Tag: dabang 3

  • ಮಗಳಿಗಾಗಿ ದಬಾಂಗ್- 3 ಚಿತ್ರದಿಂದ ಕಿಚ್ಚ ಬ್ರೇಕ್

    ಮಗಳಿಗಾಗಿ ದಬಾಂಗ್- 3 ಚಿತ್ರದಿಂದ ಕಿಚ್ಚ ಬ್ರೇಕ್

    ಬೆಂಗಳೂರು: ಕಿಚ್ಚ ಸುದೀಪ್ ವಿಶೇಷ ವ್ಯಕ್ತಿಯೊಬ್ಬರಿಗಾಗಿ ‘ದಬಾಂಗ್ -3’ ಚಿತ್ರದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.

    ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸುದೀಪ್ ಪ್ರತಿ ವರ್ಷ ತಮ್ಮ ಮಗಳ ಹುಟ್ಟುಹಬ್ಬವನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಕೆಲಸದಲ್ಲಿ ಎಷ್ಟೇ ಬ್ಯುಸಿಯಿದ್ದರೂ ಸುದೀಪ್ ತಮ್ಮ ಮಗಳ ಹುಟ್ಟುಹಬ್ಬದ ದಿನ ಅವಳ ಜೊತೆಯಲ್ಲಿ ಇರುತ್ತಾರೆ.

    ಈ ಬಗ್ಗೆ ಸುದೀಪ್ ತಮ್ಮ ಟ್ವಿಟ್ಟರಿನಲ್ಲಿ ಮಗಳ ಜೊತೆಯಿರುವ ಫೋಟೋ ಹಾಕಿ ಅದಕ್ಕೆ, “ನನ್ನ ಡಾರ್ಲಿಂಗ್ ಏಂಜೆಲ್‍ಗೆ ಹುಟ್ಟುಹಬ್ಬದ ಶುಭಾಶಯಗಳು. ನನ್ನ ಸಾನು ಬೇಬಿ ಯಾವಾಗಲೂ ಸಂತೋಷದಿಂದ ಇರು ಎಂದು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಇತ್ತ ಸುದೀಪ್ ಅವರ ಪತ್ನಿ ಪ್ರಿಯಾ ಅವರು ಕೂಡ ಸುದೀಪ್ ಹಾಗೂ ಸಾನ್ವಿ ಜೊತೆಯಿರುವ ಫೋಟೋ ಹಾಕಿದ್ದಾರೆ. ಅಲ್ಲದೆ ಅವರು ಕೂಡ ತಮ್ಮ ಮಗಳಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.

    ಭಾನುವಾರ ಸುದೀಪ್ ತಮ್ಮ ಟ್ವಿಟ್ಟರಿನಲ್ಲಿ, ಮೊದಲ ಶೂಟಿಂಗ್ ಶೆಡ್ಯೂಲ್ ರೋಮಾಂಚನವಾಗಿತ್ತು. ಇಲ್ಲಿಂದ ಹಲವು ಸಲ್ಮಾನ್ ಖಾನ್, ಸೋಹೈಲ್ ಖಾನ್, ಅರ್ಬಾಜ್ ಖಾನ್, ಸೋನಾಕ್ಷಿ ಸಿನ್ಹಾ, ಪ್ರಭುದೇವ್ ಟೀಮ್ ಜೊತೆಗೆ ಕಳೆದ ಸುಂದರ ಕ್ಷಣಗಳನ್ನು ಹೊತ್ತು ಮನೆಯತ್ತ ಸಾಗುತ್ತಿದ್ದೇನೆ. ಸಲ್ಮಾನ್ ಖಾನ್ ತಂದೆ ಸಲೀಂ ಸಾಬ್ ಕುಟುಂಬದ ಜೊತೆಗಿನ ಫೋಟೋವನ್ನು ಸುದೀಪ್ ಅಪ್ಲೋಡ್ ಮಾಡಿಕೊಂಡಿದ್ದಾರೆ. ಈಗ ಕೋಟಿಗೊಬ್ಬ-3ರ ಶೂಟಿಂಗ್ ಕೆಲಸ ಆರಂಭ ಎಂಬ ಸಿಹಿ ಸುದ್ದಿಯನ್ನು ನೀಡಿದ್ದಾರೆ.

    ದಬಾಂಗ್-3 ಚಿತ್ರದಲ್ಲಿ ಸಿಖಂದರ್ ಎಂಬ ಪಾತ್ರದಲ್ಲಿ ಕಿಚ್ಚ ನಟಿಸುತ್ತಿದ್ದು, ಚಿತ್ರ ಕ್ರಿಸ್‍ಮಸ್ ಹಬ್ಬಕ್ಕೆ ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ.

  • ಕಿಚ್ಚ ದಬಾಂಗ್‍ಗೆ ಹೋದರೆ ಬಿಲ್ಲಾರಂಗನ ಕತೆಯೇನು?

    ಕಿಚ್ಚ ದಬಾಂಗ್‍ಗೆ ಹೋದರೆ ಬಿಲ್ಲಾರಂಗನ ಕತೆಯೇನು?

    ಪೈಲ್ವಾನ್ ಸಿನಿಮಾ ಮುಗಿಸಿ ಕೋಟಿಗೊಬ್ಬ-3 ಸಿನಿಮಾದ ಶೂಟಿಂಗ್‍ನಲ್ಲಿ ತೊಡಗಿಕೊಂಡಿರುವ ಸುದೀಪ್ ಮುಂದಿನ ಸಿನಿಮಾ ಯಾವುದು? ರಂಗಿತರಂಗ, ರಾಜರಥ ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದಲ್ಲಿ ‘ಬಿಲ್ಲಾರಂಗ’ದಲ್ಲಿ ನಟಿಸುತ್ತಾರೆ ಅನ್ನೋದು ಈಗಾಗಲೇ ಹೊರಬಿದ್ದಿರುವ ವಿಚಾರ. ಇದಕ್ಕೂ ಮುಂದೆ ಸರಿಸುಮಾರು ಎಂಭತ್ತು ದಿನಗಳ ಡೇಟ್ಸ್ ಅನ್ನು ದಬಾಂಗ್-3 ಗಾಗಿ ಸುದೀಪ್ ನೀಡಿದ್ದಾರೆ. ಸಲ್ಮಾನ್ ಖಾನ್ ನಟನೆಯ ಈ ಸಿನಿಮಾವನ್ನು ಪ್ರಭುದೇವಾ ನಿರ್ದೇಶಿಸುತ್ತಿದ್ದು, ಇದರಲ್ಲಿ ಸುದೀಪ್ ಅವರಿಗೆ ಹೀರೋಗೆ ಸರಿಸಮನಾಗಿರುವ ವಿಲನ್ ಪಾತ್ರ ಎಂದು ಹೇಳಲಾಗುತ್ತಿದೆ.

    ಕನ್ನಡದಲ್ಲಿ ಸೂಪರ್ ಸ್ಟಾರ್‍ಗಳಾಗಿರುವ ಸುದೀಪ್, ಉಪೇಂದ್ರರಂಥಾ ನಟರು ಪರಭಾಷೆಗಳಲ್ಲಿ ವಿಲನ್ನುಗಳಾಗಿ ಹೆಸರು ಮಾಡುತ್ತಿರೋದು ವಿಚಿತ್ರವಾದರೂ ವಿಶೇಷವಾಗಿದೆ. ಅಂದಹಾಗೆ ಸುದೀಪ್ ಹಾಲಿವುಡ್ ಸಿನಿಮಾವೊಂದರಲ್ಲಿ ನಟಿಸುವುದಾಗಿ ಸುದ್ದಿಯಾಗಿತ್ತಲ್ಲಾ? ಅದು ಖುದ್ದು ಸುದೀಪ್ ಅವರ ಕಾರಣಕ್ಕೇ ಒಮ್ಮೆ ಮುಂದೂಡಲಾಗಿದೆಯಂತೆ.

    ಈಗ ದಬಾಂಗ್-3ಗಾಗಿ ಎಂಭತ್ತು ದಿನ ಡೇಟ್ಸ್ ಕೊಟ್ಟಿರುವ ಸುದೀಪ್ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಾರಾ ಇಲ್ಲವಾ ಅನ್ನೋದು ಇದೇ ಏಪ್ರಿಲ್‍ನಲ್ಲಿ ಗೊತ್ತಾಗಲಿದೆಯಂತೆ. ಒಂದು ವೇಳೆ ಹಾಲಿವುಡ್ ಸಿನಿಮಾದಲ್ಲಿ ನಟಿಸುವುದು ಪಕ್ಕಾ ಆದರೆ ಕನ್ನಡದ ಬಿಲ್ಲಾರಂಗ ಶುರುವಾಗೋದು ಲೇಟು. ಅಲ್ಲಿಗೆ 2019ರಲ್ಲಿ ಪೈಲ್ವಾನ್ ಮತ್ತು ಕೋಟಿಗೊಬ್ಬ-3 ರಿಲೀಸಾದರೆ, 2020ರಲ್ಲಿ ಸುದೀಪ್ ನಟನೆಯ ಯಾವ ಕನ್ನಡ ಸಿನಿಮಾಗಳೂ ಬಿಡುಗಡೆಯಾಗೋದು ಡೌಟು!