Tag: Dadasaheb Phalke South Awards 2020

  • ರಕ್ಷಿತ್, ರಶ್ಮಿಕಾಗೆ ದಾದಾಸಾಹೇಬ್ ಫಾಲ್ಕೆ ಅವಾರ್ಡ್ಸ್ ಸೌತ್ 2020

    ರಕ್ಷಿತ್, ರಶ್ಮಿಕಾಗೆ ದಾದಾಸಾಹೇಬ್ ಫಾಲ್ಕೆ ಅವಾರ್ಡ್ಸ್ ಸೌತ್ 2020

    ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಅವಾರ್ಡ್ಸ್ ಸೌತ್-2020 ಲಭಿಸಿದೆ.

    ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿನ ಉತ್ತಮ ನಟನೆಗಾಗಿ ರಕ್ಷಿತ್ ಶೆಟ್ಟಿ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ಸ್ ಸೌತ್ 2020 ಲಭಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಅಭಿಮಾನಿಗಳು ಹಾಗೂ ಸ್ಮೇಹಿತರು ಶುಭ ಕೋರುತ್ತಿದ್ದಾರೆ.

    ಅವನೇ ಶ್ರೀಮನ್ನಾರಾಯಣ ಸಿನಿಮಾ 2019ರಲ್ಲಿ ಭಾರೀ ಸದ್ದು ಮಾಡಿತ್ತು. ಕನ್ನಡ ಮಾತ್ರವಲ್ಲದೆ ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿ ಧೂಳೆಬ್ಬಿಸಿತ್ತು. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡರೆ, ಇವರಿಗೆ ಜೋಡಿಯಾಗಿ ಶಾನ್ವಿ ಶ್ರೀವಾಸ್ತವ್ ನಟಿಸಿದ್ದರು. ಸಚಿನ್ ರವಿ ನಿರ್ದೇಶನ, ಅಜನೀಶ್ ಲೋಕ್‍ನಾಥ್ ಸಂಗೀತ ಚಿತ್ರಕ್ಕಿತ್ತು. ಪುಷ್ಕರ ಮಲ್ಲಿಕಾರ್ಜುನಯ್ಯ ಅವರ ಪುಷ್ಕರ ಫಿಲಂ ಬ್ಯಾನರ್ ಅಡಿ ಸಿನಿಮಾ ನಿರ್ಮಿಸಲಾಗಿತ್ತು.

    ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಅತ್ಯುತ್ತಮ ನಟರಿಗೆ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ಸ್ ಸೌತ್ 2020 ನೀಡಿ ಗೌರವಿಸಲಾಗಿದೆ. ಕನ್ನಡದಲ್ಲಿ ಮೋಸ್ಟ್ ವರ್ಸಿಟೈಲ್ ಆಕ್ಟರ್ ಪ್ರಶಸ್ತಿ ಶಿವರಾಜ್ ಕುಮಾರ್ ಅವರಿಗೆ ಲಭಿಸಿದರೆ, ಅತ್ಯುತ್ತಮ ನಟ ಪ್ರಶಸ್ತಿ ರಕ್ಷಿತ್ ಶೆಟ್ಟಿಗೆ ಸಿಕ್ಕಿದೆ. ತಮಿಳಿನಲ್ಲಿ ಅಜಿತ್ ಕುಮಾರ್, ಧನುಷ್, ಮಲೆಯಾಳಂನಲ್ಲಿ ಮೋಹನ್‍ಲಾಲ್, ಸೂರಜ್ ವೆಂಜಮೂಡು, ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ್, ನವೀನ್ ಪಾಲಿಶೆಟ್ಟಿ ಅವರಿಗೆ ಪ್ರಶಸ್ತಿ ಲಭಿಸಿದೆ.

    ಇ ಕನ್ನಡದಲ್ಲಿ ತಾನ್ಯಾ ಹೋಪ್‍ಗೆ ಅತ್ಯುತ್ತಮ ನಟಿ, ರಮೇಶ್ ಇಂದಿರ ಅವರಿಗೆ ಅತ್ಯುತ್ತಮ ನಿರ್ದೇಶಕ, ಮೂಕಜ್ಜಿಯ ಕನಸುಗಳು ಅತ್ಯುತ್ತಮ ಸಿನಿಮಾ ಹಾಗೂ ವಿ.ಹರಿಕೃಷ್ಣ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಲಭಿಸಿದೆ.

    ಇನ್ನೂ ವಿಶೇಷ ಎಂಬಂದೆ ಡಿಯರ್ ಕಾಮ್ರೇಡ್ ತೆಲುಗು ಸಿನಿಮಾಗೆ ರಶ್ಮಿಕಾ ಮಂದಣ್ಣಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಹ ಲಭಿಸಿದೆ. ಈ ಮೂಲಕ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರಿಗೆ ಒಟ್ಟಿಗೆ ಪ್ರಶಸ್ತಿ ಸಿಕ್ಕಿದೆ.