Tag: dal tadka

  • ಈ ದಿನ ಊಟಕ್ಕೆ ಇರಲಿ ಬಾಯಲ್ಲಿ ನೀರೂರಿಸುವ ದಾಲ್

    ಈ ದಿನ ಊಟಕ್ಕೆ ಇರಲಿ ಬಾಯಲ್ಲಿ ನೀರೂರಿಸುವ ದಾಲ್

    ದಾಲ್ ಎಂದರೆ ಕೆಲವರು ತುಂಬಾ ಇಷ್ಟಪಟ್ಟು ಅನ್ನ, ಚಪಾತಿಯೊಂದಿಗೆ ಸವಿಯುತ್ತಾರೆ. ಬ್ಯಾಚುಲರ್‌ಗಳು ಹೆಚ್ಚಾಗಿ ದಾಲ್ ಮಾಡುತ್ತಾರೆ. ಮಾಡಲು ಸುಲಭ ಮತ್ತು ಬೇಗ ತಯಾರಾಗುವ ಅಡುಗೆಯಾಗಿದೆ. ಹೀಗಾಗಿ ನೀವು ಇಂದು ಮನೆಯಲ್ಲಿ ರುಚಿರುಚಿಯಾಗಿ ದಾಲ್ ಮಾಡಿ ಸವಿಯಿರಿ..

    ಬೇಕಾಗುವ ಸಾಮಗ್ರಿಗಳು:
    * ಹೆಸರುಬೇಳೆ- ಅರ್ಧ ಕಪ್
    * ತೊಗರಿ ಬೇಳೆ- ಅರ್ಧ ಕಪ್
    * ಟೊಮ್ಯಾಟೋ- 2
    * ಈರುಳ್ಳಿ- 2
    * ತುಪ್ಪ- 2 ಟೀ ಸ್ಪೂನ್
    * ಜೀರಿಗೆ- 2 ಟೀ ಸ್ಪೂನ್
    * ಇಂಗು
    * ಅರಿಶಿಣ- 1 ಟೀ ಸ್ಪೂನ್
    * ಕೆಂಪು ಮೆಣಸು- 2 ರಿಂದ 3
    * ಗರಂ ಮಸಾಲ – 2 ಟೀ ಸ್ಪೂನ್
    * ನಿಂಬೆ ರಸ- 1 ಟೀ ಸ್ಪೂನ್
    * ಹಸಿಮೆಣಸಿನಕಾಯಿ ಪೌಡರ್- 2 ಟೀ ಸ್ಪೂನ್
    * ಬೆಳ್ಳುಳ್ಳಿ – 2
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:

    * ಒಂದು ಪಾತ್ರೆಯಲ್ಲಿ ಹೆಸರುಬೇಳೆ, ತೊಗರಿ ಬೇಳೆ, ಅರಿಶಿಣ ಸೇರಿಸಿ, ಕುಕ್ಕರ್‍ನಲ್ಲಿ 5-6 ಸೀಟಿ ಕೂಗಿಸಿ ಬೇಯಿಸಿಕೊಳ್ಳಬೇಕು.

    * ನಂತರ ಒಂದು ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಹಾಕಿ. ಬಿಸಿಯಾದ ತುಪ್ಪಕ್ಕೆ ಜೀರಿಗೆ, ಬೆಳ್ಳುಳ್ಳಿ, ಇಂಗು, ಹಸಿ ಮೆಣಸಿನ ಕಾಯಿ, ಟೊಮ್ಯಾಟೋ, ಈರುಳ್ಳಿಯನ್ನು ಸೇರಿಸಿ, ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.

    * ಮಿಶ್ರಣಕ್ಕೆ ಮೆಣಸಿನ ಪುಡಿ, ಗರಂ ಮಸಾಲ, ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕೊತ್ತಂಬರಿ ಸೊಪ್ಪ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಬೇಕು. ಬಳಿಕ ಬೇಯಿಸಿಕೊಂಡ ಬೇಳೆಯನ್ನು ಸೇರಿಸಿ, 3-4 ನಿಮಿಷಗಳ ಕಾಲ ಕುದಿಸಬೇಕು. ಇದೀಗ ದಾಲ್ ಸವಿಯಲು ಸಿದ್ಧವಾಗುತ್ತದೆ.

    * ಬಿಸಿ ಬಿಸಿಯಾದ ಅನ್ನ ಅಥವಾ ರೊಟ್ಟಿಯೊಂದಿಗೆ ತುಪ್ಪ, ದಾಲ್ ಹಾಕಿ ಸವಿಯ ಬಹುದಾಗಿದೆ.