Tag: D J Halli

  • ಮೂರು ಕಾರಣಗಳಿಗೆ ಹೊತ್ತಿ ಉರಿಯಿತು ಬೆಂಗಳೂರು- ವಿಚಾರಣೆ ವೇಳೆ ಬಾಯಿಬಿಟ್ಟ ಕಿರಾತಕರು

    ಮೂರು ಕಾರಣಗಳಿಗೆ ಹೊತ್ತಿ ಉರಿಯಿತು ಬೆಂಗಳೂರು- ವಿಚಾರಣೆ ವೇಳೆ ಬಾಯಿಬಿಟ್ಟ ಕಿರಾತಕರು

    ಬೆಂಗಳೂರು: ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಾಟೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರೋಪಿಗಳು ಕೆಲ ವಿಚಾರಗಳನ್ನು ಬಾಯಿ ಬಿಟ್ಟಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿ ದೊಂಬಿ ಎಬ್ಬಿಸಿದ್ದಕ್ಕೆ ಕಾರಣಗಳನ್ನ ಕೊಟ್ಟಿದ್ದಾರೆ. ಮೂರು ಕಾರಣಗಳಿಂದಾಗಿ ಬೆಂಗಳೂರು ಹೊತ್ತಿ ಉರಿದಿದೆ ಎಂದು ತಿಳಿದು ಬಂದಿದೆ.

    ಬೆಂಗಳೂರಲ್ಲಿ ದೊಂಬಿ ಎಬ್ಬಿಸಿದ್ದಕ್ಕೆ ಕಾರಣ ಕೊಟ್ಟ ಕಿರಾತಕರು!
    1. ಎನ್‍ಆರ್ ಸಿ ಸಿಟ್ಟೇ ಬೆಂಗಳೂರು ಗಲಭೆಗೆ ಕಾರಣವಂತೆ
    2. ‘ನಮ್ಮನ್ನು ದೇಶ ಬಿಟ್ಟು ಓಡಿಸ್ತಾರೆ, ನಾವು ಹುಟ್ಟಿದ್ದು ಇಲ್ಲೇ’
    3. ‘ನಮಗೆ ಸ್ವಾತಂತ್ರ್ಯ ಇಲ್ವಾ? ನಾವ್ಯಾಕೆ ದೇಶ ಬಿಡಬೇಕು?’

    ಗಲಾಟೆ ನಡೆದ ಸ್ಥಳದಲ್ಲಿ ಮೂರು ಪ್ರಚೋದನೆಯ ಮಾತುಗಳನ್ನು ಕೇಳಿದ ಕಿಡಿಗೇಡಿಗಳು ದೊಂಬಿ ಎಬ್ಬಿಸಿದ್ದಾರೆ. ನಮ್ಮ ಕೋಪವನ್ನು ಗಲಭೆ ಮೂಲಕ ತೀರಿಸಿಕೊಂಡಿದ್ದೇವೆ ಎಂದು ಕಿಡಿಗೇಡಿಗಳು ಪೊಲೀಸರ ಮುಂದೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ನವೀನ್ ಆಯೋಧ್ಯೆಯಲ್ಲಿ ರಾಮ ಮಂದಿನ ನಿರ್ಮಾಣದ ಕುರಿತು ಕೆಲ ಪೋಸ್ಟ್ ಮಾಡಿಕೊಂಡಿದ್ದು, ಗಲಭೆಗೆ ಕಾರಣವಾಗಿದೆ.

  • ಕೆಜಿ ಹಳ್ಳಿ ಗಲಾಟೆ-ಮಾಜಿ ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ

    ಕೆಜಿ ಹಳ್ಳಿ ಗಲಾಟೆ-ಮಾಜಿ ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ

    -ಎರಡೂ ಸಮುದಾಯದವರು ಸಂಯಮದಿಂದ ವರ್ತಿಸಿ

    ಬೆಂಗಳೂರು: ಕೆಜಿ ಹಳ್ಳಿಯ ಗಲಾಟೆಗೆ ಸಂಬಂಧಿಸಿದಂತೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ನೀಡಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಕಳೆದ ರಾತ್ರಿ ಕಾವಲಭೈರಸಂದ್ರದಲ್ಲಿ ನಡೆದ ಗಲಭೆ ಮತ್ತು ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳೆರಡೂ ಖಂಡನೀಯ. ಹಿಂದೂ-ಮುಸ್ಲಿಂ ಎರಡು ಸಮುದಾಯದವರು ಸಂಯಮದಿಂದ ವರ್ತಿಸಿ ಶಾಂತಿ ಕಾಪಾಡಬೇಕೆಂದು ಕೈಮುಗಿದು ಮನವಿ ಮಾಡುತ್ತಿದ್ದೇನೆ. ಗಲಭೆಗೆ ಪ್ರಚೋದಿಸಿದ್ದ ಮತ್ತು ಹಿಂಸಾಚಾರದ ಮೂಲಕ ಪ್ರತಿಕ್ರಿಯಿಸಿದ್ದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸ್ ಕಮಿಷನರ್‍ಗೆ ತಿಳಿಸಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ದುಷ್ಕರ್ಮಿಗಳ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆ – ಭಯದಿಂದ ಬಾತ್‍ರೂಮಿನಲ್ಲಿ 3 ಗಂಟೆ ಬಚ್ಚಿಟ್ಟುಕೊಂಡಿದ್ದ ಕುಟುಂಬ

    ಶಾಂತಿ ಸ್ಥಾಪನೆಯ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ನಮ್ಮ ಪಕ್ಷದ ಸಂಪೂರ್ಣ ಸಹಕಾರ ಇದೆ. ಇಂತಹ ಕೋಮು ಗಲಭೆಗಳಲ್ಲಿ ಸಾವು-ನೋವಿಗೆ ಈಡಾಗುವವರು ಅಮಾಯಕರು ಎಂಬ ಸತ್ಯವನ್ನು ಅನುಭವದ ಪಾಠ ನಮಗೆ ಹೇಳಿಕೊಟ್ಟಿದೆ. ಮೊದಲು ಎರಡೂ ಧರ್ಮಗಳ ಹಿರಿಯರು ಒಂದೆಡೆ ಕೂತು ಪರಸ್ಪರ ಮಾತುಕತೆ ಮೂಲಕ ಶಾಂತಿ ಸ್ಥಾಪನೆಗೆ ಪ್ರಯತ್ನ ನಡೆಸಬೇಕೆಂದು ಕೋರುತ್ತೇನೆ. ಇದನ್ನೂ ಓದಿ:  ಬೆಂಕಿ ಹಚ್ಚೋದು ನಮ್ಮ ಸಂಸ್ಕೃತಿಯಲ್ಲ, ನೆಲದ ಕಾನೂನೇ ಅಂತಿಮ: ಖಾದರ್

    ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿ ಖಂಡನೀಯ. ಇದರಿಂದ ಪೊಲೀಸರು ನೈತಿಕ ಸ್ಥೈರ್ಯ ಕಳೆದುಕೊಳ್ಳಬಾರದು. ಇಂತಹ ಪ್ರಕರಣಗಳ ಸಂದರ್ಭಗಳಲ್ಲಿ ಪೊಲೀಸರು ತಕ್ಷಣ ವಿವೇಚನೆಯಿಂದ ನಿರ್ಧಾರ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಸಣ್ಣ ನಿರ್ಲಕ್ಷ್ಯ ಅನಾಹುತಕ್ಕೆ ದಾರಿಮಾಡಿಕೊಡುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪ್ರಚೋದನೆ, ಪುಂಡಾಟಗಳನ್ನು ಸರ್ಕಾರ ಕಿಂಚಿತ್ತೂ ಸಹಿಸಲ್ಲ: ಸಿಎಂ ಬಿಎಸ್‍ವೈ

  • ಸಮೋಸಾಗಾಗಿ ಬಿತ್ತು ಹೆಣ- ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಬರ್ಬರ ಕೊಲೆ

    ಸಮೋಸಾಗಾಗಿ ಬಿತ್ತು ಹೆಣ- ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಬರ್ಬರ ಕೊಲೆ

    ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದಾಗಿ ಸೈಲೆಂಟ್ ಆಗಿದ್ದ ರೌಡಿಗಳು ಮತ್ತೆ ವೈಲೆಂಟ್ ಆಗಿದ್ದಾರೆ. ಸಮೋಸಾ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಪುಡಿ ರೌಡಿಗಳು ಓರ್ವ ರೌಡಿಶೀಟರ್‌ನನ್ನು ಬರ್ಬರವಾಗಿ ಕೊಲೆಗೈದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

    ಮುಜಾಯಿದ್ದೀನ್ ಅಲಿಯಾಸ್ ಮುಜ್ಜಾ ಕೊಲೆಯಾದ ರೌಡಿಶೀಟರ್. ಜಾಪರ್ ಕೊಲೆಗೈದ ಆರೋಪಿ. ಡಿಜೆ ಹಳ್ಳಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಜಾಪರ್  ಕೃತ್ಯ ಎಸಗಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಜನರು ಬೆಚ್ಚಿಬಿದ್ದಿದ್ದಾರೆ.

    ಆರೋಪಿ ಜಾಪರ್

    ಕೊಲೆಯಾದ ಮುಜಾಯಿದ್ದೀನ್ ಡಿಜೆ ಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ. ಇಂದು ಸಂಜೆ ತನ್ನ ಪರಿಚಿತರ ಯುವಕ ಜಾಪರ್ ಜೊತೆಗೆ ಸಮೋಸಾ ತಿನ್ನಲು ಹೋಗಿದ್ದ. ಈ ವೇಳೆ ಸಮೋಸಾ ವಿಚಾರವಾಗಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಅಷ್ಟೇ ಅಲ್ಲದೆ ಹಳೇ ದ್ವೇಷದ ಹಿನ್ನೆಲೆ ಗಲಾಟೆ ಜೋರಾಗಿ ಕೋಪದಲ್ಲಿದ್ದ ಜಾಪರ್ ಜಾಕುವಿನಿಂದ ಮುಜಾಯಿದ್ದೀನ್ ಕತ್ತು ಸೀಳಿ ಕೊಲೆಗೈದಿದ್ದಾನೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಡಿಜೆ ಹಳ್ಳಿ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.