Tag: DAALI

  • ರಮ್ಯಾ ಕಮ್‌ಬ್ಯಾಕ್ ‘ಉತ್ತರಕಾಂಡ’ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್

    ರಮ್ಯಾ ಕಮ್‌ಬ್ಯಾಕ್ ‘ಉತ್ತರಕಾಂಡ’ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್

    ಸ್ಯಾಂಡಲ್‌ವುಡ್ ಮೋಹಕ ತಾರೆ ರಮ್ಯಾ (Ramya) ಅಭಿಮಾನಿಗಳಿಗೆ ಇದು ನಿಜಕ್ಕೂ ಸಂತಸದ ಸುದ್ದಿ. ರಮ್ಯಾ ಕಮ್‌ಬ್ಯಾಕ್ ಸಿನಿಮಾ ಉತ್ತರಕಾಂಡ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ರಮ್ಯಾ ಸದ್ಯದಲ್ಲೇ ಉತ್ತರಕಾಂಡ (Uttarakanda) ಸಿನಿಮಾ ಶೂಟಿಂಗ್‌ಗೆ ಹಾಜರಿ ಹಾಕ್ತಿದ್ದಾರೆ.

    ‘ಉತ್ತರಕಾಂಡ’ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ಯಾಕೆಂದ್ರೆ, ರಮ್ಯಾ (Ramya) ಕಮ್‌ಬ್ಯಾಕ್ ಸಿನಿಮಾ ಆಗಿರುವ ಕಾರಣ, ಚಿತ್ರದ ಮೇಲಿನ ನಿರೀಕ್ಷೆ ಡಬಲ್ ಆಗಿದೆ. ಅದಷ್ಟೇ ಅಲ್ಲ, ರಮ್ಯಾ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar), ಡಾಲಿ (Daali) ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಇದೇ ಎಪ್ರಿಲ್‌ನಿಂದ ಶುರುವಾಗಲಿದೆ. ಚಿತ್ರೀಕರಣದಲ್ಲಿ ಡಾಲಿ, ರಮ್ಯಾ, ಶಿವಣ್ಣ ಮೂವರು ಭಾಗಿಯಾಗುತ್ತಿದ್ದಾರೆ.

    ‘ರತ್ನನ್ ಪ್ರಪಂಚ’ ಖ್ಯಾತಿಯ ನಿರ್ದೇಶಕ ರೋಹಿತ್ ಪದಕಿ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಉತ್ತರಕಾಂಡ ಸಿನಿಮಾ ಪಕ್ಕಾ ಆ್ಯಕ್ಷನ್ ಸೀಕ್ವೇನ್ಸ್ ಇರುವ ಚಿತ್ರವಾಗಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಸ್ಪರ್ಧಿ ತುಕಾಲಿ ಸಂತೋಷ್ ಕಾರು ಅಪಘಾತ

    ಇನ್ನೂ ಶಿವಣ್ಣ, ರಮ್ಯಾ, ಡಾಲಿ ಮೂವರು ಒಂದೇ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ, ಕಥೆ ಮತ್ತು ಪಾತ್ರ ಹೇಗಿರಲಿದೆ ಎಂಬ ಕೌತುಕ ಮೂಡಿಸಿದೆ.

  • ಡಾಲಿ ನಿರ್ಮಾಣದ ಸಿನಿಮಾದಲ್ಲಿ ಮಲೈಕಾ ವಸುಪಾಲ್ ನಾಯಕಿ

    ಡಾಲಿ ನಿರ್ಮಾಣದ ಸಿನಿಮಾದಲ್ಲಿ ಮಲೈಕಾ ವಸುಪಾಲ್ ನಾಯಕಿ

    ಕಿರುತೆರೆಯ ಜನಪ್ರಿಯ ‘ಹಿಟ್ಲರ್ ಕಲ್ಯಾಣ’ (Hitler Kalyana) ಸೀರಿಯಲ್ ನಟಿ ಮಲೈಕಾ ವಸುಪಾಲ್ (Malaika Vasupal) ಇದೀಗ ಬಂಪರ್ ಆಫರ್‌ವೊಂದನ್ನು ಗಿಟ್ಟಿಸಿಕೊಂಡಿದ್ದಾರೆ. ‘ಉಪಾಧ್ಯಕ್ಷ’ ಚಿತ್ರ ರಿಲೀಸ್ ಆಗಿ ಪ್ರೇಕ್ಷಕರ ಮೆಚ್ಚುಗೆ ಗಿಟ್ಟಿಸಿಕೊಳ್ತಿದ್ದಂತೆ ಇತ್ತ ಮಲೈಕಾಗೆ ಡಾಲಿ ನಿರ್ಮಾಣದ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದೆ. ಇದನ್ನೂ ಓದಿ:ಪೊಲೀಸ್ ಜೊತೆ ನಟಿಯ ರಂಪಾಟ: ಸೌಮ್ಯ ವಿರುದ್ಧ ದೂರು ದಾಖಲು

    ವಿದ್ಯಾಪತಿಯಾಗಿರುವ ನಾಗಭೂಷಣ್‌ಗೆ (Nagabhushan) ಜೋಡಿ ಸಿಕ್ಕಾಗಿದೆ. ‘ಉಪಾಧ್ಯಕ್ಷ’ ಸುಂದರಿ ಈಗ ಡಾಲಿ ಬಳಗ ಸೇರ್ಪಡೆಯಾಗಿದ್ದಾರೆ. ನಟರಾಕ್ಷಸ ಡಾಲಿ ಧನಂಜಯ್ ಒಡೆತನದ ಡಾಲಿ ಪಿಕ್ಚರ್ಸ್ (Daali Pictures) ‘ಟಗರು ಪಲ್ಯ’ ಸಕ್ಸಸ್ ಬಳಿಕ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿರುವುದು ಗೊತ್ತೇ ಇದೆ. ಮತ್ತೊಮ್ಮೆ ಡಾಲಿ (Daali) ಹಾಗೂ ನಾಗಭೂಷಣ್ ಕೈ ಜೋಡಿಸಿದ್ದು, ಈ ಚಿತ್ರಕ್ಕೆ ವಿದ್ಯಾಪತಿ (Vidyapathi) ಎಂಬ ಟೈಟಲ್ ಇಡಲಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಫಸ್ಟ್ ಲುಕ್ ರಿಲೀಸ್ ಮಾಡಿದ್ದ ಚಿತ್ರತಂಡ ಇಂದು ನಾಯಕಿಯನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ.

    ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದ ಚಿಕ್ಕಣ್ಣನಿಗೆ ‘ಉಪಾಧ್ಯಕ್ಷ’ ಸಿನಿಮಾದಲ್ಲಿ ನಾಯಕಿ ಮಿಂಚಿದ್ದ ಮಲೈಕಾ ಈಗ ವಿದ್ಯಾಪತಿಗೆ ಜೋಡಿಯಾಗಿದ್ದಾರೆ. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ಮಲೈಕಾ ‘ಉಪಾಧ್ಯಕ್ಷ’ ಚಿತ್ರದ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾವೇ ಅವರಿಗೆ ದೊಡ್ಡ ಸಕ್ಸಸ್ ತಂದು ಕೊಟ್ಟಿದೆ. ಉಪಾಧ್ಯಕ್ಷ ಸಿನಿಮಾದಲ್ಲಿ ಇವ್ರ ನಟನೆ ನೋಡಿ ಮೆಚ್ಚಿಕೊಂಡಿರುವ ‘ವಿದ್ಯಾಪತಿ’ ಟೀಂ ತಮ್ಮ ತಂಡಕ್ಕೆ ಅವರನ್ನು ಸ್ವಾಗತಿಸಿದೆ.

    ವಿದ್ಯಾಪತಿ ಸಿನಿಮಾದಲ್ಲಿ ಮಲೈಕಾ ವಿದ್ಯಾ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ಸಿಂಪಲ್ ಆಗಿರುವ ಹೋಮ್ಲಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಹಿಂದೆ ‘ಇಕ್ಕಟ್’ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ವಿದ್ಯಾಪತಿ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಸಿನಿಮಾವನ್ನು ಇವರೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ.

    ಆ್ಯಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ‘ವಿದ್ಯಾಪತಿ’ ಚಿತ್ರದಲ್ಲಿ ನಾಗಭೂಷಣ್ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆ್ಯಕ್ಷನ್ ವಿದ್ಯಾಪತಿ ಸಿನಿಮಾಕ್ಕಿದೆ. ಮಾರ್ಚ್ ತಿಂಗಳಿನಿಂದ ವಿದ್ಯಾಪತಿ ನಾಯಕಿ ಮಲೈಕಾ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.

  • ‘ಯುಐ’ ಟೀಸರ್ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಕಿಚ್ಚ, ಶಿವಣ್ಣ, ಅಲ್ಲು ಅರವಿಂದ್

    ‘ಯುಐ’ ಟೀಸರ್ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಕಿಚ್ಚ, ಶಿವಣ್ಣ, ಅಲ್ಲು ಅರವಿಂದ್

    ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಸಕಲ ತಯಾರಿ ಮಾಡಿಕೊಂಡಿದ್ದಾರೆ. ಕೇವಲ ಎರಡೇ ದಿನದಲ್ಲಿ ಮತ್ತೊಂದು ಟೀಸರ್ ಹೊರ ಬಿಡಲಿದ್ದಾರೆ. ಗ್ಲೋಬಲ್ ಸಿನಿಮಾ ‘ಯುಐ’ ಈ ಬಾರಿ ಜಗತ್ತಿನ ತುಂಬಾ ಸದ್ದು ಮಾಡಲಿದೆ. ಜನವರಿ 8ರಂದು ‘ಯುಐ’ (UI Film) ಟೀಸರ್ ಅನಾವರಣ ಆಗಲಿದೆ. ಹೇಗಿರಲಿದೆ ಟೀಸರ್ ? ಯಾರ‍್ಯಾರು ಬರಲಿದ್ದಾರೆ ಆ ಸಂಭ್ರಮಕ್ಕೆ? ಇಲ್ಲಿದೆ ಮಾಹಿತಿ. ಇದನ್ನೂ ಓದಿ:ನನ್ನ ಪತ್ನಿ ನಿಮ್ಮಂತೆಯೇ ಇರಬೇಕು ಎಂದ ಅಭಿಮಾನಿಗೆ ರಶ್ಮಿಕಾ ಏನಂದ್ರು ಗೊತ್ತಾ?

    ‘ಯುಐ’ ಸಿನಿಮಾ ಇದು ಉಪೇಂದ್ರ ನಿರ್ದೇಶನದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಅದಕ್ಕಿಂತ ಹೆಚ್ಚಾಗಿ ಗ್ಲೋಬಲ್ ಸಿನಿಮಾ. ಉಪ್ಪಿಯ ತಾಕತ್ತು ಏನೆಂದು ದಕ್ಷಿಣ ಭಾರತಕ್ಕೆ ಹೆಚ್ಚು ಗೊತ್ತು. ಈ ಬಾರಿ ಬಾಲಿವುಡ್ ಮಾತ್ರ ಅಲ್ಲ. ಇಡೀ ವಿಶ್ವಕ್ಕೇ ಉಪ್ಪಿ ಮೇಧಾವಿತನ ತಿಳಿಯಲಿದೆ. ಅದಕ್ಕಾಗಿಯೇ ‘ಯುಐ’ ಸಿನಿಮಾಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಹಗಲು ರಾತ್ರಿ ಒದ್ದಾಡಿದ್ದಾರೆ. ಅದರ ಪರಿಣಾಮದ ಚಿತ್ರದ ಟೀಸರ್ ಜ.8ರಂದು ಅನಾವರಣ ಆಗಲಿದೆ. ಅಂದು ಬೆಳಿಗ್ಗೆ 11 ಗಂಟೆಗೆ ಯುಐ ಟೀಸರ್ ಜಗತ್ತಿನ ಮುಂದೆ ರಿವೀಲ್ ಆಗಲಿದೆ. ಟಾಲಿವುಡ್ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್(Allu Aravind), ಕನ್ನಡದ ಶಿವಣ್ಣ (Shivarajkumar), ಡಾಲಿ (Daali) ಕೂಡ ಹಾಜರಿ ಹಾಕಲಿದ್ದಾರೆ.

    ಕಿಚ್ಚ ಸುದೀಪ್ (Sudeep) ಕೂಡ ‘ಯುಐ’ ಚಿತ್ರಕ್ಕೆ ಕೈ ಜೋಡಿಸಲಿದ್ದಾರೆ. ಚಿತ್ರೀಕರಣಕ್ಕಾಗಿ ಹೊರಗಿರುವ ಕಿಚ್ಚ ಸೋಶಿಯಲ್ ಮೀಡಿಯಾದಲ್ಲಿ ಟೀಸರ್ ಬಿಡುಗಡೆ ಮಾಡಲಿದ್ದಾರೆ. ಹೇಗಿರಲಿದೆ ಟೀಸರ್ ಎನ್ನುವುದನ್ನು ನೋಡಿದ ಮೇಲೆಯೆ ಹೇಳಬೇಕು. ಒಟ್ಟಿನಲ್ಲಿ ಕಳೆದ ಬಾರಿ ಟೀಸರ್‌ನಲ್ಲಿ ಬರೀ ಸೌಂಡ್ ಇತ್ತು. ಈ ಬಾರಿ ದೃಶ್ಯ ಕೂಡ ಇರಲಿವೆ. ಅಲ್ಲಿಗೆ ಏನು ಹೊಸದನ್ನು ಕೊಡಲಿದ್ದಾರೆ ಉಪ್ಪಿ? ಅದು ಗೊತ್ತಾಗಲಿದೆ ಏನಾದರಾಗಲಿ. ‘ಯುಐ’ ಸಿನಿಮಾ ಈಗಿನಿಂದಲೇ ಮೆರವಣಿಗೆ ಹೊರಟಿದೆ. ಅದಕ್ಕೆ ಕೋಟಿ ಕೋಟಿ ಕಾಸು ಸುರಿದಿದ್ದಾರೆ ಲಹರಿ ಸಂಸ್ಥೆಯ ಮನೋಹರ್ ನಾಯ್ಡು- ಸಲಗ ಕೆ.ಪಿ.ಶ್ರೀಕಾಂತ್.

    ಉಪ್ಪಿ ಫ್ಯಾನ್ಸ್ ಮಾತ್ರ ‘ಯುಐ’ ಚಿತ್ರದಲ್ಲಿನ ಉಪೇಂದ್ರ ಗೆಟಪ್ ನೋಡೋದ್ದಕ್ಕೆ ರೆಡಿಯಾಗಿದ್ದಾರೆ. ಉಪೇಂದ್ರ ಅವತಾರ ಹೇಗಿರಲಿದೆ ಎಂಬುದನ್ನು ತಿಳಿಯಲು ಕಾತರದಿಂದ ಎದುರು ನೋಡ್ತಿದ್ದಾರೆ.

  • ಡಾಲಿ, ರಮ್ಯಾ ನಟನೆಯ ‘ಉತ್ತರಕಾಂಡ’ ಚಿತ್ರದ ಶೂಟಿಂಗ್‌ಗೆ ಶಿವಣ್ಣ ಎಂಟ್ರಿ

    ಡಾಲಿ, ರಮ್ಯಾ ನಟನೆಯ ‘ಉತ್ತರಕಾಂಡ’ ಚಿತ್ರದ ಶೂಟಿಂಗ್‌ಗೆ ಶಿವಣ್ಣ ಎಂಟ್ರಿ

    ಡಾಲಿ, ರಮ್ಯಾ (Ramya) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಉತ್ತರಕಾಂಡ’ಗೆ (Uttarakanda Film) ಶೂಟಿಂಗ್‌ಗೆ ಶಿವಣ್ಣನ ಎಂಟ್ರಿಯಾಗಿದೆ. ರಮ್ಯಾ ಕಮ್‌ಬ್ಯಾಕ್ ಚಿತ್ರಕ್ಕೆ ಶಿವರಾಜ್‌ಕುಮಾರ್ ಕೂಡ ಸಾಥ್ ನೀಡಿದ್ದಾರೆ. ಇದರ ಬಗ್ಗೆ ನಿರ್ಮಾಣ ಸಂಸ್ಥೆ ‘ಕೆಆರ್‌ಜಿ’ ಸ್ಟುಡಿಯೋ ಮಾಹಿತಿ ನೀಡಿದೆ.

    ‘ಉತ್ತರಕಾಂಡ’ (Uttarakanda) ಸಾಕಷ್ಟು ವಿಚಾರಗಳಿಂದ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ರಮ್ಯಾ ಕಮ್ ಬ್ಯಾಕ್ ಚಿತ್ರ ಎಂಬ ನಿರೀಕ್ಷೆಯ ಜೊತೆ ಹಿಟ್ ಜೋಡಿ ಡಾಲಿ- ಶಿವಣ್ಣ ಒಂದೇ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ತಿರೋದು ಮತ್ತೊಂದು ಖುಷಿ. ಸದ್ಯ ಶೂಟಿಂಗ್‌ಗೆ ಹಾಜರಿ ಹಾಕಿರುವ ಶಿವಣ್ಣಗೆ ಚಿತ್ರತಂಡ ಸ್ವಾಗತ ಕೋರಿದೆ.

    ‘ರತ್ನನ್ ಪ್ರಪಂಚ’ ಖ್ಯಾತಿಯ ನಿರ್ದೇಶಕ ರೋಹಿತ್ ಪದಕಿ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಜೈಲರ್, ಘೋಸ್ಟ್ ಚಿತ್ರದ ಸಕ್ಸಸ್ ನಂತರ ‘ಉತ್ತರಕಾಂಡ’ ಶೂಟಿಂಗ್‌ಗೆ ಎಂಟ್ರಿ ಕೊಟ್ಟಿರೋ ಶಿವರಾಜ್‌ಕುಮಾರ್‌ಗೆ ಈ ಚಿತ್ರದಲ್ಲಿ ಖಡಕ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ:ಶೂಟಿಂಗ್ ಮುಗಿಸಿದ ಡಾಲಿ, ಸತ್ಯದೇವ್‌ ನಟನೆಯ ‘ಝೀಬ್ರಾ’ ಸಿನಿಮಾ

    ‘ಜೈಲರ್’ (Jailer) ಸಕ್ಸಸ್ ಬಳಿಕ ಶಿವಣ್ಣಗೆ ತಮಿಳಿನಿಂದ ಬಂಪರ್ ಅವಕಾಶಗಳು ಅರಸಿ ಬರುತ್ತಿವೆ. ಧನುಷ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಶಿವಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೂ ಶಿವಣ್ಣಗೆ ಯಾವುದೇ ಪಾತ್ರ ನೀಡಿದರೂ ತೂಕವಾಗಿ ನಟಿಸುತ್ತಾರೆ. ಹಾಗಾಗಿ ಉತ್ತರಕಾಂಡ ಚಿತ್ರದಲ್ಲಿ ಶಿವಣ್ಣಗೆ ತೂಕವಾಗಿರೋ ಪಾತ್ರವೇ ಇದೆ.

    ಇದೀಗ ‘ಉತ್ತರಕಾಂಡ’ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಡಾಲಿ, ರಮ್ಯಾ, ಶಿವಣ್ಣ ಮೂವರು ಈ ಚಿತ್ರದಲ್ಲಿ ಇರುವ ಕಾರಣ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.

  • ಶೂಟಿಂಗ್ ಮುಗಿಸಿದ ಡಾಲಿ, ಸತ್ಯದೇವ್‌ ನಟನೆಯ ‘ಝೀಬ್ರಾ’ ಸಿನಿಮಾ

    ಶೂಟಿಂಗ್ ಮುಗಿಸಿದ ಡಾಲಿ, ಸತ್ಯದೇವ್‌ ನಟನೆಯ ‘ಝೀಬ್ರಾ’ ಸಿನಿಮಾ

    ಡಾಲಿ ಧನಂಜಯ್- ಸತ್ಯದೇವ್ (Sathyadev) ಕಾಂಬಿನೇಷನ್‌ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಝೀಬ್ರಾ. ಶುರು ಆದಾಗಿನಿಂದಲೂ ಕುತೂಹಲ ಮೂಡಿಸಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ. ಇದನ್ನೂ ಓದಿ:ಬಿಗ್‌ಬಾಸ್ ಮನೆಯಿಂದ ಇಶಾನಿ ಔಟ್- ‌ಇಂದು ಇನ್ನೊಬ್ಬರಿಗೆ ಕಾದಿದೆ ಶಾಕ್

    ‘ಝೀಬ್ರಾ’ ಎಂಬ ಮಾಸ್ ಎಂಟರ್‌ಟೇನರ್ ಚಿತ್ರವಾಗಿದ್ದು, ಡಾಲಿ (Daali) ಜೊತೆ ಸತ್ಯದೇವ್ (Sathyadev) ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಈ ಚಿತ್ರದ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸತ್ಯದೇವ್ ಮತ್ತು ಡಾಲಿ ಇಬ್ಬರೂ ಚಿತ್ರದ ನಾಯಕರಾಗಿದ್ದು, ಇಬ್ಬರ ಕಾಂಬಿನೇಷನ್ ಸಿನಿಮಾ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಇಬ್ಬರದ್ದೂ 26ನೇ ಸಿನಿಮಾ ಎಂಬುದು ವಿಶೇಷ.

    ‘ಝೀಬ್ರಾ’ (Zebra Film) ಸಿನಿಮಾ ತೆಲುಗು ಮತ್ತು ಕನ್ನಡದಲ್ಲಿ ಮೂಡಿ ಬರಲಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಪ್ರಿಯಾ ಭವಾನಿ ಶಂಕರ್, ಸತ್ಯರಾಜ್, ಸುನೀಲ್ ವರ್ಮ, ಜೆನಿಫರ್ , ಸುರೇಶ್‌ಚಂದ್ರ ಮೆನನ್, ಕಲ್ಯಾಣಿ ನಟರಾಜ್ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ.

    ಸಿನಿಮಾವನ್ನು ಈಶ್ವರ್ ಕಾರ್ತಿಕ್ (Eshwae Karthik) ನಿರ್ದೇಶನ ಮಾಡಿದ್ದು, ಕತೆ-ಚಿತ್ರಕತೆ ಅವರದ್ದೇ. ಪ್ಯಾನ್ ಇಂಡಿಯಾ ‘ಝೀಬ್ರಾ’ ಚಿತ್ರಕ್ಕೆ ಕೆಜಿಎಫ್ (KGF) ಚಿತ್ರ ಖ್ಯಾತಿಯ ರವಿ ಬಸ್ರೂರು ಸಂಗೀತ ಕೊಟ್ಟಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರ ಆದಷ್ಟು ಬೇಗ ನಿಮ್ಮ ಮುಂದೆ ಬರಲಿದೆ.

  • ಡಾಲಿ ಬರ್ತ್‌ಡೇ ಪಾರ್ಟಿಯಲ್ಲಿ‌ ಮಿಂಚಿದ ಸ್ಯಾಂಡಲ್‌ವುಡ್‌ ಸ್ಟಾರ್ಸ್

    ಡಾಲಿ ಬರ್ತ್‌ಡೇ ಪಾರ್ಟಿಯಲ್ಲಿ‌ ಮಿಂಚಿದ ಸ್ಯಾಂಡಲ್‌ವುಡ್‌ ಸ್ಟಾರ್ಸ್

    ಟ ರಾಕ್ಷಸ ಡಾಲಿ (Daali Dhananjay) ಆಗಸ್ಟ್ 23ರಂದು ತಮ್ಮ ಹುಟ್ಟುಹಬ್ಬವನ್ನ ಅಭಿಮಾನಿಗಳ ಜೊತೆ ಆಚರಿಸಿಕೊಂಡಿದ್ದರು. ಇದೀಗ ಚಿತ್ರರಂಗದ ಸ್ನೇಹಿತರಿಗಾಗಿ ಗ್ರ್ಯಾಂಡ್ ಆಗಿ ಬರ್ತ್‌ಡೇ (Birthday) ಸೆಲೆಬ್ರೇಟ್ ಮಾಡಿದ್ದಾರೆ. ಚಂದನವನದ ನಟ-ನಟಿಯರು ಡಾಲಿ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದಾರೆ.

    ಬರ್ತ್‌ಡೇ ಪಾರ್ಟಿಯಲ್ಲಿ ಕೆಜಿಎಫ್ (KGF) ಹೀರೋ ಯಶ್(Yash), ಅಭಿಷೇಕ್ ಅಂಬರೀಶ್, ಮಿಲನಾ-ಡಾರ್ಲಿಂಗ್ ಕೃಷ್ಣ, ಮೇಘನಾ ರಾಜ್, ಪನ್ನಗಭರಣ, ಕೃಷಿ ತಾಪಂಡ, ಲವ್ಲಿ ಸ್ಟಾರ್ ಪ್ರೇಮ್ ಕುಟುಂಬ, ಅಮೃತಾ ಅಯ್ಯಂಗಾರ್, ನಿರೂಪ್ ಭಂಡಾರಿ, ದಿಗಂತ್-ಐಂದ್ರಿತಾ ಜೋಡಿ, ಸಪ್ತಮಿ ಗೌಡ, ವಾಸುಕಿ ವೈಭವ್, ನಿಖಿಲ್‌ ಕುಮಾರಸ್ವಾಮಿ ಸೇರಿದಂತೆ ಹಲವರು ಭಾಗಿಯಾಗಿ ನಟ ಡಾಲಿಗೆ ವಿಶ್ ಮಾಡಿದ್ದರು. ಇದನ್ನೂ ಓದಿ:ಕುಟುಂಬದೊಂದಿಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ನಿಖಿಲ್

    ಕೊವೀಡ್ ನಿಮಿತ್ತ ಕಳೆದ 2-3 ವರ್ಷಗಳಿಂದ ಡಾಲಿ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಈ ವರ್ಷ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಅಭಿಮಾನಿಗಳಿಗೆ ಸಮಯ ಮೀಸಲಿಟ್ಟು, ಬರ್ತ್‌ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ಈಗ ಕನ್ನಡ ಸಿನಿಮಾರಂಗದ ನಟ-ನಟಿಯರ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.

    ಉತ್ತರಕಾಂಡ, ಪುಷ್ಪ 2, ಅಣ್ಣ From Mexico ಸೇರಿದಂತೆ ಹಲವು ಸಿನಿಮಾಗಳು ನಟ ಧನಂಜಯ್ ಕೈಯಲ್ಲಿದೆ. ಈ ವರ್ಷ ಡಾಲಿ ಪರ್ವ ಹೇಗಿರಲಿದೆ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರಯಾನ-3 ಲ್ಯಾಂಡಿಂಗ್‌ಗೆ ಶುಭಕೋರಿದ ಸ್ಯಾಂಡಲ್‌ವುಡ್ ಸ್ಟಾರ್ಸ್

    ಚಂದ್ರಯಾನ-3 ಲ್ಯಾಂಡಿಂಗ್‌ಗೆ ಶುಭಕೋರಿದ ಸ್ಯಾಂಡಲ್‌ವುಡ್ ಸ್ಟಾರ್ಸ್

    ಚಂದ್ರಯಾನ-3 (Chandrayana 3) ಯಶಸ್ಸಿನ ಹೊಸ್ತಿಲಲ್ಲಿದೆ. ಇಂದು ಚಂದ್ರನ ಮೇಲೆ ಇಸ್ರೋದ ವಿಕ್ರಮ್ ಇಳಿಯಲಿದೆ. ಹೀಗಿರುವಾಗ ಇಸ್ರೋದ ಸಾಧನೆಯನ್ನು ಸ್ಯಾಂಡಲ್‌ವುಡ್ ಕಲಾವಿದರು ಕೊಂಡಾಡಿದ್ದಾರೆ. ಯಾರೆಲ್ಲಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ಇಲ್ಲಿದೆ ಮಾಹಿತಿ.

    ಎಲ್ಲಾ ಭಾರತೀಯರಿಗೂ ಇದು ಹೆಮ್ಮೆಯ ಕ್ಷಣವಿದು. ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡ್ ಆಗುತ್ತಿದೆ. ನಾವೆಲ್ಲರೂ ಇದಕ್ಕೆ ಹೆಮ್ಮೆ ಪಡಬೇಕು. ಇಸ್ರೋ ಆಲ್ ದಿ ಬೆಸ್ಟ್ ಎಂದು ಶಿವಣ್ಣ (Shivarajkumar) ಶುಭಕೋರಿದ್ದಾರೆ.

    ಚಂದ್ರಯಾನ -3 ಬಗ್ಗೆ ಡಾಲಿ (Daali) ರಿಯಾಕ್ಟ್ ಮಾಡಿದ್ದಾರೆ. ನಮ್ಮ ವಿಜ್ಞಾನಿಗಳ ಎಲ್ಲ ಪರಿಶ್ರಮ ಸಾರ್ಥಕವಾಗುವ ಗಳಿಗೆ ಅದು. ನಮ್ಮ ಇಸ್ರೋ ವಿಜ್ಞಾನಿಗಳು ತುಂಬಾ ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಅವರಿಗೆ ಧನ್ಯವಾದ ಇನ್ನೂ ಇಂತಹ ಅನೇಕ ಕೆಲಸಗಳು ಅವರಿಂದ ಆಗಲಿ. ಜಗತ್ತಿನಲ್ಲಿ ಎಲ್ಲವೂ ಒಂದೇ ಬಾರಿಗೆ ಸಕ್ಸಸ್ ಆಗಲ್ಲ. ಕೆಲವೊಮ್ಮೆ ವಿಫಲವಾಗುತ್ತೆ. ಹಾಗೆಯೇ ನಮ್ಮ ಇಸ್ರೋ ಚಂದ್ರಯಾನ 3 ಸಕ್ಸಸ್ ಆಗುತ್ತೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ:ನಾನು ಮದುವೆಗೂ ಮುನ್ನ ಗರ್ಭಿಣಿ ಆಗಿದ್ದೆ, ಆದಿಲ್ ಮೋಸ ಮಾಡಿದ: ನಟಿ ರಾಖಿ

    ಇಡೀ ಜಗತ್ತು ಕ್ರಿಯೆಟ್ ಆಗಿರೋದು ವಿಜ್ಞಾನದ ಮುಖಾಂತರ. ನಾನು ಸೈನ್ಸ್ ತುಂಬಾ ನಂಬುವವನು. ಇವತ್ತು ನಮ್ಮ ವಿಜ್ಞಾನಿಗಳು ತಯಾರಿಸುವಂತಹ ಉಪಗ್ರಹ ಉಡಾವಣೆ ಆಗೋದ್ರಲ್ಲಿದೆ. ನಾವೆಲ್ಲರೂ ಭಾರತೀಯರು ಹೆಮ್ಮೆ ಪಡುವಂತಹ ವಿಷಯವಿದು ಎಂದು ನೀನಾಸಂ ಸತೀಶ್ (Ninasum Satish) ಶುಭಹಾರೈಸಿದ್ದಾರೆ. ಇದನ್ನೂ ಓದಿ:Yash 19 ಸಿನಿಮಾ KVN ನಿರ್ಮಾಣ ಮಾಡ್ತಿದ್ಯಾ? ಇಲ್ಲಿದೆ ಸೀಕ್ರೆಟ್

    ನಟಿ, ರಾಜಕಾರಣಿ ಸುಮಲತಾ ಕೂಡ ಚಂದ್ರಯಾನ 3 ಬಗ್ಗೆ ಮಾತನಾಡಿದ್ದಾರೆ. ಚಂದ್ರನ ಮೇಲೆ ಚಂದ್ರಯಾನ 3 ಲ್ಯಾಂಡ್ ಆಗುತ್ತಿದೆ. ಶುಭ ಘಳಿಗೆ ನೋಡಲು 140 ಕೋಟಿ ಜನರು ಕಾಯ್ತಿದ್ದಾರೆ. ಚಂದ್ರಯಾನ 3 ಯಶಸ್ಸಾಗಲಿ ಭಾರತೀಯರಿಗೆ ಇಂದು ಹೆಮ್ಮೆಯ ಕ್ಷಣ. ತಂಡಕ್ಕೆ ಆಲ್ ದಿ ಬೆಸ್ಟ್ ಎಂದಿದ್ದಾರೆ.

    ಇಂದು ಸಂಜೆ ಚಂದ್ರಯಾನ 3 ಚಂದ್ರ ಮಂಡಲದ ಮೇಲೆ ಲ್ಯಾಂಡ್ ಆಗುತ್ತೆ. ಆ ಲ್ಯಾಂಡಿಂಗ್ ಯಶಸ್ವಿಯಾಗಲಿ. ಆಲ್ ದಿ ಬೆಸ್ಟ್ ಇಸ್ರೋ ಎಂದು ರಮೇಶ್ ಅರವಿಂದ್ (Ramesh Aravind) ವಿಶ್ ಮಾಡಿದ್ದಾರೆ.

    ಇವತ್ತು ತುಂಬಾನೇ ವಿಶೇಷವಾಗಿರುವ ದಿನ, ನನ್ನ ಸಿನಿಮಾ ಲಾಂಚ್ ಆಗುತ್ತಿದೆ. ಜೊತೆಗೆ ಇವತ್ತು ಇಡೀ ದೇಶ ಹೆಮ್ಮೆ ಪಡುವಂತಹ ದಿನ ಅಂತಾ ಹೇಳಬಹುದು. ಚಂದ್ರಯಾನ 3 ಸಕ್ಸಸ್‌ಫುಲ್ ಆಗುವಂತಹ ದಿನ. ನನ್ನ ಕಡೆಯಿಂದ ಆಲ್ ದಿ ಬೆಸ್ಟ್ ಹೇಳ್ತೀನಿ ಎಂದು ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ(Roopesh Shetty) ಹೇಳಿದ್ದಾರೆ.

    ಭಾರತ ದೇಶದಲ್ಲಿ ಇವತ್ತು ಖುಷಿ ಪಡುವಂತಹ, ಜಗತ್ತೇ ನಮ್ಮನ್ನ ಮೆಚ್ಚಿಕೊಳ್ಳುವಂತಹ ಚಂದ್ರಯಾನ 3 ಯಶಸ್ವಿಯಾಗಿ ಪೂರೈಸುತ್ತಾರೆ ಎಂಬ ನಂಬಿಕೆಯಿದೆ. ನಾವು ಚಿಕ್ಕವರು ಇರುವಾಗ ಚಂದಮಾಮನನ್ನ ತೋರಿಸಿ ಊಟ ಮಾಡಿಸುತ್ತಾ ಇದ್ದರು. ಈಗ ಚಂದ್ರನಲ್ಲಿ ಏನೇನಿದೆ ಎಂಬ ಕುತೂಹಲವನ್ನ ತೋರಿಸುತ್ತಾ ಹೋದರು. ಭಾರತ 4ನೇ ರಾಷ್ಟ್ರವಾಗಿದ್ರು. ಚಂದ್ರನ ದಕ್ಷಿಣ ಭಾಗಕ್ಕೆ ಹೋಗುತ್ತಿರುವ ಮೊದಲ ರಾಷ್ಟ್ರವಾಗಿದೆ. ಇಸ್ರೋಗೆ ಶುಭವಾಗಲಿ ಎಂದು ನಟಿ ತಾರಾ ಹಾರೈಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಾಲಿ ಟೆಂಪಲ್ ರನ್, ಹುಟ್ಟೂರಿನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ

    ಡಾಲಿ ಟೆಂಪಲ್ ರನ್, ಹುಟ್ಟೂರಿನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ

    ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ (Daali Dhananjay) ಅವರು ಅರಸೀಕೆರೆಯ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಶೂಟಿಂಗ್‌ಗೆ ಬ್ರೇಕ್ ಹಾಕಿ ಸಹೋದರರ ಜೊತೆ ದೇವರ ಸನ್ನಿಧಿಗೆ ಡಾಲಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಮದುವೆಯಾದ ಒಂದೇ ವರ್ಷಕ್ಕೆ ಪತಿಯನ್ನು ಕಳೆದುಕೊಂಡ ನಟಿ ಶ್ರುತಿ

    ಚಂದನವನದ ನಟ, ನಿರ್ಮಾಪಕ (Producer) ಡಾಲಿ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಜೊತೆ ತೆಲುಗು ಸಿನಿಮಾಗಳಲ್ಲಿ ಅವರು ಆಕ್ಟೀವ್ ಆಗಿದ್ದಾರೆ. ಚಿತ್ರೀಕರಣದಲ್ಲಿ ಬ್ಯುಸಿ ಇದ್ದ ನಟ, ಶೂಟಿಂಗ್‌ಗೆ ಕೊಂಚ ಬ್ರೇಕ್ ನೀಡಿ ಹುಟ್ಟಿದ ಊರಿಗೆ ಡಾಲಿ ಭೇಟಿ ನೀಡಿದ್ದಾರೆ. ಅರಸೀಕೆರೆಯ (Arasikere) ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದಿದ್ದಾರೆ. ಸಹೋದರರ ಜೊತೆ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿ ಬಾಲ್ಯದ ದಿನಗಳನ್ನ ಸ್ಮರಿಸಿದ್ದಾರೆ.

    ನಟ ಧನಂಜಯ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ನಟನಾಗಿ, ನಿರ್ಮಾಪಕನಾಗಿ ಖ್ಯಾತಿಗಳಿಸಿರುವ ಡಾಲಿ ಧನಂಜಯ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಕಾಮನ್ ಮ್ಯಾನ್ ಹೀರೋ ಅಂತನೇ ಬಿರುದು ಪಡೆದಿರುವ ಡಾಲಿ ಈ ಬಾರಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ತನ್ನ ಬರ್ತಡೇ ದಿನ ಅಭಿಮಾನಿಗಳ ಜೊತೆ ಸಮಯ ಕಳೆಯಲು ನಿರ್ಧರಿಸಿದ್ದಾರೆ. ಅಂದಹಾಗೆ ಧನಂಜಯ್ ಹುಟ್ಟುಹಬ್ಬ ಆಗಸ್ಟ್ 23ರಂದು ಇದ್ದು, ಈಗಾಗಲೇ ಅಭಿಮಾನಿಗಳ ಸಂಭ್ರಮ ಶುರುವಾಗಿದೆ. ಡಾಲಿ ಉತ್ಸವಕ್ಕೆ ಅಭಿಮಾನಿಗಳು ಸಜ್ಜಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ಗಳನ್ನು ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ.

    ಈ ಬಾರಿಯ ಹುಟ್ಟುಹಬ್ಬವನ್ನು ಅಭಿಮಾನಿಗಳು ಡಾಲಿ ಉತ್ಸವ ಹೆಸರಿನಲ್ಲಿ ಆಚರಿಸುತ್ತಿದ್ದಾರೆ. ಡಾಲಿ ಉತ್ಸವ ಎಂದು ಹೆಸರಿಟ್ಟು ಅಭಿಮಾನದ ತೇರು ಎಳೆಯೋಣ ಬನ್ನಿ ಎಂದು ಟ್ಯಾಗ್ ಲೈನ್ ಇಡಲಾಗಿದೆ. ಈಗಾಗಲೇ ಅಭಿಮಾನಿಗಳು ಉತ್ಸವಕ್ಕೆ ರೆಡಿಯಾಗಿದ್ದಾರೆ. ಅಂದಹಾಗೆ ಈ ಬಾರಿಯ ಧನಂಜಯ್ ಹುಟ್ಟುಹಬ್ಬ ತುಂಬನೇ ವಿಶೇಷ. 4 ವರ್ಷಗಳ ಬಳಿಕ ಅದ್ದೂರಿಯಾಗಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ಜೊತೆಗೆ ಡಾಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 10 ವರ್ಷಗಳಾಗಿದೆ. ಹಾಗಾಗಿ ಈ ಬಾರಿಯ ಹುಟ್ಟುಹಬ್ಬ ಧನಂಜಯ್ ಅವರಿಗೆ ತುಂಬಾ ವಿಶೇಷವಾಗಿದೆ. ಅಂದಹಾಗೆ, ಡಾಲಿ ಪ್ರಸ್ತುತ ಪರಮೇಶ್ವರ್‌ ಗುಂಡ್ಕಲ್‌ ನಿರ್ದೇಶನದ ಚಿತ್ರದಲ್ಲಿ ಬ್ಯುಸಿಯಿದ್ದಾರೆ. ಮೈಸೂರಿನಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಕ್ಕಳಿಗೆ ಗುಲಾಬಿ ಹೂ, ಚಾಕ್ಲೇಟ್‌ ನೀಡಿ ಸ್ವಾಗತಿಸಿದ ಡಾಲಿ

    ಮಕ್ಕಳಿಗೆ ಗುಲಾಬಿ ಹೂ, ಚಾಕ್ಲೇಟ್‌ ನೀಡಿ ಸ್ವಾಗತಿಸಿದ ಡಾಲಿ

    ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು ಪ್ರಾರಂಭವಾಗಿವೆ. ಈ ಹಿನ್ನೆಲೆಯಲ್ಲಿ ನಟ ಡಾಲಿ ಧನಂಜಯ್ (Dolly Dhananjay) ಬೇಸಿಗೆ ರಜೆ ಮುಗಿಸಿ ಶಾಲೆಗೆ ಬಂದ ಮಕ್ಕಳಿಗೆ ಗುಲಾಬಿ ಹೂ ಮತ್ತು ಚಾಕ್ಲೇಟ್‌ ನೀಡಿ ಸ್ವಾಗತ ಕೋರಿದ್ದಾರೆ.

    ಮಂಡ್ಯ (Mandya) ಜಿಲ್ಲೆಯ ಪಾಂಡವಪುರ ತಾಲೂಕಿನ ಚಲುವರಸನಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಡಾಲಿ ಧನಂಜಯ್ ಬಂದು ಮೊದಲಿಗೆ ನವೀಕರಣ ಮಾಡಿರುವ ಶಾಲೆಯ ಕಟ್ಟಡವನ್ನು ಟೇಪ್ ಕತ್ತರಿಸಿ ಉದ್ಘಾಟನೆ ಮಾಡಿದರು. ಬಳಿಕ ಶಾಲೆ ಕಟ್ಟಡವನ್ನು ಒಂದು ರೌಂಡ್ ಹೊಡೆದರು. ಬಳಿಕ ಮಕ್ಕಳಿಗೆ ಗುಲಾಬಿ ಹೂ, ಚಾಕ್ಲೇಟ್‌ ನೀಡಿ ವೆಲ್ಕಮ್ ಮಾಡಿದರು, ಈ ವೇಳೆ ಧನಂಜಯ್‌ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ (Darshan Puttayya) ಸಾಥ್ ನೀಡಿದರು.

    ಬಳಿಕ ಮಾತನಾಡಿದ ಧನಂಜಯ್, ಸರ್ಕಾರಿ ಶಾಲೆಗೆ ಬಂದು ನನಗೆ ತುಂಬಾ ಖುಷಿ ಆಯ್ತು. ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಸವಲತ್ತುಗಳು ಇರಲ್ಲ ಸಾಕಷ್ಟು ಮಕ್ಕಳು ಶಾಲೆಯಿಂದ ಬಿಟ್ಟು ಹೋಗ್ತಾರೆ. ಅವರನ್ನು ಮತ್ತೆ ಶಾಲೆಗೆ ಕರೆತರೋದು ಸರ್ಕಾರಿ ಶಾಲೆಯ ಶಿಕ್ಷಕರು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೂಲಸೌಕರ್ಯಗಳು ಇಲ್ಲದೆ ಮುಚ್ಚಬಾರದು. ಸರ್ಕಾರಿ ಶಾಲೆಯಲ್ಲಿ ಓದ ಬೇಕೆಂದು ತುಂಬಾ ಜನ ಅಂದುಕೊಂಡಿದ್ದಾರೆ. ಸರ್ಕಾರಿ ಶಾಲೆಗಳು ಮುಚ್ಚಬಾರದು ಓದಿಗೆ ದೊಡ್ಡ ಶಾಲೆ ಸರ್ಕಾರಿ ಶಾಲೆ ಅಂತಾ ಇಲ್ಲ. ಈ ರೀತಿಯ ಮಾದರಿ ಶಾಲೆಗಳು ಎಲ್ಲಾ ಹಳ್ಳಿಗಳಲ್ಲೂ ಇರಬೇಕು. ಇದನ್ನೂ ಓದಿ:ಚಿಕಿತ್ಸೆಗೆ ಹಣ ಭರಿಸಲಾಗದೇ ಮಾಲಿವುಡ್ ನಟ ಹರೀಶ್ ಪೆಂಗನ್ ನಿಧನ

    ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಈ ಕಾರ್ಯಕ್ರಮ ಶ್ಲಾಘನೀಯವಾದದ್ದು. ಶಿಕ್ಷಕರು ನನ್ನ ಶಾಲೆ ಎಂದು ಅಂದುಕೊಂಡು ಕೆಲಸ ಮಾಡಿದರೆ, ಇದರಿಂದ ಸರ್ಕಾರಿ ಶಾಲೆಗಳು ಉತ್ತಮವಾಗುತ್ತವೆ. ಎಲ್ಲಾ ಕಡೆ ಕೆಲಸ ಕದಿಯೋರು ಇರ್ತಾರೆ, ಕೆಲಸವನ್ನ ಪ್ರೀತಿಯಿಂದ ಮಾಡೋರು ಇರ್ತಾರೆ. ಕೆಲಸವನ್ನ ಪ್ರೀತಿಯಿಂದ ಮಾಡೋರನ್ನು ಉದಾಹರಣೆ ತೆಗೆದುಕೊಳ್ಳಬೇಕು ಎಂದು ಡಾಲಿ ಮಾತನಾಡಿದ್ದಾರೆ.

  • ಡಿವೋರ್ಸ್ ಸುದ್ದಿ ಬೆನ್ನಲ್ಲೇ ‘ಪುಷ್ಪ 2’ ಸಿನಿಮಾದಲ್ಲಿ ನಿಹಾರಿಕಾ ಕೊನಿಡೆಲಾ

    ಡಿವೋರ್ಸ್ ಸುದ್ದಿ ಬೆನ್ನಲ್ಲೇ ‘ಪುಷ್ಪ 2’ ಸಿನಿಮಾದಲ್ಲಿ ನಿಹಾರಿಕಾ ಕೊನಿಡೆಲಾ

    ಭಾರತೀಯ ಚಿತ್ರರಂಗದಲ್ಲಿ ಹೊಸ ಹೈಪ್ ಕ್ರಿಯೇಟ್ ಮಾಡಿದ ‘ಪುಷ್ಪ’ (Pushpa) ಸಿನಿಮಾ ನೋಡಿ ಫ್ಯಾನ್ಸ್ ಫಿದಾ ಆಗಿದ್ದರು. ಹಾಗಾಗಿ ಸಹಜವಾಗಿ ಪುಷ್ಪ 2 (Pushpa) ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ. ಅಲ್ಲು ಅರ್ಜುನ್ (Allu Arjun) , ರಶ್ಮಿಕಾ ಮಂದಣ್ಣ (Rashmika Mandanna), ಡಾಲಿ ನಟನೆಯ ಈ ಸಿನಿಮಾಗೆ ಹೊಸ ನಟಿಯ ಆಗಮನವಾಗಿದೆ. ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮನೆ ಮಗಳು ‘ಪುಷ್ಪ’ 2 ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ.

    ಶ್ರೀಜಾ ಬಳಿಕ ಮೆಗಾಸ್ಟಾರ್ ಚಿರಂಜೀವಿ ಅವರ ಅಣ್ಣನ ಮಗಳು ನಾಗಬಾಬು (Nagababu) ಪುತ್ರಿ ನಿಹಾರಿಕಾ ಕೊನಿಡೆಲಾ ದಾಂಪತ್ಯದಲ್ಲಿ ಬಿರುಕಾಗಿದೆ. ಉದ್ಯಮಿ ಚೈತನ್ಯ ಜೊತೆ ವೈವಾಹಿಕ ಜೀವನಕ್ಕೆ (Divorce) ಬ್ರೇಕ್ ಬಿದ್ದ ಮೇಲೆ ಸಿನಿಮಾಗಳತ್ತ ಮುಖ ಮಾಡಿರುವ ನಟಿ ನಿಹಾರಿಕಾ ಅವರು ಅಲ್ಲು ಅರ್ಜುನ್ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:‘ಭಜರಂಗಿ’ ಹೆಸರಿನಲ್ಲಿ ನಟಿಸಿ, ಬಜರಂಗದಳದ ನಿಷೇಧದ ಬಗ್ಗೆ ನಿಮ್ಮ ನಡೆಯೇನು? ಶಿವಣ್ಣಗೆ ಸಂಬರ್ಗಿ ಕೌಂಟರ್

    ‘ಪುಷ್ಪ 2’ ಸಿನಿಮಾದಲ್ಲಿ ಫಹಾದ್ ಫಾಸಿಲ್ ಅವರು ಮುಖ್ಯವಾದೊಂದು ಪಾತ್ರ ಮಾಡುತ್ತಿದ್ದಾರೆ. ಅವರ ಪತ್ನಿಯ ಪಾತ್ರಕ್ಕೆ ಸಾಯಿ ಪಲ್ಲವಿ ಬಣ್ಣ ಹಚ್ಚುತ್ತಾರೆ ಎಂದು ಈ ಮೊದಲು ಗಾಸಿಪ್ ಹಬ್ಬಿತ್ತು. ಆದರೆ ಆ ಪಾತ್ರ ಮಾಡಲು ಸಾಯಿ ಪಲ್ಲವಿ ಅವರು ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಈಗ ಅದೇ ಪಾತ್ರವನ್ನು ನಿಹಾರಿಕಾ ಕೊನಿಡೆಲಾ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

    ಟಾಲಿವುಡ್‌ನಲ್ಲಿ ನಟಿ, ನಿರ್ಮಾಪಕಿಯಾಗಿ ನಿಹಾರಿಕಾ ಕೊನಿಡೆಲಾ (Niharika Konidela) ಅವರು ತೊಡಗಿಕೊಂಡಿದ್ದಾರೆ. ‘ಒಕ ಮನಸು’, ‘ಸೂರ್ಯಕಾಂತಂ’, ‘ಹ್ಯಾಪಿ ವೆಡ್ಡಿಂಗ್’ ಮುಂತಾದ ಸಿನಿಮಾಗಳಲ್ಲಿ ಅವರ ನಟಿಸಿದ್ದಾರೆ. 2015ರಲ್ಲಿ ಅವರು ‘ಪಿಂಕ್ ಎಲಿಫೆಂಟ್ ಪಿಕ್ಚರ್ಸ್’ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದರು. ಇದರ ಹೊಸ ಕಚೇರಿಯನ್ನು ಅವರು ಇತ್ತೀಚೆಗೆ ತೆರೆದಿದ್ದಾರೆ. ನಟಿಯಾಗಿ ಅವರು ಕಮ್‌ಬ್ಯಾಕ್ ಮಾಡುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ.