Tag: Dabang Delhi

  • ಒಂದಂಕದ ರೋಚಕ ಜಯ – ಚೊಚ್ಚಲ ಬಾರಿ ಪ್ರೋ ಕಬಡ್ಡಿ ಚಾಂಪಿಯನ್ ಆದ ಡೆಲ್ಲಿ

    ಒಂದಂಕದ ರೋಚಕ ಜಯ – ಚೊಚ್ಚಲ ಬಾರಿ ಪ್ರೋ ಕಬಡ್ಡಿ ಚಾಂಪಿಯನ್ ಆದ ಡೆಲ್ಲಿ

    ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ ಪ್ರೋ ಕಬಡ್ಡಿ ಫೈನಲ್ ಪಂದ್ಯದಲ್ಲಿ ಕಡೆಯ ಸೆಕೆಂಡ್‍ನಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ 36 – 37, 1 ಅಂಕದ ಮುನ್ನಡೆಯಿಂದ ವಿಜಯ ಪತಾಕೆ ಹಾರಿಸಿದ ದಬಾಂಗ್ ಡೆಲ್ಲಿ ಚಾಂಪಿಯನ್ ಆಗಿದೆ.

    4 ಬಾರಿ ಫೈನಲ್ ಪ್ರವೇಶಿಸಿದ ಪಾಟ್ನಾಗೆ ಫೈನಲ್ ಪಂದ್ಯದಲ್ಲಿ ಡೆಲ್ಲಿ ಟಕ್ಕರ್ ನೀಡಿದೆ. ಡೆಲ್ಲಿಯ ವಿಜಯ್ ಮಲಿಕ್ ಮತ್ತು ನವೀನ್ ಎಕ್ಸ್‌ಪ್ರೆಸ್ ಖ್ಯಾತಿಯ ನವೀನ್ ಕುಮಾರ್ ಭರ್ಜರಿ ರೈಡ್ ಮೂಲಕ ಪಾಟ್ನಾಗೆ ಪಂಚ್ ನೀಡಿದರು. ಕೊನೆಯ ಸೆಕೆಂಡ್ ವರೆಗೆ ರೋಚಕವಾಗಿ ಕೂಡಿದ ಪಂದ್ಯದಲ್ಲಿ ಎರಡು ತಂಡಗಳು ಕೂಡ ಜಿದ್ದಾಜಿದ್ದಿನ ಕಾದಾಟಕ್ಕೆ ಸಾಕ್ಷಿಯಾಯಿತು. ಎರಡು ತಂಡಗಳು ಕೂಡ ಬಲಿಷ್ಠ ಕಾದಾಟ ನಡೆಸಿ ಪ್ರಶಸ್ತಿಗೆ ಮುತ್ತಿಕ್ಕುವ ಕನಸಿನಲ್ಲಿತ್ತು. ಈ ಕನಸನ್ನು ಡೆಲ್ಲಿ ನನಸು ಮಾಡಿಕೊಂಡಿತು.‌ ಇದನ್ನೂ ಓದಿ: ಮಾರ್ಚ್ 26ಕ್ಕೆ ಐಪಿಎಲ್ ಆರಂಭ ಮೇ 29ಕ್ಕೆ ಫೈನಲ್ – 2 ನಗರಗಳಲ್ಲಿ 70 ಪಂದ್ಯ

    ಡೆಲ್ಲಿ ಪರ ವಿಜಯ್ ಮಲಿಕ್ 8 ರೈಡ್, 1 ಟೇಕಲ್, 5 ಬೋನಸ್ ಸಹಿತ 14 ಅಂಕ ಮತ್ತು ನವೀನ್ ಕುಮಾರ್ 11 ರೈಡ್, 2 ಬೋನಸ್ ಅಂಕ ಸಹಿತ ಒಟ್ಟು 13 ಪಾಯಿಂಟ್ ಕಲೆಹಾಕಿ ಗೆಲುವಿನ ರೂವಾರಿಯಾದರು. ಇತ್ತ ಪಾಟ್ನಾ ಪರ ಸಚಿನ್ 7 ರೈಡ್, 1 ಟೇಕಲ್, 2 ಬೋನಸ್ ಸಹಿತ ಸೂಪರ್ 10 ಪೂರೈಸಿ ಮಿಂಚಿದರೂ ಆ ಹೋರಾಟ ವ್ಯರ್ಥವಾಯಿತು. ಇದನ್ನೂ ಓದಿ: ಕ್ರಿಕೆಟ್ ದಂತಕಥೆಗಳೊಂದಿಗೆ ಬಾಲಿವುಡ್ ತಾರೆಗಳ ಕ್ರಿಕೆಟ್ ಪಂದ್ಯ

    ಪಾಟ್ನಾ ಪೈರೇಟ್ಸ್ 29 ರೈಡ್, 4 ಟೇಕಲ್, 2 ಆಲೌಟ್ ಮತ್ತು 1 ಇತರೆ ಅಂಕ ಸಹಿತ ಒಟ್ಟು 36 ಅಂಕ ಕಲೆಹಾಕಿತು. ಡೆಲ್ಲಿ 27 ರೈಡ್, 2 ಸೂಪರ್ ರೈಡ್, 4 ಟೇಕಲ್, 2 ಆಲೌಟ್ ಮತ್ತು 4 ಇತರೆ ಅಂಕ ಸಹಿತ 37 ಅಂಕ ಸಂಪಾದಿಸಿ 1 ಅಂಕದ ಜಯ ದಾಖಲಿಸಿ ಪ್ರೊ ಕಬಡ್ಡಿ 8 ಆವೃತ್ತಿಯ ಪ್ರಶಸ್ತಿಗೆ ಮುತ್ತಿಕ್ಕಿತು.

     

  • ಡೆಲ್ಲಿ ದರ್ಬಾರ್‌ಗೆ ಬುಲ್ಸ್ ಪಲ್ಟಿ- ಫೈನಲ್‍ನಲ್ಲಿ ಡೆಲ್ಲಿ Vs ಪಾಟ್ನಾ ಫೈಟ್

    ಡೆಲ್ಲಿ ದರ್ಬಾರ್‌ಗೆ ಬುಲ್ಸ್ ಪಲ್ಟಿ- ಫೈನಲ್‍ನಲ್ಲಿ ಡೆಲ್ಲಿ Vs ಪಾಟ್ನಾ ಫೈಟ್

    ಬೆಂಗಳೂರು: ಸೆಮಿಫೈನಲ್ ಕಾದಾಟದಲ್ಲಿ ತವರಿನ ತಂಡ ಬೆಂಗಳೂರು ಬುಲ್ಸ್ ವಿರುದ್ಧ ದಬಾಂಗ್ ಡೆಲ್ಲಿ 40-35, 5 ಅಂಕಗಳ ಅಂತರದ ಜಯ ಗಳಿಸಿ ಫೈನಲ್‍ಗೆ ಲಗ್ಗೆ ಇಟ್ಟಿದೆ.

    ಪಂದ್ಯದ ಆರಂಭದಿಂದಲೂ ಬೆಂಗಳೂರು ಮೇಲೆ ಸವಾರಿ ಮಾಡಿದ ಡೆಲ್ಲಿ ತಂಡದ ಕ್ಯಾಪ್ಟನ್ ನವೀನ್ ಕುಮಾರ್ ಸೂಪರ್ 10 ಅಂಕಗಳಿಸಿ ಗೆಲುವಿನ ರೂವಾರಿಯಾದರು. ಬುಲ್ಸ್ ಪರ ಗೆಲುವಿಗಾಗಿ ಹೋರಾಡಿದ ಪವನ್ ಕುಮಾರ್ ಹೋರಾಟ ವ್ಯರ್ಥವಾಯಿತು. ಮೊದಲಾರ್ಧದಲ್ಲಿ ಡೆಲ್ಲಿ 16 – ಬೆಂಗಳೂರು 17 ಪಾಯಿಂಟ್‍ಗಳೊಂದಿಗೆ ಬೆಂಗಳೂರು ಒಂದಂಕ್ಕದ ಮುನ್ನಡೆ ಪಡೆದುಕೊಂಡಿತು. ಬಳಿಕ ದ್ವಿತೀಯಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಡೆಲ್ಲಿ ಬುಲ್ಸ್ ಬೆವರಿಳಿಸಿತು. ಇದನ್ನೂ ಓದಿ: ಟಗರು ಲುಕ್‍ನಲ್ಲಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ

    ಬೆಂಗಳೂರು ಬುಲ್ಸ್ 24 ರೈಡ್, 9 ಟೇಕಲ್, 2 ಇತರ ಅಂಕ ಸಹಿತ ಒಟ್ಟು 35 ಅಂಕ ಕಲೆ ಹಾಕಿತು. ಡೆಲ್ಲಿ 23 ರೈಡ್, 2 ಸೂಪರ್ ರೈಡ್, 11 ಟೇಕಲ್, 4 ಆಲೌಟ್ ಮತ್ತು 2 ಇತರ ಅಂಕ ಸಹಿತ 40 ಅಂಕ ಸಂಪಾದಿಸಿ 5 ಅಂಕಗಳ ಜಯ ಸಾಧಿಸಿತು. ರೈಡಿಂಗ್‍ನಲ್ಲಿ ಡೆಲ್ಲಿ ಪರ ನವೀನ್ ಕುಮಾರ್ 13 ರೈಡ್, 1 ಬೋನಸ್ ಸಹಿತ 14 ಪಾಯಿಂಟ್ ತಂಡಕ್ಕೆ ಕೊಡುಗೆ ನೀಡಿದರು. ಇತ್ತ ಬೆಂಗಳೂರು ಪರ ಪವನ್ ಕುಮಾರ್ 14 ರೈಡ್, 4 ಬೋನಸ್ ಸಹಿತ 18 ಅಂಕ ಕಲೆ ಹಾಕಿದರೂ ಹೋರಾಟ ವ್ಯರ್ಥ ಆಯಿತು. ಇದನ್ನೂ ಓದಿ: ಮೈದಾನದಲ್ಲಿ ಸಹ ಆಟಗಾರನಿಗೆ ಕಪಾಳಮೋಕ್ಷ ಮಾಡಿ ತಬ್ಬಿಕೊಂಡ ಹ್ಯಾರಿಸ್ ರೌಫ್ – ವೀಡಿಯೋ ವೈರಲ್

    ಈ ಮೊದಲು ನಡೆದ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಯಪಿ ಯೋಧ ವಿರುದ್ಧ ಪಾಟ್ನಾ ಪೈರೇಟ್ಸ್ 38-27 ಅಂಕಗಳೊಂದಿಗೆ ಒಟ್ಟು 11 ಅಂಕಗಳ ಅಂತರದ ಜಯ ಸಾಧಿಸಿದೆ. ಈ ಮೂಲಕ ಫೆ.25 ರಂದು ಪಾಟ್ನಾ ಪೈರೇಟ್ಸ್ ಮತ್ತು ದಬಾಂಗ್ ಡೆಲ್ಲಿ ಫೈನಲ್ ಪಂದ್ಯದಲ್ಲಿ ಹೋರಾಡಲಿದೆ.

  • ಬೆಂಗಳೂರು vs ಡೆಲ್ಲಿ ರೋಚಕ ಕಾದಾಟ – ಪಂದ್ಯ ‘ಟೈ’ನಲ್ಲಿ ಅಂತ್ಯ

    ಬೆಂಗಳೂರು vs ಡೆಲ್ಲಿ ರೋಚಕ ಕಾದಾಟ – ಪಂದ್ಯ ‘ಟೈ’ನಲ್ಲಿ ಅಂತ್ಯ

    ಬೆಂಗಳೂರು: ಕೊನೆಯ ಸೆಕೆಂಡ್‌ವರೆಗೆ ಗೆಲುವಿಗಾಗಿ ಹೋರಾಡಿದ ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ ನಡುವಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿದೆ.

    ಕಡೆಯ 1 ನಿಮಿಷಗಳಲ್ಲಿ ಎರಡು ತಂಡದ ಆಟಗಾರರ ನಡುವೆ ಜಿದ್ದಾಜಿದ್ದಿನ ಕಾಳಗ ರಂಗೇರಿತ್ತು. ಬೆಂಗಳೂರು ಬುಲ್ಸ್ ಪರ ಕೊನೆಯ ರೈಡ್ ಮಾಡಿದ ಪವನ್ ಶೆರವತ್ ಅವರನ್ನು ಡೆಲ್ಲಿ ತಂಡದ ಮಂಜಿತ್ ಚಿಲ್ಲರ್ ಬೇಟೆಯಾಡಿ ಒಂದಂಕ್ಕದ ಮುನ್ನಡೆಯಲ್ಲಿದ್ದ ಪಂದ್ಯವನ್ನು ಸಮಬಲಗೊಳಿಸಿದರು. ಅಂತಿಮವಾಗಿ 4 ಸೆಕೆಂಡ್‍ನ ಆಟ ಬಾಕಿ ಇತ್ತು ಡೆಲ್ಲಿ ಪರ ಕೊನೆಯ ರೈಡ್ ಮಾಡಿದ ನವೀನ್ ಕುಮಾರ್ ಯಾವುದೇ ಅಂಕ ಗಳಿಸದೆ ಹಿಂದಿರುಗಿ ಪಂದ್ಯ ಡ್ರಾದಲ್ಲಿ ಮುಕ್ತಾಯಗೊಳ್ಳುವಂತೆ ನೋಡಿಕೊಂಡರು. ಇದನ್ನೂ ಓದಿ: Under-19 World Cup: ಫೈನಲ್‍ನಲ್ಲಿ ಟೀಂ ಇಂಡಿಯಾ ದಾಖಲೆ

    ಬೆಂಗಳೂರು ಪರ ಪವನ್ ಶೆರವತ್ 11 ರೈಡ್, 1 ಟೇಕಲ್ ಮತ್ತು 5 ಬೋನಸ್ ಸಹಿತ 17 ಪಾಯಿಂಟ್ ಗಳಿಸಿದರೆ, ಡೆಲ್ಲಿ ಪರ ನವೀನ್ ಕುಮಾರ್ 11 ರೈಡ್, 2 ಬೋನಸ್ ಸಹಿತ 13 ಅಂಕ ಕಲೆಹಾಕಿದರು. ಇವರಿಬ್ಬರೂ ಕೂಡ ಸೂಪರ್‌ 10 ಸಾಧಿಸಿದರು. ಎರಡು ತಂಡಗಳು ಕೂಡ ರೈಡಿಂಗ್‍ನಲ್ಲಿ ಮಿಂಚಿದವು. ಡೆಲ್ಲಿ 21 ರೈಡ್, 11 ಟೇಕಲ್, 4 ಆಲೌಟ್ ಅಂಕ ಸಹಿತ ಒಟ್ಟು 36 ಪಾಯಿಂಟ್ ಗಳಿಸಿದರೆ, ಬೆಂಗಳೂರು, 21 ರೈಡ್, 9 ಟೇಕಲ್, 4 ಆಲೌಟ್ ಮತ್ತು 2 ಇತರೆ ಅಂಕ ಸಹಿತ 36 ಅಂಕ ಕಲೆಹಾಕಿ ಸಮಬಲ ಸಾಧಿಸಿತು. ಇದನ್ನೂ ಓದಿ: ಕೊನೆಯ ಎಸೆತದಲ್ಲಿ 5 ರನ್ ಗುರಿ – ಸಿಕ್ಸ್, ಫೋರ್ ಬಾರಿಸದೆ ಪಂದ್ಯ ಗೆದ್ದ ತಂಡ, ವೀಡಿಯೋ ವೈರಲ್!

  • ಬುಲ್ಸ್ ಎದುರು ಡಲ್ ಹೊಡೆದ ದಬಾಂಗ್ ಡೆಲ್ಲಿ

    ಬುಲ್ಸ್ ಎದುರು ಡಲ್ ಹೊಡೆದ ದಬಾಂಗ್ ಡೆಲ್ಲಿ

    ಬೆಂಗಳೂರು: ದಬಾಂಗ್ ಡೆಲ್ಲಿ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ 61 – 22 ಪಾಯಿಂಟ್‍ಗಳೊಂದಿಗೆ 39 ಅಂಕಗಳ ಅಂತರದ ಜಯ ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಒಟ್ಟು 28 ಅಂಕಗಳಿಂದ ಮೂರನೇ ಸ್ಥಾನದಲ್ಲಿದೆ.

    ಏಕಮುಖಿಯಾಗಿ ಸಾಗಿದ ಪಂದ್ಯದಲ್ಲಿ ಪವನ್ ಶೆರವತ್ ಡೆಲ್ಲಿ ವಿರುದ್ಧ ರೈಡಿಂಗ್‍ನಲ್ಲಿ ಸವಾರಿ ಮಾಡಿದರು. ಒಟ್ಟು 22 ರೈಡ್ ಮತ್ತು 5 ಬೋನಸ್ ಪಾಯಿಂಟ್‍ನೊಂದಿಗೆ ಒಟ್ಟು 27 ಅಂಕಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಭರತ್ 3 ರೈಡ್, 2 ಟೇಕಲ್ ಮತ್ತು 2 ಬೋನಸ್ ಪಾಯಿಂಟ್ ಸೇರಿ ಒಟ್ಟು 7 ಅಂಕ ತಂಡಕ್ಕೆ ಕೊಡುಗೆ ನೀಡಿದರು. ಇದನ್ನೂ ಓದಿ: ಯಾದವ್ ಬೌಲಿಂಗ್‍ಗೆ ಕೇಶವ್ ಕ್ಲೀನ್ ಬೌಲ್ಡ್ – ಎಗರಿ ಮಾರುದ್ದ ಬಿದ್ದ ಮಿಡಲ್ ಸ್ಟಂಪ್

    ಮೊದಲಾರ್ಧದಿಂದಲೇ ಭಾರೀ ಮುನ್ನಡೆ ಪಡೆದುಕೊಂಡ ಬೆಂಗಳೂರು 27 – 11 ಅಂಕಗಳಿಂದ ಡೆಲ್ಲಿಗೆ ಟಕ್ಕರ್ ಕೊಟ್ಟಿತು. ನಂತರ ದ್ವಿತೀಯಾರ್ಧದಲ್ಲಿ ಪಾಯಿಂಟ್ ಹೆಚ್ಚಿಸಿದ ಬೆಂಗಳೂರು ತಂಡ ಒಟ್ಟು 35 ರೈಡಿಂಗ್, 1 ಸೂಪರ್ ರೈಡ್, 15 ಟೇಕಲ್, 10 ಆಲೌಟ್ ಮತ್ತು 1 ಇತರೆ ಅಂಕ ಸಹಿತ ಒಟ್ಟು 61 ಪಾಯಿಂಟ್ ಕಲೆ ಹಾಕಿತು. ಇತ್ತ ಡೆಲ್ಲಿ 16 ರೈಡಿಂಗ್, 4 ಟೇಕಲ್, 2 ಇತರೆ ಅಂಕಗಳಿಂದ 22 ಪಾಯಿಂಟ್ ಗಳಿಸಿ 39 ಅಂಕಗಳ ಅಂತರದ ದೊಡ್ಡ ಸೋಲು ಕಂಡಿತು. ಇದನ್ನೂ ಓದಿ: ವಾಷಿಂಗ್ಟನ್ ಸುಂದರ್‌ಗೆ ಕೊರೊನಾ – ಜಯಂತ್ ಯಾದವ್‌ಗೆ ಒಲಿದ ಅದೃಷ್ಟ