Tag: Dabangg -3

  • ಸುದೀಪ್ ನನ್ನ ಸಹೋದರ ಇದ್ದಂತೆ: ಸಲ್ಮಾನ್ ಖಾನ್

    ಸುದೀಪ್ ನನ್ನ ಸಹೋದರ ಇದ್ದಂತೆ: ಸಲ್ಮಾನ್ ಖಾನ್

    ಬೆಂಗಳೂರು: ಅಭಿನಯ ಚಕ್ರವರ್ತಿ ಸುದೀಪ್ ನನ್ನ ಸಹೋದರ ಇದ್ದಂತೆ ಎಂದು ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ಹೇಳಿದ್ದಾರೆ.

    ಮಂಗಳವಾರ ‘ದಬಾಂಗ್-3’ ಚಿತ್ರಕ್ಕಾಗಿ ಸಲ್ಮಾನ್ ಖಾನ್, ನಿರ್ದೇಶಕ ಪ್ರಭುದೇವ ಬೆಂಗಳೂರಿಗೆ ಆಗಮಿಸಿದ್ದರು. ಸುದೀಪ್ ಅವರು ಕೂಡ ಚಿತ್ರತಂಡದ ಜೊತೆ ಸೇರಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಲ್ಮಾನ್, ಸುದೀಪ್ ನನ್ನ ಸಹೋದರ ಇದ್ದಂತೆ ಎಂದು ಹೇಳಿದ್ದಾರೆ.

    ಸುದೀಪ್ ಜೊತೆ ನಟಿಸಿದ್ದು ನಿಮಗೆ ಹೇಗೆ ಎನಿಸಿತ್ತು ಎಂದು ಮಾಧ್ಯಮದವರು ಸಲ್ಮಾನ್ ಅವರು ಪ್ರಶ್ನಿಸಿದ್ದಾರೆ. ಆಗ ಸಲ್ಮಾನ್, ಸುದೀಪ್ ಜೊತೆ ಕೆಲಸ ಮಾಡಿದ್ದು ತುಂಬಾ ಚೆನ್ನಾಗಿತ್ತು. ಸುದೀಪ್ ನನ್ನ ಕಿರಿಯ ಸಹೋದರ ಸೋಹೆಲ್‍ನ ಸಹೋದರ ಇದ್ದಂತೆ. ಸೋಹೆಲ್‍ಗೆ ಸಹೋದರ ಎಂದರೆ ನನಗೂ ಸಹೋದರ ಇದ್ದಂತೆ. ನಮ್ಮ ಸಂಬಂಧ ಸಹೋದರರಂತೆ ಆಗಿದೆ. ಹಾಗಾಗಿ ಕೆಲಸ ಮಾಡುವುದರಲ್ಲಿ ನಮಗೆ ಖುಷಿಯಾಯಿತು ಎಂದರು.

    ಇದೇ ವೇಳೆ ಸಲ್ಮಾನ್ ಅವರಿಗೆ ಕನ್ನಡದಲ್ಲಿ ಮಾತನಾಡುವುದಕ್ಕೆ ಕಷ್ಟವಾಯಿತಾ ಎಂದು ಪ್ರಶ್ನಿಸಿದ್ದಾಗ, ನನಗೆ ಕನ್ನಡ ಅಲ್ಲ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದಕ್ಕೆ ಕಷ್ಟವಾಯಿತು ಎಂದರು. ಬಳಿಕ ಕನ್ನಡದಲ್ಲಿ ಚಿತ್ರದ ಡೈಲಾಗ್ ಹೇಳಿ ಎಂದಾಗ ಸಲ್ಮಾನ್ ಅವರು ಸುದೀಪ್ ಅವರ ಸಹಾಯ ಪಡೆದು ‘ಟೈಮು ನಂದು, ತಾರೀಖು ನಂದು’ ಎಂದು ಖಡಕ್ ಡೈಲಾಗ್ ಹೇಳಿದ್ದಾರೆ.

    ಸುದೀಪ್ `ದಬಾಂಗ್- 3′ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಚಿತ್ರವನ್ನು ನಟ, ನಿರ್ದೇಶಕ ಪ್ರಭುದೇವ ನಿರ್ದೇಶಿಸಿದ್ದು, ಸಲ್ಮಾನ್‍ಗೆ ನಾಯಕಿಯಾಗಿ ನಟಿ ಸೋನಾಕ್ಷಿ ಸಿನ್ಹಾ ನಟಿಸಿದ್ದಾರೆ. ಸಲ್ಮಾನ್ ಮತ್ತು ಅರ್ಬಾಜ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಡಿಸೆಂಬರ್ 20ರಂದು ಈ ಚಿತ್ರ ಬಿಡುಗಡೆಯಾಗಲಿದೆ.

  • ರಂಗೋಲಿಯಲ್ಲಿ ದಬಾಂಗ್-3 ಕಮಾಲ್

    ರಂಗೋಲಿಯಲ್ಲಿ ದಬಾಂಗ್-3 ಕಮಾಲ್

    ಬೆಂಗಳೂರು: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಹಾಗೂ ಕಿಚ್ಚ ಸುದೀಪ್ ನಟನೆಯ ‘ದಬಾಂಗ್-3’ ಚಿತ್ರ ಎಲ್ಲೆಡೆ ಹವಾ ಕ್ರಿಯೆಟ್ ಮಾಡಿದೆ. ಇದೀಗ ರಂಗೋಲಿಯಲ್ಲಿ ದಬಾಂಗ್-3 ಮೂಡಿದೆ.

    ಬೆಂಗಳೂರಿನ ಖ್ಯಾತ ರಂಗೋಲಿ ಕಲಾವಿದ ಅಕ್ಷಯ್ ಜಲಿಹಲ್ ಎಂಬವರು ರಂಗೋಲಿ ಮೂಲಕ ಇಬ್ಬರು ನಟರಿಗೂ ಗೌರವ ಸಲ್ಲಿಸಿದ್ದಾರೆ. ರಂಗೋಲಿಯಲ್ಲೇ ಅಕ್ಷಯ್ ದಬಾಂಗ್-3ರ ಸಲ್ಮಾನ್ ಖಾನ್ ಹಾಗೂ ಸುದೀಪ್ ಅವರ ಪೋಸ್ಟರ್ ರೆಡಿ ಮಾಡಿದ್ದಾರೆ.

    ಅಕ್ಷಯ್ ಅವರ ರಂಗೋಲಿಗೆ ಸುದೀಪ್ ಹಾಗೂ ಸಲ್ಮಾನ್ ಅಭಿಮಾನಿಗಳಿಂದ ಪ್ರಶಂಸೆಗಳ ಮಹಾಪೂರ ಹರಿದು ಬರುತ್ತಿದೆ. ಅಕ್ಷಯ್ ಜಲಿಹಲ್ ಅವರು ಪ್ಲ್ಯಾಷ್ ರಂಗೋಲಿ, ಪೋಟ್ರೇಟ್ ರಂಗೋಲಿ, ಹೆಚ್‌ಡಿ ರಂಗೋಲಿಯಂತಹ ಹಲವು ವಿಭಿನ್ನ ರಂಗೋಲಿಗಳಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ.

    ಕನ್ನಡ ಬಿಗ್ ಬಾಸ್‍ನಲ್ಲಿ ಶನಿವಾರ `ವಾರದ ಜೊತೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಸ್ಕ್ರೀನ್ ಮೇಲೆ ಬಂದಿದ್ದರು. ಸಲ್ಮಾನ್ ಖಾನ್ ಜೊತೆ `ದಬಾಂಗ್-3′ ಚಿತ್ರತಂಡ ಹಿಂದಿಯ ಬಿಗ್ ಬಾಸ್ ವೇದಿಕೆಯಲ್ಲಿ ನಿಂತು ಕನ್ನಡ ಬಿಗ್ ಬಾಸ್ ಸ್ಕ್ರೀನ್ ಮೇಲೆ ಬಂದಿದ್ದರು.

    ಸುದೀಪ್ ‘ದಬಾಂಗ್- 3’ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಚಿತ್ರವನ್ನು ನಟ, ನಿರ್ದೇಶಕ ಪ್ರಭುದೇವ ನಿರ್ದೇಶಿಸಿದ್ದು, ಸಲ್ಮಾನ್‍ಗೆ ನಾಯಕಿಯಾಗಿ ನಟಿ ಸೋನಾಕ್ಷಿ ಸಿನ್ಹಾ ನಟಿಒಸಿದ್ದಾರೆ. ಸಲ್ಮಾನ್ ಮತ್ತು ಅರ್ಬಾಜ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಡಿಸೆಂಬರ್ 20ರಂದು ಈ ಚಿತ್ರ ಬಿಡುಗಡೆಯಾಗಲಿದೆ.

  • ಬಿಗ್ ಬಾಸ್ ಮನೆಗೆ ಬಂದು ಕನ್ನಡದಲ್ಲಿ ಮಾತನಾಡಿದ ಸಲ್ಮಾನ್

    ಬಿಗ್ ಬಾಸ್ ಮನೆಗೆ ಬಂದು ಕನ್ನಡದಲ್ಲಿ ಮಾತನಾಡಿದ ಸಲ್ಮಾನ್

    ಬೆಂಗಳೂರು: ಬಿಗ್ ಬಾಸ್ ಸೀಸನ್ -7ರಲ್ಲಿ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ಎಂಟ್ರಿ ಕೊಟ್ಟಿದ್ದಾರೆ.

    ಇಂದು ಶನಿವಾರ ‘ವಾರದ ಜೊತೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಸ್ಕ್ರೀನ್ ಮೇಲೆ ಬಂದಿದ್ದಾರೆ. ಸಲ್ಮಾನ್ ಖಾನ್ ಜೊತೆ ‘ದಬಾಂಗ್-3’ ಚಿತ್ರತಂಡ ಹಿಂದಿಯ ಬಿಗ್ ಬಾಸ್ ವೇದಿಕೆಯಲ್ಲಿ ನಿಂತು ಕನ್ನಡ ಬಿಗ್ ಬಾಸ್ ಸ್ಕ್ರೀನ್ ಮೇಲೆ ಬಂದಿದ್ದಾರೆ.

    ಒಂದೇ ವೇದಿಕೆಯಲ್ಲಿ ಸುದೀಪ್ ಹಾಗೂ ಸಲ್ಮಾನ್ ಮಾತುಕತೆ ನಡೆಸಿದ್ದಾರೆ. ಸುದೀಪ್ ನೀವು ಈ ಕಾರ್ಯಕ್ರಮಕ್ಕೆ ಬಂದಿದ್ದು ತುಂಬಾ ಖುಷಿಯಾಗಿದೆ ಎಂದಿದ್ದಾರೆ. ಈ ವೇಳೆ ಸಲ್ಮಾನ್ ಕನ್ನಡದಲ್ಲಿ ‘ಬಿಗ್ ಬಾಸ್ ಆಪೇಕ್ಷಿಸುತ್ತಾರೆ’ ಎಂದು ಹೇಳಿದ್ದಾರೆ.

    ವೇದಿಕೆಯಲ್ಲಿ ಸಲ್ಮಾನ್ ಖಾನ್ ಜೊತೆ ದಬಾಂಗ್-3 ಚಿತ್ರದ ನಿರ್ದೇಶಕ ಪ್ರಭುದೇವ, ನಟಿ ಸೋನಾಕ್ಷಿ ಸಿನ್ಹಾ ಆಗಮಿಸಿದ್ದಾರೆ. ಖಾಸಗಿ ವಾಹಿನಿ ಕೇವಲ ಪ್ರೋಮೋವನ್ನು ಬಿಡುಗಡೆ ಮಾಡಿದ್ದು, ಇಂದು ಸಂಜೆ ಈ ಸಂಚಿಕೆ ಪ್ರಸಾರವಾಗಲಿದೆ. ಸದ್ಯ ಸಲ್ಲು- ಸುದೀಪ್‌ರನ್ನು ಒಟ್ಟಿಗೆ ನೋಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ.

  • ಕನ್ನಡ ಸಿನಿಮಾದಲ್ಲಿ ನಟಿಸುವ ಆಸೆ ಬಿಚ್ಚಿಟ್ಟ ಸಲ್ಮಾನ್ ಖಾನ್

    ಕನ್ನಡ ಸಿನಿಮಾದಲ್ಲಿ ನಟಿಸುವ ಆಸೆ ಬಿಚ್ಚಿಟ್ಟ ಸಲ್ಮಾನ್ ಖಾನ್

    ಬೆಂಗಳೂರು: ಬಾಲಿವುಡ್‍ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇದೀಗ ದಬಾಂಗ್ 3 ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ದೇಶಾದ್ಯಂತ ಕಾತರ ಮೂಡಿಸಿರೋ ಈ ಚಿತ್ರವೀಗ ಬಿಡುಗಡೆಗೆ ತಯಾರಾಗಿದೆ. ಇದೀಗ ಈ ಸಿನಿಮಾದ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ. ಈ ಕುರಿತಾದ ಸಮಾರಂಭದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತಾಡಿರುವ ಸಲ್ಮಾನ್ ಖಾನ್ ಕನ್ನಡದಲ್ಲಿಯೇ ಮಾತಾಡೋ ಮೂಲಕ ಕನ್ನಡಿಗರೆಲ್ಲರ ಮನ ಗೆದ್ದಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸಲೂ ಉತ್ಸುಕರಾಗಿರೋದರ ಬಗ್ಗೆಯೂ ಮಾತಾಡಿದ್ದಾರೆ.

    ಬೆಂಗಳೂರಿನಲ್ಲಿ ದಬಾಂಗ್ 3 ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತಾಡಿರುವ ಸಲ್ಮಾನ್ ಖಾನ್, ಅವಕಾಶ ಸಿಕ್ಕರೆ ಖಂಡಿತಾ ಕನ್ನಡ ಚಿತ್ರದಲ್ಲಿ ನಟಿಸೋದಾಗಿ ಹೇಳಿಕೊಂಡಿದ್ದಾರೆ. ಇದರ ಲೈವ್ ಸ್ಟ್ರೀಮಿಂಗ್ ಸಂದರ್ಭದಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಈ ಬಗ್ಗೆ ಸಲ್ಮಾನ್ ಮುಂದೊಂದು ಆಫರ್ ಇಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಲ್ಮಾನ್ ಖಂಡಿತಾ ನಟಿಸೋದಾಗಿ ಹೇಳಿಕೊಂಡಿದ್ದಾರೆ.

    ಈಗಾಗಲೇ ಸುದೀಪ್ ಅವರೊಂದಿಗೆ ನಟಿಸಿಯಾಗಿದೆ. ಕನ್ನಡ ನಿರ್ದೇಶಕರೊಂದಿಗೂ ನಟಿಸೋ ಆಸೆಯಿದೆ. ಇಷ್ಟರಲ್ಲಿಯೇ ಬೆಂಗಳೂರಿಗೆ ಬಂದು ಅಭಿಮಾನಿಗಳನ್ನೆಲ್ಲ ಭೇಟಿಯಾಗೋದಾಗಿಯೂ ಸಲ್ಮಾನ್ ಹೇಳಿಕೊಂಡಿದ್ದಾರೆ. ಕಿಚ್ಚ ಸುದೀಪ್ ದಬಾಂಗ್ 3 ಚಿತ್ರದಲ್ಲಿ ಖಡಕ್ ವಿಲನ್ ಆಗಿ ನಟಿಸಿದ ಮೇಲಂತೂ ಸಲ್ಮಾನ್ ಖಾನ್‍ಗೆ ಕನ್ನಡದೊಂದಿಗಿನ ನಂಟು ಬಲವಾಗಿದೆ. ಅವರು ಮುಂಬರೋ ದಿನಗಳಲ್ಲಿ ಸುದೀಪ್ ಅವರೊಂದಿಗೇ ಕನ್ನಡಕ್ಕೆ ಆಗಮಿಸುವಂತಾದರೂ ಅಚ್ಚರಿಯೇನಿಲ್ಲ. ಹೀಗೆ ಇಂದು ಬಿಡುಗಡೆಗೊಂಡಿರೋ ಟ್ರೇಲರ್‍ಗೆ ಅಭೂತಪೂರ್ವ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.

  • ಚುಲ್‍ಬುಲ್ ಪಾಂಡೆಗೆ ಹೆಬ್ಬುಲಿ ಟಕ್ಕರ್- ರಿಲೀಸ್ ಆಯ್ತು ದಬಾಂಗ್ ಟ್ರೈಲರ್

    ಚುಲ್‍ಬುಲ್ ಪಾಂಡೆಗೆ ಹೆಬ್ಬುಲಿ ಟಕ್ಕರ್- ರಿಲೀಸ್ ಆಯ್ತು ದಬಾಂಗ್ ಟ್ರೈಲರ್

    ಮುಂಬೈ: ಭಾರತೀಯ ಸಿನಿ ಲೋಕದ ಬಹುನಿರೀಕ್ಷಿತ ದಬಾಂಗ್-3 ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಟ್ರೈಲರ್ ಬಿಡುಗಡೆಗೊಂಡ ಒಂದೇ ಗಂಟೆಯಲ್ಲಿ ಐದು ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ದಬಾಂಗ್ ನಲ್ಲಿ ಈ ಬಾರಿ ಚುಲ್‍ಬುಲ್ ಪಾಂಡೆ(ಸಲ್ಮಾನ್ ಖಾನ್)ಗೆ ಚಂದನವನದ ಹೆಬ್ಬುಲಿ ಕಿಚ್ಚ ಸುದೀಪ್ ಟಕ್ಕರ್ ನೀಡುತ್ತಿರುವ ಕಾರಣ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

    ಮೊದಲೆರಡು ಸಿನಿಮಾಗಳ ರೀತಿಯಲ್ಲಿ ಮೂರನೇ ಭಾಗವು ಸಹ 90ರ ದಶಕದ ಕಾಲಘಟ್ಟದಲ್ಲಿಯೇ ಮೂಡಿ ಬಂದಿದೆ. ಈ ಬಾರಿಯೂ ಚುಲ್‍ಬುಲ್ ಪಾಂಡೆಯ ಪತ್ನಿ ರಜ್ಜು ಪಾತ್ರದಲ್ಲಿ ಸೋನಾಕ್ಷಿ ಸಿನ್ಹಾ ಮಿಂಚಿದ್ದಾರೆ. ದಬಾಂಗ್ ಮತ್ತು ದಬಾಂಗ್-2ರಲ್ಲಿ ಸಲ್ಮಾನ್ ಖಾನ್ ನಟನೆ ಮತ್ತು ಹೊಸ ಶೈಲಿಯ ಡ್ಯಾನ್ಸ್ ಅಭಿಮಾನಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ವಿಲನ್ ಪಾತ್ರಧಾರಿಗಳು ದಬಾಂಗ್ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಮೂರನೇ ಭಾಗದಲ್ಲಿ ಚಂದನವನದ ಹೆಬ್ಬುಲಿ ಸಿಖಂದರ್ ಭಾರಧ್ವಜ ಪಾತ್ರದಲ್ಲಿ ಘರ್ಜನೆ ಆರಂಭಿಸಿದೆ.

    ಪತ್ನಿ ರಜ್ಜು ಪ್ರೇಮಪಾಶದಲ್ಲಿರುವ ಚುಲ್‍ಬುಲ್ ಪಾಂಡೆಗೆ ಸಾಯಿಯ ಮೋಡಿಗೆ ಸಿಲುಕುತ್ತಾರಾ? ಸಾಯಿಗಾಗಿಯೇ ಚಲುಬುಲ್ ಪಾಂಡೆ ಮತ್ತು ಸಿಖಂದರ್ ನಡುವೆ ದ್ವೇಷಕ್ಕೆ ಕಾರಣವಾಗುತ್ತಾ ಎಂಬುದು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. ಅರ್ಬಾಜ್ ಖಾನ್, ನಿಖಿಲ್ ದ್ವಿವೇದಿ ನಿರ್ಮಾಣ ಮತ್ತು ಪ್ರಭುದೇವ ದಬಂಗ್ ಸಿನಿಮಾ ಮೂಡಿ ಬಂದಿದೆ. ಇದೇ ಡಿಸೆಂಬರ್ 20ರಂದು ಸಿನಿಮಾ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.

    ದಬಾಂಗ್ ಸಿನಿಮಾದ ಸುದೀಪ್ ಅವರ ಫಸ್ಟ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದರು. ಫಸ್ಟ್ ಲುಕ್ ಬಿಡುಗಡೆ ಮಾಡಿದ್ದ ಸಲ್ಮಾನ್ ಖಾನ್, ವೈರಿ ಎಷ್ಟು ಬಲಿಷ್ಠನಾಗಿರುತ್ತಾನೊ ಆತನೊಂದಿಗೆ ಹೋರಾಡಲು ಅಷ್ಟೇ ಖುಷಿಯಾಗುತ್ತದೆ ಎಂದು ಬರೆದುಕೊಂಡಿದ್ದರು. ಸಲ್ಮಾನ್ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ಕಿಚ್ಚ, ಹೋರಾಡುವ ಮಾತೇ ಬರುವುದಿಲ್ಲ ಸರ್. ಏಕೆಂದರೆ ವಿಲನ್‍ಗೆ ಹೀರೋ ಮೇಲೆ ಪ್ರೀತಿ ಆಗುತ್ತದೆ. ನಿಮ್ಮ ಜೊತೆ ಕೆಲಸ ಮಾಡಿದ್ದು ನನಗೆ ಖುಷಿ ತಂದಿದೆ. ನಿಮ್ಮ ಜೊತೆ ಹಂಚಿಕೊಂಡ ಎಲ್ಲ ಕ್ಷಣಗಳು ಅಮೂಲ್ಯವಾದುದ್ದು” ಎಂದು ರೀ-ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದರು.

  • ವಿಲನ್ ಎಷ್ಟೇ ಶಕ್ತಿಶಾಲಿ ಆಗಿರುತ್ತಾನೋ, ಹೋರಾಡಲು ಅಷ್ಟೇ ಮಜಾ ಸಿಗುತ್ತೆ: ಸಲ್ಮಾನ್

    ವಿಲನ್ ಎಷ್ಟೇ ಶಕ್ತಿಶಾಲಿ ಆಗಿರುತ್ತಾನೋ, ಹೋರಾಡಲು ಅಷ್ಟೇ ಮಜಾ ಸಿಗುತ್ತೆ: ಸಲ್ಮಾನ್

    – ದಬಾಂಗ್-3 ಚಿತ್ರದ ಸುದೀಪ್ ಲುಕ್ ರಿವೀಲ್

    ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ‘ದಬಾಂಗ್-3’ ಚಿತ್ರದಲ್ಲಿ ನಟಿಸಿದ ಕಿಚ್ಚ ಸುದೀಪ್ ಅವರ ಹೊಸ ಲುಕ್ ರಿವೀಲ್ ಮಾಡಿದ್ದಾರೆ.

    ಸಲ್ಮಾನ್ ಅವರು ತಮ್ಮ ಟ್ವಿಟ್ಟರಿನಲ್ಲಿ ಸುದೀಪ್ ಅವರ ಫಸ್ಟ್ ಲುಕ್ ಟ್ವೀಟ್ ಮಾಡಿ ಅದಕ್ಕೆ, “ವಿಲನ್ ಎಷ್ಟೇ ಶಕ್ತಿಶಾಲಿ ಆಗಿರುತ್ತಾನೋ, ಅವನ ಜೊತೆ ಹೋರಾಡಲು ಅಷ್ಟೇ ಮಜಾ ಸಿಗುತ್ತದೆ. ದಬಾಂಗ್-3 ಚಿತ್ರದಲ್ಲಿ ಬಾಲಿ ಪಾತ್ರದಲ್ಲಿ ನಟಿಸಿದ ಕಿಚ್ಚ ಸುದೀಪ್‍ರನ್ನು ಪರಿಚಯಿಸುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.

    ಈ ಟ್ವೀಟ್‍ಗೆ ಸುದೀಪ್, “ಹೋರಾಡುವ ಮಾತೇ ಬರುವುದಿಲ್ಲ ಸರ್. ಏಕೆಂದರೆ ವಿಲನ್‍ಗೆ ಹೀರೋ ಮೇಲೆ ಪ್ರೀತಿ ಆಗುತ್ತದೆ. ನಿಮ್ಮ ಜೊತೆ ಕೆಲಸ ಮಾಡಿದ್ದು ನನಗೆ ಖುಷಿ ತಂದಿದೆ. ನಿಮ್ಮ ಜೊತೆ ಹಂಚಿಕೊಂಡ ಎಲ್ಲ ಕ್ಷಣಗಳು ಅಮೂಲ್ಯವಾದದ್ದು” ಎಂದು ರೀ-ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

    ಇದಲ್ಲದೇ ಸುದೀಪ್ ಅವರು ದಬಾಂಗ್-3 ಚಿತ್ರದ ಕನ್ನಡ ಹಾಗೂ ಹಿಂದಿಯಲ್ಲಿರುವ ಫಸ್ಟ್ ಲುಕ್ ಟ್ವೀಟ್ ಮಾಡಿದ್ದಾರೆ. “ಬಾಲಿ ಸಿಂಗ್‍ನನ್ನು ಪರಿಚಯಿಸುತ್ತಿದ್ದೇನೆ. ಈ ಚಿತ್ರ 2019 ಕ್ರಿಸ್‍ಮಸ್ ಹಬ್ಬದಂದು ಬಿಡುಗಡೆಯಾಗಲಿದೆ. ಪ್ರಭುದೇವ ಸರ್ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.

    ಸುದೀಪ್ ದಬಾಂಗ್- 3 ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಲಿದ್ದು, ಈ ಪಾತ್ರ ಹೀರೋ ಪಾತ್ರಕ್ಕೆ ಇರುವಷ್ಟೇ ಸಮಾನ ಪ್ರಾಮುಖ್ಯತೆಯನ್ನು ಹೊಂದಿದೆ. ಸಲ್ಮಾನ್ ಖಾನ್ ಮತ್ತು ಅರ್ಬಾಜ್ ಖಾನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ.

  • ವಯಸ್ಸು ಹೆಚ್ಚಾಗ್ತಾ ಇರೋದ್ರಿಂದ ಭಯವಾಗ್ತಿದೆ: ಸಲ್ಮಾನ್ ಖಾನ್

    ವಯಸ್ಸು ಹೆಚ್ಚಾಗ್ತಾ ಇರೋದ್ರಿಂದ ಭಯವಾಗ್ತಿದೆ: ಸಲ್ಮಾನ್ ಖಾನ್

    ಮುಂಬೈ: ವಯಸ್ಸು ಹೆಚ್ಚು ಆಗುತ್ತಾ ಇರೋದರಿಂದ ಸಹಜವಾಗಿ ನನಗೆ ಭಯ ಆಗುತ್ತಿದೆ ಎಂದು ಬಾಲಿವುಡ್ ಭಾಯಿಜಾನ್, ದಬಾಂಗ್ ಹೀರೋ 53 ವರ್ಷದ ಸಲ್ಮಾನ್ ಖಾನ್ ಹೇಳಿದ್ದಾರೆ.

    ಖಾಸಗಿ ಮ್ಯಾಗಜೀನ್ ಒಂದಕ್ಕೆ ಸಂದರ್ಶನ ನೀಡಿರುವ ಸಲ್ಮಾನ್ ಖಾನ್ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಾನು ಹಲವು ವರ್ಷಗಳಿಂದ ಆ್ಯಕ್ಷನ್ ಸೀನ್ ಮಾಡಿಕೊಂಡು ಬಂದಿದ್ದರಿಂದ ನನ್ನ ದೇಹ ಒಗ್ಗಿಕೊಂಡಿದೆ. ಕೆಲವೊಮ್ಮೆ ಆಕ್ಷನ್ ಸೀನ್ ಚಿತ್ರೀಕರಿಸುವ ಮೊದಲು ಐದರಿಂದ ಆರು ಬಾರಿ ರಿಹರ್ಸಲ್ ಮಾಡೋದು ಅನಿವಾರ್ಯ. ಪ್ರತಿಯೊಂದು ದೃಶ್ಯಗಳು ತೆರೆಯ ಮೇಲೆ ಚೆನ್ನಾಗಿ ಬರಲು ರಿಹರ್ಸಲ್ ಅಗತ್ಯ. ಕೆಲವೊಮ್ಮೆ ತರಬೇತಿ ವೇಳೆ ಮೇಲಿಂದ ಕೆಳಗೆ ಬೀಳುವಾಗ ಸಣ್ಣ ನೋವುಗಳು ಉಂಟಾಗುತ್ತವೆ. ‘ಭಾರತ್’ ಬಳಿಕ ಪಕ್ಕಾ ಆ್ಯಕ್ಷನ್ ಸೀನ್ ಗಳನ್ನೇ ಹೊಂದಿರುವ ‘ದಬಾಂಗ್-3’ರಲ್ಲಿ ನಟಿಸುತ್ತಿದ್ದೇನೆ. ಪ್ರತಿ ದೃಶ್ಯದಲ್ಲಿಯೂ ಒಂದೇ ಎನರ್ಜಿಯನ್ನು ಕಾಪಾಡಿಕೊಳ್ಳಬೇಕು. ಈ ರೀತಿಯ ಸಿನಿಮಾಗಳಿಂದಾಗಿಯೇ ನನ್ನ ದೇಹ ಇಂದಿಗೂ ಫಿಟ್ ಆಗಿದೆ ಎಂದು ತಿಳಿಸಿದ್ದಾರೆ.

    ವಯಸ್ಸು ಹೆಚ್ಚಾಗೋದು ಎಲ್ಲರಲ್ಲಿಯೂ ಭಯ ಉಂಟು ಮಾಡುತ್ತದೆ. ಸಹಜವಾಗಿಯೇ ಆ ವಯಸ್ಸಿನ ನಂಬರ್ ನನ್ನನ್ನು ಭಯ ಹುಟ್ಟಿಸುತ್ತಿದೆ. ಪ್ರತಿ ಸಿನಿಮಾಗೂ ನಮ್ಮಿಂದ ಬೆಸ್ಟ್ ನೀಡಲು ಪ್ರಯತ್ನಿಸೋದು ನಮ್ಮ ಕರ್ತವ್ಯ. ಚಿತ್ರದ ದೃಶ್ಯಗಳು ಸಹಜವಾಗಿ ಕಾಣುವಂತೆ ಚಿತ್ರೀಕರಿಸಲು ನಿರ್ದೇಶಕರು ಪ್ರುಯತ್ನಿಸುತ್ತಾರೆ. ನಿರ್ದೇಶಕರು ಕಲ್ಪನೆಯನುಗುಣವಾಗಿ ನಾವು ನಟಿಸಬೇಕು. ಅಮಿತಾಬ್ ಬಚ್ಚನ್ ಮತ್ತು ಅನಿಲ್ ಕಪೂರ್ ಅವರಿಗೆ ವಯಸ್ಸಾಗಿದೆ ಎಂದ್ರೆ ಜನ ನಂಬಲ್ಲ. ಇಂದಿಗೂ ತಮ್ಮ ಫಿಟ್ ನೆಸ್ ನಿಂದಾಗಿ ಇಬ್ಬರೂ ನಟರೂ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಸಂಜಯ್ ದತ್, ತಮ್ಮ ತೂಕವನ್ನು ಇಳಿಸಿಕೊಂಡು ತೆಳ್ಳಗಾಗಿದ್ದಾರೆ ಎಂದರು.

    ಇದೇ ಸಂದರ್ಶನದಲ್ಲಿ ಸಲ್ಮಾನ್, ದಿನಕ್ಕೆ ಕೇವಲ ಎರಡೂವರೆ ಗಂಟೆಯಿಂದ ಮೂರು ಗಂಟೆ ಮಾತ್ರ ನಿದ್ದೆ ಮಾಡುತ್ತೇನೆ ಎಂಬ ವಿಚಾರವನ್ನು ತಿಳಿಸಿದ್ದಾರೆ. ಬಿಡುವಿನ ವೇಳೆ ಪೇಟಿಂಗ್, ಬರೆಯುತ್ತೇನೆ ಮತ್ತು ಟಿವಿ ನೋಡುತ್ತೇನೆ. ನಚ್ ಬಲಿಯೇ-9 ರಿಯಾಲಿಟಿ ಶೋ ಮತ್ತು ದಬಾಂಗ್-3ರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾನೆ. ಈ ಎರಡೂ ಕೆಲಸ ಮುಗಿದ ಬಳಿಕ ಸಂಜಯ್ ಲೀಲಾ ಬನ್ಸಾಲಿಯವರ ‘ಇಂಶಾಅಲ್ಲಾಹ’ ಚಿತ್ರಕ್ಕೆ ತೂಕ ಕಡಿಮೆ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.

  • ದಬಾಂಗ್‍ನಿಂದ ಸುಂದರ ಕ್ಷಣಗಳ ಬುತ್ತಿ ಹೊತ್ತು ತಂದ ಸುದೀಪ್

    ದಬಾಂಗ್‍ನಿಂದ ಸುಂದರ ಕ್ಷಣಗಳ ಬುತ್ತಿ ಹೊತ್ತು ತಂದ ಸುದೀಪ್

    ಬೆಂಗಳೂರು: ಚಂದನವನದ ಸ್ವಾತಿಮುತ್ತು, ಅಭಿನಯ ಚಕ್ರವರ್ತಿ ಸುದೀಪ್ ಬಾಲಿವುಡ್ ನ ಬಹುನಿರೀಕ್ಷಿತ ದಬಾಂಗ್-3 ಸಿನಿಮಾದಲ್ಲಿ ನಟಿಸುತ್ತಿರೋದು ಎಲ್ಲರಿಗೂ ತಿಳಿದಿದೆ. ಸದ್ಯ ಮೊದಲ ಶೆಡ್ಯೂಲ್ ಶೂಟಿಂಗ್ ಮುಗಿಸಿಕೊಂಡಿರುವ ಸುದೀಪ್ ದಬಾಂಗ್ ಸೆಟ್ ನಿಂದ ಸುಂದರ ಕ್ಷಣಗಳನ್ನು ಹೊತ್ತುಕೊಂಡು ಮನೆಗೆ ಬಂದಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಕಿಚ್ಚ, ಮೊದಲ ಶೂಟಿಂಗ್ ಶೆಡ್ಯೂಲ್ ರೋಮಾಂಚನವಾಗಿತ್ತು. ಇಲ್ಲಿಂದ ಹಲವು ಸಲ್ಮಾನ್ ಖಾನ್, ಸೋಹೈಲ್ ಖಾನ್, ಅರ್ಬಾಜ್ ಖಾನ್, ಸೋನಾಕ್ಷಿ ಸಿನ್ಹಾ, ಪ್ರಭುದೇವ್ ಟೀಮ್ ಜೊತೆಗೆ ಕಳೆದ ಸುಂದರ ಕ್ಷಣಗಳನ್ನು ಹೊತ್ತು ಮನೆಯತ್ತ ಸಾಗುತ್ತಿದ್ದೇನೆ. ಸಲ್ಮಾನ್ ಖಾನ್ ತಂದೆ ಸಲೀಂ ಸಾಬ್ ಕುಟುಂಬದ ಜೊತೆಗಿನ ಫೋಟೋವನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ. ಈಗ ಕೋಟಿಗೊಬ್ಬ-3ರ ಶೂಟಿಂಗ್ ಕೆಲಸ ಆರಂಭ ಎಂಬ ಸಿಹಿ ಸುದ್ದಿಯನ್ನು ನೀಡಿದ್ದಾರೆ.

    ಕನ್ನಡ ಮಾತ್ರವಲ್ಲದೇ ತೆಲಗು, ತಮಿಳು, ಹಿಂದಿ ಸಿನಿ ಅಂಗಳದಲ್ಲಿ ಸುದೀಪ್ ತಮ್ಮದೇ ಗುರುತು ಹೊಂದಿದ್ದಾರೆ. ಚಂದನವನದಲ್ಲಿ ಹೀರೋ ಆಗಿ ಮಿಂಚುವ ಸುದೀಪ್ ಪರಭಾಷೆಯ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿಯೇ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದಾರೆ. ದಬಾಂಗ್ ಚಿತ್ರದಲ್ಲಿ ಸಿಖಂದರ್ ಎಂಬ ಪಾತ್ರದಲ್ಲಿ ಕಿಚ್ಚ ನಟಿಸಿದ್ದು, ಚಿತ್ರ ಕ್ರಿಸ್‍ಮಸ್ ಹಬ್ಬಕ್ಕೆ ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ.

    2016ರಲ್ಲಿ ತೆರೆಕಂಡು ಹವಾ ಕ್ರಿಯೇಟ್ ಮಾಡಿದ್ದ ಕೋಟಿಗೊಬ್ಬ-2 ಮುಂದುವರಿದ ಕಥೆಯೇ ಕೋಟಿಗೊಬ್ಬ-3. ಈಗಾಗಲೇ ವಿದೇಶಗಳಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರ ಕೊನೆಯ ಹಂತದಲ್ಲಿದೆ. ದಬಾಂಗ್ ಶೂಟಿಂಗ್ ಮುಗಿದಿದ್ದು, ಕಿಚ್ಚ ಸುದೀಪ್ ಕೋಟಿಗೊಬ್ಬ-3ರತ್ತ ಮುಖ ಮಾಡಿದ್ದಾರೆ.

  • ಇದು ರೋಮಾಂಚಕ ದಿನ, ಅದ್ಭುತ ತಂಡ, ಅದ್ಭುತ ಜನ – ಸಲ್ಮಾನ್ ಖಾನ್‍ಗೆ ಕಿಚ್ಚ ಥ್ಯಾಂಕ್ಸ್

    ಇದು ರೋಮಾಂಚಕ ದಿನ, ಅದ್ಭುತ ತಂಡ, ಅದ್ಭುತ ಜನ – ಸಲ್ಮಾನ್ ಖಾನ್‍ಗೆ ಕಿಚ್ಚ ಥ್ಯಾಂಕ್ಸ್

    ಬೆಂಗಳೂರು: ಬಾಲಿವುಡ್ ಬಾಯ್ ಸಲ್ಮಾನ್ ಖಾನ್ ಜೊತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಹುನಿರೀಕ್ಷಿತ ದಬಾಂಗ್ 3 ಚಿತ್ರದಲ್ಲಿ ನಟಿಸುತ್ತಿದ್ದು, ಶೂಟಿಂಗ್‍ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಹಾಗೆಯೇ ಸಲ್ಲು ಬಾಯ್ ಜೊತೆ ಜಿಮ್‍ನಲ್ಲಿ ತಾವು ತೆಗೆಸಿಕೊಂಡಿರುವ ಫೋಟೋವನ್ನು ಹಾಕಿ ಕಿಚ್ಚ ಟ್ವೀಟ್ ಮಾಡಿ ಥ್ಯಾಂಕ್ಸ್ ಹೇಳಿದ್ದಾರೆ.

    ದಬಾಂಗ್ 3 ಚಿತ್ರ ಬಾಲಿವುಡ್‍ನ ಬಹುನಿರೀಕ್ಷಿತ ಚಿತ್ರ. ಅದರಲ್ಲೂ ಈ ಚಿತ್ರದಲ್ಲಿ ಕನ್ನಡದ ಖ್ಯಾತ ನಟ ಸುದೀಪ್ ನಟಿಸುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಸದ್ಯ ದಬಾಂಗ್ 3 ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವ ಕಿಚ್ಚ ಚಿತ್ರದ ಬಗ್ಗೆ ಹಾಗೂ ಈ ಚಿತ್ರದ ಹೀರೋ ಸಲ್ಮಾನ್ ಖಾನ್ ಬಗ್ಗೆ ಹಾಡಿ ಹೊಗಳಿದ್ದಾರೆ. ಜೊತೆಗೆ ತಮಗೆ ಸಾಥ್ ನೀಡುತ್ತಿರುವ ಸಲ್ಲುಗೆ ಪ್ರೀತಿಯಿಂದ ಧನ್ಯವಾದಗಳನ್ನು ಕೂಡ ತಿಳಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಬಿಸಿಲ ಶೆಕೆ ಜೋರಾಗಿದ್ದರೂ ಅದು ಸೆಟ್‍ನಲ್ಲಿ ಇರುವ ಉತ್ಸಾಹವನ್ನು ಕುಗ್ಗಿಸಲು ಆಗಲ್ಲ. ಇದು ರೋಮಾಂಚಕ ದಿನ, ಅದ್ಭುತ ತಂಡ, ಅದ್ಭುತ ಜನ. ಹಾಗೆಯೇ ಇಲ್ಲಿರುವ ಮನಮೋಹಕ ಜಿಮ್ ಒಂದುರೀತಿ ಬೋನಸ್ ಸಿಕ್ಕ ಹಾಗೆ. ದಬಾಂಗ್ 3 ಚಿತ್ರದ ಮೊದಲ ದಿನ ಖುಷಿ ಖುಷಿಯಾಗಿ ಆರಂಭವಾಗಿದೆ. ನನಗೆ ನನ್ನ ಮನೆಯಲ್ಲಿದ್ದೇನೆ ಎನ್ನುವ ರೀತಿ ನೋಡಿಕೊಳ್ಳುತ್ತಿರುವುದಕ್ಕೆ ಸಲ್ಮಾನ್ ಖಾನ್ ಸರ್ ಗೆ ಧನ್ಯವಾದಗಳು ಎಂದು ಬರೆದು ಸಲ್ಮಾನ್ ಖಾನ್ ಹಾಗೂ ದಬಾಂಗ್ 3ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

    ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ `ರಕ್ತ ಚರಿತ್ರ 2’ರ ನಂತರ ಸುದೀಪ್ ಹಿಂದಿ ಚಿತ್ರರಂಗಕ್ಕೆ ಹಿಂದಿರುಗುವುದಕ್ಕೆ ದಬಾಂಗ್ 3 ಒಳ್ಳೆಯ ಅವಕಾಶ ನೀಡಿದೆ. ವರದಿಗಳ ಪ್ರಕಾರ, ಸುದೀಪ್ ಕಾಪ್-ಆಕ್ಷನ್‍ನ 3ನೇ ಕಂತಿನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದು, ಇದನ್ನು ಪ್ರಭುದೇವಾ ನಿರ್ದೇಶಿಸಲಿದ್ದಾರೆ.

    ಸುದೀಪ್ ದಬಾಂಗ್ 3 ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಲಿದ್ದು, ಈ ಪಾತ್ರ ಹೀರೋ ಪಾತ್ರಕ್ಕೆ ಇರುವಷ್ಟೇ ಸಮಾನ ಪ್ರಾಮುಖ್ಯತೆಯನ್ನು ಹೊಂದಿದೆ. ಚಿತ್ರದಲ್ಲಿ ಗೂಂಡಾ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಲ್ಮಾನ್ ಖಾನ್ ಮತ್ತು ಅರ್ಬಾಜ್ ಖಾನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

  • ಸೋದರ ಸಲ್ಮಾನ್ ಖಾನ್ ಮೇಲೆ ಅರ್ಬಾಜ್ ಖಾನ್ ಮುನಿಸು!

    ಸೋದರ ಸಲ್ಮಾನ್ ಖಾನ್ ಮೇಲೆ ಅರ್ಬಾಜ್ ಖಾನ್ ಮುನಿಸು!

    ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಮೇಲೆ ಸೋದರ ಅರ್ಬಾಜ್ ಮುನಿಸಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಸಿನಿ ಅಂಗಳದಲ್ಲಿ ಹರಿದಾಡುತ್ತಿದೆ. ದಬಾಂಗ್ 3 ಸಿನಿಮಾ ಮಾಡಲಿದ್ದೇನೆ ಎಂದು ಸಲ್ಮಾನ್ ಹೇಳಿಕೊಂಡಿದ್ದರೂ, ಚಿತ್ರೀಕರಣ ಆರಂಭವಾಗಿಲ್ಲ.

    ಅರ್ಬಾಜ್ ಖಾನ್ ನಿರ್ಮಾಣದಲ್ಲಿ ದಬಾಂಗ್-3 ಮೂಡಿ ಬರಲಿದೆ. ಈ ಹಿಂದೆ ಸಲ್ಮಾನ್, ಅರ್ಬಾಜ್ ನಿರ್ಮಾಣದ ದಬಾಂಗ್-3 ಚಿತ್ರೀಕರಣ ಮಾರ್ಚ್ ನಲ್ಲಿ ಆರಂಭವಾಗಲಿದೆ ಎಂದು ಹೇಳಿಕೊಂಡಿದ್ದರು. ಆದ್ರೆ ಮಾರ್ಚ್ ಕಳೆದು ಜುಲೈ ಬಂದರೂ ಸಿನಿಮಾದತ್ತ ಸಲ್ಲು ಆಸಕ್ತಿ ತೋರಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.

    ಯಾಕೆ ಈ ಮುನಿಸು?:
    ಸದ್ಯ ಸಲ್ಮಾನ್ ತನ್ನ ಹಿರಿಯ ಸಹೋದರಿ ಅಲ್ವೀರಾ ನಿರ್ಮಾಣದ ‘ಭಾರತ್’ ಶೂಟಿಂಗ್‍ನಲ್ಲಿ ಸಕ್ರಿಯರಾಗಿದ್ದಾರೆ. ಭಾರತ್ ಬಳಿಕ ಬೇರೆ ಸಿನಿಮಾಗಳನ್ನು ಒಪ್ಪಿಕೊಂಡಿರುವ ಸಲ್ಮಾನ್ ದಬಾಂಗ್-3 ರತ್ತ ಮುಖ ಮಾಡುತ್ತಿಲ್ಲ. ಇದರಿಂದ ಸಹಜವಾಗಿ ಅರ್ಬಾಜ್ ಖಾನ್ ಸೋದರನ ಮೇಲೆ ಮುನಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಸಲ್ಮಾನ್ ಖಾನ್ ದಬಾಂಗ್-3 ಸಿನಿಮಾದಿಂದ ದೂರ ಉಳಿಯುತ್ತೀರೋದಕ್ಕೆ ಕಾರಣ ರೇಸ್-3. ಹೌದು, ಈ ವರ್ಷದ ರಂಜಾನ್ ಗೆ ರೇಸ್-3 ಸಿನಿಮಾ ರಿಲೀಸ್ ಆಗಿ ಕೆಲವೇ ದಿನಗಳಲ್ಲಿ ಗಲ್ಲಾ ಪೆಟ್ಟಿಗೆಯನ್ನು ತುಂಬಿಸಿಕೊಂಡಿತ್ತು. ಆದ್ರೆ ವಿಮರ್ಶಕರು ಹಾಗು ಅಭಿಮಾನಿಗಳಿಂದ ಮಾತ್ರ ರೇಸ್-3ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ರೇಸ್-3 ರಿಲೀಸ್ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಅಭಿಮಾಗಳು ಟ್ರೋಲ್ ಮಾಡಲಾರಂಭಿಸಿದ್ರು. ನಮಗೆ ರೇಸ್-3 ಒಂದೇ ಸಾಕು, ದಬಾಂಗ್-3 ಬೇಡ ಎಂದು ಬರೆದು ಸಲ್ಮಾನ್ ಗೆ ಟ್ಯಾಗ್ ಮಾಡಲಾರಂಭಿಸಿದರು.

    ಸೋಶಿಯಲ್ ಮೀಡಿಯಾದಲ್ಲಿ ಮೂರನೇ ಆವೃತ್ತಿಯ ಚಿತ್ರಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ದಬಾಂಗ್-3 ರಿಂದ ದೂರ ಉಳಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಸಲ್ಮಾನ್‍ಗಾಗಿ ಕಥೆ ಸಿದ್ಧಪಡಿಸಿಕೊಂಡಿರುವ ಅರ್ಬಾಜ್ ಮುನಿಸಿಗೆ ಕಾರಣವಾಗಿದೆ ಎನ್ನಲಾಗಿದೆ.