ಸಿನಿಮಾ, ನಾಟಕಗಳಲ್ಲಿ ದೈವಾರಾಧನೆ ಪ್ರದರ್ಶನವಾದ ಹಿನ್ನೆಲೆ ಅನೇಕರು ಅನುಕರಣೆ ಮಾಡುತ್ತಿದ್ದಾರೆ. ದೈವಾರಾಧನೆಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದೈವಗಳ ಅಪಹಾಸ್ಯವಾಗುತ್ತಿದೆ ಎಂದು ದೈವದ ಮುಂದೆ ಭಕ್ತೆ ರೂಪಶ್ರೀ ನೋವು ತೋಡಿಕೊಂಡಿದ್ದರು. ಇದನ್ನೂ ಓದಿ: `ಕಾಂತಾರ’ ನೋಡಿ ಹುಚ್ಚಾಟ ಪ್ರದರ್ಶನ – ವಿಡಿಯೋ ವೈರಲ್ ಆಗ್ತಿದ್ದಂತೆ ಕ್ಷಮೆಯಾಚನೆ
ಈ ಕುರಿತು ಮಾಧ್ಯಮಗಳ ಮುಂದೆ ಮಾತನಾಡಿದ ರೂಪಶ್ರೀ, ದೈವಗಳ ಅಪಹಾಸ್ಯ ತಡೆಯಲು ಹೋದ ನಮಗೆ ಅಪಹಾಸ್ಯ ಮಾಡುತ್ತಿದ್ದಾರೆ. ನಮಗಾದ ನೋವನ್ನ ಪೆರಾರ ಕ್ಷೇತ್ರದ ದೈವಗಳ ಮುಂದೆ ತೋಡಿಕೊಂಡಿದ್ದೇವೆ. ನಾವು ಬೇಡಿಕೊಂಡಾಗ ದೈವ ನಮಗೆ ಅಭಯದ ನುಡಿ ನೀಡಿದೆ ಎಂದು ತಿಳಿಸಿದರು.
‘ಏನು ಬೇಕಾದರೂ ಆಗಲಿ, ನೀವು ಮುಂದುವರೆಯಿರಿ. ನಿಮ್ಮ ಬೆನ್ನ ಹಿಂದೆ ನಾನಿದ್ದೇನೆ’ ಎಂದು ದೈವ ನುಡಿ ನೀಡಿದೆ. ‘ಯಾರು ದೈವಗಳ ವೇಷ ತೊಟ್ಟು ದೊಂಬರಾಟ ಮಾಡುತ್ತಾರೋ ಅವರಿಗೆ ಹುಚ್ಚು ಹಿಡಿಸುತ್ತೇನೆ. ಇಲ್ಲವಾದಲ್ಲಿ ಒಳ್ಳೆ ಬುದ್ಧಿ ನೀಡಿ ಸರಿ ದಾರಿಯಲ್ಲಿ ನಡೆಸುತ್ತೇನೆ’ ಎಂದು ದೈವ ಹೇಳಿರುವುದಾಗಿ ತಿಳಿಸಿದರು. ಇದನ್ನೂ ಓದಿ: ಮೋಹನ್‍ಲಾಲ್ ಅಭಿನಯದ ವೃಷಭ ಸಿನಿಮಾ ರಿಲೀಸ್ ಡೇಟ್ ಫಿಕ್ಸ್
ಈಗೀಗ ಮಹಿಳೆಯರು ದೈವ ಬಂದಂತೆ ವರ್ತಿಸುತ್ತಾರೆ. ತುಳುನಾಡಿನ ಇತಿಹಾಸದಲ್ಲಿ ಈ ರೀತಿ ಕಂಡ ಕಂಡಲ್ಲಿ ದೈವ ಬರುವಂತಹ ಪದ್ಧತಿ ಇಲ್ಲ. ಪವಿತ್ರ ಕ್ಷೇತ್ರಗಳಲ್ಲಿ ಹಾಗೂ ದೈವ ಅವಾಹನೆಗೆ ಅದರದ್ದೇ ನಿಯಮಗಳು ಇದೆ ಎಂದರು.
– ನಾನು ನಿಮ್ಮವ ಅಂತ ಕ್ಷಮಿಸಿಬಿಡಿ ಎಂದ ವೆಂಕಟ್
– ಅತ್ತ ಕಾಂತಾರ ವಿರುದ್ಧ ಸಿಡಿದೆದ್ದ ದೈವಾರಾಧಕರು
ಬೆಂಗಳೂರು: ಕಾಂತಾರ ಚಾಪ್ಟರ್-1 (Kantara Chapter 1) ಜಗತ್ತಿನಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಆದ್ರೆ ದೈವಾರಾಧನೆಯ ಎಳೆ ಹಿಡಿದು ನಿರ್ಮಿಸಿದ ಕಾಂತಾರ ಚಿತ್ರದ ವಿರುದ್ಧ ಇದೀಗ ದೈವಾರಾಧಕರೇ ಸಿಡಿದೆದ್ದಿದ್ದಾರೆ. ದೈವಸ್ಥಾನದ ಮೆಟ್ಟಿಲಲ್ಲೇ ತೀರ್ಪಿಗಾಗಿ ದೈವಾರಾಧಕರು ದೈವದ ಮೊರೆ ಹೋಗಿದ್ದಾರೆ. ತುಳುನಾಡಿನಲ್ಲಿ (Tulunad) ದೈವಾರಾಧಕರು ವರ್ಸೆಸ್ ಕಾಂತಾರ ಫೈಟ್ ತಾರಕಕ್ಕೇರಿದೆ.
ಈ ನಡುವೆ ಕಾಂತಾರ ಸಿನಿಮಾ ನೋಡಿದ ಬಳಿಕ ದೈವದ ಅನುಕರಣೆ ಮಾಡಿ ಹುಚ್ಚಾಟ ಮೆರೆದಿದ್ದ ವೆಂಕಟ್ ಎಂಬಾತ ಕ್ಷಮೆಯಾಚಿಸಿದ್ದಾನೆ. ವಿಡಿಯೋ ಮೂಲಕ ತುಳುನಾಡ ಜನತೆ ಹಾಗೂ ಕಾಂತಾರ ಚಿತ್ರತಂಡಕ್ಕೆ ಕ್ಷಮೆ ಕೇಳಿದ್ದಾನೆ ವೆಂಕಟ್.
ಘಟನೆ ಬಳಿಕ ಮಾನಸಿಕವಾಗಿ ನೊಂದಿದ್ದೇನೆ. ತುಳುನಾಡಿನ ಜನತೆಯಲ್ಲಿ ಕ್ಷಮೆ ಇರಲಿ. ಈ ರೀತಿ ಯಾರೂ ಮಾಡಬೇಡಿ, ನಾನು ನಿಮ್ಮವ ಅಂತ ಕ್ಷಮಿಸಿಬಿಡಿ ಎಂದು ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾನೆ.
ಕಾಂತಾರ ವಿರುದ್ಧ ಸಿಡಿದೆದ್ದ ದೈವಾರಾಧಕರು
ಕಾಂತಾರ ಚಾಪ್ಟರ್-1 ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣ್ತಿದೆ. ವಿಶ್ವದಾದ್ಯಂತ ಭಾರೀ ಸದ್ದು ಮಾಡುತ್ತಿದ್ದು, ಸಿನಿಮಾದ ಬಗ್ಗೆ ಪ್ರಶಂಸೆಯೂ ವ್ಯಕ್ತವಾಗುತ್ತಿದೆ. ತುಳುನಾಡಿನ ದೈವಾರಾಧನೆಯ ಎಳೆಯನ್ನೇ ಹಿಡಿದುಕೊಂಡು ಬಂದ ಕಾಂತಾರ ಹಾಗೂ ಕಾಂತಾರ ಚಾಪ್ಟರ್-1 ಮೂಲಕ ತುಳುನಾಡಿನ ಆರಾಧ್ಯ ದೈವಗಳಿಗೆ ನಿಂದನೆ ಆಗಿದೆ ಅನ್ನೋ ಅಸಮಧಾನವೂ ಇದೆ.
ಹಾದಿಬೀದಿಯ ಪ್ರದರ್ಶನವನ್ನ ಕಾಂತಾರ ಪ್ರೇರೇಪಿಸಿದೆ
ತುಳುವರ ಆರಾಧ್ಯ ದೈವಗಳನ್ನ ಹಾದಿಬೀದಿಯಲ್ಲಿ ಪ್ರದರ್ಶನ ಮಾಡೋದನ್ನ ಕಾಂತಾರ ಚಿತ್ರವೇ ಪ್ರೇರೇಪಿಸಿದೆ ಅನ್ನೋ ವಿರೋಧ ವ್ಯಕ್ತವಾಗಿದೆ. ಕಾಂತಾರದಲ್ಲಿ ಪಂಜುರ್ಲಿ, ಗುಳಿಗ, ಪಿಲಿದೈವವನ್ನ ತೋರಿಸಿ ರಿಷಬ್ ಶೆಟ್ಟಿ ಮಾಡಿದ ದೈವ ನರ್ತನವನ್ನ ಸಿನಿಮಾ ಥಿಯೇಟರ್‌ನಲ್ಲಿ ವೇಷ ಹಾಕಿ ಕುಣಿಯುತ್ತಿದ್ದಾರೆ. ಸಿನಿಮಾ ಮಂದಿರ ಹಿಡಿದು ರಸ್ತೆ ಮಧ್ಯೆ ಬಂದು ದೈವ ನರ್ತನ ಮಾಡೋವರೆಗೂ ಬಂದು ತಲುಪಿದೆ.
ಪಿಲಿಚಂಡಿ ದೈವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ
ಸಿನಿಮಾ ಬಿಡುಗಡೆ ಬೆನ್ನಲ್ಲೇ ಅನೇಕರಿಂದ ದೈವಾರಾಧನೆಯ ಅನುಕರಣೆ, ಮೈಮೇಲೆ ದೈವ ಬಂದ ರೀತಿಯಲ್ಲಿ ವಿಕೃತಿ ಮೆರೆದಿದ್ದಾರೆ. ಹೀಗಾಗಿ ತುಳುನಾಡಿದ ದೈವಾರಾಧಕರು, ದೈವ ನರ್ತಕರು ಕಾಂತಾರ ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ದೈವಸ್ಥಾನದ ಮೆಟ್ಟಿಲೇರಿದ್ದಾರೆ. ಕಾಂತಾರದಲ್ಲಿ ದೈವಾರಾಧನೆಯ ಬಳಕೆ ಹಾಗೂ ಸಿನಿಮಾ ಬಿಡುಗಡೆಯ ಬಳಿಕ ಅನೇಕರು ವಿಕೃತಿ ಮೆರೆದಿರೋದ್ರ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಪರ ವಿರೋಧ ಚರ್ಚೆಗಳು ಆಗುತ್ತಿದೆ. ಹೀಗಾಗಿ ಇಂದು ದೈವಾರಾಧಕರು ಹಾಗೂ ದೈವ ನರ್ತಕರು ದೈವ ಕ್ಷೇತ್ರದಲ್ಲೇ ಕಾಂತಾರ ಸಿನಿಮಾದ ವಿರುದ್ಧ ದೂರು ನೀಡಿದ್ದಾರೆ. ಮಂಗಳೂರು ಹೊರವಲಯದ ಬಜಪೆ ಸಮೀಪದ ಪೆರಾರ ಶ್ರೀ ಬ್ರಹ್ಮಬಲವಂಡಿ ಪಿಲಿಚಂಡಿ ದೈವಸ್ಥಾನದಲ್ಲಿ ದೈವ ನರ್ತಕರು ಹಾಗೂ ದೈವಾರಾಧಕರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮಂಗಳೂರು: ತುಳುನಾಡಿನಲ್ಲಿ ದೈವಾರಾಧಕರು ಹಾಗೂ ಕಾಂತಾರ ಚಾಪ್ಟರ್ 1 ಸಿನಿಮಾದ (Kantara Chapter 1) ನಡುವಿನ ಫೈಟ್ ತಾರಕಕ್ಕೇರಿದೆ. ಇದೀಗ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ದೈವಾರಾಧನೆ (Daivaradhane) ಬಳಕೆ ವಿರುದ್ಧ ಸಿಡಿದೆದ್ದ ದೈವಾರಾಧಕರು ದೈವಸ್ಥಾನದ ಮೆಟ್ಟಿಲೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮಂಗಳೂರಿನ (Mangaluru) ಬಜಪೆ ಸಮೀಪ ಪೆರಾರ ಬ್ರಹ್ಮ ಬಲವಂಡಿ, ಪಿಲಿಚಂಡಿ ದೈವಸ್ಥಾನದಲ್ಲಿ ದೈವನರ್ತಕರು ಹಾಗೂ ದೈವಾರಾಧಕರು ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಕಾಂತಾರ ಚಾಪ್ಟರ್ 1 ಸಿನಿಮಾ ಹಾಗೂ ದೈವಾರಾಧನೆಯ ಅಪಹಾಸ್ಯದ ವಿರುದ್ಧ ದೈವಸ್ಥಾನದ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್ ಮನೆ ಬೀಗ ಓಪನ್ ಆದ್ರೂ ಶೂಟಿಂಗ್ ಇನ್ನೂ ಶುರುವಾಗಿಲ್ಲ!
ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ, ಗುಳಿಗ, ಪಿಲಿ ದೈವದ ಆವೇಶ ಸೇರಿದಂತೆ ದೈವ ನರ್ತನದ ಬಳಕೆ ಮಾಡಲಾಗಿತ್ತು. ಸಿನಿಮಾ ಬಿಡುಗಡೆ ಬೆನ್ನಲ್ಲೇ ಥಿಯೇಟರ್ ಸೇರಿದಂತೆ ಅನೇಕ ಕಡೆ ಹಲವರು ದೈವಾರಾಧನೆಯ ಅನುಕರಣೆ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಯೂ ಜೋರಾಗಿದೆ.
ಇನ್ನು ಕೆಲವರು ಮೈಮೇಲೆ ದೈವ ಬಂದ ರೀತಿಯಲ್ಲಿ ವಿಕೃತಿ ಮೆರೆದಿದ್ದರು. ಇದೆಲ್ಲವನ್ನು ಖಂಡಿಸಿ ದೈವಾರಾಧಕರು ಇಂದು ದೈವಕ್ಷೇತ್ರದಲ್ಲೇ ಕಾಂತಾರ ಸಿನಿಮಾ ಮತ್ತು ದೈವಾರಾಧನೆಯ ಅಪಹಾಸ್ಯ ಮಾಡುವವರ ವಿರುದ್ಧ ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ.
ರಾಷ್ಟ್ರ ಪ್ರಶಸ್ತಿ ಪಡೆದ ಮದಿಪು (Madipu) ಸಿನಿಮಾದಲ್ಲಿ ದೈವರಾಧನೆ (Daivaradhane) ತೋರಿಸಿ, ಸೈ ಅನಿಸಿಕೊಂಡಿದ್ದ ನಿರ್ದೇಶಕ ಚೇತನ್ ಮುಂಡಾಡಿ (Chetan Mundadi) ದೈವಕೋಲವನ್ನು ಸಿನಿಮಾಗಳಲ್ಲಿ ಬಳಸುತ್ತಿರುವ ಕುರಿತಂತೆ ಎದ್ದಿರುವ ವಿರೋಧಕ್ಕೆ ಪ್ರತಿರೋಧ ತೋರಿದ್ದಾರೆ. ಕಲೆಗಳಲ್ಲಿ ದೈವರಾಧಾನ ತಂದರೆ ಆಗುವ ಸಮಸ್ಯೆ ಏನು? ಎಂದು ಪ್ರಶ್ನೆ ಮಾಡಿದ್ದಾರೆ. ಅವರು ಎತ್ತಿದ ಪ್ರಶ್ನೆಗಳ ಸಾರ ಇಲ್ಲಿದೆ.
ನಾನು ಮೂಲತಃ ತುಳುನಾಡಿನವನೇ ಆಗಿದ್ದರೂ ಹೊಟ್ಟೆಪಾಡಿಗೆ ಬೆಂಗಳೂರಿನಲ್ಲಿ ಬಂದು ನೆಲೆ ನಿಲ್ಲುವಂತಾಗಿದೆ. ಅದರಿಂದ ಈಗ ಎರಡು – ಮೂರು ವಾರದಿಂದ ನಮ್ಮ ತುಳುನಾಡಿನ ಮೂಲ ಸಂಸ್ಕೃತಿಗಳಲ್ಲಿ ಒಂದಾದ ದೈವ ಆರಾಧನೆಯನ್ನು ಕಲೆಯಾಗಿ ( ಭೂತರಾಧನೆ ) ಚಲನಚಿತ್ರ ನಾಟಕದಲ್ಲಿ ಬಳಸಬಾರದು ಎನ್ನುವ ವಿಡಿಯೋಗಳನ್ನು ನೋಡಿದೆ. ಆಗ ನನ್ನೊಳಗೆ ಒಂದಷ್ಟು ಗೊಂದಲಗಳು ಸೃಷ್ಟಿಯಾಗಿದೆ. ಆ ಗೊಂದಲವನ್ನು ದಯವಿಟ್ಟು ಯಾರಾದರೂ, ಈ ವಿಡಿಯೋ ಮಾಡಿದವರಾಗಿರಬಹುದು, ದೈವರಾಧನೆಯ ಬಗ್ಗೆ ತಿಳಿದವರಾಗಿರಬಹುದು, ಹಿರಿಯರಾಗಿರಬಹುದು. ಯವುದೇ ದೈವದ ಸಂಘಟನೆಯವರಾಗಿರಬಹುದು. ದಯವಿಟ್ಟು ನನ್ನ ಈ ಗೊಂದಲದ ಕೆಲವು ಪ್ರಶ್ನೆಗಳಿಗೆ ಉತ್ತರ ಕೊಡಬಹುದೇ ದಯವಿಟ್ಟು. ಇದು ವಾದವಲ್ಲ, ಇಲ್ಲವೇ ನಿಮ್ಮ ಮಾತುಗಳಿಗೆ, ವಿರೋಧವಲ್ಲ. ನಾನು ತಿಳಿದುಕೊಳ್ಳಲು, ಕಲಿತುಕೊಳ್ಳಲು, ನನ್ನ ಮಕ್ಕಳಿಗೆ ತಿಳಿಸಲು ನಿಮ್ಮ ಬಳಿ ಕೇಳುತ್ತಿರುವ ಕೆಲವು ಪ್ರಶ್ನೆಗಳು. ದಯವಿಟ್ಟು ಉತ್ತರಿಸಿ. ದೈವ ಕೋಲ ಸಂಸ್ಕೃತಿಯೇ, ಇಲ್ಲ ಜಾನಪದ ಕಲೆಯೇ! ಇಲ್ಲ ಒಂದು ಪಂಗಡಕ್ಕೆ ಸೇರಿದ ವೃತ್ತಿಯೇ? ಒಂದು ವೇಳೆ ವೃತ್ತಿಯಾಗಿ ಪಂಗಡಕ್ಕೆ, ಸೇರಿದ್ದರೆ ಅದನ್ನು ವಿರೋಧಿಸುವುದು ಸರಿ ಎಂದುಕೊಳ್ಳೋಣ. ಅದರೇ ಸಂಸ್ಕೃತಿಯಾದರೇ ಜಾನಪದದ ಕಲೆಯಾದರೇ ನಾನು ನನ್ನ ಸಂಸ್ಕೃತಿ, ಜಾನಪದ ಕಲೆಯನ್ನು ಹತ್ತೂರಿನ ಜನರಿಗೆ ನಾನು ನಾಟಕ ಚಲನಚಿತ್ರದಲ್ಲಿ ಅದರ ಬಗ್ಗೆ ಮಾಹಿತಿ ಕೊಟ್ಟರೆ ಆಗ ತಪ್ಪೇನಿದೆ.
ತುಳುನಾಡ ದೈವಾರಾಧನೆ ಅರಿತವ ದೈವದ ಮೂಲಕ್ರಮದ ಬದಲಾವಣೆ ಬಗ್ಗೆ ಮಾತ್ರ ವಿರೋಧಿಸುತ್ತಾನೆ. ನಮ್ಮ ದೈವರಾಧನೆಯ ಕರ್ಮಿಗಳಲ್ಲಿ ಎಲ್ಲವರ್ಗದವರೂ ಇರುತ್ತಾರೆ ಎಂಬುದು ತುಳುನಾಡಿನ ಪ್ರತಿಯೊಬ್ಬನಿಗೂ ಗೊತ್ತಿರುವ ವಿಚಾರ. ಅದು ಒಂದು ವರ್ಗಕ್ಕೆ ಸೀಮಿತವಾದ ಕಟ್ಟಳೆಯಲ್ಲ. ದೈವಗಳ ನುಡಿ ಎಂದರೆ, ಅದು ತಲೆತಲಾಂತರದಿಂದ ಬಂದ ನುಡಿಕಟ್ಟುಗಳು. ಆ ನುಡಿಕಟ್ಟಲ್ಲಿ ಗಗ್ಗರ ತೆಗೆದುಕೊಳ್ಳುವ ಮುನ್ನ ದೈವ ಹೀಗೆನ್ನುತ್ತದೆ. ‘ನೂಲುಪಾಲ್ – ನೂರ್ದಾಲ್ – ಸಾರಾಳ್ – ಸಾರುಬಿರು ಒಂಜಿ ರಾಜ್ಯಡ ಕೇಂಡೊಂದು ಗಗ್ಗರ ದೆತೋನ್ವೆ’ ಇಲ್ಲಿ ನೂಲುಪಾಲು ಅಂದರೆ ಬ್ರಾಹ್ಮಣರು, ನೂರ್ದಾಲ್ ಅಂದರೆ ಬಂಟರು, ಜೈನರು ಎಂಬ ನಿರ್ದಿಷ್ಟ ಕುಲಕಸುಬಿಗೆ ಒಳಪಡದ ವರ್ಗ, ಸಾರಾಳ್ ಅಂದರೆ ಕುಲಕಸುಬು ಇರುವ ವರ್ಗಗಳು ಅದು ಕುಂಬಾರ, ನೇಕಾರ, ಮಡಿವಾಳ, ಆಚಾರರು, ಚಮ್ಮಾರರು ಹೀಗೆ ನಂತರದಲ್ಲಿ ಬರುವುದು ಸಾರ ಬಿರು ಅಂದರೆ ಬಿರುವರು ಅರ್ಥಾತ್ ಬಿಲ್ಲವರು ಹಾಗೂ ಮಲಯಾಳಿ ಬಿಲ್ಲವರ ವರ್ಗ. ದೈವವೇ ಇವರನ್ನೆಲ್ಲಾ ಒಳಗೊಂಡಂತೆ ಒಂದು ರಾಜ್ಯವೆಂದು ಕರೆದು ಗಗ್ಗರ ಸ್ವೀಕರಿಸಲು ಅನುಮತಿ ಕೇಳುವಾಗ ಆಧಾರ ರಹಿತ ಪೊಟ್ಟುವಾದಕ್ಕೆ ದೈವದ ನುಡಿಯೇ ಇಲ್ಲಿ ಉತ್ತರ. ಎಲ್ಲವೂ ತುಳುನಾಡಿನ ಪದ್ದತಿಯಲ್ಲವೇ. ದೈವರಾಧನೆ ಒಂದಷ್ಟು ಜಾತಿಗಳ ಕೂಟ ಎಂದು ನನ್ನ ಹಿರಿಯರು ಹೇಳಿದನ್ನು ನಾನು ಕೇಳಿದ್ದೀನಿ. ಈಗಿರುವಾಗ ಇದು ಒಂದು ವರ್ಗದ ಆಚರಣೆ ಎಂದು ಹೇಳಲು ಸಾಧ್ಯ ನಾವು. ಇದು ನನ್ನ ತುಳುನಾಡಿನ ಮಣ್ಣಿನ ಆರಾಧನೆ. ನನ್ನ ಸಂಸ್ಕೃತಿ. ಒಂದು ದೈವ ನೇಮವಾಗಬೇಕಾದರೇ ಆ ಮನೆಯ ಅಂಗಳ ಕೆತ್ತಲು ಆಚಾರಿ ಮಾಡಿದ ಪಿಕ್ಕಸಿ ಹಾರೆ ಬೇಕು, ಅಂಗಳಕ್ಕೆ ಸೆಗಣಿ ಸಾರಿಸಲು ಊರಿನ ಅಕ್ಕಪಕ್ಕದ ಮನೆಯ ಕೊಟ್ಟಿಗೆಯ ಸೆಗಣಿ ಬೇಕು, ಜೀಟಿಗೆಗೆ, ದೈವದ ಮಂಚಕ್ಕೆ, ನೇಕಾರರು ನೈದ ಬಟ್ಟೆ ಬೇಕು. ಗಾಣಿಗರು ತಂದು ಕೊಡುವ ಎಣ್ಣೆ ಬೇಕು, ದೈವಕ್ಕೆ ಬೇಕಾದ ಮಣ್ಣಿನ ವಸ್ತುಗಳು ಮೂಲ್ಯ ಜನಾಂಗದವರು ಕೊಡಬೇಕು, ಕೃಷನ್ ಮನೆಯ ವಿಳೆದೆಲೆ ಬೇಕು, ಚರ್ಮ ಹೊಲಿಯುವ ಜನಾಂಗದವರು ಬೇಕು, ಮನೆ ಶುದ್ದ ಮಾಡಲು ಬ್ರಾಹ್ಮಣ ಮನೆಯ ದೇವರ ನೀರು ಬೇಕು. ಶೇರಿಗರನ್ನು ಕರೆಸಿ ವಾದ್ಯ ಊದಿಸಬೇಕು, ಚರ್ಮದ ವಸ್ತುಗಳನ್ನು ತಂದು ಕೊಡುವ ಜನಾಂಗಕೂಡಬೇಕು, ಮುರುತೆಯ ಸೇದಿಕೊಡಲು ಬಿಲ್ಲವ ಜನಾಂಗಬೇಕು. ಗರ್ನಲ್ ಬಿಡಲು ಸಾಹೇಬ ಬೇಕು. ಈಗಿರುವಾಗ ದೈವ ಒಂದು ಜನಾಂಗದವರದ್ದು ಹೇಗಾಗುತ್ತೆ ಹೇಳಿ.
ನಾವು ಚಿಕ್ಕವರಿರುವಾಗ ನನ್ನ ಹಿರಿಯರು ಹೇಳುತ್ತಿದ್ದರು. ಆಗಿನ ಮಕ್ಕಳು ಚಿಕ್ಕವರಿರುವಾಗ ದೈವಕೋಲದ ಮರುದಿವಸ ಅದ ಬಿಸಾಕಿದ ಸಿರಿ ಹಿಡಿದು ನಲಿಯುತ್ತಿದ್ದರು ಅಂತ. ಈಗಿನ ದೈವದ ಸೇವೆ ಮಾಡುವವರು ದಯವಿಟ್ಟು ಒಂದು ಸಾರಿ ತಮ್ಮ ಎದೆ ಮುಟ್ಟಿ ಹೇಳಲಿ. ಅವರು ಚಿಕ್ಕವರಿರುವಾಗ ಈ ರೀತಿ ಮಾಡಿಲ್ಲ ಅಂತ. ಇಂತಹ ಜಾಗದಲ್ಲೇ ಕಲೆ ಹುಟ್ಟುವುದಲ್ವಾ. ಆಗ ಅವನು ಒಬ್ಬ ಕಲಾವಿದನಲ್ಲವೇ. ದೈವದ ಬಣ್ಣ ಹಾಕಿ ಬಿಸಾಕಿದ ಬಾಳೆ ಎಲೆಯಲ್ಲಿ ಇದ್ದ ಅರದಾಳವನ್ನು ಅವರ ಮಕ್ಕಳು ಕದ್ದು ಮುಚ್ಚಿ ಹಾಕಿರುವ ಎಷ್ಟು ಉದಾಹರಣೆ ಇಲ್ಲ ಹೇಳಿ. ಅಭಿರುಚಿಯಿಂದ ಬಂದಿರುವ ಕಲೆ ಅದು. ಅವನ ತೃಪ್ತಿಗಳಿಗೆ, ಅದು ವೃತ್ತಿಯಾಗುತ್ತದೆ ಅಲ್ವಾ. ನಾನು ಮಾಡುವ ವೃತ್ತಿ ಯನ್ನು ಇನ್ನೊಬ್ಬ ಮಾಡಿದರೆ ನನಗೆ ಯಾಕೆ ಚಿಂತೆ ಸ್ವಾಮಿ. ನನ್ನ ವೃತ್ತಿ ರಂಗದಲ್ಲಿ ತೊಂದರೆಯಾದರೇ ನಾನು ತಲೆ ಕೆಡಿಸ್ಕೋ ಬೇಕು ಅಲ್ವಾ? ಹತ್ತು ಇದ್ದರೆ ಮುತ್ತು ಎನ್ನುವ ಗಾದೇನೇ ಇದೆ. ನನ್ನ ಹಿರಿಯರು ನನಗೆ ಹೇಳಿದಂತೆ ನನ್ನ ಮಣ್ಣಿನ ದೈವಗಳು ಕಾರ್ಣೀಕದ ಶಕ್ತಿಗಳು. ತಪ್ಪು ಮಾಡಿದವರನ್ನು ಯಾವತ್ತೂ ಬಿಟ್ಟಿಲ್ಲ ಅಂತೆ. ನನ್ನ ಮನೆಯ ಅಂಗಳದಲ್ಲಿ ಇದ್ದ ಅಡಿಕೆ ಕದ್ದವರನ್ನು ಬಿಟ್ಟಿಲ್ಲಂತೆ. ಸರಿ ದೈವಗಳ ಪ್ರತಾಪಗಳೇ ಹೀಗೆ. ದೇವರ ಭಯವೇ ಜ್ಞಾನದ ಅರಂಭ. ಭಯದ ಮೂಲಕವೇ ಆರಾಧನೆ ಪ್ರಾರಂಭವಾಗಿದೆ ಎಂದುಕೊಳ್ಳೋಣ. ಈಗ ಗೊಂದಲವಿರುವುದು ದೈವಗಳಿಗೆ ಅಪಮಾನ – ದೈವ ಭಕ್ತರಿಗೆ ಅಪಮಾನ. ದೈವವಿದ್ದರೆ ದೈವ ಭಕ್ತರು. ನಾನು ನಂಬುವ ದೈವ ಕದ್ದು ತೆಗೆದುಕೊಂಡು ಹೋದವರನ್ನು, ಕಾಡಿನಲ್ಲಿ ತಪ್ಪಿಕೊಂಡ ಹಸುಗಳನ್ನು ವಾಪಸ್ ತರಿಸಿಕೊಂಡ ಉದಾಹರಣೆಗಳಿಲ್ಲವೇ. ಕದಿಯುತ್ತಿದ್ದ ವ್ಯಕ್ತಿಯನ್ನು, ಕೆಟ್ಟದನ್ನು ಮಾಡಿದವರ ಕುಟುಂಬ ಸಮೇತ ನಸಿಸಿ ಹಾಕಿಸಿ, ಭಕ್ತಿಯಿಂದ ಹರಕೆ ಹೊತ್ತ ಕುಟುಂಬಕ್ಕೆ ಸಂತನ ದಯಪಾಲಿಸಿದ ನನ್ನ ಯೋದ ಶಕ್ತಿ ದೈವಗಳು ನಮ್ಮೂರಿನಲ್ಲಿ ಎಷ್ಟಿಲ್ಲ ಹೇಳಿ. ಈ ಕಲಿಕಾಲದಲ್ಲೂ ಎಷ್ಟೋ ಪಾಲು ಬಿದ್ದ ದೈವದ ಗುಡಿಗಳು ಜೀರ್ಣೋದ್ಧಾರ ಆಗುವಂತೆ ಮಾಡಿ, ಕೋಲ ಪಡೆದು ಕಾರ್ಣೀಕ ದೈವಗಳು ತೋರಿಸಿಲ್ವಾ ಹೇಳಿ? ಮಂಗಳೂರಿನ MRPL ನಂತಹ ಪ್ರತಿಷ್ಠಿತ ಸಂಸ್ಥೆಯಿಂದ ದೈವ ತನ್ನ ಅಸ್ತಿತ್ವಕ್ಕೆ ತೊಂದರೆ ಆದಾಗ ಅವರಿಂದ ಹಿಂದೆ ಪಡೆದಿರುವುದನ್ನು ನಾವು ನೋಡಿಲ್ಲವೇ ಹೇಳಿ?
ಹಾಗಾದರೇ ಒಂದು ವೇಳೆ ನಾಟಕವಾದ ಶಿವದೂತ ಗುಳಿಗ ಮದಿಪು ಇಲ್ಲ ಕಾಂತಾರ ಚಲನಚಿತ್ರದಿಂದ ನಮ್ಮ ದೈವದ ಅಸ್ತಿತ್ವಕ್ಕೆ ತೊಂದರೆ ಆಗಿದ್ದಾರೆ ಅದು ಕಾರ್ಣೀಕ ತೋರಿಸಿ, ಎಲ್ಲರಿಗೂ ತೊಂದರೆ ಕೊಡುತ್ತಿತ್ತು ಅಲ್ವಾ! ನಾನು ನಂಬಿದ ದೈವ, ಕಾರ್ಣೀಕ ತೋರಿಸಿದ ದೈವ ಅಸ್ತಿತ್ವಕ್ಕೆ ತೊಂದರೆ ಆಗಿದ್ದರೆ ಅದರ ಅಸ್ತಿತ್ವವನ್ನು ಅದಕ್ಕೆ ಉಳಿಸಿಕೊಳ್ಳಲಾಗಿಲ್ಲವೆಂದರೆ ನನ್ನ ಪ್ರಾಣ ಮಾನವನ್ನು ನನ್ನ ದೈವ ಹೇಗೆ ಕಾಪಾಡಿತ್ತು. ನಾನು ಯಾಕೆ ಆ ನನ್ನ ದೈವವನ್ನು ನಂಬಬೇಕು. ದೈವ ಅದರ ಅಸ್ತಿತ್ವ ಉಳಿಸಿಕೊಡಲು ಯಾವುದಾದರೂ ಸಂಘ ಸಂಸ್ಥೆಗಳಿಗೆ ನನ್ನ ಮಣ್ಣಿನ ದೈವಗಳು ಗುತ್ತಿಗೆ ಕೊಟ್ಟಿದೆಯಾ ಹೇಳಿ. ದೈವಗಳು ತುಳುನಾಡಿನ ಪ್ರತಿ ಮನೆ ಮನೆಯಲ್ಲಿ ಇದೆ. ವಿಧ ವಿಧದಲ್ಲಿ ಇದೆ . ದೈವದ ಇನ್ನೊಂದ ವರ್ಗ ಹೇಳುತ್ತದೆ. ತೆಯ್ಯಂ ದೈವರಾಧನೆಯ ಒಳಗೆ ಇತ್ತು ಅಂತ. ಅದೇ ತೆಯ್ಯಂ ಇವತ್ತು ರಾಷ್ಟ್ರೀಯತೆಗೆ ಹೋಗಿ ಹೇಗೆ ನಿಂತಿದೆ ಹೇಳಿ? ಹೀಗಿರುವಾಗ ನಾಟಕ, ಚಲನಚಿತ್ರದಲ್ಲಿ ದೈವವನ್ನು ತೋರಿಸಿದರೆ ತಪ್ಪೇನಿದೆ ಹೇಳಿ. ರಿಷಬ್ ಶೆಟ್ಟಿಯವರು ಕಾಂತಾರ ಚಿತ್ರದಲ್ಲಿ ದೈವಕಟ್ಟಿಸಿದ್ದರಿಂದ ಮದಿಪು ಚಿತ್ರದಲ್ಲಿ ನಾನು ದೈವಕೋಲ ಕಟ್ಟಿಸಿದ್ದರಿಂದ, ಶಿವದೂತ ಗುಳಿಗ ನಾಟಕದಲ್ಲಿ ಕೊಡಿಯಲ್ ಬೈಲ್ ಕಟ್ಟಿಸಿದ್ದರಿಂದ ಯಾವುದಾದರೂ ನಮ್ಮ ಮನೆಯ ದೈವ ದುಃಖಿಸಿ, ಚಲನಚಿತ್ರದಿಂದ ನಾಟಕದಿಂದ ತನ್ನ ಅಸ್ತಿತ್ವಕ್ಕೆ ತೊಂದರೆ ಆಗಿದೆ ಅಂತ ಏನಾದರೂ ನುಡಿ ಕೊಟ್ಟು ಹೇಳಿಕೊಂಡಿದೇಯಾ ಹೇಳಿ. ಮತ್ತೆ ಯಾಕೆ ಈ ವಿರೋಧ ಸ್ವಾಮಿ.
ಬದಲಾವಣೆ ಜಗದ ನಿಯಮ. ಕಾಲಕ್ಕೆ ತಕ್ಕಂತೆ ಕೋಲ ಕಟ್ಟಬೇಕು ಅಂತ ಭೂತರಾಧನೆಯಲ್ಲೇ ಹೇಳಿದೆ. ಮೂಲ ನಂಬಿಕೆ ಅಂತ ನಾವು ಹೋಗುವುದಾದರೆ ನನ್ನ ದೈವದ ಗುಡಿಯಲ್ಲಿರುವ ಮಣೆಮಂಚದಲ್ಲಿರುವ ಬೊಳ್ಳಿಯ ವಸ್ತುಗಳನ್ನು ನಾನು ಹೊರಗೆ ಬಿಸಾಕಬೇಕಾ ಹೇಳಿ. ದೈವಕೋಲ ಕಟ್ಟಿಸಲು ನಾನು ಕಾಡಿನ ಅಡಿಕೆ ತಿರಿಯಿಂದಲೇ ಕೆಲಸಮಾಡಿಲಾಗುತ್ತದೆಯೇ, ಮನೆಯಲ್ಲೇ ಪೊದೊಲು ಮಾಡಲಾಗುತ್ತದೆಯೇ..!. ದೈವಧಾರಿ ಕಾಡಿನ ಹೂವಿನಿಂದ ಮುಖಕ್ಕೆ ಹರದಳ ಈಗ ಹಾಕಲು ಸಾಧ್ಯವೇ ಹೇಳಿ. ದೊಂದಿ ಬೆಳಕಿನಿಂದಲೇ ಕೋಲನಡೆಸಲು ಈಗ ಸಾಧ್ಯವೇ? ಮನೆಯವರು ಅಂಗಡಿ ಹೂವನ್ನು ಬಳಸದೇ ಕಾಡು ಹುಡುಕಿ ಹೋಗಿ ಕೇಪುಳ ಹೂ ತರಲು ಸಾಧ್ಯವೇ? ದೈವಕ್ಕೆ ಕೊಡುವ ಕೋಳಿಯನ್ನು ಅಂಗಡಿಯಿಂದ ತರದೇ ನಾವು ಸಾಕಿ ಬಲಿಕೊಡಲು ಸಾಧ್ಯವೇ. ನಾವು ಈಗ ದೈವಕೋಲ ನಡೆಸುವ ಎಷ್ಟೋ ಮನೆಯಲ್ಲಿ ಕ್ಯಾಟ್ರೀಂಗ್ ಗಳನ್ನು ಕರೆಸಿ ಊಟದ ಮಾಡಿ ಹೋಗುವುದನ್ನು ನೋಡಿಲ್ಲ. ಬದಲಾಗಬೇಕಾಗಿರುವುದು ದೈವದ ಕ್ರಮ. ತಲಾಕ್ ಅಲ್ಲವೇ ಹೇಳಿ. ಅಲ್ಲಾ ಸ್ವಾಮಿ ನಮಗೆ ಶಿವದೂತ ಗುಳಿಗ ನಾಟಕದಲ್ಲಿ ಹಾಕಿರುವ LED Light ನಾವು ತೆಗೆದು ಹಾಕಬೇಕು ಎನ್ನುವ ನನ್ನ ಹಿರಿಯರೇ, LED Light ಎನ್ನುವುದು ನಾಟಕ ಚಲನಚಿತ್ರ ರಂಗದ ಬಿಳಿ ಬೆಳಕು. ಈ ನಾಟಕದಲ್ಲಿ LED light ದೈವದಾರಿ ಕಲಾವಿದನ್ನ ಮೈಮೇಲೆ ಎಲ್ಲಿ ಹಾಕಿದ್ದಾನೇ ಸ್ವಾಮಿ. ನಾಟಕ ನೋಡಿದವರು ದಯವಿಟ್ಟು ನನಗೆ ಹೇಳಿ. ಅಲ್ಲ ರಂಗಭೂಮಿ ನಿಂತಿರುವುದು ಲೈಟ್ಗಳ ಜೊತೆಗೆ ಬೆಳೆದು ಬಂದಿದೆ. LED ಲೈಟ್ ರಂಗಭೂಮಿಯಲ್ಲಿ ಬಳಸಬಾರದು ಎಂದು ರಂಗಭೂಮಿಯ ಸ್ವಾತಂತ್ರ್ಯವನ್ನು ಕಸಿಯುವ ಹಕ್ಕನ್ನು ನನಗೆ ಕೊಟ್ಟವರು ಯಾರು ಸ್ವಾಮಿ. ನಾಳೆ l Elo – Jin Light, spotlight, ಹಾಕಬಾರದು ಅಂತ ನಾವು ಹೇಳುವುದಿಲ್ಲವೇ..?. ರಂಗಭೂಮಿಯಲ್ಲಿ ಆಗದೇ ಇರುವ ನ್ಯೂನತೆಯನ್ನು ಹೇಳುವ ನಾವು ನಾಳೆ ದೈವದ ಚಾಕರಿಯಲ್ಲಿ ನಡೆಯುವ ನ್ಯೂನತೆಯನ್ನು ನಾವು ಹೇಗೆ ಸರಿಪಡಿಸುತ್ತೇವೆ ಹೇಳಿ. ಇದೇ ಶಿವದೂತ ಗುಳಿಗೆ ನಾಟಕದ cold fire ನಮ್ಮನ್ನು disturb ಮಾಡುತ್ತೆ ಅಂದರೆ ದೈವ ಕುಣಿಯುವಾಗ ನಾವು ಬಳಸುವ ಬೆಡಿಮರ್ದ್ ಗರ್ನಾಲ್, ಪಟಾಕಿ, ಬೆಂಕಿಯ ಭತ್ತಿಗಳು ಕೂಡ ನಮ್ಮನ್ನು disturb ಮಾಡುತ್ತದೆ ಎಂದು ಚರ್ಚೆ ಆದರೆ ನನ್ನ ದೈವದ ಮೂಲ ಎಲ್ಲಿ ಹೋಗಿ ನಿಲ್ಲಬಹುದು ಎನ್ನುವ ಭಯ ನನಗೆ. ಇದೇ ರೀತಿ ದೈವಕ್ಕೆ ಬಳಸುವ ವಾದ್ಯ ಚೆಂಡೆ, ತಾಸೆ, ಬೇಡ ಎನ್ನುವ ಚರ್ಚೆ ಹುಟ್ಟಿಕೊಂಡರೆ ದೈವಕೋಲ ಎಲ್ಲಿ ಹೋಗಿ ನಿಲ್ಲಬಹುದು ಎನ್ನುವ ಭಯ ಮತ್ತೊಂದು. ಈ ಎಲ್ಲಾ ಸಂಘರ್ಷಕ್ಕೆ ನಾನು , ನಾವು ಯಾಕೆ ಜಾಗ ಮಾಡಿ ಕೊಡಬೇಕು ಹೇಳಿ
ಕಾಂತರ ಚಲನಚಿತ್ರದಲ್ಲಿ ರಿಷಭ್ ತಪ್ಪು ಮಾಡಿದ್ದಾರೆ ಅಂತ ಹೇಳುವ ಮಹಾತ್ಮರೇ, ಅವರು ಎಲ್ಲಿ ತಪ್ಪು ಮಾಡಿದ್ದಾರೆ ತಿಳಿಸಿ. ಕುಡಿದು ದೈವಕೋಲಕ್ಕೆ ಬಂದ ಫಾರೇಸ್ಟ್ ಆಫೀಸರ್ ದೈವಕೋಲದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾಗ ಅದಕ್ಕೆ ಉತ್ತರಕೊಟ್ಟು, ಎಲ್ಲ ವರ್ಗದ ಸಂಘರ್ಷವನ್ನು ಮಿರಿಸಿ, ದೈವವನ್ನೇ ಗೆಲ್ಲಿಸಿಲ್ಲವೇ ಇದು ತಪ್ಪಾ. ಅಲ್ಲಾ ಸ್ವಾಮಿ ಹಿಂದೆ ಊರಿನಲ್ಲಿ ಕೋಟಿ-ಚೆನ್ನಯ, ಕೊರಪು ಬಾರಗೆ, ಕಲ್ಕುಡ ಕಲ್ಲುಟ್ಟಿ, ಬಬ್ಬು ಬಾರಗೆ, ಯಕ್ಷಗಾನ ನಡೆಯುತ್ತಿತ್ತು. ಇದರಿಂದ ಈ ದೈವಗಳ ಕತೆಗಳು ಹೆಚ್ಚು ಜನಗಳಿಗೆ ನಮ್ಮ ಮಕ್ಕಳಿಗೆ ತಲುಪುಂತೆ ಆಯಿತ್ತು. ದೈವದ ಗ್ರಾಮ್ಯದ ತುಳು ಯಾರಿಗೆ ಅರ್ಥವಾಗುತ್ತೆ ಹೇಳಿ ನೋಡೋಣ. ಅದನ್ನೇ ಯಕ್ಷಗಾನ, ನಾಟಕ, ಚಲನಚಿತ್ರಗಳ ಮೂಲಕ ಆ ಕಥೆಗೊಂದು ಲೇಪನ ಕೊಟ್ಟು ಬಿಡಿಸಿ, ಹೇಳಿದ್ದಾಗಲೇ ಈ ಕತೆಗಳು ಜನರಿಗೆ ತಲುಪುದಲ್ಲವೇ. ಕೊಡಿಯಲ್ ಬೈಲ್ ತಮ್ಮ ನಾಟಕದಲ್ಲಿ ಮಾಡಿದ್ದು ಇದನ್ನೇ ಅಲ್ಲವೇ? ನಾವು ದೈವವನ್ನು ದೇವರ ರೂಪವೆಂದು ಯಾರಾದರೂ ಸಾಧಿಸಲು ಸಾರಲು ಯತ್ನಿಸಿದ ವ್ಯಕ್ತಿಗಳನ್ನು ವಿರೋಧಿಸಬೇಕೇ ವಿನಹಃ ದೈವವೇ ಕರೆಯುವ ನೂಲುಪಾಡಿ ಸಂಸಾರವನ್ನ ವಿರೋಧಿಸಲು ನಾವ್ಯಾರು? ದೈವಕ್ಕೆ ಚಂಡಿಕಾಯಾಗ ಮಾಡಹೊರಟರೆ, ಆರತಿ ಎತ್ತಿದರೆ ಅದಕ್ಕೆ ವಿರೋಧಿಸೋಣ ಅಥವಾ ಅದನ್ನ ಇನ್ಯಾವುದೋ ದೇವರ ಅಂಶವೆಂದೋ ಸಾರಹೊರಟರೆ ಅದನ್ನ ವಿರೋಧಿಸೋಣ. ಜನರಿಗೆ ದೈವದ ಬಗ್ಗೆ ಭಕ್ತಿ ಬರುವಂತೆ ಮಾಡುವ ಈ ನಾಟಕ ಚಲನಚಿತ್ರವನ್ನು ಅಲ್ಲ. ಅಲ್ಲ ನಾಟಕ ಚಲನಚಿತ್ರವನ್ನು ತಡೆಯುವ ಅಧಿಕಾರವನ್ನು ನಮಗೆ ಕೊಟ್ಟವರು ಯಾರು. ಕಾಂತಾರ ಚಿತ್ರಿಸಿದ ರಿಷಬ್ ರನ್ನು ಬಹಿಷ್ಕಾರದ ಹಾಕಲು ನಾವು ಯಾರು. ಅವರು ಏನು ಕೊಲೆ ದರೋಡೆ ಮಾಡಿದ್ದಾರೆಯೇ. ಶಿವದೂತ ಗುಳಿಗ ನಾಟಕ ನಾಯಕನಿಗೆ ಕರೆ ಮಾಡಿ ನಿಮ್ಮ ಮಕ್ಕಳು ನಸಿಸಿಹೋಗಬೇಕು ಅಂತ ಹೇಳಲು ನಾವು ಯಾರು ದೈವಗಳೇ ಅಲ್ಲವಲ್ಲ. ಒಬ್ಬ ಕಲಾವಿದ ಅವನ ಹೊಟ್ಟೆಪಾಡಿಗೆ ಕಲೆಯನ್ನು ಮಾಡುತ್ತಾನೆ. ದೈವದ ಕಲದಲ್ಲಿ ಕೂಡ ಇದನ್ನೇ ಮಾಡುವುದಲ್ಲವೇ. ಅದು ಸರಿಯಾದರೇ ಇದು ಯಾಕೆ ತಪ್ಪು?
ಇನ್ನೂ ದೈವವು ತನ್ನ ನುಡಿಗಟ್ಟಲ್ಲಿ ಘಟ್ಟದ ಪುಡೆರ್ದ್ – ಕಡಲ ಪುಡೆ ಮುಟ್ಟ – ದಂಡ್’ದ ರಾಜ್ಯೊರ್ದ್ – ಏಳ್ ಗಂಗೆದ ಕಡಪ ಇಪ್ಪುನಂಚಿನ ದೈವ ನಂಬಿಂಚಿ ಸಂಸಾರಲೆನ್ ಎನ್ನ ಮಾಯದ ಪೊರುವೆಳ್’ಡ್ ದೀದ್ ಕಾಪುವೆ….ಅಂದರೆ ಘಟ್ಟದ ಬುಡದಿಂದ, ಕಡಲತಡಿ ತನಕ ದಂಡಿನ ರಾಜ್ಯದಿಂದ ಏಳು ಕಡಲಿನ ಗಡಿ ತನಕ ಇರುವಂತಹ ದೈವ ನಾನು, ನಂಬಿದಂತಹ ಸಂಸಾರವನ್ನು ಅಂದರೆ ಇಲ್ಲಿ ನಂಬಿದವನ ಜಾತಿ ಹೇಳಿಲ್ಲ ,ಬದಲಾಗಿ ಯಾರೇ ನಂಬಿದರೂ ಅವರನ್ನ ಮಾಯದ ರಕ್ಷಣೆಯಲ್ಲಿ ಕಾಪಾಡುತ್ತೇನೆ ಎಂದು ಹೇಳುತ್ತದೆ. ಇಲ್ಲಿ ಜಾತಿಯವಾದಕ್ಕೆ ಅವಕಾಶವಿದೆಯೇ? ಮತ್ತು ಯಾಕೇ ನಾವು ಒಂದು ಜಾತಿಯನ್ನು ಎತ್ತಿಕಟ್ಟಬೇಕು ನೀವೇ ಹೇಳಿ. ಮುಂಬೈಯ ಕೆಲವು ಜಾಗದಲ್ಲಿ ದೈವದ ಗುಡಿ, ನಾಗನ ಗುಡಿಗಳು ಇದ್ದಾವೆ. ಅಲ್ಲಿಕೋಲವಾಗುತ್ತದೆ. ಇದು ಮದಿಪು, ಕಾಂತಾರ, ಇಲ್ಲ ಶಿವದೂತ ಗುಳಿಗೆ ನಾಟಕದಲ್ಲಿ ಬಂದ ನಂತರವಾಗಿದ್ದಲ್ಲಾ ಹಲವು ವರುಷದ ಹಿಂದಿನಿಂದ ಇದೆ. ಆಗ ಯಾಕೆ ನಮ್ಮ ಹಿರಿಯರು ವಿರೋಧಿಸಿಲ್ಲ. ತುಳುನಾಡಿನ 9 ಚಲನಚಿತ್ರಕ್ಕೆ ರಾಷ್ಟ್ರೀಯ ರಾಜ್ಯ ಪ್ರಶಸ್ತಿ ಬಂದ ಚಿತ್ರಗಳೆಲ್ಲಾ ದೈವಕೋಲದ ಕತೆಗಳೇ. ಕಾಂತಾರ ಸೇರಿ. ಹಾಗಾದರೇ ಅದನ್ನು ನೋಡಿದ, ವೀಕ್ಷಕರು, ಜ್ಯೂರಿಗಳು ಯಾಕೆ ವಿರೋಧಿಸಿಲ್ಲ. ಅವರು ದಡ್ಡರೇ. ಅದರಿಂದ ದೈವರಾಧನೆ ಹೆಚ್ಚಾಗಿದೆ ಹೊರತು ಕಡಿಮೆ ಆಗಿಲ್ಲ ಅಲ್ವಾ. ವರುಷಕ್ಕೆ ಒಂದೋ ಎರಡು ಕೋಲ ಕಟ್ಟುತ್ತಿದ್ದವರು ಈಗ ಕುತ್ತಿಗೆ ಕೆಜಿ ಚಿನ್ನ ಹಾಕುವಷ್ಟು ದೈವಕೋಲ ಕಟ್ಟುತ್ತಿಲ್ಲವೇ. ದೈವಕೋಲ ಕಟ್ಟುವವರನ್ನು ದೈವದ ಚಾಕರಿಯವರು ಎಂದು ಕರೆಯುತ್ತಾರೆ ಚಾಕರಿ ಅಂದರೆ ಕೆಲಸ ಮಾಡುವವರು. ಇದರಲ್ಲಿ ಎಲ್ಲಾ ವರ್ಗ ಜಾತಿಯವರು ಸೇರುತ್ತಾರೆ. ದೈವಧಾರಿ ಸೇವೆ ಮಾಡುವುದ್ದಾದರೆ ಅವರು ಹಣ ಪಡೆಯುವಂತಿಲ್ಲ. ಚಾಕರಿ ಮಾಡುವುದ್ದಾರೆ ಅವರು ಹಣ ಪಡೆಯುತ್ತಾರೆ ಅಂದರೆ ಅದು ಕಲೆಯಾಗುತ್ತದೆ ಅಲ್ಲವೇ ಆ ಕಾರಣಕ್ಕೆ ಕೆಲವು ಕಲಾವಿದರಿಗೆ (ದೈವಧಾರಿಗಳಿಗೆ) ರಾಜ್ಯ, ರಾಷ್ಟ್ರ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಇದು ಹೇಗೆ ಈಗ ನಾನು ಇದನ್ನು ಕಲೆ ಅಂತನೇ ನೋಡಬೇಕಲ್ವಾ.
ದೈವಕೋಲ ನಡೆಯುವಾಗ ಇದೇ ಕಾಂತಾರದ, ಮದಿಪು ಚಿತ್ರದ ಹಾಡುಗಳನ್ನು ಕೋಲದಲ್ಲಿ ಬಳಸಿ ದೈವಧಾರಿ ಕುಣಿಯುವಾಗ ಯಾಕೇ ನಾವು ಯಾರು ವಿರೋಧಿಸಿಲ್ಲ. ಇದೇ ದೈವಧಾರಿಗಳು ಮೈಸೂರಿನಲ್ಲಿ ಹಾಗೂ ಬೆಂಗಳೂರಿನಲ್ಲಿ ಹೀಗೆ ತುಳುನಾಡಿನ ಮೇಲೆ ಘಟ್ಟದಲ್ಲಿ ಹೋಗಿ ದೈವಕೋಲ ಕಟ್ಟಿದವರು ಅದೇ ವರ್ಗದವರಲ್ಲವೇ. ಕಲಾವಿದರಲ್ಲವೇ? ಆಗ ಅದೇ ವರ್ಗದವರು ಯಾಕೆ ವಿರೋಧಿಸಿಲ್ಲ? ಆಗ ದೈವದ ಅಸ್ತಿತ್ವಕ್ಕೆ ತೊಂದರೆ ಆಗಿಲ್ಲವೇ ಹೇಳಿ. ನನ್ನಂತಹ ದೈವದ ಮೇಲೆ ನಂಬಿಕೆ ಇರುವ ದೈವ ಆರಾಧಕ ದೈವಕೋಲ ಮಾಡಲು ಶಕ್ತಿ ಇಲ್ಲದೇ ದೈವಕ್ಕೆ ಬರೀ ತಂಬಿಲ, ಅಗೇಲ್ ಮಾಡಿಕೊಂಡು ಬಂದವರು ಕಾಂತಾರ ಚಿತ್ರ ಬಂದ ನಂತರ ತುಳುನಾಡಿನಿಂದ ಹೊರಗಿರುವರು ತಮ್ಮ ಕುಟುಂಬದ ಜೊತೆಗೆ ಊರಿಗೆ ಬಂದು ತಮ್ಮ ದೈವಕ್ಕೆ ಕೋಲ ತಂಬಿಲ ಕೊಟ್ಟಿದ್ದು ಹೆಚ್ಚಾಗಿದೆಯಾ, ಕಮ್ಮಿಯಾಗಿದೆಯಾ. ತಿಳಿಸಿ. ಇದರಿಂದ ಒಂದಷ್ಟು ದೈವಕೋಲ ಕಟ್ಟುವ ಕಲಾವಿದರು ಬದುಕಿಗೆ ದಾರಿಯಾಗಿದೆ ಅಲ್ವಾ. ದೈವಕೋಲ ಕಟ್ಟುವ ಗ್ರಾಮದಿಂದ ಪಟ್ಟಿ ಕಟ್ಟಿಸಿಕೊಂಡ ದೈವಧಾರಿ ಹೊರಗೆ ಓಡಾಡುವಾಗ ಬಿಳಿ ಪಂಚೆ ಬಿಳಿ ಅಂಗಿ ಹೆಗಲ ಮೇಲೆ ಒಂದು ಚೀಲ, ಇದ್ದು ಅದರಲ್ಲಿ ಕಂಚಿನ ತಟ್ಟೆ ಲೋಟ ಇರಬೇಕು ಅದರಲ್ಲೇ ಊಟ ನೀರು ಕುಡಿಯಬೇಕು, ಈ ರೀತಿಯ ಕೆಲವು ಪದ್ದತಿಗಳು ಇವೆ ಎಂದು ಕೇಳಿದ್ದೀನಿ. ಈ ಕ್ರಮವನ್ನು ಎಷ್ಟು ಎಷ್ಟು ಜನ ನಡೆಸುತ್ತಾರೆ. ಒಂದು ನಾಟಕ ತಂಡದ ಸದಸ್ಯರನ್ನು ಒಟ್ಟು ಮಾಡಿ, ಅದರ ಜೊತೆಗೆ ನಾಟಕದ ಸೇಟ್ ಗಳನ್ನು, ಲೈಟ್ ಗಳನ್ನು ಜೊತೆಗೆ ಹಾಕಿಕೊಂಡು ಒಂದು ಬಸ್ ಮಾಡಿ ಒಂದು ಊರಿನಲ್ಲಿ ನಾಟಕ ಆಡಿದರೆ ಅವರಿಗೆ ಸಿಗುವುದು 30ರಿಂದ 35 ಸಾವಿರ. ಅದೇ ದೈವಕೋಲ ಕಟ್ಟುವ ಕಲಾವಿದನಿಗೆ 60ರಿಂದ 80 ಸಾವಿರ. ಹೀಗಿರುವಾಗ ಯಾಕೆ ಸ್ವಾಮಿ ಕಲಾವಿದರ ಮೇಲೆ ಸವಾರಿ. ಇಲ್ಲಿ ಗೊಂದಲದ ನನ್ನೊಳಗಿನ, ನಾನು ಹೇಳಿದ್ದ ಮಾತುಗಳು ತಪ್ಪು ಇದ್ದರೆ ಹೇಳಿ ತಿದ್ದಿಕೊಳ್ಳುವೆ.
ಬೆಂಗಳೂರು: ವಿಧಾನಸಭೆಯ ಅಧಿವೇಶನದಲ್ಲೂ (Assembly Session) ದೈವಾರಾಧನೆ (Daivaradhane) ವಿಚಾರ ಸದ್ದು ಮಾಡಿದೆ. ಪ್ರತಿಭಾ ಕಾರಂಜಿಯಲ್ಲಿ ದೈವಾರಾಧನೆ, ಕೋಲ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದ ಶಿಕ್ಷಣ ಇಲಾಖೆ ವಿರುದ್ಧ ಶಾಸಕ ಸುನೀಲ್ ಕುಮಾರ್ (Sunil Kumar) ಗರಂ ಆದರು.
ಅಧಿವೇಶನದ ಶೂನ್ಯ ವೇಳೆಯಲ್ಲಿ ದೈವಾರಾಧನೆ ಬಗ್ಗೆ ಪ್ರಸ್ತಾಪಿಸಿದ ಸುನೀಲ್ ಕುಮಾರ್, ದಕ್ಷಿಣ ಕನ್ನಡ ಸೇರಿದಂತೆ ಮೂರ್ನಾಲ್ಕು ಜಿಲ್ಲೆಗಳಲ್ಲಿ ದೈವಾರಾಧನೆ ಪದ್ಧತಿ ಇದೆ. ಶಿಕ್ಷಣ ಇಲಾಖೆಯು ಪ್ರತಿಭಾ ಕಾರಂಜಿಯಲ್ಲಿ ದೈವಾರಾಧನೆ, ಕೋಲ ಪ್ರದರ್ಶನ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಜನಪದ ನೃತ್ಯಗಳ ಜೊತೆಗೆ ದೈವಾರಾಧನೆ ಕೂಡ ಸೇರಿಸಲಾಗಿದೆ. ದೈವಾರಾಧನೆ ಪ್ರದರ್ಶನದ ವಸ್ತು ಅಲ್ಲ ಎಂದು ಗುಡುಗಿದರು. ಇದನ್ನೂ ಓದಿ: ನನ್ನ ಕನ್ನಡ ಹೆಚ್ಚು ಕಡಿಮೆ ಇರ್ಬೋದು, ಆದ್ರೆ ಪ್ರೀತಿಯ ಭಾಷೆ: ಖಾದರ್
ಶಿಕ್ಷಣ ಇಲಾಖೆ ಕೂಡಲೇ ಈ ಆದೇಶದಲ್ಲಿ ದೈವಾರಾಧನೆ, ಕೋಲ ಕೈಬಿಡಬೇಕು ಎಂದು ಒತ್ತಾಯ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa), ಆದೇಶದಲ್ಲಿ ಬದಲಾವಣೆ ಮಾಡುವುದಾಗಿ ಭರವಸೆ ನೀಡಿದರು.
ದೈವಾರಾಧನೆಯು ತುಳುನಾಡಿನ ಆರಾಧನೆಯಲ್ಲಿ ಪ್ರಮುಖವಾದದ್ದು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ದೈವಾರಾಧನೆ ಸಂಪ್ರದಾಯ ಆಚರಣೆಯಲ್ಲಿದೆ. ರಿಷಬ್ ಶೆಟ್ಟಿಯ ‘ಕಾಂತಾರ’ ಸಿನಿಮಾ ಬಂದ ನಂತರ ದೈವಾರಾಧನೆ ಸಂಸ್ಕೃತಿ ದೇಶ-ವಿದೇಶಗಳಲ್ಲಿ ಹೆಚ್ಚು ಚಿರಪರಿಚಿತವಾಯಿತು. ಇದನ್ನೂ ಓದಿ: ಕುಮಾರಸ್ವಾಮಿ ಯಾವತ್ತೂ ಹಿಟ್ & ರನ್ ಕೇಸ್ – ಸಿಎಂ ತಿರುಗೇಟು
ಸಿನಿಮಾದಿಂದ ಪ್ರೇರೇಪಿತರಾದ ಅನೇಕರು ದೈವಾರಾಧನೆಯನ್ನು ಅನುಕರಿಸಲು ಶುರು ಮಾಡಿದ್ದರು. ಕೆಲವರು ಇದನ್ನೇ ಧಂದೆ ಮಾಡಿಕೊಂಡಿದ್ದರು. ದೈವಾರಾಧನೆ ಮಹತ್ವದ ಬಗ್ಗೆ ತಿಳಿಸಿದ ಬಳಿಕ ಅನುಕರಣೆ, ಧಂದೆ ನಿಯಂತ್ರಣಕ್ಕೆ ಬಂತು. ಆದರೂ ಒಂದಲ್ಲಾ ಒಂದು ವಿಚಾರವಾಗಿ ದೈವಾರಾಧನೆ ಸುದ್ದಿಯಾಗುತ್ತಲೇ ಇದೆ.
ತುಳುನಾಡ ದೈವಾರಾಧನೆ ಹೆಸರಿನಲ್ಲಿ ದುಡ್ಡು ಮಾಡುವವರ ವಿರುದ್ಧ ದೈವಾರಾಧಕರು ತೊಡೆತಟ್ಟಿದ್ದಾರೆ. ಇನ್ಮುಂದೆ ವ್ಯಾಪಾರದ ಹೆಸರಿನಲ್ಲಿ ದೈವಾರಾಧನೆ ನಡೆಸಿದವರು, ಮುಂದೊಂದು ದಿನ ಕಾನೂನು ಕ್ರಮ ಹಾಗೂ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ದೈವಾರಾಧಕರು ತಿಳಿಸಿದ್ದಾರೆ. ದೈವಾರಾಧನೆ ಸಿನಿಮಾ ಮಾಡಿದರೆ, ಮುಲಾಜಿಲ್ಲದೇ ವಿರೋಧಿಸಲಾಗುವುದು ಎಂದಿದ್ದಾರೆ.
ದೈವದ ಕೋಲಾ (Buta Kola), ಸೇವೆಯ ಹೆಸರಿನಲ್ಲಿ ಲಕ್ಷಾಂತರ ರೂ. ಲೂಟಿ ಮಾಡುತ್ತಿದ್ದಾರೆ ಎಂದು ತುಳುನಾಡ ದೈವಾರಾಧನ ಸಂರಕ್ಷಣಾ ಯುವವೇದಿಕೆ, ದೈವಾರಾಧನ ಸಮಿತಿ ಬೆಳ್ತಂಗಡಿ, ಹಿಂದೂ ಸಂರಕ್ಷಣಾ ಸಮಿತಿಗಳು ಆರೋಪಿಸಿವೆ. ದೈವ ನಿಂದನೆ ಮಾಡಿ ದಂಧೆ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿವೆ. ಇದನ್ನೂ ಓದಿ: `ಗಾಲ್ವಾನ್ ಹಾಯ್’ ಎಂದ ನಟಿಗೆ ಚಳಿ ಬಿಡಿಸಿದ ಸಚಿವ – ಕಾನೂನು ಕ್ರಮಕ್ಕೆ ಚಿಂತನೆ
ಕರಾವಳಿ (Karavali) ಹೊರಗಿನ ದೈವಾರಾಧನೆ ವಿರುದ್ಧ ಮಂಗಳೂರಿನ ಜನ ಸಿಡಿದೆದ್ದಿದ್ದಾರೆ. ದೈವಗಳ ಹೆಸರಲ್ಲಿ ದಂಧೆಗೆ ಇಳಿದವರ ವಿರುದ್ಧ ಮಂಗಳೂರಿನ ಕುತ್ತಾರು ಬಳಿಕ ಕೊರಗಜ್ಜನ (Koragajja) ಆದಿಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ತುಳುನಾಡ ದೈವಾರಾಧನ ಸಂರಕ್ಷಣಾ ಯುವವೇದಿಕೆ, ದೈವಾರಾಧನ ಸಮಿತಿ ಬೆಳ್ತಂಗಡಿ, ಹಿಂದೂ ಸಂರಕ್ಷಣಾ ಸಮಿತಿ ಮಂಗಳೂರು (Mangaluru) ಹಾಗೂ ಸಮಸ್ತ ದೈವಾರಾಧಕರಿಂದ ಪ್ರಾರ್ಥನೆ ಸಲ್ಲಿಸಲಾಗಿದೆ. ಮೈಸೂರು ಮೂಲದ ಕೆಲ ಭಕ್ತರೂ ಆದಿ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಆದಿ ಸ್ಥಳ ಮತ್ತು ತುಳುನಾಡು ಹೊರತುಪಡಿಸಿ ಕೊರಗಜ್ಜನ ಪ್ರತಿಷ್ಠೆಗೆ ಅವಕಾಶ ಇಲ್ಲ. ಹೀಗಿದ್ದರೂ ರಾಜ್ಯದ ಕೆಲವೆಡೆ ಕೊರಗಜ್ಜನ ಹೆಸರಲ್ಲಿ ದಂಧೆ ನಡೆಯುತ್ತಿದೆ. ಕೊರಗಜ್ಜ ಆದಿಸ್ಥಳ ಬಿಟ್ಟು ಬೇರೆ ಕಡೆ ಆರಾಧನೆ ಮಾಡುತ್ತಿರೋದು ವ್ಯವಹಾರದ ಉದ್ದೇಶ. ಇದನ್ನ ತಡೆದ ಮೈಸೂರಿನ ಕೆಲವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಸಿನಿಮಾ ಮತ್ತು ಸಾಮಾಜಿಕ ತಾಣಗಳ ಕಾರಣದಿಂದ ಈ ದಂಧೆ ನಡೀತಾ ಇದೆ. ಇದನ್ನ ನಿಲ್ಲಿಸದೇ ಇದ್ದರೇ ಉಗ್ರ ಹೋರಾಟ ಮಾಡುವುದಾಗಿ ಕರಾವಳಿಯ ದೈವಾರಾಧಕರು ಎಚ್ಚರಿಕೆ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಉಡುಪಿ: ದೈವಾರಾಧಾನೆ ಹಿಂದುತ್ವದ ಭಾಗವಲ್ಲವೆಂದ ನಟ ಚೇತನ್ (Actor Chetan) ವಿರುದ್ಧ ಉಡುಪಿಯ ಕಾರ್ಕಳ ಪೊಲೀಸ್ ಠಾಣೆ (Karkala Police Station) ಯಲ್ಲಿ ದಾಖಲು ಮಾಡಲಾಗಿದೆ.
ಹಿಂದೂ ಜಾಗರಣಾ ವೇದಿಕೆ (Hindu Jagaran Vedike) ವತಿಯಿಂದ ಈ ದೂರು ದಾಖಲಿಸಲಾಗಿದೆ. ದೂರಿನಲ್ಲಿ ಚೇತನ್ ಹೇಳಿಕೆಯಿಂದ ಹಿಂದೂ ಧರ್ಮದ ನಂಬಿಕೆಗೆ ಧಕ್ಕೆ ಉಂಟಾಗಿದೆ. ಹೀಗಾಗಿ ನಟ ಚೇತನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಸಕ್ಸಸ್ ಸೀಕ್ರೆಟ್ ಬಗ್ಗೆ ತಂದೆ ಭಾಸ್ಕರ್ ಶೆಟ್ಟಿ ಮಾತು
ಚೇತನ್ ಹೇಳಿದ್ದೇನು..?: ಭೂತಕೋಲ, ದೈವಾರಾಧನೆ ಹಿಂದೂ ಸಂಸ್ಕೃತಿಯ ಭಾಗ ಎಂದು ನಿರ್ದೇಶಕ ರಿಷಬ್ ಶೆಟ್ಟಿ (Director Rishab Shetty) ಹೇಳಿದ್ದರು. ಕಾಂತಾರ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಈ ಹೇಳಿಕೆ ಮಹತ್ವ ಪಡೆದುಕೊಂಡಿತ್ತು. ಈ ಮಾತಿಗೆ ವಿರೋಧ ಎನ್ನುವಂತೆ ನಟ ಚೇತನ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ರೀತಿಯಲ್ಲಿ ಸಮರ್ಥನೆ ನೀಡಿದ್ದರು. ಭೂತಕೋಲವು ಹಿಂದೂ ಸಂಸ್ಕೃತಿಯೇ ಅಲ್ಲ ಎಂದು ವಿರೋಧಿಸಿದ್ದರು. ಈ ಕುರಿತು ಪರ ವಿರೋಧ ಚರ್ಚೆ ಕೂಡ ನಡೆದಿತ್ತು. ಇದಕ್ಕೆ ಚೇತನ್ ಮತ್ತೆ ಸ್ಪಷ್ಟನೆ ನೀಡಿದ್ದಾರೆ. ರಿಷಬ್ ಬಳಸಿದ `ಹಿಂದೂ ಸಂಸ್ಕೃತಿ’ ಪದಕ್ಕೆ ನನ್ನ ಆಕ್ಷೇಪಣೆ ಇದೆ ಎಂದಿದ್ದರು. ಚೇತನ್ ಹೇಳಿಕೆ ಬಾರೀಊ ವಿವಾದ ಸೃಷ್ಟಿಸಿತ್ತು.
ಈ ಬೆನ್ನಲ್ಲೇ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಚೇತನ್, ನಾನು ಚರ್ಚೆಯ ಮೂಲಕ ಗೆಲ್ಲಬೇಕು. ಸಂವಾದದ ಮೂಲಕ ಅರ್ಥ ಮಾಡಿಕೊಳ್ಳಬೇಕು. ನಾನು ಆಡಿದ ಮಾತುಗಳಲ್ಲಿ ಏನು ಸುಳ್ಳು ಇದೆ ಹೇಳಲಿ. ಯಾರಿಗೆ ನನ್ನನ್ನು ಸೋಲಿಸಲು ಆಗುವುದಿಲ್ಲವೋ, ಅವರು ಪೌರತ್ವದ ಬಗ್ಗೆ ಮಾತನಾಡುತ್ತಾರೆ. ನನ್ನ ಹುಟ್ಟು ನನ್ನ ಕೈಯಲ್ಲಿ ಇಲ್ಲ. ಯಾರ ಕೈಯಲ್ಲೂ ಇಲ್ಲ. ನಾನು ಯಾವಾಗಲೂ ಸತ್ಯದ ಪರವಾಗಿ ಇರುತ್ತೇನೆ. ಹಾಗಾಗಿ ಈ ರೀತಿಯ ಮಾತುಗಳನ್ನು ಕೇಳಿಸಿಕೊಳ್ಳುವುದು ಅನಿವಾರ್ಯ ಎಂದಿದ್ದರು. ಇದನ್ನೂ ಓದಿ: ಆಮದು ಮಾಡಿಕೊಂಡ ಧರ್ಮಗಳು ಎಂದು ಚೇತನ್ ಮತ್ತೆ ಕಿಡಿ
Live Tv
[brid partner=56869869 player=32851 video=960834 autoplay=true]