Tag: daali dhananjay

  • ರೆಟ್ರೋ ಲುಕ್‌ನಲ್ಲಿ ಮಿಂಚಿದ ಶಿವಣ್ಣ, ಡಾಲಿ

    ರೆಟ್ರೋ ಲುಕ್‌ನಲ್ಲಿ ಮಿಂಚಿದ ಶಿವಣ್ಣ, ಡಾಲಿ

    ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು 666 ಆಪರೇಷನ್ ಡ್ರೀಮ್ ಥಿಯೇಟರ್ (666 Operation Dream Theatre). ಹೇಮಂತ್ ರಾವ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಿದೆ. ಒಂದು ಹೇಮಂತ್ ಡೈರೆಕ್ಷನ್ ಹಾಗೂ ಶಿವಣ್ಣ-ಧನಂಜಯ್ ಮತ್ತೆ ಒಂದಾಗಿರುವುದು. ಟಗರು (Tagaru) ಜೋಡಿಯ ಹೊಸ ಪ್ರಾಜೆಕ್ಟ್ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾ ಪೋಸ್ಟರ್ ಮೂಲಕವೇ ಪ್ರೇಕ್ಷಕರ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ. ರೆಟ್ರೋ ಲುಕ್‌ನಲ್ಲಿ ಶಿವಣ್ಣ ಹಾಗೂ ಧನಂಜಯ್ (Daali Dhananjay) ಕಾಣಿಸಿಕೊಂಡಿದ್ದು, ಈ ಲುಕ್ ನೋಡುತ್ತಿದ್ದರೆ ಡಾ. ರಾಜಕುಮಾರ್ ಅವರ ಸ್ಪೈ ಸಿನಿಮಾಗಳು ನೆನಪಾಗುತ್ತವೆ. ಸದ್ಯ ಚಿತ್ರತಂಡ ಮೊದಲ ಹಂತದ ಚಿತ್ರೀಕರಣ ಮುಗಿಸಿ, 2ನೇ ಹಂತಕ್ಕೆ ಸಜ್ಜಾಗುತ್ತಿದೆ.

    ಫಸ್ಟ್ ಶೆಡ್ಯೂಲ್ಡ್‌ ಶೂಟಿಂಗ್‌ನಲ್ಲಿ ಶಿವಣ್ಣ (Shiva Rajkumar) ಹಾಗೂ ಧನಂಜಯ್ ಭಾಗಿಯಾಗಿದ್ದರು. ಇದೀಗ ಇದೇ ತಿಂಗಳಲ್ಲಿ ಎರಡನೇ ಹಂತದ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಸಜ್ಜಾಗಿದೆ. ಅದಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್ ಹಾಕಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಹಾಕಲಾಗಿರುವ ಬೃಹತ್ ಆಕಾರದ ಸೆಟ್ ನಲ್ಲಿ ಬರೋಬ್ಬರಿ 100 ದಿನಗಳ ಕಾಲ ಶೂಟಿಂಗ್ ನಡೆಸಲಾಗುವುದು.

    ಸೆಟ್ ಬಗ್ಗೆ ಮಾತನಾಡಿದ ನಿರ್ಮಾಪಕ ಡಾ. ವೈಶಾಕ್ ಜೆ ಗೌಡ, ‘666 ಆಪರೇಷನ್ ಡ್ರೀಮ್ ಥಿಯೇಟರ್ ಬಗ್ಗೆ ಎಲ್ಲವನ್ನೂ ಹೇಮಂತ್ ಎಂ ರಾವ್ ಮತ್ತು ಅವರ ತಂಡ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದೆ. ನಾವು ಇಂದಿನ ಪೀಳಿಗೆಯನ್ನು ಬೆರಗುಗೊಳಿಸುವ ಮತ್ತು ಹಿಂದಿನ ಪೀಳಿಗೆಯನ್ನು ನೆನಪಿನ ಹಾದಿಯಲ್ಲಿ ಕರೆದೊಯ್ಯುವ ಜಗತ್ತನ್ನು ರಚಿಸಲು ಪ್ರಯತ್ನಿಸುತ್ತಿದ್ದೇವೆ. ಯಾವ ಸೆಟ್‌ಗಳನ್ನ ನಿರ್ಮಿಸಲಾಗುತ್ತಿದೆ ಎಂಬುದನ್ನು ನಾನು ಬಹಿರಂಗಪಡಿಸಲು ಸಾಧ್ಯವಾಗುವುದಿಲ್ಲ. ಪ್ರೇಕ್ಷಕರು ದೊಡ್ಡ ಪರದೆಯ ಮೇಲೆ ಅನುಭವಿಸಬಹುದಾದ ವಿಷಯ ಅದು. ದೊಡ್ಡ ಪ್ರಮಾಣದಲ್ಲಿ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಈ ಕುರಿತ ಮತ್ತಷ್ಟು ಅಪ್ ಡೇಟ್ ಶೀಘ್ರದಲ್ಲೇ ನೀಡುತ್ತೇವೆ’ ಎಂದು ಹೇಳಿದ್ದಾರೆ.

    ಧನಂಜಯ್ ಹಾಗೂ ಶಿವರಾಜ್ ಕುಮಾರ್ ಅವರು ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವೈಶಾಕ್ ಜೆ. ಗೌಡ ಅವರ ‘ವೈಶಾಕ್ ಜೆ. ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಿಸಲಾಗುತ್ತಿದೆ. ಚರಣ್ ರಾಜ್ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಈ ಸಿನಿಮಾಗಿದೆ.ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

  • ಬರ್ತ್‌ ಡೇ ಸೆಲೆಬ್ರೇಷನ್ – ಅಭಿಮಾನಿಗಳಿಗೆ ಶಾಕ್ ಕೊಟ್ಟ ನಟ ಡಾಲಿ ಧನಂಜಯ್!

    ಬರ್ತ್‌ ಡೇ ಸೆಲೆಬ್ರೇಷನ್ – ಅಭಿಮಾನಿಗಳಿಗೆ ಶಾಕ್ ಕೊಟ್ಟ ನಟ ಡಾಲಿ ಧನಂಜಯ್!

    ಸ್ಟಾರ್ ನಟರು ತಮ್ಮ ಹುಟ್ಟುಹಬ್ಬವನ್ನ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳಲು ಇಷ್ಟಪಡೋದುಂಟು. ಆದರೆ ಕೆಲವು ಮುಖ್ಯ ಕಾರಣಕ್ಕೆ ಸ್ಟಾರ್‌ಗಳು ಅಭಿಮಾನಿಗಳೊಂದಿಗೆ (Fans) ಹುಟ್ಟುಹಬ್ಬ ಆಚರಿಸಿಕೊಳ್ಳೋದನ್ನ ಮಿಸ್ ಮಾಡ್ಕೊಳ್ತಾರೆ. ಇದೀಗ ಡಾಲಿ ಧನಂಜಯ್ (Daali Dhananjay) ಕೂಡ ಈ ಬಾರಿ ಹುಟ್ಟುಹಬ್ಬವನ್ನ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಕಾರಣವನ್ನೂ ತಿಳಿಸಿದ್ದಾರೆ ನಟ ರಾಕ್ಷಸ ಧನಂಜಯ್.

     

    View this post on Instagram

     

    A post shared by Daali Dhananjaya (@dhananjaya_ka) 

    ಆಗಸ್ಟ್ 23ಕ್ಕೆ ಧನಂಜಯ್ ಹುಟ್ಟುಹಬ್ಬ (Birthday) ಆಚರಿಸಿಕೊಳ್ತಿದ್ದಾರೆ. ಆದರೆ ಈ ಬಾರಿ ಧನಂಜಯ್ ಅಭಿಮಾನಿಗಳೊಂದು ಆಚರಿಸಿಕೊಳ್ತಿಲ್ಲ. ಕೆಲಸದ ನಿಮಿತ್ತ ಹೊರಗಡೆ ಹೋಗುವ ಕಾರಣಕ್ಕೆ ಸಂಭ್ರಮಾಚರಣೆಯನ್ನ ನಿಮ್ಮೊಂದಿಗೆ ಮಾಡುತ್ತಿಲ್ಲ ಎಂದಿದ್ದಾರೆ ಡಾಲಿ. ಅಂದಹಾಗೆ ಇದೀಗ ಧನಂಜಯ್ ಐತಿಹಾಸಿಕ ಹಲಗಲಿ (Halagali) ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.

    ಇನ್ನು 666 ಸಿನಿಮಾದಲ್ಲಿ ಶೂಟಿಂಗ್ ನಿಮಿತ್ತ ಬೇರೆ ಊರಿನಲ್ಲಿ ಇರುವ ಸಾಧ್ಯತೆ ಇದೆ. ಹೀಗಾಗಿ ಧನಂಜಯ್ ಈ ಬಾರಿ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ. ಈ ಬಾರಿ ಬಹುತೇಕ ಸ್ಟಾರ್‌ಗಳು ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಅವರ ಸಾಲಿಗೆ ಇದೀಗ ಡಾಲಿ ಧನಂಜಯ್ ಕೂಡ ಸೇರಿದ್ದಾರೆ.

  • ಆಪರೇಷನ್ ಸಿಂಧೂರ: ಭಯೋತ್ಪಾದಕರಿಗೆ ಭಾರತ ಒಳ್ಳೆಯ ಉತ್ತರವನ್ನೇ ಕೊಟ್ಟಿದೆ- ಡಾಲಿ

    ಆಪರೇಷನ್ ಸಿಂಧೂರ: ಭಯೋತ್ಪಾದಕರಿಗೆ ಭಾರತ ಒಳ್ಳೆಯ ಉತ್ತರವನ್ನೇ ಕೊಟ್ಟಿದೆ- ಡಾಲಿ

    ಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ‘ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆಯಿಂದ ಭಯೋತ್ಪಾದಕರಿಗೆ ಭಾರತ ಒಳ್ಳೆಯ ಉತ್ತರವನ್ನೇ ಕೊಟ್ಟಿದೆ ಎಂದು ನಟ ಧನಂಜಯ (Daali Dhananjay) ಮಾತನಾಡಿದ್ದಾರೆ. ಇದು ಎಲ್ಲರೂ ಖುಷಿಪಡುವಂತಹ ವಿಚಾರ ಎಂದು ಭಾರತ ಸೇನೆಯ ಬಗ್ಗೆ ಮೆಚ್ಚಿಗೆಯ ಮಾತುಗಳನ್ನಾಡಿದ್ದಾರೆ ಡಾಲಿ. ಇದನ್ನೂ ಓದಿ:12 ವರ್ಷಗಳ ಪ್ರೀತಿ- ಮೇ 9ರಂದು ಚೈತ್ರಾ ಕುಂದಾಪುರ ಮದುವೆ

    ಕಾರ್ಯಕ್ರಮವೊಂದರಲ್ಲಿ ಡಾಲಿ ಮಾತನಾಡಿ, ಉಗ್ರರಿಗೆ ಉತ್ತರ ಕೊಡಲೇಬೇಕು. ಪ್ರತಿ ಬಾರಿಯೂ ಉತ್ತರ ಕೊಟ್ಟಿದ್ದೇವೆ. ಇದೀಗ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಿಂದ ಭಯೋತ್ಪಾದಕರಿಗೆ ಭಾರತ ಒಳ್ಳೆಯ ಉತ್ತರವನ್ನೇ ಕೊಟ್ಟಿದೆ. ಇದು ಎಲ್ಲರೂ ಖುಷಿಪಡುವಂತದ್ದು ಎಂದಿದ್ದಾರೆ. ಇದನ್ನೂ ಓದಿ:ಫ್ಯಾನ್ಸ್‌ಗೆ ಗುಡ್ ನ್ಯೂಸ್- ಬರಲಿದೆ ವಿಜಯ್ ಸೇತುಪತಿ ನಟನೆಯ ‘ಮಹಾರಾಜ’ ಸೀಕ್ವೆಲ್

    ಇದೇ ವೇಳೆ ಸೋನು ನಿಗಮ್ ಅವರ ಕನ್ನಡ ವಿವಾದದ ಬಗ್ಗೆಯೂ ಡಾಲಿ ಮಾತನಾಡಿ, ನಾಡು ನುಡಿ ಅಂತ ಬಂದಾಗ ಎಲ್ಲರೂ ನಿಂತುಕೊಳ್ಳಲೇಬೇಕು. ಸೋನು ನಿಗಮ್ ಕೂಡ ಕನ್ನಡದ ಬಗ್ಗೆ ಕಾಳಜಿಯಿರುವ ಕಲಾವಿದ. ಅವರು ಒಳ್ಳೆಯ ಸಿಂಗರ್, ಚಿತ್ರರಂಗಕ್ಕೆ ಅವರು ಕೊಡುಗೆ ಕೊಟ್ಟಿದ್ದಾರೆ. ನಾವು ಅವರು ಹಾಡಿರುವ ಹಾಡುಗಳನ್ನು ಕೇಳಿ ಎಂಜಾಯ್ ಮಾಡಿದ್ದೇವೆ. ಅಂದಿನ ಸಂದರ್ಭದಲ್ಲಿ ಅವರ ಪ್ರತಿಕ್ರಿಯೆ ಬೇರೆ ತರಹ ಕಾಣಿಸಿರಬಹುದು. ಅಥವಾ ತಪ್ಪಾಗಿ ರಿಯಾಕ್ಟ್ ಮಾಡಿರಬಹುದು. ಆದರೆ ಕನ್ನಡ ಅಂತ ಬಂದಾಗ ನಾವೆಂದಿಗೂ ಕನ್ನಡದ ಪರನೇ ಇರುತ್ತೇವೆ. ಕನ್ನಡನೇ ನಮ್ಮ ಅನ್ನ, ಅದೇ ನಮ್ಮ ಜೀವ ಎಂದಿದ್ದಾರೆ.

  • ವಿದ್ಯಾಪತಿಗೆ ನಡುಕ ಹುಟ್ಟಿಸಿದ ‘ಕೆಜಿಎಫ್’ ಗರುಡ!

    ವಿದ್ಯಾಪತಿಗೆ ನಡುಕ ಹುಟ್ಟಿಸಿದ ‘ಕೆಜಿಎಫ್’ ಗರುಡ!

    ನಂಜಯ ನಿರ್ಮಾಣ ಮಾಡಿರುವ ‘ವಿದ್ಯಾಪತಿ’ ಚಿತ್ರ ಇಂದು (ಏ.10) ಬಿಡುಗಡೆಯಾಗಿದೆ. ಸಾಕಷ್ಟು ಪಾತ್ರಗಳಲ್ಲಿ ಅಭಿನಯಿಸುತ್ತಾ, ಇತ್ತೀಚಿನ ದಿನಗಳಲ್ಲಿ ನಾಯಕ ನಟನಾಗಿ ಚಾಲ್ತಿಯಲ್ಲಿರುವ ನಾಗಭೂಷಣ್ (Nagabhushan) ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ನಾಗಭೂಷಣ್ ಈ ಸಿನಿಮಾ ನಾಯಕ ಎಂಬ ಸುದ್ದಿ ಹೊರ ಬಿದ್ದಾಕ್ಷಣವೇ ಬಹುತೇಕರ ಕಲ್ಪನೆ ಹಾಸ್ಯದ ಚೌಕಟ್ಟಿನಲ್ಲಿಯೇ ಗಿರಕಿ ಹೊಡೆದಿತ್ತು. ಆದರೆ ಟ್ರೈಲರ್ ಬಿಡುಗಡೆಗೊಳ್ಳುತ್ತಲೇ ಒಂದಿಡೀ ಚಿತ್ರಣವೇ ಬದಲಾಗಿ ಹೋಗಿತ್ತು. ಯಾಕೆಂದರೆ, ಅಲ್ಲಿ ಸುಳಿದಿದ್ದು ಭಿನ್ನ ಕಥನ, ಅದಕ್ಕೆ ತಕ್ಕುದಾದ ಪಾತ್ರಗಳ ಸುಳಿವು. ಹಾಸ್ಯವೆಂಬುದು ಈ ಸಿನಿಮಾದ ಕಥೆಯ ಆತ್ಮವೆಂಬುದು ನಿಜ. ಆದರೆ, ಅದರಾಚೆಗೂ ಹಬ್ಬಿಕೊಂಡಿರುವ ಬೆರಗಿನ ದೃಶ್ಯಗಳನ್ನು ಕಂಡು ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ.

    ಇಶಾಂ ಹಾಗೂ ಹಸೀಮ್ ಸಿದ್ಧಪಡಿಸಿದ್ದ ಕಥೆ ಕೇಳಿಯೇ ಡಾಲಿ ಧನಂಜಯ ಈ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದರು. ತನ್ನ ಗೆಳೆಯ ನಾಗಭೂಷಣ್ ನಾಯಕನಾಗಿ ನಟಿಸುತ್ತಿರೋದರಿಂದ ನಿರ್ಮಾಣದಾಚೆಗಿನ ಕಾಳಜಿಯೂ ಡಾಲಿಗಿತ್ತು. ಕಡೆಗೂ ನಿರ್ದೇಶಕರು ನಿರೀಕ್ಷೆಗೂ ಮೀರಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದರ ಬಗೆಗಿನ ಹೆಮ್ಮೆಯ ಭಾವ ಧನಂಜಯ ಮಾತುಗಳಲ್ಲಿ ಧ್ವನಿಸುತ್ತಿತ್ತು. ಅಂಥಾದ್ದೊಂದು ಮೆಚ್ಚುಗೆಯೀಗ ಸಿನಿಮಾ ನೋಡಿದವರೆಲ್ಲರಲ್ಲೂ ಮೂಡಿಕೊಂಡಿದೆ. ಅದುವೇ ‘ವಿದ್ಯಾಪತಿ’ಯ ಯಶಸ್ಸಿನ ಮುನ್ಸೂಚನೆಯಂತೆಯೂ ಕಾಣಿಸುತ್ತಿದೆ. ಇದನ್ನೂ ಓದಿ:ಹೆಂಡತಿ ಕಾಸಲ್ಲಿ ಶೋಕಿ ಮಾಡ್ತಾರಾ ನಟ ನಾಗಭೂಷಣ್?


    ಈ ಸಿನಿಮಾದಲ್ಲಿ ಹಲವಾರು ಆಕರ್ಷಣೆಗಳಿದ್ದಾವೆ. ಅದರಲ್ಲಿ ಪ್ರಧಾನವಾಗಿ ಹಾಸ್ಯದೊಂದಿಗೆ ಮಾಸ್ ಸನ್ನಿವೇಶಗಳೂ ಕೂಡ ಸ್ಥಾನ ಪಡೆದುಕೊಳ್ಳುತ್ತವೆ. ಅದರಲ್ಲಿಯೂ ವಿಶೇಷವಾಗಿ ಕೆಜಿಎಫ್ ಚಿತ್ರದ ಗರುಡ ಪಾತ್ರಧಾರಿಯಾಗಿ ಪ್ರಸಿದ್ಧಿ ಪಡೆದುಕೊಂಡಿರುವ ಗರುಡ ರಾಮ್ (Garuda Ram) ಈ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಆ ಪಾತ್ರದ ಮೂಲಕವೇ ವಿದ್ಯಾಪತಿಯ ಕಥನ ಮತ್ತೊಂದು ಆಯಾಮದತ್ತ ಹೊರಳಿಕೊಳ್ಳುತ್ತದೆ. ಅದನ್ನು ಪ್ರೇಕ್ಷಕರೆಲ್ಲ ಸಂಭ್ರಮಿಸಿದ್ದಾರೆ. ಈ ಪಾತ್ರದ ಬಗ್ಗೆ, ಅದರ ಇರುವಿಕೆಯ ದೃಶ್ಯಾವಳಿಗಳನ್ನು ಸಿನಿಮಾ ಮಂದಿರಗಳಲ್ಲಿಯೇ ಹೋಗಿ ನೋಡಿದರೆ ನೈಜ ಅನುಭೂತಿ ದಕ್ಕಲು ಸಾಧ್ಯ. ಇದನ್ನೂ ಓದಿ: ಹಿಟ್ಲರ್ ಸಖಿ ಮಲೈಖಾ ಈಗ ಸೂಪರ್ ಸ್ಟಾರ್ ವಿದ್ಯಾ!

     

    View this post on Instagram

     

    A post shared by Garuda Ram (@garuda_ram_official)

    ಇಶಾಂ ಹಾಗೂ ಹಸೀಮ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಂಕಲನದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ ಮತ್ತು ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಗಭೂಷಣ್, ಮಲೈಕಾ ವಸುಪಾಲ್ (Malaika Vasupal), ರಂಗಾಯಣ ರಘು, ಕಾರ್ತಿಕ್ ರಾವ್ ತಾರಾಗಣವಿದೆ. ಸಿನಿಮಾ ಬಗ್ಗೆ ಓರ್ವ ನಟನಾಗಿ ಅತೀವ ಪ್ರೀತಿ ಹೊಂದಿರುವ ಡಾಲಿ ಧನಂಜಯ, ಹೊಸಾ ಪ್ರತಿಭೆಗಳು ಮತ್ತು ತನ್ನ ವಲಯದವರನ್ನು ಬೆಳೆಸುವ ಗುಣ ಹೊಂದಿದ್ದಾರೆ. ಹಾಗಾಗಿ ಅವರು ‘ವಿದ್ಯಾಪತಿ’ (Vidyapati) ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಮೊದಲ ದಿನವೇ ಪ್ರೇಕ್ಷಕರ ಕಡೆಯಿಂದ ಸಿಗುತ್ತಿರುವ ಭರಪೂರ ಮೆಚ್ಚುಗೆ ಕಂಡು ಚಿತ್ರತಂಡ ಖುಷಿಗೊಂಡಿದೆ. ಬೇಸಿಗೆ ರಜೆಯ ಮಜಕ್ಕೆ ಮತ್ತಷ್ಟು ಮೆರುಗು ತುಂಬಬಲ್ಲ ಈ ಸಿನಿಮಾ ಕುಟುಂಬ ಸಮೇತರಾಗಿ ನೋಡಿಸಿಕೊಳ್ಳುವ ಗುಣಗಳೊಂದಿಗೆ ಗಮನ ಸೆಳೆಯುತ್ತಿದೆ.

  • ಹಿಟ್ಲರ್ ಸಖಿ ಮಲೈಖಾ ಈಗ ಸೂಪರ್ ಸ್ಟಾರ್ ವಿದ್ಯಾ!

    ಹಿಟ್ಲರ್ ಸಖಿ ಮಲೈಖಾ ಈಗ ಸೂಪರ್ ಸ್ಟಾರ್ ವಿದ್ಯಾ!

    ‘ಉಪಾಧ್ಯಕ್ಷ’ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು ಮಲೈಕಾ ವಸುಪಾಲ್. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ನಾಯಕಿಯಾಗಿ ಪ್ರಸಿದ್ಧಿ ಪಡೆದುಕೊಂಡಿದ್ದ ಅವರು ಇದೀಗ ಡಾಲಿ ಧನಂಜಯ ನಿರ್ಮಾಣ ಮಾಡಿರುವ ‘ವಿದ್ಯಾಪತಿ’ ಚಿತ್ರದ ಮೂಲಕ ಎರಡನೇ ಬಾರಿ ನಾಯಕಿಯಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಈ ಬಾರಿ ಮತ್ತೊಂದು ತೆರನಾದ ಚೆಂದದ ಪಾತ್ರ ಸಿಕ್ಕ ಖುಷಿಯೂ ಮಲೈಕಾರಲ್ಲಿದೆ. ಮೊದಲ ಹೆಜ್ಜೆಯಲ್ಲಿಯೇ ಸಿನಿಮಾ ರಂಗದಲ್ಲಿ ನೆಲೆ ಕಂಡುಕೊಳ್ಳುವ ಭರವಸೆ ಮೂಡಿಸಿಕೊಂಡಿದ್ದ ಮಲೈಕಾ, ಆ ನಂತರದಲ್ಲಿ ಭಿನ್ನ ಬಗೆಯ ಪಾತ್ರಕ್ಕಾಗಿ ಅನ್ವೇಷಣೆ ಆರಂಭಿಸಿದ್ದರು. ಆ ಹಾದಿಯಲ್ಲಿ ಅನೇಕ ಕಥೆಗಳೂ ಕೂಡಾ ಅವರನ್ನು ಅರಸಿ ಬಂದಿತ್ತು. ಅದೆಲ್ಲದರ ನಡುವೆ, ವರ್ಷದ ಹಿಂದೆ ಬಹುವಾಗಿ ಕಾಡಿದ್ದದ್ದು ‘ವಿದ್ಯಾಪತಿ’ (Vidyapati) ಚಿತ್ರದ ಪಾತ್ರ. ಆ ಕಾರಣದಿಂದಲೇ ಒಪ್ಪಿ ನಟಿಸಿರುವ ಮಲೈಕಾಗೀಗ (Malaika Vasupal) ಒಂದೊಳ್ಳೆ ಸಿನಿಮಾದ ಭಾಗವಾದ ತೃಪ್ತಿ ದೊರಕಿದೆ. ಇದನ್ನೂ ಓದಿ: ಏಪ್ರಿಲ್ 10ರಂದು ತೆರೆಗಾಣಲು ಸಜ್ಜಾದ ‘ವಿದ್ಯಾಪತಿ’!

    ‘ಹಿಟ್ಲರ್ ಕಲ್ಯಾಣ’ ಎಂಬ ಧಾರಾವಾಹಿಯ ಲವಲವಿಕೆಯ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಮನ ಗೆದ್ದವರು ಮಲೈಕಾ. ಪಕ್ಕಾ ಮಾಸ್ ಲುಕ್ಕಿನಲ್ಲಿಯೂ ಮಿಂಚಿದ್ದ ಈಕೆ ನಾಯಕಿಯಾಗಿ ಮಿಂಚುವ ಎಲ್ಲ ಲಕ್ಷಣಗಳನ್ನೂ ಹೊಂದಿದ್ದದ್ದು ನಿಜ. ಇಂಥಾ ಮಲೈಕಾ ವಿದ್ಯಾಪತಿ ಚಿತ್ರದ ನಾಯಕಿಯಾಗಬೇಕೆಂದು ಆರಂಭದಲ್ಲಿಯೇ ಚಿತ್ರತಂಡ ನಿರ್ಧರಿಸಿತ್ತಂತೆ. ಈ ಕುರಿತಾಗಿ ಕರೆ ಬಂದಾಗ ಆರಂಭಿಕವಾಗಿ ಮಲೈಕಾ ಒಪ್ಪಿಕೊಳ್ಳಲು ಕಾರಣವಾದದ್ದು ಅದು ಡಾಲಿ ನಿರ್ಮಾಣ ಮಾಡುತ್ತಿರೋ ಸಿನಿಮಾ ಅನ್ನೋದು. ಆ ನಂತರ ಒಂದಿಡೀ ಕಥೆ ಮತ್ತು ಪಾತ್ರದ ಬಗ್ಗೆ ಕೇಳಿದಾಗ ಮಲೈಕಾ ಅಕ್ಷರಶಃ ಥ್ರಿಲ್ ಆಗಿದ್ದರಂತೆ. ಇದನ್ನೂ ಓದಿ:ಹೆಂಡತಿ ಕಾಸಲ್ಲಿ ಶೋಕಿ ಮಾಡ್ತಾರಾ ನಟ ನಾಗಭೂಷಣ್?

    ಇಲ್ಲಿ ಅವರು ಸೂಪರ್ ಸ್ಟಾರ್ ನಟಿ ವಿದ್ಯಾ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆ ಪಾತ್ರದ ಒಂದಷ್ಟು ಝಲಕ್ಕುಗಳು ಟ್ರೈಲರ್ ಮೂಲಕ ಅನಾವರಣಗೊಂಡಿವೆ. ಹಾಗಂತ ಅದರ ಚಹರೆ ಅಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಮಲೈಕಾ ಪಾತ್ರದ ಮತ್ತೊಂದಷ್ಟು ರಹಸ್ಯಗಳು ಚಿತ್ರಮಂದಿರದಲ್ಲಿ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ. ಇದೀಗ ಪ್ರತಿಭಾನ್ವಿತರ ತಂಡದೊಂದಿಗೆ, ಒಂದೊಳ್ಳೆ ಪಾತ್ರ ನಿರ್ವಹಿಸಿರುವ ಖುಷಿ ಹೊಂದಿರುವ ಮಲೈಕಾಗೆ, ವಿದ್ಯಾಪತಿ ಚಿತ್ರ ತನ್ನ ವೃತ್ತಿ ಬದುಕಿನ ದಿಕ್ಕುದೆಸೆ ಬದಲಿಸುತ್ತದೆಂಬ ಗಾಢ ನಂಬಿಕೆಯಿದೆ. ಈಗಾಗಲೇ ಅವರ ಪಾತ್ರದ ಬಗ್ಗೆ ಮೆಚ್ಚುಗೆಗಳು ಕೇಳಿ ಬರುತ್ತಿವೆ. ಈ ಬಾರಿ ನಾಗಭೂಷಣ್ ಮತ್ತು ಮಲೈಕಾ ಜೋಡಿ ಮೋಡಿ ಮಾಡುವ ಎಲ್ಲ ಲಕ್ಷಣಗಳೂ ಕಾಣಿಸಲಾರಂಭಿಸಿವೆ.

    ಇಶಾಂ ಹಾಗೂ ಹಸೀಮ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಂಕಲನದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ ಮತ್ತು ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಗಭೂಷಣ್, ಮಲೈಕಾ ವಸುಪಾಲ್, ರಂಗಾಯಣ ರಘು, ಕಾರ್ತಿಕ್ ರಾವ್ ತಾರಾಗಣವಿದೆ. ಸಿನಿಮಾ ಬಗ್ಗೆ ಓರ್ವ ನಟನಾಗಿ ಅತೀವ ಪ್ರೀತಿ ಹೊಂದಿರುವ ಡಾಲಿ ಧನಂಜಯ, ಹೊಸಾ ಪ್ರತಿಭೆಗಳು ಮತ್ತು ತನ್ನ ವಲಯದವರನ್ನು ಬೆಳೆಸುವ ಗುಣ ಹೊಂದಿದ್ದಾರೆ. ಅಂತಾದ್ದೊಂದು ಅಕ್ಕರಾಸ್ಥೆಯಿಂದಲೇ ವಿದ್ಯಾಪತಿ ಚಿತ್ರವನ್ನವರು ನಿರ್ಮಾಣ ಮಾಡಿದ್ದಾರೆ. ಇಂದು (ಏ.10) ಸಿನಿಮಾ ರಿಲೀಸ್‌ ಆಗಿದೆ.

  • ಹೆಂಡತಿ ಕಾಸಲ್ಲಿ ಶೋಕಿ ಮಾಡ್ತಾರಾ ನಟ ನಾಗಭೂಷಣ್?

    ಹೆಂಡತಿ ಕಾಸಲ್ಲಿ ಶೋಕಿ ಮಾಡ್ತಾರಾ ನಟ ನಾಗಭೂಷಣ್?

    ಟ ನಾಗಭೂಷಣ್‌ (Nagabhushan) ನಟನೆಯ ‘ವಿದ್ಯಾಪತಿ’ (Vidyapati) ಸಿನಿಮಾ ಇಂದು (ಏ.10) ಬಿಡುಗಡೆಯಾಗಿದೆ. ಡಾಲಿ ಧನಂಜಯ ನಿರ್ಮಾಣ ಮಾಡಿರುವ ಈ ಸಿನಿಮಾದ ಟ್ರೈಲರ್ ಈಗಾಗಲೇ ಸಂಚಲನ ಸೃಷ್ಟಿಸಿದೆ. ಬಹುತೇಕ ಎಲ್ಲಾ ಅಭಿರುಚಿಯ ಪ್ರೇಕ್ಷಕರು ಕೂಡ ‘ವಿದ್ಯಾಪತಿ’ಯನ್ನು ಮೊದಲ ದಿನವೇ ಕಣ್ತುಂಬಿಕೊಳ್ಳಲು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ಬಿಡುಗಡೆಗೆ ಸಜ್ಜುಗೊಂಡಿರುವ ‘ವಿದ್ಯಾಪತಿ’ ಭಿನ್ನ ಕಥಾನಕವನ್ನೊಳಗೊಂಡಿರೋ ಚಿತ್ರ. ಇದನ್ನೂ ಓದಿ:‘ಕಪಟ ನಾಟಕ ಸೂತ್ರಧಾರಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿದರು ಡಾಲಿ!

    ಇಶಾಂ ಹಾಗೂ ಹಸೀಂ ನಿರ್ದೇಶನ ಮಾಡಿರುವ ಈ ಸಿನಿಮಾದ ಅಸಲಿ ಸ್ವಾದದ ಸುಳಿವು ಟ್ರೈಲರ್ ಮೂಲಕವೇ ಜಾಹೀರಾಗಿತ್ತು. ಒಟ್ಟಾರೆ ಕಥನದ ಕೊಂಬೆ ಕೋವೆಗಳ ಸೂಕ್ಷ್ಮಗಳೂ ಕೂಡ ಇದರೊಂದಿಗೆ ಜಾಹೀರಾದಂತಾಗಿತ್ತು. ಈ ಬಗ್ಗೆ ನಾಯಕ ನಟ ನಾಗಭೂಷಣ್ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರನ್ವಯ ಹೇಳೋದಾದರೆ, ನಾಗಭೂಷಣ್ ಅವರಿಗೆ ಈ ಸಿನಿಮಾದಲ್ಲಿ ಅತ್ಯಪರೂಪದ ಪಾತ್ರ ಸಿಕ್ಕಿದೆ. ಸೂಪರ್ ಸ್ಟಾರ್ ವಿದ್ಯಾಳ ಪತಿ ಎಂಬುದನ್ನೇ ಬಲವಾಗಿಸಿಕೊಂಡು, ಅತೀವ ಹಣದ ವ್ಯಾಮೋಹದ ಪಾತ್ರದಲ್ಲಿ ಅವರು ನಟಿಸಿದ್ದಾರಂತೆ. ಅದರಾಚೆಗೆ ಪಕ್ಕಾ ಮಾಸ್ ಅವತಾರದಲ್ಲಿಯೂ ಕೂಡ ನಾಗಭೂಷಣ್ ಕಾಣಿಸಿಕೊಂಡಿದ್ದಾರಾ? ಇಂಥಾದ್ದೊಂದು ಪ್ರಶ್ನೆ ಟ್ರೈಲರ್ ನೋಡಿದ ಎಲ್ಲರನ್ನೂ ಕಾಡುತ್ತಿದೆ. ಅದಕ್ಕೆ ಇಂದು ಮಜವಾದ ಉತ್ತರ ಸಿಗಲಿದೆ. ಇದನ್ನೂ ಓದಿ:ಕೊಲೆ ಕೇಸ್ ಸಾಕ್ಷ್ಯಿಧಾರನ ಜೊತೆ ಪ್ರಭಾವ ಬೀರುತ್ತಿದ್ದಾರಾ ದರ್ಶನ್?

    ಸೂಪರ್ ಸ್ಟಾರ್ ವಿದ್ಯಾಳ ಪತಿಯಾಗಿ, ಆ ಪ್ರಭೆಯಲ್ಲಿ ಶೋಕಿ ಮಾಡೋ ನಾಯಕನ ಪಾತ್ರಕ್ಕಿಲ್ಲ ಒಂದಷ್ಟು ಚಹರೆಗಳಿದ್ದಾವೆ. ಈ ಹಾದಿಯಲ್ಲಿ ಎಂತೆಂಥಾ ವಿಚಾರಗಳು ಘಟಿಸುತ್ತವೆಂಬುದೇ ಸಿನಿಮಾದ ಜೀವಾಳ. ಅನೇಕ ಟ್ವಿಸ್ಟುಗಳೊಂದಿಗೆ, ಭರಪೂರ ಮನೋರಂಜನಾತ್ಮಕವಾಗಿ ಈ ಸಿನಿಮಾವನ್ನು ರೂಪಿಸಲಾಗಿದೆ. ಆರಂಭ ಕಾಲದಲ್ಲಿ ಸಣ್ಣಪುಟ್ಟ ಪಪಾತ್ರಗಳನ್ನು ಮಾಡುತ್ತಾ ಬಂದಿದ್ದ ನಾಗಭೂಷಣ್ ಅವರ ಪಾಲಿಗೆ ನಾಯಕ ನಟನಾಗಬೇಕೆಂಬ ಯಾವ ಇರಾದೆಯೂ ಇರಲಿಲ್ಲ. ಸಿಕ್ಕ ಪಾತ್ರಗಳನ್ನು ಚೆಂದಗೆ ಬಳಸಿಕೊಂಡು ಉತ್ತಮ ನಟನಾಗಿ ನೆಲೆ ಕಂಡುಕೊಳ್ಳಬೇಕೆಂಬುದಷ್ಟೇ ಅವರ ಗುರಿಯಾಗಿತ್ತು. ಆದರೆ, ಅಚಾನಕ್ಕಾಗಿ ನಾಯಕನಾಗೋ ಅವಕಾಶ ಒಲಿದು ಬಂದು, ಆ ಹಾದಿಯಲ್ಲಿ ಮುಂದುವರೆಯುತ್ತಾ ಬಂದಿರುವ ನಾಗಭೂಷಣ್ ಪಾಲಿಗೆ ‘ವಿದ್ಯಾಪತಿ’ ರೋಮಾಂಚಕ ತಿರುವು ಕೊಡುವ ಲಕ್ಷಣಗಳು ಕಾಣಿಸುತ್ತಿವೆ.


    ಡಾಲಿ ಧನಂಜಯ (Daali Dhananjay) ಅತ್ಯಂತ ಮಹತ್ವಾಕಾಂಕ್ಷೆಯಿಂದ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ತಮ್ಮ ಗೆಳೆಯ ನಾಗಭೂಷಣ್ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಒಂದು ಪ್ರತಿಭಾನ್ವಿತ ತಂಡದೊಂದಿಗೆ ಇಶಾಂ ಹಾಗೂ ಹಸೀಮ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಂಕಲನದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ ಮತ್ತು ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಗಭೂಷಣ್, ಮಲೈಕಾ ವಸುಪಾಲ್ (Malaika Vasupal), ರಂಗಾಯಣ ರಘು, ಕಾರ್ತಿಕ್ ರಾವ್ ತಾರಾಗಣವಿದೆ. ಡಾಲಿ ಧನಂಜಯ ನಿರ್ಮಾಣ ಮಾಡಿರುವ ಈ ಸಿನಿಮಾ ಇಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್‌ ಆಗಿದೆ.

  • ‘ಕಪಟ ನಾಟಕ ಸೂತ್ರಧಾರಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿದರು ಡಾಲಿ!

    ‘ಕಪಟ ನಾಟಕ ಸೂತ್ರಧಾರಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿದರು ಡಾಲಿ!

    ತ್ತೊಂದು ಹೊಸಬರ ತಂಡ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ತಯಾರಾಗಿದೆ. ನವ ಪ್ರತಿಭೆಗಳು ಸೇರಿ ರೂಪಿಸಿರುವ ‘ಕಪಟ ನಾಟಕ ಸೂತ್ರಧಾರಿ’ ಚಿತ್ರದ (Kapata Nataka Soothradaari) ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಧೀರಜ್ ಎಂ.ವಿ ನಿರ್ದೇಶನ ಹಾಗೂ ಅಭಿರಾಮ ಅರ್ಜುನ ಬ್ಯುಸಿನೆಸ್ ಹೆಡ್ ಆಗಿ ಪಾದಾರ್ಪಣೆ ಮಾಡುತ್ತಿರುವ ಈ ಚೊಚ್ಚಲ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಡಾಲಿ ಧನಂಜಯ (Daali Dhananjay), ಸಂಗೀತಾ ಭಟ್, ನಿರ್ದೇಶಕರಾದ ಮಂಸೋರೆ, ಕೆ.ಎಂ ಚೈತನ್ಯ ಮುಂತಾದವರು ಸಾಮಾಜಿಕ ಜಾಲತಾಣದ ಮೂಲಕ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ಪೋಸ್ಟರ್ ಮೂಲಕವೇ ಒಟ್ಟಾರೆ ಕಥನದ ಬಗ್ಗೆ ಕುತೂಹಲ ಮೂಡಿಕೊಳ್ಳುತ್ತಲೇ ಮತ್ತೊಂದಷ್ಟು ವಿಚಾರಗಳು ಜಾಹೀರಾಗಿವೆ. ಇದನ್ನೂ ಓದಿ:ನಾನ್ಯಾಕೆ 2ನೇ ಮದುವೆಯಾಗಿಲ್ಲ: ಸೀಕ್ರೆಟ್ ಬಿಚ್ಚಿಟ್ಟ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ

    ‘ಕಪಟ ನಾಟಕ ಸೂತ್ರಧಾರಿ’ ಈ ಸಮಾಜಕ್ಕೆ ಕನ್ನಡಿ ಹಿಡಿದಂಥಾ ಕಥೆಯನ್ನೊಳಗೊಂಡಿರುವ ಚಿತ್ರ. ಇಲ್ಲಿ ಹಾಸುಹೊಕ್ಕಾಗಿರುವ ತಾರತಮ್ಯ, ಶೋಷಣೆಗಳ ಕಥಾ ಎಳೆಯನ್ನೊಳಗೊಂಡಿರುವ ಈ ಸಿನಿಮಾ ಸಾಮಾಜಿಕ, ರಾಜಕೀಯ ವಿಡಂಬನಾತ್ಮಕ ಡ್ರಾಮಾ ಜಾನರಿಗೆ ಒಗ್ಗಬಹುದಾದ ಸಿನಿಮಾ. ಇದರ ಚಿತ್ರೀಕರಣ ನಡೆದ ಸ್ಥಳ ಮತ್ತು ರೀತಿಯ ವಿವರ ನೋಡಿದರೆ, ಕಥೆಯ ಬಗೆಗೊಂದು ಕುತೂಹಲ ಮೂಡಿಕೊಳ್ಳುತ್ತೆ. ಇದರ ಬಹುಪಾಲು ಚಿತ್ರೀಕರಣ ಒಂದು ಸಾವಿರ ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿರುವ ಉತ್ತರಕರ್ನಾಟಕದ ದೇವಸ್ಥಾನದ ಆವರಣದಲ್ಲಿ ನಡೆದಿದೆ. 25 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಶುರುವಾಗಿದ್ದ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಅಂತಿಮ ಹಂತದಲ್ಲಿದೆ. ಇದನ್ನೂ ಓದಿ:ಕೋರ್ಟ್‌ಗೆ ಗೈರು, ಸಿನಿಮಾ ವೀಕ್ಷಣೆಗೆ ದರ್ಶನ್‌ ಹಾಜರ್

    ವಿಶೇಷವೆಂದರೆ, 100ಕ್ಕೂ ಹೆಚ್ಚು ಮಂದಿ ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ. ಒಂದಷ್ಟು ಹೂಡಿಕೆದಾರರು ಸೇರಿ ವಿ ಎಸ್ ಕೆ ಸಿನಿಮಾಸ್ ಬ್ಯಾನರ್‌ ನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮೂಲತಃ ರಂಗಭೂಮಿ ಕಲಾವಿದರಾದ ಅಭಿರಾಮ ಅರ್ಜುನ ಈ ಸಿನಿಮಾದ ಬ್ಯುಸಿನೆಸ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಭಿನ್ನ ಧಾಟಿಯ, ಚೆಂದದ ಸಿನಿಮಾಗಳನ್ನು ರೂಪಿಸುವ, ಪ್ರತಿಭಾನ್ವಿತ ತಂಡಕ್ಕೆ ಸಾಥ್ ಕೊಡುವ ಮಹತ್ವಾಕಾಂಕ್ಷೆಯೊಂದಿಗೆ ಅಭಿರಾಮ ಚಿತ್ರರಂಗಕ್ಕೆ ಅಡಿಯಿರಿಸಿದ್ದಾರೆ.

    ಮೂಲತಃ ಇಂಜಿನಿಯರ್ ಆಗಿರುವ ಧೀರಜ್ ಎಂ.ವಿ ಈ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಸುನಿಲ್ ಕುಮಾರ್ ದೇಸಾಯಿ, ಮಠ ಗುರುಪ್ರಸಾದ್ ಮುಂತಾದವರ ಗರಡಿಯಲ್ಲಿ ಕಾರ್ಯನಿರ್ವಹಿಸಿರುವ ಧೀರಜ್ ಈಗಾಗಲೇ ಒಂದು ಕಿರುಚಿತ್ರಗಳನ್ನೂ ನಿರ್ದೇಶನ ಮಾಡಿದ ಅನುಭವ ಹೊಂದಿದ್ದಾರೆ. ವೀರೇಶ್ ಎನ್ ಟಿ ಎ ಛಾಯಾಗ್ರಹಣ, ಪ್ರಸನ್ನ ಕುಮಾರ್ ಎಂ.ಎಸ್ ಸಂಗೀತ ನಿರ್ದೇಶನ ಹಾಗೂ ಮುರಳಿ ಶಂಕರ್ ಸಹ ನಿರ್ದೇಶನವಿರುವ ಈ ಚಿತ್ರದಲ್ಲಿ ಹರೀಶ್ ರಂಗರಾವ್ ಕ್ರಿಯೇಟಿವ್ ಹೆಡ್ ಆಗಿ, ವರುಣ್ ಗುರುರಾಜ್ ಪ್ರೊಡಕ್ಷನ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ತಾರಾಗಣದ ಬಗೆಗಿನ ವಿವರಗಳನ್ನು ಚಿತ್ರತಂಡ ಶೀಘ್ರದಲ್ಲೇ ಹಂಚಿಕೊಳ್ಳಲಿದೆ.

  • ಯುಗಾದಿ ಹಬ್ಬದ ಹಿನ್ನೆಲೆ ಪತ್ನಿ ಜೊತೆ ಡಾಲಿ ಟೆಂಪಲ್ ರನ್

    ಯುಗಾದಿ ಹಬ್ಬದ ಹಿನ್ನೆಲೆ ಪತ್ನಿ ಜೊತೆ ಡಾಲಿ ಟೆಂಪಲ್ ರನ್

    ಟ ಡಾಲಿ ಧನಂಜಯ (Daali dhananjay) ಮತ್ತು ಧನ್ಯತಾ (Dhanyatha) ದಂಪತಿ ಹಾಸನ ಜಿಲ್ಲೆಯ ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಪೂಜೆ ಸಲ್ಲಿಸುವ ಮೂಲಕ ನಿನ್ನೆ (ಮಾ.30) ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಇದನ್ನೂ ಓದಿ:L2: Empuraan ವಿವಾದ- ನನ್ನ ಮಗನನ್ನ ಬಲಿಪಶುವನ್ನಾಗಿ ಮಾಡಲಾಗಿದೆ: ಪೃಥ್ವಿರಾಜ್ ಸುಕುಮಾರನ್ ತಾಯಿ

    ಯುಗಾದಿ ಹಬ್ಬದ ಹಿನ್ನೆಲೆ ಪತ್ನಿಯೊಂದಿಗೆ ನಟ ಧನಂಜಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೇಬೀಡಿನಲ್ಲಿರುವ ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಬಳಿಕ ನೆಲದ ಮೇಲೆ ಕುಳಿತು ದಂಪತಿ ಪ್ರಸಾದ ಸ್ವೀಕರಿಸಿ ಕೆಲ ಕಾಲ ದೇವಸ್ಥಾನದಲ್ಲಿ ಸಮಯ ಕಳೆದಿದ್ದಾರೆ. ಈ ವೇಳೆ ದಂಪತಿಗೆ ದೇವಾಲಯದ ಆಡಳಿತ ಮಂಡಳಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇದನ್ನೂ ಓದಿ:ವಿಜಯ್‌ ಸೇತುಪತಿಗೆ ‘ಅಪ್ಪು’ ಚಿತ್ರದ ನಿರ್ದೇಶಕ ಆ್ಯಕ್ಷನ್ ಕಟ್- ಜೂನ್‌ನಿಂದ ಶೂಟಿಂಗ್‌ ಶುರು

    ಡಾ. ಧನ್ಯತಾ ಜೊತೆ ಈ ವರ್ಷ ಫೆ.16ರಂದು ಡಾಲಿ ಮೈಸೂರಿನಲ್ಲಿ ಮದುವೆಯಾದರು. ಮದುವೆ ಮತ್ತು ಆರತಕ್ಷತೆಗೆ ಸಿನಿಮಾ ರಂಗ ಮತ್ತು ರಾಜಕೀಯದ ಗಣ್ಯರು ಭಾಗಿಯಾಗಿ ಶುಭಹಾರೈಸಿದ್ದರು.

    ಇನ್ನೂ ಅಣ್ಣ ಫ್ರಮ್ ಮೆಕ್ಸಿಕೋ, ನಾಡಪ್ರಭು ಕೆಂಪೇಗೌಡ ಸೇರಿದಂತೆ ತೆಲುಗಿನಲ್ಲೂ ಡಾಲಿಗೆ ಹಲವು ಸಿನಿಮಾಗಳಿವೆ. ಹೊಸ ಪ್ರತಿಭೆಗಳಿಗೆ ತಮ್ಮದೇ ನಿರ್ಮಾಣ ಚಿತ್ರದಲ್ಲಿ ಅವಕಾಶವನ್ನು ಕೊಡುತ್ತಿದ್ದಾರೆ. ನಿರ್ಮಾಪಕನಾಗಿರೂ ಡಾಲಿ ತೊಡಗಿಸಿಕೊಂಡಿದ್ದಾರೆ.

  • ಡಾಲಿ ಧನಂಜಯ್ ಕಲ್ಯಾಣ ವೈಭೋಗ

    ಡಾಲಿ ಧನಂಜಯ್ ಕಲ್ಯಾಣ ವೈಭೋಗ

    – ಡಾಕ್ಟರ್ ಜೊತೆ ಹಸೆಮಣೆ ಏರಲು ರೆಡಿಯಾದ ನಟ

    ಸ್ಯಾಂಡಲ್‌ವುಡ್‌ನಲ್ಲಿ ಡಾಲಿ ಧನಂಜಯ್ (Daali Dhananjay) ಮದುವೆ ಸಂಭ್ರಮ ಮನೆ ಮಾಡಿದೆ. ಡಾಕ್ಟರ್ ಧನ್ಯತಾ ಜೊತೆ ಸಪ್ತಪದಿ ತುಳಿಯಲು ನಟ ಡಾಲಿ ಸಜ್ಜಾಗಿದ್ದಾರೆ.

    ಇಂದು ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ನಡೆಯುತ್ತಿರುವ ಅದ್ದೂರಿ ಮದುವೆ ಸಮಾರಂಭದಲ್ಲಿ ಧನ್ಯತಾ ಜೊತೆ ಧನಂಜಯ್ ಹಸೆಮಣೆ ಏರಲಿದ್ದಾರೆ. ಅರಸೀಕೆರೆಯ ಕಾಳೇನಹಳ್ಳಿ ಹುಡುಗ ಚಿತ್ರದುರ್ಗದ ಶಿವಪುರದ ಹುಡುಗಿಯ ಜೊತೆ ಕಲ್ಯಾಣವಾಗುತ್ತಿದ್ದಾರೆ.

    ಭಾನುವಾರ ಬೆಳಗ್ಗೆಯಿಂದಲೇ ಧಾರಾ ಮುಹೂರ್ತದ ದಿನದ ಶಾಸ್ತ್ರಗಳು ನಡೆಯುತ್ತಿವೆ. ಮೊದಲು ಮಂಟಪಕ್ಕೆ ದೇವತಾ ಪ್ರವೇಶ ನಂತರ ನವ ಪ್ರಧಾನ ಕಳಸ ಪೂಜೆ, ಕನ್ಯಾದಾನ, ಸಂಬಂಧ ಮಾಲೆ ಅರ್ಪಣೆ ಶಾಸ್ತ್ರ ನೆರವೇರಿದೆ.

    ವಧು-ವರರಿಗೆ ಧಾರಾ ಮುಹೂರ್ತ ನಡೆಯಲಿದೆ. ಶುಭ ಮೀನ ಲಗ್ನದಲ್ಲಿ ಮಾಂಗಲ್ಯ ಧಾರಣೆ 8:20 ರಿಂದ 10:00 ರ ವರೆಗೂ ನಡೆಯಲಿದೆ. ಮಾಂಗಲ್ಯ ಧಾರಣೆ ನಂತರ ಸಪ್ತಪದಿ ತುಳಿಯುವುದು, ಅರುಂಧತಿ ನಕ್ಷತ್ರ ದರ್ಶನ ನಡೆಯಲಿದೆ.

    ಬಾಸಿಂಗ ವಿಸರ್ಜನೆ ಶಾಸ್ತ್ರ ನೆರವೇರಲಿದೆ. ಇಂದು ಕೂಡಾ ಸ್ಯಾಂಡಲ್‌ವುಡ್ ತಾರೆಯರು, ರಾಜಕೀಯ ಗಣ್ಯರು, ಆಪ್ತರು ಆಗಮಿಸಲಿದ್ದಾರೆ. ನಟ ಯಶ್, ಶಿವಕುಮಾರ್, ಸುದೀಪ್ ಬರುವ ಸಾಧ್ಯತೆಯಿದೆ.

  • ಮೈಸೂರು: ನಟ ಧನಂಜಯ್‌, ಡಾಕ್ಟರ್‌ ಧನ್ಯತಾ ಜೋಡಿ ಮದುವೆ – ನೆರವೇರಿದ ವಿವಿಧ ಶಾಸ್ತ್ರಗಳು

    ಮೈಸೂರು: ನಟ ಧನಂಜಯ್‌, ಡಾಕ್ಟರ್‌ ಧನ್ಯತಾ ಜೋಡಿ ಮದುವೆ – ನೆರವೇರಿದ ವಿವಿಧ ಶಾಸ್ತ್ರಗಳು

    – ಆರತಕ್ಷತೆಗೆ 25,000 ಜನರಿಗೆ ಊಟದ ವ್ಯವಸ್ಥೆ; ಮೆನುವಿನಲ್ಲಿ ಏನೇನಿದೆ?

    ಮೈಸೂರು: ನಟ ಡಾಲಿ ಧನಂಜಯ್‌ (Daali Dhananjay) ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಡಾಕ್ಟರ್‌ ಧನ್ಯತಾ ಅವರ ಜೊತೆ ನಟ ಡಾಲಿ ಹಸೆಮಣೆ ಏರಲಿದ್ದಾರೆ. ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಇಂದು ಮದುವೆ ಶಾಸ್ತ್ರಗಳು ನಡೆಯುತ್ತಿದೆ. ಇಂದು ಸಂಜೆ ಆರತಕ್ಷತೆ, ನಾಳೆ ಧಾರಾ ಮುಹೂರ್ತ ಶುಭಕಾರ್ಯ ನಡೆಯಲಿದೆ. ಗಣ್ಯರು, ಸಿನಿ ತಾರೆಯರು, ಆಪ್ತರು ಡಾಲಿ ಮದುವೆಯಲ್ಲಿ ಪಾಲ್ಗೊಂಡು ಜೋಡಿಗೆ ಶುಭಹಾರೈಸುತ್ತಿದ್ದಾರೆ.

    ಇಂದು ಬೆಳಗ್ಗೆಯಿಂದ ವಸ್ತುಪ್ರದರ್ಶನ ಮೈದಾನದಲ್ಲಿ ಹಲವು ಶಾಸ್ತ್ರಗಳು ನಡೆದವು. ಗಂಗೆ ತರೋ ಶಾಸ್ತ್ರ, ತಂದೆ-ತಾಯಿಯರ ವಾಗ್ದಾನ ಶಾಸ್ತ್ರ, ವಧು-ವರರ ನಿರೀಕ್ಷಣೆ ಶಾಸ್ತ್ರ ನಡೆಯಿತು. ಇದನ್ನೂ ಓದಿ: Photo Gallery: ಮೈಸೂರಲ್ಲಿ ನಟ ಡಾಲಿ ಧನಂಜಯ್‌ ಮದುವೆ ಸಂಭ್ರಮ

    ಗೌರಿ ಪೂಜೆ, ಬಳೆ ಶಾಸ್ತ್ರ, ವಧು-ವರರ ಪ್ರಥಮ ಶಾಸ್ತ್ರ ಕೂಡ ನಡೆಯಿತು. ನಟ ಡಾಲಿ ಮತ್ತು ಡಾಕ್ಟರ್‌ ಧನ್ಯತಾ ಜೋಡಿ ಪರಸ್ಪರರು ಹೂವಿನ ಹಾರ ಬದಲಾಯಿಸಿಕೊಂಡರು. ಧನ್ಯತಾ ಅವರ ಕಾಲಿಗೆ ನಟ ಕಾಲುಂಗುರು ತೊಡಿಸಿದರು.

    ಮದುವೆ ಸಂಭ್ರಮದಲ್ಲಿದ್ದ ನಟನಿಗೆ ‘ಪಬ್ಲಿಕ್‌ ಟಿವಿ’ ಮುಖ್ಯಸ್ಥರಾದ ಹೆಚ್‌.ಆರ್‌.ರಂಗನಾಥ್‌ ಅವರು ವಿಶ್‌ ಮಾಡಿದರು. ಇಂದು ಸಂಜೆ ಆರತಕ್ಷತೆ ಸಮಾರಂಭ ನಡೆಯಲಿದೆ. ಭಾನುವಾರ ಧಾರಾ ಮುಹೂರ್ತ ನಡೆಯಲಿದೆ. ಇದನ್ನೂ ಓದಿ: ಹಳದಿ ಶಾಸ್ತ್ರ ಸಂಭ್ರಮದಲ್ಲಿ ಮಿಂದೆದ್ದ ಡಾಲಿ ಧನಂಜಯ್‌, ಧನ್ಯತಾ ಜೋಡಿ

    ಆರತಕ್ಷತೆಗೆ 25,000 ಜನರಿಗೆ ಊಟದ ವ್ಯವಸ್ಥೆ
    ಸಂಜೆ ಆರತಕ್ಷತೆಗೆ 25,000 ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಹೋಳಿಗೆ, ತುಪ್ಪ, ಹೆಸರುಬೆಳೆ ಪಾಯಸ, ಸ್ವೀಟ್ ಕಾರ್ನ್ ಕೊಸುಂಬರಿ, ಕಡ್ಲೆಕಾಳು ಉಸ್ಲಿ, ಮಸಾಲ್ ದೋಸೆ, ಕಾಯಿ ಚಟ್ನಿ, ರುಮಾಲಿ ರೊಟ್ಟಿ, ಪನ್ನೀರ್ ಗ್ರೇವಿ, ಬೆಂಡೆಕಾಯಿ ಪ್ರೈ, ಮೆಣಸಿನಕಾಯಿ ಬಜ್ಜಿ, ವೆಜ್ ಬಿರಿಯಾನಿ ರಾಯತ, ಅನ್ನ, ತುಪ್ಪ, ಆಂಧ್ರ ಪಪ್ಪು, ತಿಳಿಸಾರು, ಮೊಸರು ಮೆನುವಿನಲ್ಲಿದೆ.

    ಐದು ಕೌಂಟರ್ ಇದ್ದು, ಮಹಿಳೆಯರಿಗೆ ಪ್ರತ್ಯೇಕವಾದ ಕೌಂಟರ್ ಮಾಡಿದ್ದೇವೆ. ನಾಳೆ ಬೆಳಗ್ಗೆ ಟಿಫನ್ 5,000 ಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಮಧ್ಯಾಹ್ನ 15,000 ಜನಕ್ಕೆ ಊಟದ ವ್ಯವಸ್ಥೆ ಮಾಡ್ತಿದ್ದೇವೆ. 170 ಜನ ಬಾಣಸಿಗರಿಂದ ಅಡುಗೆ ತಯಾರಿ ನಡೆಯುತ್ತಿದೆ. ಡಾಲಿ ಹಾಗೂ ಅವರ ಮನೆಯವರಿಗೆ ಹೋಳಿಗೆ ಊಟ ಹಾಕಿಸ್ಬೇಕು ಅಂತ ಆಸೆ ಇತ್ತು. ಹಾಗಾಗಿ ಹೋಳಿಗೆ ಸಿದ್ಧ ಮಾಡ್ತಿದ್ದೀವಿ ಎಂದು ಎಂಎನ್‌ಜೆ ಕ್ಯಾಟರಿಂಗ್ ಮಾಲೀಕ ಜಗದೀಶ್ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೇಮಿಗಳ ದಿನಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಕೊಟ್ಟ ಗಿಫ್ಟ್