Tag: DakshinaKannada

  • ಕಾಸರಗೋಡು ಮಸೀದಿಗೆ ಹೋಗಿದ್ದ ಹಂತಕರು – SDPI, PFI ಲಿಂಕ್‌, ವಾರಂಟ್ ಜಾರಿ ಮಾಡಿ ಆಸ್ತಿ ಸೀಜ್‌

    ಕಾಸರಗೋಡು ಮಸೀದಿಗೆ ಹೋಗಿದ್ದ ಹಂತಕರು – SDPI, PFI ಲಿಂಕ್‌, ವಾರಂಟ್ ಜಾರಿ ಮಾಡಿ ಆಸ್ತಿ ಸೀಜ್‌

    – ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅಲೋಕ್‌ಕುಮಾರ್‌

    ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಯ ಆರೋಪಿಗಳಿಗೆ ಪಿಎಫ್‍ಐ ಮತ್ತು ಎಸ್‍ಡಿಪಿಐ ಜೊತೆ ಸಂಬಂಧ ಇರುವುದು ಗೊತ್ತಾಗಿದೆ. ಹತ್ಯೆಯ ಬಳಿಕ ಆರೋಪಿಗಳು ಕಾಸರಗೋಡು ಮಸೀದಿಗೆ ಹೋಗಿದ್ದರು ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

    ಪ್ರಕರಣದ ಕುರಿತಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ಇಂದು ಬೆಳಗ್ಗೆ ಮಂಗಳೂರಿನ ತಲಪಾಡಿ ಚೆಕ್ ಪೋಸ್ಟ್ ಬಳಿ ಬಂಧಿಸಲಾಗಿದೆ. ಸುಳ್ಯದ ಶಿಯಾಬ್ (33), ಅಂಕತಡ್ಕದ ರಿಯಾಝ್ (27) ಸುಳ್ಯದ ಎಲಿಮಲೆ ನಿವಾಸಿ ಬಶೀರ್‌ನನ್ನು ಬಂಧಿಸಿದ್ದೇವೆ. ಶಿಯಾಬ್‌ ಕ್ಯಾಂಪ್ಕೋ ಕಂಪನಿಗೆ ಕೊಕ್ಕೊ ವಿತರಣೆ ಮಾಡುತ್ತಿದ್ದರೆ ರಿಯಾಝ್ ಕೋಳಿ ವ್ಯಾಪಾರ ಮಾಡುತ್ತಿದ್ದ. ಬಶೀರ್ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ. ಕೃತ್ಯಕ್ಕೆ ಬ್ಲ್ಯಾಕ್ ಸ್ಪ್ಲೆಂಡರ್ ಬೈಕನ್ನು ಬಳಕೆ ಮಾಡಲಾಗಿದೆ. ಕಾರೊಂದನ್ನು ಸಹ ಬಳಕೆ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ಸಹ ವಶಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ವಾರದ ಹಿಂದೆಯೇ ಪ್ರವೀಣ್‌ ಹತ್ಯೆಗೆ ಸ್ಕೆಚ್‌ – ಕೇರಳದ 7 ಕಡೆ ಆಶ್ರಯ, ಹಂತಕರು ಕೊನೆಗೂ ಅಂದರ್‌

    ಆರೋಪಿಗಳ ಬಗ್ಗೆ ಮೊದಲೇ ನಮಗೆ ಸುಳಿವು ಸಿಕ್ಕಿತ್ತು. ಆದರೆ ನಾವು ಬಹಿರಂಗ ಮಾಡಿರಲಿಲ್ಲ. ಮುಂದೆ ಈ ರೀತಿಯ ಯಾವುದೇ ಕೃತ್ಯ ನಡೆಯದೇ ಕಠಿಣ ಕ್ರಮ ಕೈಗೊಳ್ಳುತ್ತೇವೆ. ವಾರೆಂಟ್ ಇಶ್ಯೂ ಮಾಡಿ ಹಂತಕರು ಮತ್ತು ಹಂತಕರಿಗೆ ಸಹಕಾರ ನೀಡಿದವರ ಆಸ್ತಿಗಳನ್ನು ಮುಟ್ಟುಗೋಲು ಹಾಕುತ್ತೇವೆ. ಯಾವುದೇ ಅಮಾಯಕರನ್ನು ಬಂಧನ ಮಾಡುವುದಿಲ್ಲ. ಆದರೆ ಕೃತ್ಯದಲ್ಲಿ ಭಾಗಿಯಾದವರೆಲ್ಲರನ್ನು ಬಂಧಿಸುತ್ತೇವೆ. ಯಾರನ್ನು ಫಿಕ್ಸ್ ಮಾಡುವುದಕ್ಕೆ ಹೋಗುವುದಿಲ್ಲ. ಯಾರನ್ನೋ ಬಂಧಿಸುವುದಕ್ಕೆ ಇದು ಹುಡುಗಾಟವಲ್ಲ. ನಮಗೆ ಜಾತಿ, ಧರ್ಮ, ಬಣ್ಣ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಈದ್ಗಾ ಮೈದಾನದ ವಿವಾದ- ಸರ್ಕಾರದ ನಿರ್ಧಾರವೇ ಅಂತಿಮ: ಬೊಮ್ಮಾಯಿ

    ಎಲ್ಲ ಮಾಹಿತಿಯನ್ನು ನಾವು ಎನ್‍ಐಎಗೆ ನೀಡುತ್ತೇವೆ. ಎನ್‍ಐಎ ಕೂಡಾ ತನಿಖೆ ಮುಂದುವರಿಸುತ್ತಿದೆ. ನಮ್ಮ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಪೊಲೀಸ್ ತಂಡಕ್ಕೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಶತಾಯಗತಾಯವಾಗಿ ಈ ಪ್ರಕರಣ ಭೇದಿಸಬೇಕಾಗಿತ್ತು. ಜನರಲ್ಲಿಯೂ ಸಾಕಷ್ಟು ಆತಂಕವಿತ್ತು. ಪ್ರಕರಣ ಭೇದಿಸಲು ಸಾಕಷ್ಟು ಒತ್ತಡಗಳಿತ್ತು. ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಅಧಿಕಾರಿ ತಂಡಕ್ಕೆ ಬಹುಮಾನವೂ ಘೋಷಿಸಲಾಗುತ್ತದೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಸುಳ್ಯದ ಕೂಜುಮಲೆ ಅರಣ್ಯದಲ್ಲಿ ಗುಡ್ಡ ಕುಸಿತ- ಹಲವು ಗ್ರಾಮಗಳ ನಿವಾಸಿಗಳ ಸ್ಥಳಾಂತರ

    ಸುಳ್ಯದ ಕೂಜುಮಲೆ ಅರಣ್ಯದಲ್ಲಿ ಗುಡ್ಡ ಕುಸಿತ- ಹಲವು ಗ್ರಾಮಗಳ ನಿವಾಸಿಗಳ ಸ್ಥಳಾಂತರ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೂಜುಮಲೆ ಅರಣ್ಯದಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತವಾಗುತ್ತಿದ್ದು, ಮುಂಜಾಗೃತ ಕ್ರಮವಾಗಿ ಬಾಳುಗೋಡು ಸುತ್ತಮುತ್ತಲಿನ ಹಲವು ಗ್ರಾಮಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.

    ಜಿಲ್ಲೆಯಲ್ಲಿ ಮಹಾಮಳೆಗೆ ಗುಡ್ಡಗಳು ಹಸಿಯಾಗಿ, ಮಣ್ಣು ಸಡಿಲಗೊಂಡಿದೆ. ಇದರಿಂದಾಗಿ ಕಳೆದ ಎರಡು ದಿನಗಳಿಂದ ಗುಡ್ಡ ಕುಸಿತವಾಗುತ್ತಿದ್ದು, ಇಂದು ಸುಳ್ಯ ತಾಲೂಕು ಕೂಜುಮಲೆಯ ಕೆಲವು ಭಾಗದಲ್ಲಿಯೂ ಗುಡ್ಡ ಕುಸಿಯುತ್ತಿದೆ. ಕೂಜುಮಲೆಯ ಅರಣ್ಯದ ಅಡಿಯಲ್ಲಿರುವ ಮಾನಡ್ಕ, ಅಡ್ಕರ್, ಕಲ್ಮಕಾರು ಬಾಳುಗೋಡು ಸೇರಿದಂತೆ ಹಲವು ಗ್ರಾಮಗಳ ನಿವಾಸಿಗಳನ್ನು ಪೊಲೀಸರು ಸ್ಥಳಾಂತರ ಮಾಡುತ್ತಿದ್ದಾರೆ.

     

    ಭಾರೀ ರಭಸದಿಂದ ನೀರು ಹರಿಯುತ್ತಿದ್ದು, ಕೂಜುಮಲೆ ಅರಣ್ಯ ಪ್ರದೇಶದಿಂದ ಮರಗಳು ಬುಡ ಸಮೇತ ಕಿತ್ತು ಬರುತ್ತಿದೆ. ಸಂಪಾಜೆ ಗಡಿಯಲ್ಲಿರುವ ಮದೇನಾಡು, ಜೋಡುಪಾಲದಲ್ಲಿ ಮನೆಗಳ ಮೇಲೆ ಬೆಟ್ಟಗಳು ಬೀಳುತ್ತಿರುವ ಹಿನ್ನೆಲೆಯಲ್ಲಿ ಈ ನಿವಾಸಿಗಳ ಮನೆಗಳ ಮೇಲೂ ಕುಸಿತವಾಗಬಹುದು ಎನ್ನುವ ಆತಂಕದಲ್ಲಿ ಎಚ್ಚೆತ್ತ ಬಾಳುಗೋಡು ಪೊಲೀಸರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಡಿಕೇರಿ- ಸುಳ್ಯ ಗಡಿ ಭಾಗದಲ್ಲಿ ನಕ್ಸಲರು ಪ್ರತ್ಯಕ್ಷ!

    ಮಡಿಕೇರಿ- ಸುಳ್ಯ ಗಡಿ ಭಾಗದಲ್ಲಿ ನಕ್ಸಲರು ಪ್ರತ್ಯಕ್ಷ!

    ಮಂಗಳೂರು: ಮಡಿಕೇರಿ-ಸುಳ್ಯ ಗಡಿಭಾಗದಲ್ಲಿ ನಕ್ಸಲರು ಓಡಾಡುತ್ತಿದ್ದು, ಸಂಪಾಜೆಯ ಕೊಯಿನಾಡಿನ ಗ್ರಾಮದ ಗುಡುಗದ್ದೆಯ ಮನೆಗೆ ಭೇಟಿ ನೀಡಿದ್ದಾರೆ.

    ಶುಕ್ರವಾರ ದಯಾನಂದ ಎಂಬುವವರ ಮನೆಗೆ ಬಂದ ಮೂವರು ನಕ್ಸಲರು, ಅಡುಗೆ ಪದಾರ್ಥಗಳನ್ನು ಪಡೆದು ಕಾಡಿಗೆ ವಾಪಸ್ಸಾಗಿದ್ದಾರೆ. ಸ್ಥಳೀಯರು ಸಂಪಾಜೆ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಎಎನ್‍ಎಫ್ ತಂಡದಿಂದ ಕೂಬಿಂಗ್ ಕಾರ್ಯಾಚರಣೆಗೆ ಸಿದ್ಧತೆ ನಡೆದಿದೆ.

    ಜನವರಿ 16ರಂದು ಉಪ್ಪಿನಂಗಡಿ ಸಮೀಪದ ಶಿರಾಡಿ ಮಿತ್ತಬೈಲಿನಲ್ಲಿ ಮೂವರು ನಕ್ಸಲರು ಎರಡು ಮನೆಗಳಿಗೆ ಭೇಟಿ ನೀಡಿದ್ದರು. ಬಳಿಕ ಎಎನ್‍ಎಫ್‍ನಿಂದ ಶೋಧ ಕಾರ್ಯಾಚರಣೆಯೂ ನಡೆದಿತ್ತು. ಆದರೆ ನಕ್ಸಲರು ಪತ್ತೆಯಾಗಿರಲಿಲ್ಲ. ಇದನ್ನೂ ಓದಿ:ಶಿರಾಡಿಯಲ್ಲಿ ಕಾಣಿಸಿಕೊಂಡ ಶಂಕಿತ ನಕ್ಸಲರು- ಮೂವರು ಶಸ್ತ್ರಧಾರಿಗಳನ್ನು ಕಂಡು ಸ್ಥಳೀಯರಲ್ಲಿ ಆತಂಕ