Tag: daily horoscop

  • ದಿನ ಭವಿಷ್ಯ: 13-11-2023

    ದಿನ ಭವಿಷ್ಯ: 13-11-2023

    ಪಂಚಾಂಗ:
    ಶ್ರೀ ಶೋಭಕೃತ್ ನಾಮ ಸಂವತ್ಸರ,
    ದಕ್ಷಿಣಾಯನ, ಶರದ್ ಋತು
    ಆಶ್ವಯುಜ ಮಾಸ, ಕೃಷ್ಣ ಪಕ್ಷ,
    ವಾರ: ಸೋಮವಾರ, ತಿಥಿ : ಅಮಾವಾಸ್ಯೆ,
    ನಕ್ಷತ್ರ: ವಿಶಾಖ
    ರಾಹುಕಾಲ: 7.46 ರಿಂದ 9.13
    ಗುಳಿಕಕಾಲ: 1.34 ರಿಂದ 3.01
    ಯಮಗಂಡಕಾಲ: 10.40 ರಿಂದ 12.07

    ಮೇಷ: ಪರಸ್ಥಳವಾಸ ಚಿಂತೆ, ಮಿತ್ರರಿಂದ ಸಹಾಯ, ಶರೀರದಲ್ಲಿ ಆತಂಕ, ಶತ್ರು ದ್ವಂಸ, ದುಷ್ಟ ಜನರಿಂದ ದೂರವಿರಿ.

    ವೃಷಭ: ಅಧಿಕಾರಿಗಳಿಂದ ಗೊಂದಲ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಮನಕ್ಲೇಶ, ಆಕಸ್ಮಿಕ ಖರ್ಚು, ನಿಂದನೆ.

    ಮಿಥುನ: ಯತ್ನ ಕಾರ್ಯಗಳಲ್ಲಿ ಜಯ, ಧನ ಲಾಭ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಬಂಧುಗಳಲ್ಲಿ ವೈಮನಸ್ಸು.

    ಕಟಕ: ಅಮೂಲ್ಯ ವಸ್ತು ಖರೀದಿ, ವಾಹನ ರಿಪೇರಿ, ಹಣದ ಅಡಚಣೆ, ಚಂಚಲ ಮನಸ್ಸು, ವಿವಾಹಕ್ಕೆ ತೊಂದರೆ.

    ಸಿಂಹ: ಎಲ್ಲಿ ಹೋದರೂ ಅಶಾಂತಿ, ಧನವ್ಯಯ, ತೀರ್ಥ ಯಾತ್ರೆಯ ದರ್ಶನ, ಉದ್ಯೋಗದಲ್ಲಿ ಕಿರಿಕಿರಿ.

    ಕನ್ಯಾ: ಕೋರ್ಟ್ ಕೆಲಸದಲ್ಲಿ ವಿಳಂಬ, ವಸ್ತ್ರ ಖರೀದಿ, ಮನಸ್ಸಿನಲ್ಲಿ ಭಯ, ಅಧಿಕ ಖರ್ಚು, ಅಲ್ಪ ಗಳಿಕೆ.

    ತುಲಾ: ವಿರೋಧಿಗಳಿಂದ ಕುತಂತ್ರ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ದೂರ ಪ್ರಯಾಣ.

    ವೃಶ್ಚಿಕ: ಭ್ರಾತೃಗಳಿಂದ ತೊಂದರೆ, ದ್ರವ್ಯ ಲಾಭ, ಅಕಾಲ ಭೋಜನ, ರಾಜಕೀಯದಲ್ಲಿ ಗೊಂದಲ.

    ಧನಸ್ಸು: ದೈವಾನುಗ್ರಹದಿಂದ ಕೆಲಸಗಳಲ್ಲಿ ಜಯ, ಆಕಸ್ಮಿಕ ಧನ ಲಾಭ, ಕೃಷಿಕರಿಗೆ ಲಾಭ, ಸ್ತ್ರೀ ಸೌಖ್ಯ.

    ಮಕರ: ವಿವಾದಗಳಿಂದ ದೂರವಿರಿ, ನೆಮ್ಮದಿ ಇರುವುದಿಲ್ಲ, ಶತ್ರು ಬಾಧೆ.

    ಕುಂಭ: ಮಕ್ಕಳಿಂದ ಸಂತಸ, ಸಾಲ ಮರುಪಾವತಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಅತಿಯಾದ ನಿದ್ರೆ.

    ಮೀನ: ಕುತಂತ್ರದಿಂದ ಹಣ ಸಂಪಾದನೆ, ಚೋರ ಭಯ, ತಿರುಗಾಟ, ಕಾರ್ಯ ಸಾಧನೆ, ಕುಟುಂಬ ಸೌಖ್ಯ.

  • ದಿನ ಭವಿಷ್ಯ: 22-09-2023

    ದಿನ ಭವಿಷ್ಯ: 22-09-2023

    ಪಂಚಾಂಗ:
    ಶ್ರೀ ಶೋಭಕೃತನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷಋತು,
    ಭಾದ್ರಪದ ಮಾಸ, ಶುಕ್ಲ ಪಕ್ಷ,
    ಸಪ್ತಮಿ/ಅಷ್ಟಮಿ, ಶುಕ್ರವಾರ,
    ಜೇಷ್ಠ ನಕ್ಷತ್ರ/ಮೂಲ ನಕ್ಷತ್ರ.
    ರಾಹುಕಾಲ: 10:45 ರಿಂದ 12:16
    ಗುಳಿಕಕಾಲ: 07:43 ರಿಂದ 09:14
    ಯಮಗಂಡಕಾಲ: 03:18 ರಿಂದ 04:49

    ಮೇಷ: ಸಾಲದ ಚಿಂತೆ, ಆರೋಗ್ಯದಲ್ಲಿ ವ್ಯತ್ಯಾಸ, ಶತ್ರುಗಳ ಕಾಟ, ಸಂಗಾತಿಯಿಂದ ಅಂತರ.

    ವೃಷಭ: ಆರ್ಥಿಕವಾಗಿ ಪ್ರಗತಿ, ಕುಟುಂಬದಿಂದ ಸಹಕಾರ, ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ, ಆರೋಗ್ಯದಲ್ಲಿ ಚೇತರಿಕೆ.

    ಮಿಥುನ: ಅವಕಾಶ ಕೈತಪ್ಪುವುದು, ಅಧಿಕ ಉತ್ಸಾಹ, ಸ್ಥಿರಾಸ್ತಿಯಿಂದ ನಷ್ಟ, ಮಕ್ಕಳಿಗೋಸ್ಕರ ಖರ್ಚು.

    ಕಟಕ: ಅಧಿಕ ಖರ್ಚು, ಲಾಭದ ಪ್ರಮಾಣ ಕುಂಠಿತ, ನಿದ್ರಾಭಂಗ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

    ಸಿಂಹ: ಆರ್ಥಿಕವಾಗಿ ಉತ್ತಮ ಬೆಳವಣಿಗೆ, ಕುಟುಂಬದಿಂದ ಸಹಕಾರ, ಉತ್ತಮ ಪ್ರಶಂಸೆ, ಬಂಧುಗಳಿಗಾಗಿ ಖರ್ಚು.

    ಕನ್ಯಾ: ಗೌರವಕ್ಕೆ ಧಕ್ಕೆ, ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು, ಅನಗತ್ಯ ಖರ್ಚು, ಅಧಿಕ ಒತ್ತಡ ಮತ್ತು ಕೋಪ ತಾಪ.

    ತುಲಾ: ಉಳಿತಾಯದಲ್ಲಿ ಹಿನ್ನಡೆ, ಪ್ರಯಾಣದಲ್ಲಿ ಅನುಕೂಲ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರದಲ್ಲಿ ಹಿನ್ನಡೆ ಮತ್ತು ಅಧಿಕ ಒತ್ತಡ.

    ವೃಶ್ಚಿಕ: ಅನಿರೀಕ್ಷಿತ ಲಾಭ, ಅಧಿಕಾರಿಗಳಿಂದ ಉತ್ತಮ ಸಹಕಾರ, ಆರ್ಥಿಕವಾಗಿ ಸ್ವಲ್ಪ ಚೇತರಿಕೆ.

    ಧನಸ್ಸು: ತಂದೆಯಿಂದ ಅನುಕೂಲ, ಉದ್ಯೋಗ ಪ್ರಾಪ್ತಿ, ದೇವತಾ ಕೆಲಸಗಳಲ್ಲಿ ಆಸಕ್ತಿ, ಕೋರ್ಟ್ ಕೇಸ್‍ಗಳ ಚಿಂತೆ.

    ಮಕರ: ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಾಸ, ಸಾಲದ ಚಿಂತೆ, ಆತ್ಮಸಂಕಟ, ಕೋರ್ಟ್ ಕೇಸ್‍ಗಳಲ್ಲಿ ಸೋಲು, ಮಾನಸಿಕ ಒತ್ತಡ.

    ಕುಂಭ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಕೋರ್ಟ್ ಕೇಸ್‍ಗಳಲ್ಲಿ ಅನಾನುಕೂಲ, ಪ್ರಯಾಣದಲ್ಲಿ ವಿಘ್ನ, ಆರೋಗ್ಯ ಸುಧಾರಣೆ.

    ಮೀನ: ಸಂಗಾತಿಯೊಂದಿಗೆ ಮನಸ್ತಾಪ, ಸ್ಥಿರಾಸ್ತಿ ಮೇಲೆ ಸಾಲದ ಆಲೋಚನೆ, ಆರೋಗ್ಯ ವಿಷಯದಲ್ಲಿ ಜಾಗೃತಿ, ಆರ್ಥಿಕವಾಗಿ ಕಷ್ಟದ ದಿವಸ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]