Tag: Dabboo Ratnani

  • ಬಾಲಿವುಡ್ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಕ್ಯಾಮೆರಾ ಕಣ್ಣಲ್ಲಿ ‘ಕಾಟೇರ’ ನಟಿ ಆರಾಧನಾ

    ಬಾಲಿವುಡ್ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಕ್ಯಾಮೆರಾ ಕಣ್ಣಲ್ಲಿ ‘ಕಾಟೇರ’ ನಟಿ ಆರಾಧನಾ

    ‘ಕಾಟೇರಾ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಖ್ಯಾತ ನಟಿ ಮಾಲಾಶ್ರೀ ಪುತ್ರಿ ಆರಾಧನಾ (Aradhanaa) ಇದೀಗ ಕಲರ್‌ಫುಲ್ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ. ಬಾಲಿವುಡ್‌ನ ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬೂ ರತ್ನಾನಿ (Dabboo Ratnani) ಅವರ ಕ್ಯಾಮೆರಾದಲ್ಲಿ ಆರಾಧನಾ ಸುಂದರವಾಗಿ ಸೆರೆಯಾಗಿದ್ದಾರೆ.

    ಸೂಪರ್ ಸಕ್ಸಸ್ ಸಿನಿಮಾ ಮೂಲಕವೇ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ‘ಕಾಟೇರ’ (Kaatera) ಆರಾಧನಾ ಮೊದಲ ಸಿನಿಮಾದಲ್ಲೇ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇದೀಗ ಎರಡನೇ ಸಿನಿಮಾದ ಹುಡುಕಾಟದಲ್ಲಿರುವ ಮಾಲಾಶ್ರೀ ಪುತ್ರಿ ಸದ್ಯ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ.

    ಶಾರುಖ್ ಖಾನ್, ಸಲ್ಮಾನ್, ಹೃತಿಕ್ ರೋಷನ್ ಹೀಗೆ ಅನೇಕ ಪ್ರಖ್ಯಾತ ಬಾಲಿವುಡ್ ಕಲಾವಿದರ ಸುಂದರ ಫೋಟೋಗಳನ್ನು ಕ್ಯಾಪ್ಚರ್ ಮಾಡಿರುವ ಡಬೂ ರತ್ನಾನಿ ಇದೀಗ ಕನ್ನಡದ ಕಲಾವಿದೆಯನ್ನು ತಮ್ಮ ಕ್ಯಾಮೆರಾ ಮೂಲಕ ಅದ್ಭುತವಾಗಿ ಸೆರೆ ಹಿಡಿದಿರುವುದು ಹೆಮ್ಮೆಯ ವಿಚಾರವಾಗಿದೆ.

    ಅಂದಹಾಗೆ, ಆರಾಧನಾ ರಾಣಿಯಂತೆ ಕಂಗೊಳಿಸುತ್ತಿರುವುದು ದಿ ಜ್ಯುವೆಲ್ಲರಿ ಶೋಗಾಗಿ. ವೆರೈಟಿ ಕಾಸ್ಟೂಮ್ ನಲ್ಲ ಹೆವಿ ಜ್ಯುವೆಲ್ಲರಿ ಧರಿಸಿ ತರಹೇವಾರಿ ಲುಕ್ ನಲ್ಲಿ ಮಿಂಚಿದ್ದಾರೆ.

    ಪುತ್ರಿ ಆರಾಧನಾ ಜೊತೆ ಮಾಲಾಶ್ರೀ ಕೂಡ ಡಬೂ ರತ್ನಾನಿ ಅವರ ಕ್ಯಾಮೆರಾಗೆ ಮಸ್ತ್ ಆಗಿ ಪೋಸ್ ನೀಡಿದ್ದಾರೆ. ಅಮ್ಮ ಮತ್ತು ಮಗಳ ಸುಂದರ ಫೋಟೋಗಳನ್ನು ನೋಡಿ ಅಭಿಮಾನಿಗಳು ವಾವ್ ಎಂದಿದ್ದಾರೆ. ಮೊದಲ ಬಾರಿಗೆ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಅವರ ಕ್ಯಾಮೆರಾಗೆ ಪೋಸ್ ನೀಡಿರುವ ಆರಾಧನಾ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಇನ್ನೂ ಮಗಳ ಸುಂದರ ಪೋಸ್ ನೋಡಿ ಮಾಲಾಶ್ರೀ ಕೂಡ ಸಖತ್ ಕೂಡ ಖುಷಿಪಟ್ಟಿದ್ದಾರೆ.

    ‘ಕಾಟೇರ’ ಬಳಿಕ ಆರಾಧನಾ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಉತ್ತಮ ಸಿನಿಮಾಗಾಗಿ ಎದುರು ನೋಡುತ್ತಿರುವ ಆರಾಧನಾ ಅವರ ಎರಡನೇ ಸಿನಿಮಾ ಯಾವುದು ಎನ್ನುವ ಕುತೂಹಲ ಫ್ಯಾನ್ಸ್‌ಗೆ ಹೆಚ್ಚಾಗಿದೆ.

  • ಸೀರೆಯೇ ಚಂದ ಎಂದಿದ್ದ ವಿದ್ಯಾ ಬಾಲನ್ ಕೈಯಲ್ಲಿ ನ್ಯೂಸ್ ಪೇಪರ್

    ಸೀರೆಯೇ ಚಂದ ಎಂದಿದ್ದ ವಿದ್ಯಾ ಬಾಲನ್ ಕೈಯಲ್ಲಿ ನ್ಯೂಸ್ ಪೇಪರ್

    ಬಾಲಿವುಡ್ ನಟಿ ವಿದ್ಯಾ ಬಾಲನ್ (Vidya Balan) ನ್ಯೂಸ್ ಪೇಪರ್ ನಿಂದ ಖಾಸಗಿ ಅಂಗ ಮುಚ್ಚಿಕೊಂಡಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋದಲ್ಲಿ (Photoshoot) ವಿದ್ಯಾ ಬಾಲನ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ನಾನಾ ರೀತಿಯ ಪ್ರಶ್ನೆಗಳನ್ನು ಮಾಡುತ್ತಿದ್ದಾರೆ. ಸದಾ ಸೀರೆಯಲ್ಲೇ ಕಂಗೊಳಿಸುತ್ತಿದ್ದ ವಿದ್ಯಾ ಬಾಲನ್, ಯಾಕೆ ಈ ರೀತಿ ಕಾಣಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳೇ ಕೇಳುತ್ತಿದ್ದಾರೆ.

    ಒಂದು ಕೈಯಿಂದ ನ್ಯೂಸ್ ಪೇಪರ್ (Newspaper) ಹಿಡಿದು ಅಂಗಾಂಗ ಮುಚ್ಚಿಕೊಂಡಿರುವ, ಮತ್ತೊಂದು ಕೈಲಿ ಮಗ್ ಹಿಡಿದಿರುವ ವಿದ್ಯಾ ಬಾಲನ್ ಈ ರೀತಿ ಫೋಟೋ ತೆಗೆಸಿಕೊಂಡಿದ್ದು ಯಾಕೆ ಎನ್ನುವ ಕುರಿತು ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದೇ ಇದ್ದರೂ, ಈ ಫೋಟೋ ಸೆರೆ ಹಿಡಿದವರ ಹೆಸರನ್ನು ಹಾಕಿದ್ದಾರೆ. ಹಾಗಾಗಿ ಇದು ಕ್ಯಾಲೆಂಡರ್ ಗಾಗಿ ಸೆರೆ ಹಿಡಿಯಲಾದ ಫೋಟೋ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಬ್ಯಾಕ್‌ಲೆಸ್ ಫೋಟೋ ಶೇರ್‌, ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ `ಸಲಾರ್’ ನಟಿ

    ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬ್ಬೂ ರತ್ನಾನಿ, ನಟಿ ವಿದ್ಯಾ ಬಾಲನ್ ಅವರ ಫೋಟೋಶೂಟ್ ಮಾಡಿದ್ದು, ಅದ್ಭುತವಾಗಿ ವಿದ್ಯಾ ಬಾಲನ್ ಗ್ಲಾಮರ್ ಸೆರೆ ಹಿಡಿದಿದ್ದಾರೆ. ಹೀಗಾಗಿ ವಿದ್ಯಾ ಸಖತ್ ಹಾಟ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಈ ಪೋಟೋ ನೋಡಿದ ಕೆಲವರು ‘ಡರ್ಟಿ ಸಿನಿಮಾ’ದ ಪಾತ್ರಕ್ಕೆ ಹೋಲಿಸಿದ್ದರೆ, ಇನ್ನೂ ಕೆಲವರು ಆ ಸೌಂದರ್ಯವನ್ನು ಹೊಗಳಿದ್ದಾರೆ.

    ಈ ಹಿಂದೆ ರಣಬೀರ್ ಸಿಂಗ್ ಬೆತ್ತಲೇ ಫೋಟೋಶೂಟ್ ಮಾಡಿಸಿಕೊಂಡಾಗ ವಿದ್ಯಾ ಬಾಲನ್ ಅವರ ಪರವಾಗಿ ಮಾತನಾಡಿದ್ದರು. ಗಂಡಸರು ಹೀಗೆ ಹಾಟ್ ಹಾಟ್ ಕಾಣಿಸಲಿ ಎಂದು ಹೇಳಿದ್ದರು. ಇದೀಗ ಅವರೇ ಅರೆಬೆತ್ತಲೆಯ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹಾಗಾಗಿ ರಣಬೀರ್ ಸಿಂಗ್ ಇವರ ಬೆಂಬಲಕ್ಕೆ ಬರುತ್ತಾರಾ ಕಾದು ನೋಡಬೇಕು.

  • ಬೆತ್ತಲಾಗಿ ಕಸದ ಗಾಡಿಯಲ್ಲಿ ಕುಳಿತ ಪರಿಣಿತಿ ಚೋಪ್ರಾ

    ಬೆತ್ತಲಾಗಿ ಕಸದ ಗಾಡಿಯಲ್ಲಿ ಕುಳಿತ ಪರಿಣಿತಿ ಚೋಪ್ರಾ

    ಮುಂಬೈ: ಸಿನಿಮಾ ಕಲಾವಿದರಿಗೆ ಫೋಟೋಶೂಟ್ ಮಾಡಿಸಿಕೊಳ್ಳೋದು ಅಂದ್ರೆ ಇಷ್ಟ. ಹಾಗಾಗಿ ಫೋಟೋಶೂಟ್ ಲಕ್ಷ ಲಕ್ಷ ಹಣವನ್ನ ನೀರಿನಂತೆ ಚೆಲ್ಲಲು ಸಿದ್ಧ ಇರ್ತಾರೆ. ಫೋಟೋಶೂಟ್‍ಗಾಗಿ ಡಿಸೈನರ್ ನಿಂದ ವಿನ್ಯಾಸಗೊಂಡ ಸ್ಪೆಷಲ್ ಧಿರಿಸು, ಒಳ್ಳೆಯ ಕ್ಯಾಮೆರಾಮ್ಯಾನ್, ಸುಂದರ ಸ್ಥಳ ಹೀಗೆ ಹಲವು ವಿಷಯಗಳ ಬಗ್ಗೆ ಗಮನ ಕೊಡುತ್ತಾರೆ. ಆದ್ರೆ ಪರಿಣಿತಿ ಚೋಪ್ರಾ ಬೆತ್ತಲಾಗಿ ಕಸದ ಗಾಡಿಯಲ್ಲಿ ಕುಳಿತು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸದ್ಯ ಫೋಟೋಗಳು ವೈರಲ್ ಆಗಿದ್ದು, ಟ್ರೋಲ್ ಆಗುತ್ತಿವೆ.

    ದಬೂ ರತ್ನಾನಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಆಗಬೇಕು ಅಂತ ಎಷ್ಟೋ ಜನ ಕಾಯುತ್ತಿರುತ್ತಾರೆ. ಅದಕ್ಕೆ ಕಾರಣ ದಬೂ ರತ್ನಾನಿ ಕ್ಯಾಮೆರಾ ಕೈಚಳಕ. ಪ್ರತಿವರ್ಷ ದಬೂ ರತ್ನಾನಿ ಹೊರ ತರುವ ಸ್ಟಾರ್ ಗಳ ಕ್ಯಾಲೆಂಡರ್ ಗಾಗಿ ಇಡೀ ಬಣ್ಣದ ಲೋಕ ವೇಟ್ ಮಾಡ್ತಿರುತ್ತೆ. ನಟ-ನಟಿಯರನ್ನ ಮತ್ತಷ್ಟು ಮೋಹಕವಾಗಿ ಕಾಣಿಸುವಂತೆ ಮಾಡುವಲ್ಲಿ ರತ್ನಾನಿ ಪಂಟರು. ರತ್ನಾನಿ ಫೋಟೋಶೂಟ್ ಗೆ ಆಯ್ಕೆ ಮಾಡಿಕೊಳ್ಳುವ ಸ್ಥಳಗಳು ಡಿಫರೆಂಟ್.

     

    View this post on Instagram

     

    A post shared by Dabboo Ratnani (@dabbooratnani)

    ಈಗ ಸುಂದರಿ ಪರಿಣಿತಿಯನ್ನ ಕಸದ ಗಾಡಿಯಲ್ಲಿ ಕೂರಿಸಿ ಫೋಟೋ ಕ್ಲಿಕ್ ಮಾಡಿದ್ದು, ನಟಿಯ ಹಾಲಿನ ಹೊಳಪಿನ ಮೈ ಬಣ್ಣದಲ್ಲಿ ನೋಡಗರು ತೇಲಾಡ್ತಿದ್ದಾರೆ. ಇನ್ನೂ ಕೆಲ ನೆಟ್ಟಿಗರು ಕಸದ ಗಾಡಿಗೂ ಒಂದು ವ್ಯಾಲ್ಯೂ ಬಂತು. ಆ ಗಾಡಿಗೆ ನಮಗೆ ಕೊಡಿ ಪ್ಲೀಸ್ ಅಂತ ಕಮೆಂಟ್ ಮಾಡುತ್ತಿದ್ದಾರೆ.