Tag: daiji film

  • ವಿಷ್ಣು ಸಮಾಧಿ, ಕರ್ನಾಟಕ ರತ್ನ ಬಗ್ಗೆ ರಮೇಶ್ ಅರವಿಂದ್ ರಿಯಾಕ್ಷನ್

    ವಿಷ್ಣು ಸಮಾಧಿ, ಕರ್ನಾಟಕ ರತ್ನ ಬಗ್ಗೆ ರಮೇಶ್ ಅರವಿಂದ್ ರಿಯಾಕ್ಷನ್

    ಹಿರಿಯ ನಟ ರಮೇಶ್ ಅರವಿಂದ್ (Ramesh Aravind) ಅಭಿನಯದ 106ನೇ ಸಿನಿಮಾ ದೈಜಿ (Daiji) ಚಿತ್ರದ ಟೀಸರ್ ರಿಲೀಸ್ ಆಗಿದೆ. ಟೀಸರ್ ರಿಲೀಸ್ ಇವೆಂಟ್ ಬಳಿಕ ನಟ ರಮೇಶ್ ಅರವಿಂದ್ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಮುಖ್ಯವಾಗಿ ಹಿರಿಯ ನಟ ಸಾಹಸಸಿಂಹ ವಿಷ್ಣುವರ್ಧನ್ (Actor Vishnuvardhan) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುವ ಬಗ್ಗೆ ಹಾಗೂ ಸಮಾಧಿ ನೆಲಸಮ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    ನಾನು ವಿಷ್ಣು ಸರ್ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೀನಿ. ಅವರಿಗೆ ಡಾಕ್ಟರೇಟ್ ಬಂದಾಗ ನಾನು ಹೇಳಿದ್ದು ಒಂದೇ. ಅವರಿಗೆ ಡಾಕ್ಟರೇಟ್ ಕೊಡೋಕೆ ಒಂದು ಕಾರಣವಲ್ಲ, ನೂರು ಕಾರಣಗಳಿವೆ ಎಂದಿದ್ದೆ. ನೂರು ಸಿನಿಮಾ ಮಾಡಿದ ಅವರಿಗೆ ನೂರು ಕಾರಣ ಇವೆ. ಅವರ ಕೆಲಸಗಳು, ಅವರು ಮಾಡಿದ ಯೋಚನೆಗಳು ನಮಗೆ ಮುಖ್ಯ. ಅವರ ಸ್ಮಾರಕ ಅನ್ನೋದು ಅಭಿಮಾನಿಗಳಿಗೆ ಸಾಮೂಹಿಕ ನೆನಪು. ಅಲ್ಲಿ ಆಗಲ್ಲ ಅಂದಾಗ ಸರ್ಕಾರ ಮೈಸೂರಿನಲ್ಲಿ ಪರ್ಫೆಕ್ಟ್ ಆಗಿ ಮಾಡಿಕೊಟ್ಟಿದೆ. ಮತ್ತೆ ಸ್ಮಾರಕ ಸಿಗುತ್ತೆ ಅಂತಾ ಕೇಳಿಪಟ್ಟೆ. ಏನಾದರೂ ಆಗಲಿ ಗಂಭೀರವಾಗಿ ಆಗಲಿ. ವಿಷ್ಣು ಸರ್ ಅಂದ್ರೆ ಗಾಂಭೀರ್ಯ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿ ವಿಷ ಕೊಡಿ ಎಂದ ದರ್ಶನ್: ರಮೇಶ್ ಅರವಿಂದ್ ಹೇಳಿದ್ದೇನು?

    ವಿಷ್ಣುವರ್ಧನ್ ಅವರೊಟ್ಟಿಗೆ ಸಿನಿಮಾ ಮಾಡಿರುವ ನಟ ರಮೇಶ್ ಅರವಿಂದ್, ಸಾಹಸ ಸಿಂಹ ಅವರ ಬಗ್ಗೆ ಹಲವಾರು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ದಿನವೇ ತಮ್ಮ ನಟನೆಯ `ದೈಜಿ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ.

  • ರಮೇಶ್ ಅರವಿಂದ್ ನಟನೆಯ ‘ದೈಜಿ’ ಚಿತ್ರದಲ್ಲಿ ದಿಗಂತ್

    ರಮೇಶ್ ಅರವಿಂದ್ ನಟನೆಯ ‘ದೈಜಿ’ ಚಿತ್ರದಲ್ಲಿ ದಿಗಂತ್

    ಮೇಶ್ ಅರವಿಂದ್ (Ramesh Aravind) ನಟನೆಯ ‘ದೈಜಿ’ (Daiji) ಸಿನಿಮಾಗೆ ದೂದ್‌ಪೇಡ ದಿಗಂತ್ ಸಾಥ್ ನೀಡಿದ್ದಾರೆ. ಈ ಚಿತ್ರದಲ್ಲಿ ಪವರ್‌ಫುಲ್ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಇದೀಗ ದಿಗಂತ್ ‘ದೈಜಿ’ ಸೆಟ್‌ನಲ್ಲಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:ಅಭಿಮಾನಿ ಕಡೆ ಗನ್ ಇಟ್ಟ ದಳಪತಿ ವಿಜಯ್ ಬಾಡಿಗಾರ್ಡ್!

    ರಮೇಶ್ ನಟನೆಯ 106ನೇ ಚಿತ್ರ ‘ದೈಜಿ’ ಟೀಮ್‌ಗೆ ದಿಗಂತ್ (Diganth Manchale) ಸೇರಿಕೊಂಡಿದ್ದಾರೆ. ರಮೇಶ್ ಅರವಿಂದ್ ತಮ್ಮನ ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರದಲ್ಲಿ ತಿರುವು ಕೊಡುವ ಪವರ್‌ಫುಲ್ ಪಾತ್ರ ಇದಾಗಿದೆ. ಗಗನ್ ಪಾತ್ರಕ್ಕೆ ಅವರು ಜೀವ ತುಂಬಲಿದ್ದಾರೆ. ಇದನ್ನೂ ಓದಿ: ವೇದಿಕೆಯಲ್ಲಿ ಸಮಂತಾ ಕಣ್ಣೀರಿಟ್ಟಿದ್ಯಾಕೆ?- ಪ್ರಚಾರದ ಗಿಮಿಕ್ ಎಂದವರಿಗೆ ನಟಿ ಸ್ಪಷ್ಟನೆ

    ‘ದೈಜಿ’ ಸಿನಿಮಾದಲ್ಲಿ (Daiji) ರಮೇಶ್ ಅವರು ಸೂರ್ಯ ಪಾತ್ರದಲ್ಲಿ ನಟಿಸಿದ್ರೆ, ನಾಯಕಿ ರಾಧಿಕಾ ನಾರಾಯಣ್ (Radhika Narayan) ಭೂಮಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ತೆರೆಕಂಡ ‘ಅಮೆರಿಕ ಅಮೆರಿಕ’ ಚಿತ್ರದ ಪ್ರಮುಖ ಪಾತ್ರಗಳ ಹೆಸರನ್ನೇ ಈ ಚಿತ್ರಕ್ಕೂ ಇಡಲಾಗಿದೆ.

     

    View this post on Instagram

     

    A post shared by akash srivatsa (@akashsrivatsa)

    ಈಗಾಗಲೇ ‘ದೈಜಿ’ ಸಿನಿಮಾ 50% ರಷ್ಟು ಚಿತ್ರೀಕರಣ ನಡೆದಿದೆ. ಮುಂದಿನ ಶೆಡ್ಯೂಲ್‌ನಲ್ಲಿ ದಿಗಂತ್ ಕೂಡ ಭಾಗಿಯಾಗಲಿದ್ದಾರೆ. ಹೊಸ ಶೇಡ್‌ನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ‘ಶಿವಾಜಿ ಸುರತ್ಕಲ್’ ನಿರ್ದೇಶನ ಮಾಡಿದ್ದ ಆಕಾಶ್ ಶ್ರೀವತ್ಸ ನಿರ್ದೇಶನ ಮಾಡಿದ್ದಾರೆ.

  • ರಮೇಶ್ ಅರವಿಂದ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್

    ರಮೇಶ್ ಅರವಿಂದ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್

    ನ್ನಡ ಚಿತ್ರರಂಗದ ಎವರ್‌ಗ್ರೀನ್ ಹೀರೋ ರಮೇಶ್ ಅರವಿಂದ್ (Ramesh Aravind) ಅವರಿಗೆ ಇಂದು (ಸೆ.10) ಹುಟ್ಟುಹಬ್ಬದ ಸಂಭ್ರಮವಾಗಿದ್ದು, ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ‘ಶಿವಾಜಿ ಸುರತ್ಕಲ್ 2’ (Shivaji Surthkal 2) ಸಿನಿಮಾದ ನಂತರ ನಟ ರಮೇಶ್ ಅವರ ಮುಂದಿನ ಸಿನಿಮಾ ಯಾವುದು? ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಇದನ್ನೂ ಓದಿ:ಸಮುದ್ರ ತೀರದಲ್ಲಿ ಯಶ್‌ ಫ್ಯಾಮಿಲಿ- ಪುತ್ರಿ ಜೊತೆ ರಾಧಿಕಾ ತುಂಟಾಟ

    ರಮೇಶ್ ಅರವಿಂದ್ (Ramesh Aravind) ಅವರು ಇದೀಗ ಮತ್ತೆ ನಿರ್ದೇಶಕ ಆಕಾಶ್ ಶ್ರೀವತ್ಸ ಜೊತೆ ಕೈಜೋಡಿಸಿದ್ದಾರೆ. ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ‘ದೈಜಿ’ ಎಂಬ ಸಿನಿಮಾ ಅನೌನ್ಸ್ ಮಾಡಿದ್ದಾರೆ. ‘ದೈಜಿ’ (Daiji Film) ಚಿತ್ರಕ್ಕೆ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ನಿರ್ಮಾಣ ಮಾಡುತ್ತಿದ್ದಾರೆ. ರಮೇಶ್ ಅರವಿಂದ್- ಆಕಾಶ ಶ್ರೀವತ್ಸ ಅವರ ಹಿಟ್ ಕಾಂಬಿನೇಷನ್ ಮತ್ತೊಮ್ಮೆ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಸಿನಿಮಾದ ಮೊದಲ ಪೋಸ್ಟರ್ ಗಮನ ಸೆಳೆಯುತ್ತಿದೆ. ರಮೇಶ್ ಅವರ ಲುಕ್ ಭಿನ್ನವಾಗಿ ಮೂಡಿ ಬಂದಿದೆ.

    ‘ದೈಜಿ’ ಎಂಬುದಕ್ಕೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ರೀತಿಯ ಅರ್ಥಗಳಿವೆ. ಕೊಂಕಣಿ ಭಾಷೆಯಲ್ಲಿ ದೈಜಿ ಎಂದರೆ ರಕ್ತ ಸಂಬಂಧ. ಜಪಾನ್‌ನಲ್ಲಿ ದೈಜಿ ಎಂದರೆ ಬಹಳ ಕಾಳಜಿ ವಹಿಸಬೇಕಾದ ವಿಚಾರ ಎಂಬ ಅರ್ಥ ನೀಡುತ್ತದೆ.

    ಶಿವಾಜಿ ಸುರತ್ಕಲ್ ಪಾರ್ಟ್ 1 & 2 ಮರ್ಡರ್ ಮಿಸ್ಟರಿ ಸುತ್ತ ಕಥೆಯಿತ್ತು. ಆದರೆ ‘ದೈಜಿ’ ಸಿನಿಮಾ ಅದಕ್ಕಿಂತ ವಿಭಿನ್ನವಾಗಿದ್ದು, ಹಾರರ್ ಮತ್ತು ಮಿಸ್ಟರಿ ಶೈಲಿಯಲ್ಲಿ ಮೂಡಿ ಬರಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]