Tag: dacoit

  • ಠಾಣೆಗೆ ನುಗ್ಗಿದ 60 ಮಂದಿ ಗುಂಪು – ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಡಕಾಯಿತನ ರಿಲೀಸ್

    ಠಾಣೆಗೆ ನುಗ್ಗಿದ 60 ಮಂದಿ ಗುಂಪು – ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಡಕಾಯಿತನ ರಿಲೀಸ್

    ಭೋಪಾಲ್: 60ಕ್ಕೂ ಹೆಚ್ಚು ಜನರನ್ನೊಳಗೊಂಡ ಗುಂಪೊಂದು ಪೊಲೀಸ್ ಠಾಣೆಗೆ (Police Station) ನುಗ್ಗಿ ಡಕಾಯಿತ (Dacoit) ಸೇರಿದಂತೆ ಮೂವರು ಬಂಧಿತರನ್ನು ಬಿಡುಗಡೆ (Release) ಮಾಡಿದ್ದಲ್ಲದೇ ಪೊಲೀಸ್ ಅಧಿಕಾರಿಗಳ ಮೇಲೂ ಹಲ್ಲೆ (Attack) ನಡೆಸಿದ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.

    ಶುಕ್ರವಾರ ಮುಂಜಾನೆ 3 ಗಂಟೆಯ ಸುಮಾರಿಗೆ ನೇಪಾನಗರದ (Nepanagar) ಪೊಲೀಸ್ ಠಾಣೆಗೆ ನುಗ್ಗಿದ ಗುಂಪು, ಕರ್ತವ್ಯ ನಿರತ ಪೊಲೀಸರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದಲ್ಲದೇ ಹಲವಾರು ಪೊಲೀಸ್ ವಾಹನಗಳಿಗೆ ಹಾನಿ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ನಿಷೇಧಿತ ಪಿಎಫ್‍ಐನ ಇಬ್ಬರು ಮುಖಂಡರ ಬಂಧನ 

    ಹೇಮಾ ಮೇಘವಾಲ್ ಎಂಬ ಡಕಾಯಿತ ಮತ್ತು ಅವನ ಸಹಚರರಾದ ಮಗನ್ ಪಟೇಲ್ ಮತ್ತು ಇನ್ನೋರ್ವ ಯುವಕನನ್ನು ಈ ತಂಡವು ಲಾಕಪ್‌ನಿಂದ (Lock Up) ಬಿಡುಗಡೆಗೊಳಿಸಿದೆ. ಮೇಘವಾಲ್ ಅವರನ್ನು ಕೆಲವು ದಿನಗಳ ಹಿಂದಷ್ಟೇ ಬಂಧಿಸಲಾಗಿತ್ತು ಎಂದು ಬುರ್ಹಾನ್‌ಪುರ (Burhanpur) ಪೊಲೀಸ್ ವರಿಷ್ಠಾಧಿಕಾರಿ (SP) ರಾಹುಲ್ ಕುಮಾರ್ ಲೋಧಾ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಹುಚ್ಚಾಟ – ತುರ್ತು ನಿರ್ಗಮನ ದ್ವಾರ ತೆಗೆಯಲು ವ್ಯಕ್ತಿ ಪ್ರಯತ್ನ

    ದಾಳಿಯ ಮಾಹಿತಿ ಪಡೆದ ಜಿಲ್ಲಾಧಿಕಾರಿ ಭವ್ಯಾ ಮಿತ್ತಲ್ ಹಾಗೂ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ದಾಳಿಕೋರರನ್ನು ಗುರುತಿಸಲು ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರೀಕ್ಷಿಸುವಂತೆ ಪೊಲೀಸರಿಗೆ ತಿಳಿಸಿದರು. ಇದನ್ನೂ ಓದಿ: ಅಪ್ರಾಪ್ತೆಯ ಅತ್ಯಾಚಾರ- ಕೃತ್ಯದ ವೇಳೆ ಬಳಸಿದ್ದ ಶರ್ಟ್ ಬಣ್ಣದಿಂದ ಆರೋಪಿ ಅರೆಸ್ಟ್ 

    CRIME 2

    ಘಟನೆಯಲ್ಲಿ ಗಾಯಗೊಂಡ ನಾಲ್ವರು ಪೊಲೀಸರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 307, 353 ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: 2 ತಿಂಗಳಿಂದ ನನ್ನ ಮಕ್ಕಳು ಕಾಣ್ತಿಲ್ಲ: ಸಿಎಂ, ಗೃಹ ಸಚಿವರಿಗೆ ಪತ್ರ ಬರೆದ ಅವಳಿ ಸಹೋದರಿಯರ ತಂದೆ

  • ದರೋಡೆಕೋರರಿಬ್ಬರ ಮೇಲೆ ಕಲಬುರಗಿ ಪೊಲೀಸರು ಫೈರಿಂಗ್!

    ದರೋಡೆಕೋರರಿಬ್ಬರ ಮೇಲೆ ಕಲಬುರಗಿ ಪೊಲೀಸರು ಫೈರಿಂಗ್!

    ಕಲಬುರಗಿ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು ಇಬ್ಬರು ದರೋಡೆಕೋರರ ಮೇಲೆ ಫೈರಿಂಗ್ ನಡೆಸಿದ್ದಾರೆ.

    ಕಲಬುರಗಿಯ ಸಾರ್ವಜನಿಕ ಉದ್ಯಾನವನದಲ್ಲಿ ಈ ಘಟನೆ ನಡೆದಿದ್ದು, ರಾಮಕೃಷ್ಣ ಎಂಬವರನ್ನು ಅಪಹರಿಸಿದ ಉಮೇಶ್ ಮಾಳಗಿ ಮತ್ತು ಬಾಬು ಅಲಿಯಾಸ್ ಬಾಬ್ಯಾ ಒಂದು ಲಕ್ಷ ರೂ.ಗೆ ಬೇಡಿಕೆಯನ್ನು ಇಟ್ಟಿದ್ದರು. ವಿಷಯ ತಿಳಿದ ಕೂಡಲೇ ಚೌಕ ಠಾಣೆ ಪಿಐ ಹಿರೇಮಠರಿಂದ ದರೋಡೆಕೋರ ಮೇಲೆ ಫೈರಿಂಗ್ ನಡೆಸಲಾಯಿತು. ದರೋಡೆಕೋರರೊಂದಿಗೆ ನಡೆದ ಕಾಳಗದಲ್ಲಿ ಆರ್‌ಜಿ ನಗರ ಪಿಎಸ್‍ಐ ಅಕ್ಕಮಹಾದೇವಿ ಹಾಗೂ ಮೂವರು ಪೇದೆಗಳಿಗೆ ತೀವ್ರ ಗಾಯಗಳಾಗಿವೆ.

    ಗಾಯಾಳುಗಳನ್ನು ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗುಂಡು ತಿಂದ ದರೋಡೆಕೋರರನ್ನ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯಕ್ಕೆ ಕಲಬುರಗಿ ಎಸ್ ಪಿ ಸಎನ್ ಶಶಿಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv