Tag: d k shivakumar

  • ಐಟಿ ದಾಳಿ ಬಳಿಕ ಡಿಕೆಶಿ ಗುರೂಜಿ ದ್ವಾರಕನಾಥ್ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಹೇಳಿದ್ದೇನು?

    ಐಟಿ ದಾಳಿ ಬಳಿಕ ಡಿಕೆಶಿ ಗುರೂಜಿ ದ್ವಾರಕನಾಥ್ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಹೇಳಿದ್ದೇನು?

    ಬೆಂಗಳೂರು: ನಾನು ಯಾರನ್ನೂ ಹುಡುಕಿಕೊಂಡು ಹೋಗಿಲ್ಲ. ಸತ್ಯಾಸತ್ಯತೆ ಶೀಘ್ರದಲ್ಲೇ ಗೊತ್ತಾಗುತ್ತೆ. ಐಟಿ ಅಧಿಕಾರಿಗಳ ಮುಂದೆ ವಿಚಾರಣೆ ಮುಗಿಸುತ್ತೇನೆ. ನಂತರ ಜನರ ಮುಂದೆ ಬರುತ್ತೇನೆ. ನಾನು ಸ್ವಾಮೀಜಿ ಅಲ್ಲ, ಕೋಟಿ ಸಂಪಾದನೆಯನ್ನೂ ಮಾಡಿಲ್ಲ. ಮೆಡಿಕಲ್ ಕಾಲೇಜು ವಿಚಾರವಾಗಿ ಕಾಲ ಬಂದಾಗ ಉತ್ತರಿಸುತ್ತೇನೆ ಅಂತಾ ಡಿಕೆಶಿ ಗುರೂಜಿ ದ್ವಾರಕನಾಥ್ ಹೇಳಿದ್ದಾರೆ.

    ಐಟಿ ದಾಳಿ ಬಳಿಕ ಪಬ್ಲಿಕ್ ಟಿವಿ ಅವರನ್ನು ಸಂದರ್ಶಿಸಿದಾಗ, ನಾನು ಜ್ಯೋತಿಷಿ ಅಂತ ಬೋರ್ಡ್ ಹಾಕ್ಕೊಂಡಿಲ್ಲ. ಕಂಪ್ಯೂಟರ್ ಇಟ್ಕೊಂಡಿಲ್ಲ. ಯಾರಿಂದಲೂ ದುಡ್ಡು ಪಡೆಯಲ್ಲ. ಅಲ್ಲದೇ ಜಾತಕವನ್ನು ಇಟ್ಕೊಂಡಿಲ್ಲ. ಯಾವುದೇ ವ್ಯಕ್ತಿ ಮೇಲೆ ಕೆಲ ಆರೋಪಗಳನ್ನು ಮಾಡಬೇಕಾದ್ರೆ ಆ ವ್ಯಕ್ತಿ ಅಂಥವನಾಗಿದ್ದರೆ ಮಾತ್ರ ಹೇಳಕ್ಕಾಗತ್ತೆ. ಹೀಗಾಗಿ ಶೀಘ್ರವಾಗಿ ನಿಮ್ಮ ಮುಂದೆ ಎಲ್ಲ ಮಾಹಿತಿಯನ್ನು ಕೊಡುತ್ತೇನೆ. ಐಟಿ ದಾಳಿಯಿಂದ ನನಗೆ ಯಾವುದೇ ತೊಂದರೆಯಾಗಿಲ್ಲ ಅಂತ ಹೇಳಿದ್ರು.

    ಐಟಿ ಅಧಿಕಾರಿಗಳು 4 ಗಂಟೆ ಕಾಲ ನನ್ನ ಮನೆಯಲ್ಲಿ ದಾಖಲೆಗಳನ್ನು ಪರಿಶೀಲಿಸಿದ್ರು ಹಾಗೂ 2 ಗಂಟೆ ವಿಚಾರಿಸಿದ್ರು. ಅದರ ಬಗ್ಗೆ ಈಗ ಚರ್ಚೆ ಮಾಡಬಾರದು, ಅವರ ಕೆಲಸ ಅವರು ಮಾಡ್ಕೊಂಡು ಹೋಗಿದ್ದಾರೆ. ನಮಗ್ಯಾರಿಗೂ ಅವರು ತೊಂದರೆ ಕೊಟ್ಟಿಲ್ಲ. ಒಳಗೆ ಏನು ನಡೆದಿದೆ ಅಂತ ಅವರಿಗೆ ಹಾಗೂ ನನಗೆ ಗೊತ್ತು. ಅವರಿಗೆ ಪರಿಪೂರ್ಣ ಸಹಕಾರ ಕೊಟ್ಟಿದ್ದೇನೆ. ಸಂದರ್ಭ ಬಂದಾಗ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಅಂದ್ರು.

    ಇದನ್ನೂ ಓದಿ: Exclusive: ಡಿಕೆಶಿ ಗುರು, ಜ್ಯೋತಿಷಿ ದ್ವಾರಕಾನಾಥ್ ಯಾರು? ರಾಜ್ಯದಲ್ಲಿ ಅಷ್ಟೊಂದು ಪ್ರಭಾವಿಯೇ?

    ಐಟಿ ಅಧಿಕಾರಿಗಳು ದಾಳಿ ನಡೆಸಲು ನಿಖರ ಕಾರಣವೇನು ಅಂತ ಪಬ್ಲಿಕ್ ಟಿವಿ ಅವರನ್ನು ಪ್ರಶ್ನಿಸಿದಾಗ, ಅದನ್ನು ನೀವು ಕೇಳಬಾರದು, ನಾವು ಹೇಳಬಾರದು. ನೀವು ಇನ್ಮುಂದೆ ನನ್ನಲ್ಲಿ ನೇರ ಪ್ರಶ್ನೆಗಳನ್ನು ಕೇಳಬಾರದು. ಪ್ರಾಮಾಣಿಕವಾಗಿ ಕೆಲಸ ಮಾಡಿ, ಸತ್ಯವನ್ನೇ ಹೇಳಿ. ಯಾರಿಗೂ ಮನ ನೋಯಿಸಬೇಡಿ ಅಂತ ಅವರು ಹೇಳಿದ್ರು.

    https://www.youtube.com/watch?v=8miivzWz4WQ

  • ಐಟಿ ದಾಳಿ ಮುಕ್ತಾಯವಾದ ಬಳಿಕ ಸಚಿವ ಡಿಕೆಶಿ ಹೇಳಿದ್ದೇನು?

    ಐಟಿ ದಾಳಿ ಮುಕ್ತಾಯವಾದ ಬಳಿಕ ಸಚಿವ ಡಿಕೆಶಿ ಹೇಳಿದ್ದೇನು?

    ಬೆಂಗಳೂರು: ಸತತ ಮೂರು ದಿನಗಳಿಂದ ಇಂಧನ ಸಚಿವ ಡಿಕೆ ಶಿವಕುಮಾರ್ ಮನೆಯಲ್ಲಿ ನಡೆದಿದ್ದ ಐಟಿ ದಾಳಿ ಇಂದು ಮುಕ್ತಾಯವಾಗಿದೆ. ಮೂರು ದಿನಗಳ ದಾಳಿ ಮುಕ್ತಾಯವಾದ ಬಳಿಕ ಡಿಕೆಶಿ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಕಳೆದ ಮೂರು ದಿನಗಳಿಂದ ನನ್ನ ಮನೆ, ಸ್ನೇಹಿತರ ಮನೆ ಹಾಗೂ ನನ್ನ ಸಂಬಂಧಿಕರ ಮನೆ ಮೇಲೆ ಐಟಿ ದಾಳಿಯಾಗಿದ್ದು, ತಾವೆಲ್ಲಾ ಹಗಲು ರಾತ್ರಿ ಕಾಯ್ತಾ ಇದ್ದೀರಿ. ತಮ್ಮದೇ ಆದ ವಿಚಾರಗಳನ್ನು ಮಾಧ್ಯಮದಲ್ಲಿ ಚಿತ್ರಿಸಿದ್ದೀರಿ. ಈಗ ನಾನೇನೂ ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಅಂತ ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ರು.

    ನನಗೆ ಮಾಧ್ಯಮಗಳು, ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಅಲ್ಲದೇ ವಿವಿಧ ಪಕ್ಷದ ನಾಯಕರು, ಅಧಿಕಾರಿಗಳು ತಾವೆಲ್ಲರೂ ಪ್ರೋತ್ಸಾಹ ಹಾಗೂ ಬೆಂಬಲ ಕೊಟ್ಟಿದ್ದೀರಿ. ನಿಮಗೆಲ್ಲರಿಗೂ ನನ್ನ ಧನ್ಯವಾದಗಳು ಅಂದ್ರು.

    ಕಾನೂನು ಚೌಕಟ್ಟು ಬಿಟ್ಟು ಹಾಗೂ ಸಂವಿಧಾನವನ್ನು ಬಿಟ್ಟು ನಾನು ನಡೆಯುವಂತಹ ವ್ಯಕ್ತಿ ಅಲ್ಲ. ನನ್ನ ಮನೆಯಲ್ಲಿ ಹಾಗೂ ನನ್ನ ದೆಹಲಿ ಮನೆಯಲ್ಲಿ ಏನು ಸಿಕ್ಕಿದೆ ಅನ್ನೋದು ಎಲ್ಲವೂ ಕೂಡ ಪಂಚನಾಮ ಬಂದ ಮೇಲೆ ಕಾಪಿ ತೆಗೆದುಕೊಂಡು ನಾನು ಮಾತಾಡ್ತೇನೆ. ನಿಮ್ಮನ್ನೆಲ್ಲಾ ಖಂಡಿತಾ ಕರೀತಿನಿ. ಸದ್ಯ ನಾನು ನಂಬಿದಂತಹ ದೇವರ ಬಳಿ ಹೋಗಬೇಕಾಗಿದೆ ಅಂತ ಹೇಳಿದ್ರು.

    ಒಟ್ಟಿನಲ್ಲಿ ನಾನು ಏನನ್ನೂ ಈಗ ಹೇಳಲಾರೆ. ದಾಖಲೆ ಮಾತ್ರ ಹೇಳಬೇಕಷ್ಟೇ. ಹೀಗಾಗಿ ದಾಖಲೆ ಸಮೇತ ಪ್ರತಿಯೊಬ್ಬರಿಗೂ ಉತ್ತರ ನೀಡಲು ತಯಾರಿದ್ದೇನೆ. ನಿಮ್ಮನ್ನೆಲ್ಲಾ ಹಂಗೆ ಬಿಟ್ಟು ಹೋಗಬಾರದೆಂಬ ದೃಷ್ಟಿಯಿಂದ ರಾತ್ರಿಯಿಡಿ ತಾವೆಲ್ಲಾ ಕಾದಿದ್ದೀರಿ. ಹೀಗಾಗಿ ನಿಮ್ಮ ಮನಸ್ಸು ನೋಯಿಸಬಾರದು. ನೀವಿಲ್ಲಂದ್ರೆ ನಾವ್ಯಾರು ಬದುಕಲು ಸಾಧ್ಯವಿಲ್ಲ ಅಂದ್ರು.

    ಒಳ್ಳೆಯದು ಚಿತ್ರ ಮಾಡಬಹುದು, ಕೆಟ್ಟದನ್ನೂ ಚಿತ್ರ ಮಾಡಬಹುದು. ಅದು ನಿಮಗೆ ಖುಷಿಪಟ್ಟಂತಹ ವಿಚಾರ. ಆದ್ರೆ ಸತ್ಯಾಂಶವನ್ನು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ. ಒಟ್ಟಿನಲ್ಲಿ ನಾನು ನಂಬಿದಂತರಹ ದೇವಸ್ಥಾನಕ್ಕೆ ತೆರಳಲಿದ್ದೇನೆ. ಆ ಬಳಿಕ ನನ್ನ ನಂಬಿ ಬಂದಂತಹ ಶಾಸಕರನ್ನು ಭೇಟಿಯಾಗಲಿದ್ದೇನೆ ಅಂತ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.

    https://www.youtube.com/watch?v=1hWVXuy2xRs

     

     

     

     

  • ಡಿಕೆಶಿ ರಾಜೀನಾಮೆ ಕೇಳೋದಕ್ಕೆ ಬಿಜೆಪಿಗೆ ಯಾವ ನೈತಿಕತೆ ಇದೆ: ಸಿಎಂ ಪ್ರಶ್ನೆ

    ಡಿಕೆಶಿ ರಾಜೀನಾಮೆ ಕೇಳೋದಕ್ಕೆ ಬಿಜೆಪಿಗೆ ಯಾವ ನೈತಿಕತೆ ಇದೆ: ಸಿಎಂ ಪ್ರಶ್ನೆ

    ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿಯಾಗಿರುವುದು ರಾಜಕೀಯ ಪ್ರೇರಿತ. ಈ ಸಮಯದಲ್ಲಿ ದಾಳಿ ನಡೆಸಿರುವುದು ಸರಿಯಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ನಗರದಲ್ಲಿ ಐಟಿ ದಾಳಿಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಅವರು, ರೆಸಾರ್ಟ್‍ಗೆ ಹೋಗಿ ದಾಳಿ ಮಾಡಿದ್ದು ಸರಿಯಲ್ಲ. ರೆಸಾರ್ಟ್‍ಗೆ ಹೋಗಿ ಗುಜರಾತ್ ಶಾಸಕರಿಗೆ ಅಮಿಷ ಒಡ್ಡಿದ್ದಾರೆ. ಇದು ಕೇಂದ್ರ ಸರ್ಕಾರದ ಪಿತೂರಿ ಅಂತ ಹೇಳಿದ್ದಾರೆ.

    ಕೇಂದ್ರ ಸಚಿವ ಅನಂತಕುಮಾರ್ ಮೇಲೆ ಭ್ರಷ್ಟಾಚಾರದ ಆರೋಪ ಇದೆ. ಬಿಜೆಪಿ ರಾಜ್ಯಾಧ್ಯಕ್ಷರ ಬಿಎಸ್ ವೈ ಮೇಲೆ ಆರೋಪ ಇದೆ. ಇವರು ಡಿಕೆಶಿ ಅವರನ್ನು ರಾಜೀನಾಮೆ ಕೇಳೋದಕ್ಕೆ ಯಾವ ನೈತಿಕತೆ ಇದೆ. ಡಿಕೆಶಿ ಮನೆಯಲ್ಲಿ ಏನು ಸಿಕ್ಕಿದೆ ಸಿಕ್ಕಿಲ್ಲ ಅನ್ನೋದು ನಮಗೆ ಗೊತ್ತಿಲ್ಲ. ಡಿ.ಕೆ.ಶಿವಕುಮಾರ್ ಮನೆ ಮೇಲಿನ ದಾಳಿಗೆ ಸಿಆರ್ ಪಿಎಫ್ ಬಳಸಿದ್ದು ಏಕೆ..? ಈ ಬಗ್ಗೆ ಸಚಿವರ ಸಭೆಯನ್ನು ಕರೆದು ಮಾತನಾಡುತ್ತೇನೆ ಅಂದ್ರು.

    ಐಟಿ ದಾಳಿಗೆ ನನ್ನ ವಿರೋಧ ಇಲ್ಲ. ಯಾರ ಮನೆ ಮೇಲೆ ದಾಳಿಯಾದ್ರೂ ನಾನು ವಿರೋಧಿಸಲ್ಲ. ಆದ್ರೆ ಈ ಸಮಯದಲ್ಲಿ ದಾಳಿ ನಡೆಸಿ, ಗುಜರಾತ್ ಶಾಸಕರಿಗೆ ಅಮಿಷಯೊಡ್ಡಿದ್ದು ಅಕ್ಷಮ್ಯ ಅಪರಾಧ. ಡಿಕೆಶಿ ಆರೋಪಗಳಿಂದ ಹೊರಬರುತ್ತಾರೋ.. ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರ ಮನೆಯಲ್ಲಿ ಏನು ಸಿಕ್ಕಿದೆ ಏನು ಅಂತಾ ಗೊತ್ತಿಲ್ಲ ಅಂತ ಸಿಎಂ ಮಾಧ್ಯಮಕ್ಕೆ ತಿಳಿಸಿದ್ದಾರೆ.

     

  • ರಾಜಕಾರಣಿಗಳ ಮೇಲಿನ ಐಟಿ ದಾಳಿಗೆ ತಮ್ಮದೇ ಶೈಲಿಯಲ್ಲಿ ಡೈಲಾಗ್ ಹೊಡೆದ ಉಪ್ಪಿ

    ರಾಜಕಾರಣಿಗಳ ಮೇಲಿನ ಐಟಿ ದಾಳಿಗೆ ತಮ್ಮದೇ ಶೈಲಿಯಲ್ಲಿ ಡೈಲಾಗ್ ಹೊಡೆದ ಉಪ್ಪಿ

    ಬೆಂಗಳೂರು: ಕಳೆದ ಎರಡು ದಿನಗಳಿಂದ ಇಂದಿನ ಸಚಿವ ಡಿ.ಕೆ ಶಿವಕುಮಾರ್ ಮನೆಯ ಮೇಲಿನ ಐಟಿ ದಾಳಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಯಾರ ಹೆಸರನ್ನು ಉಲ್ಲೇಖಿಸದೇ ಸ್ಯಾಂಡಲ್‍ವುಡ್‍ನ ನಟ ಕಮ್ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ.

    ರಾಜಕಾರಣ, ರಾಜಕೀಯ, ರಾಜನೀತಿ ಬೇಕೆಂದು ಯಾರು ಬಯಸಬಾರದು ಐಟಿ ದಾಳಿಯ ಬಗ್ಗೆ ಉಪೇಂದ್ರ ಟ್ವೀಟ್ ಮಾಡಿದ್ದಾರೆ.

    ನಮ್ಮಗೆಲ್ಲ ಬೇಕಾಗಿರುವುದು ಪ್ರಜಾಕಾರಣ, ಪ್ರಜಾಕೀಯ, ಪ್ರಜಾನೀತಿ. ದೊಡ್ಡ ದೊಡ್ಡ ವ್ಯಕ್ತಿಗಳ ಮನೆ ಮೇಲೆ ನಡೆಯುವ ಐಟಿ ದಾಳಿಯನ್ನ ಕ್ಯಾಮೆರಾದಲ್ಲಿ ಶೂಟ್ ಮಾಡಿ ಜನರಿಗೆ ತೋರಿಸಬೇಕು. ನಿಜವಾದ ಸತ್ಯ ಏನು ಎಂಬುದು ಜನಸಾಮಾನ್ಯರಿಗೆ ಗೊತ್ತಾಬೇಕು ಎಂದು ತಮ್ಮದೇ ಸ್ಟೈಲ್‍ನಲ್ಲಿ ಸರಣಿ ಟ್ವೀಟ್ ಮಾಡಿದ್ದಾರೆ.

    ಈ ಮೊದಲ ಚೀನಾ ದೇಶ ಗಡಿತಂಟೆ ಮಾಡುತ್ತಿರುವುದನ್ನ ವಿರೋಧಿಸಿ ನಮ್ಮ ಸೈನಿಕರಿಗೆ ಭಾರತ್ ಬಂದ್ ಮಾಡಿ ಬೆಂಬಲ ಸೂಚಿಸಬೇಕೆಂದು ಈ ಹಿಂದೆ ಟ್ವೀಟ್ ಮಾಡಿದ್ದರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

  • ABVP, RSS, ಬಜರಂಗದಳದ ರೀತಿಯಲ್ಲೇ IT,ED,CBI ಬಿಜೆಪಿಗೆ ಕಾರ್ಯನಿರ್ವಹಿಸುತ್ತಿವೆ: ದಿನೇಶ್ ಗುಂಡೂರಾವ್

    ABVP, RSS, ಬಜರಂಗದಳದ ರೀತಿಯಲ್ಲೇ IT,ED,CBI ಬಿಜೆಪಿಗೆ ಕಾರ್ಯನಿರ್ವಹಿಸುತ್ತಿವೆ: ದಿನೇಶ್ ಗುಂಡೂರಾವ್

    ಬೆಂಗಳೂರು: ಇಂಧನ ಸಚಿವ ಡಿ ಕೆ ಶಿವಕುಮಾರ್ ಹಾಗೂ ಕೈ ನಾಯಕರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಖಂಡಿಸಿದ್ದಾರೆ.

    ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐಟಿ ಸೇರಿದಂತೆ ಇಡಿ, ಸಿಬಿಐ ಗಳು ಮೋದಿ ಅವರ ಕೈಗೊಂಬೆಯಾಗಿ ಕೆಲಸ ಮಾಡ್ತಿವೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಗಮನಕ್ಕೆ ತರದೇ ಸಿಆರ್‍ಪಿಎಫ್ ಅನ್ನು ಕಳುಹಿಸಿದ್ದಾರೆ. ರಾಜಕೀಯ ಪ್ರೇರಿತವಾಗಿ ಐಟಿ ದಾಳಿ ನಡೆಸಲಾಗಿದೆ ಎಂದು ಟೀಕಿಸಿದರು.

    ಆಪರೇಷನ್ ಕಮಲದ ವಿರುದ್ಧ ನಮ್ಮ ಶಾಸಕರನ್ನ ಗುಜರಾತ್ ನಿಂದ ಕರ್ನಾಟಕಕ್ಕೆ ಕರೆತರಲಾಗಿತ್ತು. ಕುದುರೆ ವ್ಯಾಪಾರವನ್ನ ತಪ್ಪಿಸಲು ಶಾಸಕರನ್ನ ಗುಜರಾತ್ ನಿಂದ ಕರ್ನಾಟಕಕ್ಕೆ ಶಿಫ್ಟ್ ಮಾಡಲಾಗಿತ್ತು.. ಶಾಸಕರನ್ನ ಕರೆತಂದಿದ್ದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಾಗಿದೆ. ಇದನ್ನೇ ಗುರಿಯಾಗಿಸಿಟ್ಟುಕೊಂಡು ಐಟಿ ದಾಳಿ ನಡೆಸಿರೋದು ಸರಿಯಲ್ಲ. ಮೋದಿ ಅವರು ಟಿ.ವಿ ಚಾನಲ್‍ಗಳನ್ನು ಖರೀದಿ ಮಾಡಿದ್ದಾರೆ. ಆ ಚಾನಲ್ ಗಳ ಮೂಲಕ ಐಟಿ ದಾಳಿಗಳನ್ನ ಹೆಚ್ವು ಹೆಚ್ಚು ತೋರಿಸಿ ದೇಶಾದ್ಯಂತೆ ಚರ್ಚೆ ನಡೆಸ್ತಾರೆ ಅಂತಾ ಕಿಡಿಕಾರಿದ್ರು.

    ದೇಶದಲ್ಲಿ ಸರ್ವಾಧಿಕಾರ ಆಡಳಿತ, ಮೋದಿ ಹಿಟ್ಲರ್ ನೀತಿ ಅನುಸರಿಸುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಿದ್ದು ಹೋಗಿಲ್ಲ. ಸಿಆರ್‍ಪಿಎಫ್ ಕರ್ನಾಟಕಕ್ಕೆ ಕಳುಹಿಸುವ ಅಗತ್ಯವಿರಲಿಲ್ಲ. ಸರ್ಕಾರದ ಗಮನಕ್ಕೆ ತರದೇ ಸಿಆರ್‍ಪಿಎಫ್ ಕಳಿಸಿರೋದು ಸರಿಯಲ್ಲ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರದ ಪ್ರಧಾನಿ ಮೋದಿ ಅವರು ಪ್ರಯತ್ನ ಮಾಡ್ತಿದ್ದಾರೆ. ಸಿಬಿಐ, ಇಡಿ, ಐಟಿ ಮೂರು ಕೇಂದ್ರ ಸರ್ಕಾರದ ಏಜೆನ್ಸಿಗಳು. ಹಾಗೂ ಬಿಜೆಪಿಯ ಅಂಗಸಂಸ್ಥೆಗಳಾಗಿವೆ. ಎಬಿವಿಪಿ, ಆರ್‍ಎಸ್‍ಎಸ್, ಬಜರಂಗದಳದ ರೀತಿಯಲ್ಲೇ ಐಟಿ, ಇಡಿ ಸಿಬಿಐ ಬಿಜೆಪಿಗೆ ಕಾರ್ಯನಿರ್ವಹಿಸುತ್ತಿವೆ ಅಂತಾ ಅವರು ಹೇಳಿದ್ದಾರೆ.

  • ಯಾವ ವಿಕಾಸವೂ ಆಗಿಲ್ಲ, ಅಚ್ಛೇ ದಿನ್ ಎಲ್ಲಿದೆ: ಡಿಕೆ ಶಿವಕುಮಾರ್ ಪ್ರಶ್ನೆ

    ಯಾವ ವಿಕಾಸವೂ ಆಗಿಲ್ಲ, ಅಚ್ಛೇ ದಿನ್ ಎಲ್ಲಿದೆ: ಡಿಕೆ ಶಿವಕುಮಾರ್ ಪ್ರಶ್ನೆ

    ಬೆಂಗಳೂರು: ಈ ಮೂರು ವರ್ಷದಲ್ಲಿ ಕೇಂದ್ರ ಸರ್ಕಾರ ಯಾವ ಸಾಧನೆಯನ್ನು ಮಾಡಿಲ್ಲ. ಯಾವ ವಿಕಾಸವೂ ಆಗಿಲ್ಲ. ಅಚ್ಛೇ ದಿನ್ ಎಲ್ಲಿದೆ ಎಂದು ನೀವೇ ನೋಡಿ ಹೇಳಿ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

    ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ಬಳಿಕ ಮೋದಿ ಸರ್ಕಾರದ ಮೂರು ವರ್ಷದ ಸಂಭ್ರಮಾಚರಣೆ ಬಗ್ಗೆ ಕುಮಾರಕೃಪಾದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ದ್ವೇಷದ ರಾಜಕಾರಣ ಬಿಟ್ಟು ಬೇರೇನು ನಡೆದೇ ಇಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ಇದನ್ನೂ ಓದಿ: ದೇಶದ ಅತಿ ಉದ್ದವಾದ ಸೇತುವೆ ಉದ್ಘಾಟಿಸಿ, ಯುಪಿಎ ಸರ್ಕಾರಕ್ಕೆ ಮೋದಿ ಟಾಂಗ್ ನೀಡಿದ್ದು ಹೀಗೆ

    ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಉದ್ದೇಶಪೂರ್ವಕವಾಗಿ ಐಟಿ ರೇಡ್ ಮಾಡಿಸುತ್ತಿದ್ದಾರೆ. ಕೆಲವರ ಫೋನ್ ಟ್ರ್ಯಾಪ್ ಆಗುತ್ತಿದೆ ಅನ್ನೋ ಸುದ್ದಿ ಹಬ್ಬಿಸುತ್ತಿದ್ದಾರೆ. ಅದ್ಯಾವುದಕ್ಕೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆ ಬಗ್ಗೆ ಮಾಧ್ಯಮದವರೇ ತನಿಖೆ ಮಾಡಲಿ. ಕಣ್ಣೊರೆಸಲು ಬಿಜೆಪಿ ಪಕ್ಷದವರ ಮೇಲೆ ಐಟಿ ರೇಡ್ ನಾಟಕ ಮಾಡಿದ್ದಾರೆ ಅಷ್ಟೇ ಎಂದು ಹೇಳಿದರು.

    ನಾನು ಕೈ ಕಾರ್ಯಕರ್ತ: ಜೆಡಿಎಸ್ ರೆಬೆಲ್‍ಗಳಿಗೆ ನಾನು ಟಿಕೆಟ್ ಭರವಸೆ ನೀಡಿಲ್ಲ. ನಾನು ಕೇವಲ ಕಾಂಗ್ರೆಸ್ ಕಾರ್ಯಕರ್ತ. ಹಿಂದಿನ ಉಸ್ತುವಾರಿ ದಿಗ್ವಿಜಯ್ ಸಿಂಗ್, ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರೇ ಭರವಸೆ ಕೊಟ್ಟವರು. ಅವರೇ ಅದನ್ನ ತೀರ್ಮಾನಿಸುತ್ತಾರೆ. ನನಗೆ ಟಿಕೆಟ್ ಬಗ್ಗೆ ಗೊತ್ತಿಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿ ಜಾರಿಕೊಂಡರು.

    ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಹೈಕಮಾಂಡ್ ನಿರ್ಧರಿಸಲಿದ್ದಾರೆ. ಚುನಾವಣೆ ಎದುರಿಸಲು ಕಾರ್ಯಕರ್ತನಿಂದ ಮೇಲ್ಮಟ್ಟದ ನಾಯಕರು ಸಜ್ಜಾಗುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಯಾರಾಗಬೇಕೆಂದು ಚರ್ಚೆ ನಡೆಯುತ್ತಿದೆ. ನಾನು ಪಕ್ಷದ ಕಾರ್ಯಕರ್ತ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿದರು.