಿಯೋಗ ಧರ್ಮಶಾಲಾದಲ್ಲಿ ಟಿಬೆಟ್ ಮುಖ್ಯಸ್ಥ ದಲೈಲಾಮ (Dalai Lama) ಅವರನ್ನು ಭೇಟಿ ಮಾಡಿರೋದು ಚೀನಾದ (China) ಕಣ್ಣು ಕೆಂಪಗಾಗಿಸಿದೆ.

ಇತ್ತೀಚಿಗೆ ಅಮೆರಿಕ ಸಂಸತ್‌ನಲ್ಲಿ ದಿ ರಿಸಾಲ್ವ್ ಟಿಬೆಟ್ ಆಕ್ಟ್‌ಗೆ ಅನುಮೋದನೆ ನೀಡಲಾಗಿತ್ತು. ಇದರ ಪ್ರಕಾರ, ಟಿಬೆಟ್ (Tibet) ನಾಯಕರೊಂದಿಗೆ ಚೀನಾ ಚರ್ಚೆ ಆರಂಭಿಸಬೇಕು. ನೆಲದ ಸಂಸ್ಕೃತಿ ಕಾಪಾಡುವ ನಿಟ್ಟಿನಲ್ಲಿ ಒಪ್ಪಂದಕ್ಕೆ ಬರಬೇಕು ಎಂದು ಅಮೆರಿಕ ಕೋರಲಿದೆ. ಅಲ್ಲದೇ ಟಿಬೆಟ್ ಇತಿಹಾಸ, ಜನರ ಬಗ್ಗೆ ಚೀನಾ ಹಬ್ಬಿಸುವ ಸುಳ್ಳು ಸುದ್ದಿಗಳ ತಡೆಗೆ ಅಮೆರಿಕ ವಿದೇಶಾಂಗ ಇಲಾಖೆ ಕೆಲಸ ಮಾಡಲಿದೆ. ಇದಕ್ಕಾಗಿ ದೇಣಿಗೆ ಸಂಗ್ರಹಿಸಲು ಅವಕಾಶ ಸಿಗಲಿದೆ. ಬೈಡನ್ ಸಹಿ ಹಾಕಿದ ನಂತರ ಈ ಕಾಯ್ದೆ ಅನುಷ್ಠಾನಕ್ಕೆ ಬರಲಿದೆ. ಆದರೆ ಇದು ಜಾರಿಗೆ ಬರದಂತೆ ಮಾಡಲು ಅಮೆರಿಕ ಮೇಲೆ ಚೀನಾ ಒತ್ತಡ ಹೇರುತ್ತಿದೆ. ಇದನ್ನೂ ಓದಿ: ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಹೀಟ್ ವೇವ್ ಘಟಕ ಸ್ಥಾಪಿಸಲು ನಡ್ಡಾ ಸೂಚನೆ
ಇದೀಗ ಪೆಲೋಸಿ-ದಲೈಲಾಮ ಭೇಟಿಯನ್ನು ಚೀನಾ ತೀವ್ರವಾಗಿ ಖಂಡಿಸಿದೆ. ಈ ಹಿಂದೆ ಟಿಬೆಟ್ ವಿಚಾರದಲ್ಲಿ ಅಮೆರಿಕಗೆ ನೀಡಿದ ಭರವಸೆಗಳಿಗೆ ಕಟಿಬದ್ಧರಾಗಿದ್ದೇವೆ. ದಲೈಲಾಮ ಜೊತೆ ಸಂಪರ್ಕ ಬೇಡ. ಜಗತ್ತಿಗೆ ತಪ್ಪು ಸಂದೇಶ ತಲುಪಿಸೋದನ್ನು ನಿಲ್ಲಿಸಿ ಎಂದು ಗುಡುಗಿದೆ. ಟಿಬೆಟ್ ಎಂದೆಂದಿಗೂ ಚೀನಾಗೆ ಅವಿಭಾಜ್ಯ ಅಂಗ. ಇದನ್ನು ಉಳಿಸಿಕೊಳ್ಳಲು ಯಾವುದೇ ಕ್ರಮಕ್ಕೆ ಬೇಕಾದರೂ ಮುಂದಾಗುತ್ತೇವೆ ಎಂದು ಬೀಜಿಂಗ್ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ತೆಪ್ಪ ಮುಳುಗಿ ಮೂವರು ಪ್ರವಾಸಿಗರು ದುರ್ಮರಣ

ನವದೆಹಲಿ: ತನ್ನ ನಾಲಿಗೆಯನ್ನು ನೆಕ್ಕುವಂತೆ ಅಪ್ರಾಪ್ತ ಬಾಲಕನಿಗೆ (Boy) ಸೂಚಿಸಿ ಭಾರೀ ಟೀಕೆಗೆ ಒಳಗಾದ ಟಿಬೆಟಿಯನ್ ಆಧ್ಯಾತ್ಮ ನಾಯಕ ದಲೈ ಲಾಮಾ (Dalai Lama) ಇದೀಗ ಬಾಲಕ ಹಾಗೂ ಆತನ ಕುಟುಂಬದ ಬಳಿ ಕ್ಷಮೆ (Apology) ಕೇಳಿದ್ದಾರೆ.
ದಲೈ ಲಾಮಾ ಅಪ್ರಾಪ್ತ ಬಾಲಕನೊಬ್ಬನಿಗೆ ತಮ್ಮ ನಾಲಿಗೆಗೆ ಮುತ್ತಿಟ್ಟು, ನೆಕ್ಕುವಂತೆ ಸೂಚಿಸಿದ್ದರು. ಇದರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ಭಾರೀ ಟೀಗೆಗೆ ಒಳಗಾಗಿದ್ದರು. ಇದೀಗ ಬೌದ್ಧ ಧರ್ಮ ಗುರು ತನ್ನ ವರ್ತನೆ ಹಾಗೂ ಮಾತುಗಳಿಂದ ಬಾಲಕ ಹಾಗೂ ಆತನ ಕುಟುಂಬಕ್ಕೆ ನೋವಾಗಿರಬಹುದು ಎಂದು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
ವೀಡಿಯೋದಲ್ಲೇನಿದೆ?
ಅಪ್ರಾಪ್ತ ಬಾಲಕನೊಬ್ಬ ದಲೈ ಲಾಮಾ ಅವರಿಗೆ ಗೌರವ ಸಲ್ಲಿಸಲು ತಲೆ ಬಾಗಿದ್ದಾನೆ. ಬಳಿಕ ದಲೈ ಲಾಮಾ ಬಾಲಕನಿಗೆ ತನ್ನ ಬಾಯಿಯನ್ನು ತೋರಿಸುತ್ತಾ ನಾಲಿಗೆಯನ್ನು ಹೊರ ಚಾಚಿದ್ದಾರೆ. ಈ ವೇಳೆ ಅವರು ನನ್ನ ನಾಲಿಗೆಯನ್ನು ನೆಕ್ಕುತ್ತೀಯಾ? ಎಂದು ಆತನ ಬಳಿ ಕೇಳಿರುವುದು ಕಂಡುಬಂದಿದೆ. ಬಳಿಕ ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿ ಭಾರೀ ಟೀಕೆಗೆ ದಲೈ ಲಾಮಾ ಗುರಿಯಾಗಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ಬಾಲಕನಿಗೆ ತನ್ನ ನಾಲಿಗೆ ನೆಕ್ಕುವಂತೆ ಸೂಚಿಸಿದ ದಲೈ ಲಾಮಾ – ಭಾರೀ ಟೀಕೆ
ತನ್ನ ವಿವಾದಿತ ವರ್ತನೆ ಬಗ್ಗೆ ತಿಳಿಸಿದ ದಲೈ ಲಾಮಾ, ನಾನು ಭೇಟಿಯಾಗುವ ಜನ ಹಾಗೂ ಮಕ್ಕಳೊಂದಿಗೆ ಮುಗ್ಧ ರೀತಿಯಲ್ಲಿ ಮತ್ತು ತಮಾಷೆಗಾಗಿ ಈ ರೀತಿ ವರ್ತಿಸುತ್ತೇನೆ. ಆದರೆ ನನ್ನ ವರ್ತನೆಗೆ ಬಾಲಕ ಹಾಗೂ ಆತನ ಕುಟುಂಬಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತದಂತೆ ನಾನು ರಷ್ಯಾದಿಂದ ಅಗ್ಗದ ಬೆಲೆಯಲ್ಲಿ ಕಚ್ಚಾ ತೈಲ ಖರೀದಿಗೆ ಮುಂದಾಗಿದ್ದೆ: ಇಮ್ರಾನ್ ಖಾನ್

ನವದೆಹಲಿ: ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ (Dalai Lama) ಅವರಿಗೆ ಸಂಬಂಧಪಟ್ಟ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ದಲೈ ಲಾಮಾ ಅಪ್ರಾಪ್ತ ಬಾಲಕನೊಬ್ಬನಿಗೆ (Boy) ತಮ್ಮ ನಾಲಿಗೆಗೆ (Tongue) ಮುತ್ತಿಟ್ಟು ನೆಕ್ಕುವಂತೆ ಸೂಚಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ವೀಡಿಯೋದಲ್ಲಿ ಬಾಲಕನೊಬ್ಬ ದಲೈ ಲಾಮಾ ಅವರಿಗೆ ಗೌರವ ಸಲ್ಲಿಸಲು ತಲೆ ಬಾಗಿದ್ದಾನೆ. ಬಳಿಕ ದಲೈ ಲಾಮಾ ಬಾಲಕನಿಗೆ ತನ್ನ ಬಾಯಿಯನ್ನು ತೋರಿಸುತ್ತಾ ನಾಲಿಗೆಯನ್ನು ಹೊರ ಚಾಚಿದ್ದಾರೆ. ಈ ವೇಳೆ ಅವರು ನನ್ನ ನಾಲಿಗೆಯನ್ನು ನೆಕ್ಕುತ್ತೀಯಾ? ಎಂದು ಆತನ ಬಳಿ ಕೇಳಿರುವುದು ಕಂಡುಬಂದಿದೆ. ಇದನ್ನೂ ಓದಿ: ರಾಹುಲ್ ವಿರುದ್ಧ ಮಾನಹಾನಿ ಕೇಸ್ ದಾಖಲಿಸುತ್ತೇನೆ: ಅಸ್ಸಾಂ ಸಿಎಂ
ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿದ್ದೇ ತಡ. ಎಲ್ಲೆಡೆ ಬೌದ್ಧ ಧರ್ಮ ಗುರುವಿನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅಪ್ರಾಪ್ತ ಬಾಲಕನೊಂದಿಗೆ ದಲೈ ಲಾಮಾ ವರ್ತಿಸಿರುವ ರೀತಿಯನ್ನು ನೆಟ್ಟಿಗರು ಅಸಹ್ಯಕರ ಎಂದು ಕರೆದಿದ್ದಾರೆ.
ದಲೈ ಲಾಮಾ ಸಾರ್ವಜನಿಕವಾಗಿ ಟೀಕೆಗೊಳಗಾಗಿರುವುದು ಇದೇ ಮೊದಲೇನಲ್ಲ. ಕೆಲ ವರ್ಷಗಳ ಹಿಂದೆ ಅವರು ತಮ್ಮ ಉತ್ತರಾಧಿಕಾರಿ ಮಹಿಳೆಯಾಗಬೇಕಿದ್ದರೆ ಅವರು ಅತ್ಯಂತ ಆಕರ್ಷಕವಾಗಿರಬೇಕು ಎಂದು ಹೇಳಿ ವಿವಾದವನ್ನು ಎಳೆದುಕೊಂಡಿದ್ದರು. ಈ ಹೇಳಿಕೆಯಿಂದ ಅವರು ವಿಶ್ವದಾದ್ಯಂತ ಭಾರೀ ಟೀಕೆಗೆ ಒಳಗಾಗಿದ್ದರು. ಇದನ್ನೂ ಓದಿ: 20ಕ್ಕೂ ಹೆಚ್ಚು ಬಿಜೆಪಿ ಶಾಸಕರಿಗೆ ಕೊಕ್ – ಲಿಸ್ಟ್‌ನಲ್ಲಿ ಯಾರಿದ್ದಾರೆ?

ನವದೆಹಲಿ: ಭಾರತ (India) ಉತ್ತಮ ಜಾಗವಾಗಿದ್ದು, ಇದು ನನ್ನ ಶಾಶ್ವತ ನಿವಾಸವಾಗಿದೆ. ಇದರಿಂದಾಗಿ ನಾವು ಭಾರತಕ್ಕೆ ಆದ್ಯತೆಯನ್ನು ನೀಡುತ್ತೇವೆ ಎಂದು ಟಿಬೆಟಿಯನ್ ಆಧ್ಯಾತ್ಮಿಕ ಗುರು ದಲೈಲಾಮಾ (Dalai Lama) ಹೇಳಿದರು.
ಹಿಮಾಚಲ ಪ್ರದೇಶದ ಕಾಂಗ್ರಾ ವಿಮಾನ ನಿಲ್ದಾಣದಲ್ಲಿ ಚೀನಾ (China) ಘರ್ಷಣೆಯ ಕುರಿತು ಪ್ರತಿಕ್ರಿಯಿಸಿದ ಅವರು, ಯುರೋಪ್, ಆಫ್ರಿಕಾ ಮತ್ತು ಏಷ್ಯಾ ರಾಷ್ಟ್ರಗಳು ಸುಧಾರಣೆಗೊಳ್ಳುತ್ತಿವೆ. ಅದೇ ರೀತಿ ಚೀನಾವೂ ಹೊಂದಿಕೊಳ್ಳುತ್ತಿದೆ. ಆದರೆ ಚೀನಾಕ್ಕೆ ಹಿಂತಿರುಗಲು ಯಾವುದೇ ಅರ್ಥವಿಲ್ಲ. ನನಗೆ ಭಾರತವು ಉತ್ತಮ ಸ್ಥಳವಾಗಿದ್ದು, ಇದು ನನ್ನ ಶಾಶ್ವತ ನಿವಾಸವಾಗಿದೆ. ಇದಕ್ಕೆ ನಾನು ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ತಿಳಿಸಿದರು.

ಡಿ. 9ರಂದು ಭಾರತ- ಚೀನಾ ಘರ್ಷಣೆ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದಲ್ಲಿ ತವಾಂಗ್‍ನ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಚೀನಿಯರು ಭೂಸ್ವಾಧೀನಕ್ಕೆ ಯತ್ನಿಸಿದ್ದು, ಭಾರತೀಯ ಸೈನಿಕರು ಹಿಮ್ಮೆಟ್ಟಿಸಿದರು. ಭಾರತೀಯ ಸೇನಾ ಕಮಾಂಡರ್‌ಗಳ ಸಮಯೋಚಿತ ಹಸ್ತಕ್ಷೇಪದಿಂದಾಗಿ ಚೀನಾ ಸೈನಿಕರು ತಮ್ಮ ಸ್ಥಾನಕ್ಕೆ ಮರಳಿದರು. ಅಲ್ಲದೇ ಸೇನಾ ಕಮಾಂಡರ್‌ಗಳ ಸಭೆಯಲ್ಲಿ ಗಡಿಯಲ್ಲಿ ಶಾಂತಿ ಕಾಪಾಡುವಂತೆ ಕೇಳಿಕೊಂಡರು.
ಈ ಬಗ್ಗೆ ರಾಜ್ಯ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟನೆ ನೀಡಿದ್ದು, ಘಟನೆ ಸಂದರ್ಭದಲ್ಲಿ ಯಾವುದೇ ಸಾವು-ನೋವುಗಳಾಗಿಲ್ಲ. ಬದಲಿಗೆ ಕೆಲವು ಸೈನಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರಿಂದ ನಾಡದ್ರೋಹಿ ಘೋಷಣೆ – 20ಕ್ಕೂ ಹೆಚ್ಚು ಮಂದಿ ವಶ

ದಲೈಲಾಮಾ ದೆಹಲಿಯಲ್ಲಿ 2-3 ದಿನಗಳ ಕಾಲ ಇರಲಿದ್ದು, ನಂತರ ಅವರು ಆಧ್ಯಾತ್ಮಿಕ ಬೋಧನೆಗಳು ಮತ್ತು ಇತರ ಕಾರ್ಯಕ್ರಮಗಳಿಗಾಗಿ ಬಿಹಾರದ ಬೋಧಗ್ಯಾಕ್ಕೆ ಹೋಗುತ್ತಾರೆ. ದೆಹಲಿಯಲ್ಲಿ ಕೆಲವು ಸಭೆಗಳು ಮತ್ತು ಕಾರ್ಯಕ್ರಮಗಳನ್ನು ಹೊರತುಪಡಿಸಿ, ದೆಹಲಿಯಲ್ಲಿ ಆರೋಗ್ಯ ತಪಾಸಣೆ ನಡೆಯಲಿದೆ. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಒಡೆತನ ಶಿಕ್ಷಣ ಸಂಸ್ಥೆ ಮೇಲೆ ಸಿಬಿಐ ದಾಳಿ

ನವದೆಹಲಿ: ಸತತ 3 ವರ್ಷಗಳ ನಂತರ ಟಿಬೆಟ್ ಧರ್ಮಗುರು ದಲೈಲಾಮಾ ಅವರು ದೆಹಲಿ ಭೇಟಿ ನೀಡಲಿದ್ದಾರೆ.
ಲಡಾಖ್‌ನಲ್ಲಿ ಒಂದು ತಿಂಗಳ ಕಾಲ ವಾಸ್ತವ್ಯದ ನಂತರ ದಲೈಲಾಮಾ ಅವರು ಶುಕ್ರವಾರ ದೆಹಲಿಗೆ ಭೇಟಿ ನೀಡಲಿದ್ದಾರೆ ಎಂದು ಲಡಾಖ್ ಬೌದ್ಧ ಸಂಘ ತಿಳಿಸಿದೆ. ರಾಜಕೀಯ ನಾಯಕರೊಂದಿಗೆ ದಲೈಲಾಮಾ ಅವರು ಸಭೆ ನಡೆಸುವ ಬಗ್ಗೆ ಯಾವುದೇ ಖಚಿತ ಮಾಹಿತಿಯಿಲ್ಲ. ಇದನ್ನೂ ಓದಿ: ಪ್ರವಾದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ- 3 ದಿನದೊಳಗೆ ಎರಡನೇ ಬಾರಿ ಅರೆಸ್ಟ್ ಆದ ಶಾಸಕ ರಾಜಾಸಿಂಗ್

ಒಂದು ತಿಂಗಳು ವಾಸ್ತವ್ಯ ಹೂಡಿದ್ದ ಲಡಾಖ್‌ನಿಂದ ಆ.26ರಂದು ನಿರ್ಗಮಿಸಲಿದ್ದಾರೆ. ಲೇಹ್‌ನಿಂದ ವಿಮಾನದ ಮೂಲಕ ದೆಹಲಿಗೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಿಬೆಟಿಯನ್ನರು ಸಂಪೂರ್ಣ ಸ್ವಾತಂತ್ರ್ಯಕ್ಕಿಂತ ನಿಜವಾದ ಸ್ವಾಯತ್ತತೆಯನ್ನು ಬಯಸುತ್ತಿದ್ದಾರೆ. ಲಡಾಕಿಗಳು ಮತ್ತೊಮ್ಮೆ ಲಾಸಾಗೆ ಭೇಟಿ ನೀಡುವ ಸಂದರ್ಭ ಶೀಘ್ರವೇ ಒದಗಿ ಬರಲಿದೆ ಎಂದು ಈಚೆಗೆ ದಲೈಲಾಮಾ ಅವರು ವಿಶ್ವಾಸ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ನೊಟೀಸ್‍ನಿಂದ ಬೇಜಾರು ಆಗಿಲ್ಲ, ಭಯನೂ ಆಗಿಲ್ಲ, ನಾನು ಕರೆಕ್ಟಾಗಿ ಇದ್ದೀನಿ: ಕೆಜಿಎಫ್ ಬಾಬು
ಟಿಬೆಟಿಯನ್ ಮಾತನಾಡುವ ಪ್ರದೇಶಗಳಲ್ಲಿ ನಮ್ಮ ಅಸ್ತಿತ್ವ, ಭಾಷೆ ಮತ್ತು ಶ್ರೀಮಂತ ಬೌದ್ಧ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಕಾಳಜಿ ಹೊಂದಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದರು.