Tag: D.K Sudhakar

  • 2,500 ಅಡಿ ಉದ್ದದ ತಿರಂಗಾ ವಾಕಥಾನ್‍ಗೆ ಸುಧಾಕರ್ ಚಾಲನೆ

    2,500 ಅಡಿ ಉದ್ದದ ತಿರಂಗಾ ವಾಕಥಾನ್‍ಗೆ ಸುಧಾಕರ್ ಚಾಲನೆ

    ಚಿಕ್ಕಬಳ್ಳಾಪುರ: 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಅಂಗವಾಗಿ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಜನರಲ್ಲಿ ಜಾಗೃತಿ ಹಾಗೂ ಪ್ರೇರೇಪಣೆ ಮೂಡಿಸುವ ಸಲುವಾಗಿ ಇಂದು ಚಿಕ್ಕಬಳ್ಳಾಪುರ ನಗರದಲ್ಲಿ 2,500 ಅಡಿ ಉದ್ದದ ತಿರಂಗಾ ಯಾತ್ರೆ ನಡೆಸಲಾಯಿತು.

    ಚಿಕ್ಕಬಳ್ಳಾಪುರ ಜಿಲ್ಲಾಡಳಿತ ವತಿಯಿಂದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ನೇತೃತ್ವದಲ್ಲಿ 2,500 ಅಡಿ ಉದ್ದದ ತ್ರಿವರ್ಣ ಧ್ವಜದ ವಾಕಥಾನ್ ನಡೆಸಲಾಗಿಯಿತು. ನಗರದ ಎಂಜಿ ರಸ್ತೆಯ ಜೈ ಭೀಮ್ ವಿದ್ಯಾರ್ಥಿನಿಲಯದಿಂದ ಬಿಬಿರಸ್ತೆಯ ಮೂಲಕ ಸಾಗಿ ಒಕ್ಕಲಿಗರ ಕಲ್ಯಾಣಮಂಟಪದ ಬಳಿ ವಾಕಥಾನ್ ಅಂತ್ಯವಾಯಿತು. ಈ ವಾಕಥಾನ್‍ನಲ್ಲಿ ಸಾವಿರಾರು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದನ್ನೂ ಓದಿ: ಊಟ ನೀಡೋ ವಿಚಾರಕ್ಕೆ ಜಗಳ – ಬಾಮೈದನಿಂದಲೇ ಯೋಧನ ಕೊಲೆ

    ಆಗಸ್ಟ್ 13 ರಿಂದ 15 ರವರೆಗೆ ದೇಶದಲ್ಲಿ ಹರ್ ಘರ್ ತಿರಂಗಾ ಅಭಿಯಾನ ನಡೆಯಲಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಇಂದು ಆಯೋಜಿಸಿದ್ದ ವಾಕಥಾನ್ ಇಡೀ ನಗರದಲ್ಲಿ ಸಂಚಲನವನ್ನೇ ಮೂಡಿಸಿತ್ತು. ಸುಮಾರು 2,500 ಅಡಿಗಳ ಉದ್ದದ ರಾಷ್ಟ್ರಧ್ವಜದೊಂದಿಗೆ ಹೆಜ್ಜೆ ಹಾಕಿದ ಸಾವಿರಾರು ಶಾಲಾ-ಕಾಲೇಜ್ ವಿದ್ಯಾರ್ಥಿಗಳೊಂದಿಗೆ ಬೆಳ್ಳಂ ಬೆಳಗ್ಗೆ ಆರೋಗ್ಯ ಸಚಿವರು ಹೆಜ್ಜೆ ಹಾಕಿ ಹುರುಪು ತುಂಬಿದರು. ಹೆಜ್ಜೆ ಹೆಜ್ಜೆಗೂ ಭಾರತ್ ಮಾತಾಕಿ ಜೈ ಉದ್ಘೋಷ ಅನುಕರಣಿಸುತ್ತಿದ್ದ ಮೆರವಣಿಗೆಯಲ್ಲಿ ಎಲ್ಲರ ಕೈಯಲ್ಲೂ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿದ್ದವು. ಬ್ಯಾಂಡ್ ಸೆಟ್‌ಗಳು, ಡಿಜೆ ಶಬ್ದದ ಅಬ್ಬರದ ನಡುವೆ ರಾಷ್ಟ್ರಪ್ರೇಮ ಉಕ್ಕೇರಿಸುವ ಘೋಷಣೆಗಳು ಮೊಳಗಿದವು. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನ – ಅಂಚೆ ಇಲಾಖೆಯಿಂದ 10 ದಿನಗಳಲ್ಲಿ 1 ಕೋಟಿ ಧ್ವಜ ಮಾರಾಟ

    ರಸ್ತೆಯುದ್ದಕ್ಕೂ ತ್ರಿವರ್ಣ ಧ್ವಜಗಳ ಹಾರಾಟ ಯುವ ವಿದ್ಯಾರ್ಥಿಗಳ ಜೈಕಾರದ ಅರ್ಭಟ ಕೇಳಿಬಂತು. ನಾಗರಿಕರು, ಅಧಿಕಾರಿಗಳು, ಶಿಕ್ಷಕರು ವಾಕಥಾನ್‍ನಲ್ಲಿ ಭಾಗವಹಿಸಿ ತಿರಂಗಾ ಅಭಿಯಾನ ಜಾಗೃತಿ ನಡಿಗೆಗೆ ಮೆರುಗು ತುಂಬಿದರು.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ಹೋರಾಟದಿಂದ ಕೋವಿಡ್ ಹೆಚ್ಚಾದ್ರೆ ಅವರೇ ಹೊಣೆ: ಸಚಿವ ಸುಧಾಕರ್

    ಕಾಂಗ್ರೆಸ್ ಹೋರಾಟದಿಂದ ಕೋವಿಡ್ ಹೆಚ್ಚಾದ್ರೆ ಅವರೇ ಹೊಣೆ: ಸಚಿವ ಸುಧಾಕರ್

    ಬೆಂಗಳೂರು: ಕಾಂಗ್ರೆಸ್‌ನವರ ಹೋರಾಟದಿಂದ ರಾಜ್ಯದಲ್ಲಿ ಕೋವಿಡ್ ಹೆಚ್ಚಳವಾದರೆ ಅದಕ್ಕೆ ಅವರೇ ಹೊಣೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.

    ನಗರದಲ್ಲಿಂದು ಕಾಂಗ್ರೆಸ್‌ನವರಿಂದ ರಾಜಭವನ ಚಲೋ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್‌ನವರ ಹೋರಾಟದಿಂದ ರಾಜ್ಯದಲ್ಲಿ ಕೋವಿಡ್ ಹೆಚ್ಚಳ ಆದರೆ ಅದಕ್ಕೆ ಅವರೇ ಹೊಣೆ. ಕಾಂಗ್ರೆಸ್‌ನವರೇ ನೈತಿಕ ಹೊಣೆ ಹೊರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪತ್ನಿ ಕತ್ತು ಬಿಗಿದು, ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಪತಿ

    ಅವರು ಪ್ರತಿಭಟನೆ ಮಾಡುವುದಾದರೆ ಫ್ರೀಡಂಪಾರ್ಕ್‌ನಲ್ಲಿ ಮಾಡಲಿ, ಅದು ಬಿಟ್ಟು ಜನರನ್ನು ಸೇರಿಸಿಕೊಂಡು ರಸ್ತೆಯಲ್ಲಿ ಪ್ರತಿಭಟನೆ ಮಾಡೋದು ಸರಿಯಲ್ಲ. ಅವರಿಂದು ರಾಜಭವನ ಚಲೋ ಮಾಡ್ತಿದ್ದಾರೆ. ಇವತ್ತಿನ ಹೋರಾಟಕ್ಕೆ ಕೋವಿಡ್ ಉಲ್ಲಂಘನೆ ಅಡಿ ಕೇಸ್ ದಾಖಲಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದು ವಿವರಿಸಿದ್ದಾರೆ.

    ಇದೇ ವೇಳೆ ಶಾಲೆಗಳಲ್ಲಿ ಕೋವಿಡ್ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಒಂದೆರಡು ಶಾಲೆಗಳಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಆ ಶಾಲಾ ಮಕ್ಕಳಿಗೆ ರಜೆ ಕೊಟ್ಟಿದ್ದಾರೆ. ಈಗಾಗಲೇ ಸ್ಪಷ್ಟವಾದ ನಿಯಮಾವಳಿ ರೂಪಿಸಿದ್ದೇವೆ. ವಿದ್ಯಾರ್ಥಿಗಳಿಗೆ ಬರುವಾಗ ಥರ್ಮಲ್ ಸ್ಕ್ರೀನಿಂಗ್‌ ಮಾಡಿ, ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಶಾಲೆಗಳಲ್ಲಿ ಎಲ್ಲ ನಿಯಮ ಪಾಲನೆ ಮಾಡ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಾಮೆಡ್-ಕೆ ಪರೀಕ್ಷೆಗೆ ದಿನಾಂಕ ಪ್ರಕಟ

    ಸತ್ಯ ಹೊರಬರಲಿ: ಕಾಂಗ್ರೆಸ್ ನಾಯಕರ ನಡೆ ನಾಚಿಕೆ ತರಿಸುವಂತಹದ್ದು, ಒಂದು ಕಡೆ ಸಂವಿಧಾನದ ಬಗ್ಗೆ ಸಾಕಷ್ಟು ಭಾಷಣ ಮಾಡ್ತಾರೆ. ಇನ್ನೊಂದು ಕಡೆ ಸಂವಿಧಾನಕ್ಕೆ ಅಗೌರವ ತೋರುವ ಕೆಲಸ ಮಾಡ್ತಾರೆ. ಈ ಹಿಂದೆ ಮಾಜಿ ಪ್ರಧಾನಿ ಪಿ.ವಿ.ನರಂಸಿಹರಾವ್, ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಕೇಸರಿಯವರ ವಿರುದ್ಧವೂ ವಿಚಾರಣೆ ನಡೆದಿತ್ತು. ನಮ್ಮ ಖರ್ಗೆಯವರ ವಿಚಾರಣೆ ಕೂಡ ನಡೆಯಿತು. ಆಗ ಯಾರೂ ಚಕಾರ ಎತ್ತಿಲ್ಲ, ಪ್ರತಿಭಟನೆಗೆ ಮುಂದಾಗಲಿಲ್ಲ. ಕಾಂಗ್ರೆಸ್ ನಾಯಕರು ಮಾಡ್ತಿರೋದು ಸರಿಯಲ್ಲ. ಈ ರೀತಿ ಮಾಡೋದ್ರಿಂದ ತಪ್ಪು ಸಂದೇಶ ಹೋಗ್ತಿದೆ. ಏನೇ ಇದ್ದರೂ ವಿಚಾರಣೆ ಆಗಲಿ, ಸತ್ಯ ಹೊರಗಡೆ ಬರಲಿ ಎಂದು ಒತ್ತಾಯಿಸಿದ್ದಾರೆ.

    Live Tv

  • ರಮೇಶ್ ಕುಮಾರ್ ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ: ಸುಧಾಕರ್

    ರಮೇಶ್ ಕುಮಾರ್ ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ: ಸುಧಾಕರ್

    ಬೆಳಗಾವಿ: ರಮೇಶ್ ಕುಮಾರ್ ಅವರು ಎರಡು ಬಾರಿ ಸ್ಪೀಕರ್ ಆಗಿದ್ದವರು. ಮೌಲ್ಯಗಳಿಗೆ ರಾಯಭಾರಿ ಆಗಿದ್ದರು. ಅವರ ಬಗ್ಗೆ ನನಗೆ ವೈಯುಕ್ತಿಕ ದ್ವೇಷ ಇಲ್ಲ. ಅವರು ಮುಖವಾಡ ಹಾಕಿಕೊಂಡು ಬದುಕುತ್ತಿರುವುದರಲ್ಲಿ ಅನುಮಾನವಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

    ನಿನ್ನೆ ಬೆಳಗಾವಿ ವಿಧಾನಸಭೆಯಲ್ಲಿ ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದಿಸಿ ಎಂದು ರಮೇಶ್ ಕುಮಾರ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ಸುವರ್ಣಸೌಧದಲ್ಲಿ ಮಾತನಾಡಿದ ಸುಧಾಕರ್, ರಮೇಶ್ ಕುಮಾರ್ ಬಗ್ಗೆ ನನಗೆ ವೈಯಕ್ತಿಕ ದ್ವೇಷ ಇಲ್ಲ. ಅವರು ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ ಎಂದು ಖಂಡನೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಅತ್ಯಾಚಾರ ಕುರಿತ ರಮೇಶ್‌ ಕುಮಾರ್‌ ಹೇಳಿಕೆಗೆ ಕಾಂಗ್ರೆಸ್‌ ನಾಯಕರಿಂದಲೇ ಟೀಕೆ

    ಬೈರತಿ ಬಸವರಾಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, 13 ವರ್ಷದ ಹಿಂದೆ ಟ್ರಯಲ್ ಕೇಸ್‍ನಲ್ಲಿ, ಬೈರತಿ ಪರವಾಗಿ ಬಂದಿತ್ತು. ಆ ಬಳಿಕ ಹೈಕೋರ್ಟ್‍ನಲ್ಲಿ ಕೇಸ್ ಪೆಂಡಿಂಗ್ ಇತ್ತು. ಚುನಾಯಿತ ಪ್ರತಿನಿಧಿಗಳ ಕೋರ್ಟ್‍ನಲ್ಲಿ ಕೇಸ್ ಇದೆ. ಈಗ ಚರ್ಚೆ ಮಾಡಲು ಬರಲ್ಲ, ಕಾಂಗ್ರೆಸ್‍ನವರು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಇನ್ಮುಂದೆ ಎಚ್ಚರಿಕೆಯಿಂದ ಮಾತಾಡ್ತೀನಿ- ಕ್ಷಮೆಯಾಚಿಸಿದ ರಮೇಶ್ ಕುಮಾರ್

    ಓಮಿಕ್ರಾನ್ ಪ್ರಕರಣಗಳ ಹೆಚ್ಚಳದ ಬಗ್ಗೆ ಮಾತನಾಡಿ, ಓಮಿಕ್ರಾನ್ ಬಗ್ಗೆ ವಿಷಯವಾಗಿ ಆತಂಕ ಇಲ್ಲ. 8 ಮಂದಿಯಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಪರೀಕ್ಷೆ ಮಾಡಿ, ಅವರ ಮೂಲಕ ಬೇರೆಯವರಿಗೆ ಹರಡದಂತೆ ಕ್ರಮ ವಹಿಸಬೇಕಿದೆ. ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡಲಿದ್ದೇವೆ. ಸಿಎಂ ಜೊತೆ ಕೂಡ ಚರ್ಚೆ ಮಾಡಲಿದ್ದೇವೆ. ಯಾವ ಕ್ರಮ ತೆಗೆದುಕೊಳ್ಳಬೇಕು ಅಂತ ಸಲಹೆ ಪಡೆಯುತ್ತೇವೆ. ಕಡ್ಡಾಯವಾಗಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಿದೆ. ಜನ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ರಿಲೇಶನ್‌ಶಿಪ್‌ನಲ್ಲಿ ಡಿಸ್ಟೆನ್ಸ್ ಹೆಚ್ಚಾಗಿದ್ದಕ್ಕೆ ಪ್ರಿಯಕರನಿಗೆ ಗುಂಡಿಟ್ಟ ಕಿರಾತಕಿ