Tag: dakshina kaannada

  • ನಾನು ಭ್ರಷ್ಟಾಚಾರ ಎಸಗಿಲ್ಲ – ಮಾರಿಗುಡಿಯಲ್ಲಿ ಹರೀಶ್ ಪೂಂಜಾ ಪ್ರಮಾಣ

    ನಾನು ಭ್ರಷ್ಟಾಚಾರ ಎಸಗಿಲ್ಲ – ಮಾರಿಗುಡಿಯಲ್ಲಿ ಹರೀಶ್ ಪೂಂಜಾ ಪ್ರಮಾಣ

    ಮಂಗಳೂರು: ನಾನು ಯಾವುದೇ ರೀತಿಯಲ್ಲಿ ಭ್ರಷ್ಟಾಚಾರ ಎಸಗಿಲ್ಲ ಎಂದು ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ (Harish Poonja) ಅವರು ದೇವರ ಮುಂದೆ ಪ್ರಮಾಣ ಮಾಡಿದ್ದಾರೆ.

    ನಾನು ಒಂದು ರೂಪಾಯಿ ಮುಟ್ಟಿಲ್ಲ, ಭ್ರಷ್ಟಾಚಾರ ಮಾಡಿಲ್ಲ, ಒಂದು ವೇಳೆ ತಪ್ಪುಮಾಡಿದ್ದರೆ ತಕ್ಕ ಶಿಕ್ಷೆಯನ್ನು ಮಾರಿಗುಡಿಯ ಮಹಾದೇವಿ ನೀಡಲಿ ಎಂದು ಬೆಳ್ತಂಗಡಿ ಮಾರಿಗುಡಿ ದೇವಿ ದೇವಸ್ಥಾನದಲ್ಲಿ ಪ್ರಮಾಣ ಮಾಡಿದ್ದಾರೆ. ಇದನ್ನೂ ಓದಿ: ದರ್ಶನ್‌ & ಗ್ಯಾಂಗ್‌ಗೆ ಜೈಲೇ ಗತಿ – ಆ.28ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

    ಪ್ರಮಾಣ ಮಾಡಿದ್ದು ಯಾಕೆ?
    ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ (Rakshith  Shivaram) ಆರೋಪಿಸಿದ್ದರು. ಇದನ್ನೂ ಓದಿ:ಪೊಲೀಸರ ಮೇಲಿನ ಕೋಪಕ್ಕೆ ವಿಧಾನಸೌಧದ ಮುಂದೆ ಬೈಕ್‌ಗೆ ಬೆಂಕಿ ಇಟ್ಟ ಸವಾರ

    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ- ಬೆಳ್ತಂಗಡಿ (Belthangadi) ಪ್ರವಾಸಿ ಬಂಗಲೆ ಹಾಗೂ ಹೆದ್ದಾರಿ ಕಾಮಗಾರಿಯಲ್ಲಿ ಹರೀಶ್ ಪೂಂಜಾ ಭ್ರಷ್ಟಾಚಾರ ಎಸಗಿದ್ದಾರೆ. ಹೆದ್ದಾರಿಯ ಕಾಮಗಾರಿಯಲ್ಲಿ ಶಾಸಕ 3 ಕೋಟಿ ಕಿಕ್ ಬ್ಯಾಕ್ ಮಾಡಿದ್ದಾರೆ. ಕಾಮಗಾರಿ ಪೂರ್ಣಗೊಂಡರೂ 2 ಕೋಟಿ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಮಾಡಿದ್ದಾರೆ ಎಂದು ದೂರಿದ್ದರು. ಇದನ್ನೂ ಓದಿ:ಬಾಲ ರಾಮನ ಮೂರ್ತಿ ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ಗೆ ಅಮೆರಿಕ ವೀಸಾ ನಿರಾಕರಣೆ

    ಮಾರ್ಚ್ 28, 2023 ರಲ್ಲಿ ಬೆಳ್ತಂಗಡಿಲ್ಲಿ ಪ್ರವಾಸಿ ಮಂದಿರ ಉದ್ಘಾಟನೆಯಾಗಿತ್ತು. ಈ ಪ್ರವಾಸಿ ಮಂದಿರ 7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಪ್ರವಾಸಿ ಮಂದಿರದ ಅನುದಾನವನ್ನು ಚುನಾವಣೆ ಪ್ರಚಾರಕ್ಕೆ ಬಳಸಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದಾರೆ. ಇದನ್ನೂ ಓದಿ:ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಹಾಕಲ್ಲ: ಡಿಕೆಶಿ

    ಇಬ್ಬರ ನಡುವಿನ ವಾಕ್ಸಮರ ಜೋರಾಗುತ್ತಿದ್ದಂತೆ ಇಂದು ಹರೀಶ್ ಪೂಂಜಾ ಅವರು ಮಾರಿಗುಡಿಗೆ ಬಂದು ಪ್ರಮಾಣ ಮಾಡಿದ್ದಾರೆ. ದೇವರಿಗೆ ಪ್ರಾರ್ಥನೆ ಸಲ್ಲಿಸಿ ತೆಂಗಿನಕಾಯಿ ಒಡೆದು ನಾನು ತಪ್ಪು ಮಾಡಿಲ್ಲ. ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ರಕ್ಷಿತ್ ಶಿವರಾಂ ಸೇರಿದಂತೆ ಎಲ್ಲರಿಗೂ ತಕ್ಕ ಶಿಕ್ಷೆ ನೀಡುವಂತೆ ಪ್ರಾರ್ಥಿಸಿಕೊಂಡಿದ್ದಾರೆ.ಕೇಜ್ರಿವಾಲ್‌ಗೆ ಜಾಮೀನು ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

  • ಮಂಜುನಾಥನ ಸನ್ನಿಧಿಯಲ್ಲಿ ಲಕ್ಷದೀಪೋತ್ಸವ ಸಡಗರ – ಬಣ್ಣ ಬಣ್ಣದ ಬೆಳಕಿನ ಚಿತ್ತಾರ

    ಮಂಜುನಾಥನ ಸನ್ನಿಧಿಯಲ್ಲಿ ಲಕ್ಷದೀಪೋತ್ಸವ ಸಡಗರ – ಬಣ್ಣ ಬಣ್ಣದ ಬೆಳಕಿನ ಚಿತ್ತಾರ

    ಮಂಗಳೂರು: ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಲಕ್ಷದೀಪೋತ್ಸವದ ಸಂಭ್ರಮ ಜೋರಾಗಿದೆ. ಐದು ದಿನಗಳ ದೀಪಗಳ ಉತ್ಸವಕ್ಕೆ ಧರ್ಮಸ್ಥಳದಲ್ಲಿ ಚಾಲನೆ ದೊರತಿದ್ದು, ಕ್ಷೇತ್ರದ ಪರಿಸರ ಝಗಮಗಿಸುತ್ತಿದೆ. ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.

    ದೀಪೋತ್ಸವದ ವೇಳೆ ಕ್ಷೇತ್ರದ ಮುಖ್ಯ ದೇವರು ಮಂಜುನಾಥ, ಕ್ಷೇತ್ರದ ಹೊರಗೆ ಬಂದು ಭಕ್ತರಿಂದ ಪೂಜೆ ಪಡೆಯುತ್ತಾನೆ. ಕ್ಷೇತ್ರದ ಪರಿಸರದಲ್ಲಿ ದೇವರನ್ನು ಒಂದೊಂದು ಕಟ್ಟೆಯಲ್ಲಿಟ್ಟು ಪೂಜಿಸುತ್ತಾರೆ. ದೇವರ ಪೂಜಾ ಕಾರ್ಯಗಳು ಪ್ರತಿದಿನ ಬೆಳಗ್ಗೆ 5.30ಕ್ಕೆ ಆರಂಭವಾಗಲಿದೆ.

    ನವೆಂಬರ್ 16 ಮತ್ತು 17ರಂದು ನಡೆಯುವ 85ನೇ ವರ್ಷದ ಸರ್ವ ಧರ್ಮ ಸಮ್ಮೇಳನವನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಉದ್ಘಾಟನೆ ಮಾಡಲಿದ್ದಾರೆ.

    ನವೆಂಬರ್ 17 ರಂದು ಸಾಹಿತ್ಯ ಸಮ್ಮೇಳ ಆರಂಭವಾಗಲಿದ್ದು ಬರಹಗಾರ್ತಿ ಸುಧಾ ಮೂರ್ತಿ ಅವರು ಸಮ್ಮೇಳನದ ಉದ್ಘಾಟನೆ ಮಾಡಲಿದ್ದಾರೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ನಡೆಯುವ ಈ ಅದ್ಭುತ ಕ್ಷಣಗಳಿಗೆ ಧರ್ಮಸ್ಥಳ ಸಾಕ್ಷಿಯಾಗುತ್ತಿದೆ.

     

  • SSLC ಫಲಿತಾಂಶ: ಉಡುಪಿ ಫಸ್ಟ್, ದಕ್ಷಿಣ ಕನ್ನಡ ಸೆಕೆಂಡ್, ಬೀದರ್ ಲಾಸ್ಟ್

    SSLC ಫಲಿತಾಂಶ: ಉಡುಪಿ ಫಸ್ಟ್, ದಕ್ಷಿಣ ಕನ್ನಡ ಸೆಕೆಂಡ್, ಬೀದರ್ ಲಾಸ್ಟ್

    ಬೆಂಗಳೂರು: 2016-17ನೇ ಸಾಲಿನ ಎಸ್‍ಎಸ್‍ಎಲ್ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಒಟ್ಟು 5,81,134 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.67.87 ಫಲಿತಾಂಶ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.7.24 ರಷ್ಟು ಫಲಿತಾಂಶ ಇಳಿಕೆಯಾಗಿದ್ದು ಕಳೆದ 6 ವರ್ಷದಲ್ಲೇ ಕಳಪೆ ಫಲಿತಾಂಶ ದಾಖಲಾಗಿದೆ.

    ಪಿಯುಸಿ ಫಲಿತಾಂಶದಂತೆ ಎಸ್‍ಎಸ್‍ಎಲ್‍ಸಿಯಯಲ್ಲೂ ಉಡುಪಿ ಮತ್ತು ದಕ್ಷಿಣ ಕನ್ನಡ ಅನುಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದಿದೆ. ಚಿಕ್ಕೋಡಿ ಮೂರನೇ ಸ್ಥಾನವನ್ನು ಪಡೆದರೆ ಬೀದರ್ ಕೊನೆಯ ಸ್ಥಾನವನ್ನು ಪಡೆದಿದೆ.

    ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದು 2,96,426 ಮಂದಿ ವಿದ್ಯಾರ್ಥಿನಿಯರು ತೇರ್ಗಡೆಯಗಿದ್ದರೆ, 2,84,708 ವಿದ್ಯಾರ್ಥಿಗಳು ತೇಗಡೆಯಾಗಿದ್ದಾರೆ. 924 ಶಾಲೆಗಳಲ್ಲಿ ಶೇ.100 ಫಲಿತಾಂಶ ದಾಖಲಾಗಿದ್ದು, 60 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ. ಶೂನ್ಯ ಫಲಿತಾಂಶ ದಾಖಲಾದ ಶಾಲೆಗಳಲ್ಲಿ 51 ಖಾಸಗಿ ಶಾಲೆಗಳು ಸೇರಿವೆ.

    ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಭಾಗದ 3,17,570( ಶೇ.74.12) ವಿದ್ಯಾರ್ಥಿಗಳು ಪಾಸಾಗಿದ್ದರೆ, ನಗರ ಪ್ರದೇಶದ 2,42,869( ಶೇ.72.18) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

    36,138 ವಿದ್ಯಾರ್ಥಿಗಳು ಎ+ ಶ್ರೇಣಿ ಪಡೆದರೆ, 93,332 ವಿದ್ಯಾರ್ಥಿಗಳು ಎ ಶ್ರೇಣಿ ಪಡೆದಿದ್ದಾರೆ. ಮೂವರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳಿಸಿದ್ದಾರೆ.

    ಪೂರಕ ಪರೀಕ್ಷೆ-ಜೂನ್ 15 ರಿಂದ 22ರವರೆಗೆ ನಡೆಯಲಿದ್ದು,  ಮರು ಏಣಿಕೆ ಮತ್ತು ಉತ್ತರ ಪತ್ರಿಕೆ ಪ್ರತಿಗೆ ಅರ್ಜಿ ಸಲ್ಲಿಸಲು ಮೇ 22 ಕೊನೆ ದಿನಾಂಕವಾಗಿದೆ.