Tag: Daiva Nartaka

  • ಪೊಲೀಸ್ ಕಸ್ಟಡಿಯಲ್ಲಿ ದೈವ ನರ್ತಕರು: ಕೊರಗಜ್ಜ ಡೈರೆಕ್ಟರ್ ಹೇಳಿದ್ದೇನು?

    ಪೊಲೀಸ್ ಕಸ್ಟಡಿಯಲ್ಲಿ ದೈವ ನರ್ತಕರು: ಕೊರಗಜ್ಜ ಡೈರೆಕ್ಟರ್ ಹೇಳಿದ್ದೇನು?

    ದೈವ ನರ್ತಕರು (Daiva Narthaka)ತಮ್ಮ ಶೂಟಿಂಗ್ ಸೆಟ್ ಗೆ ತಲ್ವಾರ್ ಹಿಡಿದುಕೊಂಡು ಬಂದು ಬೆದರಿಸಿದ್ದಾರೆ ಎಂದು ಮೊನ್ನೆಯಷ್ಟೇ ‘ಕೊರಗಜ್ಜ’ (Koragajja) ಸಿನಿಮಾ ಟೀಮ್ ಪ್ರೆಸ್ ಮೀಟ್ ಮಾಡಿ ಆರೋಪ ಮಾಡಿತ್ತು. ‘ಕೊರಗಜ್ಜ’ ಹೆಸರಿನಲ್ಲಿ ಸಿನಿಮಾ ಮಾಡಬಾರದು ಎಂದು ದೈವ ನರ್ತಕರು ಬೆದರಿಸಿದ್ದಾರೆ. ಶೂಟಿಂಗ್ ಸೆಟ್ ಹಾಳು ಮಾಡಿದ್ದಾರೆ. ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಬೆದರಿಕೆ ಹಾಕಿದ್ದಾರೆ ಎಂದು ನಿರ್ದೇಶಕರು ಆರೋಪ ಮಾಡಿದ್ದರು.

    ಕಳಸದಲ್ಲಿ (Kalasa) ಕೊರಗಜ್ಜ ಸಿನಿಮಾದ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ನಲ್ಕೆ ಸಂಘದವರೆಂದು ಹೇಳಿಕೊಂಡ ವ್ಯಕ್ತಿಗಳು ಆಯುಧ ಹಿಡಿದುಕೊಂಡು ಬಂದು ಚಿತ್ರತಂಡದವರನ್ನು ಬೆದರಿಸಿದ್ದರು ಎನ್ನುವ ಆರೋಪವಿತ್ತು. ಈ ವಿಷಯ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿತ್ತು. ದೈವ ನರ್ತಕರನ್ನು ಕಳಸದ ಪೊಲೀಸ್ ಸ್ಟೇಷನ್ ಗೆ ಕರೆಯಿಸಿ ವಿಚಾರಣೆಗೆ ಒಳಪಡಿಸಲಾಗಿದೆಯಂತೆ. ಮುಂದಿನ ಪ್ರಕ್ರಿಯೆಗಾಗಿ ನಿನ್ನೆ ರಾತ್ರಿ ಕೇಸು ದಾಖಲಿಸುವ ಕುರಿತು ತಮಗೆ ಪೊಲೀಸ್ ಅಧಿಕಾರಿಗಳು ಕರೆ ಮಾಡಿದ್ದರು ಎಂದು ಸುಧೀರ್ ಅತ್ತಾವರ್ ತಿಳಿಸಿದ್ದಾರೆ.

    ಚಿತ್ರದ ನಿರ್ದೇಶಕರಾದ ಸುಧೀರ್ ಅತ್ತಾವರ್ (Sudhir Attavar) ಅವರಿಗೆ ಸರ್ಕಲ್ ಇನ್ಸ್ ಪೆಕ್ಟರ್ ರಾತ್ರಿ 9.30ಕ್ಕೆ ಕರೆ ಮುಂದಿನ ಕ್ರಮಕ್ಕಾಗಿ ದೂರು ನೀಡುವಂತೆ ತಿಳಿಸಿದ್ದಾರಂತೆ. ದೈವ ನರ್ತಕರೆನ್ನುವವರನ್ನು ಬಂಧಿಸದೆ ಅವರಿಗೆ ಬುದ್ದಿಹೇಳಿ ಬಿಟ್ಟುಬಿಡುವಂತೆ ನಿರ್ದೇಶಕ ಸುಧೀರ್ ಅತ್ತಾವರ್ ಮನವಿ ಮಾಡಿದ್ದಾರಂತೆ. ಆದರೆ ಮಂಗಳೂರು ಮತ್ತು ಕಳಸದಲ್ಲಿ ಇಂತಹ ಗೂಂಡಾಗಿರಿಗೆ ಪ್ರಚೋದಿಸಿ, ದೈವ ನರ್ತಕರನ್ನು ಗೂಂಡಾಯಿಸಂಗೆ ಪ್ರಚೋದಿಸಿ ಚಿತ್ರೀಕರಣಕ್ಕೆ ಅಪಾರಹಾನಿ ಮಾಡಲು ಕುಮ್ಮಕ್ಕು ನೀಡುತ್ತಿರುವ ‘ಕತ್ತಲೆ’ ಎನ್ನುವ ವ್ಯಕ್ತಿಯಾರು ಎನ್ನುವುದನ್ನು ಪತ್ತೆಹಚ್ಚಲು ನಿರ್ದೇಶಕರು ಮನವಿ ಮಾಡಿದ್ದಾರಂತೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೈವ ನರ್ತಕರಿಗೆ ಮಾಸಾಶನ – ವೀರಗಾಸೆ ಕುಣಿತ ಮಾಡುವ ನಮಗೂ ಕೊಡಿ ಪುರವಂತರು ಒತ್ತಾಯ

    ದೈವ ನರ್ತಕರಿಗೆ ಮಾಸಾಶನ – ವೀರಗಾಸೆ ಕುಣಿತ ಮಾಡುವ ನಮಗೂ ಕೊಡಿ ಪುರವಂತರು ಒತ್ತಾಯ

    ಬೆಳಗಾವಿ: ಪುರಾತನ ಕಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ಕರ್ನಾಟಕದಲ್ಲಿನ ವೀರಭದ್ರ ಅಥವಾ ವೀರಗಾಸೆ (Veeragase) ಕುಣಿತ ಮಾಡುವವರಿಗೂ ಮಾಸಾಶನ (Pension) ನೀಡುವಂತೆ ಪುರವಂತರು (Puravantharu) ಒತ್ತಾಯಿಸಿದ್ದಾರೆ.

    ಕರಾವಳಿ (Karavali) ಭಾಗದ ದೈವ ನರ್ತಕರಿಗೆ (Daiva Nartaka) ರಾಜ್ಯ ಸರ್ಕಾರದಿಂದ ಮಾಸಾಶನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪುರವಂತರೊಬ್ಬರು, ವೀರಗಾಸೆ ಮಾಡುವ ಪುರವಂತರಿಗೂ ಮಾಸಾಶನ ನೀಡಬೇಕು. ಅನಾದಿ ಕಾಲದಿಂದಲೂ ರಥೋತ್ಸವ, ಗುಗ್ಗಳೋತ್ಸವದಲ್ಲಿ ಪುರವಂತರು ಭಾಗಿಯಾಗುತ್ತಾರೆ. ಪುರಾತನ ಕಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕೆಂದು ರಾಜ್ಯ ಸರ್ಕಾರಕ್ಕೆ ವೀರಗಾಸೆ ಮಾಡುವ ಪುರವಂತರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ‘ಹೆಡ್ ಬುಷ್’ ಸಿನಿಮಾದಲ್ಲಿ ವೀರಗಾಸೆಗೆ ಅವಮಾನ: ಡಾಲಿ ಧನಂಜಯ್ ಸ್ಪಷ್ಟನೆ

    ಗುಗ್ಗಳೋತ್ಸವ, ರಥೋತ್ಸವ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗುತ್ತೇವೆ. ಇದು ಪುರಾತನ ಕಾಲದಿಂದ ಬಂದ ವೀರಭದ್ರ ದೇವರ ಕಲೆಯಾಗಿದೆ. ಉತ್ತರ ಕರ್ನಾಟಕದ ವೀರಗಾಸೆ ಪುರವಂತರಿಗೂ ಸರ್ಕಾರ ಮಾಸಾಶನ ನೀಡಬೇಕು. ಆಯಾ ಊರಿನಲ್ಲಿ ಪುರವಂತರು ಇದ್ದಾರೆ. ಈ ಕಲೆ ನಾಶ ಮಾಡದೇ ಮುಂದುವರಿಸಿದ್ದಾರೆ. ಪ್ರತ್ಯೇಕ ತಾಲೂಕಿನಲ್ಲಿಯೂ ವೀರಗಾಸೆ ಕಲಾವಿದರ ಸಂಘವಿದೆ. ವೀರಗಾಸೆ ಪುರವಂತರ ಕಲೆ ಮೆಚ್ಚಿ ಮಾಸಾಶನ ನೀಡಬೇಕು. ಎಷ್ಟೋ ಜನ 60 ವರ್ಷ ಮೀರಿದ ವೀರಗಾಸೆ ಪುರವಂತರಿದ್ದಾರೆ. ಹೀಗಾಗಿ ಅವರಿಗೂ ಸಹ ಮಾಸಾಶನ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದು ಬೆಳಗಾವಿಯಲ್ಲಿ (Belagavi) ವೀರಗಾಸೆ ಕಲಾವಿದ ಪಂಚಾಕ್ಷರಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಸಂಭ್ರಮದಿಂದ ನಡೆದ ಮಲೆ ಮಹದೇಶ್ವರ ದೀಪಾವಳಿ ರಥೋತ್ಸವ

    ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲೂ (Social Media) ವೀರಗಾಸೆ ಕುಣಿತ ಮಾಡುವ ಕಲಾವಿದರಿಗೆ ಬೆಂಬಲ ಕೇಳಿ ಬರುತ್ತಿದ್ದು, ಕರಾವಳಿಯ ದೈವ ನರ್ತಕರಿಗೆ ಮಾಸಾಶನ ನೀಡಿದ್ದಕ್ಕೆ ನಮ್ಮ ಸ್ವಾಗತವಿದೆ. ಉತ್ತರ ಕರ್ನಾಟಕದಲ್ಲಿ ವೀರಭದ್ರ ಅಥವಾ ವೀರಗಾಸೆ ಕುಣಿತ ಮಾಡುವವರಿಗೂ ಮಾಸಾಶನ ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]