Tag: D Sudhakar

  • ಎಸ್‌ಜೆಪಿ ಮಹಿಳಾ ಹಾಸ್ಟೆಲ್ ಅವ್ಯವಸ್ಥೆಗೆ ಉನ್ನತ ಶಿಕ್ಷಣ ಸಚಿವ ಗರಂ

    ಎಸ್‌ಜೆಪಿ ಮಹಿಳಾ ಹಾಸ್ಟೆಲ್ ಅವ್ಯವಸ್ಥೆಗೆ ಉನ್ನತ ಶಿಕ್ಷಣ ಸಚಿವ ಗರಂ

    ಬೆಂಗಳೂರು: ಎಸ್‌ಜೆಪಿ ಕಾಲೇಜು (SJP College) ಮಹಿಳಾ ಹಾಸ್ಟೆಲ್‌ಗೆ (Women’s Hostel) ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ (Dr Sudhakar) ದಿಢೀರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಕೆ.ಆರ್ ಸರ್ಕಲ್‌ನಲ್ಲಿರೋ ಎಸ್‌ಜೆಪಿ ಮಹಿಳಾ ಹಾಸ್ಟೆಲ್‌ಗೆ ಭೇಟಿ ನೀಡಿದ ಸಚಿವರು, ಅಡುಗೆ ಮನೆ, ರೂಂ, ವಾಶ್ ರೂಂ ಪರಿಶೀಲನೆ ನಡೆಸಿದರು.

    ಮಲಗುವ ಕೋಣೆ, ಅಡುಗೆ ಮನೆ, ವಾಶ್ ರೂಂ, ಬಾತ್ ರೂಂ ಪರಿಶೀಲನೆ ಮಾಡಿದ ಸಚಿವರು, ವಿದ್ಯಾರ್ಥಿಗಳು ಜಾಸ್ತಿ ಇದ್ದು, ವಾಶ್ ರೂಂ ಕಡಿಮೆ ಇರೋದಕ್ಕೆ ಅಸಮಾಧಾನ ಹೊರಹಾಕಿದರು. ವಾಶ್ ರೂಂ ಹೊಸದಾಗಿ ಮಾಡಿದ್ರು ಸರಿಯಾಗಿ ಮಾಡದ್ದಕ್ಕೆ ಸಚಿವರು ಸಿಟ್ಟಾದರು. ಯಾರು ಕೆಲಸ ಮಾಡಿದ್ದು? ಹೀಗೆ ಮಾಡಿದ್ರೆ ಹೇಗೆ ಅಂತ ಅಧಿಕಾರಿಗಳ ವಿರುದ್ದ ಸಚಿವರು ಗರಂ ಆದರು. ಯಾರು ಎಂಜಿನಿಯರ್? ಹೇಗೆ ಕೆಲಸ ಮಾಡೋದು? ದುಡ್ಡು ಕೊಟ್ಟರೂ ಸರಿಯಾಗಿ ಕೆಲಸ ಮಾಡಿಲ್ಲ ಅಂದರೆ ಹೇಗೆ ಎಂದು ಲೋಕೋಪಯೋಗಿ ಇಲಾಖೆ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಕರ್ನಾಟಕ ಲೋಕಸಭೆ ಚುನಾವಣೆಯಲ್ಲಿ ಅಕ್ರಮವಾಗಿದೆ – ರಾಹುಲ್ ಗಾಂಧಿ ದಾಖಲಾತಿ ಬಿಡುಗಡೆ ಮಾಡ್ತಾರೆ: ಸಚಿವ ಸುಧಾಕರ್

    ಇದೇ ವೇಳೆ ಸಚಿವರ ಮುಂದೆ ಹಾಸ್ಟೆಲ್ ವಿದ್ಯಾರ್ಥಿನಿಯರು ಸಮಸ್ಯೆ ಹೇಳಿಕೊಂಡರು. ಸರ್ ನಮಗೆ ಬಿಸಿನೀರು ಸಮಸ್ಯೆ ಇದೆ. ವಾಶ್ ರೂಂ ಸರಿಯಿಲ್ಲ. ಒಂದು ರೂಂನಲ್ಲಿ 6 ಜನ ಇದ್ದೇವೆ. ಹಾಸ್ಟೆಲ್‌ನಲ್ಲಿ ಕ್ಲೀನ್ ಸರಿಯಾಗಿ ಇಲ್ಲ. ಹಾಸ್ಟೆಲ್‌ನಲ್ಲಿ ಪವರ್ ಸಮಸ್ಯೆ ಇದೆ. ಸ್ನಾನ ಮಾಡೋಕೆ ಬಿಸಿನೀರು ಇಲ್ಲ. ಊಟದ ಸಮಸ್ಯೆ ಸ್ವಲ್ಪ ಇದೆ. ನಾನ್ ವೆಜ್ ಕೊಡುತ್ತಿಲ್ಲ. ಒಂದೊಂದು ದಿನ ಊಟ ಸರಿ ಇರಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದರು. ಇದನ್ನೂ ಓದಿ: 6 ವರ್ಷದ ಬಳಿಕ ಚೀನಾಗೆ ಭೇಟಿ ನೀಡಲಿದ್ದಾರೆ ಮೋದಿ

    ಇದಕ್ಕೆ ಸಚಿವರು ಅಡುಗೆ ಅವರನ್ನ ಸರಿಯಾಗಿ ನೇಮಕ ಮಾಡಿಕೊಳ್ಳಿ. ಮಕ್ಕಳಿಗೆ ಸಮಸ್ಯೆ ಆಗದಂತೆ ಅಡುಗೆ, ಹಾಸ್ಟೆಲ್ ವ್ಯವಸ್ಥೆ ಮಾಡುವಂತೆ ವಾರ್ಡನ್‌ಗೆ ಸೂಚನೆ ಕೊಟ್ಟರು. ಹೊಸ ಹಾಸ್ಟೆಲ್ ನಿರ್ಮಾಣ ಮಾಡಿ ಕೊಡೋದಾಗಿ ಸಚಿವರು ಭರವಸೆ ಕೊಟ್ಟರು. ಇದನ್ನೂ ಓದಿ: ಉತ್ತರಾಖಂಡದಲ್ಲಿ ಮೇಘಸ್ಫೋಟ – ಕೇರಳ ಮೂಲದ 28 ಪ್ರವಾಸಿಗರು ನಾಪತ್ತೆ

  • 5 ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ, ನಾನೇ ಸಿಎಂ ಎಂದಿಲ್ಲ: ಡಿ.ಸುಧಾಕರ್

    5 ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ, ನಾನೇ ಸಿಎಂ ಎಂದಿಲ್ಲ: ಡಿ.ಸುಧಾಕರ್

    ಚಿತ್ರದುರ್ಗ: ಐದು ವರ್ಷ ನಾವೇ ಅಧಿಕಾರದಲ್ಲಿ ಇರುತ್ತೇವೆ ಎಂದು ಸಿಎಂ (Siddaramaiah) ಹೇಳಿದ್ದಾರೆ ಹೊರತು ನಾನೇ ಸಿಎಂ ಎಂದು ಹೇಳಿಲ್ಲ ಎಂದು ಸಾಂಖ್ಯಿಕ ಮತ್ತು ಯೋಜನಾ ಖಾತೆ ಸಚಿವ ಡಿ.ಸುಧಾಕರ್ (D Sudhakar) ಹೇಳಿದರು.

    ಚಿತ್ರದುರ್ಗದಲ್ಲಿ (Chitradurga) ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಆಗಿ ಐದು ವರ್ಷ ಸಂಪೂರ್ಣಗೊಳಿಸುವರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಈ ವೇಳೆ ಸಂಪೂರ್ಣ ಐದು ವರ್ಷ ನಾವೇ ಅಧಿಕಾರದಲ್ಲಿ ಇರುತ್ತೇವೆ. ಮುಂದಿನ 2028ಕ್ಕೂ ಸಹ ಕಾಂಗ್ರೆಸ್ ಅಧಿಕಾರದಲ್ಲಿರುತ್ತದೆ ಎಂದಷ್ಟೇ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಾನೇ ಸಿಎಂ ಆಗಿರುತ್ತೇನೆ ಎಂದು ಹೇಳಿಲ್ಲವೆಂದು ಸ್ಪಷ್ಟಪಡಿಸುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಲ್ಲ ಎಂದು ಹೇಳಿದರು. ಇದನ್ನೂ ಓದಿ: Mysuru | ಥೈಲ್ಯಾಂಡ್‌ ಬ್ಯೂಟಿ ಇಟ್ಕೊಂಡು ಹೈಟೆಕ್‌ ವೇಶ್ಯಾವಾಟಿಕೆ ದಂಧೆ – ಕೇಸ್‌ ದಾಖಲು

    ಇನ್ನು ಡಿಕೆಶಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಸುಧಾಕರ್ ಈ ರೀತಿ ಹೇಳಿಕೆ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ ಐದು ವರ್ಷ ಸಂಪೂರ್ಣಗೊಳಿಸುವುದಿಲ್ಲ ಎಂಬ ಚರ್ಚೆಗೆ ಮತ್ತಷ್ಟು ಪುಷ್ಟಿ ಸಿಗುವಂತೆ ಮಾಡಿದರು. ಇದನ್ನೂ ಓದಿ: ಶಕ್ತಿ ಯೋಜನೆಯಿಂದ ಯಾವುದೇ ನಷ್ಟವಾಗಿಲ್ಲ: ರಾಮಲಿಂಗಾ ರೆಡ್ಡಿ

    ಇನ್ನು ಇದೇ ವೇಳೆ ಬಳ್ಳಾರಿಯ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಜಟಾಪಟಿ ಬಗ್ಗೆಯು ಸಚಿವ ಸುಧಾಕರ ಪ್ರತಿಕ್ರಿಯಿಸಿದರು. ಉಪ್ಪು ತಿಂದವರು ನೀರು ಕುಡಿಯುತ್ತಾರೆ. 2008 ಹಾಗೂ 2018ರಲ್ಲೂ ಬಿಜೆಪಿಗೆ ಬಹುಮತ ಇರಲಿಲ್ಲ. ಬಿಜೆಪಿಯವರು ಅಕ್ರಮವಾಗಿ ಸರ್ಕಾರವನ್ನು ಅಧಿಕಾರಕ್ಕೆ ತಂದರು. ಯಾವತ್ತೂ ಈ ಬಿಜೆಪಿಗೆ ಬಹುಮತವಿತ್ತು. ಅವರು, ಬೇರೆ ದಾರಿಯಿಂದ ಅಧಿಕಾರಕ್ಕೆ ಬಂದಿದ್ದರು. ಬಿಜೆಪಿಯವರಿಗೆ ಅಧಿಕಾರದ ದಾಹವಿದೆ. ಹೀಗಾಗಿ ಹಳೆಯದನ್ನು ಕೆದಕಿಕೊಂಡು ಹೋಗುತಿದ್ದಾರೆ ಎಂದರು. ಇದನ್ನೂ ಓದಿ: 76ನೇ ಗಣರಾಜ್ಯೋತ್ಸವ ಸಂಭ್ರಮ – ಈ ವರ್ಷವೂ ಗಮನಸೆಳೆದ ಮೋದಿ ಪೇಟ

    ಇನ್ನೂ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಹಾಕಲು ಸರ್ಕಾರ ಕ್ರಮ ಕೈಗೊಂಡಿದೆ. ಆದರೆ ಮೈಕ್ರೋ ಫೈನಾನ್ಸ್ ಕಿರುಕುಳ ದೂರುಗಳು ಚಿತ್ರದುರ್ಗದಲ್ಲಿ ಇಲ್ಲ. ಅಂತಹ ದೂರುಗಳಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು. ಅಗತ್ಯ ಕಠಿಣ ಕ್ರಮಕ್ಕೆ ಎಸ್ಪಿ, ಡಿಸಿಗೆ ಸೂಚನೆ ನೀಡಲಾಗಿದೆ ಎಂದರು. ಇದನ್ನೂ ಓದಿ: ತುಮಕೂರಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ: ಪರಮೇಶ್ವರ್

  • ಹಿಂದಿನ ಚುನಾವಣೆಯಲ್ಲಿ ಪುಲ್ವಾಮಾ, ಈಗ ರಾಮನ ಫೋಟೋ ಹಿಡಿದಿದ್ದಾರೆ- ಕೇಂದ್ರದ ವಿರುದ್ಧ ಸುಧಾಕರ್‌ ಕಿಡಿ

    ಹಿಂದಿನ ಚುನಾವಣೆಯಲ್ಲಿ ಪುಲ್ವಾಮಾ, ಈಗ ರಾಮನ ಫೋಟೋ ಹಿಡಿದಿದ್ದಾರೆ- ಕೇಂದ್ರದ ವಿರುದ್ಧ ಸುಧಾಕರ್‌ ಕಿಡಿ

    ಚಿತ್ರದುರ್ಗ: ಈ ಹಿಂದಿನ ಚುನಾವಣೆ ವೇಳೆ ಪುಲ್ವಾಮಾ (Pulwama) ಘಟನೆ ತೋರಿಸಿದ್ದರು. ಈಗ ರಾಮನ (Rama) ಫೋಟೋ ಹಿಡಿದಿದ್ದಾರೆ ಎಂದು ಸಾಂಖಿಕ ಸಚಿವ ಡಿ.ಸುಧಾಕರ್ (D Sudhakar) ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

    ಚಿತ್ರದುರ್ಗದ ಡಿಸಿಸಿ ಬ್ಯಾಂಕ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ (Ayodhya Ram Mandir) ಉದ್ಘಾಟನೆ ಒಂದು ಸ್ಟಂಟ್. ಜನರು ದಡ್ಡರಿಲ್ಲ, ಎರಡು ಸಲ ಮೂರ್ಖರಾಗಿದ್ದೀವಿ. ಮತ್ತೆ ಮೂರನೇ ಸಲ ಮೂರ್ಖರಾಗಲ್ಲ ಆಗಲ್ಲ ಎಂಬ ಭರವಸೆಯಿದೆ ಎಂದರು.

    ಲೋಕಸಭಾ ಚುನಾವಣೆಯ (Loksabha Election) ಹಿನ್ನೆಲೆಯಲ್ಲಿ ರಾಮಮಂದಿರ ಉದ್ಘಾಟನೆ ಎಂಬುದು ಸತ್ಯ. ರಾಮಮಂದಿರಕ್ಕೆ ನಾನು, ಶಾಸಕ ರಘುಮೂರ್ತಿ ದುಡ್ಡು ಕೊಟ್ಟಿದ್ದೇವೆ. ಹಿಂದೆಲ್ಲಾ ಇಟ್ಟಿಗೆ ಸಹ ನಾವೆಲ್ಲಾ ನೀಡಿದ್ದೇವೆ. ರಾಮ ಎಲ್ಲರಿಗೂ ದೇವರು, ಚುನಾವಣೆ ವೇಳೆ ದೇಗುಲ ಉದ್ಘಾಟನೆ ಗಿಮಿಕ್ ಎಂದು ವಾಗ್ದಾಳಿ ನಡೆಸಿದರು.

    ಭಾರತ ದೇಶದ ಧಾರ್ಮಿಕ ನಂಬಿಕೆ ಬಳಸಿ ಬಿಜೆಪಿಯಿಂದ (BJP) ಮತ ಗಾಳ ಹಾಕಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಎಲ್ಲಿತ್ತು ರಾಮ ಮಂದಿರ?, ಸುಮ್ಮ ಸುಮ್ಮನೆ ಯಾವುದೋ ಫ್ಲೈಟ್ ತೋರಿಸಿದ್ದರು. ಪಾಪ ಜನ ದೇಶ ಕಾಪಾಡುತ್ತಾರೆಂದು ನಂಬಿದರು. ಪುಲ್ವಾಮಾ ಘಟನೆಯಲ್ಲಿ ಎಷ್ಟು ಜನರು ಸತ್ತರು?, ಪುಲ್ವಾಮಾ ಘಟನೆ ಕ್ರಿಯೇಟೆಡ್ ಎಂದು ಪೈಲೆಟ್ ಹೇಳಿಲ್ವಾ?, ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಆಗಿದೆ, ಸೆಕ್ಯುಲರ್ ತತ್ವ ಎಲ್ಲಿ ಹೋಯಿತು ಎಂದು ಪ್ರಶ್ನಿಸುವ ಮೂಲಕ ಹೆಚ್‌ಡಿಕೆಗೆ ಸುಧಾಕರ್‌ ಟಾಂಗ್‌ ನೀಡಿದರು.

    ಇದೇ ವೇಳೆ ಬಿಜೆಪಿ ಆಡಳಿತಲ್ಲಿ ಭ್ರಷ್ಟಾಚಾರ ಎಂದು ಶಾಸಕ ಯತ್ನಾಳ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಶಾಸಕ ಯತ್ನಾಳ್ ಎಲ್ಲಿವರೆಗೆ ನೋಡಿಕೊಂಡಿರುತ್ತಾರೆ. 40% ಸರ್ಕಾರ ಎಂದೇ ಕುಖ್ಯಾತಿ ಗಳಿಸಿದ್ದು ಸತ್ಯ. ಬೆಲೆ ಏರಿಕೆ, ಭ್ರಷ್ಟಾಚಾರ ನೋಡಿಯೇ ಜನ ಕಾಂಗ್ರೆಸ್‌ ಕೈ ಹಿಡಿದಿದ್ದಾರೆ ಎಂದರು. ಇದನ್ನೂ ಓದಿ: ಅಯೋಧ್ಯೆಯನ್ನು ಮತ್ತೆ ಬೆಳಕಿಗೆ ತರಲು ಮೋದಿಯಿಂದ ಮಾತ್ರ ಸಾಧ್ಯವಾಯ್ತು: ಮಾರಿಷಸ್‌ ಸಂಸದ

    ಶಾಲೆಯಲ್ಲಿ ಮಕ್ಕಳಿಂದ ಶೌಚಗುಂಡಿ ಕ್ಲೀನ್ ವಿಚಾರ ಸರ್ಕಾರದ ಬೇಜವಬ್ದಾರಿಯಿಂದ ಪ್ರಕರಣ ಎಂದ ಮಾಜಿ ಸಿಎಂ ಹೆಚ್‌ಡಿಕೆಗೆ ತಿರುಗೇಟು ನೀಡಿದರು. ನಾವು ಸಹ ಶಾಲಾ ವಿದ್ಯಾರ್ಥಿ ಆಗಿದ್ದಾಗ ಕಸ ಗುಡಿಸಿದ್ದೇವೆ. ಆದರೆ ಮಕ್ಕಳಿಂದ ಶೌಚಗುಂಡಿ ಕ್ಲೀನ್ ಮಾಡಿಸುವುದು ಸರಿಯಲ್ಲ. ಮಕ್ಕಳಿಂದ ಶೌಚಗುಂಡಿ ಕ್ಲೀನ್ ವಿಚಾರ ತಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

  • ವಿಜಯೇಂದ್ರ ಆಯ್ಕೆ ‘ಹೊಸ ಬಾಟಲಿಗೆ ಹಳೆ ವೈನ್’ ಹಾಕಿದಂತೆ: ಡಿ.ಸುಧಾಕರ್

    ವಿಜಯೇಂದ್ರ ಆಯ್ಕೆ ‘ಹೊಸ ಬಾಟಲಿಗೆ ಹಳೆ ವೈನ್’ ಹಾಕಿದಂತೆ: ಡಿ.ಸುಧಾಕರ್

    ಚಿತ್ರದುರ್ಗ: ಬಿಜೆಪಿ (BJP) ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿಜಯೇಂದ್ರ (BY Vijayendra) ‘ಹೊಸ ಬಾಟಲಿಯಲ್ಲಿ ಹಳೆ ವೈನ್’ ಹಾಕಿದಂತೆ. ಹೀಗಾಗಿ ಆ ವಿಚಾರಕ್ಕೆ ನೋ ರಿಯಾಕ್ಷನ್ ಎಂದು ಸಚಿವ ಡಿ.ಸುಧಾಕರ್ (D Sudhakar) ಹೇಳಿದರು.

    ಚಿತ್ರದುರ್ಗದಲ್ಲಿ (Chitradurga) ನಡೆದ ಒನಕೆ ಓಬವ್ವ ಜಯಂತಿಯ ಮೆರವಣಿಗೆ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕವಾಗಿರುವುದಕ್ಕೆ ಕೆಲ ಹಿರಿಯ ಬಿಜೆಪಿ ನಾಯಕರು ಅಸಮಾಧಾನಗೊಂಡಿದ್ದಾರೆ. ಅವರ ಪಕ್ಷದಲ್ಲಿನ ಅಸಮಾಧಾನ ಅವರ ಆಂತರಿಕ ವಿಚಾರವಾಗಿದೆ. ಹೀಗಾಗಿ ನಾವು ಆ ವಿಚಾರಕ್ಕೆ ಮೂಗು ತೂರಿಸಲ್ಲ ಎಂದರು. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಮುಂದಾದ ಸಚಿವರನ್ನು ಗರ್ಭಗುಡಿ ಬಾಗಿಲಲ್ಲೇ ತಡೆದ ಮಹಿಳಾ ಕಾನ್ಸ್‌ಟೇಬಲ್

    ನಮ್ಮ ಸಿದ್ಧಾಂತವೇ ಬೇರೆ, ಬಿಜೆಪಿಯವರ ಸಿದ್ಧಾಂತವೇ ಬೇರೆಯಾಗಿದ್ದು, ಅವರು ಸಮಾಜ ಒಡೆಯುವ ನೀತಿ ಹೊಂದಿದ್ದಾರೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಅವರ ನೇತೃತ್ವದ ಬಿಜೆಪಿ ಅಧಿಕಾರ ಪಡೆಯಲ್ಲ ಎಂದು ಭವಿಷ್ಯ ನುಡಿದರು. ಹಾಗೆಯೇ ಬಿಜೆಪಿಗೆ ಈವರೆಗೆ ರಾಜ್ಯಾಧ್ಯಕ್ಷರಿಲ್ಲ ಎಂದು ಹೇಳುತ್ತಿದ್ದರು. ಈಗ ನೇಮಕವಾಗಿದೆ. ನಾವು ಎಲ್ಲೂ ಬಿಜೆಪಿಗೆ ಗೇಲಿಮಾಡಿಲ್ಲ. ಆದರೆ ಇಲ್ಲಿಯವರೆಗೂ ವಿರೋಧ ಪಕ್ಷದ ನಾಯಕರೇ ಬಿಜೆಪಿಗೆ ಇಲ್ವಲ್ಲಾ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ವಿಜಯೇಂದ್ರ ಆಯ್ಕೆಯಿಂದ ಆಕಾಂಕ್ಷಿಗಳಿಗೆ ನಿರಾಸೆ ಸಹಜ: ಶ್ರೀರಾಮುಲು

    ಜೊತೆಗೆ ರಾಜ್ಯದ ಪ್ರಬಲ ಸಮುದಾಯವಾದ ಲಿಂಗಾಯತರ ಓಲೈಕೆಗೆ ಬಿಜೆಪಿ ವಿಜಯೇಂದ್ರ ಅವರನ್ನು ಅಸ್ತ್ರವಾಗಿ ಬಳಸಿಕೊಂಡಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಡಿಕೆ ಶಿವಕುಮಾರ್‌ಗೆ ವಿಜಯೇಂದ್ರ ಅವರನ್ನು ಹೋಲಿಸಬೇಡಿ. ಕೆಪಿಸಿಸಿ ಅಧ್ಯಕ್ಷರಾದ ಡಿಕೆಶಿಯವರ ಅನುಭವ, ತಾಳ್ಮೆ ಹಾಗೂ ಪಕ್ಷ ಸಂಘಟನೆ ವಿಚಾರದಲ್ಲಿ ಅವರು ಸಾಟಿಯಲ್ಲ. ಹೀಗಾಗಿ ವಿಜಯೇಂದ್ರಗೆ ಡಿಕೆಶಿ ಹೋಲಿಕೆ ಸರಿಯಲ್ಲ. ರಾಜ್ಯದಲ್ಲಿ ಎಲ್ಲಾ ಜಾತಿಯವರು ನಮ್ಮ ಪಕ್ಷದ ಜೊತೆಗಿದ್ದಾರೆ. ಎಲ್ಲಾ ಸಮಾಜದ ಮತದಾರರು ನಮಗೆ ಮತ ಹಾಕಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿ, ಅಮಿತ್ ಶಾರಿಂದ ಸೂಕ್ತ ಸಮಯಕ್ಕೆ ಉತ್ತಮ ನಿರ್ಧಾರ: ಯಡಿಯೂರಪ್ಪ

    ಮಾಜಿ ಸಚಿವ ಎಸ್.ಟಿ.ಸೋಮಶೇಖರ್ (ST Somashekar) ಕೂಡ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸೋಮಶೇಖರ್ ನನ್ನ ಆಪ್ತ. ಅವರ ಮೈಯಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ. ಅವರು ಹಲವು ಕಾರಣಗಳಿಂದ ಆಪರೇಷನ್ ಕಮಲದಿಂದ ಬಿಜೆಪಿಗೆ ಹೋಗಿದ್ದರು. ಈಗ ವಾಪಸ್ ಬರುತ್ತಾರೆ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ: ವಿಜಯೇಂದ್ರಗೆ ಪಕ್ಷದ ಸಾರಥ್ಯ – ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸೋಮಣ್ಣ ಮೌನ

  • ಬಿಜೆಪಿ, ಜೆಡಿಎಸ್ ನಾಯಕರು ರಾಜಕೀಯಕ್ಕಾಗಿ ಮಾತನಾಡಿದ್ದೆಂದು ನನ್ನ ಬಳಿ ಸತ್ಯ ಒಪ್ಪಿಕೊಂಡಿದ್ದಾರೆ: ಡಿ ಸುಧಾಕರ್

    ಬಿಜೆಪಿ, ಜೆಡಿಎಸ್ ನಾಯಕರು ರಾಜಕೀಯಕ್ಕಾಗಿ ಮಾತನಾಡಿದ್ದೆಂದು ನನ್ನ ಬಳಿ ಸತ್ಯ ಒಪ್ಪಿಕೊಂಡಿದ್ದಾರೆ: ಡಿ ಸುಧಾಕರ್

    ಚಿತ್ರದುರ್ಗ: ನನ್ನ ವಿರುದ್ಧದ ಭೂಕಬಳಿಕೆ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಚಿತ್ರದುರ್ಗದಲ್ಲಿ (Chitradurga) ಸಾಂಖಿಕ ಹಾಗೂ ಯೋಜನೆ ಸಚಿವ ಡಿ ಸುಧಾಕರ್ (D Sudhakar) ಹೇಳಿದರು.

    ಚಿತ್ರದುರ್ಗದ ಡಿಸಿಸಿ ಬ್ಯಾಂಕ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ವಿರುದ್ಧದ ಪ್ರಕರಣ ರದ್ದತಿಗೆ ಅರ್ಜಿ ಸಲ್ಲಿಸಿದ್ದೆವು. ಇಂದು ಹೈಕೋರ್ಟ್ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿ ಆದೇಶಿಸಿದೆ. ಈ ಬಗ್ಗೆ ಹೈಕೋರ್ಟ್ನಲ್ಲಿರುವ ನಮ್ಮ ವಕೀಲರಿಂದ ಈಗ ಮಾಹಿತಿ ಸಿಕ್ಕಿದೆ. ತಡೆಯಾಜ್ಞೆಯ ದಾಖಲೆ ನಮ್ಮ ವಕೀಲರ ಬಳಿ ಇದೆ ಎಂದು ತಿಳಿಸಿದರು.

    ಇದು ನನ್ನ ವಿರುದ್ಧದ ಭೂ ಕಬಳಿಕೆ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ರಾಜಕೀಯಕ್ಕಾಗಿ ನಾವು ಮಾತನಾಡಿರುವುದಾಗಿ ನನ್ನ ಹತ್ತಿರ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಇನ್ನು ಆಕ್ರಮ ಭೂ ಕಬಳಿಕೆ ಪ್ರಕರಣ ಸಂಬಂಧ ಈ ವರೆಗೆ ನನಗೆ ಪೊಲೀಸ್ ಇಲಾಖೆಯಿಂದ ಯಾವುದೇ ನೋಟಿಸ್ ಬಂದಿಲ್ಲ. ನಾನು ಈ ನೆಲದ ಕಾನೂನನ್ನು ಗೌರವಿಸುತ್ತಿರುವುದರಿಂದ ಪೊಲೀಸರ ನೋಟಿಸ್ ಬಂದರೆ ಉತ್ತರ ನೀಡುತ್ತೇನೆ ಎಂದರು.

    ನನ್ನ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತವಾಗಿದೆ. ಮೊಸರಲ್ಲಿ ಕಲ್ಲು ಹುಡುಕಿದರೆ ಯಶಸ್ವಿ ಆಗುತ್ತಾರಾ? ಸತ್ಯ ಯಾವತ್ತಿದ್ದರೂ ಗೆಲ್ಲಲೇಬೇಕು. ಸತ್ಯಾಂಶ ತಿಳಿಯದೆ, ದಾಖಲೆ ನೀಡದೆ ವಿನಾಕಾರಣ ಆರೋಪ ಮಾಡಲಾಗುತ್ತಿದೆ. ಅಲ್ಲದೆ ಬಿಜೆಪಿ ಹಾಗೂ ಜೆಡಿಎಸ್‌ನ ಕೆಲ ಸ್ನೇಹಿತರ ಜೊತೆ ನಾನು ವೈಯಕ್ತಿಕವಾಗಿ ಮಾತಾಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ನಾವು ಯಾರು ಕೂಡ ಚೈತ್ರಾಳ ಬೆಂಬಲಕ್ಕೆ ನಿಂತಿಲ್ಲ: ಶೋಭಾ ಕರಂದ್ಲಾಜೆ

    ನಮ್ಮ ದೇಶದ ಪ್ರಜಾಪ್ರಭುತ್ವ ಶಕ್ತಿಯುತವಾಗಿದೆ. ತಪ್ಪು ಮಾಡಿದರೆ ಒಂದು ಕ್ಷಣ ಇರಲಾಗುವುದಿಲ್ಲ. ಎಷ್ಟೋ ಜನ ಅಪರಾಧಿಗಳು ತಪ್ಪಿಸಿಕೊಳ್ಳಲಿ, ಆದರೆ ಓರ್ವ ನಿರಪರಾಧಿಗೆ ಶಿಕ್ಷೆ ಆಗಬಾರದು. 60 ವರ್ಷಗಳಿಂದ ನನ್ನ ಜೀವನವನ್ನು ಜನ ಗಮನಿಸಿದ್ದಾರೆ. ಒಳ್ಳೆಯ ವ್ಯಕ್ತಿ ಎಂಬ ಕಾರಣಕ್ಕೆ 4 ಬಾರಿ ಚುನಾವಣೆಯಲ್ಲಿ ಈ ಜಿಲ್ಲೆಯ ಜನ ನನ್ನನ್ನು ಗೆಲ್ಲಿಸಿದ್ದಾರೆ. ಅಲ್ಪ ಸಂಖ್ಯಾತನಾಗಿದ್ದರೂ ಪ್ರಾಮಾಣಿಕತೆ ಸೇವೆ ಗುರುತಿಸಿದ್ದಾರೆ ಎಂದು ಹೇಳಿದರು.

    2008ರಲ್ಲಿ ಬಿಜೆಪಿ ಸರ್ಕಾರದಲ್ಲಿ ನಾನು ಸಚಿವ ಆಗಿದ್ದೆ. ಆಗ ಸಿಬಿಐ ನನ್ನ ವಿರುದ್ಧ ಪ್ರಕರಣ ದಾಖಲು ಮಾಡಿತ್ತು. ಬಿಜೆಪಿ ನನ್ನನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿತ್ತಾ? ಕೇವಲ ರಾಜಕಾರಣಕ್ಕಾಗಿ ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    ಈ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ನಾನು ಪಾರದರ್ಶಕವಾಗಿದ್ದೇನೆ. ನನಗೆ ಭಯವೇಕೆ? ಇಂದು ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವರ ದರ್ಶನ ಮಾಡಿ, ಬರಗಾಲ ತೊಲಗಲಿ ಎಂದು ಪ್ರಾರ್ಥನೆ ಮಾಡಿರುವುದಾಗಿ ಸಚಿವರು ತಿಳಿಸಿದರು. ಇದನ್ನೂ ಓದಿ: 8 ಎಕರೆ ಜಮೀನು ಖರೀದಿ, ಪೆಟ್ರೋಲ್ ಬಂಕ್ ನಿರ್ಮಾಣ – ಅಭಿನವ ಹಾಲಾಶ್ರೀ ಈಗ ನಾಪತ್ತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಚಿವ ಡಿ.ಸುಧಾಕರ್‌ಗೆ ರಿಲೀಫ್ – ಜಾತಿ ನಿಂದನೆ ಆರೋಪ ಪ್ರಕರಣಕ್ಕೆ ಧಾರವಾಡ ಹೈಕೋರ್ಟ್ ತಡೆ

    ಸಚಿವ ಡಿ.ಸುಧಾಕರ್‌ಗೆ ರಿಲೀಫ್ – ಜಾತಿ ನಿಂದನೆ ಆರೋಪ ಪ್ರಕರಣಕ್ಕೆ ಧಾರವಾಡ ಹೈಕೋರ್ಟ್ ತಡೆ

    ಧಾರವಾಡ: ಸಚಿವ ಡಿ.ಸುಧಾಕರ್ (D.Sudhakar) ವಿರುದ್ಧದ ದಲಿತ ದೌರ್ಜನ್ಯ ಮತ್ತು ಭೂಹಗರಣ ಆರೋಪ ಪ್ರಕರಣದಲ್ಲಿ ಧಾರವಾಡ ಹೈಕೋರ್ಟ್ (Dharwad High Court) ತಡೆ ನೀಡಿದೆ. ಸಚಿವ ಸುಧಾಕರ್‌ಗೆ ಸದ್ಯ ರಿಲೀಫ್ ಸಿಕ್ಕಿದೆ.

    ಭೂಕಬಳಿಕೆ, ಹಲ್ಲೆ, ಜಾತಿ ನಿಂದನೆ ಆರೋಪ ಹೊತ್ತಿದ್ದ ಸಚಿವ ಸುಧಾಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್‌ನಲ್ಲಿ ಇಂದು (ಶುಕ್ರವಾರ) ವಿಚಾರಣೆ ನಡೆಯಿತು. ಪ್ರಕರಣಕ್ಕೆ ಕೋರ್ಟ್ ತಡೆ ನೀಡಿದೆ. ಅಲ್ಲದೇ ದೂರು ದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಯಲಹಂಕ ದೊಡ್ಡದೇನಲ್ಲ ನನಗೆ. ಬಾರಲೇ ಅಲ್ಲಿಗೆ ಬರೀನಿ ಬಾ: ಸಚಿವ ಸುಧಾಕರ್‌ ಧಮ್ಕಿ

    ದಲಿತ ದೌರ್ಜನ್ಯ, ಭೂಹಗರಣ ಆರೋಪದಲ್ಲಿ ಸಚಿವ ಡಿ.ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ವಿಪಕ್ಷಗಳು ಒತ್ತಾಯಿಸಿದ್ದರು. ಅಲ್ಲದೇ ಸಚಿವ ಸುಧಾಕರ್ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದರು.

    ಮುನಿಯಮ್ಮ ಎಂಬುವವರ ಜಾಗ ಕಬಳಿಕೆ ಮಾಡಿಕೊಂಡು ಸಚಿವ ಹಾಗೂ ಬೆಂಬಲಿಗರಿಂದ ಅವರ ಮೇಲೆ ಜಾತಿ ನಿಂದನೆ ಮಾಡಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ವಿಚಾರವಾಗಿ ಘಟನಾ ಸ್ಥಳಕ್ಕೆ ತೆರಳಿ ಪೊಲೀಸರು ಮಹಜರು ಮಾಡಿದ್ದರು. ಈ ಸಂಬಂಧ ತನಿಖೆ ಮುಂದುವರಿದಿತ್ತು. ಇದನ್ನೂ ಓದಿ: ಏಕಕಾಲದಲ್ಲಿ ವಿಶ್ವಾದ್ಯಂತ ಸಂವಿಧಾನ ಪೀಠಿಕೆ ವಾಚನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಚಿವ ಡಿ.ಸುಧಾಕರ್ ಜಾತಿ ನಿಂದನೆ ಪ್ರಕರಣ – ತನಿಖೆ ಚುರುಕು, ಪೊಲೀಸರಿಂದ ಸ್ಥಳ ಮಹಜರು

    ಸಚಿವ ಡಿ.ಸುಧಾಕರ್ ಜಾತಿ ನಿಂದನೆ ಪ್ರಕರಣ – ತನಿಖೆ ಚುರುಕು, ಪೊಲೀಸರಿಂದ ಸ್ಥಳ ಮಹಜರು

    ಬೆಂಗಳೂರು: ಯಲಹಂಕದಲ್ಲಿ (Yelahanka) ನಡೆದಿದೆ ಎನ್ನಲಾದ ಜಾತಿ ನಿಂದನೆ ಹಾಗೂ ಭೂ ಕಬಳಿಕೆ ವಿಚಾರದಲ್ಲಿ ಸಚಿವ ಡಿ.ಸುಧಾಕರ್ (D.Sudhakar) ವಿರುದ್ಧದ ತನಿಖೆ ಚುರುಕುಗೊಂಡಿದೆ. ಈ ವಿಚಾರವಾಗಿ ಯಲಹಂಕ ಪೊಲೀಸರು (Police) ಸ್ಥಳ ಮಹಜರು ಮಾಡಿದ್ದಾರೆ. ಅಲ್ಲದೇ ಪ್ರಕರಣ ಸಂಬಂಧ ಸಚಿವರು ಸೇರಿದಂತೆ ಹಲವರಿಗೆ ನೋಟಿಸ್ ನೀಡಲು ತಯಾರಿ ನಡೆಸಿದ್ದಾರೆ.

    ಮುನಿಯಮ್ಮ ಎಂಬುವವರ ಜಾಗದ ಕಬಳಿಕೆ ಮಾಡಿಕೊಂಡು ಸಚಿವ ಹಾಗೂ ಬೆಂಬಲಿಗರಿಂದ ಅವರ ಮೇಲೆ ಜಾತಿ ನಿಂದನೆ ಮಾಡಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಚಾರವಾಗಿ ಘಟನಾ ಸ್ಥಳಕ್ಕೆ ತೆರಳಿ ಪೊಲೀಸರು ಮಹಜರು ಮಾಡಿದ್ದಾರೆ. ಪ್ರಕರಣದ ತನಿಖೆ ತೀವ್ರಗೊಳಿಸಿದ್ದು ಅಗತ್ಯ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ. ಇದನ್ನೂ ಓದಿ: ದಲಿತ ಕುಟುಂಬಕ್ಕೆ ಧಮ್ಕಿ ಆರೋಪ – ವೀಡಿಯೋ ಫೇಕ್ ಎಂದ ಡಿ ಸುಧಾಕರ್

    ಸಚಿವ ಸೇರಿ ಎಫ್‍ಐಆರ್‌ನಲ್ಲಿ ಉಲ್ಲೇಖಿಸಿರುವ ಹಾಗೂ ದೂರು ದಾಖಲಿಸಿದವರು ಸೇರಿದಂತೆ ಸ್ಥಳದಲ್ಲಿದ್ದ ವ್ಯಕ್ತಿಗಳಿಗೂ ನೋಟಿಸ್ ನೀಡಿ ದಾಖಲೆಗಳನ್ನು ಒದಗಿಸುವಂತೆ ಸೂಚಿಸಲು ತೀರ್ಮಾನಿಸಲಾಗಿದೆ. ಈ ವಿಚಾರವಾಗಿ ವೀಡಿಯೋದಲ್ಲಿರುವ ವ್ಯಕ್ತಿಗಳ ಗುರುತು ಪತ್ತೆಗೆ ತನಿಕಾಧಿಕಾರಿಗಳು ಮುಂದಾಗಿದ್ದಾರೆ. ಅಲ್ಲದೇ ಜಾಗದಲ್ಲಿ ಬಾಡಿಗೆಗೆ ಇದ್ದವರನ್ನು ಸಹ ವಿಚಾರಣೆ ನಡೆಸಲು ತೀರ್ಮಾನಿಸಲಾಗಿದೆ. ಬಾಡಿಗೆ ಹಣ ಯಾರಿಗೆ ನೀಡುತ್ತಿದ್ದರು? ಯಾರ ಹೆಸರಲ್ಲಿ ಬಾಡಿಗೆ ನೀಡುತ್ತಿದ್ದರು? ಎಂದು ಮಾಹಿತಿ ಪಡೆಯಲು ಬಾಡಿಗೆದಾರರಿಗೂ ನೋಟಿಸ್ ನೀಡಲು ನಿರ್ಧರಿಸಲಾಗಿದೆ.

    ವೀಡಿಯೋದಲ್ಲಿರುವ ವ್ಯಕ್ತಿಗಳಿಗೂ ದೂರುದಾರರ ನಡುವಿನ ಗಲಾಟೆಗೆ ಕಾರಣ ಏನು? ಸಚಿವ ಮತ್ತು ವೀಡಿಯೋದಲ್ಲಿರುವ ವ್ಯಕ್ತಿಗಳ ನಡುವಿನ ಸಂಬಂಧ ಏನು? ಘಟನೆ ವೇಳೆ ಸಚಿವರು ಸ್ಥಳದಲ್ಲಿ ಇದ್ರಾ ಇಲ್ವಾ? ಸುಧಾಕರ್ ಅವರ ಕುಮ್ಮಕ್ಕಿನಿಂದ ಗಲಾಟೆ ನಡೆದಿದೆಯೇ? ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

    ಸಚಿವರಿಂದ ದೌರ್ಜನ್ಯಕ್ಕೆ ಒಳಗಾಗಿದ್ದಾರೆನ್ನಲಾದ ಕುಟುಂಬವನ್ನು ಗುರುವಾರ ಬಿಜೆಪಿ ನಾಯಕರು ಭೇಟಿಯಾಗಲು ಮುಂದಾಗಿದ್ದಾರೆ. ಮಾಜಿ ಸಚಿವ ಗೋವಿಂದ ಕಾರಜೋಳ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ನಿಯೋಗದಿಂದ ಭೇಟಿಯಾಗಲಿದೆ. ಇದನ್ನೂ ಓದಿ: ಡಿ ಸುಧಾಕರ್ ರಾಜೀನಾಮೆ ಪಡೆದು ಬಂಧನ ಮಾಡಿ: ಹೆಚ್‌ಡಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಿ ಸುಧಾಕರ್ ರಾಜೀನಾಮೆ ಪಡೆದು ಬಂಧನ ಮಾಡಿ: ಹೆಚ್‌ಡಿಕೆ

    ಡಿ ಸುಧಾಕರ್ ರಾಜೀನಾಮೆ ಪಡೆದು ಬಂಧನ ಮಾಡಿ: ಹೆಚ್‌ಡಿಕೆ

    ಬೆಂಗಳೂರು: ದಲಿತರ ಮೇಲೆ ದೌರ್ಜನ್ಯ ಮಾಡಿರೋ ಸಚಿವ ಡಿ ಸುಧಾಕರ್ ಅವರನ್ನು (D Sudhakar) ಸಚಿವ ಸಂಪುಟದಿಂದ ತೆಗೆದು ಹಾಕಿ ಕೂಡಲೇ ಅವರ ಬಂಧನ ಮಾಡಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಸಚಿವ ಸುಧಾಕರ್ ಮೇಲೆ ದೂರು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಸರ್ಕಾರ ದಲಿತ ಉದ್ಧಾರ ಮಾಡ್ತೀವಿ ಅಂತ ಉದ್ದುದ್ದ ಭಾಷಣ ಮಾಡ್ತಾರೆ. ದಲಿತರ ರಕ್ಷಣೆಗೆ ಬಿಲ್ ತಂದಿದ್ದೇವೆ ಅಂತಾರೆ. ಇದೇನಾ ನಿಮ್ಮ ದಲಿತರ ರಕ್ಷಣೆ ಮಾಡೋ ವೈಖರಿ? ಸಚಿವರು ಮಚ್ಚು ತಗೊಂಡು ಹೆಣ್ಣು ಮಕ್ಕಳಿಗೆ ಧಮ್ಕಿ ಹಾಕ್ತಾರೆ ಅಂದರೆ ಇದು ಎಂತಹ ವ್ಯವಸ್ಥೆ ಅಂತ ಕಿಡಿಕಾರಿದರು.

    ಅಧಿವೇಶನದಲ್ಲಿ ಉಪ ಸಭಾಧ್ಯಕ್ಷರ ಮೇಲೆ ಪೇಪರ್ ಎಸೆದಿದ್ದಕ್ಕೆ ಸಿಎಂ, ಕೃಷ್ಣಭೈರೇಗೌಡ ಉದ್ದುದ್ದವಾಗಿ ಮಾತಾಡಿದ್ರು. ಈಗ ದಲಿತರ ರಕ್ಷಣೆ ಮಾಡೋದು ಹೀಗೆನಾ ಅಂತ ಪ್ರಶ್ನೆ ಮಾಡಿದ್ರು. ದೂರು ದಾಖಲಾದ ಕೂಡಲೇ ಸಚಿವ ಸುಧಾಕರ್ ಯಾವ ಯಾವ ಸಚಿವರ ಮನೆಗೆ ಹೋಗಿದ್ರು ಗೊತ್ತಿದೆ. ಗೃಹ ಸಚಿವರ ಮನೆಗೆ ಹೋಗಿದ್ದು ಕೇಸ್ ಮುಚ್ಚಿ ಹಾಕಲು ಅಲ್ಲವಾ ಅಂತ ಪ್ರಶ್ನೆ ಮಾಡಿದ್ರು. ಎಫ್‌ಐಆರ್ ಹಾಕಿದ ಅಧಿಕಾರಿಯನ್ನು ಬೆದರಿಸೋ ಕೆಲಸ ಮಾಡ್ತಿದ್ದಾರೆ. ಯಾಕೆ ಕೇಸ್ ಹಾಕಿದೆ ಅಂತ ಒತ್ತಡ ಮಾಡ್ತಿದ್ದಾರೆ ಅಂತ ಆರೋಪ ಮಾಡಿದ್ರು. ಇದನ್ನೂ ಓದಿ: ದಲಿತ ಕುಟುಂಬಕ್ಕೆ ಧಮ್ಕಿ ಆರೋಪ – ವೀಡಿಯೋ ಫೇಕ್ ಎಂದ ಡಿ ಸುಧಾಕರ್

    ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸಚಿವರನ್ನು ಒಂದು ನಿಮಿಷವೂ ಸಂಪುಟದಲ್ಲಿ ಇರಿಸಿಕೊಳ್ಳಬಾರದು. ಕೂಡಲೇ ರಾಜೀನಾಮೆ ಪಡೆದು ಅವರನ್ನು ಬಂಧನ ಮಾಡಬೇಕು ಅಂತ ಸಿಎಂ ಸಿದ್ದರಾಮಯ್ಯರನ್ನು ಆಗ್ರಹ ಮಾಡಿದ್ರು. ಇದು ದಲಿತ ವಿರೋಧ ಸರ್ಕಾರ, ಜನ ವಿರೋಧ ಸರ್ಕಾರ ಅಂತ ಕಿಡಿಕಾರಿದರು. ಇದನ್ನೂ ಓದಿ: ಯಲಹಂಕ ದೊಡ್ಡದೇನಲ್ಲ ನನಗೆ. ಬಾರಲೇ ಅಲ್ಲಿಗೆ ಬರೀನಿ ಬಾ: ಸಚಿವ ಸುಧಾಕರ್‌ ಧಮ್ಕಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಲಿತ ಕುಟುಂಬಕ್ಕೆ ಧಮ್ಕಿ ಆರೋಪ – ವೀಡಿಯೋ ಫೇಕ್ ಎಂದ ಡಿ ಸುಧಾಕರ್

    ದಲಿತ ಕುಟುಂಬಕ್ಕೆ ಧಮ್ಕಿ ಆರೋಪ – ವೀಡಿಯೋ ಫೇಕ್ ಎಂದ ಡಿ ಸುಧಾಕರ್

    ಬೆಂಗಳೂರು: ದೌರ್ಜನ್ಯ, ವಂಚನೆ, ಹಲ್ಲೆ ಮತ್ತು ಜಾತಿ ನಿಂದನೆ ಆರೋಪದಡಿ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ. ಸುಧಾಕರ್ (D Sudhakar) ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ಸುಧಾಕರ್ ಅವರು ಮಹಿಳೆಯೊಬ್ಬರಿಗೆ ಆವಾಜ್ ಹಾಕಿರುವ ವೀಡಿಯೋ (Video) ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ವೀಡಿಯೋ ಫೇಕ್ ಎಂದು ಅವರು ತಿಳಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಡಿ ಸುಧಾಕರ್, ನಾನು ಯಾರಿಗೂ ಧಮ್ಕಿ ಹಾಕಿಲ್ಲ, ಯಾವುದೇ ಕಾನೂನು ಹೊರತುಪಡಿಸಿ ವ್ಯವಹಾರ ನಡೆದಿಲ್ಲ. ಇದು ಕಂಪನಿಗೆ ಸಂಬಂಧಿಸಿದ ವ್ಯವಹಾರ. ಕಂಪನಿಯಲ್ಲಿ ನಾನು ನಿರ್ದೇಶಕ ಮಾತ್ರ. ವೈಯಕ್ತಿಕವಾಗಿ ಇದಕ್ಕೂ ನನಗೂ ಸಂಬಂಧವಿಲ್ಲ. ಮಂತ್ರಿ ಎಂಬ ಕಾರಣಕ್ಕಾಗಿ ನನ್ನ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

    ವೀಡಿಯೋ ವಿಚಾರವಾಗಿ ಮಾತನಾಡಿದ ಅವರು, ದೂರು ನೀಡಿರುವ ಸುಬ್ಬಮ್ಮ ಅವರನ್ನು ನಾನು ಭೇಟಿ ಮಾಡಿಯೇ ಸುಮಾರು ವರ್ಷಗಳು ಆಗಿವೆ. ನಾನು ಅವರಿರೋ ಜಾಗಕ್ಕೂ ಹೋಗಿಲ್ಲ. ವೈರಲ್ ಆಗಿರೋ ವೀಡಿಯೋವನ್ನು ಈಗಿನ ಟೆಕ್ನಾಲಜಿ ಬಳಸಿ ತಿರುಚಲಾಗಿದೆ. ಇದೆಲ್ಲಾ ಶುದ್ಧ ಸುಳ್ಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯಲಹಂಕ ದೊಡ್ಡದೇನಲ್ಲ ನನಗೆ. ಬಾರಲೇ ಅಲ್ಲಿಗೆ ಬರೀನಿ ಬಾ: ಸಚಿವ ಸುಧಾಕರ್‌ ಧಮ್ಕಿ

    ಈಗ ಯಾರನ್ನು ಹೇಗೆ ಬೇಕೋ ಹಾಗೆ ವೀಡಿಯೋಗಳನ್ನು ಎಡಿಟ್ ಮಾಡಿಕೊಳ್ಳುತ್ತಾರೆ. ನಾನು ಅವರನ್ನು 7-8 ವರ್ಷಗಳ ಹಿಂದೆ ಭೇಟಿ ಮಾಡಿದ್ದೆ. ಅಷ್ಟು ವರ್ಷಗಳ ಹಿಂದೆ ಏನಾಗಿತ್ತೋ ನನಗೂ ನೆನಪಿಲ್ಲ. ಇದು ಸುಮಾರು 20 ವರ್ಷಗಳ ಹಿಂದೆ ನಡೆದ ವ್ಯಾಪಾರ. ಕಾನೂನು ಬದ್ಧವಾಗಿ ನನ್ನ ಕಂಪನಿ ಅದನ್ನು ಖರೀದಿ ಮಾಡಿತ್ತು. ಕಾನೂನು ಬಿಟ್ಟು ಯಾವುದೇ ವ್ಯವಹಾರ ನಡೆಯಲ್ಲ, ನಾನು ಆ ರೀತಿ ಮಾಡಿಲ್ಲ. ಅವರು ಹಲವು ವರ್ಷಗಳ ಹಿಂದೆ ಕಚೇರಿಗೆ ಯಾವಾಗಲೂ ಬರುತ್ತಿದ್ದರು. ಯಾವಾಗ ಹೇಗೆ ವೀಡಿಯೋ ಮಾಡಿದ್ದಾರೋ ಗೊತ್ತಿಲ್ಲ. ನಾನು ಆ ರೀತಿ ಮಾತಾಡೋ ವ್ಯಕ್ತಿಯೂ ಅಲ್ಲ ಎಂದಿದ್ದಾರೆ.

    ನನ್ನ 60 ವರ್ಷದ ಇತಿಹಾಸದಲ್ಲಿ ಎಲ್ಲಿಯೂ ಅಂತಹ ಕಳಂಕ ಇಲ್ಲ. ಈಗ ಸಚಿವನಾಗಿದ್ದೇನೆ ಎಂಬ ಕಾರಣಕ್ಕೆ ಈ ರೀತಿ ತೇಜೋವಧೆ ಮಾಡಲಾಗುತ್ತಿದೆ. ಆ ರೀತಿ ಮಾತನಾಡೋ ಸಂಸ್ಕೃತಿಯಿಂದ ನಾನು ಬಂದಿಲ್ಲ. ನಾವು ಧರ್ಮವನ್ನು ಎತ್ತಿಹಿಡಿಯೋ ಜೈನ ಧರ್ಮದಲ್ಲಿ ಹುಟ್ಟಿದ್ದೇನೆ. ಅಹಿಂಸಾ ಮಾರ್ಗದಲ್ಲಿ ಹೋಗಿದ್ದೇನೆ. ಹಿಂಸೆಯಲ್ಲಿ ನನಗೆ ನಂಬಿಕೆ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ. ಸತ್ಯಾಂಶ ಹೊರ ಬರಲಿ, ನನಗೆ ನ್ಯಾಯ ದೊರೆಯಲಿ. ನಾನು ತಪ್ಪು ಮಾಡಿದ್ದು ನಿಜವೇ ಆಗಿದ್ರೆ ಶಿಕ್ಷೆ ಆಗಲಿ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಅನಿಷ್ಟ ಸರ್ಕಾರದ ವಿರುದ್ಧ ಹೋರಾಟಕ್ಕೆ ಮೈತ್ರಿ ಅನಿವಾರ್ಯ: ಬೊಮ್ಮಾಯಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಲಹಂಕ ದೊಡ್ಡದೇನಲ್ಲ ನನಗೆ. ಬಾರಲೇ ಅಲ್ಲಿಗೆ ಬರೀನಿ ಬಾ: ಸಚಿವ ಸುಧಾಕರ್‌ ಧಮ್ಕಿ

    ಯಲಹಂಕ ದೊಡ್ಡದೇನಲ್ಲ ನನಗೆ. ಬಾರಲೇ ಅಲ್ಲಿಗೆ ಬರೀನಿ ಬಾ: ಸಚಿವ ಸುಧಾಕರ್‌ ಧಮ್ಕಿ

    – ಸುಧಾಕರ್‌ ವಿರುದ್ಧ ಜಾತಿ ನಿಂದನೆ ಕೇಸ್‌

    ಬೆಂಗಳೂರು: “ಯಲಹಂಕ ದೊಡ್ಡದೇನಲ್ಲ ನನಗೆ. ಬಾರಲೇ ಅಲ್ಲಿಗೆ ಬರೀನಿ ಬಾ. ಯಾವನ್ ನನ್ನತ್ರ ಗಾಂಚಾಲಿ, ಗೀಂಚಾಲಿ ನಡೆಯಲ್ಲ.ಎಲ್ಲದಕ್ಕೂ ರೆಡಿಯಾಗಿ ಬಂದಿರ್ತೀವಿ. ಸತ್ತೋಗಿರೋ ಪ್ರಾಪರ್ಟಿ ಉಳಿಸಿದ್ದೀನಿ. ಏ ಕೇಳಮ್ಮಾ ಸುಮ್ಮನೇ ಇಲ್ಲಿ” ಇದು ಸಿದ್ದರಾಮಯ್ಯ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್‌ (D Sudhakar) ಅವರು ಮಹಿಳೆಗೆ ಅವಾಜ್‌ ಹಾಕಿದ ಪರಿ.

    ದೌರ್ಜನ್ಯ, ವಂಚನೆ, ಹಲ್ಲೆ ಮತ್ತು ಜಾತಿ ನಿಂದನೆ ಆರೋಪದಡಿ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್‌ (Sudhkar) ಸೇರಿ ಮೂವರ ವಿರುದ್ಧ ಯಲಹಂಕ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಅವರು ಮಹಿಳಿಗೆ ಅವಾಜ್‌ ಹಾಕಿದ ವಿಡಿಯೋ ಲಭ್ಯವಾಗಿದೆ.  ಇದನ್ನೂ ಓದಿ: ಡಿಕೆ ಬ್ರದರ್ಸ್‌ಗೆ ಠಕ್ಕರ್‌ – ಲೋಕಸಭೆಗೆ ಹೆಚ್‌ಡಿಕೆ ಸ್ಪರ್ಧೆ?

     

    ಯಲಹಂಕ ನಿವಾಸಿ ಸುಬ್ಬಮ್ಮ ಎಂಬುವವರು ನೀಡಿದ ದೂರಿನ ಮೇರೆಗೆ ಸೆವೆನ್‌ ಹಿಲ್ಸ್‌ ಡೆವಲಪರ್ಸ್‌ ಮತ್ತು ಟ್ರೇಡ​ರ್ಸ್‌ ಪಾಲುದಾರರಾದ ಸಚಿವ ಡಿ.ಸುಧಾಕರ್‌, ಶ್ರೀನಿವಾಸ್‌, ಭಾಗ್ಯಮ್ಮ ಎಂಬುವವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಾದ ಬೆನ್ನಲ್ಲೇ ಎಸಿಪಿ ಸುಧಾಕರ್‌ಗೆ ಕರೆ ಮಾಡಿದ್ದು ದಾಖಲಾತಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಸೆವೆನ್‌ ಹಿಲ್ಸ್‌ ಡೆವಲಪರ್ಸ್‌ ಮತ್ತು ಟ್ರೇಡರ್ಸ್‌ನವರು (Seven Hills Developers and Traders) ಯಲಹಂಕ ಗ್ರಾಮದ ಸರ್ವೆ ನಂಬರ್‌ 108/1ರ 1.30 ಎಕರೆ ಜಮೀನನ್ನು ಮೋಸದಿಂದ ಕಬಳಿಕೆ ಮಾಡಿದ್ದಾರೆ. ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿರುವಾಗ ಗುಂಪು ಕಟ್ಟಿಕೊಂಡು ಬಂದು ದೌರ್ಜನ್ಯ ಎಸೆಗಿದ್ದಾರೆ. ಮಹಿಳೆಯರನ್ನು ಕರೆದುಕೊಂಡು ಬಂದು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.


    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]