Tag: D Veerendra Heggade

  • ಸರ್ಕಾರಕ್ಕೆ ಆಭಾರಿ, ಎಸ್‌ಐಟಿ ರಚಿಸಿದ ಕಾರಣ ಸತ್ಯ ಹೊರಬರುತ್ತಿದೆ: ವೀರೇಂದ್ರ ಹೆಗ್ಗಡೆ

    ಸರ್ಕಾರಕ್ಕೆ ಆಭಾರಿ, ಎಸ್‌ಐಟಿ ರಚಿಸಿದ ಕಾರಣ ಸತ್ಯ ಹೊರಬರುತ್ತಿದೆ: ವೀರೇಂದ್ರ ಹೆಗ್ಗಡೆ

    – ಸತ್ಯದಿಂದ ಇದ್ದೇವೆ, ಮುಂದೆಯೂ ಇರುತ್ತೇವೆ ಎಂದ ಧರ್ಮಾಧಿಕಾರಿ

    ಮಂಗಳೂರು: ಸರ್ಕಾರಕ್ಕೆ ನಾನು ಆಭಾರಿ, ಎಸ್‌ಐಟಿ (SIT) ರಚಿಸಿದ ಕಾರಣ ಸತ್ಯ ಹೊರಬರುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ (Veerendra Heggade) ಹೇಳಿದ್ದಾರೆ.

    ಧರ್ಮಸ್ಥಳದಲ್ಲಿ ಮಾತನಾಡಿದ ಅವರು, ಕೋವಿಡ್ ಹಾಗೂ ಈಗ ಅನೇಕ ಪುಸ್ತಕಗಳನ್ನು ನಾನು ಓದುತ್ತಿದ್ದೇನೆ. ಸಿದ್ದಗಂಗಾ ಶ್ರೀಗಳ ಹಲವು ಪುಸ್ತಕ ನಾನು ಓದಿದ್ದೇನೆ. ನಮ್ಮನ್ನ ಹೊಗಳಿದ್ದೀರಿ, ಆದರೆ ನಮ್ಮ ಸೇವೆ ಧರ್ಮ ನಮಗೆ ಮುಖ್ಯ ಅಂತ ಇದೆ. ಸಿದ್ದಗಂಗಾ ಶ್ರೀಗಳು 108 ವರ್ಷ ಬದುಕಿದವರು ಹೇಳಿದ ಮಾತು. ಶತ್ರುತ್ವ ಯಾಕೆ ಬಂತು ಅಂತ ನಮಗೆ ಗೊತ್ತಿಲ್ಲ. ಇಷ್ಟು ಹಗೆತನ, ಅಪವಾದ ಯಾಕೆ ಬಂತು ಅಂತ ಗೊತ್ತಿಲ್ಲ. ನಾವು ಸೇವೆ ಮಾಡುತ್ತೇವೆ, ಆದರೆ ಸೇವೆ ಪ್ರಚಾರದ ವಸ್ತುವಲ್ಲ. ಇಷ್ಟು ವರ್ಷ ನಾವು ಆರೋಗ್ಯವಾಗಿರಲು ನಮ್ಮ ನಿಸ್ವಾರ್ಥ ಸೇವೆಯೇ ಕಾರಣ. ನಮ್ಮ ಎಲ್ಲಾ ಕಾರ್ಯಕ್ರಮಗಳನ್ನು ನೀವು ಎಲ್ಲರೂ ಗಮನಿಸಿದ್ದೀರಿ. ನಾವು ಇಲ್ಲಿ ನಿಮಿತ್ತ ಮಾತ್ರ, ಆದರೆ ಮುಂದುವರೆಸಿಕೊಂಡು ಹೋಗಿದ್ದು ಅದಕ್ಕೆ ಸಂಬಂಧಪಟ್ಟ ಇಲಾಖೆಯವರು. ಕೆಲವರು ಪ್ರೀತಿಯಲ್ಲಿ ಟೀಕೆ ಮಾಡಿದ್ರು, ಇವರು ಹಾಗೆ ಟೀಕೆ ಮಾಡಿಲ್ಲ. ನಿಮಗೆ ನಾನು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಎಂದರು. ಇದನ್ನೂ ಓದಿ: MiG-21 Retires | 6 ದಶಗಳ ಸೇವೆಗೆ ವಿದಾಯ – ʻಹಾರುವ ಶವಪೆಟ್ಟಿಗೆʼ ಮಿಗ್‌-21ಗೆ ಗುಡ್‌ಬೈ ಹೇಳಿದ ಭಾರತ

    ಧರ್ಮಸ್ಥಳ (Dharmasthala) ಬೇರೆ, ಧರ್ಮಸ್ಥಳದ ಊರಿನವರು ಬೇರೆ ಅಲ್ಲ. ಎಷ್ಟು ನಿಷ್ಠುರವಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆದಿದೆ ಅಂತ ನೀವು ನೋಡಿದ್ದೀರಿ. ಯಾಕೆ ಇಷ್ಟು ದ್ವೇಷ ನನ್ನ ಮೇಲೆ ಇದೆ ಅಂತ ನನಗೆ ಗೊತ್ತಾಗಿಲ್ಲ. ಈಗ ಮನಸ್ಸು ಸ್ವಲ್ಪ ಹಗುರವಾಗಿದೆ, ಎತ್ತರದ ಬೆಟ್ಟದಿಂದ ನೀರು ಹರಿದಿದೆ. ನಮ್ಮ ಮೇಲೆ ದೃಢವಾದ ನಂಬಿಕೆ ಇಟ್ಟ ಎಲ್ಲರಿಗೂ ನಾನು ಆಭಾರಿ. ಈಗಾಗಲೇ ಲಕ್ಷಾಂತರ ಜನರು ಇಲ್ಲಿಗೆ ಬಂದು ಹೋಗಿದ್ದಾರೆ. ನಿಮ್ಮ ಧರ್ಮ ಸೋತರೆ, ನಮ್ಮ ಧರ್ಮ ಸೋತ ಹಾಗೆ ಅಂತ ಹೇಳಿದ್ದಾರೆ. ಈ ಶತ್ರುತ್ವ ಯಾಕೆ ಅಂತ ಕೇಳ್ತಾರೆ, ನನಗೂ ಈ ದ್ವೇಷ ಯಾಕೆ ಅಂತ ಬೇಕು. ನಾವು ಯಾರನ್ನೂ ಹೀಯಾಳಿಸಿಲ್ಲ, ದ್ವೇಷ ಕೂಡ ಮಾಡಿಲ್ಲ. ನಾವು ತಪ್ಪು ಮಾಡದ ಕಾರಣ ನಮಗೆ ಆತ್ಮವಿಶ್ವಾಸ ಇದೆ ಎಂದು ಹೇಳಿದರು. ಇದನ್ನೂ ಓದಿ: ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಕೇಸ್ – ಮಹೇಶ್ ಶೆಟ್ಟಿ ತಿಮರೋಡಿಗೆ ಅಂತಿಮ ನೋಟಿಸ್ ಜಾರಿ

    ಬೆಂಗಳೂರು ಅಥವ ಎಲ್ಲೋ ಕೂತು ಟೀಕೆ ಮಾಡೋರು ನಮಗೆ ಬೇಡ. ನಮಗೆ ನಮ್ಮವರು ಬೇಕು, ನಮ್ಮ ಜೊತೆ ನಿಲ್ಲೋರು ಬೇಕು. ನಮ್ಮ ಮೇಲೆ ಪ್ರೀತಿ ತೋರಿದ ಎಲ್ಲಾ ಹೆಣ್ಣುಮಕ್ಕಳಿಗೂ ನಾನು ಆಭಾರಿ. ಎಸ್‌ಐಟಿ ವರದಿ ಅರ್ಧ ಬಂದ ಕಾರಣ ನಾನು ಇಷ್ಟು ಧೈರ್ಯವಾಗಿ ಮಾತನಾಡುತ್ತಿದ್ದೇನೆ. ನಮ್ಮ ಹೊಳಪು ಹಾಗೇ ಉಳಿದಿದೆ, ಇದಕ್ಕೆ ನಾನು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ನೋಡಿಕೊಳ್ಳುತ್ತಾರೆ. ನಾವು ಸತ್ಯದಿಂದ ಇದ್ದೇವೆ, ಹಾಗೆಯೇ ಮುಂದೆಯೂ ಇರುತ್ತೇವೆ. ಮುಂದಿನ ದಿನಗಳು ಉತ್ತಮವಾಗಿರಲಿ, ಎಲ್ಲರಿಗೂ ಧನ್ಯವಾದಗಳು ಎಂದು ನುಡಿದರು. ಇದನ್ನೂ ಓದಿ: ಪಂಚಭೂತಗಳಲ್ಲಿ ಲೀನರಾದ ಎಸ್‌.ಎಲ್‌ ಭೈರಪ್ಪ – ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಅಂತ್ಯಕ್ರಿಯೆ

  • ನಮ್ಮ ಇಡೀ ಕುಟುಂಬ ಧರ್ಮಸ್ಥಳದಲ್ಲಿ ಹುಟ್ಟಿ ಬಹಳ ಪುಣ್ಯ ಮಾಡಿದೆ: ಡಿ.ವೀರೇಂದ್ರ ಹೆಗ್ಗಡೆ

    ನಮ್ಮ ಇಡೀ ಕುಟುಂಬ ಧರ್ಮಸ್ಥಳದಲ್ಲಿ ಹುಟ್ಟಿ ಬಹಳ ಪುಣ್ಯ ಮಾಡಿದೆ: ಡಿ.ವೀರೇಂದ್ರ ಹೆಗ್ಗಡೆ

    ಮಂಗಳೂರು: ನಮ್ಮ ಇಡೀ ಕುಟುಂಬ ಧರ್ಮಸ್ಥಳದಲ್ಲಿ (Dharmasthala) ಹುಟ್ಟಿ ಬಹಳ ಪುಣ್ಯ ಮಾಡಿದೆ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ (D.Veerendra Heggade) ಅವರು ಹೇಳಿದ್ದಾರೆ.

    ಧರ್ಮಸ್ಥಳದಲ್ಲಿ ನಡೆದ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಎಷ್ಟೋ ದೂರದವರು ಬಂದರೂ ಹತ್ತಿರದವರು ಯಾಕೆ ಬರ್ತಿಲ್ಲ ಎಂಬ ಮಾತಿತ್ತು. ಇವತ್ತು ನಮ್ಮವವರೆಲ್ಲಾ ಇಲ್ಲಿಗೆ ಬಂದಿದ್ದೀರಾ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಈದ್ ಮಿಲಾದ್ ಬಗ್ಗೆ ಮಾತ್ರ ಯಾಕೆ ಮಕ್ಕಳು ಅಧ್ಯಯನ ಮಾಡಬೇಕು – ಸರ್ಕಾರದ ವಿರುದ್ಧ ಯತ್ನಾಳ್ ಕಿಡಿ

    ನಾವು ಈ ಕುಟುಂಬದಲ್ಲಿ ಹುಟ್ಟಿ ಅದೃಷ್ಟವಂತರಾಗಿದ್ದೇವೆ, ಧರ್ಮಸ್ಥಳದಲ್ಲಿ ಹುಟ್ಟಿ ಪುಣ್ಯ ಮಾಡಿದ್ದೇವೆ. ನಮ್ಮ ಇಡೀ ಕುಟುಂಬ ಇಲ್ಲಿ ಹುಟ್ಟಿ ಬಹಳ ಪುಣ್ಯ ಮಾಡಿದೆ. ಈ ಕಾರಣದಿಂದ ನಿಮಗೆ ನಮ್ಮ ಮೇಲೆ ಪ್ರೀತಿ ಅಭಿವ್ಯಕ್ತವಾಯಿತು. ಇಷ್ಟು ದಿನ ಪ್ರೀತಿ ಇದ್ದರೂ ಅಭಿವ್ಯಕ್ತಪಡಿಸಲು ಅವಕಾಶ ಇರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಆಯ್ಕೆಯನ್ನ ವಿರೋಧಿಸುತ್ತಾರೆ: ಸಿದ್ದರಾಮಯ್ಯ

    ಎಸ್‌ಐಟಿ ತನಿಖೆಯಿಂದ ಅನೇಕ ವಿಷಯಗಳು ಹೊರಗೆ ಬರ್ತಾ ಇದೆ. ಆ ಎಲ್ಲಾ ತನಿಖೆಯ ವಿಷಯಗಳು ನಮಗೆ ಪೂರಕವಾಗಿರಲಿ. ಮಂಜುನಾಥ ಸ್ವಾಮಿಯ ಅನುಗ್ರಹ ಎಲ್ಲರ ಮೇಲೆ ಹೀಗೆಯೇ ಇರಲಿ ಎಂದು ನುಡಿದಿದ್ದಾರೆ.

  • ಇದು ಅಣ್ಣಪ್ಪ ಸ್ವಾಮಿಯ ಸತ್ಯ ದರ್ಶನ – ಹೆಗ್ಗಡೆ ಮಾತು ಮತ್ತೆ ವೈರಲ್

    ಇದು ಅಣ್ಣಪ್ಪ ಸ್ವಾಮಿಯ ಸತ್ಯ ದರ್ಶನ – ಹೆಗ್ಗಡೆ ಮಾತು ಮತ್ತೆ ವೈರಲ್

    – ಸಾಮಾಜಿಕ ಜಾಲತಾಣದಲ್ಲಿ ಧರ್ಮ ವಿಜಯ ಸಂಭ್ರಮ

    ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ (Dharmasthala Mass Burials) ಎಂದು ಬುರುಡೆ ಬಿಟ್ಟಿದ್ದ ಮಾಸ್ಕ್ ಮ್ಯಾನ್ (Mask Man) ಚಿನ್ನಪ್ಪ ಅಲಿಯಾಸ್ ಚೆನ್ನನನ್ನು ಎಸ್‌ಐಟಿ (SIT) ಬಂಧಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೀರೇಂದ್ರ ಹೆಗ್ಗಡೆಯವರು (Veerendra Heggade) ಈ ಮೊದಲು ಅಣ್ಣಪ್ಪ ಸ್ವಾಮಿಯ ಪವಾಡದ ಬಗ್ಗೆ ಮಾತನಾಡಿದ್ದ ವೀಡಿಯೋ ಮತ್ತೆ ವೈರಲ್ ಆಗಿದೆ.

    ಹೌದು, ಮಾಸ್ಕ್ ಮ್ಯಾನ್ ಬಂಧನವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳ ಭಕ್ತರು ಧರ್ಮ ವಿಜಯ ಆಚರಿಸುತ್ತಿದ್ದಾರೆ. ಈ ಬೆನ್ನಲ್ಲೇ ವೀರೇಂದ್ರ ಹೆಗ್ಗಡೆಯವರು ಅಣ್ಣಪ್ಪ ಸ್ವಾಮಿಯ (Annappa Swamy) ಪವಾಡದ ಬಗ್ಗೆ ಈ ಮೊದಲು ಮಾತನಾಡಿದ್ದ ವೀಡಿಯೋ ಮತ್ತೆ ವೈರಲ್ ಆಗುತ್ತಿದೆ. ಇದು ಅಣ್ಣಪ್ಪ ಸ್ವಾಮಿಯ ಸತ್ಯ ದರ್ಶನ ಎಂಬ ಹೆಗ್ಗಡೆಯವರ ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಮುಸುಕುಧಾರಿ ಮುಖ್ಯ ಅಲ್ಲ, ಇದರ ಹಿಂದೆ ಇರೋರು ಯಾರು ಅಂತ ತನಿಖೆ ಆಗ್ಬೇಕು: ಅಶೋಕ್

    ಹೆಗ್ಗಡೆಯವರು ಹೇಳಿದ್ದೇನು?
    ಧರ್ಮಸ್ಥಳದಲ್ಲಿ ಮಂಜುನಾಥ ಅನುಗ್ರಹ ನೀಡುವ ದೇವರು. ಮಂಜುನಾಥನಿಗೆ ಕೋಪ ಬರಲ್ಲ, ಆದ್ರೆ ಅಣ್ಣಪ್ಪ ಸ್ವಾಮಿ ಕೋಪಿಷ್ಟ. ಅನ್ಯಾಯಿಗಳನ್ನು ಅಧರ್ಮಿಗಳನ್ನು ಶಿಕ್ಷಿಸದೇ ಅಣ್ಣಪ್ಪ ಬಿಡಲ್ಲ. ಧರ್ಮದೇವತೆಗಳ ಬಂಟ ಅಣ್ಣಪ್ಪ ಸ್ವಾಮಿಯ ಪವಾಡವಿದು. ಅಣ್ಣಪ್ಪ ಸ್ವಾಮಿ ಧರ್ಮಸ್ಥಳ ದೇಗುಲದ ಕಾವಲುಗಾರ ಅನ್ನೋ ನಂಬಿಕೆಯಿದೆ ಎಂದು ಈ ಹಿಂದೆ ಹೆಗ್ಗಡೆಯವರು ಹೇಳಿದ್ದರು. ಇದನ್ನೂ ಓದಿ: 10 ದಿನಗಳ ಎಸ್‌ಐಟಿ ಕಸ್ಟಡಿಗೆ ಬುರುಡೆ ಚಿನ್ನಯ್ಯ

  • ಆಪರೇಷನ್ ಸಿಂಧೂರ ಯಶಸ್ವಿಯಾಗಲೆಂದು ವೀರೇಂದ್ರ ಹೆಗ್ಗಡೆ ವಿಶೇಷ ಪೂಜೆ

    ಆಪರೇಷನ್ ಸಿಂಧೂರ ಯಶಸ್ವಿಯಾಗಲೆಂದು ವೀರೇಂದ್ರ ಹೆಗ್ಗಡೆ ವಿಶೇಷ ಪೂಜೆ

    – ಸುರಕ್ಷಿತ ಕಾರ್ಯಾಚರಣೆಗೆ ಧರ್ಮಸ್ಥಳ ಮಂಜುನಾಥನಲ್ಲಿ ಪ್ರಾರ್ಥನೆ

    ಮಂಗಳೂರು: ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ (Indian Army) ಸರ್ವರೀತಿಯಲ್ಲೂ ಯಶಸ್ಸು ಕಾಣಲಿ ಎಂದು ಡಾ.ವೀರೇಂದ್ರ ಹೆಗ್ಗಡೆ (D Veerendra Heggade) ಧರ್ಮಸ್ಥಳ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ನಮ್ಮ ಹೆಮ್ಮೆಯ ಸೈನಿಕರಿಗೆ ಯಾವುದೇ ಹಾನಿಯಿಲ್ಲದೇ ಸುರಕ್ಷಿತವಾಗಿ ಕಾರ್ಯಾಚರಣೆ ನಡೆಸುವಂತೆ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ವೀರೇಂದ್ರ ಹೆಗ್ಗಡೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ದೇಶಕ್ಕಾಗಿ ನಾನು ಪ್ರಾಣ ಕೊಡಲು ಸಿದ್ಧ: ಜಮೀರ್ ಅಹ್ಮದ್

    ಗುರುವಾರ ರಾತ್ರಿ ಪಾಕ್ ವಿರುದ್ಧ ಭಾರತ ಮಿಸೈಲ್‌ಗಳ ಮಳೆ ಸುರಿಸಿದೆ. ಈ ವೇಳೆ ಪಾಕ್ ಸಹ ದಾಳಿ ನಡೆಸಿದೆ. ಆದರೆ ಭಾರತೀಯ ಸೇನೆ ಆ ದಾಳಿಯನ್ನು ವಿಫಲಗೊಳಿಸಿದೆ. ಇದರ ಬೆನ್ನಲ್ಲೇ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಪಾಕ್ ತತ್ತರಿಸಿ ಹೋಗಿದೆ. ಇಷ್ಟಾಗಿಯೂ ಕಿತಾಪತಿ ಬಿಡದ ಪಾಕಿಸ್ತಾನ ಮತ್ತೆ ಭಾರತದ ಜಮ್ಮುವಿನ ಮೇಲೆ ದಾಳಿಗೆ ವಿಫಲಯತ್ನ ನಡೆಸಿದೆ. ಜಮ್ಮುವಿನಲ್ಲಿ ಇದುವರೆಗೆ ಪಾಕಿಸ್ತಾನದ 50ಕ್ಕೂ ಹೆಚ್ಚು ಡ್ರೋನ್ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ಕೇಸ್ | NIAಗೆ ವಹಿಸಲು ರಾಜ್ಯಪಾಲರಿಗೆ ಮನವಿ, ಕರಾವಳಿಗೆ ಪಾಕ್ ಸಂಪರ್ಕವಿದೆ: ಅಶೋಕ್