Tag: D Notification

  • ಕ್ವಾರಂಟೈನ್ ನೆಪ ಹೇಳಿರೋ ಹೆಚ್‍ಡಿಕೆಗೆ ಕೋರ್ಟ್ ಚಾಟಿ – ಪ್ರಚಾರಕ್ಕೆ ಹೋದ್ರೆ ಅರೆಸ್ಟ್ ವಾರೆಂಟ್

    ಕ್ವಾರಂಟೈನ್ ನೆಪ ಹೇಳಿರೋ ಹೆಚ್‍ಡಿಕೆಗೆ ಕೋರ್ಟ್ ಚಾಟಿ – ಪ್ರಚಾರಕ್ಕೆ ಹೋದ್ರೆ ಅರೆಸ್ಟ್ ವಾರೆಂಟ್

    ಬೆಂಗಳೂರು: ಹಲಗೆ-ವಡೇರಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಗೈರು ಹಾಜರಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶ ಶ್ರೀಧರ್ ಗೋಪಾಲಕೃಷ್ಣ ಗರಂ ಆಗಿದ್ದಾರೆ.

    ಖುದ್ದು ಹಾಜರಿಗೆ ಸೂಚಿಸಿದರೂ, ಹೋಂ ಕ್ವಾರಂಟೈನ್ ಕಾರಣ ನೀಡಿ ಕುಮಾರಸ್ವಾಮಿ ಇಂದಿನ ವಿಚಾರಣೆಗೆ ಗೈರು ಹಾಜರಾಗಿದ್ರು. ಇದರಿಂದ ಸಿಟ್ಟಾದ ನ್ಯಾಯಾಧೀಶರು, ಮುಂದಿನ ವಿಚಾರಣೆ ನಡೆಯುವ ಏಪ್ರಿಲ್ 17ರವರೆಗೆ ಕುಮಾರಸ್ವಾಮಿ ಯಾವುದೇ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳಬಾರದು. ನಾನು ಮನೆಗೆ ಹೋಗಿ ಟಿವಿ ನೋಡುತ್ತೇನೆ, ಪತ್ರಿಕೆ ಓದುತ್ತೇನೆ. ಎಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುತ್ತೇನೆ. ಎಲ್ಲಾದ್ರೂ ಕುಮಾರಸ್ವಾಮಿ ಕಾಣಿಸಿಕೊಂಡ್ರೇ ಅರೆಸ್ಟ್ ವಾರೆಂಟ್ ಜಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಖುದ್ದು ಹಾಜರಿಗೆ ಸಮನ್ಸ್ ನೀಡಿದ್ರೂ ಅವರು ಗೈರಾಗಿದ್ದಾರೆ. ಕೋರ್ಟ್ ಆದೇಶಕ್ಕೆ ಬೆಲೆ ಇಲ್ವಾ? ಗೌರವ ಕೊಡುವುದು ಬೇಡ್ವಾ ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ರು. ಮಾಜಿ ಪ್ರಧಾನಿ ದೇವೇಗೌಡ ದಂಪತಿಗೆ ಕೊರೊನಾ ಹಿನ್ನೆಲೆ ಹೆಚ್‍ಡಿಕೆ ಹೋಂ ಕ್ವಾರಂಟೈನ್‍ನಲ್ಲಿದ್ದಾರೆ ಎಂದು ಕೋರ್ಟ್‍ಗೆ ವಕೀಲರು ಮಾಹಿತಿ ನೀಡಿದ್ರು. ಕೋರ್ಟ್‍ನ ಈ ಆದೇಶದಿಂದಾಗಿ ಉಪ ಚುನಾವಣೆಯ ಪ್ರಚಾರದಿಂದ ಹೆಚ್‍ಡಿಕೆ ದೂರ ಉಳಿಯಬೇಕಾಗುತ್ತದೆ.

  • ಬಿಎಸ್‍ವೈ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಹೊಸ ಟ್ವಿಸ್ಟ್!

    ಬಿಎಸ್‍ವೈ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಹೊಸ ಟ್ವಿಸ್ಟ್!

    ಬೆಂಗಳೂರು: ಶಿವರಾಮ್ ಕಾರಂತ್ ಬಡಾವಣೆಯಲ್ಲಿ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ದಿನಕ್ಕೊಂದು ಹೊಸ ಟ್ವಿಸ್ಟ್ ಸಿಗುತ್ತಿದೆ. ಇಡೀ ಪ್ರಕರಣವನ್ನು ಬೆನ್ನಟ್ಟಿದ ಪಬ್ಲಿಕ್ ಟಿವಿಗೆ ಮತ್ತಷ್ಟು ಸ್ಪೋಟಕ ಮಾಹಿತಿಗಳು ದೊರೆತಿದೆ.

    ಕೇವಲ ರಾಜಕೀಯ ದುರುದ್ದೇಶದಿಂದಲೇ ಬಿಎಸ್‍ವೈ ವಿರುದ್ಧ ಎಫ್‍ಐಆರ್ ದಾಖಲಿಸಿರೋ ಬಗ್ಗೆ ದಾಖಲಾತಿಗಳು ದೊರೆತಿವೆ.

    2013 ರಲ್ಲಿ ಇಡೀ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಂದಿನ ಅಪರ ಮುಖ್ಯಕಾರ್ಯದರ್ಶಿ ಆಗಿದ್ದ ಅಭಿವೃದ್ಧಿ ಆಯುಕ್ತ ಉಮೇಶ್ ಅವರು ಸರ್ಕಾರಕ್ಕೆ 14 ಪುಟಗಳ ರಹಸ್ಯ ವರದಿಯೊಂದನ್ನು ಸಲ್ಲಿಸಿದ್ದರು. ಈ ವರದಿಯಲ್ಲಿ ಡಿ ನೋಟಿಫಿಕೇಷನ್‍ಗೆ ಸಹಕಾರ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಿ ಅಂತ ರಹಸ್ಯ ವರದಿಯಲ್ಲಿ ತಿಳಿಸಿಲಾಗಿದೆ. ಆದರೆ ಸರ್ಕಾರ ಅಂದಿನಿಂದ ಇಂದಿನವರೆಗೆ ಸುಮ್ಮನಿದ್ದು, ಆಗಸ್ಟ್ ತಿಂಗಳಲ್ಲಿ ಡಿಕೆಶಿ ಮನೆ ಮೇಲೆ ದಾಳಿ ನಡೆಯುತ್ತಿದ್ದಂತೆ ಪ್ರಕರಣದ ಬಗ್ಗೆ ಅತಿಯಾದ ಕಾಳಜಿ ತೋರಿಸುತ್ತಿದೆ.

    ಡಿ ನೋಟಿಫಿಕೇಷನ್ ಪ್ರಕರಣದ ಬಗ್ಗೆ ಜೂನ್ 6 ರಂದೇ ಜನಸಮಾನ್ಯರ ವೇದಿಕೆಯ ಅಧ್ಯಕ್ಷ ಅಯ್ಯಪ್ಪ ದೂರು ನೀಡಿದ್ರು. ಆದರೆ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ ಡಿಕೆಶಿ ಮೆನೆ ದಾಳಿ ಆಗುತ್ತಿದ್ದಂತೆ ಬಿಜೆಪಿ ರಾಜ್ಯಧ್ಯಕ್ಷರ ವಿರುದ್ಧ ಎಸಿಬಿಯ ಮೂಲಕ ತಿರುಗೇಟು ನೀಡಿದೆ.