Tag: DAALI

  • ಸುತ್ತೂರು ಮಠದಲ್ಲಿ ನಂದಿ ಧ್ವಜ ಹೊತ್ತು ಕುಣಿದ ಡಾಲಿ

    ಸುತ್ತೂರು ಮಠದಲ್ಲಿ ನಂದಿ ಧ್ವಜ ಹೊತ್ತು ಕುಣಿದ ಡಾಲಿ

    ಸ್ಯಾಂಡಲ್‌ವುಡ್ ನಟ ಡಾಲಿ (Daali) ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಸುತ್ತೂರು ಮಠಕ್ಕೆ (Sri Suttur Mutt) ಭೇಟಿ ಕೊಟ್ಟಿದ್ದಾರೆ. ಈ ವೇಳೆ, ನಂದಿ ಕಂಬ ಹೊತ್ತು ಡಾಲಿ ಕುಣಿದಿದ್ದಾರೆ. ಇದನ್ನೂ ಓದಿ:ಮೈಸೂರಲ್ಲಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ಕಿಚ್ಚ ಸುದೀಪ್

    ಧನ್ಯತಾ (Dhanyatha) ಜೊತೆ ಡಾಲಿ ಮದುವೆಗೆ ಸಜ್ಜಾಗಿರುವ ಹಿನ್ನೆಲೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಶಿವರಾತ್ರಿ ಶಿವಯೋಗಿಗಳ 1065ನೇ ಜಯಂತಿ ಹಿನ್ನೆಲೆ ನಂದಿ ಧ್ವಜಕ್ಕೆ ಪೂಜೆ ಜರುಗಿದೆ. ಬಳಿಕ ನಂದಿ ಧ್ವಜ ಹಿಡಿದು ಡಾಲಿ ಕುಣಿದಿದ್ದಾರೆ. ಡಾಲಿ, ಧನ್ಯತಾ ಜೊತೆ ನಟ ನಾಗಭೂಷಣ್ ಕೂಡ ಸಾಥ್ ನೀಡಿದ್ದಾರೆ.

    ಇನ್ನೂ ಫೆ.16ರಂದು ಮೈಸೂರಿನಲ್ಲಿ ಡಾಲಿ ಮದುವೆ ಜರುಗಲಿದೆ. ಈ ಮದುವೆಗೆ ರಾಜಕೀಯ ಗಣ್ಯರು, ಸಿನಿಮಾ ಸ್ಟಾರ್‌ಗಳು ಭಾಗಿಯಾಗಲಿದ್ದಾರೆ.

  • ಮಾಜಿ ಪಿಎಂ ದೇವೇಗೌಡರನ್ನು ಭೇಟಿಯಾಗಿ ಮದುವೆಗೆ ಆಹ್ವಾನಿಸಿದ ಡಾಲಿ

    ಮಾಜಿ ಪಿಎಂ ದೇವೇಗೌಡರನ್ನು ಭೇಟಿಯಾಗಿ ಮದುವೆಗೆ ಆಹ್ವಾನಿಸಿದ ಡಾಲಿ

    ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ (Daali Dhananjay) ಅವರು ಫೆ.16ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಹಿನ್ನೆಲೆ ಮಾಜಿ ಪಿಎಂ ಹೆಚ್.ಡಿ. ದೇವೇಗೌಡರನ್ನು ಮದುವೆಯ (Wedding) ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ ನೀಡಿದ್ದಾರೆ.

    ಭಾವಿ ಪತ್ನಿ ಧನ್ಯತಾ ಜೊತೆ ಮಾಜಿ ಪಿಎಂ ಹೆಚ್.ಡಿ. ದೇವೇಗೌಡ (H. D. Deve Gowda) ನಿವಾಸಕ್ಕೆ ಭೇಟಿ ನೀಡಿ, ಮದುವೆ ಆಹ್ವಾನ ಪತ್ರಿಕೆ ನೀಡಿದ್ದಾರೆ. ಇದನ್ನೂ ಓದಿ:ಚಿತ್ರರಂಗದ ವರ್ತನೆಗೆ ಆಕ್ಷೇಪ- ತೆಲುಗು ನಟರ ಕಿವಿ ಹಿಂಡಿದ ಸಿಎಂ ರೇವಂತ್ ರೆಡ್ಡಿ

    ಅಂದಹಾಗೆ, ಇತ್ತೀಚೆಗೆ ಡಿಕೆ ಶಿವಕುಮಾರ್, ಡಿಕೆ ಸುರೇಶ್‌ ಮತ್ತು ಸಿಎಂ ಸಿದ್ದರಾಮಯ್ಯ ಅವರನ್ನು ಕೂಡ ಭಾವಿ ಪತ್ನಿಯ ಜೊತೆ ಭೇಟಿಯಾಗಿ ಮದುವೆಗೆ ಆಹ್ವಾನ ನೀಡಿದ್ದರು.

    ಇನ್ನೂ ಡಾಕ್ಟರ್ ಧನ್ಯತಾ ಜೊತೆ ಡಾಲಿ ಮೈಸೂರಿನಲ್ಲಿ ಮದುವೆಯಾಗುತ್ತಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಲಿದ್ದಾರೆ. ಈ ಮದುವೆಯಲ್ಲಿ ಸ್ಯಾಂಡಲ್‌ವುಡ್ ಕಲಾವಿದರು, ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ.

  • ಡಿಕೆ ಬ್ರದರ್ಸ್‌ಗೆ ಮದುವೆ ಆಮಂತ್ರಣ ನೀಡಿದ ಡಾಲಿ

    ಡಿಕೆ ಬ್ರದರ್ಸ್‌ಗೆ ಮದುವೆ ಆಮಂತ್ರಣ ನೀಡಿದ ಡಾಲಿ

    ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ (Daali Dhananjay) ಅವರು ಫೆ.16ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಹಿನ್ನೆಲೆ ಉಪಮುಖ್ಯಮಂತಿ ಡಿಕೆ ಶಿವಕುಮಾರ್ (DK Shivakumar) ಮತ್ತು ಡಿಕೆ ಸುರೇಶ್‌ಗೆ (DK Suresh) ಮದುವೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ:ವಿದೇಶದಲ್ಲೂ UI ಹವಾ: ಉಪ್ಪಿ ಸಿನಿಮಾಗೆ ಪ್ರೇಕ್ಷಕರು ಫಿದಾ

    ಡಿಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ದಂಪತಿಗೆ ಮದುವೆ ಆಹ್ವಾನ ನೀಡಿದ್ದಾರೆ ಡಾಲಿ. ಕೆಲ ಕಾಲ ನಟ ಸಮಯ ಕಳೆದಿದ್ದಾರೆ. ಇದೇ ವೇಳೆ, ಡಿಕೆ ಸುರೇಶ್‌ರನ್ನು ಭೇಟಿಯಾಗಿ ಮದುವೆಗೆ ಆಮಂತ್ರಿಸಿದ್ದಾರೆ.

    ಅಂದಹಾಗೆ, ಡಾಕ್ಟರ್ ಧನ್ಯತಾ ಜೊತೆ ಡಾಲಿ ಮೈಸೂರಿನಲ್ಲಿ ಮದುವೆಯಾಗುತ್ತಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಲಿದ್ದಾರೆ. ಈ ಮದುವೆಯಲ್ಲಿ ಸ್ಯಾಂಡಲ್‌ವುಡ್ ಕಲಾವಿದರು, ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ.

  • UI: ಮಣಿರತ್ನಂರನ್ನು ಉಪೇಂದ್ರ ಮೀರಿಸುತ್ತಾರೆ: ಶಿವಣ್ಣ

    UI: ಮಣಿರತ್ನಂರನ್ನು ಉಪೇಂದ್ರ ಮೀರಿಸುತ್ತಾರೆ: ಶಿವಣ್ಣ

    ಪೇಂದ್ರ (Upendra) ನಟಸಿ, ನಿರ್ದೇಶನ ಮಾಡಿರುವ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಶಿವಣ್ಣ ಭಾಗಿಯಾಗಿ ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೇಳೆ, ಖ್ಯಾತ ನಿರ್ದೇಶಕ ಮಣಿರತ್ನಂರನ್ನು ಕೂಡ ಉಪೇಂದ್ರ ಎಂದು ಶಿವಣ್ಣ (Shivarajkumar0 ಕೊಂಡಾಡಿದ್ದಾರೆ.

    ಉಪೇಂದ್ರ ಅವರು ಎಂದಿಗೂ ನನ್ನ ಫಸ್ಟ್ ಡಾರ್ಲಿಂಗ್. ಕೆಲವು ವರ್ಷಗಳ ‘ಶ್’ ನೋಡಲು ಪಲ್ಲವಿ ಥಿಯೇಟರ್‌ಗೆ ಹೋಗಿದ್ದೆ. ಆಮೇಲೆ ಓಂ ಶುರುವಾಯಿತು. ಅರ್ಧ ಶೂಟಿಂಗ್ ಆದಾಗ್ಲೇ ಹೇಳಿದ್ದೆ, ಮಣಿರತ್ನಂ ಅವರನ್ನು ಉಪೇಂದ್ರ ಮೀರಿಸುತ್ತಾರೆ ಎಂದಿದ್ದೆ. ಓಂ ಸಿನಿಮಾದಲ್ಲಿ ಉಪ್ಪಿ ರಿಯಾಲಿಟಿ ತಂದರು. ಅವರಿಗೆ ಬದುಕಿನ ಮಹತ್ವ ಗೊತ್ತು ಎಂದು ಕೊಂಡಾಡಿದ್ದಾರೆ ಶಿವಣ್ಣ.

    ಪತ್ನಿ ಗೀತಾ ಬಿಟ್ಟರೆ ಉಪ್ಪಿ ನೀವೇನೆ ಅಂತಿದ್ದೆ, ಉಪೇಂದ್ರ ಮೇಲೆ ಅಷ್ಟೊಂದು ಪ್ರೀತಿ. ಇವರೊಂದಿಗೆ ಪ್ರೀತ್ಸೆ, ಲವ್‌ಕುಶ್, ಈಗ 45 ಕೂಡ ಮಾಡ್ತಿದ್ದೀವಿ. ಉಪ್ಪಿ ಏನೇ ಮಾಡಿದ್ರೂ ನನಗೆ ಇಷ್ಟ ಆಗುತ್ತದೆ. ಅಪ್ಪು ಸಿನಿಮಾನೂ ನನಗೆ ಹಾಗೆ ಅನಿಸ್ತಿತ್ತು. ಹಾಗೆ ಉಪ್ಪಿ ಏನೇ ಮಾಡಿದ್ರೂ ಇಷ್ಟ ಆಗುತ್ತದೆ. ಇನ್ನೂ ಹಳೇ ಕಾಲದ ಸಿನಿಮಾ ಸ್ಟೈಲ್ ಮತ್ತೆ ಬರಬೇಕು. ಯಾಕೆ ಹಿಟ್ ಆಗಲ್ಲ ಖಂಡಿತ ಆಗುತ್ತದೆ ಎಂದರು. ಇದೇ ವೇಳೆ, ಮತ್ತೆ ಸೇರೋಣ ‘ಓಂ 2’ ಮಾಡೋಣ ಎಂದು ವೇದಿಕೆ ಮೇಲೆ ಉಪೇಂದ್ರಗೆ ನಟ ಹೇಳಿದರು. ಕೆಜಿಎಫ್, ಕಾಂತಾರ ಥರ ಗೋಲ್ ರೀಚ್ ಆಗಲಿ ಎಂದು ಚಿತ್ರತಂಡಕ್ಕೆ ಶಿವಣ್ಣ ವಿಶ್ ಮಾಡಿದರು, ಈ ವೇಳೆ, ವಿದೇಶದಲ್ಲಿ ಡಿ.24ಕ್ಕೆ ನನಗೆ ಸರ್ಜರಿ, 25ಕ್ಕೆ ಅಲ್ಲೇ ಸಿನಿಮಾ ನೋಡಿ ಕಾಲ್ ಮಾಡ್ತೀನಿ ಎಂದು ಹೇಳಿದರು.

    ಅಂದಹಾಗೆ, UI ಯುಗದಲ್ಲಿ UI ಮ್ಯಾಜಿಕ್, ಟ್ರೈಲರ್‌ನಲ್ಲಿ ಮಸ್ತ್ ಆಗಿ ಮೂಡಿ ಬಂದಿದೆ. ಪ್ರೇಕ್ಷಕರ ಬುದ್ದಿವಂತಿಕೆಗೆ UI ವಾರ್ನರ್ (ಟ್ರೈಲರ್) ಸವಾಲು ಹಾಕುವಂತಿದೆ. ಹಸಿವಿಗಾಗಿ ಜನರ ಹೊಡೆದಾಟ, ರಕ್ತಪಾತ ಇದು UI ಟ್ರೈಲರ್‌ನಲ್ಲಿ ರೋಚಕವಾಗಿ ತೋರಿಸಲಾಗಿದೆ. ಜಾತಿ, ಅಧಿಕಾರ ಭಾರತಕ್ಕೆ ಮಾರಕವಾಗುತ್ತ? ಎಂಬ ಜಿದ್ದಾ ಜಿದ್ದಿಯ ನಡುವೆ ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ಖಡಕ್ ಆಗಿ ಉಪೇಂದ್ರ ಡೈಲಾಗ್ ಹೊಡೆದಿದ್ದಾರೆ. ಗನ್ ಹಿಡಿದು ಜನಗಳ ಕಡೆ ಶೂಟ್ ಮಾಡುತ್ತ ಖಡಕ್ ಲುಕ್‌ನಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ UI ಸಿನಿಮಾ ಕಥೆಯ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡುವಂತೆ ಮಾಡಿದ್ದಾರೆ.

    ಇನ್ನೂ 2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದಾರೆ. ಡಿ.20ಕ್ಕೆ ರಿಲೀಸ್ ಆಗಲಿರುವ ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

  • ಕಾಮನ್‌ ಮ್ಯಾನ್‌ಗೆ ಎದ್ದೇಳು ಅಂತ ಚಿವುಟುವ ಸಿನಿಮಾವಿದು- UI ಬಗ್ಗೆ ಡಾಲಿ ಮಾತು

    ಕಾಮನ್‌ ಮ್ಯಾನ್‌ಗೆ ಎದ್ದೇಳು ಅಂತ ಚಿವುಟುವ ಸಿನಿಮಾವಿದು- UI ಬಗ್ಗೆ ಡಾಲಿ ಮಾತು

    ರಿಯಲ್‌ ಸ್ಟಾರ್‌ ಉಪೇಂದ್ರ (Upendra) ನಟನೆಯ ಪ್ರೀ ರಿಲೀಸ್‌ ಕಾರ್ಯಕ್ರಮಕ್ಕೆ ಇಂದು (ಡಿ.16) ಅದ್ಧೂರಿಯಾಗಿ ಚಾಲನೆ ನೀಡಲಾಗಿದ್ದು, ಶಿವಣ್ಣ, ಡಾಲಿ, ದುನಿಯಾ ವಿಜಯ್‌ ಸೇರಿದಂತೆ ಅನೇಕರು ಭಾಗಿಯಾಗಿ ಚಿತ್ರತಂಡಕ್ಕೆ ಸಾಥ್‌ ನೀಡಿದ್ದಾರೆ. ಈ ವೇಳೆ ಡಾಲಿ ಮಾತನಾಡಿ, ಉಪೇಂದ್ರ ಅವರ ಸಿನಿಮಾ ಕುರಿತಾದ ವಿಭಿನ್ನ ಯೋಚನೆಗಳ ಬಗ್ಗೆ ಕೊಂಡಾಡಿದ್ದಾರೆ. ಇದನ್ನೂ ಓದಿ:ಶಿವಣ್ಣ ನಟನೆಯ ಮತ್ತೊಂದು ಹೊಸ ಸಿನಿಮಾ ಘೋಷಣೆ- ಮಾಸ್‌ ಲೀಡರ್‌ಗೆ ಕೈ ಜೋಡಿಸಿದ ‌’ಗೂಗ್ಲಿ’ ಡೈರೆಕ್ಟರ್

    ಡಾಲಿ ಮಾತನಾಡಿ, ಮುಹೂರ್ತಕ್ಕೆ ಬಂದಾಗ ತುಂಬಾ ಕುತೂಹಲದಿಂದ ಯೋಚನೆ ಮಾಡಿದೆ, ಟ್ರೋಲಾಗುತ್ತೆ ಹಾಡು ನೋಡಿದ್ಮೇಲೆ ಟ್ರೆಂಡ್ ಬಗ್ಗೆ ಸಿನಿಮಾ ಮಾಡಿದ್ದಾರೆ ಅನ್ಕೊಂಡೆ, ವಾರ್ನರ್ ನೋಡ್ದಾಗ ಇದು ಎಲ್ಲೋ ಫ್ಯೂಚರ್ ಹೊರಟೋದ್ರು ಅಂತ ತಲೆ ಕೆಡಿಸಿಕೊಂಡೆ ಎಂದರು ಡಾಲಿ. ಯುಐ ಚಿತ್ರದ ಮೂಲಕ ಉಪೇಂದ್ರ ಸರ್ ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ ಅಂತಿದ್ದಾರೆ. ಯುಐ ನೋಡಲು ಕಾಯುತ್ತಿದ್ದೇವೆ. ಕಾಮನ್ ಮ್ಯಾನ್‌ಗೆ ಎದ್ದೇಳು ಅಂತ ಚಿವುಟುವ ಸಿನಿಮಾವಿದು. ಆ ಸಿನಿಮಾಗಳಲ್ಲಿ ಫಿಲಾಸಫಿ ಅವರು ತುಂಬಾ ಚೆನ್ನಾಗಿ ಕಥೆ ಹೇಳುತ್ತಾರೆ ಎಂದು ಡಾಲಿ ಹಾಡಿ ಹೊಗಳಿದರು.

    ಎಲ್ಲರಿಗೂ ಒಳ್ಳೆಯದಾಗಲಿ, ಹೀರೋಯಿನ್ ರೀಷ್ಮಾರನ್ನು ನಮ್ಮ ಮುಂದಿನ ಸಿನಿಮಾಗೆ ಕಾಸ್ಟ್ ಮಾಡ್ಕೊಂಡಿದ್ದೀವಿ ಪ್ಯಾನ್ ಇಂಡಿಯಾ ದಾಟಿ ಹೋದ್ಮೇಲೆ ಸಿಗಲ್ಲ ಅಂತ ನಟಿಯ ಬಗ್ಗೆಯೂ ಮೆಚ್ಚುಗೆ ಸೂಚಿಸಿದರು.

    ಅಂದಹಾಗೆ, UI ಯುಗದಲ್ಲಿ UI ಮ್ಯಾಜಿಕ್, ಟ್ರೈಲರ್‌ನಲ್ಲಿ ಮಸ್ತ್ ಆಗಿ ಮೂಡಿ ಬಂದಿದೆ. ಪ್ರೇಕ್ಷಕರ ಬುದ್ದಿವಂತಿಕೆಗೆ UI ವಾರ್ನರ್ (ಟ್ರೈಲರ್) ಸವಾಲು ಹಾಕುವಂತಿದೆ. ಹಸಿವಿಗಾಗಿ ಜನರ ಹೊಡೆದಾಟ, ರಕ್ತಪಾತ ಇದು UI ಟ್ರೈಲರ್‌ನಲ್ಲಿ ರೋಚಕವಾಗಿ ತೋರಿಸಲಾಗಿದೆ. ಜಾತಿ, ಅಧಿಕಾರ ಭಾರತಕ್ಕೆ ಮಾರಕವಾಗುತ್ತ? ಎಂಬ ಜಿದ್ದಾ ಜಿದ್ದಿಯ ನಡುವೆ ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ಖಡಕ್ ಆಗಿ ಉಪೇಂದ್ರ ಡೈಲಾಗ್ ಹೊಡೆದಿದ್ದಾರೆ. ಗನ್ ಹಿಡಿದು ಜನಗಳ ಕಡೆ ಶೂಟ್ ಮಾಡುತ್ತ ಖಡಕ್ ಲುಕ್‌ನಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ UI ಸಿನಿಮಾ ಕಥೆಯ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡುವಂತೆ ಮಾಡಿದ್ದಾರೆ.

    ಇನ್ನೂ 2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದಾರೆ. ಡಿ.20ಕ್ಕೆ ರಿಲೀಸ್ ಆಗಲಿರುವ ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

  • Pushpa 2: ಅಲ್ಲು ಅರ್ಜುನ್ ಸಿನಿಮಾದಲ್ಲಿ ಕನ್ನಡ ಕಲಾವಿದರ ದಂಡು

    Pushpa 2: ಅಲ್ಲು ಅರ್ಜುನ್ ಸಿನಿಮಾದಲ್ಲಿ ಕನ್ನಡ ಕಲಾವಿದರ ದಂಡು

    ಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ (Pushpa 2) ಸಿನಿಮಾ ಡಿ.5ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಿದೆ. ಬಿಡುಗಡೆಯ ಬಳಿಕ ಪುಷ್ಪರಾಜ್ ಫೀವರ್ ಶುರುವಾಗಿದೆ. ಕೆಲ ಮಂದಿ ಸಿನಿಮಾವನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿದರೆ, ಇನ್ನೂ ಕೆಲವರು ಸಿನಿಮಾ ಒಂದು ರೇಂಜಿಗಿದೆ ಎಂದು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇದರೆಲ್ಲದರ ನಡುವೆ ‘ಪುಷ್ಪ 2’ ಸಿನಿಮಾದಲ್ಲಿ ಕನ್ನಡ ಕಲಾವಿದರ ದಂಡು ಹೈಲೆಟ್ ಆಗಿದೆ.

    ಕನ್ನಡದ ‘ಕಿರಿಕ್ ಪಾರ್ಟಿ’ (Kirik Party) ನಟಿ ರಶ್ಮಿಕಾ ಮಂದಣ್ಣ (Rashmika Mandanna) ನ್ಯಾಷನಲ್ ಕ್ರಶ್ ಆಗಿ ಪರಭಾಷೆಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ಶ್ರೀವಲ್ಲಿ ಪಾತ್ರಕ್ಕೆ ಕೊಡಗಿನ ಬೆಡಗಿ ಜೀವ ತುಂಬಿದ್ದಾರೆ. ರಶ್ಮಿಕಾ ನಟನೆಯ ಜೊತೆ ಫೀಲಿಂಗ್ಸ್ ಡ್ಯಾನ್ಸ್‌ಗೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ಕನ್ನಡಿಗ ತಾರಕ್ ಪೊನ್ನಪ್ಪ (Tarak Ponnappa) ಅವರು ಅಲ್ಲು ಅರ್ಜುನ್ ಮುಂದೆ ತೊಡೆ ತಟ್ಟಿದ್ದಾರೆ. ಅಲ್ಲು ಅರ್ಜುನ್ ಮತ್ತು ತಾರಕ್ ನಡುವಿನ ಆ್ಯಕ್ಷನ್ ಸೀಕ್ವೆನ್ಸ್ ಸಿನಿಮಾದಲ್ಲಿ ರೋಚಕವಾಗಿದೆ. ತಾರಕ್ ನಟನೆ ಮತ್ತು ಅವರ ಲುಕ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಪರಭಾಷೆಗಳಲ್ಲಿ ಅವರಿಗೆ ಬೇಡಿಕೆ ಹೆಚ್ಚಾಗಿದೆ.

    ಇನ್ನೂ ಕನ್ನಡದ ‘ಕಿಸ್’ ಬೆಡಗಿ ಶ್ರೀಲೀಲಾ (Sreeleela) ಅವರು ‘ಕಿಸ್ಸಿಕ್’ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಮಾದಕ ಲುಕ್ ಮತ್ತು ಡ್ಯಾನ್ಸ್‌ನಿಂದ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಶ್ರೀಲೀಲಾ ಕೂಡ ತೆಲುಗಿನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.

    ಡಾಲಿ ಧನಂಜಯ (Daali Dhananjay) ಅವರು ಜಾಲಿ ರೆಡ್ಡಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರಕ್ಕೂ ಸುಕುಮಾರ್ ಪ್ರಾಮುಖ್ಯತೆ ನೀಡಿದ್ದಾರೆ. ಎರಡನೇ ಭಾಗದಲ್ಲೂ ಡಾಲಿ ಎಂಟ್ರಿ ಕೊಟ್ಟಿದ್ದಾರೆ. ಆದರೆ ಪಾರ್ಟ್ 3ನಲ್ಲಿ ಅವರ ಪಾತ್ರ ಹೇಗೆಲ್ಲಾ ತಿರುವು ಪಡೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.

    ನಂದ ಗೋಪಾಲ್ (Nanda Gopal) ಕೂಡ ‘ಪುಷ್ಪ 2’ನಲ್ಲಿ ನಟಿಸಿದ್ದಾರೆ. ಅವರ ಪಾತ್ರ ಚಿಕ್ಕದಾಗಿದೆ. ತೆರೆಯ ಮೇಲೆ ಹೆಚ್ಚು ಕಾಣಿಸಿಕೊಳ್ಳದೇ ಇದ್ದರೂ ಕನ್ನಡದ ನಟ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ.

  • ರಾಖಿ ಹಬ್ಬ ಆಚರಿಸಿದ ಸ್ಯಾಂಡಲ್‌ವುಡ್‌ ಸ್ಟಾರ್ಸ್

    ರಾಖಿ ಹಬ್ಬ ಆಚರಿಸಿದ ಸ್ಯಾಂಡಲ್‌ವುಡ್‌ ಸ್ಟಾರ್ಸ್

    ಹೋದರ ಮತ್ತು ಸಹೋದರಿಯರ ಬಂಧವನ್ನು ಸಾರುವ ರಕ್ಷಾ ಬಂಧನವನ್ನು (Raksha Bandhan 2024) ಸಿನಿಮಾ ತಾರೆಯರು ಕೂಡ ಆಚರಿಸುವ ಮೂಲಕ ಸಂಭ್ರಮಿಸಿದ್ದಾರೆ. ಯಶ್, ನಟಿ ರಾಗಿಣಿ, ಡಾಲಿ ಧನಂಜಯ ಸೇರಿದಂತೆ ಅನೇಕರು ಸೆಲೆಬ್ರೆಟ್ ಮಾಡಿದ್ದಾರೆ.

    ಪ್ರತಿ ವರ್ಷದಂತೆ ಈ ವರ್ಷವು ಕೂಡ ತಪ್ಪದೇ ರಾಖಿ ಹಬ್ಬವನ್ನು ಆಚರಿಸಿದ್ದಾರೆ. ಸಹೋದರಿ ನಂದಿನಿ ಅವರು ಅಣ್ಣ ಯಶ್‌ಗೆ (Yash) ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಅದಷ್ಟೇ ಅಲ್ಲ, ಯಶ್ ಮಕ್ಕಳು ಕೂಡ ರಕ್ಷಾ ಬಂಧನ ಸೆಲೆಬ್ರೆಟ್ ಮಾಡಿದ್ದಾರೆ. ಈ ಕುರಿತ ಸುಂದರ ಫೋಟೋಗಳನ್ನು ನಟಿ ರಾಧಿಕಾ ಹಂಚಿಕೊಂಡಿದ್ದಾರೆ.

    ಸಂಗೀತಾ ಶೃಂಗೇರಿ (Sangeetha Sringeri) ಅವರು ಅಣ್ಣ ಸಂತೋಷ್ ಮತ್ತು ಅತ್ತಿಗೆ ಇಬ್ಬರಿಗೂ ರಾಖಿ ಕಟ್ಟಿ ಆರತಿ ಬೆಳಗಿದ್ದಾರೆ. ಇದನ್ನೂ ಓದಿ:ನ್ಯಾಯಮೂರ್ತಿ ಹೇಮಾ ಸಮಿತಿ ವರದಿ: ಕೇರಳ ಚಿತ್ರೋದ್ಯಮದಲ್ಲಿ ಅಲ್ಲೋಲ ಕಲ್ಲೋಲ

    ಮುಂಬೈಗೆ ತೆರಳಿ ಸಹೋದರ ರುದ್ರಾಕ್ಷಗೆ ರಾಖಿ ಕಟ್ಟಿ ರಾಗಿಣಿ (Ragini Dwivedi) ಸಂಭ್ರಮಿಸಿದ್ದಾರೆ. ನಿನ್ನ ಮೇಲಿನ ನನ್ನ ಪ್ರೀತಿಯನ್ನು, ನಿನ್ನ ಬಗೆಗಿನ ನನ್ನ ಕಾಳಜಿಯನ್ನು, ನಿನಗಾಗಿ ನನ್ನ ರಕ್ಷಣೆಯನ್ನು, ನಿನ್ನನ್ನು ನನ್ನ ಜೀವನದಲ್ಲಿ ನನ್ನ ಸಹೋದರನಾಗಿ ಪಡೆದಿದ್ದಕ್ಕಾಗಿ ನನ್ನ ಶಾಶ್ವತ ಕೃತಜ್ಞತೆಯನ್ನು ಪದಗಳು ವ್ಯಕ್ತಪಡಿಸಲು ಸಾಧ್ಯವಿಲ್ಲ. ನೀವು ವಯಸ್ಸಿನಲ್ಲಿ ನನಗಿಂತ ಚಿಕ್ಕವರಾಗಿರಬಹುದು. ಆದರೆ ಜೀವನದ ಪ್ರತಿ ಹಂತದಲ್ಲೂ ನೀವು ನನ್ನ ಶಕ್ತಿಯಾಗಿದ್ದೀರಿ, ನನಗೆ ಮಾರ್ಗದರ್ಶನ ನೀಡುವ ಶಕ್ತಿಯ ದಿಂಬು. ನಾನು ನಿನ್ನನ್ನು ಜಗತ್ತಿಗಿಂತ ಹೆಚ್ಚು ಪ್ರೀತಿಸುತ್ತೇನೆ ಎಂದು ಸಹೋದರನ ಜೊತೆಗಿನ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Karthik Mahesh (@karthi_mahesh)

    ಸದಾ ನಗುತಿರು, ನಿನ್ನ ನಗುವೇ ನನಗೆ ಶ್ರೀರಕ್ಷೆ. ರಕ್ಷಾ ಬಂಧನದ ಶುಭಾಶಯಗಳು ಪುಟ್ಟಮ್ಮ ಎಂದು ಕಾರ್ತಿಕ್ ಮಹೇಶ್ (Karthik Mahesh) ತಂಗಿ ಜೊತೆಗಿನ ಫೋಟೋ ಶೇರ್ ಮಾಡಿ ಶುಭಕೋರಿದ್ದಾರೆ.

    ಇನ್ನೂ ‘ಕೋಟಿ’ ಸಿನಿಮಾದಲ್ಲಿ ಡಾಲಿ ಧನಂಜಯಗೆ (Daali Dhananjay) ತಂಗಿಯಾಗಿದ್ದ ನಟಿಸಿದ್ದ ಪೂಜಾ ಪ್ರಕಾಶ್‌ ಅವರು ಇದೀಗ ಡಾಲಿಗೆ ರಾಖಿ ಕಟ್ಟಿ ಹಬ್ಬದ ಆಚರಿಸಿದ್ದಾರೆ. ಅಕ್ಕ ತಂಗಿಯ ರಕ್ಷೆ ಎಂದು ಡಾಲಿ ಅಡಿಬರಹ ನೀಡಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

  • ಡಾಲಿ ಧನಂಜಯ ವೃತ್ತಿ ಜೀವನದ ಬಹುಮುಖ್ಯ ಸಿನಿಮಾ ‘ಕೋಟಿ’

    ಡಾಲಿ ಧನಂಜಯ ವೃತ್ತಿ ಜೀವನದ ಬಹುಮುಖ್ಯ ಸಿನಿಮಾ ‘ಕೋಟಿ’

    ಡಾಲಿ, ನಟರಾಕ್ಷಸ ಎಂದೇ ಕನ್ನಡ ಜನತೆಯ ಪ್ರೀತಿಗೆ ಪಾತ್ರರಾಗಿರುವ ಧನಂಜಯ (Dhananjay) ಅವರ ಹೊಚ್ಚ ಹೊಸ ಸಿನಿಮಾ ‘ಕೋಟಿ’ (Kotee Film) ಬಿಡುಗಡೆಗೆ ಸಿದ್ಧವಾಗಿದೆ. ಹಲವಾರು ಕಾರಣಗಳಿಗೆ ಈ ಸಿನಿಮಾ ಧನಂಜಯ ಅವರ ವೃತ್ತಿ ಜೀವನದಲ್ಲೇ ಬಹುಮುಖ್ಯ ಸಿನಿಮಾವಾಗಿದೆ.

    ಕಳೆದ ವರ್ಷ ಮೇ ತಿಂಗಳಿನಲ್ಲಿ ಸೆಟ್ಟೇರಿದ್ದ ‘ಕೋಟಿ’ ಈಗಾಗಲೇ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲೇ ಎಲ್ಲ ಕೆಲಸಗಳ ಮುಗಿಸಿ ಜೂನ್ 14ಕ್ಕೆ ಬಿಡುಗಡೆಗೆ ಸಿದ್ಧವಾಗಿದೆ. ಧನಂಜಯ್ ಪೂರ್ಣ ಪ್ರಮಾಣದ ಹೀರೋ ಆದ್ಮೇಲೆ ಮಾಡಿದ ದೊಡ್ಡ ಬಜೆಟ್‌ನ ಸಿನಿಮಾ ಇದಾಗಿದೆ. ಜಿಯೋ ಸ್ಟುಡಿಯೋಸ್ ನಂತಹ ದೊಡ್ಡ ಸಂಸ್ಥೆಯ ಮೊದಲ ಕನ್ನಡ ಸಿನಿಮಾ ಇದಾಗಿದ್ದು ಅವರ ನಾಯಕನಟನ ಆಯ್ಕೆ ಧನಂಜಯ ಆಗಿರುವುದು ಅಭಿಮಾನಿಗಳಿಗೆ ಸಂತಸ ನೀಡಿದೆ. ಜೊತೆಗೆ ಈ ಸಿನಿಮಾವನ್ನು ಬರೋಬ್ಬರಿ 85 ದಿನಗಳ ಕಾಲ ಬೆಂಗಳೂರು, ಮೈಸೂರು, ಚಿಕ್ಕಮಗಳೂರನಲ್ಲಿ ಚಿತ್ರೀಕರಿಸಲಾಗಿದೆ. ಧನಂಜಯ ಅವರ ಇಲ್ಲಿವರೆಗಿನ ಸಿನಿಮಾಗಳಲ್ಲಿ ಇದು ಅತಿ ಹೆಚ್ಚು ದಿನಗಳ ಕಾಲ ಚಿತ್ರೀಕರಿಸಿದ ಚಿತ್ರವಾಗಿದೆ.

    ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೆ ಕಂಗೆಟ್ಟಿರುವ ಕನ್ನಡ ಇಂಡಸ್ಟ್ರಿಗೆ ‘ಕೋಟಿ’ಯ ಗೆಲುವು ತೀರಾ ಅವಶ್ಯಕವಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮುಖಾಂತರ ಕೋಟಿ ಸದ್ದು ಮಾಡುತ್ತಿದ್ದು ಅಪ್ಪಟ ಕನ್ನಡ ಮಣ್ಣಿನ ಕಥೆಯೊಂದು ಎಲ್ಲೆಡೆ ಮಾತಾಗುತ್ತಿದೆ.‌ ಇದನ್ನೂ ಓದಿ:ಡಿವೋರ್ಸ್ ಹಿಂದೆ 3ನೇ ವ್ಯಕ್ತಿ ಕೈವಾಡವಿದ್ಯಾ? ಮೌನ ಮುರಿದ ನಿವೇದಿತಾ

    ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ದುಡಿಯುವ ಬಯಕೆಯ ಡ್ರೈವರ್ ‘ಕೋಟಿ’ಯ ಪಾತ್ರದಲ್ಲಿ ಧನಂಜಯ ಕಾಣಿಸಿಕೊಂಡಿದ್ದಾರೆ. ಮಿಡಲ್ ಕ್ಲಾಸ್ ಪ್ಯಾಮಿಲಿ ಮ್ಯಾನ್ ಅವತಾರ ಎಲ್ಲರಿಗೂ ಕನೆಕ್ಟ್ ಆಗುವ ಭರವಸೆಯನ್ನು ಟೀಸರ್ ಮತ್ತು ಹಾಡುಗಳು ನೀಡಿವೆ.

    ದ್ವಿತೀಯಾರ್ಧದಲ್ಲಿ ಹಲವು ಸ್ಟಾರ್ ಸಿನಿಮಾಗಳು ಬರುವ ಸೂಚನೆ ನೀಡಿದ್ದು ‘ಕೋಟಿ’ ಮೊದಲ ಗೆಲುವಾಗುವ ಭರವಸೆ ನೀಡಿದೆ. ಜೊತೆಗೆ ‘ಕೋಟಿ’ಯ ಬಿಡುಗಡೆಯ ನಂತರ ಎರಡುವಾರಗಳ ಕಾಲ ಬಿಡುಗಡೆಗೆ ಸಿದ್ಧವಿರುವ ಯಾವುದೇ ದೊಡ್ಡ ಚಿತ್ರಗಳಿಲ್ಲ. ಇದು ‘ಕೋಟಿ’ಗೆ ವರದಾನವಾಗಲಿದೆ. `ಬಡವ ರಾಸ್ಕಲ್’ ನಂತರ ಧನಂಜಯ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಮತ್ತೊಂದು ಸಾಮಾನ್ಯ ಮಿಡಲ್ ಕ್ಲಾಸ್ ವ್ಯಕ್ತಿಯ ಪಾತ್ರದಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಹಾಗೆ ಸುಲಭಕ್ಕೆ ಯಾವುದೇ ಸಿನಿಮಾಗಳ ಪ್ರಮೋಷನ್‌ಗಳಿಗೆ ಹೋಗದ ಕಿಚ್ಚ ಸುದೀಪ್ (Sudeep) ಇತ್ತಿಚೆಗೆ ನಡೆದ ‘ಕೋಟಿ’ ಪ್ರೀ-ರಿಲೀಸ್ ಟಿವಿ ಕಾರ್ಯಕ್ರಮಕ್ಕೆ ತೆರಳಿ ಸುಮಾರು ಒಂದು ಗಂಟೆಗಳಿಗೂ ಹೆಚ್ಚಿನ ಕಾಲ ವೇದಿಕೆಯ ಮೇಲಿದ್ದು ಡಾಲಿಗೆ ಶುಭ ಹಾರೈಸಿದ್ದಾರೆ.


    ‘ಕೋಟಿ’ ಸಿನಿಮಾ ಧನಂಜಯ ಅವರಿಗೆ ದೊಡ್ಡ ಯಶಸ್ಸು ತರಲಿ ಮತ್ತು ಚಂದನವನದ ಈ ವರ್ಷದ ಮೊದಲ ದೊಡ್ಡ ಹಿಟ್ ಆಗಲಿ ಎಂಬುದು ಅಭಿಮಾನಿಗಳ ಬಯಕೆ. `ಕೋಟಿ’ 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಜೂನ್ 14ಕ್ಕೆ ಬಿಡುಗಡೆಯಾಗಲಿದೆ.

  • ಐತಿಹಾಸಿಕ ‘ಹಲಗಲಿ’ ಸಿನಿಮಾದಲ್ಲಿ ಡಾಲಿ

    ಐತಿಹಾಸಿಕ ‘ಹಲಗಲಿ’ ಸಿನಿಮಾದಲ್ಲಿ ಡಾಲಿ

    ನ್ನಡ ಚಿತ್ರರಂಗದ ಬಿಗ್ ಬಜೆಟ್ ‘ಹಲಗಲಿ’ (Halagali) ಸಿನಿಮಾ ಬಗ್ಗೆ ಇದೀಗ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಡಾರ್ಲಿಂಗ್ ಕೃಷ್ಣ ಈ ಚಿತ್ರದಿಂದ ಹೊರನಡೆದಿದ್ದರು. ಈ ಬೆನ್ನಲ್ಲೇ ಚಿತ್ರದ ಲೀಡ್ ಪಾತ್ರಕ್ಕೆ ನಟರಾಕ್ಷಸ ಡಾಲಿ ಎಂಟ್ರಿ ಕೊಡುವ ಬಗ್ಗೆ ಸುದ್ದಿ ಹಬ್ಬಿದೆ.

    ನಟ ಕಮ್ ನಿರ್ಮಾಪಕ ಡಾಲಿ ಧನಂಜಯ್ ಕನ್ನಡದ ಜೊತೆ ಪರಭಾಷಾ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಮೂಲಕ ಹೊಸ ಪ್ರತಿಭೆಗಳಿಗೆ ಡಾಲಿ ಅವಕಾಶ ನೀಡುತ್ತಿದ್ದಾರೆ. ಇದನ್ನೂ ಓದಿ:ಚಂದ್ರಕಾಂತ್, ಪವಿತ್ರಾ ಮದುವೆ ರೂಮರ್ಸ್ ಬಗ್ಗೆ ಸ್ಪಷ್ಟನೆ ನೀಡಿದ ಪುತ್ರ

    ‘ಹಲಗಲಿ’ ಸಿನಿಮಾ ಅತೀ ದೊಡ್ಡ ಪ್ರಾಜೆಕ್ಟ್ ಆಗಿದ್ದು, ಡಾಲಿ ಈ ಸಿನಿಮಾಗೆ ಎಂಟ್ರಿ ಕೊಡುವ ಬಗ್ಗೆ ಸುದ್ದಿ ಹಬ್ಬಿದೆ. ಸಿನಿಮಾ ಕಥೆ ಮತ್ತು ಪಾತ್ರದ ಬಗ್ಗೆ ಡಾಲಿ ಮಾತನಾಡಿ ಚಿತ್ರತಂಡ ಮಾತುಕತೆ ನಡೆಸಿದೆ. ಶೀಘ್ರದಲ್ಲೇ ಶೂಟಿಂಗ್‌ಗೆ ನಡೆಯಲಿದೆ ಎನ್ನಲಾಗಿದೆ. ಅಧಿಕೃತ ಮಾಹಿತಿ ಚಿತ್ರತಂಡದಿಂದ ಹೊರಬರಬೇಕಿದೆ.

    ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗೆರಿಲ್ಲಾ ವಾರ್ ಮಾಡುವ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ಹಲಗಲಿ ಬೇಡರ ಕಥೆಯನ್ನು ಸಿನಿಮಾ ನಿರ್ದೇಶಕ ಸುಕೇಶ್ ಡಿ.ಕೆ. ಮಾಡುತ್ತಿದ್ದಾರೆ. ಇದೊಂದು ಐತಿಹಾಸಿಕ ಸಿನಿಮಾವಾಗಿದ್ದರಿಂದ ಮತ್ತು ಆ ಕಾಲ ಘಟ್ಟವನ್ನು ಕಟ್ಟಿ ಕೊಡಬೇಕಾಗಿದ್ದರಿಂದ ಬರೋಬ್ಬರಿ 80 ಕೋಟಿ ರೂಪಾಯಿಯನ್ನು ಈ ಸಿನಿಮಾಗಾಗಿ ಖರ್ಚು ಮಾಡುತ್ತಿದ್ದಾರೆ ನಿರ್ಮಾಪಕ ಕಲ್ಯಾಣ್ ಚಕ್ರವರ್ತಿ ಧೂಳಿಪಳ್ಯ. ಇದೊಂದು ಅಪರೂಪದ ಕಥನವಾಗಿದ್ದರಿಂದ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

  • ‘ಉತ್ತರಕಾಂಡ’ ಟೀಮ್‌ಗೆ ಕೈಕೊಟ್ಟ ಮೋಹಕತಾರೆ ರಮ್ಯಾ

    ‘ಉತ್ತರಕಾಂಡ’ ಟೀಮ್‌ಗೆ ಕೈಕೊಟ್ಟ ಮೋಹಕತಾರೆ ರಮ್ಯಾ

    ಸ್ಯಾಂಡಲ್‌ವುಡ್ ನಟಿ ರಮ್ಯಾ (Ramya) ಮತ್ತೆ ಬೆಳ್ಳಿಪರದೆಗೆ ಕಮ್‌ಬ್ಯಾಕ್ ಆಗುತ್ತಿದ್ದಾರೆ ಎಂಬ ಸುದ್ದಿ ಕೇಳಿಯೇ ಫ್ಯಾನ್ಸ್ ಖುಷಿಪಟ್ಟಿದ್ದರು. ಇದೀಗ ಅಭಿಮಾನಿಗಳಿಗೆ ರಮ್ಯಾ ನಿರಾಸೆ ಮೂಡಿಸಿದ್ದಾರೆ. ಬಹುನಿರೀಕ್ಷಿತ ‘ಉತ್ತರಕಾಂಡ’ ಚಿತ್ರಕ್ಕೆ ನಟಿ ಕೈಕೊಟ್ಟಿದ್ದಾರೆ.

    ಡೇಟ್ಸ್ ಹೊಂದಾಣಿಕೆ ಆಗದ ಕಾರಣ, ನಾನು ಉತ್ತರಕಾಂಡ (Uttarakanda Film) ಸಿನಿಮಾದಲ್ಲಿ ನಟಿಸುತ್ತಿಲ್ಲ. ನನ್ನ ಸಿನಿಮಾ ಮತ್ತು ರಾಜಕೀಯ ಕೆಲಸಗಳನ್ನು ಸದ್ಯ ಕಾಯ್ದಿರಿಸಿದ್ದೇನೆ. ಆದರೆ ಚಿತ್ರತಂಡಕ್ಕೆ ಶುಭವಾಗಲಿ ಎಂದು ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ನೀಲಿತಾರೆಗೆ ಹೋಲಿಸಿ ಟ್ರೋಲ್ : ಪ್ರಧಾನಿ ಮೊರೆ ಹೋದ ಗಾಯಕಿ ನೇಹಾ

    ಡಾಲಿ ಧನಂಜಯ್‌ಗೆ ನಾಯಕಿಯಾಗಿ ರಮ್ಯಾ ಕಾಣಿಸಿಕೊಳ್ಳುವುದಾಗಿ ಕಳೆದ ವರ್ಷ ಘೋಷಣೆಯಾಗಿತ್ತು. ಅದ್ಧೂರಿಯಾಗಿ ಮುಹೂರ್ತ ಕೂಡ ನೆರವೇರಿತ್ತು. ಚಿತ್ರದಲ್ಲಿ ಶಿವಣ್ಣ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈಗ ರಮ್ಯಾ ಚಿತ್ರದಿಂದ ಹೊರನಡೆದಿದ್ದಾರೆ.

    ಈಗಾಗಲೇ ಚಿತ್ರೀಕರಣ ಶುರುವಾಗಿದೆ. ಚಿತ್ರಕ್ಕೆ ‘ರತ್ನನ್‌ ಪ್ರಪಂಚ’ ಖ್ಯಾತಿಯ ರೋಹಿತ್‌ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ಕೆಆರ್‌ಜಿ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.