Tag: Daily

  • ನ್ಯೂಸ್ ಪೇಪರ್ ಓದುತ್ತಿದ್ದಂತೆಯೇ ವ್ಯಕ್ತಿ ಸಾವು

    ನ್ಯೂಸ್ ಪೇಪರ್ ಓದುತ್ತಿದ್ದಂತೆಯೇ ವ್ಯಕ್ತಿ ಸಾವು

    ಜೈಪುರ: ದಿನಪತ್ರಿಕೆ (News Paper) ಓದುತ್ತಿದ್ದಂತೆಯೇ ವ್ಯಕ್ತಿಯೊಬ್ಬರು ಕ್ಲಿನಿಕ್‍ನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ದಿಲೀಪ್ ಕುಮಾರ್ ಮದನಿ(61) ಎಂದು ಗುರುತಿಸಲಾಗಿದೆ. ಹಲ್ಲು ನೋವಿನ ಸಮಸ್ಯೆಯಿಂದ ಡೆಂಟಿಸ್ಟ್ ಕ್ಲಿನಿಕ್‍ಗೆ ವ್ಯಕ್ತಿ ಭೇಟಿ ನೀಡಿದ್ದರು. ಈ ವೇಳೆ ಕುರ್ಚಿ ಮೇಲೆ ಕುಳಿತು ತಮ್ಮ ಸರದಿಗಾಗಿ ಕಾಯುತ್ತಿದ್ದ ವ್ಯಕ್ತಿ ದಿನಪತ್ರಿಕೆಯನ್ನು ಓದುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿ ನಿಮಿಷದಲ್ಲಿಯೇ ಕುಸಿದು ಬಿದ್ದಿದ್ದಾರೆ. ಈ ವೇಳೆ ದಿಲೀಪ್ ಕುಮಾರ್ ಅವರ ಸಹಾಯಕ್ಕೆ ಬಂದ ಕ್ಲಿನಿಕ್ ಸಿಬ್ಬಂದಿ, ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೇಳಿದ್ದ ಬೆನ್ನಲ್ಲೇ ಇದೀಗ ಕನಕದಾಸ ಜಯಂತಿಗೂ ಮನವಿ

    ಈ ಘಟನೆಯ ಸಂಪೂರ್ಣ ದೃಶ್ಯ ಕ್ಲಿನಿಕ್‍ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ದಿಲೀಪ್ ಕುಮಾರ್ ಮದನಿ ಅವರು ಗಾರ್ಮೆಂಟ್ಸ್ ನಡೆಸುತ್ತಿದ್ದು, ಗುಜರಾತ್‍ನ (Gujrat) ಸೂರತ್ (Surat) ನಿವಾಸಿಯಾಗಿದ್ದಾರೆ. ಆದರೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನವೆಂಬರ್ 4 ರಂದು ಬಾರ್ಮರ್‌ಗೆ (Barmer)  ಬಂದಿದ್ದರು. ಹಲ್ಲು ನೋವಿದ್ದರಿಂದ ನವೆಂಬರ್ 5 ರಂದು ಚೇಕ್ ಅಪ್‍ಗೆಂದು ಕ್ಲಿನಿಕ್‍ಗೆ ಭೇಟಿ ನೀಡಿದ್ದರು. ಆದರೆ ವೈದ್ಯರನ್ನು ಭೇಟಿಯಾಗುವುದಕ್ಕೂ ಮುನ್ನವೇ ಪ್ರಜ್ಞೆ ತಪ್ಪಿ ನೆಲದ ಮೇಲೆ ಕುಸಿದು ಬಿದ್ದಿದ್ದರು.

    ಈ ಘಟನೆ ಸಂಬಂಧ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಕ್ಲಿನಿಕ್ ಮಾಲೀಕ ಡಾ ಕಪಿಲ್ ಜೈನ್ ಅವರು, ಮೊದಲು ಈ ಬಗ್ಗೆ ದಿಲೀಪ್ ಕುಮಾರ್ ಮದನಿ ಕುಟುಂಬಸ್ಥರೊಂದಿಗೆ ಮಾತನಾಡದೇ ಏನನ್ನೂ ಹೇಳಲು ಸಾಧ್ಯವಿಲ್ಲ. ವ್ಯಕ್ತಿ ಕುಸಿದು ಬಿದ್ದ ತಕ್ಷಣ ಕ್ಲಿನಿಕ್ ಸಿಬ್ಬಂದಿ ಅವರನ್ನು ಟ್ಯಾಕ್ಸಿಯಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಂಗಳೂರು ಸೆಂಟ್ರಲ್ ಮಾರ್ಕೆಟ್‌ನ ನೀಲನಕ್ಷೆಯಲ್ಲಿ ಬೀಫ್ ಸ್ಟಾಲ್ – ಬಿಜೆಪಿ ವಿರುದ್ಧ ಹಿಂದೂ ಸಂಘಟನೆಗಳ ಆಕ್ರೋಶ

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ : 12-06-2022

    ದಿನ ಭವಿಷ್ಯ : 12-06-2022

    ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ
    ಉತ್ತರಾಯಣ, ಗ್ರೀಷ್ಮ ಋತು
    ಜೇಷ್ಠ ಮಾಸ, ಶುಕ್ಲ ಪಕ್ಷ
    ರಾಹುಕಾಲ : 05:09 – 06:45
    ಗುಳಿಕಕಾಲ : 03:32 – 05:09
    ಯಮಗಂಡಕಾಲ : 12:19 – 01:56
    ವಾರ : ಭಾನುವಾರ
    ನಕ್ಷತ್ರ : ವಿಶಾಖ ನಕ್ಷತ್ರ

    ಮೇಷ : ಮಾನಸಿಕ ನೋವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆಸ್ತಿಗಾಗಿ ಕೋರ್ಟ್ಗೆ ಅಲೆದಾಟ

    ವೃಷಭ : ದಾಂಪತ್ಯದಲ್ಲಿ ಆಲಸ್ಯ, ಉದ್ಯೋಗದ ಭರವಸೆ, ಸಂಗಾತಿಯಿಂದ ಅದೃಷ್ಟ

    ಮಿಥುನ : ಸಾಲ ಮಾಡುವ ಸಂಭವ, ಕುಟುಂಬ ಸಮೇತ ಪ್ರಯಾಣ, ಮಾತಿನಿಂದ ಶತ್ರುಗಳು ಅಧಿಕ

    ಕಟಕ : ಪ್ರೀತಿ ಪ್ರೇಮ ವಿಚಾರದಲ್ಲಿ ಅಡೆತಡೆ, ಆರೋಗ್ಯ ಸಮಸ್ಯೆಗಳು, ಕುಲದೇವರ ದರ್ಶನ

    ಸಿಂಹ : ನೆರೆಹೊರೆಯವರೊಡನೆ ಕಿರಿಕಿರಿ, ಸಹೋದರರೊಂದಿಗೆ ವೈರತ್ವ, ಮಕ್ಕಳಿಗೆ ಉನ್ನತ ಹುದ್ದೆ ಪ್ರಾಪ್ತಿ

    ಕನ್ಯಾ : ಕುಟುಂಬದ ಸಮಸ್ಯೆಗಳಿಂದ ಮುಕ್ತಿ, ಉತ್ತಮ ಧನಾಗಮನ, ಮಾನಸಿಕ ನೆಮ್ಮದಿ ಪ್ರಾಪ್ತಿ

    ತುಲಾ : ವಾಹನದಿಂದ ಪೆಟ್ಟು, ಅವಕಾಶ ವಂಚಿತರಾಗುವಿರಿ, ಮಾನಸಿಕವಾಗಿ ಕುಪಿತರಾಗುವಿರಿ

    ವೃಶ್ಚಿಕ : ಅಧಿಕ ನಿದ್ರೆ,  ಆತ್ಮೀಯರು ದೂರ, ಕುಟುಂಬಕ್ಕೆ ನಷ್ಟ

    ಧನು : ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಮಕ್ಕಳಿಂದ ಅನುಕೂಲ, ಅಧಿಕ ಖರ್ಚು

    ಮಕರ : ಆರೋಗ್ಯ ವ್ಯತ್ಯಾಸದಿಂದ ಸಮಸ್ಯೆ, ಉದ್ಯೋಗದಲ್ಲಿ ತೊಂದರೆ, ವೈರಿಗಳಿಂದ ದೂರವಿರಿ

    ಕುಂಭ : ಪತ್ರ ವ್ಯವಹಾರಗಳಿಂದ ಸಂಕಷ್ಟ, ಪ್ರಯಾಣದಲ್ಲಿ ತೊಂದರೆ, ದೇವತಾಕಾರ್ಯಗಳಿಗೆ ಅಡೆತಡೆ

    ಮೀನ : ಆರ್ಥಿಕವಾಗಿ ಕುಂಠಿತ, ಅನಗತ್ಯ ಮಾತಿನಿಂದ ಸಮಸ್ಯೆ, ಪತ್ರ ವ್ಯವಹಾರಗಳಲ್ಲಿ ಹಿನ್ನಡೆ

  • ದಿನ ಭವಿಷ್ಯ: 10-06-2022

    ದಿನ ಭವಿಷ್ಯ: 10-06-2022

    ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಶುಕ್ಲ ಪಕ್ಷ,
    ರಾಹುಕಾಲ: 10:47 ರಿಂದ 12:23
    ಗುಳಿಕಕಾಲ: 07:35 ರಿಂದ 09:11
    ಯಮಗಂಡಕಾಲ: 03:30 ರಿಂದ 05: 11
    ವಾರ: ಶುಕ್ರವಾರ
    ನಕ್ಷತ್ರ: ಚಿತ್ತಾ ನಕ್ಷತ್ರ
    ತಿಥಿ: ದಶಮಿ / ಉಪರಿ ಏಕಾದಶಿ,

    ಮೇಷ: ಮಕ್ಕಳಿಂದ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಕಾನೂನುಬಾಹಿರ ಚಟುವಟಿಕೆಗಳು ದೇವತಾ ಕಾರ್ಯಗಳಿಗೆ ಅಡೆತಡೆ.

    ವೃಷಭ: ಸಂಗಾತಿಯಿಂದ ನೋವು ಮತ್ತು ನಿರಾಸೆ ಆಕಸ್ಮಿಕ ಘಟನೆ ಮರುಕಳಿಸುವುದು,  ಅಧಿಕ ನಷ್ಟ, ಯಂತ್ರೋಪಕರಣಗಳಿಂದ ಪೆಟ್ಟು.

    ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ಸಂಕಷ್ಟ, ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯಿಂದ ನೋವು.

    ಕಟಕ: ಆರ್ಥಿಕ ನಷ್ಟ,ಸ್ವಯಂಕೃತಾಪರಾಧದಿಂದ ನೋವು, ಅವಕಾಶಗಳು ಕೈ ತಪ್ಪುವುದು, ಅಧಿಕಾರಿಗಳಿಂದ ಸಮಸ್ಯೆ.

    ಸಿಂಹ: ಕೆಲಸ ಕಾರ್ಯದಲ್ಲಿ ಜಯ, ಅನಿರೀಕ್ಷಿತ ಪ್ರಯಾಣ, ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಯಶಸ್ಸು, ಭೂ ವ್ಯವಹಾರಗಳಿಂದ ಧನಾಗಮನ.

    ಕನ್ಯಾ: ಆಕಸ್ಮಿಕ ಅಪಘಾತ ಎಚ್ಚರಿಕೆ, ಬಂಧು ಬಾಂಧವರಿಂದ ನಷ್ಟ, ಪಿತ್ರಾರ್ಜಿತ ಆಸ್ತಿಗಾಗಿ ಕೋರ್ಟ್‌ಗೆ ಅಲೆದಾಟ.

    ತುಲಾ: ಸಂಗಾತಿಯಿಂದ ನೋವು, ಪಾಲುದಾರಿಕೆಯಲ್ಲಿ ಲಾಭ, ಕಾರ್ಯ ನಿಮಿತ್ತ ಪ್ರಯಾಣ.

    ವೃಶ್ಚಿಕ: ಉದ್ಯೋಗದಿಂದ ಧನಾಗಮನ, ಅಧಿಕಾರಿಗಳಿಂದ ಪ್ರಶಂಸೆ, ಗೌರವಕ್ಕೆ ಧಕ್ಕೆ, ವ್ಯವಹಾರದಲ್ಲಿ ಸಮಸ್ಯೆ.

    ಧನಸ್ಸು: ಪ್ರೀತಿ ಪ್ರೇಮ ವಿಷಯದಲ್ಲಿ ಜಯ, ಮಕ್ಕಳಿಂದ ಅನುಕೂಲ, ಗರ್ಭಿಣಿಯರು ಎಚ್ಚರಿಕೆ, ದೇವತಾ ಕಾರ್ಯಗಳಲ್ಲಿ ತೊಡಗುವಿರಿ, ತಂದೆಯಿಂದ ಅನುಕೂಲ.

    ಮಕರ: ಕೋರ್ಟ್ ಮೆಟ್ಟಿಲೇರುವ ಸಂದರ್ಭ, ವೇಗದ ಚಾಲನೆಯಿಂದ ಸಮಸ್ಯೆ, ನಿದ್ರಾಭಂಗ, ಉನ್ನತ ಅಧಿಕಾರಿಗಳಿಂದ ಸಮಸ್ಯೆ.

    ಕುಂಭ: ದಾಯಾದಿಗಳಿಂದ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಉದ್ಯೋಗ ಲಾಭ.

    ಮೀನ: ಮಕ್ಕಳಿಂದ ಧನಾಗಮನ, ಪ್ರಯಾಣದಲ್ಲಿ ಅಡೆತಡೆ, ತಂದೆಯಿಂದ ನೋವು,ಆರೋಗ್ಯದಲ್ಲಿ ವ್ಯತ್ಯಾಸ ಮನೆಯ ವಾತಾವರಣದಲ್ಲಿ ಆತಂಕ.

  • ದಿನ ಭವಿಷ್ಯ: 31-05-2022

    ದಿನ ಭವಿಷ್ಯ: 31-05-2022

    ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ ,
    ರಾಹುಕಾಲ: 3.32 ರಿಂದ 5.08
    ಗುಳಿಕಕಾಲ: 12.20 ರಿಂದ 1.56
    ಯಮಗಂಡಕಾಲ: 9.08 ರಿಂದ 10.44
    ವಾರ: ಮಂಗಳವಾರ,
    ತಿಥಿ:  ಪಾಡ್ಯ,
    ನಕ್ಷತ್ರ: ರೋಹಿಣಿ
    ಯೋಗ: ದೃತಿ
    ಕರಣ: ಬವ

    ಮೇಷ: ಈ ದಿನ ದುಂದುವೆಚ್ಚಗಳಿಗೆ ಕಡಿವಾಣ, ಶತ್ರು ಬಾಧೆ ನಿವಾರಣೆ, ಪಂಚಾಂಗ, ರಾಶಿ, ಭವಿಷ್ಯರಣೆ, ಉನ್ನತ ಶಿಕ್ಷಣದಲ್ಲಿ ಪ್ರಗತಿ, ವಿದೇಶ ಪ್ರಯಾಣ.

    ವೃಷಭ: ಈ ದಿನ ಜನರ ಬೆಂಬಲ ನಿಮಗೆ ಹೆಚ್ಚುವುದು, ನಿರೀಕ್ಷೆಗೆ ತಕ್ಕಂತೆ ಆದಾಯ, ಸರ್ಕಾರಿ ಕೆಲಸಗಳಿಗೆ ಓಡಾಟ.

    ಮಿಥುನ: ಈ ದಿನ ಹಣಕಾಸು ವಿಚಾರದಲ್ಲಿ ಎಚ್ಚರ, ಮಾನಸಿಕ ಚಿಂತೆ.. ವೃತ್ತಿಯಲ್ಲಿ ಸಣ್ಣಪುಟ್ಟ ತೊಂದರೆ, ಅಸಮಾಧಾನ.

    ಕಟಕ: ಈ ದಿನ ವಾಹನದಿಂದ ಲಾಭ, ಪರಿಚಿತರಿಂದ ಮೋಸ.. ಎಚ್ಚರ, ವೆಚ್ಚಗಳ ಬಗ್ಗೆ ಜಾಗ್ರತೆ ವಹಿಸಿ.

    ಸಿಂಹ: ಈ ದಿನ ಯತ್ನ ಕಾರ್ಯಗಳಲ್ಲಿ ಜಯ, ಕ್ರಯವಿಕ್ರಯದಲ್ಲಿ ಅಲ್ಪ ಲಾಭ, ಮನಕ್ಲೇಷ, ವ್ಯವಹಾರದಲ್ಲಿ ಜಾಣ್ಮೆಯಿಂದ ವರ್ತಿಸುವುದು ಉತ್ತಮ.

    ಕನ್ಯಾ: ಈ ದಿನ ಸ್ವಯಂ ಸಾಮರ್ಥ್ಯದಿಂದ ಅವಕಾಶ ಪಡೆದುಕೊಳ್ಳುವಿರಿ, ಅಲ್ಪ ಲಾಭ ಅಧಿಕ ಖರ್ಚು, ವಾಹನ ಖರೀದಿ, ಜಮೀನು ವಿಷಯಗಳ ಇತ್ಯರ್ಥ.

    ತುಲಾ: ಈ ದಿನ ಮಾಡಿದ ಕಾರ್ಯಗಳಿಂದ ಪಶ್ಚಾತಾಪ ಪಡುವಿರಿ, ರಾಜಕೀಯ ವ್ಯಕ್ತಿಗಳ ಭೇಟಿ, ಸೇವಕ ವರ್ಗದಿಂದ ತೊಂದರೆ.

    ವೃಶ್ಚಿಕ: ಈ ದಿನ ಚಂಚಲ ಮನಸ್ಸು, ಮನೋವ್ಯಥೆ, ಅನಾರೋಗ್ಯ, ಆಲಸ್ಯ, ಸ್ಥಳ ಬದಲಾವಣೆ, ಬಂಧುಮಿತ್ರರಲ್ಲಿ ವಿರೋಧ.

    ಧನಸು: ಈ ದಿನ ಹೆಚ್ಚು ತಿರುಗಾಟ, ದುಷ್ಟರಿಂದ ತೊಂದರೆ, ಸಗಟು ವ್ಯಾಪಾರದಲ್ಲಿ ಅಧಿಕ ಲಾಭ, ಆಲೋಚಿಸಿ ನಿರ್ಣಯ ಕೈಗೊಳ್ಳುವುದು ಸೂಕ್ತ.

    ಮಕರ: ಈ ದಿನ ತಾತ್ಕಾಲಿಕ ಸಮಸ್ಯೆಗಳು ಬಗೆಹರಿಯಲಿವೆ, ಮನೆ ನಿರ್ಮಾಣದ ಕೆಲಸಗಳಿಗಾಗಿ ಖರ್ಚು, ದಾಂಪತ್ಯದಲ್ಲಿ ಕಲಹ.

    ಕುಂಭ: ಈ ದಿನ ಉದ್ಯೋಗ ಕ್ಷೇತ್ರದಲ್ಲಿ ಸಹವರ್ತಿಗಳಿಂದ ತೊಂದರೆ, ಮನೆಯಲ್ಲಿ ಶುಭ ಸಮಾರಂಭ

    ಮೀನ: ಈ ದಿನ ಕಮಿಷನ್ ಏಜೆಂಟ್‌ಗಳಿಗೆ ನಷ್ಟ, ಆರೋಗ್ಯದಲ್ಲಿ ಏರುಪೇರು, ಶತ್ರು ಬಾಧೆ, ದ್ರವ್ಯಲಾಭ, ಸ್ತ್ರೀಯರಿಗೆ ಅನುಕೂಲ

  • ದಿನ ಭವಿಷ್ಯ: 23-02-2021

    ದಿನ ಭವಿಷ್ಯ: 23-02-2021

    ರಾಹುಕಾಲ : 3.34 ರಿಂದ 5.03
    ಗುಳಿಕಕಾಲ : 12.37 ರಿಂದ 2.06
    ಯಮಗಂಡಕಾಲ : 9.40 ರಿಂದ 11.09

    ಮಂಗಳವಾರ, ಏಕಾದಶಿ ತಿಥಿ, ಆರಿದ್ರ ನಕ್ಷತ್ರ
    ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು
    ಮಾಘ ಮಾಸ, ಶುಕ್ಲ ಪಕ್ಷ

    ಮೇಷ: ಕೆಲಸ ಕಾರ್ಯಗಳಲ್ಲಿ ವಿಳಂಬ, ಅಧಿಕ ಖರ್ಚು, ಗೌರವ ಪ್ರಾಪ್ತಿ, ಮನಸ್ಸಿಗೆ ಶಾಂತಿ, ವ್ಯಾಪಾರದಲ್ಲಿ ಲಾಭ.

    ವೃಷಭ: ಸ್ಥಳ ಬದಲಾವಣೆ, ದಾಯಾದಿಗಳ ಕಲಹ, ಮಿತ್ರರಿಂದ ತೊಂದರೆ, ವಾಹನ ಲಾಭ, ಅನಗತ್ಯ ತಿರುಗಾಟ.

    ಮಿಥುನ: ಸ್ಥಿರಾಸ್ತಿ ಸಂಪಾದನೆ, ವಿದೇಶ ಪ್ರಯಾಣ, ಉದ್ಯೋಗದಲ್ಲಿ ಪ್ರಗತಿ, ಯತ್ನ ಕಾರ್ಯಗಳಲ್ಲಿ ಅನುಕೂಲ, ಅಧಿಕ ಹಣ ಖರ್ಚು.

    ಕಟಕ: ಭೂ ಲಾಭ, ಸಲ್ಲದ ಅಪವಾದ, ಶ್ರಮಕ್ಕೆ ತಕ್ಕ ಫಲ, ಆರೋಗ್ಯ ಸಮಸ್ಯೆ, ಶುಭಕಾರ್ಯಕ್ಕೆ ಅಡೆತಡೆ.

    ಸಿಂಹ: ಕುಟುಂಬ ಸೌಖ್ಯ, ಮಾನಸಿಕ ನೆಮ್ಮದಿ, ಆದಾಯಕ್ಕಿಂತ ಖರ್ಚು ಹೆಚ್ಚು, ಕಾರ್ಯಸಾಧನೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.

    ಕನ್ಯಾ: ಹಿತಶತ್ರುಗಳಿಂದ ತೊಂದರೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಮಾನಸಿಕ ವ್ಯಥೆ, ಬಂಧು ಮಿತ್ರರಿಂದ ಸಹಾಯ.

    ತುಲಾ: ಸ್ಥಳ ಬದಲಾವಣೆ, ಕೃಷಿಯಲ್ಲಿ ಪ್ರಗತಿ, ಕೋರ್ಟ್ ಕೇಸ್‍ಗಳಲ್ಲಿ ಅಡಚಣೆ, ದುಷ್ಟರಿಂದ ಕಿರುಕುಳ ಸಾಧ್ಯತೆ, ಮಾಡುವ ಕೆಲಸದಲ್ಲಿ ಎಚ್ಚರ.

    ವೃಶ್ಚಿಕ: ತೀರ್ಥಕ್ಷೇತ್ರ ದರ್ಶನ, ಅಧಿಕವಾದ ಖರ್ಚು, ಅಲ್ಪ ಧನಲಾಭ, ಇಲ್ಲ ಸಲ್ಲದ ಅಪವಾದ, ಚಂಚಲ ಮನಸ್ಸು.

    ಧನಸ್ಸು: ಮಂಗಳ ಕಾರ್ಯದಲ್ಲಿ ಭಾಗಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಧನವ್ಯಯ, ಮನಸ್ಸಿನಲ್ಲಿ ನಾನಾ ಚಿಂತೆ.

    ಮಕರ: ವ್ಯವಹಾರಗಳಲ್ಲಿ ಸಾಧಾರಣ ಲಾಭ, ಚೋರಾಗ್ನಿ ಭೀತಿ, ವಿಪರೀತ ಹಣ ವ್ಯಯ, ಅತಿಯಾದ ನಿದ್ರೆ, ಕೆಲಸ ಕಾರ್ಯಗಳಲ್ಲಿ ವಿಳಂಬ.

    ಕುಂಭ: ವಿವಾಹ ಯೋಗ, ಅಧಿಕವಾದ ಖರ್ಚು, ಶತ್ರುಗಳ ಭಯ, ಕೆಲಸಗಳಲ್ಲಿ ಅಪಜಯ, ಋಣ ವಿಮೋಚನೆ.

    ಮೀನ: ಪಾಪ ಕಾರ್ಯಗಳಲ್ಲಿ ಆಸಕ್ತಿ, ದುಷ್ಟಬುದ್ಧಿ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಅಕಾಲ ಭೋಜನ, ಅನ್ಯರಲ್ಲಿ ವೈಮನಸ್ಸು.

     

     

  • ದಿನ ಭವಿಷ್ಯ 4-12-2020

    ದಿನ ಭವಿಷ್ಯ 4-12-2020

    ರಾಹುಕಾಲ 10:47 ರಿಂದ 12:13
    ಗುಳಿಕಕಾಲ 7:55 ರಿಂದ 09:21
    ಯಮಗಂಡಕಾಲ 03:05 ರಿಂದ 4:31

    ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
    ಶರದ್ ಋತು, ಕಾರ್ತಿಕಮಾಸ,ಕೃಷ್ಣಪಕ್ಷ, ಶುಕ್ರವಾರ,
    ಪುನರ್ವಸು ನಕ್ಷತ್ರ /ಪುಷ್ಯ ನಕ್ಷತ್ರ.

    ಮೇಷ: ಆರ್ಥಿಕ ಅನುಕೂಲಗಳು, ತಂದೆಯಿಂದ ಸಹಾಯ, ಪ್ರಯಾಣದಲ್ಲಿ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ದಾನ ಧರ್ಮಗಳಿಗೆ ಅಧಿಕ ಖರ್ಚು, ವ್ಯಾಪಾರದಲ್ಲಿ ಅಧಿಕ ಧನ ಸಂಪಾದನೆ, ಬಂಧುಗಳಿಂದ ಮಾನಹಾನಿ.

    ವೃಷಭ: ಅನಿರೀಕ್ಷಿತವಾಗಿ ಸಾಲ ಮಾಡುವಿರಿ, ಸ್ತ್ರೀಯರಿಂದ ಮಾನ ಅಪಮಾನಗಳು, ಗೌರವಕ್ಕೆ ಧಕ್ಕೆ ಆರೋಗ್ಯದಲ್ಲಿ ವ್ಯತ್ಯಾಸ ಮಿತ್ರರಿಂದ ಸಹೋದರನಿಂದ ನಷ್ಟ ಕೆಲಸಗಾರರು ಸೇವಕರು ದೊರೆಯುವರು. ಬಂಧು ಬಾಂಧವರಿಂದ ಧನಸಹಾಯ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

    ಮಿಥುನ: ಶುಭಕಾರ್ಯಗಳ ಆಲೋಚನೆ ಮಕ್ಕಳ ಭವಿಷ್ಯದ ಚಿಂತೆ ವ್ಯಾಪಾರ ವ್ಯವಹಾರ ತಯಾರಿ ಮುನ್ಸೂಚನೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಾರ್ಯಜಯ ಉದ್ಯೋಗ ಪ್ರಗತಿ.

    ಕಟಕ: ಅನಾರೋಗ್ಯ ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ ಮಾಡುವ ಚಿಂತನೆ, ತಾಯಿಂದ ಅನುಕೂಲ, ಆಸ್ತಿ ಸಮಸ್ಯೆಗಳು ಬಗೆಹರಿಯುವುದು, ಹಿರಿಯರ ಮಧ್ಯಸ್ಥಿಕೆಯಿಂದ ಸಮಸ್ಯೆ ಪರಿಹಾರ.

    ಸಿಂಹ: ಮಕ್ಕಳಲ್ಲಿ ಪ್ರಗತಿ ನೆರೆಹೊರೆಯವರಿಂದ ಬಂಧುಗಳಿಂದ ಸಹಕಾರ ಪ್ರಯಾಣದಲ್ಲಿ ಅಡೆತಡೆಗಳು ಸ್ನೇಹಿತರಿಂದ ಸಹಾಯ ದುಃಸ್ವಪ್ನಗಳು ಉದ್ಯೋಗ ಬದಲಾವಣೆ ಯೋಜನೆ.

    ಕನ್ಯಾ: ಮಾತಿನಿಂದ ಕುಟುಂಬದಿಂದ ಭಾದೆ, ಉದ್ಯೋಗ ಸಮಸ್ಯೆಗಳಿಗೆ ಮುಕ್ತಿ, ಶುಭಕಾರ್ಯ ತಯಾರಿ ಯೋಚನೆ, ವಸ್ತು ವಾಹನ ಖರೀದಿಯ ಸಮಯ ಮುಂದೂಡುವಿರಿ, ಸ್ವಯಂಕೃತಾಪರಾಧದಿಂದ ಮಹಿಳೆಯರಿಂದ ನಿಂದನೆ.

    ತುಲಾ: ಸಾಲ ಭಾದೆ, ಸ್ವಯಂಕೃತಾಪರಾಧದಿಂದ ವ್ಯಾಪಾರ ವ್ಯವಹಾರದಲ್ಲಿ ನಷ್ಟ. ತಂದೆಯಿಂದ ಅಪವಾದ ಪ್ರಯಾಣದಲ್ಲಿ ಮೋಸ ಬಂಧುಗಳ ಆಗಮನ.

    ವೃಶ್ಚಿಕ: ಧನ ನಷ್ಟ, ಜಿಪುಣತನ ಪ್ರದರ್ಶನ, ಅದೃಷ್ಟ ಕೈ ತಪ್ಪುವುದು, ದೂರ ಪ್ರದೇಶದಿಂದ ಧನಾಗಮನ, ಮಕ್ಕಳಿಗಾಗಿ ಅಧಿಕ ಖರ್ಚು, ಸ್ಥಿರಾಸ್ತಿ ವಾಹನಕ್ಕಾಗಿ ನಷ್ಟ, ಸೋಲು ನಷ್ಟ, ನಿರಾಸೆಯಿಂದ ಭವಿಷ್ಯ ಮಂಕು, ದುಷ್ಟ ವ್ಯಕ್ತಿಗಳ ಸಹವಾಸ.

    ಧನಸ್ಸು: ಮಿತ್ರರಿಂದ ಆರ್ಥಿಕ ಲಾಭ ಪಾಲುದಾರಿಕೆಯಲ್ಲಿ ಅನುಕೂಲ, ಸ್ನೇಹಿತರಿಂದ ಸಂಕಷ್ಟ, ಉದ್ಯೋಗ ಬದಲಾವಣೆಯಿಂದ ತೊಂದರೆ, ಸಂಗಾತಿಯಿಂದ ನೆರವು, ಶುಭಕಾರ್ಯಗಳ ಚರ್ಚೆ, ದುಷ್ಟ ಆಲೋಚನೆಗಳು ಆರೋಗ್ಯ ಸಮಸ್ಯೆ.

    ಮಕರ: ಪ್ರೀತಿ-ಪ್ರೇಮದ ಆಯ್ಕೆಯಲ್ಲಿ ತಪ್ಪು ನಿರ್ಧಾರ, ಮಾನಸಿಕವಾಗಿ ದೈವ ಚಿಂತನೆ, ಸಂಗಾತಿಯಿಂದ ನಷ್ಟ, ಉದ್ಯೋಗ ಕಳೆದುಕೊಳ್ಳುವ ಭೀತಿ, ಉದ್ಯೋಗ ಸ್ಥಳದಲ್ಲಿ ಗೌರವಕ್ಕೆ ಧಕ್ಕೆ, ಉದ್ಯೋಗ ಕಾರಣ ಅಥವಾ ಆರ್ಥಿಕ ಸಹಾಯಕ್ಕಾಗಿ ಪ್ರಯಾಣ.

    ಕುಂಭ: ತಂದೆಯಿಂದ ಆರ್ಥಿಕ ಸಹಾಯ, ಉದ್ಯೋಗ ಮತ್ತು ಸ್ಥಳ ಬದಲಾವಣೆಯಿಂದ ಅನುಕೂಲ, ಮಿತ್ರರಿಂದ ಉತ್ತಮ ಅವಕಾಶಗಳು, ಆರ್ಥಿಕ ಸಮಸ್ಯೆ ಬಗೆಹರಿಯುವ ಸೂಚನೆ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಆಹಾರ ವ್ಯತ್ಯಾಸದಿಂದ ಅನಾರೋಗ್ಯ.

    ಮೀನ: ಅನಿರೀಕ್ಷಿತವಾಗಿ ಬಂದಂತಹ ಅವಕಾಶಗಳು ಕೈ ತಪ್ಪುವುದು, ಉದ್ಯೋಗದಲ್ಲಿ ಒತ್ತಡಗಳು, ಸಂಗಾತಿಯಿಂದ ಕಿರಿಕಿರಿ ಮತ್ತು ಬೇಸರ, ತಾಯಿಯೊಂದಿಗೆ ವಾಗ್ವಾದ, ವಿದ್ಯಾಭ್ಯಾಸದಲ್ಲಿ ಅನುಕೂಲ ಅನಿರೀಕ್ಷಿತ ಧನಸಂಪತ್ತು.

  • ಪ್ರತಿ ದಿನ ಬರೋಬ್ಬರಿ 20 ಕೋಟಿ ಗಳಿಸುತ್ತೆ ಪಬ್‍ಜಿ!

    ಪ್ರತಿ ದಿನ ಬರೋಬ್ಬರಿ 20 ಕೋಟಿ ಗಳಿಸುತ್ತೆ ಪಬ್‍ಜಿ!

    ನವದೆಹಲಿ: ಸದ್ಯ ಎಲ್ಲಡೆ ಸುದ್ದಿಯಲ್ಲಿರುವ ಹೆಸರಾಂತ ಗೇಮ್ ಪಬ್‍ಜಿ, ಈ ಯುದ್ಧಭೂಮಿಯ ಗೇಮ್ ಕಂಡುಹಿಡಿದಿರುವ ಕಂಪನಿ ದಿನಕ್ಕೆ ಬರೋಬ್ಬರಿ 20 ಕೋಟಿ ರೂ. ಲಾಭ ಪಡೆಯುತ್ತಿದೆ ಎಂದು ಸೂಪರ್ ಡಾಟಾ ತಿಳಿಸಿದೆ.

    ಹೌದು, ಇತ್ತೀಚಿಗೆ ಯುವ ಪೀಳಿಗೆಯವರಲ್ಲಿ ಸಖತ್ ಕ್ರೇಜ್ ಹುಟ್ಟಿಸಿರೋ ಗೇಮ್ ಅಂದ್ರೆ ಪಬ್‍ಜಿ. ಈ ಗೇಮ್ ಆಡುವವರು ಎಷ್ಟು ಲಾಭ ಪಡೆದಿದ್ದಾರೋ ಗೊತ್ತಿಲ್ಲ. ಆದ್ರೆ ಯುವ ಪೀಳಿಗೆ ಪ್ರತಿದಿನ ಈ ಗೇಮ್ ಆಡುತ್ತಿರುವುದರಿಂದ ಕಂಪನಿಗೆ ಮಾತ್ರ ಸಖತ್ತಾಗಿ ಲಾಭವಾಗುತ್ತಿದೆ. ಎಲ್ಲೆಡೆ ಪಬ್‍ಜಿ ಗೇಮ್ ಮೂಡಿಸಿರುವ ಕ್ರೇಜ್‍ನಿಂದ್ ಕಂಪನಿ ಮಾತ್ರ ತನ್ನ ಖಜಾನೆಯನ್ನು ಆರಾಮಾಗಿ ತುಂಬಿಸಿಕೊಳ್ಳುತ್ತಿದೆ ಅಂದರೆ ತಪ್ಪಾಗಲ್ಲ. ಯಾಕೆಂದರೇ ಪಬ್‍ಜಿ ಗೇಮ್ ಕಂಪನಿಗೆ ತಂದು ಕೊಟ್ಟ ಲಾಭ ಅಷ್ಟಿದೆ. ಏನಿಲ್ಲಾ ಅಂದರೂ ಪ್ರತಿ ದಿನ ಪಬ್‍ಜಿ ಗೇಮ್ 20 ಕೋಟಿ ರೂ. ಗಳಿಕೆ ಮಾಡುತ್ತಿದೆ.

    ಸೂಪರ್ ಡಾಟಾದ ಪ್ರಕಾರ, 2018ರಲ್ಲಿ ಪಬ್‍ಜಿ ಗೇಮ್ ಕಂಪನಿ ಬರೋಬ್ಬರಿ 7 ಸಾವಿರ ಕೋಟಿ ರೂ. ವಾರ್ಷಿಕ ಆದಾಯ ಗಳಿಸಿತ್ತು. ಅಂದರೆ ದಿನಕ್ಕೆ ಸರಿಸುಮಾರು 20 ಕೋಟಿ ರೂ. ಅಲ್ಲದೆ 2018ರ ನವೆಂಬರ್ ಒಂದೇ ತಿಂಗಳಲ್ಲಿ ಪಬ್‍ಜಿಯಿಂದ ಕಂಪನಿ 32.5 ಮಿಲಿಯಲ್ ಡಾಲರ್(230 ಕೋಟಿ ರೂ.) ಲಾಭ ಗಳಿಸಿತ್ತು. ಅಂದಿನಿಂದ ಪಬ್‍ಜಿ ಕಂಪನಿಗೆ ದಿನಕ್ಕೆ ಕನಿಷ್ಠ 28 ಕೋಟಿ ರೂ. ಆದಾಯ ಬರುತ್ತಿದೆ. ಅಂದರೆ ಪ್ರತಿ ಗಂಟೆಗೆ 1 ಕೋಟಿಗೂ ಅಧಿಕ ಹಣವನ್ನು ಕಂಪನಿ ಸಲೀಸಾಗಿ ಗಳಿಸುತ್ತಿದೆ.

    ಏನಿದು ಪಬ್ ಜಿ?
    ಪಬ್ ಜಿ ಎನ್ನುವುದು ಒಂದು ಬ್ಯಾಟಲ್ ಫೀಲ್ಡ್ ಗೇಮ್ (ಯುದ್ಧ ಭೂಮಿ ಆಟ). ಈ ಆಟದ ಸಂಪೂರ್ಣ ಭೂಪಟವನ್ನು ಆಟಗಾರಿಗೆ ಮೊದಲು ತೋರಿಸಲಾಗುತ್ತದೆ. ಬಳಿಕ ಆಟಗಾರರು ತಮಗೆ ಬೇಕಾದ ಪ್ರದೇಶವನ್ನು ಆಯ್ದುಕೊಂಡು ಆ ಪ್ರದೇಶಕ್ಕೆ ವಿಮಾನದಿಂದ ಕೆಳಗೆ ಹಾರಿ ಮನೆಗಳತ್ತ ಓಡ್ತಾರೆ. ಆಟಗಾರರಿದ್ದ ಪ್ರದೇಶದಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳನ್ನು, ಮೆಡಿಕಲ್ ಕಿಟ್‍ಗಳನ್ನು, ಯುದ್ಧಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಆಯ್ದುಕೊಂಡು ಮುಂದೆ ಸಾಗುತ್ತಾರೆ. ಆಟಗಾರರು ಇಳಿದ ಪ್ರದೇಶದ ಸುತ್ತ ವೃತ್ತವೊಂದು ಸಣ್ಣದಾಗುತ್ತೆ. ಆಗ ಅಲ್ಲಿದ್ದ ನೂರಾರು ಜನರ ಜೊತೆ ಹೋರಾಡಿ ಉಳಿದರೇ ಗೆದ್ದಂತೆ, ಮೃತಪಟ್ಟರೆ ಸೋತಂತೆ. ಈ ಆಟದ ವಿಶೇಷ ಏನೆಂದರೆ ಸ್ನೇಹಿತರ ಜೊತೆ ಸೇರಿ ಆಡಬಹುದು.

    ಸದ್ಯ ಗುಜರಾತ್‍ನಲ್ಲಿ ಪಬ್‍ಜಿ ಗೇಮ್ ಬ್ಯಾನ್ ಮಾಡಲಾಗಿದ್ದು, ಅಲ್ಲಿ ಈ ಗೇಮ್ ಆಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೂ ಕೂಡ ಪಬ್‍ಜಿ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಈ ಗೇಮ್ ಆಡುವವವರ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತಾಗಿ ಕಡಿಮೆಯಾಗುತ್ತಿಲ್ಲ.

  • ದಿನ ಭವಿಷ್ಯ: 27-01-2019

    ದಿನ ಭವಿಷ್ಯ: 27-01-2019

    ಪಂಚಾಂಗ:
    ಶ್ರೀ ವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯಮಾಸ,
    ಶುಕ್ಲ ಪಕ್ಷ, ಸಪ್ತಮಿ ತಿಥಿ,
    ಭಾನುವಾರ, ಚಿತ್ತ ನಕ್ಷತ್ರ

    ರಾಹುಕಾಲ: ಸಂಜೆ 4:57 ರಿಂದ 6:23
    ಗುಳಿಕಕಾಲ: ಮಧ್ಯಾಹ್ನ 3:30 ರಿಂದ 4:57
    ಯಮಗಂಡಕಾಲ: ಮಧ್ಯಾಹ್ನ 12:36 ರಿಂದ 2:03

    ಮೇಷ: ಕೆಲಸ ಕಾರ್ಯಗಳಲ್ಲಿ ಮಂದಗತಿ, ಧನ ಲಾಭ, ಸ್ಥಿರಾಸ್ತಿ ಖರೀದಿ, ಮಾರಾಟ ಪ್ರತಿನಿಧಿಗಳಿಗೆ ಉತ್ತಮ ಆದಾಯ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ಮನಃಕ್ಲೇಷ, ರಾಜಕೀಯ ಕ್ಷೇತ್ರದಲ್ಲಿ ಗುಪ್ತವಾಗಿ ಬದಲಾವಣೆ.

    ವೃಷಭ: ಕೆಲಸದಲ್ಲಿ ಒತ್ತಡ, ಸಹೋದ್ಯೋಗಿಗಳಿಂದ ತೊಂದರೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸುವುದು, ಬಂಧುಗಳಿಂದ ಅಧಿಕ ದ್ರವ್ಯಲಾಭ, ಪಾಲುದಾರಿಕೆಯ ಮಾತುಕತೆ, ರೇಷ್ಮೆ ವಸ್ತ್ರ ವ್ಯಾಪಾರಿಗಳಿಗೆ ಲಾಭ, ದೈನಂದಿನ ಕೆಲಸಗಳಲ್ಲಿ ಬದಲಾವಣೆ.

    ಮಿಥುನ: ಸ್ನೇಹಿತರಿಂದ ಸಹಾಯ, ಆತ್ಮೀಯರೊಂದಿಗೆ ಬಾಂಧವ್ಯ ವೃದ್ಧಿ, ಮನೆಯಲ್ಲಿ ನೆಮ್ಮದಿ, ಶಿಕ್ಷಕರಿಗೆ ಅಧಿಕವಾದ ಒತ್ತಡ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ, ವ್ಯಾಪಾರದಲ್ಲಿ ನಷ್ಟ, ಅರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

    ಕಟಕ: ಪ್ರಚಾರ ಕಾರ್ಯಗಳಲ್ಲಿ ಭಾಗಿ, ವೈಯುಕ್ತಿ ವಿಚಾರಗಳಲ್ಲಿ ಗಮನಹರಿಸಿ, ಮನಃಕ್ಲೇಷ, ಬುದ್ಧಿವಂತಿಕೆಯಿಂದ ಕಾರ್ಯ ಸಾಧನೆ, ವಿವಾಹದ ಮಾತುಕತೆ, ಅನಿರೀಕ್ಷಿತ ಪ್ರಯಾಣ, ಮಾನಸಿಕ ಒತ್ತಡ.

    ಸಿಂಹ: ಮಕ್ಕಳೊಂದಿಗೆ ದೂರ ಪ್ರಯಾಣ, ವಾಣಿಜ್ಯೋದ್ಯಮಿಗಳಿಗೆ ಅನುಕೂಲ, ಉದ್ಯೋಗದಲ್ಲಿ ಉತ್ತಮ ವಹಿವಾಟು, ಆರೋಗ್ಯದ ಕಡೆ ಗಮನಹರಿಸಿ, ಅನಾವಶ್ಯಕ ಮಾತುಗಳಿಂದ ದೂರವಿರಿ.

    ಕನ್ಯಾ: ಉದ್ಯೋಗದಲ್ಲಿ ಸ್ಥಳ ಬದಲಾವಣೆ, ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಸಿಗುವ ಸಾಧ್ಯತೆ, ಆದಾಯಕ್ಕಿಂತ ಖರ್ಚು ಹೆಚ್ಚು, ಆರೋಗ್ಯದಲ್ಲಿ ಏರುಪೇರು, ಇಷ್ರ್ಟಾರ್ಥ ಸಿದ್ಧಿಸುವುದು, ಮಾನಸಿಕ ನೆಮ್ಮದಿ, ಅಕಾಲ ಭೋಜನ, ನಿದ್ರಾಭಂಗ.

    ತುಲಾ: ಹೊಸ ಯೋಜನೆಗಳ ಬಗ್ಗೆ ಆಲೋಚಿಸಿ, ಅಧಿಕ ಕೆಲಸದಿಂದ ವಿಶ್ರಾಂತಿ ಬಯಸುವಿರಿ, ವ್ಯವಹಾರದಲ್ಲಿ ಆಕಸ್ಮಿಕ ಧನಾಗಮನ, ತಂದೆಗೆ ಅನಾರೋಗ್ಯ, ವಿದ್ಯಾರ್ಥಿಗಳಲ್ಲಿ ಪ್ರಗತಿ.

    ವೃಶ್ಚಿಕ: ಮನೆಯವರ ಮಾತಿಗೆ ಮನ್ನಣೆ ನೀಡಿ, ನಿರುದ್ಯೋಗಿಗಳಿಗೆ ಉತ್ತಮ ಅವಕಾಶ, ವಸ್ತ್ರ ಉದ್ಯಮಸ್ಥರಿಗೆ ಲಾಭ, ಪ್ರೀತಿ ಪಾತ್ರರ ಆಗಮನ, ರೈತರಿಗೆ ಆಕಸ್ಮಿಕ ನಷ್ಟ, ದಾಂಪತ್ಯದಲ್ಲಿ ವಿರಸ, ಆರೋಗ್ಯದಲ್ಲಿ ಏರುಪೇರು, ಚಂಚಲ ಮನಸ್ಸು.

    ಧನಸ್ಸು: ಉತ್ತಮ ಸ್ಥಾನಮಾನ ಲಭಿಸುವುದು, ಮನಸ್ಸಿಗೆ ಸಂತಸ, ವಾಹನ ಮಾರಾಟಗಾರರಿಗೆ ಲಾಭ, ಮಾನಸಿಕ ನೆಮ್ಮದಿ, ಪರರಿಗೆ ಸಹಾಯ, ವ್ಯವಹಾರದಲ್ಲಿ ಗಮನಹರಿಸಿ, ವೃತ್ತಿ ಕ್ಷೇತ್ರದಲ್ಲಿ ಬೆಳವಣಿಗೆ, ಹಿರಿಯರಿಂದ ಆಶೀರ್ವಾದ.

    ಮಕರ: ಬದುಕಿಗೆ ಉತ್ತಮ ತಿರುವು, ವಿದೇಶ ಪ್ರಯಾಣ, ಸಿಹಿ ಸುದ್ದಿ ಕೇಳುವಿರಿ, ಸ್ಥಿರಾಸ್ತಿ ಸಂಪಾದನೆಗೆ ಉತ್ತಮ ಅವಕಾಶ, ಮನೆಯಲ್ಲಿ ಶುಭ ಕಾರ್ಯ, ಮೇಲಾಧಿಕಾರಿಗಳಿಂದ ಪ್ರಶಂಸೆ, ದೈವಾನುಗ್ರಹದಿಂದ ಕಾರ್ಯ ಸಿದ್ಧಿ.

    ಕುಂಭ: ಕೈಗೊಂಡ ಕಾರ್ಯಗಳಲ್ಲಿ ವಿಳಂಬ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ದಾಂಪತ್ಯದಲ್ಲಿ ಸಂತೋಷ, ಕೃಷಿಕರಿಗೆ ಲಾಭ, ಪ್ರೇಮಿಗಳಿಗೆ ಮನೆಯಲ್ಲಿ ಸಹಕಾರ, ಸಂತಸದ ಸುದ್ದಿ ಕೇಳುವಿರಿ, ಸ್ವಂತ ಉದ್ಯಮಸ್ಥರಿಗೆ ಲಾಭ.

    ಮೀನ: ಆರ್ಥಿಕ ವ್ಯವಹಾರದಲ್ಲಿ ಉತ್ತಮ, ಕೌಟುಂಬಿಕ ಸಮಸ್ಯೆಗಳು ಇತ್ಯರ್ಥ, ವೃತ್ತಿ ರಂಗದಲ್ಲಿ ಹೊಸ ಅವಕಾಶ, ಮಿತ್ರರಿಂದ ದ್ರೋಹ, ವಿದೇಶ ವ್ಯವಹಾರಗಳಲ್ಲಿ ನಷ್ಟ, ಆರೋಗ್ಯದಲ್ಲಿ ಏರುಪೇರು, ಶರೀರದಲ್ಲಿ ಆಯಾಸ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv