Tag: D.K.Shivarajkumar

  • ಒಂದೊಂದು ವೋಟ್‌ನಿಂದ ಒಬ್ಬರ ಭವಿಷ್ಯ ಬರೆಯುವ ಶಕ್ತಿ ಇದೆ- ಶಿವಣ್ಣ ಮನವಿ

    ಒಂದೊಂದು ವೋಟ್‌ನಿಂದ ಒಬ್ಬರ ಭವಿಷ್ಯ ಬರೆಯುವ ಶಕ್ತಿ ಇದೆ- ಶಿವಣ್ಣ ಮನವಿ

    ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ (Shivarajkumar) ದಂಪತಿ ಮತದಾನ ಮಾಡಿದ್ದಾರೆ. ಒಂದೊಂದು ವೋಟ್ ಕೂಡ ಒಬ್ಬರ ಭವಿಷ್ಯ ಬರೆಯುವ ಶಕ್ತಿ ಇದೆ. ಸಮಯ ವ್ಯರ್ಥ ಮಾಡದೇ ಯಂಗ್‌ಸ್ಟರ್ಸ್ ಬಂದು ಸೂಕ್ತ ವ್ಯಕ್ತಿಗೆ ಮತದಾನ ಮಾಡಬೇಕು ಎಂದು ಶಿವಣ್ಣ ಮನವಿ ಮಾಡಿದ್ದಾರೆ. ಇದನ್ನೂ ಓದಿ:ರಣ್‌ಬೀರ್‌ಗೆ ವಿಲನ್ ಆದ್ಮೇಲೆ ಬಾಬಿ ಡಿಯೋಲ್ ಬಂಪರ್ ಆಫರ್ಸ್

    ಮಾನ್ಯತಾ ಟೆಕ್ ಪಾರ್ಕ್ ಬಳಿ ರಾಚೇನಹಳ್ಳಿಯಲ್ಲಿ ಶಿವಣ್ಣ ಮತದಾನ ಮಾಡಿದ ಬಳಿಕ ಮಾಧ್ಯಮಕ್ಕೆ ಮಾತನಾಡಿ, ವೋಟಿಂಗ್ ಚಾನ್ಸ್ ಸಿಗುವುದು ಖುಷಿ. ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದಿದ್ದಾರೆ. ನಾವು ಮನವಿ ಮಾಡಬಹುದು ಆದರೆ ಏಬ್ಬಿಸಿ ತಂದು  ಯಾರನ್ನು ಮತದಾನ ಮಾಡಿಸೋಕೆ ಆಗಲ್ಲ ಎಂದು ಶಿವಣ್ಣ ಮಾತನಾಡಿದ್ದಾರೆ.

    ಮತದಾನ (Vote) ಮಾಡುವುದು ನಮ್ಮ ಕರ್ತವ್ಯ. ಒಂದೊಂದು ವೋಟ್‌ನಿಂದ ಭವಿಷ್ಯ ಬರೆಯುವ ಶಕ್ತಿಯಿದೆ. ಯಂಗ್‌ಸ್ಟರ್ ಹೊರಬಂದು ಮತದಾನ ಮಾಡಿ ಎಂದಿದ್ದಾರೆ. ನಾನು ಕೂಡ ಸುಮಾರು ಕಡೆ ಪ್ರಚಾರ ಮಾಡಿದ್ದೀನಿ. ತುಂಬಾ ಜನ ಕಣ್ಣೀರು ಹಾಕ್ತಾರೆ. ಅದನ್ನು ನೋಡಿದಾಗ ಬೇಜಾರು ಆಗುತ್ತದೆ ಎಂದು ಶಿವಣ್ಣ ಮಾತನಾಡಿದ್ದಾರೆ.

  • ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಮ್‌ ಪತ್ನಿ ಕಾಂಗ್ರೆಸ್‌ ಸೇರ್ಪಡೆ

    ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಮ್‌ ಪತ್ನಿ ಕಾಂಗ್ರೆಸ್‌ ಸೇರ್ಪಡೆ

    – ಬಿಜೆಪಿಯಿಂದ ನನ್ನ ಪತಿಗೆ ಆದ ಅನ್ಯಾಯಕ್ಕೆ, ಅವರ ಸಾವಿಗೆ ನ್ಯಾಯ ಕೊಡಿ ಎಂದು ಮನವಿ

    ಬೆಂಗಳೂರು: ನಿವೃತ್ತ ಐಎಎಸ್‌ ಅಧಿಕಾರಿ ದಿವಂಗತ ಕೆ.ಶಿವರಾಮ್‌ (K.Shivaram) ಪತ್ನಿ ವಾಣಿ ಅವರು ಸೋಮವಾರ ಕಾಂಗ್ರೆಸ್‌ (Congress) ಸೇರ್ಪಡೆಯಾದರು.

    ಕೆಪಿಸಿಸಿ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (D.K.Shivakumar) ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದರು. ವಾಣಿ ಶಿವರಾಮ್‌ ಅವರಿಗೆ ಪಕ್ಷದ ಶಾಲು ಹೊದಿಸಿ, ಧ್ವಜ ನೀಡಿ ಪಕ್ಷಕ್ಕೆ ಡಿ.ಕೆ.ಶಿವಕುಮಾರ್‌ ಬರಮಾಡಿಕೊಂಡರು. ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಮಾಜಿ ಸಂಸದೆ ತೇಜಸ್ವಿನಿ ಗೌಡ ಆಗಮಿಸಿದ್ದರು. ಇದನ್ನೂ ಓದಿ: ಮೈತ್ರಿಗೆ ಬಿಗ್ ಶಾಕ್ – ಪ್ರೀತಂಗೌಡ ಆಪ್ತರಿಂದ `ಕೈ’ ಅಭ್ಯರ್ಥಿಗೆ ಬೆಂಬಲ

    ಈ ವೇಳೆ ಮಾತನಾಡಿದ ವಾಣಿ ಶಿವರಾಮ್‌, ಬಿಜೆಪಿಯಿಂದ ನಮ್ಮ ಯಜಮಾನರಿಗೆ (ಕೆ.ಶಿವರಾಮ್) ಆದ ಅನ್ಯಾಯಕ್ಕೆ ಮತ್ತು ಅವರ ಸಾವಿಗೆ ನ್ಯಾಯ ಕೊಡಿ ಎಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.

    ಕಾಂಗ್ರೆಸ್‌ ಪಕ್ಷ ನನ್ನನ್ನು ಗುರುತಿಸಿ ಕೈ ಹಿಡಿದಿದೆ. ನಿಮ್ಮೆಲ್ಲರ ಸೇವೆಗಾಗಿ ನಾನು ಸದಾ ಇರುತ್ತೇನೆ. ನನ್ನ ಪತಿಯ ಕೊನೆ ಆಸೆಗಳನ್ನು ಈಡೇರಿಸಲು ಕಾಂಗ್ರೆಸ್‌ ಪಕ್ಷದಲ್ಲಿ ನಾನು ಇರುತ್ತೇನೆ. ನಮ್ಮ ಯಜಮಾನರಿಗೆ ಆದ ಅನ್ಯಾಯಕ್ಕೆ ನೀವೆಲ್ಲ ಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕೊಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು. ಇದನ್ನೂ ಓದಿ: ದಕ್ಷಿಣ ಭಾರತದ ‘ಪ್ರೀಮಿಯರ್ ಏವಿಯೇಷನ್ ಹಬ್’ ಆಗಿ ಬೆಂಗಳೂರು ಅಭಿವೃದ್ಧಿಪಡಿಸಲು ಏರ್ ಇಂಡಿಯಾದೊಂದಿಗೆ BIAL ಒಪ್ಪಂದ