Tag: D.Y.Chandrachud

  • ಸಲಿಂಗ ಸಂಬಂಧ ಕಾನೂನುಬದ್ಧಗೊಳಿಸಿದರೆ ಅಸ್ವಸ್ಥತೆ ಹೆಚ್ಚಳ – RSS ಮಹಿಳಾ ಅಂಗ ಸಂಸ್ಥೆ ಕಳವಳ

    ಸಲಿಂಗ ಸಂಬಂಧ ಕಾನೂನುಬದ್ಧಗೊಳಿಸಿದರೆ ಅಸ್ವಸ್ಥತೆ ಹೆಚ್ಚಳ – RSS ಮಹಿಳಾ ಅಂಗ ಸಂಸ್ಥೆ ಕಳವಳ

    ನವದೆಹಲಿ: ಅನೇಕ ವೈದ್ಯರು ಹಾಗೂ ವೈದ್ಯಕೀಯ ವೃತ್ತಿಪರರು ಸಲಿಂಗ ಸಂಬಂಧ (Homosexuality) ಒಂದು ಅಸ್ವಸ್ಥತೆ ಎಂಬ ಅಭಿಪ್ರಾಯ ಹೊಂದಿದ್ದಾರೆ. ಸಲಿಂಗ ವಿವಾಹವನ್ನು( Same Sex Marriage) ಕಾನೂನುಬದ್ಧಗೊಳಿಸಿದರೆ ಅದು ಸಮಾಜದಲ್ಲಿ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಆರ್‌ಎಸ್‌ಎಸ್ (RSS) ಮಹಿಳಾ ವಿಭಾಗದ ಅಂಗ ಸಂಸ್ಥೆ ಸಂವರ್ಧಿನಿ ನ್ಯಾಸ್ (Samwardhini Nyas) ತನ್ನ ಸಮೀಕ್ಷೆಯ ವರದಿಯಲ್ಲಿ ತಿಳಿಸಿದೆ.

     

    ಅಧುನಿಕ ವಿಜ್ಞಾನದ ಎಂಟು ವಿಭಿನ್ನ ಚಿಕಿತ್ಸಾ ಕಾರ್ಯದಲ್ಲಿ ತೊಡಗಿರುವ 318 ವೈದ್ಯರಿಂದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿ ಸಂಶೋಧನಾ ವರದಿ ತಯಾರಿಸಲಾಗಿದೆ. ಇದರಲ್ಲಿ 70% ನಷ್ಟು ವೈದ್ಯರು ಸಲಿಂಗ ಸಂಬಂಧ ಒಂದು ಅಸ್ವಸ್ಥತೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ 83% ಸಲಿಂಗ ಸಂಬಂಧ ಹೊಂದಿರುವ ವ್ಯಕ್ತಿಗಳಿಗೆ ಲೈಂಗಿಕ ರೋಗಗಳು ಹರಡುವುದು ವರದಿಯಿಂದ ದೃಡಪಟ್ಟಿದೆ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಹಿರಿಯ ಕಾರ್ಯನಿರ್ವಹಣಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಸುಡಾನ್ ಸಂಘರ್ಷ – 17 ವಿಮಾನಗಳು, 5 ಹಡಗುಗಳು, 3,862 ಭಾರತೀಯರ ರಕ್ಷಣೆ

    ಸಮೀಕ್ಷೆಯ ಪ್ರಶ್ನಾವಳಿಗೆ ಪ್ರತಿಕ್ರಿಯಿಸಿದ 67% ಕ್ಕಿಂತ ಹೆಚ್ಚು ವೈದ್ಯರು ಸಲಿಂಗ ಸಂಬಂಧದ ಪೋಷಕರು ತಮ್ಮ ಸಂತತಿಯನ್ನು ಸರಿಯಾಗಿ ಬೆಳೆಸಲು ಸಾಧ್ಯವಿಲ್ಲ ಎಂದು ಭಾವಿಸಿದ್ದಾರೆ. ಅಂತಹ ಮಾನಸಿಕ ಅಸ್ವಸ್ಥತೆಯ (Psychological Disorder) ರೋಗಿಗಳನ್ನು ಗುಣಪಡಿಸಲು ಸಮಾಲೋಚನೆ ಉತ್ತಮ ಆಯ್ಕೆಯಾಗಿದೆ. ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಬೇಡಿಕೆಯ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸಾರ್ವಜನಿಕ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕು ಎಂದು ಸಂವರ್ಧಿನಿ ನ್ಯಾಸ್ ಅವರ ಸಮೀಕ್ಷೆ ಶಿಫಾರಸು ಮಾಡಿದೆ.

    ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (D Y Chandrachud) ನೇತೃತ್ವದ ಸಂವಿಧಾನ ಪೀಠವು ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ವಾದವನ್ನು ಆಲಿಸುತ್ತಿರುವ ಹಿನ್ನೆಲೆಯಲ್ಲಿ ಸಂವರ್ಧಿನಿ ನ್ಯಾಸ್ ಈ ಸಮೀಕ್ಷೆಯನ್ನು ನಡೆಸಿದೆ. ಸಮೀಕ್ಷೆಗೆ ಪ್ರತಿಕ್ರಿಯಿಸಿದ 57% ಕ್ಕಿಂತ ಹೆಚ್ಚು ವೈದ್ಯರು ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‍ನ (Supreme Court) ಮಧ್ಯಸ್ಥಿಕೆಯನ್ನು ನಿರಾಕರಿಸಿದ್ದಾರೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇದನ್ನೂ ಓದಿ: ಸೇನಾ ವಾಹನದ ಮೇಲೆ ದಾಳಿ – ಓರ್ವ ಉಗ್ರನ ಹತ್ಯೆ

  • ಮುಚ್ಚಿದ ಲಕೋಟೆಯಲ್ಲಿ ದಾಖಲೆಗಳನ್ನು ನೀಡುವ ಪದ್ಧತಿಯನ್ನು ಅಂತ್ಯಗೊಳಿಸಲು ಚಿಂತಿಸುತ್ತಿದ್ದೇವೆ- ಸಿಜೆಐ

    ಮುಚ್ಚಿದ ಲಕೋಟೆಯಲ್ಲಿ ದಾಖಲೆಗಳನ್ನು ನೀಡುವ ಪದ್ಧತಿಯನ್ನು ಅಂತ್ಯಗೊಳಿಸಲು ಚಿಂತಿಸುತ್ತಿದ್ದೇವೆ- ಸಿಜೆಐ

    ನವದೆಹಲಿ: ಮುಚ್ಚಿದ ಲಕೋಟೆಯಲ್ಲಿ (Sealed Cover) ದಾಖಲೆಗಳನ್ನು ನೀಡುವ ಪದ್ಧತಿಯನ್ನು ಅಂತ್ಯಗೊಳಿಸಲು ನಾವು ಚಿಂತಿಸುತ್ತಿದ್ದೇವೆ ಎಂದು ಸಿಜೆಐ (CJI) ಡಿ.ವೈ ಚಂದ್ರಚೂಡ್ (D.Y.Chandrachud) ಹೇಳಿದ್ದಾರೆ. ಒನ್ ರ‍್ಯಾಂಕ್, ಒನ್ ಪೆನ್ಷನ್ ಪ್ರಕರಣದ ವಿಚಾರಣೆ ವೇಳೆ ಸಿಜೆಐ ಇಂತಹದೊಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪ್ರಕರಣದ ವಿಚಾರಣೆ ವೇಳೆ ರಕ್ಷಣಾ ಸಚಿವಾಲಯದ (Ministry Of Defence) ಪರವಾಗಿ ಅಟಾರ್ನಿ ಜನರಲ್ (Attorney General) ಆರ್.ವೆಂಕಟರಮಣಿ (R.Venkataramani) ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯನ್ನು ಹಸ್ತಾಂತರಿಸಿದ್ದು, ಬಾಕಿ ಪಾವತಿಗೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿಯನ್ನು ನೀಡಿದರು. ಈ ವೇಳೆ ನ್ಯಾಯಾಧೀಶರಾದ ಪಿ.ಎಸ್.ನರಸಿಂಹ (P.S.Narasimha) ಮತ್ತು ಜೆ.ಬಿ ಪಾರ್ದಿವಾಲಾ (J.B.Pardiwala) ಅವರನ್ನೊಳಗೊಂಡ ಪೀಠವು ದಾಖಲೆಯನ್ನು ಪ್ರತಿವಾದಿಗಳಿಗಳ ಜೊತೆಗೆ ಹಂಚಿಕೊಳ್ಳುವಂತೆ ಎಜಿಗೆ (AG) ಸೂಚಿಸಿತು. ಇದನ್ನೂ ಓದಿ: ಭಾರತ ಧ್ವಜ ಕೆಳಗಿಳಿಸಿ ಖಲಿಸ್ತಾನ್‌ ಧ್ವಜ ಹಾರಿಸಿದ ಪ್ರತ್ಯೇಕತಾವಾದಿಗಳು – ಭಾರತ ಸರ್ಕಾರ ಬೇಸರ

    ದಯವಿಟ್ಟು ಮುಚ್ಚಿದ ಕವರ್‌ನಲ್ಲಿ ನೀಡುವ ದಾಖಲೆಗಳನ್ನು ಪ್ರತಿವಾದಿಗಳ ಜೊತೆಗೆ ಹಂಚಿಕೊಳ್ಳಿ. ಸುಪ್ರೀಂಕೋರ್ಟ್ (Supreme Court) ಅನುಸರಿಸುತ್ತಿರುವ ಸೀಲ್ಡ್ ಕವರ್ ವ್ಯವಹಾರವನ್ನು ಕೊನೆಗೊಳಿಸಲು ನಾವು ಬಯಸುತ್ತೇವೆ. ಸೀಲ್ಡ್ ಕವರ್‌ಗಳಿಂದ ವೈಯಕ್ತಿಕವಾಗಿ ವಿಮುಖನಾಗಿದ್ದೇನೆ. ಸುಪ್ರೀಂಕೋರ್ಟ್ ಸೀಲ್ಡ್ ಕವರ್ ಪಡೆಯುತ್ತಿರುವುದರಿಂದ ಹೈಕೋರ್ಟ್‌ಗಳು ಕೂಡಾ ಸೀಲ್ಡ್ ಕವರ್ ಪಡೆಯುತ್ತಿವೆ ಎಂದು ಟೀಕಿಸಿದರು. ಇದನ್ನೂ ಓದಿ: 5, 8ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ – ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

    ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಹಿಂದಿನ ಆದೇಶಗಳನ್ನು ಅನುಷ್ಠಾನಗೊಳಿಸುವುದರಿಂದ ಪ್ರಕರಣದ ಬಗ್ಗೆ ರಹಸ್ಯವಾಗಿ ಏನೂ ಉಳಿದಿಲ್ಲ. ಆದೇಶಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಗೌಪ್ಯತೆ ಏನಿರಬಹುದು? ನೀವು ಇನ್ನೊಂದು ಬದಿಗೆ ಪ್ರತಿಯನ್ನು ನೀಡಬೇಕು. ಸೀಲ್ಡ್ ಕವರ್‌ಗಳು ಸಂಪೂರ್ಣವಾಗಿ ಇತ್ಯರ್ಥಗೊಂಡ ನ್ಯಾಯಾಂಗ ತತ್ವಗಳಿಗೆ ವಿರುದ್ಧವಾಗಿವೆ ಎಂದು ಸ್ಪಷ್ಟಪಡಿಸಿದರು.

    ಈ ವೇಳೆ ಈಗಾಗಲೇ ಸಲ್ಲಿಸಿರುವ ಪ್ರತಿಯನ್ನು ಪಡೆಯಬೇಕು ಎಂದು ಎಜಿ ಮನವಿ ಮಾಡಿದರು. ಕ್ಷಮಿಸಿ, ನಾವು ಈ ಸೀಲ್ಡ್ ಕವರ್ ತೆಗೆದುಕೊಳ್ಳುವುದಿಲ್ಲ. ದಯವಿಟ್ಟು ಅದನ್ನು ಹಿಂದಕ್ಕೆ ತೆಗೆದುಕೊಳ್ಳಿ ಅಥವಾ ಓದಿ ಎಂದು ಸೂಚಿಸಿದರು. ಈ ವೇಳೆ ಸೀಲ್ಡ್ ಕವರ್‌ನಲ್ಲಿದ್ದ ಮಾಹಿತಿಯನ್ನು ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಓದಿ ತಿಳಿಸಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಮೋದಿಯ ಅತಿದೊಡ್ಡ TRP: ಮಮತಾ ಬ್ಯಾನರ್ಜಿ