Tag: daali dhananjay

  • Exclusive: ‘ಬಡವ ರಾಸ್ಕಲ್’ ನಿರ್ದೇಶಕನ ಜೊತೆ ಡಾಲಿ ಹೊಸ ಸಿನಿಮಾ

    Exclusive: ‘ಬಡವ ರಾಸ್ಕಲ್’ ನಿರ್ದೇಶಕನ ಜೊತೆ ಡಾಲಿ ಹೊಸ ಸಿನಿಮಾ

    ಡಾಲಿ ಧನಂಜಯ (Daali Dhananjay) ಇತ್ತೀಚಿಗೆ ‘ಹೊಯ್ಸಳ’ನಾಗಿ (Hoysala) ಅಬ್ಬರಿಸಿದ್ದರು. ಗುರುದೇವ್ ಹೊಯ್ಸಳ ಪಾತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಡಾಲಿ ಮುಂದಿನ ಸಿನಿಮಾ ಯಾವುದು? ಯಾರ ಜೊತೆ ಸಿನಿಮಾ ಮಾಡ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

    ನಟ, ವಿಲನ್, ನಿರ್ಮಾಪಕ, ಲಿರಿಕ್ಸ್ ರೈಟರ್ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಡಾಲಿಗೆ ಕನ್ನಡ ಮತ್ತು ತೆಲುಗು, ತಮಿಳು ಚಿತ್ರರಂಗದಲ್ಲಿ ಭರ್ಜರಿ ಡಿಮ್ಯಾಂಡ್‌ಯಿದೆ. ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಧನಂಜಯ ನಟಿಸಿ ಸೈ ಎನಿಸಿಕೊಂಡಿದ್ದಾರೆ.

    ಲಾಕ್‌ಡೌನ್ ಬಳಿಕ ‘ಬಡವ ರಾಸ್ಕಲ್’ (Badava Rascal) ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. 16 ಕೋಟಿ ವೆಚ್ಚದಲ್ಲಿ ತಯಾರಾದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಫ್ರೆಂಡ್‌ಶಿಪ್- ಪ್ರೀತಿ ಎರಡರ ಮೌಲ್ಯವನ್ನ ನಿರ್ದೇಶಕ ಶಂಕರ್ ಗುರು (Shankar Guru) ಅದ್ಭುತವಾಗಿ ತೋರಿಸಿದ್ದರು. ಡಾಲಿ- ಅಮೃತಾ ಅಯ್ಯಂಗಾರ್ (Amrutha Iyengar) ಜೋಡಿ ಬೆಳ್ಳಿಪರದೆಯಲ್ಲಿ ಮೋಡಿ ಮಾಡಿತ್ತು. ನಿರ್ದೇಶಕ ಶಂಕರ್ ಗುರು- ಡಾಲಿ ಕಾಂಬೋ ಸಿನಿಮಾ ವರ್ಕ್ ಆಗಿತ್ತು. ಇದೀಗ ಇದೇ ಜೋಡಿ ಕಮಾಲ್ ಮಾಡಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಇದನ್ನೂ ಓದಿ:60ರ ದಶಕದ ಕಥೆ ಹೇಳಲು ರೆಡಿಯಾದ ನೆನಪಿರಲಿ ಪ್ರೇಮ್

    ‘ಬಡವ ರಾಸ್ಕಲ್’ ನಿರ್ದೇಶಕ ಶಂಕರ್ ಗುರು- ಧನಂಜಯ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಬರಲಿದೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಮೂಲಗಳ ಪ್ರಕಾರ, ಶಂಕರ್ ಗುರು ರೆಡಿ ಮಾಡಿರುವ ಸ್ಕ್ರಿಪ್ಟ್ ಕೇಳಿ, ಖುಷಿಯಿಂದ ಡಾಲಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರು ಒಟ್ಟಿಗೆ ಸಿನಿಮಾ ಮಾಡ್ತಿರುವ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ? ಎಂಬುದನ್ನ ಮುಂದಿನ ದಿನಗಳಲ್ಲಿ ಡಾಲಿ-ಶಂಕರ್ ಅಧಿಕೃತ ಅಪ್‌ಡೇಟ್‌ಗೆ ಕಾದುನೋಡಬೇಕಿದೆ.

    ‘ಉತ್ತರಾಕಾಂಡ’ (Uttarakanda) ಸಿನಿಮಾಗೆ ಈಗಾಗಲೇ ತಯಾರಿ ನಡೆಯುತ್ತಿದೆ. ಡಾಲಿ, ರಮ್ಯಾ, ಶಿವಣ್ಣ ಕಾಂಬಿನೇಷನ್‌ನಲ್ಲಿ ಉತ್ತರ ಕರ್ನಾಟಕದ ಸೊಗಡಿನಲ್ಲಿ ಈ ಚಿತ್ರ ಮೂಡಿ ಬರಲಿದೆ.

    ಶ್ರುತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್‌ 

  • ಡಾಲಿ ಪೋಲಿತನ ಬಗ್ಗೆ ಗುಣಗಾನ ಮಾಡಿದ ‘ಕಾಂತಾರ’ ಲೀಲಾ

    ಡಾಲಿ ಪೋಲಿತನ ಬಗ್ಗೆ ಗುಣಗಾನ ಮಾಡಿದ ‘ಕಾಂತಾರ’ ಲೀಲಾ

    ಕಿರುತೆರೆಯ ಬಿಗ್ ಶೋ Weekend With Ramesh ಕಾರ್ಯಕ್ರಮದಲ್ಲಿ ಡಾಲಿ ಧನಂಜಯ (Daali Dhananjay) ಅವರು ಸಾಧಕರ ಸೀಟ್ ಅನ್ನ ಅಲಂಕರಿಸಿದ್ದಾರೆ. ರಂಗಾಯಣ, ಸಿನಿಮಾ ಜರ್ನಿ ಬಗ್ಗೆ ಸಾಕಷ್ಟು ವಿಚಾರಗಳನ್ನ ಡಾಲಿ ಹಂಚಿಕೊಂಡಿದ್ದಾರೆ. ಈ ವೇಳೆ ಡಾಲಿ ಸಹನಟಿ ‘ಕಾಂತಾರ’ (Kantara) ನಟಿ ಸಪ್ತಮಿ ಭಾಗಿಯಾಗಿ, ಧನಂಜಯ ಬಗ್ಗೆ ಹಾಡಿಹೊಗಳಿದ್ದಾರೆ.

    ‘ಕಾಂತಾರ’ ಸಿನಿಮಾ ಸಂಚಲನ ಮೂಡಿಸಿದ ಸಪ್ತಮಿ ಗೌಡ ಅವರು ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಮೂಲಕ ಚಂದನವನಕ್ಕೆ ಡಾಲಿಗೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ವೀಕೆಂಡ್ ಟೆಂಟ್‌ನಲ್ಲಿ ಭಾಗಿಯಾಗಿರುವ ಸಪ್ತಮಿ ಗೌಡ ಅವರು, ಧನಂಜಯ (Dhananjay) ಅವರು ಮುಗ್ಧರ ರೀತಿ ಕಾಣ್ತಾರೆ, ಆದರೆ ಅವರು ಮುಗ್ಧರಲ್ಲ, ತುಂಬಾ ಪೋಲಿ. ನಾವೆಲ್ಲ ಅವರ ಜೋಕ್‌ಗಳನ್ನು ಕೇಳಿದ್ದೇವೆ. ನಮ್ಮ ಕಾಲೇಜ್‌ಗೆ ಮುಖ್ಯ ಅತಿಥಿಯಾಗಿ ಧನಂಜಯ ಅವರು ಬಂದಿದ್ದರು. ಆಗಲೇ ನಾನು ಅವರನ್ನು ಮೊದಲು ಭೇಟಿ ಮಾಡಿದ್ದೆ. ಸ್ವಲ್ಪ ದಿನದ ಹಿಂದೆ ಲಿಫ್ಟ್‌ನಲ್ಲಿದ್ದಾಗ ಯಾರೋ ಬಂದು ಧನಂಜಯ ಜೊತೆ ಸೆಲ್ಫಿ ತಗೊಂಡರು. ಆಗ ಡಾಲಿ ಇಲ್ಲಿ ಸಪ್ತಮಿ ಗೌಡ ಕೂಡ ಇಲ್ಲೇ ಇದ್ದಾರೆ ಎಂದರು. ನಾನು ಬೆಳೆಯಬೇಕು, ನಮ್ಮವರೂ ಬೆಳೆಯಬೇಕು ಎನ್ನುವ ಗುಣ ಧನಂಜಯ ಅವರಿಗೆ ಇದೆ. ಸೆಲ್ಫ್ ಮೇಡ್ ವ್ಯಕ್ತಿಗೆ ಕಷ್ಟ ಬರಬಾರದು, ಯಾವಾಗಲೂ ನಗುತ್ತಾ ಇರಬೇಕು. ಇನ್ನು ನಾನು ಅವರ ಹೆಸರನ್ನು ನನ್ನ ಫೋನ್‌ನಲ್ಲಿ ದಕ್ಷಿಣಾಪಥೇಶ್ವರ ಅಂತ ಸೇವ್ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

    ‘ಕಾಂತಾರ’ ನಟಿ ಬಗ್ಗೆ ಡಾಲಿ ಮಾತನಾಡಿ, ಸಪ್ತಮಿ ಗೌಡ(Saptami Gowda) ಅವರು ಇಲ್ಲಿಗೆ ಬರುತ್ತಾರೆ ಅಂತ ಅಂದುಕೊಂಡಿರಲಿಲ್ಲ. ‘ಕಾಂತಾರ’ ಸಿನಿಮಾ ಹಿಟ್ ಆದ ನಂತರ ಹಿಂದಿಯವರೆಲ್ಲ ನಿಮ್ಮ ಜೊತೆ ಫೋಟೋ ತೆಗೆಸಿಕೊಳ್ತಾರೆ ಅಂತ ರೇಗಿಸುತ್ತಿರುತ್ತೇವೆ. ಸಪ್ತಮಿಯನ್ನು ನಾನು ಉಮೇಶಣ್ಣನ ಮಗಳು ಅಂತ ಕರಿತೀನಿ. ಸಪ್ತಮಿ ಗೌಡ ಇರೋ ಕಾಲೇಜ್‌ಗೆ ಬರಬೇಕು ಅಂತ ನಂಗೆ ಹೇಳಿದಾಗ ನಾನು ಹೋದೆ, ಅಲ್ಲಿ ಸಪ್ತಮಿ ಎಲ್ಲ ಹುಡುಗರನ್ನು ಕಂಟ್ರೋಲ್ ಮಾಡ್ತಿದ್ರು, ಡಾನ್ ತರ ಅವಾಜ್ ಹಾಕ್ತಿದ್ರು. ಆಗಲೇ ಪೊಲೀಸಪ್ಪನ ಮಗಳು ಅಂತ ಗೊತ್ತಾಯ್ತು. ‘ಪಾಪ್‌ಕಾರ್ನ್ ಮಂಕಿ ಟೈಗರ್’ ಪಾತ್ರದಲ್ಲಿ ಸಪ್ತಮಿಯನ್ನು ಹಾಕಿಕೊಳ್ತೀನಿ ಅಂತ ಸೂರಿ ಸರ್ (Director Soori) ಹೇಳಿದಾಗ ಸಪ್ತಮಿ ಕಾಲೇಜಿನಲ್ಲಿ ವರ್ತಿಸಿದ್ದು ನೆನಪಾಯ್ತು. ಆಗಲೇ ಕ್ಯಾರೆಕ್ಟರ್‌ಗೆ ಹೊಂದಿಕೆ ಆಗುತ್ತೆ ಅಂತಾ ಫಿಕ್ಸ್ ಆದೆ ಎಂದು ಧನಂಜಯ ಹೇಳಿದ್ದಾರೆ. ಇದನ್ನೂ ಓದಿ:ಪಸಂದಾಗಿದೆ ‘ರವಿಕೆ ಪ್ರಸಂಗ’ ಎಂದ ಗೀತಾಭಾರತಿ ಭಟ್

    ಇದೀಗ ‘ಉತ್ತರಾಕಾಂಡ’ ಸಿನಿಮಾದಲ್ಲಿ ಮತ್ತೆ ಡಾಲಿ ಮತ್ತು ಸಪ್ತಮಿ ಗೌಡ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಮೋಹಕ ತಾರೆ ರಮ್ಯಾ (Ramya) ಕೂಡ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

  • Weekend With Ramesh 5: ಮದುವೆ ಬಗ್ಗೆ ಗುಟ್ಟು ರಟ್ಟು ಮಾಡಿದ ಡಾಲಿ ಧನಂಜಯ್‌

    Weekend With Ramesh 5: ಮದುವೆ ಬಗ್ಗೆ ಗುಟ್ಟು ರಟ್ಟು ಮಾಡಿದ ಡಾಲಿ ಧನಂಜಯ್‌

    ಕಿರುತೆರೆಯ ಬಿಗ್ ಶೋ Weekend With Ramesh 5 ಕಾರ್ಯಕ್ರಮಕ್ಕೆ ನಟರಾಕ್ಷಸ ಡಾಲಿ ಎಂಟ್ರಿಯಾಗಿದೆ. ಸೋಲು -ಸವಾಲಿನ ದಿನಗಳ ಬಗ್ಗೆ ನಟ ಕಮ್ ನಿರೂಪಕ ರಮೇಶ್ ಅರವಿಂದ್ ಜೊತೆ ಧನಂಜಯ್ ಹಂಚಿಕೊಂಡಿದ್ದಾರೆ. ವೇದಿಕೆಯಲ್ಲಿ ಡಾಲಿ (Daali) ಮದುವೆ ಚರ್ಚೆ ಕೂಡ ಆಗಿದೆ. ಡಾಲಿ ಹುಡುಗಿ ಎಂದು ಗುಟ್ಟು ರಟ್ಟಾಗಿದೆ.

    ಡಾಲಿ ಸ್ನೇಹಿತ ವಸಿಷ್ಠ ಸಿಂಹ ಮದುವೆಯಾದ್ಮೇಲೆ ಅಂತೂ ಡಾಲಿ ಮದುವೆ ಯಾವಾಗ ಅಂತಾ ಕೇಳುವವರು ಸಂಖ್ಯೆ ಜಾಸ್ತಿಯಾಗಿದೆ. ಅದು ಆಗೋ ಸಮಯಕ್ಕೆ ಆಗುತ್ತೆ ಅಂತಾ ಉತ್ತರ ನೀಡುತ್ತಲೇ ಬಂದಿದ್ದಾರೆ. ಆಗಾಗ ಅಮೃತಾ ಜೊತೆ ಡಾಲಿ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಸಖತ್ ಸೌಂಡ್ ಮಾಡಿತ್ತು. ನಾವಿಬ್ಬರು ಫ್ರೆಂಡ್ಸ್ ಅಷ್ಟೇ ಅಂತಾ, ಅಂತೆ -ಕಂತೆ ಸುದ್ದಿಗೆ ಬ್ರೇಕ್ ಹಾಕಿದ್ದರು. ಈಗ ಮತ್ತೆ ಡಾಲಿ ಮದುವೆ ಯಾವಾಗ ಎಂದು ಪ್ರಶ್ನೆ Weekend With Ramesh ಶೋನಲ್ಲಿ ಎದುರಾಗಿದೆ.

    ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್ ಅವರ ಅಜ್ಜಿ, ಅವನು ಮದುವೆಯಾಗಬೇಕು ಎಂದು ಹೇಳಿದ್ದಾರೆ. ಅದಕ್ಕೆ ನಟ ರಮೇಶ್, ಹುಡುಗಿ ಹುಡುಕಿ ಅಂತಾರೆ. ಆಗ ಅಜ್ಜಿ ನಾವು ಹುಡುಕಿದ ಹುಡುಗಿಯನ್ನು ಅವರು ಒಪ್ಪಲ್ಲ ಎಂದು ಹೇಳ್ತಾರೆ. ಧನಂಜಯ್ ಅವರ ಅಕ್ಕ ಸಹ ಧನಂಜಯ್ ಅವರಿಗೆ ಮದುವೆಯಾಗೋಕೆ ಹೇಳಿ ಎಂದು ರಮೇಶ್ ಅರವಿಂದ್‌ಗೆ ಹೇಳ್ತಾರೆ. ಎಲ್ಲರ ಮಾತು ಕೇಳಿ ಧನಂಜಯ್ ಅವರು ನಗುತ್ತಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!

    ಶಿವಣ್ಣ ಕೂಡ ಮದುವೆ ಯಾವಾಗ ಅಂತಾ ಪ್ರಶ್ನೆ ಮಾಡಿದ್ದಾರೆ. ಆಗ ಡಾಲಿ, ನಾನು ಯಾವತ್ತೂ ಶಿವಣ್ಣನ ಮಾತು ತೆಗೆದು ಹಾಕಿಲ್ಲ. ಖಂಡಿತಾ ಮದುವೆ ಆಗ್ತೀನಿ ಎಂದು ಡಾಲಿ ಹೇಳಿದ್ದಾರೆ. ಮನಸ್ಸಿನಲ್ಲಿ ಯಾರಾದರೂ ಇದ್ದರೆ, ನನಗೆ ಮಾತ್ರ ಹೇಳಿ ಅಂತಾ ನಟ ರಮೇಶ್ ಡಾಲಿ ಬಳಿ ಹೇಳುತ್ತಾರೆ. ಆಗ ಡಾಲಿ, ರಮೇಶ್ ಕಿವಿಯಲ್ಲಿ ಏನೋ ಹೇಳ್ತಾರೆ. ಡಾಲಿ ಮಾತು ಕೇಳಿ ರಮೇಶ್ ಶಾಕ್ ಆಗುತ್ತಾರೆ. ದೊಡ್ಡ ಅನೌನ್ಸ್ ಮಾಡ್ತೀನಿ ಎಂದು ನಟ ಹೇಳ್ತಾರೆ, ಎಲ್ಲರೂ ನಗ್ತಾರೆ.

    ಡಾಲಿ ಧನಂಜಯ್ ಈಗಾಗಲೇ ಎಂಗೇಜ್ ಆಗಿದ್ದಾರಾ? ಮದುವೆಯಾಗ್ತಾರಾ? ಡಾಲಿ ಮದುವೆಯಾಗುವ ಹುಡುಗಿ ಈ ಎಲ್ಲಾ ಪ್ರಶ್ನೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಿಗಲಿದೆ.

  • ದೊಡ್ಮನೆ ಕುಡಿ ಯುವರಾಜ್ ಎದುರು ವಿಲನ್ ಆಗಿ ಡಾಲಿ!

    ದೊಡ್ಮನೆ ಕುಡಿ ಯುವರಾಜ್ ಎದುರು ವಿಲನ್ ಆಗಿ ಡಾಲಿ!

    ಣ್ಣಾವ್ರ ಮನೆಮಗ ದೊಡ್ಮನೆ ಕುಡಿ ಭರವಸೆಯ ನಟ ಯುವರಾಜ್‌ಕುಮಾರ್ ನಟನೆ ಎಂಬ ಅಖಾಡಕ್ಕೆ ಇಳಿದಿದ್ದಾರೆ. ಇತ್ತಿಚೆಗಷ್ಟೇ ಯುವರಾಜ್‌ಕುಮಾರ್ ಮತ್ತು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಕಾಂಬಿನೇಷನ್‌ನಲ್ಲಿ ಹೊಸ ಚಿತ್ರದ ಕುರಿತು ಅನೌನ್ಸ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಬ್ರೇಕಿಂಗ್ ನ್ಯೂಸ್ ಹೊರ ಬಿದ್ದಿದೆ. ಯುವರಾಜ್ ಎದುರು ಖಡಕ್ ವಿಲನ್ ಆಗಿ ಡಾಲಿ ಕಾಣಿಸಿಕೊಳ್ತಿದ್ದಾರೆ.ದೊಡ್ಮನೆ ಅಂದ್ರೆ ಭರವಸೆ, ಮೂರು ತಲೆಮಾರುಗಳಿಂದ ತಮ್ಮ ಚಿತ್ರಗಳ ಮೂಲಕ ಅಭಿಮಾನಿಗಳನ್ನ ರಂಜಿಸುತ್ತಲೇ ಬಂದಿದ್ದಾರೆ. ಇದೀಗ ಈ ಸಾಲಿಗೆ ಭರವಸೆಯ ನಟ ಯುವರಾಜ್ ಸೇರ್ಪಡೆಯಾಗಿದೆ. ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಯುವರಾಜ್ ಕಾಣಿಸಿಕೊಳ್ತಿದ್ದಾರೆ. ಡೊಡ್ಮನೆ ಕುಡಿ ಯುವಗೆ ಟಕ್ಕರ್ ಕೊಡೋದಕ್ಕೆ ಧನಂಜಯ್ ರೆಡಿಯಾಗಿದ್ದಾರಂತೆ ಎಂಬ ಸುದ್ದಿ ಜೋರಾಗಿದೆ.

    ಡಾಲಿ ನಟನೆಯಲ್ಲಿ ನಟರಾಕ್ಷಸ, ಪಾತ್ರ ಯಾವುದೇ ಆಗಿದ್ರು ಆ ಪಾತ್ರಕ್ಕೆ ಜೀವ ತುಂಬೋ ಮಹಾನ್ ನಟ. ಡೊಡ್ಮನೆಗೆ ನಟನೆ ಅನ್ನೋದು ರಕ್ತಗತವಾಗಿ ಬಂದಿರೋದ್ರಿಂದ ಯುವರಾಜ್ ಮತ್ತು ಡಾಲಿ ಡೆಡ್ಲಿ ಕಾಂಬಿನೇಷನ್ ಬಗ್ಗೆ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಕುತೂಹಲ ಮೂಡಿಸುತ್ತಿದೆ. ಖಡಕ್ ವಿಲನ್ ಎದುರಿದ್ರೆ ಹೀರೋಗೊಂದು ಗತ್ತು ಗಮ್ಮತ್ತು ಅನ್ನೋದಕ್ಕೆ ಯುವ ಮತ್ತು ಡಾಲಿ ಕಾಂಬಿನೇಷನ್ ಸಾಕ್ಷಿಯಾಗಬಹುದು. ಇನದನ್ನೂ ಓದಿ:`ಫಿದಾ’ ಬ್ಯೂಟಿ ಸಾಯಿ ಪಲ್ಲವಿಗೆ ಕನ್ನಡ ಹೇಳಿಕೊಟ್ಟ ಶೀತಲ್ ಶೆಟ್ಟಿ

    ಯುವರಾಜ್ ನಟನೆಯ ಈ ಚಿತ್ರದ ಟೈಟಲ್ ಮತ್ತು ಪಾತ್ರದ ಜತೆಗೆ ಚಿತ್ರಕಥೆ ಹೇಗಿರಬಹುದು ಅಂತೆಲ್ಲಾ ಈಗಾಗಲೇ ಅಭಿಮಾನಿಗಳು ಯೋಚನೆ ಮಾಡೋದಕ್ಕೆ ಶುರು ಮಾಡಿದ್ದಾರೆ. ಇನ್ನು ರಾಘವೇಂದ್ರ ಸ್ಟೊರ‍್ಸ್ ಚಿತ್ರದ ಶೂಟಿಂಗ್ ಮುಗಿಸಿ ಈಗ ಹೊಂಬಾಳೆ ಬ್ಯಾನರ್‌ನಲ್ಲಿ ಯುವರಾಜ್ ಸಿನಿಮಾವನ್ನು ಸಂತೋಷ್ ಆನಂದ್ ರಾಮ್ ಕೈಗೆತ್ತಿಕೊಂಡಿದ್ದಾರೆ. ಇನ್ನು ಈಗಾಗಲೇ ಸಂತೋಷ್ ಆನಂದ್ ರಾಮ್ ಅವರ ಅಪ್ಪು ಜತೆ ಯುವರತ್ನದಲ್ಲಿ ಡಾಲಿ ನಟಿಸಿರೋದ್ರಿಂದ ಈ ಚಿತ್ರದಲ್ಲೂ ಡಾಲಿ ಇರುತ್ತಾರೆ ಎಂದು ಸುದ್ದಿ ಜೋರಾಗಿದೆ. ಎಲ್ಲದಕ್ಕೂ ಚಿತ್ರತಂಡದಿಂದ ಅಧಿಕೃತ ಮಾಹಿತಿಗಾಗಿ ಕಾದು ನೋಡಬೇಕಿದೆ.

  • ಡಾಲಿ-ಅದಿತಿ ನಟನೆಯ `ಜಮಾಲಿಗುಡ್ಡ’ ಚಿತ್ರದ ಡಬ್ಬಿಂಗ್ ಸ್ಟಾರ್ಟ್

    ಡಾಲಿ-ಅದಿತಿ ನಟನೆಯ `ಜಮಾಲಿಗುಡ್ಡ’ ಚಿತ್ರದ ಡಬ್ಬಿಂಗ್ ಸ್ಟಾರ್ಟ್

    ಸ್ಯಾಂಡಲ್‌ವುಡ್‌ನಲ್ಲಿ `ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರದ್ದೇ ಸುದ್ದಿ ಸದ್ದು. ಇತ್ತೀಚೆಗಷ್ಟೇ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಇದೀಗ ಚಿತ್ರದ ಡಬ್ಬಿಂಗ್ ಶುರುವಾಗಿದೆ. ಸಿನಿಮಾದ ಡಬ್ಬಿಂಗ್ ಕುರಿತು ಚಿತ್ರತಂಡ ವಿಡಿಯೋ ಝಲಕ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ನಟ ರಾಕ್ಷಸ ಡಾಲಿ ಧನಂಜಯ್ ಮತ್ತು ಅದತಿ ಪ್ರಭುದೇವಾ ನಟನೆಯ ಬಹುನಿರೀಕ್ಷಿತ ಚಿತ್ರ `ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರ ಶುರುವಾದಗಿನಿಂದ ಹಲವು ವಿಚಾರಗಳಿಂದ ಚಿತ್ರ ಸುದ್ದಿ ಮಾಡ್ತಿದೆ. ಇತ್ತೀಚಗಷ್ಟೇ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಇದೀಗ ಡಬ್ಬಿಂಗ್ ಕೆಲಸ ಕೂಡ ಭರದಿಂದ ಸಾಗುತ್ತಿದೆ.

    90ರ ದಶಕದ ರೆಟ್ರೋ ಸ್ಟೈಲ್ ಟ್ರಾವೆಲಿಂಗ್ ಲವ್ ಸ್ಟೋರಿ ಹೇಳಲು ಡಾಲಿ ಮತ್ತು ಅದಿತಿ ಬರುತ್ತಿದ್ದಾರೆ. ಚಿತ್ರದಲ್ಲಿ ಡಾಲಿ ಬಾರ್ ಸಪ್ಲೈಯರ್ ಪಾತ್ರಕ್ಕೆ ಜೀವ ತುಂಬಿದ್ದು, ನಟಿ ಅದಿತಿ ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡುವ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ನಡುವೆ ಪ್ರೇಮ ಹುಟ್ಟಿ ನಂತರ ಏನಾಗುತ್ತದೆ ಅನ್ನೋದನ್ನ ತೋರಿಸಲು ನಿರ್ದೇಶಕ ಕುಶಾಲ್ ಗೌಡ ಸಜ್ಜಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಕಂಪ್ಲಿಂಟ್ ಆಗಿದ್ದು, ಡಬ್ಬಿಂಗ್‌ನತ್ತ ಮುಖ ಮಾಡಿದೆ ಚಿತ್ರತಂಡ.

    ಡಬ್ಬಿಂಗ್ ಸ್ಟುಡಿಯೋಗೆ ಭೇಟಿ ನೀಡಿ, ಪೂಜೆ ನಂತರ ಡಬ್ಬಿಂಗ್‌ಗೆ ನಟಿ ಅದಿತಿ ಸಾಥ್ ಕೊಟ್ಟಿದ್ದಾರೆ. ಜೀವ ತುಂಬುದ ಘಳಿಕೆ ಅಂತಾ ಹೇಳಿ ಡಬ್ಬಿಂಗ್ ಶುರುಮಾಡಿರೋ ಅದಿತಿ ಮಾತುಗಳು ಗಮನ ಸೆಳೆಯುತ್ತಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಅಮ್ಮನ ಜತೆ ತಾರೆಯರ ಅಪರೂಪದ ಫೋಟೋಗಳು

    `ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರದ ಡಾಲಿ ಮತ್ತು ಅದಿತಿ ಲುಕ್ ನೋಡಿರೋ ಅಭಿಮಾನಿಗಳಲ್ಲಿ ಪಾತ್ರದ ಕುರಿತು ಕುತೂಹಲ ಹುಟ್ಟು ಹಾಕಿದೆ. ನವಿರಾದ ಹೊಸ ಪ್ರೇಮ ಕಥೆ ನೋಡಲು ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.

  • ಟ್ರೆಂಡಿಂಗ್‌ನಲ್ಲಿ ‘ತೋತಾಪುರಿ’ ಸಾಂಗ್ – ಸಿನಿರಸಿಕರಿಂದ  2 ಮಿಲಿಯನ್ ಮೆಚ್ಚುಗೆಯ ಮುದ್ರೆ

    ಟ್ರೆಂಡಿಂಗ್‌ನಲ್ಲಿ ‘ತೋತಾಪುರಿ’ ಸಾಂಗ್ – ಸಿನಿರಸಿಕರಿಂದ  2 ಮಿಲಿಯನ್ ಮೆಚ್ಚುಗೆಯ ಮುದ್ರೆ

    ತ್ತೊಂದು ಸೆನ್ಸೇಷನ್ ಹಿಟ್ ಕೊಡೋದಕ್ಕೆ ಸಕಲ ಸಜ್ಜಾಗಿದ್ದಾರೆ ನವರಸ ನಾಯಕ ಜಗ್ಗೇಶ್ ಹಾಗೂ ವಿಜಯ ಪ್ರಸಾದ್ ಜೋಡಿ. ಈ ಕಾಂಬಿನೇಶನ್ ನೀರ್ ದೋಸೆಯಲ್ಲಿ ಮಾಡಿದ್ದ ಮ್ಯಾಜಿಕ್ ಎಲ್ಲರಿಗೂ ಗೊತ್ತೇ ಇದೆ. ಅದಕ್ಕಿಂತ ಡಬಲ್ ಧಮಾಕ ಮನರಂಜನೆ ಉಣಬಡಿಸಲು ‘ತೋತಾಪುರಿ’ ಮೂಲಕ ಪ್ರೇಕ್ಷಕರೆದುರು ಬರ್ತಿರೋದು ಗೊತ್ತಿರುವ ವಿಷ್ಯ. ಆದರೆ ಇದೀಗ ಸಿನಿಮಾ ಕೆಲಸ ಮುಗಿಸಿ ಪ್ರಚಾರ ಕಾರ್ಯ ಶುರು ಹಚ್ಚಿಕೊಂಡಿರುವ ನಿರ್ದೇಶಕ ವಿಜಯ ಪ್ರಸಾದ್   ಸಿನಿಮಾ ತಂಡ ಚಿತ್ರದ ಬಹು ನಿರೀಕ್ಷಿತ ವೀಡಿಯೋ ಸಾಂಗ್ ಬಿಡುಗಡೆ ಮಾಡಿ ಸಿನಿರಸಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಮೊನ್ನೆ ಮೊನ್ನೆಯಷ್ಟೇ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡಿನ ಟೀಸರ್ ಝಲಕ್ ತೋರಿಸಿ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದ್ದ ಚಿತ್ರತಂಡ ಈಗ ಪೂರ್ತಿ ವೀಡಿಯೋ ಹಾಡನ್ನೇ ಬಿಡುಗಡೆ ಮಾಡಿದೆ. ‘ಬಾಗ್ಲು ತೆಗಿ ಮೇರಿ ಜಾನ್’ ಎನ್ನುವ ಅದಿತಿ ಪ್ರಭುದೇವ ‘ಸ್ವಲ್ಪ ತಡಿ ಮೇರಿ ಜಾನ್’ ಎನ್ನುವ ಜಗ್ಗೇಶ್ ಕಾಂಬಿನೇಶನ್ ನೋಡುಗರಿಗೆ ಸಖತ್ ಥ್ರಿಲ್ ನೀಡುತ್ತಿದೆ. ವಿಜಯ ಪ್ರಸಾದ್ ಸಾಹಿತ್ಯ ಕೃಷಿ, ಅನೂಪ್ ಸೀಳಿನ್ ಸಂಗೀತ, ಮುರಳಿ ಮಾಸ್ಟರ್ ಕೊರಿಯೋಗ್ರಫಿ ಹಾಡಿನ ಹೈಲೈಟ್ ಆದ್ರೆ, ಜಗ್ಗೇಶ್ ಎಕ್ಸ್ ಪ್ರೆಶನ್, ಅದಿತಿ ಪ್ರಭುದೇವ ಕ್ಯೂಟ್‌ನೆಸ್‌ ಬಾಗ್ಲು ತೆಗಿ ಮೇರಿ ಜಾನ್ ಎನರ್ಜಿಯನ್ನು ಇನ್ನಷ್ಟು ಹೆಚ್ಚಿಸಿದೆ. ಕೆಜಿಎಫ್ ಖ್ಯಾತಿಯ ಸಿಂಗರ್ ಅನನ್ಯ ಭಟ್, ವ್ಯಾಸರಾಜ್ ಸೋಸಲೆ, ಸುಪ್ರಿಯ ರಾಮ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಒಟ್ಟಿನಲ್ಲಿ ಕೇಳೋಕು, ನೋಡೋಕು ಚೆಂದ ಎನಿಸಿಕೊಂಡಿರುವ ಹಾಡು ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡು ಟ್ರೆಂಡಿಂಗ್‌ನಲ್ಲಿದೆ. ಅಷ್ಟೇ ಅಲ್ಲ, ಬಿಡುಗಡೆಯಾದ ನಲವತ್ತೆಂಟು ಗಂಟೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡು ಮತ್ತಷ್ಟು ಮೆಚ್ಚುಗೆಯತ್ತ ಸಾಗುತ್ತಿದೆ.

     

     

    ಜಗ್ಗೇಶ್ ಸಿನಿಮಾ ಅಂದ್ರೆ ಅಲ್ಲಿ ಎಂಟಟೈನ್ಮೆಂಟ್ ಅನ್ನೋದಕ್ಕೆ ಕೊರತೆ ಇರೋದಿಲ್ಲ. ನವರಸ ನಾಯಕನ ಹಾವಭಾವ ನೋಡೋದೆ ಒಂದು ಮನರಂಜನೆ. ಈ ಸಿನಿಮಾದಲ್ಲಿ ನೆಕ್ಸ್ಟ್ ಲೆವೆಲ್ ಮನರಂಜನೆಯ ರಸದೌತಣ ನೀಡಲು ಜಗ್ಗೇಶ್ ರೆಡಿಯಾಗಿದ್ದಾರೆ. ಇವರ ಜೊತೆ ನಿರ್ದೇಶಕ ವಿಜಯಪ್ರಸಾದ್ ಜೊತೆಯಾದ ಮೇಲಂತೂ ಕೇಳೋದೇ ಬೇಡ ಅಷ್ಟು ಕಾಮಿಡಿ ಫ್ಯಾಕ್ಟರ್ ಸಿನಿಮಾದಲ್ಲಿ ಇರುತ್ತೆ. ಅಂತಹದ್ದೇ ಕಾಮಿಡಿ ಎಳೆಯನ್ನಿಟ್ಟುಕೊಂಡು ಸ್ಟ್ರಾಂಗ್ ಮೆಸೇಜ್ ನೀಡೋದಕ್ಕೆ ಈ ಹಿಟ್ ಜೋಡಿ ‘ತೋತಾಪುರಿ’ಯೊಂದಿಗೆ ಸದ್ಯದಲ್ಲೇ ಚಿತ್ರಮಂದಿರದ ಅಂಗಳಕ್ಕೆ ಕಾಲಿಡಲಿದೆ.

     

    ಮೋನಿಫ್ಲಿಕ್ಸ್ ಸುಡಿಯೋಸ್, ಸುರೇಶ್ ಆರ್ಟ್ಸ್ ಬ್ಯಾನರ್ ನಡಿ ಕೆ.ಎ ಸುರೇಶ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡಿಗಡೆ ಮಾಡಲು ರೆಡಿಯಾಗಿದ್ದಾರೆ. ಎರಡು ಸೀಕ್ವೆಲ್ ನಲ್ಲಿ ಬಿಡುಗಡೆಯಾಗುತ್ತಿರುವ ತೋತಾಪುರಿ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ನಿರಂಜನ್ ಬಾಬು ಕ್ಯಾಮೆರಾ ಕೈಚಳಕವಿದೆ. ದತ್ತಣ್ಣ, ಸುಮನ್ ರಂಗನಾಥ್, ಡಾಲಿ ಧನಂಜಯ, ವೀಣಾ ಸುಂದರ್, ಹೇಮಾ ದತ್ ಒಳಗೊಂಡ ಕಲಾವಿದರ ಬಳಗ ಚಿತ್ರದಲ್ಲಿದೆ.

  • ನಟಿಗೆ ಪ್ರಪೋಸ್ ಮಾಡಿದ ಡಾಲಿ ಧನಂಜಯ್!

    ನಟಿಗೆ ಪ್ರಪೋಸ್ ಮಾಡಿದ ಡಾಲಿ ಧನಂಜಯ್!

    ಬೆಂಗಳೂರು: ಬಡವ ರಾಸ್ಕಲ್ ಗೆಲುವಿನ ಸಂಭ್ರಮದಲ್ಲಿರುವ ಡಾಲಿ ಧನಂಜಯ್ ಇದೀಗ ರೋಸ್ ಹಿಡಿದು ನಟಿಗೆ ಪ್ರಪೋಸ್ ಮಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಲವ್ ಬಗ್ಗೆ ತಲೆ ಕೆಡಸಿಕೊಳ್ಳದೇ, ಮದುವೆ ಬಗ್ಗೆ ಎಲ್ಲೂ ಬಾಯಿ ಬಿಡದ ಡಾಲಿ ಇದೀಗ ನಟಿ ಅಮೃತ ಅಯ್ಯಂಗಾರ್‌ಗೆ ಪ್ರಪೋಸ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಡಾಲಿ ಧನಂಜಯ್ ಅವರು ಅಮೃತಾ ಎದುರು ರೋಸ್ ಹಿಡಿದು ಕುಳಿತಿದ್ದಾರೆ. ಮಂಡಿಯೂರಿ ಬೇಡುವೆನು, ಹೃದಯ ಕಾಲಡಿ ಇಡುವೇನು ತೆಗೆದು ಬಚ್ಚಿಟ್ಟುಕೋ ಇಲ್ಲ ತುಳಿದು ಕಾಲ್ ತೋಳೆದುಕೋ. ಬೇಡ ಈ ಮೌನ, ನೀ ಮಾಡು ತೀರ್ಮಾನ ಎಂದು ಡಾಲಿ ಅಮೃತಾ ಎದುರು ಲವ್ ಪ್ರಪೋಸ್ ಇಟ್ಟಿದ್ದಾರೆ. ನಟಿ ಮಾತ್ರ ಮುಗುಳು ನಕ್ಕು ಸುಮ್ಮನಾಗಿದ್ದಾರೆ. ಇದನ್ನೂ ಓದಿ:  ಸೂಪರ್ ಹಾಟ್ ದೀಪಿಕಾ ಪಡುಕೋಣೆ ತೊಟ್ಟ ಡ್ರೆಸ್ ಬೆಲೆ ಎಷ್ಟು ಗೊತ್ತಾ?

    ಖಾಸಗಿ ವಾಹಿನಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿ ಕೊಡುವ ಕಾರ್ಯಕ್ರಮದಲ್ಲಿ ಈ ಜೋಡಿಗೆ ಟಾಸ್ಕ್ ನೀಡಲಾಗಿತ್ತು. ಅಮೃತಾ ಅವರಿಗೆ ಡಾಲಿ ಧನಂಜಯ್ ರೋಸ್ ಕೊಟ್ಟು ಡೈಲಾಗ್ ಹೇಳಿ ಪ್ರಪೋಸ್ ಮಾಡಬೇಕಿತ್ತು. ಜೊತೆಗೆ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಕೂಡಾ ಮಾಡಿದ್ದಾರೆ. ಇದನ್ನೂ ಓದಿ: ಅದ್ದೂರಿಯಾಗಿ ನಡೆಯುತ್ತಿದೆ ಮೌನಿ ರಾಯ್ ಅರಿಶಿನ ಶಾಸ್ತ್ರ

  • ಎಂಇಎಸ್ ಪುಂಡಾಟ ನಿಲ್ಲಲಿ: ಡಾಲಿ ಧನಂಜಯ್

    ಎಂಇಎಸ್ ಪುಂಡಾಟ ನಿಲ್ಲಲಿ: ಡಾಲಿ ಧನಂಜಯ್

    ಕೋಲಾರ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಕೃತಿ ಹಾಳು ಮಾಡಿ ವಿಕೃತಿ ಮೆರೆಯುತ್ತಿರುವ ಎಂಇಎಸ್ ಪುಂಡರ ಪುಂಡಾಟ ನಿಲ್ಲಿಸಬೇಕು ಎಂದು ನಟ ಡಾಲಿ ಧನಂಜಯ್ ಹೇಳಿದರು.

    ಕೋಲಾರದ ನರಸಾಪುರದಲ್ಲಿ ಪುನೀತ್ ನಮನ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆದಿರುವ ಘಟನೆ ಖಂಡನೀಯವಾಗಿದೆ. ಮರಾಠರು, ಕನ್ನಡಿಗರು ದೇಶದ ಮೂಲೆ ಮೂಲೆಗಳಲ್ಲಿ ನೆಲೆಸಿದ್ದಾರೆ. ಇಂತಹ ಅನಾಹುತಗಳನ್ನು ಮಾಡುವ ಮೊದಲು ಎಲ್ಲರೂ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ರಾಜ್ಯ ಸರ್ಕಾರ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಒಂದಿಷ್ಟು ಪುಂಡರು ಮಾಡಿರುವ ಕೃತ್ಯದಿಂದ ಎಲ್ಲರಿಗೂ ತೊಂದರೆ ಆಗೋದು ಬೇಡ. ನಾನು ಕಲಾವಿದನಾಗಿ, ಸಾಮಾನ್ಯ ವ್ಯಕ್ತಿಯಾಗಿ ಪ್ರತಿಭಟಿಸಬಲ್ಲೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಮರಾಠಿಗರ ಮೇಲೆ ದಾಳಿ ನಡೆಯುತ್ತಿದೆ – ಸುಳ್ಳು ಆರೋಪ ಹೊರಿಸಿದ ಉದ್ಧವ್ ಠಾಕ್ರೆ

    ರಾಜ್ಯದಲ್ಲಿ ಸಾಮರಸ್ಯ ಕದಡುವ ಕೆಲಸ ಆಗಬಾರದು. ಹೋರಾಟದ ವಿಚಾರದಲ್ಲಿ ಚಲನಚಿತ್ರ ಮಂಡಳಿಯ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು.