Tag: d k shivakumar

  • ಅವರು ದೊಡ್ಡ ಜನ, ದೊಡ್ಡವರು; ಅವರು ಏನೇ ಕೊಟ್ಟರೂ ಅದನ್ನ ಪ್ರಸಾದ ಅಂತ ಸ್ವೀಕರಿಸ್ತೇವೆ: ರೆಡ್ಡಿಗೆ ಡಿಕೆಶಿ ಟಾಂಗ್

    ಅವರು ದೊಡ್ಡ ಜನ, ದೊಡ್ಡವರು; ಅವರು ಏನೇ ಕೊಟ್ಟರೂ ಅದನ್ನ ಪ್ರಸಾದ ಅಂತ ಸ್ವೀಕರಿಸ್ತೇವೆ: ರೆಡ್ಡಿಗೆ ಡಿಕೆಶಿ ಟಾಂಗ್

    ಬೆಂಗಳೂರು: ಅವರು ದೊಡ್ಡ ಜನ, ದೊಡ್ಡವರು, ಅವರು ಏನೇ ಕೊಟ್ಟರೂ ಅದನ್ನ ಪ್ರಸಾದ ಅಂತ ಸ್ವೀಕರಿಸ್ತೇವೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಜನಾರ್ದನ ರೆಡ್ಡಿಗೆ ಟಾಂಗ್ ನೀಡಿದ್ದಾರೆ.

    ಆಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ, ಬುಧವಾರದಂದು ಜಾಮೀನಿನ ಮೇಲೆ ಹೊರಬಂದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಮಾಧ್ಯಮಗಳ ಮುಂದೆ ಕಿಡಿಕಾರಿದ್ದರು.

    ಈ ವಿಚಾರಕ್ಕೆ ವಿಧಾನಸೌದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳು ಜನಾರ್ದನ ರೆಡ್ಡಿಯ ಹೇಳಿಕೆಯ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ, ಅವರು ದೊಡ್ಡ ಜನ, ದೊಡ್ಡವರು, ದೊಡ್ಡ ಮಾತನ್ನ ಆಡುವವರು. ನಾನು ಚಿಕ್ಕವನು ಅದರ ಬಗ್ಗೆ ನಾನು ಮಾತಾಡಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

    ಯಾರು ಏನ್ ಬೇಕಾದ್ರು ಮಾಡಿಕೊಳ್ಳಬಹುದು, ಅವರು ಏನೇ ಕೊಟ್ಟರೂ ಅದನ್ನ ಪ್ರಸಾದ ಅಂತ ಸ್ವೀಕರಿಸ್ತೇವೆ. ಅವರಿಗೆ ಆಲ್ ದಿ ಬೆಸ್ಟ್ ಎಂದು ಹೇಳಿ ರೆಡ್ಡಿಗೆ ಟಾಂಗ್ ಕೊಟ್ಟರು. ಇದನ್ನು ಓದಿ: ದೇಶದಲ್ಲಿ ಈಗ ಪ್ರತಿಮೆ ಪಾಲಿಟಿಕ್ಸ್- ರಾಜ್ಯದಲ್ಲಿ ಕಾವೇರಿ ಪ್ರತಿಮೆ ಸ್ಥಾಪನೆ: ಏನಿದು ಯೋಜನೆ? ವೆಚ್ಚ ಎಷ್ಟು?

    ಬೈ ಎಲೆಕ್ಷನ್ ನಲ್ಲಿ ಬ್ಯುಸಿಯಾಗಿರುವ ನನಗೆ ನನ್ನದೇ ಆದ ಕೆಲಸಗಳು ಇವೆ. ನಾನು ಯಾರ ತಂಟೆಗೂ ಹೋಗ್ತಿಲ್ಲ. ನಾನು ಎಲ್ಲರ ಹತ್ತಿರ ಅಣ್ಣ ಅಕ್ಕಾ ಅಂತಾ ಮಾತಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.

    ಕಾವೇರಿ ಪ್ರತಿಮೆ ನಿರ್ಮಾಣದ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಕೆಆರ್‌ಎಸ್‌ ನಲ್ಲಿ ಪ್ರವಾಸೋದ್ಯಮಕ್ಕಾಗಿ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಸಿದ್ಧ ಸ್ಥಳಗಳ ಕುರಿತು ಒಂದು ಸ್ಟ್ರೀಟ್ ನಲ್ಲಿ ಮಾಹಿತಿ ಒದಗಿಸಲಾಗುತ್ತದೆ. ಆರಂಭದಲ್ಲಿ ಕಾವೇರಿ ತಾಯಿ ಪ್ರತಿಮೆ ಮಾಡಲು ಯೋಜನೆ ತಯಾರಿಸಿದ್ದು, ಈ ಕುರಿತು ನಿರ್ಮಾಣದ ಯೋಜನೆಯನ್ನ ಅಂತಿಮವಾಗಿ ಕ್ಯಾಬಿನೆಟ್ ಮುಂದೆ ಪ್ರಸ್ತಾಪಿಸಲಾಗುವುದು ಎಂದು ವಿವರಿಸಿದರು.

    ಪ್ರತಿಮೆ ನಿರ್ಮಾಣದ ಜಾಗದದ ಬಗ್ಗೆ ಮಾಹಿತಿ ನೀಡಿದ ಸಚಿವರು ಕೆಆರ್‌ಎಸ್‌ ಡ್ಯಾಮ್‍ನ ಹತ್ತಿರ ಮುನ್ನೂರು ಎಕರೆಯಷ್ಟು ಜಾಗವಿದೆ. ಈ ವಿಚಾರವಾಗಿ ನಾವು ಕೆಲವು ಸಲಹೆಗಳನ್ನ ನೀಡಿದ್ದೇವೆ ಎಂದು ಹೇಳಿದ್ದಾರೆ.

    ಕಾವೇರಿ ಪ್ರತಿಮೆಯನ್ನ ವರ್ಣಿಸಿದ ಸಚಿವರು, ಕಾವೇರಿ ತಾಯಿಯ ಬೃಹತ್ ಪ್ರತಿಮೆಯ ಕೆಳಗೆ ನೀರು ಹರಿಯುತ್ತದೆ, ಈ ಮಧ್ಯೆ ಗಾಜಿನ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಗೆ ಲಿಫ್ಟ್ ಇರುತ್ತದೆ. ಪ್ರತಿಮೆಯ ಮುಂದೆ ನಿಂತರೆ ಡ್ಯಾಂ ವಿಹಂಗಮ ನೋಟವನ್ನ ಕಾಣುಬಹುದು. ಬಗ್ಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿಯನ್ನು ನೀಡುತ್ತೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವಿರೋಧ ಪಕ್ಷದಲ್ಲಿದ್ದು ಸರ್ಕಾರಕ್ಕೆ ಒಳ್ಳೆಯ ಸಲಹೆ ನೀಡಲಿ: ಡಿಕೆಶಿ

    ವಿರೋಧ ಪಕ್ಷದಲ್ಲಿದ್ದು ಸರ್ಕಾರಕ್ಕೆ ಒಳ್ಳೆಯ ಸಲಹೆ ನೀಡಲಿ: ಡಿಕೆಶಿ

    ಬೆಂಗಳೂರು: ಬಿಜೆಪಿಯವರು ವಿರೋಧ ಪಕ್ಷದಲ್ಲಿ ಇದ್ದು ಸರ್ಕಾರಕ್ಕೆ ಒಳ್ಳೆಯ ಸಲಹೆ ನೀಡಲಿ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

    ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬಿಜೆಪಿ ಅವರು ಅಶಾಂತಿ ಮೂಡಿಸಬೇಕು. ಅಶಾಂತಿ ಮೂಡಿಸುವುದು ಬಿಟ್ಟರೆ ಅವರಿಗೆ ಏನೂ ಗೊತ್ತಿಲ್ಲ, ಜನರಿಗೆ ಸುಮ್ಮನೆ ಕನ್ಫ್ಯೂಸ್ ಮಾಡುತ್ತಿದ್ದಾರೆ. ಇದು ದೇಶದ ದೊಡ್ಡ ಸ್ವಾಭಿಮಾನದ ವಿಚಾರ. ಟಿಪ್ಪು ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ತ್ಯಾಗ ಮಾಡಿದವರು. ಈಗಾಗಲೇ ರಾಷ್ಟ್ರಪತಿ ಇದೇ ವಿಧಾನಸೌಧಕ್ಕೆ ಬಂದು ಟಿಪ್ಪು ಅವರನ್ನು ಶ್ಲಾಘನೆ ಮಾಡಿ ಯಾಕೆ ಇದನ್ನು ಮಾಡುತ್ತಿದ್ದೇವೆ ಅಂತ ಇಲ್ಲಿ ಪ್ರತಿಪಾದನೆ ಮಾಡಿದ್ದಾರೆ. ಇದು ದೇಶದ ಇತಿಹಾಸ ವಿಚಾರದಲ್ಲಿ ಇಂತಹ ರಾಜಕಾರಣ ಮಾಡುವುದು ಸರಿಯಲ್ಲ. ಶಾಂತಿ, ಪಾಲನೆ ಈ ದೇಶದ ಐಕ್ಯತೆ ಹಾಗೂ ಅಹಜತೆ. ಬಿಜೆಪಿ ಅವರು ಇದನ್ನು ಕಾಪಾಡಿಕೊಂಡು ಹೋಗಬೇಕು ಎಂದರು.

    ಕುಮಾರಸ್ವಾಮಿ ಆರೋಗ್ಯದಲ್ಲಿ ಸರಿಯಿಲ್ಲ. ವೈದ್ಯರು ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ ಎಂದು ಅವರು ಮೊದಲೇ ಹೇಳಿದ್ದರು. ಡಿಸಿಎಂ ಪರಮೇಶ್ವರ್ ಅವರ ವಿಮಾನದಲ್ಲಿ ಹೆಚ್ಚು ಕಡಿಮೆಯಾಗಿದೆ. ಇಲ್ಲದಿದ್ದರೆ ಅವರು ಕಾರ್ಯಕ್ರಮಕ್ಕೆ ಬರುತ್ತಿದ್ದರು. ಸದ್ಯ ಸರ್ಕಾರದ ಒಬ್ಬ ವ್ಯಕ್ತಿಯಾಗಿ ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಇಲ್ಲಿ ಕಾರ್ಯಕ್ರಮ ಮುಗಿದ ನಂತರ ರಾಮನಗರಕ್ಕೆ ಹೋಗಬೇಕಿದೆ. ಬಿಜೆಪಿ ಅವರು ಈ ರಾಜ್ಯದಲ್ಲಿ ಶಾಂತಿ ಭಂಗ ಉಂಟು ಮಾಡಬೇಡಿ ಎಂದು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿಕೊಂಡರು.

    ಚುನಾವಣೆಯಲ್ಲಿ ಒಬ್ಬರು ಗೆದ್ದರೆ, ಮತ್ತೊಬ್ಬರು ಸೋಲಲೇಬೇಕು. ನಾನು ಗೆದಿದ್ದೇನೆ ಎಂದು ಹಿಗ್ಗುವುದಕ್ಕೆ ತಯಾರಿಲ್ಲ. ನಾನು ಚುನಾವಣೆಯಲ್ಲಿ ಸೋತಿದ್ದೇನೆ. ನಾವು ಸ್ಪೋಟಿವ್ ಆಗಿ ಇರಬೇಕು. ವಿರೋಧ ಪಾರ್ಟಿಯವರು ಸರ್ಕಾರಕ್ಕೆ ಸಲಹೆ ನೀಡಬೇಕು. ಬಡವರಿಗೆ, ಜನರಿಗೆ ಇರುವ ಎಲ್ಲ ಸಮಸ್ಯೆಯನ್ನು ಬಗೆಹರಿಸಲು ಸಹಾಯ ಮಾಡಬೇಕು. ಜನರು ಆಶೀರ್ವಾದ ಮಾಡಿದಾಗ ಅವರು ಅಧಿಕಾರಕ್ಕೆ ಬರಲಿ. ನಾವು ಅವರಿಗೆ ಸಹಕಾರ ನೀಡುತ್ತೇವೆ. ಬೆಳಗ್ಗೆ, ಸಂಜೆ ರಾಜಕಾರಣ ಮಾಡುತ್ತಾ ಕುಳಿತರೆ ಇದರಿಂದ ಉಪಯೋಗ ಏನಿದೆ. ನಾವು ಏನಾದರೂ ತಪ್ಪು ಮಾಡಿದ್ದರೆ ಅವರು ಹೇಳಲಿ, ಬೇಕಾದರೆ ಗಲ್ಲು ಶಿಕ್ಷೆ ನೀಡಲಿ. ಎರಡೂ ಪಕ್ಷದ ಎಲ್ಲ ಶಾಸಕರಿಗೆ, ಸಂಸದರಿಗೆ ಜವಾಬ್ದಾರಿ ಇದೆ. ಜನರ ಹಿತವನ್ನು ಕಾಪಾಡಬೇಕು ಎಂದು ಸಚಿವರು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಹಂತಹಂತವಾಗಿ ಡಿಕೆ ಶಿವಕುಮಾರ್ ರೆಡ್ಡಿ, ಶ್ರೀರಾಮುಲು ಕೋಟೆಯನ್ನು ಉರುಳಿಸಿದ್ದು ಹೇಗೆ?

    ಹಂತಹಂತವಾಗಿ ಡಿಕೆ ಶಿವಕುಮಾರ್ ರೆಡ್ಡಿ, ಶ್ರೀರಾಮುಲು ಕೋಟೆಯನ್ನು ಉರುಳಿಸಿದ್ದು ಹೇಗೆ?

    ಬೆಂಗಳೂರು: ಜಲ ಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರ ಕಾರ್ಯತಂತ್ರಕ್ಕೆ ಬಿಜೆಪಿಯ ಭದ್ರಕೋಟೆಯಲ್ಲಿ ಕೈ ಅರಳಿದ್ದು, ವಿ.ಎಸ್.ಉಗ್ರಪ್ಪ ಗೆದ್ದಿದ್ದಾರೆ. ಈ ಮೂಲಕ ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆಶಿ ಶಾಸಕ ಶ್ರೀರಾಮುಲು, ಜನಾರ್ದನ ರೆಡ್ಡಿ ಅವರ ಬಳ್ಳಾರಿ ಕೋಟೆಯನ್ನು ಉರುಳಿಸಿ ಬಳ್ಳಾರಿಯಲ್ಲಿ ಧೂಳೆಬ್ಬಿಸಿದ್ದಾರೆ.

    ಚುನಾವಣೆಗೂ ಮುನ್ನ ಬಳ್ಳಾರಿ ಲೋಕಸಭಾ ಉಪಚುನಾವಣೆಯ ಅಭ್ಯರ್ಥಿಯಾಗಿ ಯಾರನ್ನು ಆಯ್ಕೆ ಮಾಡಬೇಕೆಂಬುದು ಕಾಂಗ್ರೆಸ್‍ಗೆ ದೊಡ್ಡ ತಲೆನೋವಾಗಿತ್ತು. ಏಕೆಂದರೆ ಬಳ್ಳಾರಿಯಲ್ಲಿ ಬಿಜೆಪಿ ಗೆಲುವಿಗಾಗಿ ಟೊಂಕ ಕಟ್ಟಿದ್ದ ನಾಯಕ ಸಮುದಾಯದ ಪ್ರಬಲ ಮುಖಂಡ ಶ್ರೀರಾಮುಲು ವಿರುದ್ಧ ಅದೇ ಜನಾಂಗದ ಅಭ್ಯರ್ಥಿ ಹಾಕುವ ಬಗ್ಗೆ ಕಾಂಗ್ರೆಸ್ ತಲೆಕೆಡಿಸಿಕೊಂಡಿತ್ತು. ಅಲ್ಲದೇ ಈ ಮೊದಲು ಶಾಸಕ ನಾಗೇಂದ್ರ ಸಹೋದರನನ್ನು ಕಾಂಗ್ರೆಸ್ ಅಭ್ಯರ್ಥಿಯೆಂದು ಹೇಳಲಾಗುತ್ತಿತ್ತು. ಆದರೆ ಸ್ಥಳೀಯ ನಾಯಕರಲ್ಲಿ ನಾಗೇಂದ್ರ ಸಹೋದರನ ವಿರುದ್ಧ ವೈಮನಸ್ಸಿದ್ದ ಕಾರಣ ಕಾಂಗ್ರೆಸ್ ಅಂತಿಮವಾಗಿ ಮತ್ತೊಬ್ಬ ಪ್ರಮುಖ ನಾಯಕ ಸಮುದಾಯ ಮುಖಂಡರಾದ ವಿ.ಎಸ್.ಉಗ್ರಪ್ಪನವರೇ ಸೂಕ್ತ ಎನ್ನುವ ನಿರ್ಧಾರಕ್ಕೆ ಡಿಕೆ ಶಿವಕುಮಾರ್ ಬಂದಿದ್ದರು. ಈ ಪ್ರಸ್ತಾಪಕ್ಕೆ ಆರಂಭದಲ್ಲೇ ಪಕ್ಷದಲ್ಲೇ ವಿರೋಧ ಕೇಳಿ ಬಂದಿತ್ತು. ಕೊನೆಗೆ ರಾಹುಲ್ ಗಾಂಧಿ ಅವರ ಮನ ಒಲಿಸಿದ ಪರಿಣಾಮ ಉಗ್ರಪ್ಪ ಅಭ್ಯರ್ಥಿಯಾಗಿ ಹೊರಹೊಮ್ಮಿದರು. ಇದನ್ನೂ ಓದಿ:  ರಾಮುಲು ಅಣ್ಣ ಎಲೆಕ್ಷನ್ ಶಾಂತಿಯುತವಾಗಿ ನಡೆಸಿಕೊಟ್ಟಿದ್ದಾರೆ- 3 ಜನರಿಗೆ ಡಿಕೆಶಿಯಿಂದ ಥ್ಯಾಂಕ್ಸ್

    ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಲ್ಲಿ ನಡೆದ ಬಳ್ಳಾರಿ ಉಪಚುನಾವಣೆ ಉಸ್ತುವಾರಿಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದ್ದು ಪ್ರಮುಖ ತಿರುವು ಪಡೆದುಕೊಂಡಿತು. ಚುನಾವಣೆಯ ಕಾರ್ಯತಂತ್ರದ ಭಾಗವಾಗಿ ಒಟ್ಟು ಮಾಜಿ ಸಚಿವರು, ಹಾಲಿ ಶಾಸಕರು ಹಾಗೂ ಸಂಸದರು ಸೇರಿದಂತೆ 52 ನಾಯಕರನ್ನು ಬಳ್ಳಾರಿಗೆ ಕೆಪಿಸಿಸಿ ನಿಯೋಜಿಸಿತ್ತು. ಇದನ್ನೂ ಓದಿ:  ತೆರೆಮರೆಯಲ್ಲಿ ಶ್ರೀರಾಮುಲುಗೆ ಖೆಡ್ಡಾ ತೋಡಿದ್ರಾ ಕುಚುಕು ಗೆಳೆಯ?

    ಶಾಸಕ ಶ್ರೀರಾಮುಲು ವಿರುದ್ಧ ಡಿ.ಕೆ.ಶಿವಕುಮಾರ್ ಅವರು ತಂತ್ರವನ್ನು ಮತದಾನದವರೆಗೂ ಕಾಯ್ದುಕೊಂಡರು. ಇತ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಂದುಗೂಡಿದ ಸಚಿವರು, ಚುನಾವಣೆಯನ್ನು ಪ್ರಬಲವಾಗಿ ಎದುರಿಸಿದರು. ಡಿ.ಕೆ.ಶಿವಕುಮಾರ್ ಅವರು ಮೈತ್ರಿ ಸರ್ಕಾರದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಅಷ್ಟೇ ಅಲ್ಲದೆ ಶ್ರೀರಾಮುಲು ಗೌಡ ಜಾತಿ ಆಧಾರಿತ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ಶ್ರೀರಾಮುಲು ಅಣ್ಣ ಎಂದು ಗೌರವ ನೀಡಿಯೇ ಟಾಂಗ್ ನೀಡತೊಡಗಿದರು.

    ಇದರ ಜೊತೆಯಲ್ಲಿ ಶಿವಕುಮಾರ್ ಲಿಂಗಾಯತ ಧರ್ಮ ವಿಚಾರಕ್ಕೆ ನಾವು ಕೈ ಹಾಕಿ ತಪ್ಪು ಮಾಡಿದ್ದೇವೆ. ಧರ್ಮ ಒಡೆಯಲು ಹೋಗಿಯೇ ನಾವು ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಕಾಣುವಂತಾಯಿತು. ಈ ವಿಚಾರದದಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದರು. ಮತಯಾಚನೆ ಮಾಡುವಾಗಲೂ ಡಿಕೆಶಿವಕುಮಾರ್ ಲಿಂಗಾಯದ ಸಮುದಾಯಗಳ ಜನರ ಜೊತೆ ಕ್ಷಮೆ ಕೇಳಿದ್ದರು. ಕ್ಷಮೆ ಕೇಳಿದ ಪರಿಣಾಮ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಹಿಂದೆ ಸರಿದಿದ್ದ ಲಿಂಗಾಯತ ಸಮುದಾಯದ ಜನ ಮತ್ತೆ ಕೈ ಹಿಡಿದ ಕಾರಣ ಉಗ್ರಪ್ಪ ಜಯಗಳಿಸಲು ನೆರವಾಯಿತು ಎನ್ನುವ ವಿಶ್ಲೇಷಣೆ ಕೇಳಿಬಂದಿದೆ. ಇದನ್ನೂ ಓದಿ: ಸೋಲು ಅನಾಥ, ನಾನೇ ಬಳ್ಳಾರಿ ಸೋಲಿನ ಹೊಣೆ ಹೊರುತ್ತೇನೆ: ಶ್ರೀರಾಮುಲು

    ನಾನು ಚೆಸ್ ಆಡಿಯೇ ಚೆಕ್ ಕೊಡುತ್ತೇನೆ ಎಂದು ಹೇಳಿದ್ದ ಡಿಕೆಶಿ ಬಳ್ಳಾರಿ ಶಾಸಕರಿಗೆ ಟಾರ್ಗೆಟ್ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಮೂಲಕವೇ ಟಾರ್ಗೆಟ್ ಅಸ್ತ್ರವನ್ನು ಪ್ರಯೋಗಿಸಿದ್ದರು. ಯಾರು ಅತಿ ಹೆಚ್ಚು ಲೀಡ್ ತಂದುಕೊಡುತ್ತಾರೋ ಅವರಿಗೆ ಮುಂದಿನ ಸಂಪುಟ ವಿಸ್ತರಣೆಯಲ್ಲಿ ಮಂತ್ರಿ ಸ್ಥಾನ ನೀಡಲಾಗುವುದು ಎಂದು ಸಿದ್ದರಾಮಯ್ಯ ಸಭೆ ನಡೆಸಿ ಟಾರ್ಗೆಟ್ ನೀಡಿದ್ದರು. ಈ ಸಭೆಯಲ್ಲಿ ಡಿಕೆ ಶಿವಕುಮಾರ್ ಸಹ ಭಾಗಿಯಾಗಿದ್ದರು. ಮಂತ್ರಿಗಿರಿ ಸಿಗುತ್ತದೆ ಎನ್ನುವ ಕಾರಣಕ್ಕೆ ಶಾಸಕರು ಮತ್ತು ಕಾರ್ಯಕರ್ತರು ಭಿನ್ನಾಭಿಪ್ರಾಯಗಳನ್ನು ಬದಿಗೆ ತಳ್ಳಿ ಒಗ್ಗಟ್ಟಾಗಿ ಹೋರಾಡಿದ ಪರಿಣಾಮ ಬಳ್ಳಾರಿಯಲ್ಲಿ ಕಾಂಗ್ರೆಸ್ ಈಗ ನಗೆಯನ್ನು ಬೀರಿದೆ.

    ಕಮಲ ಸೋಲಿಗೆ ಕಾರಣಗಳೇನು?:
    ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದ ಜನಾರ್ದನ ರೆಡ್ಡಿ, ನನ್ನ ಶಾಪದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರನನ್ನು ಕಳೆದುಕೊಂಡರು ಎಂದಿದ್ದರು. ಈ ಹೇಳಿಕೆಗೆ ರಾಜಕೀಯ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಜೊತೆ ಬಿಜೆಪಿಯ ಅನೇಕ ನಾಯಕರು ಕೂಡ ಜನಾರ್ದನ ರೆಡ್ಡಿ ವಿರುದ್ಧ ಕಿಡಿಕಾರಿದ್ದರು. ಜನಾರ್ದನ ರೆಡ್ಡಿ ಹೇಳಿಕೆಗಳನ್ನೇ ಕಾಂಗ್ರೆಸ್ ನಾಯಕರು, ಶಾಸಕರು ಚುನಾವಣಾ ಪ್ರಚಾರದ ಅಸ್ತ್ರ ಪ್ರಯೋಗಿಸಿದರು. 2013ರ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಜನಾರ್ದನ ರೆಡ್ಡಿ ಅವರೇ ಕಾರಣವಾಗಿದ್ದರು. ಈಗಲೂ ಅವರ ಹೇಳಿಕೆಯಿಂದ ಮತ್ತೆ ಸೋಲಬೇಕಾಯಿತು ಎನ್ನುವುದು ಬಿಜೆಪಿ ವಲಯದಲ್ಲಿ ಭಾರೀ ಚರ್ಚೆ ಆಗುತ್ತಿದೆ.

    ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಪರ ಪ್ರಚಾರದಲ್ಲಿ ಶ್ರೀರಾಮುಲು ಅವರು ಏಕಾಂಗಿಯಾಗಿ ಹೋರಾಡಿದರು. ಬಳ್ಳಾರಿ ಉಪಚುನಾವಣೆ ಬಗ್ಗೆ ಬಿಜೆಪಿ ನಾಯಕರು ನಿರ್ಲಕ್ಷ್ಯ ತೋರಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪುತ್ರ ಬಿ.ವೈ.ರಾಘವೇಂದ್ರ ಪರ ಪ್ರಚಾರಕ್ಕೆ ಇಳಿದು, ಸ್ವ ಕ್ಷೇತ್ರದ ಉಳಿವಿಗಾಗಿ ಹೋರಾಡಿದರು.

    ಉಪ ಚುನಾವಣೆ ಬಳಿಕ ಶ್ರೀರಾಮುಲು ಅವರೇ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಳ್ಳಾರಿಯಲ್ಲಿ ಶಾಸಕ ಸೋಮಣ್ಣ ಪ್ರಚಾರ ಮಾಡಿದ್ದರು. ಇದರಿಂದಾಗಿ ಬಿಜೆಪಿ ವಲಯದಲ್ಲಿ ಒಡಕು ಉಂಟಾಗಿತ್ತು. ಸೋಮಣ್ಣ ಅವರ ಹೇಳಿಕೆಯಿಂದ ವಿಚಲಿತಗೊಂಡಿದ್ದ ಬಿ.ಎಸ್.ಯಡಿಯೂರಪ್ಪ ಅವರು ಶ್ರೀರಾಮುಲು ಬೆನ್ನಿಗೆ ನಿಲ್ಲಲು ಹಿಂದೇಟು ಹಾಕಿದರು ಎನ್ನುವ ವಿಶ್ಲೇಷಣೆಯೂ ಕೇಳಿಬರುತ್ತಿದೆ.

    ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಸಹೋದರರ 14 ವರ್ಷಗಳ ಆಟಕ್ಕೆ ಕಾಂಗ್ರೆಸ್ ಟ್ರಬಲ್ ಶೂಟರ್ ಬ್ರೆಕ್ ಹಾಕಿದರು ಎನ್ನಲಾಗುತ್ತಿದೆ. ಅಷ್ಟೇ ಬದಾಮಿ ವಿಧಾನಸಭಾ ಚುನಾವಣೆ ಸೋಲಿನ ಬಳಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎರಡನೇ ದೊಡ್ಡ ಸೋಲನ್ನು ಶ್ರೀರಾಮುಲು ಬಳ್ಳಾರಿಯಲ್ಲಿ ಅನುಭವಿಸಿದ್ದಾರೆ. ಒಂದು ಕಾಲದಲ್ಲಿ ಗೆಳೆಯರಾಗಿದ್ದ ಹಾಗೂ ಹಾಲಿ ಶಾಸಕರಾದ ನಾಗೇಂದ್ರ ಹಾಗೂ ಆನಂದ್ ಸಿಂಗ್ ಅವರಿಂದಲೇ ಶ್ರೀರಾಮುಲು ವಿರುದ್ಧವೇ ಪ್ರಚಾರ ನಡೆಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾವು ಬಡವರು, ನಾವೇನು ಮಾಡೋಣ: ಬಿಜೆಪಿ ವಿರುದ್ಧ ಡಿಕೆಶಿ ವ್ಯಂಗ್ಯ

    ನಾವು ಬಡವರು, ನಾವೇನು ಮಾಡೋಣ: ಬಿಜೆಪಿ ವಿರುದ್ಧ ಡಿಕೆಶಿ ವ್ಯಂಗ್ಯ

    ಬೆಂಗಳೂರು: ರಾಮನಗರದ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಅವರನ್ನು ಸಚಿವ ಡಿಕೆ ಶಿವಕುಮಾರ್ ಸಹೋದರರು ದುಡ್ಡು ಕೊಟ್ಟು ಖರೀದಿ ಮಾಡಿದ್ದಾರೆ ಎನ್ನುವ ಆರೋಪಕ್ಕೆ ನಾವು ಬಡವರು, ನಾವೇನು ಮಾಡೋಣ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ನನಗೆ ಈ ಅಪರೇಶನ್ ಬಗ್ಗೆ ಗಮನವಿಲ್ಲ. ಅಕ್ಟೋಬರ್ 6 ರಂದು ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಇದು ಮಾತ್ರ ನನ್ನ ಗಮನದಲ್ಲಿದೆ. ಸಿ.ಪಿ ಯೋಗೇಶ್ವರ್, ಅಶ್ವತ್ಥ್ ನಾರಾಯಣ್, ಬಿಜೆಪಿ ಮುಖಂಡರು, ಶಾಸಕರು ಹಾಗೂ ಸಚಿವರು ಹಣದ ಮೂಟೆಗಳನ್ನು ನಮ್ಮ ಶಾಸಕರಿಗೆ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಹಾಗಾಗಿ ಅವರು 6ನೇ ತಾರೀಖು ಸರ್ಕಾರ ರಚನೆ ಮಾಡಬೇಕು ಎಂದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

    ನನಗೆ ಈ ವಿಷಯದ ಬಗ್ಗೆ ಏನೂ ಗೊತ್ತಿಲ್ಲ. ನನಗೆ ರಾಮನಗರದ ಬಗ್ಗೆ ಏನೂ ಗೊತ್ತಿಲ್ಲ. ಬಿಜೆಪಿಯವರು ಮಾತ್ರ ಅಪರೇಶನ್ ಮಾಡಲು ಸಾಧ್ಯ. ಬಿಜೆಪಿಯವರು ಇದರಲ್ಲಿ ನಿಸ್ಸೀಮರು. ಬಿಜೆಪಿಯವರು ರಾಜಕಾರಣದ ಪ್ರತಿ ಹಂತದಲ್ಲಿ ಹಣ ನೀಡಿ ಮುಂದೆ ಬಂದವರು. ಇದು ಅವರ ನಿತ್ಯ ಜೀವನ. ಹಾಗಾಗಿ ಅವರು ನಾನು ಹಣ ನೀಡಿ ಖರೀದಿ ಮಾಡಿದ್ದೇನೆ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

    ರಾಘವೇಂದ್ರ ಅವರು ಈ ಬಗ್ಗೆ ಹೇಳಿ ಇದು ಒಂದು ಪಾಠ ಎಂದು ಹೇಳಿದ್ದಾರೆ. ನನಗೆ ಈ ಬಗ್ಗೆ ಯಾವ ವಿಷಯನೂ ಗೊತ್ತಿಲ್ಲ. ಬಳ್ಳಾರಿ ಬಡವರನ್ನು ನನಗೆ ಬಿಟ್ಟುಬಿಡಿ. ನಾನು ಅವರ ಸೇವೆ ಮಾಡುತ್ತೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಿನೇಶ್ ಗುಂಡೂರಾವ್‍ರನ್ನು ಕರೆಸಿ ರಮೇಶ್ ಜಾರಕಿಹೊಳಿಗೆ ಟಕ್ಕರ್ ಕೊಟ್ಟರಾ ಡಿಕೆಶಿ!

    ದಿನೇಶ್ ಗುಂಡೂರಾವ್‍ರನ್ನು ಕರೆಸಿ ರಮೇಶ್ ಜಾರಕಿಹೊಳಿಗೆ ಟಕ್ಕರ್ ಕೊಟ್ಟರಾ ಡಿಕೆಶಿ!

    ಬಳ್ಳಾರಿ: ಕೂಡ್ಲಿಗಿ ಬಹಿರಂಗ ಸಭೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಕರೆಸುವ ಮೂಲಕ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಟಕ್ಕರ್ ಕೊಟ್ಟರಾ ಎಂಬ ಪ್ರಶ್ನೆಯೊಂದು ಉಪ ಕದನದಲ್ಲಿ ಸುಳಿದಾಡುತ್ತಿದೆ.

    ಉಪಚುನಾವಣೆ ಪ್ರಚಾರಕ್ಕಾಗಿ ಬಳ್ಳಾರಿಗೆ ಡಿ.ಕೆ.ಶಿವಕುಮಾರ್ ಮಂಗಳವಾರ ಆಗಮಿಸುತ್ತಿದ್ದಂತೆ ಸಚಿವ ರಮೇಶ್ ಜಾರಕಿಹೊಳಿ ಕೂಡ್ಲಿಗೆ ಬಹಿರಂಗ ಸಭೆಗೆ ಗೈರು ಆಗಲು ಮುಂದಾಗಿದ್ದರು. ಈ ಬೆಳವಣಿಗೆ ಅರಿತು ಡಿ.ಕೆ.ಶಿವಕುಮಾರ್ ಅವರು ದಿನೇಶ್ ಗುಂಡೂರಾವ್ ಅವರನ್ನೇ ಕ್ಷೇತ್ರಕ್ಕೆ ಕರೆಸಿಕೊಂಡಿದ್ದಾರೆ.

    ಇದಕ್ಕೂ ಮುನ್ನ ರಮೇಶ್ ಜಾರಕಿಹೊಳಿ ಅವರ ದಿಢೀರ್ ಗೈರಿನ ಕುರಿತು ಮಾಧ್ಯಮಗಳು ಪ್ರಶ್ನಿದ್ದಕ್ಕೆ, ಉಸ್ತುವಾರಿಯನ್ನು ಹಂಚಿಕೆ ಮಾಡಿದ್ದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್. ನೀವು ಅವರನ್ನೇ ಪ್ರಶ್ನೇ ಮಾಡಿ ಎಂದು ಗರಂ ಆಗಿ ಪ್ರತಿಕ್ರಿಯೆ ನೀಡಿದ್ದರು. ಸಚಿವರ ಕಿತ್ತಾಟವನ್ನು ಹತ್ತಿಕ್ಕಲು ದಿನೇಶ್ ಗುಂಡೂರಾವ್ ಕ್ಷೇತ್ರಕ್ಕೆ ಆಗಮಿಸಿದ್ದಾರಾ ಎನ್ನುವ ಚರ್ಚೆ ಪಕ್ಷದ ವಲಯದಲ್ಲಿ ಹರಿದಾಡುತ್ತಿದೆ.

    ಕೂಡ್ಲಗಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರದ ಉಸ್ತುವಾರಿಯನ್ನು ರಮೇಶ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಮುಖಂಡರು ವಹಿಸಿದ್ದಾರೆ. ಇದರಿಂದಾಗಿ ಕ್ಷೇತ್ರದಲ್ಲಿ ಪ್ರಚಾರದ ಸಿದ್ಧತೆ ಮಾಡಿಕೊಂಡಿದ್ದ ಸಚಿವರು ಕಳೆದ ಎರಡು ದಿನಗಳಿಂದ ಕಾಂಗ್ರೆಸ್ ನಾಯಕರ ಸಭೆ ನಡೆಸಿದ್ದರು. ಕೂಡ್ಲಗಿ ಸಂತೆ ಮೈದಾನದಲ್ಲಿ ಇಂದು ಬಹಿರಂಗೆ ಸಭೆ ಆಯೋಜಿಸಲಾಗಿತ್ತು. ಆದರೆ ಕ್ಷೇತ್ರಕ್ಕೆ ಡಿ.ಕೆ.ಶಿವಕುಮಾರ್ ಆಗಮಿಸಿದರು ಅಂತಾ ರಮೇಶ್ ಜಾರಕಿಹೊಳಿ ಅವರು ಸಭೆಗೆ ಗೈರು ಆಗಿದ್ದಾರಂತೆ ಎನ್ನಲಾಗುತ್ತಿದೆ.

    ಬಹಿರಂಗ ಸಭೆಗೆ ಹಿನ್ನಡೆಯಾಗದಂತೆ ನೋಡಿಕೊಳ್ಳಲು ಮುಂದಾದ ಡಿ.ಕೆ.ಶಿವಕುಮಾರ್ ಅವರು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸಿ ರಮೇಶ್ ಜಾರಕಿಹೊಳಿ ಅವರಿಗೆ ಟಕ್ಕರ್ ನೀಡಿದ್ದಾರಂತೆ. ಇತ್ತ ಕೂಡ್ಲಗಿ ಮುಖಂಡರಿಗೆ ಇಂದು ಬೆಳಗ್ಗೆ ಕರೆ ಮಾಡಿದ ಸಚಿವರು, ಎರಡು ದಿನ ಬಿಟ್ಟು ಕ್ಷೇತ್ರಕ್ಕೆ ಬರುವುದಾಗಿ ತಿಳಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರು ಇಂದಿನಿಂದ ಕೂಡ್ಲಗಿ ಕ್ಷೇತ್ರದಲ್ಲಿ ಏಕಾಂಗಿಯಾಗಿ ಪ್ರಚಾರ ಆರಂಭಿಸಿದ್ದಾರೆ. ಈ ಮೂಲಕ ರಮೇಶ್ ಜಾರಕಿಹೊಳಿ ಉಸ್ತುವಾರಿ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಇಂದು ಬಹಿರಂಗ ಸಭೆ ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಜೆಪಿ ಮುಗಿಸಲು ಪಕ್ಷ ಕಟ್ಟಿದ ಶ್ರೀರಾಮುಲುರನ್ನು ನಾವು ಸೋಲಿಸೋಕಾಗುತ್ತಾ- ಡಿಕೆಶಿ ವ್ಯಂಗ್ಯ

    ಬಿಜೆಪಿ ಮುಗಿಸಲು ಪಕ್ಷ ಕಟ್ಟಿದ ಶ್ರೀರಾಮುಲುರನ್ನು ನಾವು ಸೋಲಿಸೋಕಾಗುತ್ತಾ- ಡಿಕೆಶಿ ವ್ಯಂಗ್ಯ

    ಚಿತ್ರದುರ್ಗ: ಬಳ್ಳಾರಿ ಉಪಚುನಾವಣೆ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಶ್ರೀರಾಮುಲು ಅವರ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಇಬ್ಬರೂ ನಾಯಕರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಶ್ರೀರಾಮುಲು ಅವರನ್ನು ನಾವು ಸೋಲಿಸುವುದಕ್ಕೆ ಆಗುತ್ತಾ ಎನ್ನುವ ಮೂಲಕ ಇಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

    ನಗರದ ಮುರುಘಾ ಶರಣರನ್ನು ಭೇಟಿ ಮಾಡಿ ಬಳಿಕ ಮಾತನಾಡಿದ ಸಚಿವರು, ಶ್ರೀರಾಮುಲು ಅವರೇ ಪಕ್ಷ ಕಟ್ಟಿ, ಬಿಜೆಪಿ ಸೋಲಿಸಲು ಹೊರಟಿದ್ದರು. ದೊಡ್ಡವರ ಬಗ್ಗೆ ನಾನು ಮಾತನಾಡಲ್ಲ ಎಂದು ಲೇವಡಿ ಮಾಡಿದ ಸಚಿವರು, ನನಗೆ ಯಾವುದೇ ವರ್ಚಸ್ಸಿಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಅಷ್ಟೇ ಅಲ್ಲದೆ ನನಗೆ ಅಧಿಕಾರವಿದೆ ಅಂತಾ ಎಲ್ಲಿಯೂ ಹೇಳಿಕೊಂಡಿಲ್ಲ ಎಂದರು.

    ಪ್ರತ್ಯೇಕ ಲಿಂಗಾಯತ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತನಾಡಲು ಮುಕ್ತ ಅವಕಾಶವಿದೆ. ನನ್ನ ಅಭಿಪ್ರಾಯ ಹೇಳಿಕೊಂಡಿದ್ದೇನೆ ಅಷ್ಟೇ ಎಂದು ತಿಳಿಸಿದರು. ಬಜೆಟ್‍ನಲ್ಲಿ ತಿಳಿಸಿದಂತೆ ವೈದ್ಯಕೀಯ ಕಾಲೇಜು ತೆರೆಯಲು ಹಾಗೂ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಸೂಕ್ತ ಕಾನೂನು ಹಾಗೂ ನಿಯಮ ಪಾಲನೆ ಮೂಲಕ ಹಂತ ಹಂತವಾಗಿ ಕಾಲೇಜುಗಳನ್ನು ಪ್ರಾರಂಭಿಸಲಾಗುತ್ತದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಂಕಷ್ಟದಲ್ಲಿ ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆ ಬ್ರದರ್ಸ್

    ಸಂಕಷ್ಟದಲ್ಲಿ ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆ ಬ್ರದರ್ಸ್

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಸಹೋದರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಮನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಯಾವುದೇ ಅಭ್ಯರ್ಥಿಯನ್ನು ಹಾಕಲಿಲ್ಲ. ಇದರಿಂದಾಗಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಗರಂ ಆಗಿದ್ದಾರಂತೆ.

    ಮೈತ್ರಿ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಅಖಾಡಕ್ಕೆ ಇಳಿದಿದ್ದು, ಜೆಡಿಎಸ್‍ಗೆ ಬೆಂಬಲ ನೀಡಿದ್ದಕ್ಕೆ ರಾಮನಗರ ಕ್ಷೇತ್ರದ ಕೈ ಪಾಳಯದ ಮುಖಂಡರು ಹಾಗೂ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಅತ್ತ ಧರಿ ಇತ್ತ ಪುಲಿ ಎಂಬಂತಾದ ಟ್ರಬಲ್ ಶೂಟರ್ ಗಳು ರಾಮನಗರದಲ್ಲಿ ಈ ಬಾರಿ ತೆರೆ ಮರೆಯ ಆಟ ಆಡಬೇಕಾದ ಅನಿವಾರ್ಯ ಎದುರಾಗಿದೆ ಎಂದು ಹೇಳಲಾಗುತ್ತಿದೆ.

    ರಾಜ್ಯ ಮಟ್ಟದ ಹೊಂದಾಣಿಕೆ ಏನೇ ಇರಲಿ, ಜಿಲ್ಲೆಯಲ್ಲಿ ಅದನ್ನೇ ಮುಂದವರಿಸಲು ನಾವು ಸಿದ್ಧರಿಲ್ಲ. ನೀವು ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಕೆಲಸ ಮಾಡಲ್ಲ ಅಂತಾ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರಿಗೆ ಎಚ್ಚರಿಕೆ ನೀಡಿದ್ದಾರಂತೆ. ಕಾರ್ಯಕರ್ತರ ಅಸಮಾಧಾನ ಕಂಡು ಕಂಗಾಲಾದ ಸಂಸದ ಡಿ.ಕೆ.ಸುರೇಶ್ ಅವರು ಸೋಮವಾರ ಅನಿತಾ ಕುಮಾರಸ್ವಾಮಿ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲವಂತೆ.

    ಇತ್ತ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರನ್ನೇ ಚುನಾವಣೆ ಉಸ್ತುವಾರಿಯಾಗಿ ನೇಮಿಸಿದೆ. ಪಕ್ಷದ ಮಾತಿನಂತೆ ಕ್ಷೇತ್ರದ ಪ್ರಚಾರದಲ್ಲಿ ತೊಡಗುವಂತಿಲ್ಲ. ಕಾರ್ಯಕರ್ತರ ಮಾತಿನಂತೆ ಪ್ರಚಾರದಿಂದ ದೂರ ಉಳಿಯುವಂತಿಲ್ಲ. ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಡಿ.ಕೆ.ಸುರೇಶ್ ಸಿಲುಕಿಕೊಂಡಿದ್ದಾರೆ.

    ಸಚಿವ ಡಿ.ಕೆ.ಶಿವಕುಮಾರ್ ಅವರು ಬಳ್ಳಾರಿ ಉಸ್ತುವಾರಿ ಜವಾಬ್ದಾರಿ ಹೊತ್ತು, ರಾಮನಗರದ ಸಹವಾಸವೇ ಬೇಡ ಅಂತಾ ಕಾಲ್ಕಿತ್ತಿದ್ದಾರಂತೆ. ಸಂಸದ ಡಿ.ಕೆ.ಸುರೇಶ್ ಇದ್ದು ಇಲ್ಲದಂತೆ ದೋಸ್ತಿಗಳ ಜೊತೆಗೆ ಬಂದರೂ, ಬರದಂತಹ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದಾರೆ. ಸುಮ್ಮನಿದ್ದು ಬಿಡೋಣ ಅಂತಾ ಡಿ.ಕೆ ಸಹೋದರರು ನಿರ್ಧಾರಕ್ಕೆ ಮುಂದಾದರೆ, ಅವರನ್ನು ಆಯ್ಕೆಗೆ ಶ್ರಮಿಸಿದ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿವ ಆತಂಕ ಉಂಟಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಮಸ್ಕಾರ ಬಿಟ್ಟುಬಿಡ್ರಪ್ಪ, ನನಗೆ ಸಾಕಾಗಿದೆ ಏನಿದ್ರೂ ಅಧ್ಯಕ್ಷರನ್ನೇ ಕೇಳಿ- ಡಿ.ಕೆ ಶಿವಕುಮಾರ್

    ನಮಸ್ಕಾರ ಬಿಟ್ಟುಬಿಡ್ರಪ್ಪ, ನನಗೆ ಸಾಕಾಗಿದೆ ಏನಿದ್ರೂ ಅಧ್ಯಕ್ಷರನ್ನೇ ಕೇಳಿ- ಡಿ.ಕೆ ಶಿವಕುಮಾರ್

    ಬೆಂಗಳೂರು: ಡಿಸ್ಚಾರ್ಜ್ ಆಗುತ್ತಿದ್ದಂತೆ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಮನೆಗೆ ತೆರಳದೆ ಸೀದಾ ಸಿದ್ದರಾಮಯ್ಯ ಅವರನ್ನು ನೋಡಲು ತೆರಳಿದರು. ಈ ವೇಳೆ ಮಾಧ್ಯಮಗಳಿಗೆ ನಮಸ್ಕಾರ ಬಿಟ್ಟುಬಿಡ್ರಪ್ಪ, ನನಗೆ ಸಾಕಾಗಿದೆ, ಏನಿದ್ರೂ ಅಧ್ಯಕ್ಷರನ್ನೇ ಕೇಳಿ ಎಂದು ಹೇಳಿದ್ದಾರೆ.

    ಫುಡ್ ಪಾಯ್ಸನ್‍ನಿಂದ ಕಳೆದ ಮೂರು ದಿನಗಳ ಹಿಂದೆ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಡಿಕೆಶಿ ಗುರುವಾರ ಡಿಸ್ಚಾರ್ಜ್ ಆಗಿದ್ದಾರೆ. ಡಿಸ್ಚಾರ್ಜ್ ಆಗುತ್ತಿದ್ದಂತೆ ಡಿ.ಕೆ ಶಿವಕುಮಾರ್ ಮನೆಗೆ ತೆರಳದೆ ಸೀದಾ ಸಿದ್ದರಾಮಯ್ಯ ಅವರನ್ನು ಕಾಣಲು ಕಾವೇರಿ ನಿವಾಸಕ್ಕೆ ತೆರಳಿದರು. ಡಿಕೆಶಿ ಜೊತೆ ಸಂಸದ ಡಿಕೆ ಸುರೇಶ್ ಮತ್ತು ಕುಣಿಗಲ್ ಶಾಸಕ ಡಾ. ರಂಗನಾಥ್ ಸಹ ತೆರಳಿದರು.

    ರಾಜ್ಯ ರಾಜಕಾರಣದಲ್ಲಿ ನಡೆಯತ್ತಿರುವ ಪೊಲಿಟಿಕಲ್ ಗೇಮ್ ಬಗ್ಗೆ ಸಿದ್ದರಾಮಯ್ಯ ಹೈಕಮಾಂಡ್ ಬಳಿ ಚರ್ಚಿಸಿ ಗುರುವಾರ ಸಂಜೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ನಡೆದ ಚರ್ಚೆಗಳ ಬಗ್ಗೆ ಚರ್ಚಿಸಿರುವ ಸಾಧ್ಯತೆಗಳಿವೆ.

    ಸಿದ್ದರಾಮಯ್ಯ ಜೊತೆ ಚರ್ಚಿಸಿ ಹೊರಬಂದ ಮೇಲೆ ಡಿ.ಕೆ ಶಿವಕುಮಾರ್, ನಮಸ್ಕಾರ ಮಾಡ್ತಿನಿ ಬಿಡ್ರಪ್ಪಾ. ನನಗೆ ಸಾಕಾಗಿದೆ. ಕೆಪಿಸಿಸಿ ಅಧ್ಯಕ್ಷರಿದ್ದಾರೆ. ಅವರೇ ಎಲ್ಲಾ ಹೇಳ್ತಾರೆ ಎಂದು ಹೇಳಿದ್ದರು. ಅಲ್ಲದೇ ಎಂಎಲ್‍ಸಿ ನಾಮಪತ್ರ ಸಲ್ಲಿಕೆ ಮಾಡಬೇಕಿತ್ತು. ಆ ಡೇಟ್ ಯಾವಾಗ ಅಂತಾ ಮಾತುಕತೆ ಆಯ್ತು ಎಂದು ಡಿಕೆಶಿ ಹೇಳಿದ್ದಾರೆ.

    ದೆಹಲಿಯಿಂದ ಬಂದ ನಂತರ ಸಭೆ ಮಾಡಿದ್ದೀವಿ. ರಾಜಕೀಯ ವಿದ್ಯಾಮಾನಗಳ ಬಗ್ಗೆ ಚರ್ಚೆ ಆಯಿತ್ತು. ನಾವೆಲ್ಲ ಒಗ್ಗಟ್ಟಿನಿಂದ ಇದ್ದೇವೆ. ಯಾವುದೇ ಭಯ ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ಒಟ್ಟಿನಲ್ಲಿ ಸಿದ್ದು-ಡಿಕೆಶಿ ಭೇಟಿ ಕುತೂಹಲ ಮೂಡಿಸಿದ್ದು ಮೈತ್ರಿ ಸರ್ಕಾರ ಉಳಿಸಲು ಒಳಗೊಳಗೆ ಏನೋ ಪ್ಲಾನ್ ಮಾಡುತ್ತಿರುವ ಹಾಗೇ ಕಾಣುತ್ತಿದೆ. ಡಿಕೆಶಿ ಇಂದು ದೇವರ ಮೊರೆ ಹೋಗೋ ಸಾಧ್ಯತೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಸ್ಪತ್ರೆಗೆ ಅಡ್ಮಿಟ್ ಮಾಡೋದು, ಬಿಡೋದು ನಮ್ಮ ವೈಯಕ್ತಿಕ ವಿಚಾರ- ಡಿ.ಕೆ.ಸುರೇಶ್ ಗರಂ

    ಆಸ್ಪತ್ರೆಗೆ ಅಡ್ಮಿಟ್ ಮಾಡೋದು, ಬಿಡೋದು ನಮ್ಮ ವೈಯಕ್ತಿಕ ವಿಚಾರ- ಡಿ.ಕೆ.ಸುರೇಶ್ ಗರಂ

    ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಆಗುತ್ತಿದೆ. ಆಸ್ಪತ್ರೆಗೆ ಅಡ್ಮಿಟ್ ಮಾಡುವುದು, ಬಿಡುವುದು ನಮ್ಮ ವೈಯಕ್ತಿಕ ವಿಚಾರ ಎಂದು ಸಂಸದ ಡಿ.ಕೆ.ಸುರೇಶ್ ಮಾಧ್ಯಮಗಳ ವಿರುದ್ಧ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಕನಕಪುರದಿಂದ ಸದಾಶಿವನಗರ ನಿವಾಸಕ್ಕೆ ಡಿ.ಕೆ.ಶಿವಕುಮಾರ್ ಆಗಮಿಸಿದ್ದ ಬೆನ್ನಲ್ಲೇ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಸುರೇಶ್, ಇಬ್ಬರು ವೈದ್ಯರು ಮನೆಯಲ್ಲೇ ಇದ್ದು ಡಿ.ಕೆ.ಶಿವಕುಮಾರ್ ಅವರ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ. ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಂದು ವೇಳೆ ಆರೋಗ್ಯದಲ್ಲಿ ಚೇತರಿಕೆ ಕಾಣದಿದ್ದರೆ ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಡಿ.ಕೆ.ಶಿವಕುಮಾರ್ ಹಾಗೂ ನನ್ನ ವಿರುದ್ಧ ಯಾವುದೇ ನೋಟಿಸ್ ಬಂದಿಲ್ಲ, ಯಾವುದೇ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಆದರೆ ನೋಟಿಸ್ ಬರುತ್ತದೆ ಅಂತಾ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗುತ್ತಿದೆ ಎಂದು ಹೇಳಿದರು.

    ಬೆಂಗಳೂರು ನಿವಾಸಕ್ಕೆ ಡಿ.ಕೆ.ಶಿವಕುಮಾರ್ ಆಗಮಿಸುತ್ತಿದ್ದಂತೆ ಅವರ ಮನೆಗೆ ಕಿಮ್ಸ್ ಜನರಲ್ ಸರ್ಜನ್ ಡಾ.ಬಿ.ಸಿ.ಭಗವಾನ್ ಅವರು ದೌಡಾಯಿಸದರು. ಕಿಟ್ ಸಹಿತ ಬಂದಿದ್ದ ವೈದ್ಯರು, ಬಳಿಕ ಸಚಿವ ಆರೋಗ್ಯ ತಪಾಸಣೆ ಮಾಡಿದ್ದಾರೆ.

    ಡಿಕೆಶಿಗೆ ಫುಡ್ ಪಾಯ್ಸನ್:
    ಕಲಬುರಗಿಯಲ್ಲಿ ಪ್ರವಾಸ ಮುಗಿಸಿದ ಬಳಿಕ ಡಿ.ಕೆ.ಶಿವಕುಮಾರ್ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಡಿದ್ದು, ಬೆಂಗಳೂರಿಗೆ ಬಂದ ಬಳಿಕ ತೀವ್ರವಾಗಿ ವಾಂತಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕನಕಪುರ ಕಾರ್ಯಕ್ರಮ ರದ್ದುಗೊಳಿಸಿ, ಕಗ್ಗಲೀಪುರ ಪ್ರಾಥಾಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಹೈದರಾಬಾದ್‍ನಿಂದ ಬೆಂಗಳೂರಿಗೆ ಆಗಮಿಸಿದ ವಿಮಾನದಲ್ಲಿ ಸ್ಯಾಂಡ್ ವಿಚ್ ತಿಂದ ಪರಿಣಾಮ ಸಚಿವರ ಆರೋಗ್ಯದಲ್ಲಿ ಏರುಪೇರಾಗಿದೆ. ನಿತ್ರಾಣಗೊಂಡಿರುವ ಶಿವಕುಮಾರ್ ಅವರಿಗೆ ವೈದ್ಯರು ಗ್ಲುಕೋಸ್ ಹಾಕಿ, ಚಿಕಿತ್ಸೆ ನೀಡುತ್ತಿದ್ದರು. ಆದರೆ ಈಗ ಅವರನ್ನು ಬೆಂಗಳೂರಿಗೆ ಕರೆತರಲಾಗಿದೆ.

    ಬಂಧನ ಭೀತಿ ತಪ್ಪಿಸಿಕೊಳ್ಳಲು ಪ್ಲಾನ್:
    ಜಾರಿ ನಿರ್ದೇಶನಾಲಯ ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ಸಚಿವ ಡಿ.ಕೆ.ಶಿವಕುಮಾರ್ ಮಾಸ್ಟರ್ ಪ್ಲಾನ್ ನಡೆಸಿದ್ದಾರೆ. ಒಂದು ವೇಳೆ ಇಡಿ ವಿಚಾರಣೆಗೆ ಕರೆದ್ರೆ, ಯಾವ ರೀತಿ ಉತ್ತರ ನೀಡಬೇಕು ಅನ್ನೋದರ ಬಗ್ಗೆ ಹಿರಿಯ ವಕೀಲರಿಂದ ಸಲಹೆ ಪಡೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ಇಡಿ ಬಂಧಿಸಲು ಮುಂದಾದ್ರೆ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ಇಡಿಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಹಿರಿಯ ವಕೀಲರಿಗೆ ಯಾವಾಗ ಏನು ಬೇಕಾದರೂ ಆಗುವ ಸಾಧ್ಯತೆಗಳಿವೆ. ಕಾನೂನಾತ್ಮಕವಾಗಿ ಎಲ್ಲದಕ್ಕೂ ಸಿದ್ಧರಾಗಿರಿ ಎಂದು ಆಪ್ತ ವಕೀಲರಿಗೆ ಡಿ.ಕೆ.ಶಿವಕುಮಾರ್ ಸಂದೇಶ ರವಾನಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನು ಓದಿ: ಇಡಿಯ ಮುಂದಿನ ಕಾನೂನು ಪ್ರಕ್ರಿಯೆ ಏನು? ಡಿಕೆಶಿ ಆಗ್ತಾರಾ ಅರೆಸ್ಟ್? ಮುಂದಿರುವ ದಾರಿ ಏನು?

    ಬುಧವಾರ ಡಿ.ಕೆ.ಶಿವಕುಮಾರ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ಈ ಸಂಬಂಧ ಘಟಾನುಘಟಿ ವಕೀಲರೊಂದಿಗೆ ಸಚಿವರು ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ. ಇಂದು ಮಧ್ಯಾಹ್ನ ಕನಕಪುರದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವರು ಭಾಗಿಯಾಗಬೇಕಿತ್ತು. ಆದ್ರೆ ಸಚಿವರು ಕಾರ್ಯಕ್ರಮಕ್ಕೆ ಡಿ.ಕೆ.ಸಹೋದರರು ಗೈರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಕ್ರಮ ಹಣ ವರ್ಗಾವಣೆ – ಇಡಿಯಲ್ಲಿ ಕೇಸ್ ದಾಖಲು: ಡಿಕೆಶಿಗೆ ಬಂಧನ ಭೀತಿ

    ಅಕ್ರಮ ಹಣ ವರ್ಗಾವಣೆ – ಇಡಿಯಲ್ಲಿ ಕೇಸ್ ದಾಖಲು: ಡಿಕೆಶಿಗೆ ಬಂಧನ ಭೀತಿ

    ನವದೆಹಲಿ: ಅಕ್ರಮ ಹಣವನ್ನು ವರ್ಗಾವಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ಪ್ರಕರಣ ದಾಖಲಿಸಿಕೊಂಡಿದೆ.

    ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ) ಅಡಿಯಲ್ಲಿ ಇಡಿ ಕೇಸ್ ದಾಖಲಿಸಿಕೊಂಡಿದ್ದರಿಂದ ಡಿಕೆಶಿಗೆ ಬಂಧನದ ಭೀತಿ ಎದುರಾಗಿದ್ದು, ಹಿರಿಯ ವಕೀಲರ ಜೊತೆ ಕಾನೂನು ಪ್ರಕ್ರಿಯೆಯ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

    ಶಿವಕುಮಾರ್ ಜೊತೆಗೆ ಸಚಿನ್ ನಾರಾಯಣ್, ಶರ್ಮ ಟ್ರಾವೆಲ್ಸ್ ನ ಸುನೀಲ್ ಕುಮಾರ್ ಶರ್ಮ, ದೆಹಲಿಯ ಕರ್ನಾಟಕ ಭವನದ ಸಿಬ್ಬಂದಿ ಆಂಜನೇಯ ಹನುಮಂತಯ್ಯ ಮತ್ತು ರಾಜ್ಯ ಸರಕಾರದ ನಿವೃತ್ತ ಸಿಬ್ಬಂದಿ ರಾಜೇಂದ್ರ ಅವರನ್ನು ಆರೋಪಿಯನ್ನಾಗಿಸಿ ಕೇಸ್ ದಾಖಲಾಗಿದೆ.

    ದೆಹಲಿ ನಿವಾಸದಲ್ಲಿ ಪತ್ತೆಯಾದ 8.5 ಕೋಟಿ ರೂ. ಸಿಕ್ಕ ಹಣದ ಸಂಬಂಧ ಆದಾಯ ತೆರಿಗೆ ಇಲಾಖೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿತ್ತು. ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ನೀಡಿರುವ ದೂರಿನಲ್ಲಿ ಹವಾಲ ಹಣದ ವಿವರವನ್ನು ಉಲ್ಲೇಖಿಸಿತ್ತು. ಇಲಾಖೆಗೆ ಸುಳ್ಳು ಮಾಹಿತಿ ನೀಡಿದ ಆರೋಪದಡಿ ಐಟಿ ಇಲಾಖೆ ಹಿರಿಯ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ನೀಡಿರುವ ದೂರಿನಲ್ಲಿ ಹವಾಲ ಹಣದ ವಿವರವನ್ನು ಉಲ್ಲೇಖಿಸಿದ್ದಾರೆ. ಈ ದೂರಿನಲ್ಲಿ ಹವಾಲ ಹಣದ ಮೂಲಕ ಕೋಟಿ ಕೋಟಿ ಹಣವನ್ನು ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಕಳುಹಿಸಿಕೊಟ್ಟಿದ್ದಾರೆ ಎಂಬ ಆರೋಪಗಳನ್ನು ಮಾಡಲಾಗಿದೆ.  ಇದನ್ನೂ ಓದಿ: ನೋಟ್ ಬ್ಯಾನ್ ಅವಧಿಯಲ್ಲಿ 2 ಸಾವಿರ ಕೋಟಿ ರೂ. ಬದಲಾವಣೆ ಮಾಡಿಸಿದ್ರಂತೆ ಡಿಕೆಶಿ: ಇಡಿಯಲ್ಲಿ ದೂರು

    ಐಟಿ ದಾಳಿಯಾದ ಬಳಿಕ ಪತ್ತೆಯಾದ ಡೈರಿಯಲ್ಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಡಿಕೆ ಶಿವಕುಮಾರ್ ಮತ್ತು ಆರೋಪಿಗಳನ್ನು ವಿಚಾರಣೆ ನಡೆಸಿದ್ದರು. ಕೆಜಿ ಎಂಬ ಕೋಡ್ ವರ್ಡ್ ಬಳಸಿ ನಗದು ವ್ಯವಹಾರ ನಡೆಸುತ್ತಿದ್ದಾರೆ ಎನ್ನುವ ಅನುಮಾನದ ಮೇರೆಗೆ ಅಧಿಕಾರಿಗಳು ಆರೋಪಿಗಳಿಗೆ ಪ್ರಶ್ನೆ ಕೇಳಿದ್ದಾರೆ. ಆದರೆ ಈ ಪ್ರಶ್ನೆಗಳಿಗೆ ಆರೋಪಿಗಳಿಂದ ಸರಿಯಾದ ಉತ್ತರ ಸಿಕ್ಕಿರಲಿಲ್ಲ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿತ್ತು.

    ಮುಂದೆ ಏನಾಗಬಹುದು?
    ಪ್ರಕರಣಣದ ವಿಚಾರಣೆಗಾಗಿ ಡಿಕೆಶಿಯನ್ನು ಬಂಧಿಸಬಹುದು. ಡಿಕೆಶಿಯವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬಹುದು. ಆರೋಪ ಸಾಬೀತಾದರೆ ಡಿಕೆಶಿ ಹೆಸರಿನಲ್ಲಿರುವ ಎಲ್ಲಾ ಆಸ್ತಿ-ಪಾಸ್ತಿಗಳನ್ನು ಐಟಿ ಇಲಾಖೆ ಮುಟ್ಟುಗೋಲು ಹಾಕಿಕೊಳ್ಳಬಹುದು. ಇದರ ಜೊತೆ 3 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.

    ಯಾವೆಲ್ಲ ಕೇಸ್ ದಾಖಲಾಗಿದೆ?
    ಕೇಸ್ ನಂ 1: ಈಗಲ್‍ಟನ್ ರೆಸಾರ್ಟ್ ನಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಪೇಪರ್ ಹರಿದು ಹಾಕಿದ್ದರಿಂದ, ಐಟಿ ಅಧಿಕಾರಿಗಳು ಸಾಕ್ಷ್ಯ ನಾಶ ಆರೋಪದಡಿ ಪ್ರಕರಣ ದಾಖಲಿಸಿದ್ದರು.

    ಕೇಸ್ ನಂ 2:
    ಡಿಕೆಶಿಯವರು ಅಕ್ರಮವಾಗಿ ಕೋಟ್ಯಾಂತರ ರೂಪಾಯಿಯನ್ನು ಹವಾಲಾ ಮೂಲಕ ಬೆಂಗಳೂರಿನಿಂದ ದೆಹಲಿಗೆ ರವಾನಿದ್ದಾರೆ ಎನ್ನುವ ಆರೋಪದ ಮೇಲೆ ಹವಾಲಾ ಪ್ರಕರಣ ದಾಖಲಾಗಿತ್ತು.

    ಕೇಸ್ ನಂ 3:
    ಡಿಕೆಶಿಯವರಿಗೆ ಸೇರಿರುವ ದೆಹಲಿಯ ಅಪಾರ್ಟ್‍ಮೆಂಟ್‍ವೊಂದರಲ್ಲಿ ದಾಖಲೆ ರಹಿತ 8.50 ಕೋಟಿ ರೂಪಾಯಿ ಹಣ ಪತ್ತೆಯಾಗಿತ್ತು. ಇದರ ವಿರುದ್ಧ ಐಟಿ ಅಧಿಕಾರಿಗಳು ದಾಖಲೆ ರಹಿತ ಹಣ ಸಂಗ್ರಹ ಆರೋಪದಡಿ ಪ್ರಕರಣ ದಾಖಲಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv