ದುಬಾರಿ ಬಜೆಟ್, ಸ್ಟಾರ್ ನಟರು ಇಲ್ಲದೇ ಸಿನಿಮಾ ಗೆಲ್ಲಿಸಬಹುದು ಎನ್ನುವುದಕ್ಕೆ ಸು ಫ್ರಂ ಸೋ ಸಿನಿಮಾ ಸಾಕ್ಷಿ ಎಂದಿದ್ದಾರೆ ನಟಿ ರಮ್ಯಾ. ದರ್ಶನ್ ರೀತಿಯ ಸ್ಟಾರ್ ನಟರು ಜೈಲಿಗೆ ಹೋದಾಗ, ಸಿನಿಮಾ ರಂಗ ಪಾತಾಳಕ್ಕೆ ಬೀಳುತ್ತದೆ. ಸ್ಟಾರ್ ನಟರು ಸಿನಿಮಾ ಮಾಡದೇ ಇದ್ದರೆ ಸಿನಿಮಾ ರಂಗಕ್ಕೆ ನಷ್ಟಕ್ಕೆ ತಿರುಗುತ್ತಾ? ಎಂದು ಕೇಳಲಾದ ಪ್ರಶ್ನೆಗೆ ರಮ್ಯಾ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ. ಸು ಫ್ರಂ ಸೋನಲ್ಲಿ ಯಾವ ಸ್ಟಾರ್ ನಟರು ಇದ್ದಾರೆ?.. ಕಂಟೆಂಟ್ ಚೆನ್ನಾಗಿದ್ದರೆ ಸಿನಿಮಾ ಗೆಲ್ಲುತ್ತದೆ ಅಂದಿದ್ದಾರೆ ರಮ್ಯಾ.
ದರ್ಶನ್ ಬಗ್ಗೆ ರಮ್ಯಾ ಹೇಳಿದ್ದೇನು?
ದರ್ಶನ್ (Darshan) ಲೈಟ್ಬಾಯ್ ಆಗಿ ಬಂದ್ರೂ ಕಷ್ಟಪಟ್ಟು ಮೇಲೆ ಬಂದಿದ್ರು. ಆದ್ರೆ ಜೀವನ ಹಾಳುಮಾಡಿಕೊಂಡ್ರು ಅಂತ ನಟಿ ರಮ್ಯಾ (Actress Ramya) ಕೊಲೆ ಆರೋಪಿ ದಚ್ಚು ಬಗ್ಗೆ ಸಾಫ್ಟ್ ಕಾರ್ನರ್ ತೋರಿದ್ದಾರೆ. ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ, ನಾನು ಹೇಳಬೇಕಾದ್ದನ್ನೆಲ್ಲ ಹೇಳಿದ್ದೀನಿ. ದೂರು ಕೊಟ್ಮೇಲೆ ಬ್ಯಾಡ್ ಕಾಮೆಂಟ್ಸ್ ಬರ್ತಿಲ್ಲ. ಎಷ್ಟೋ ಜನ ಪೋನ್ ಸ್ವಿಚ್ ಆಫ್ ಮಾಡಿ ಮನೆ ಬಿಟ್ಟಿದ್ದಾರೆ. ಇನ್ನಷ್ಟು ಮಂದಿ ಅರೆಸ್ಟ್ ಆಗಿದ್ದಾರೆ. ದರ್ಶನ್ ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಬಂದವರಾಗಿದ್ದರೂ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ರು. ಆದ್ರೆ ಜೀವನ ಹಾಳು ಮಾಡಿಕೊಂಡ್ರು. ಹೀಗೆ ಆಗದೇ ಇದ್ದಿದ್ದರೇ ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳಿಯಬಹುದಿತ್ತು ಎಂದರಲ್ಲದೇ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸುವುದಾಗಿ ಹೇಳಿದರು.
ಮುಂದುವರಿದು… ಸುಪ್ರೀಂ ತೀರ್ಪಿನಿಂದ ರೇಣುಕಾಸ್ವಾಮಿ ಹೆಂಡತಿ ಮಗುವಿಗೆ ನ್ಯಾಯ ಸಿಕ್ಕಿದೆ. ಈ ಬೆಳವಣಿಗೆಯಿಂದ ಹೆಣ್ಣುಮಕ್ಕಳಿಗೆ ಧೈರ್ಯ ಬಂದಿದೆ. ಎಲ್ಲ ಒಳ್ಳೆಯದಾಗಿದೆ ಅಂದುಕೊಳ್ತೀನಿ ಅಂತ ಹೇಳಿದ್ದಾರೆ. ಇನ್ನೂ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸೋಶಿಯಲ್ ಮೀಡಿಯಾ ಹ್ಯಾಂಡಲ್ ಜವಾಬ್ದಾರಿ ಹೊತ್ತ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ನಡೆಯನ್ನು ಸ್ವಾಗತಿಸುತ್ತೀನಿ ಅಂದರು. ಇದು ಒಳ್ಳೆ ಬೆಳವಣಿಗೆ, ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಈ ಮೂಲಕ ಒಳ್ಳೆ ಸಂದೇಶ ಕೊಡಬಹುದು. ಅವರು ಸಹ ಹೆಣ್ಣು, ಹೀಗಾಗಿ ಇದು ಒಳ್ಳೆ ಬೆಳವಣಿಗೆ ಅಂತಿನಿ ಅಂದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ಲ್ಲಿ (Renukaswamy Case) ಸುಪ್ರೀಂ (Supreme Court) ಆದೇಶದ ಬೆನ್ನಲ್ಲೇ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಬಗ್ಗೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Actress Ramya) ಸಾಫ್ಟ್ ಕಾರ್ನರ್ ತೋರಿಸಿದ್ದಾರೆ.
ದರ್ಶನ್ ಜೈಲುಪಾಲಾಗಿರುವ ಬಗ್ಗೆ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿರುವ ಅವರು, ನಟ ದರ್ಶನ್ ಜೊತೆ ನಾನು ಸಿನಿಮಾ ಮಾಡಿದ್ದೇನೆ. ಸಿನಿಮಾ ಶೂಟಿಂಗ್ ವೇಳೆ ತಾವು ನಡೆದುಕೊಂಡು ಬಂದ ಹಾದಿ ಬಗ್ಗೆ ನನ್ನ ಬಳಿ ಹಂಚಿಕೊಂಡಿದ್ದರು. ನನಗೆ ಹೆಮ್ಮೆ ಅನಿಸಿತ್ತು. ಲೈಟ್ ಬಾಯ್ ಆಗಿ ಕೆಲಸ ಮಾಡಿ ಈ ಮಟ್ಟಕ್ಕೆ ಬೆಳೆದಿದ್ದಾರೆ. ಆದರೆ ಇತ್ತೀಚಿಗೆ ಅವರ ನಡವಳಿಕೆಯಿಂದ ತುಂಬಾ ಬೇಜಾರಾಗಿತ್ತು. ಎಲ್ಲೋ ಒಂದು ಕಡೆ ಅವರು ತಮ್ಮ ಜೀವನ ಹಾಳು ಮಾಡಿಕೊಂಡರು. ಈ ಮಟ್ಟಕ್ಕೆ ಬೆಳೆದ ಮೇಲೆ ಜವಾಬ್ದಾರಿ ಇರುತ್ತದೆ. ಅವರ ಅಕ್ಕಪಕ್ಕ ಯಾರು ಒಳ್ಳೆಯವರಿಲ್ಲ ಅನಿಸುತ್ತೆ ಗೊತ್ತಿಲ್ಲ. ತಮ್ಮ ಸುತ್ತಮುತ್ತ ಒಳ್ಳೆಯವರನ್ನು ಇಟ್ಟುಕೊಂಡು ಒಳ್ಳೆಯ ದಾರಿಯಲ್ಲಿ ಕರೆದುಕೊಂಡು ಹೋಗಬಹುದಿತ್ತು. ಮೊದಲು ಅಕ್ಕಪಕ್ಕದವರ ಸಹವಾಸ ಬಿಡಬೇಕು ಕಿವಿಮಾತು ಹೇಳಿದ್ದಾರೆ.ಇದನ್ನೂ ಓದಿ: ಬೆಂಗಳೂರು | ನಿಗೂಢ ಸ್ಫೋಟ – ಬಾಲಕ ಸಾವು, 8 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ
ಇನ್ನೊಂದು ಕಡೆ ಜಡ್ಜ್ಮೆಂಟ್ ಕೇಳಿದಾಗ ರಿಲೀಫ್ ಅಂತಾ ಅನಿಸಿದೆ. ಈಗ ನಾವು ಹೋಗುತ್ತಿರುವ ಸಮಾಜ ಕೆಟ್ಟ ದಾರಿಯಲ್ಲಿದೆ. ಹೆಣ್ಣುಮಕ್ಕಳ ರಕ್ಷಣೆ, ಗೌರವ ವಿಷಯದಲ್ಲಿ ಸುಪ್ರೀಂ ಕೋರ್ಟ್ ಆರ್ಡರ್ ಬಂದಾಗ ನಾನು ಮಾಡಿದ ಪೋಸ್ಟ್ಗೆ ಕೆಟ್ಟದಾಗಿ ಕಾಮೆಂಟ್ ಹಾಕುತ್ತಿದ್ದರು. ನಾವೇ ಕಾನೂನು ಕೈಗೆತ್ತಿಕೊಂಡರೆ ಈ ರೀತಿಯ ಕೆಟ್ಟ ಕೆಲಸಗಳು ಆಗುತ್ತವೆ. ಜಡ್ಜ್ಮೆಂಟ್‌ನಿಂದ ಸಮಾಜಕ್ಕೆ ಒಳ್ಳೆಯದಾಗುತ್ತೆ. ಸಮಾಜಕ್ಕೆ ಒಂದೊಳ್ಳೆ ಮೆಸೇಜ್ ಹೋಗಿದೆ. ಯಾರೇ ಆಗಿರಲಿ ಎಲ್ಲರೂ ಸಮಾನರು. ದೊಡ್ಡವರೇ ಆಗ್ಲಿ ಚಿಕ್ಕವರೇ ಆಗ್ಲಿ ಎಲ್ಲರೂ ಕಾನೂನಿನ ಮುಂದೆ ಒಂದೇ ಎಂದು ತಿಳಿಸಿದ್ದಾರೆ.
ಪವಿತ್ರಾ ಗೌಡ ಯಾರು ಅಂತಾ ನನಗೆ ಮೊದಲು ಗೊತ್ತಿರಲಿಲ್ಲ. ಆಕೆಗೆ ಈ ಸ್ಥಿತಿ ಬರಬಾರದಿತ್ತು. ಒಂದು ಕಡೆ ನನಗೆ ಬೇಜಾರಾಗುತ್ತೆ. ಯಾಕಂದ್ರೆ ಪವಿತ್ರಾ ಗೌಡ ಒಬ್ಬ ತಾಯಿ, ಅವರಿಗೆ ಮಗಳಿದ್ದಾಳೆ. ಕಾನೂನು ಕೈಗೆ ತೆಗೆದುಕೊಳ್ಳದೇ ನಾವು ನಿಯಮಗಳ ಪ್ರಕಾರ ನಡೆದುಕೊಂಡಿದ್ರೆ ಇದೆಲ್ಲಾ ಆಗುತ್ತಿರಲಿಲ್ಲ. ನಾವು ಏನಾದರೂ ಮಾಡುವ ಮುಂಚೆ ಯೋಚನೆ ಮಾಡಬೇಕು. ಕೋಪ ಬರೋದು ಸಾಮಾನ್ಯ, ಆದರೆ ಎಲ್ಲರ ಜೀವನದಲ್ಲಿ ಒಳ್ಳೆಯದೇ ಆಗಲ್ಲ. ಕೆಲವೊಂದು ಘಟನೆಗಳು ನಡೆಯುತ್ತವೆ. ಹಾಗಂತ ನಾವು ಕಾನೂನನ್ನ ಕೈಗೆತ್ತಿಕೊಳ್ಳಬಾರದು. ಕಾನೂನು ಪ್ರಕಾರವೇ ನಡೆದುಕೊಂಡು ಬರಬೇಕು. ಮತ್ತೇನಾದರೂ ಆದರೆ ಅಂತ ಜೀವನ ಹಾಳು ಮಾಡಿಕೊಳ್ತೀರಾ? ಅದೇ ರೀತಿ ಬೇರೆಯವರು ಶುರು ಮಾಡ್ಕೊಂಡ್ರೆ ಸಮಾಜ ಹೇಗೆ ಬದಲಾಗುತ್ತೆ? ಎಲ್ಲದಕ್ಕೂ ಒಂದು ಲಿಮಿಟ್ ಇರುತ್ತೆ. ಆದರೆ ಕಾನೂನಿಂದ ನಾವ್ಯಾರು ಎಸ್ಕೇಪ್ ಆಗೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿಕೊಂಡಿರುವ ಅವರು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರರಿಗೆ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪು ಇಂದು ಬಲವಾದ ಸಂದೇಶವನ್ನು ರವಾನಿಸಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಎಲ್ಲರಿಗೂ ನಾನು ಹೇಳುವುದೇನೆಂದರೆ ನ್ಯಾಯಯುತ ಪ್ರಕ್ರಿಯೆಯನ್ನು ಅನುಸರಿಸಿ, ಕಾನೂನು ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿ. ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ, ಎಲ್ಲರಿಗೂ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಬರೆದುಕೊಂಡಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಎಲ್ಲಾ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು. ಈ ಜಾಮೀನು ಆದೇಶವನ್ನು ಪ್ರಶ್ನಿಸಿ ರಾಜ್ಯ ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಗುರುವಾರ (ಆ.14) ಜಾಮೀನು ಅರ್ಜಿಯನ್ನು ರದ್ದುಗೊಳಿಸಿ, ಕೂಡಲೇ ಎಲ್ಲಾ 7 ಆರೋಪಿಗಳು ಸರೆಂಡರ್ ಆಗಬೇಕೆಂದು ಸೂಚನೆ ನೀಡಿತ್ತು.ಇದನ್ನೂ ಓದಿ: ದರ್ಶನ್ ಜಾಮೀನು ರದ್ದು; ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ: ರೇಣುಕಾಸ್ವಾಮಿ ಪತ್ನಿ
ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸಲ್ಲಿ ಆರೋಪಿಗಳಾದ ನಟ ದರ್ಶನ್ (Actor Darshan) ಸೇರಿ ಏಳು ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಭವಿಷ್ಯ ಇಂದು (ಆ.14) ಹೊರಬೀಳಲಿದೆ. ಈ ಹಿನ್ನೆಲೆ ಆರೋಪಿ ಪವಿತ್ರಾ ಗೌಡ (Pavitra Gowda) ಪೋಸ್ಟ್‌ವೊಂದನ್ನು ಹಾಕಿಕೊಂಡಿದ್ದಾರೆ.
ಜಾಮೀನು ಮುಂದುವರೆಯುವ ನಿರೀಕ್ಷೆಯಲ್ಲಿರುವ ಪವಿತ್ರಾ ಗೌಡ ಇನ್ಸ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪೋಸ್ಟ್ನಲ್ಲಿ, ಸತ್ಯವು ಎಲ್ಲಕ್ಕಿಂತ ಹೆಚ್ಚು ಶಕ್ತಿಶಾಲಿ. ಅದು ಯಾವಾಗಲೂ ನ್ಯಾಯವನ್ನು ಕೊಡುತ್ತದೆ. ಈ ಜಗತ್ತಿನಲ್ಲಿರುವ ಎಲ್ಲಕ್ಕಿಂತ ಹೆಚ್ಚಿನ ಶಕ್ತಿಯನ್ನು ಸತ್ಯ ಹೊಂದಿರುತ್ತದೆ. ಎಷ್ಟೇ ಸಮಯ ತೆಗೆದುಕೊಂಡರೂ, ನ್ಯಾಯವು ಯಾವಾಗಲೂ ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ ಎಂದು ಬರೆದುಕೊಂಡಿದ್ದಾರೆ.ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಮಾನಸಿಕ ಸ್ಥಿತಿ ಕುಗ್ಗಿತಾ?- ಅತ್ಯಾಚಾರ ಕೇಸ್ ಅಪರಾಧಿಗೆ ಜೈಲಿನಲ್ಲೇ ಕೌನ್ಸಿಲಿಂಗ್
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಆರೋಪಕ್ಕೆ ಸಂಬಂಸಿದಂತೆ ಪ್ರಕರಣದ ಎ1 ಪವಿತ್ರಾ ಗೌಡ, ಎ2 ದರ್ಶನ್ ಹಾಗೂ `ಡಿ’ ಗ್ಯಾಂಗ್‌ಗೆ ಹೈಕೋರ್ಟ್ ಜಾಮೀನು ನೀಡಿತ್ತು. ರಾಜ್ಯ ಪೊಲೀಸ್ ಇಲಾಖೆ ನಟ ದರ್ಶನ್‌ಗೆ ಹೈಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಾದ-ಪ್ರತಿವಾದ ಆಲಿಸಿ, ಆದೇಶವನ್ನು ಕಾಯ್ದಿರಿಸಿತ್ತು. ಗುರುವಾರ ದರ್ಶನ್, ಪವಿತ್ರಾ ಸೇರಿದಂತೆ ಏಳು ಜನರ ಬೇಲ್ ಭವಿಷ್ಯ ನಿರ್ಧಾರವಾಗಲಿದೆ.
– `ಡಿ’ ಗ್ಯಾಂಗ್‌ನ ಏಳು ಆರೋಪಿಗಳ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಆದೇಶ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಗಳಾದ ನಟ ದರ್ಶನ್ (Actor Darshan) ಸೇರಿ ಏಳು ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಕೋರಿ ಕರ್ನಾಟಕ ಪೊಲೀಸರು (Karnataka Police) ಸಲ್ಲಿಸಿದ್ದ ಅರ್ಜಿ ಭವಿಷ್ಯ ಇಂದು (ಆ.14) ಹೊರಬೀಳಲಿದೆ.
ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸುತ್ತಾ? ಅಥವಾ ಮುಂದುವರೆಯುತ್ತಾ ಎಂಬ ಕುತೂಹಲಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಜೊತೆಗೆ ನಟ ದರ್ಶನ್ ಕೂಡ ಜಾಮೀನು ಮುಂದುವರೆಯುವ ನಿರೀಕ್ಷೆಯಲ್ಲಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣದ ಎ2 ದರ್ಶನ್ ಹಾಗೂ `ಡಿ’ ಗ್ಯಾಂಗ್‌ಗೆ ಹೈಕೋರ್ಟ್ ಜಾಮೀನು ನೀಡಿತ್ತು. ರಾಜ್ಯ ಪೊಲೀಸ್ ಇಲಾಖೆ ನಟ ದರ್ಶನ್‌ಗೆ ಹೈಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಾದ-ಪ್ರತಿವಾದ ಆಲಿಸಿ, ಆದೇಶವನ್ನು ಕಾಯ್ದಿರಿಸಿತ್ತು. ಗುರುವಾರ ದರ್ಶನ್, ಪವಿತ್ರಾ ಸೇರಿದಂತೆ ಏಳು ಜನರ ಬೇಲ್ ಭವಿಷ್ಯ ಹೊರಬೇಳಲಿದೆ.
ಇನ್ನೂ ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಾದ-ಪ್ರತಿವಾದದ ಸಂದರ್ಭದಲ್ಲಿ ದರ್ಶನ್ ಹಾಗೂ ಪವಿತ್ರಾ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಜಾಮೀನು ಮುಂದುವರೆಸುವಂತೆ ಮನವಿ ಮಾಡಿಕೊಂಡಿದ್ದರು.
ಬಂಧನಕ್ಕೆ ಸಂಜೆ 6:30ವರೆಗೆ ಲಿಖಿತ ಕಾರಣ ತಿಳಿಸಿಲ್ಲ, ಇದು ಕಾನೂನು ಉಲ್ಲಂಘನೆ
ಜಾಮೀನು ರದ್ದುಪಡಿಸೋದು ಕಠಿಣ ಕ್ರಮವಾಗಲಿದೆ
ಯಾವುದೇ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ
ಅಪಹರಣದಲ್ಲಿ ಇವರ ಪಾತ್ರ, ಸೂಚನೆಗೆ ಸಾಕ್ಷಿ, ಆಧಾರಗಳಿಲ್ಲ
ದರ್ಶನ್ & ಎ-3 ಪವನ್ ಮಧ್ಯೆ ಮಾತುಕತೆ ನಡೆದಿಲ್ಲ
ವಾಟ್ಸಾಪ್ ಸಂದೇಶ ವಿನಿಮಯವಾಗಿಲ್ಲ
ಸಾಕ್ಷಿಗಳ ಹೇಳಿಕೆಗಳಲ್ಲೇ ಅನುಮಾನವಿದೆ
ಪವಿತ್ರಾಗೌಡ ಹೇಳಿದ್ದೇನು?
ನಾನು ಒಬ್ಬಂಟಿ ಪೋಷಕಳಾಗಿದ್ದೇನೆ ನನಗೆ ಒಬ್ಬಳೇ ಒಬ್ಬಳು ಮಗಳಿದ್ದಾಳೆ
ವಯಸ್ಸಾದ ಪೋಷಕರನ್ನೂ ನೋಡಿಕೊಳ್ಳಬೇಕಿದೆ
ನನಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ
ಮಹಿಳೆ ಆಗಿರೋದ್ರಿಂದ ಜಾಮೀನು ರದ್ದು ಕಠಿಣ ಕ್ರಮವಾಗಲಿದೆ
ಇದೆಲ್ಲದರ ಮಧ್ಯೆ ಸರ್ಕಾರಿ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಕೆಲವು ಮಾಹಿತಿಗಳನ್ನು ನೀಡಿದ್ದರು.
ಮೃತ ರೇಣುಕಾಸ್ವಾಮಿ ದರ್ಶನ್ ಅಭಿಮಾನಿಯಾಗಿದ್ದ.
ದರ್ಶನ್-ಪವಿತ್ರಗೌಡ ಲಿವ್-ಇನ್ ಸಂಬಂಧದಲ್ಲಿದ್ದರು.
ಪವಿತ್ರಾಗೌಡಗೆ ರೇಣುಕಾಸ್ವಾಮಿ ಅವಹೇಳನಕಾರಿ ಸಂದೇಶ ಕಳುಹಿಸಿದ್ದ
ಇದರಿಂದಾಗಿ ಪಟ್ಟಣಗೆರೆ ಶೆಡ್‌ನಲ್ಲಿ ಕೊಲೆ ಮಾಡಲಾಯ್ತು
ಆರೋಪಿಗಳು ಕಿಡ್ನ್ಯಾಪ್, ಕೊಲೆಯಾದ ಸ್ಥಳದಲ್ಲಿದ್ದರು ಅನ್ನೋದು ತನಿಖೆಯಿಂದ ಬಯಲು
ಪಟ್ಟಣಗೆರೆ ಶೆಡ್‌ಗೆ ಪ್ರವೇಶ ಮಾಡೋದನ್ನು ಐವರು ಸಾಕ್ಷಿಗಳು ನೋಡಿದ್ದಾರೆ
ಘಟನಾ ಸ್ಥಳದಿಂದ ಸಂಗ್ರಹಿಸಲಾದ ಮಣ್ಣಿನ ಮಾದರಿ ದೃಢಪಟ್ಟಿದೆ
ಕೊಲೆ ವೇಳೆ ಎ-1 ಪವಿತ್ರಾ, ಎ-2 ದರ್ಶನ್ ಸಕ್ರಿಯ
ರೇಣುಕಾಸ್ವಾಮಿ ರಕ್ತದ ಕಲೆಗಳು ಆರೋಪಿ ಬಟ್ಟೆ ಮೇಲೆ ಕಂಡುಬಂದಿದೆ
ಕೊಲೆ ಮಾಡಲು ಬಳಸಿದ ಆಯುಧಗಳು ಮಾರಕವಲ್ಲ ಅಂತ ಹೈಕೋರ್ಟ್ ಹೇಳಿರುವುದು
ತಪ್ಪು ಸಾಕ್ಷಿ ಪುನೀತ್ ಹೇಳಿಕೆ ತಡವಾಗಿ ದಾಖಲಿಸಿರೋದಕ್ಕೆ ಸೂಕ್ತ ಕಾರಣ ನೀಡಲಾಗಿದೆ
ವಿಧಿವಿಜ್ಞಾನ, ಎಲೆಕ್ಟ್ರಾನಿಕ್ ಮತ್ತು ಸಿಡಿಆರ್ ಪುರಾವೆಗಳನ್ನು ಹೈಕೋರ್ಟ್ ಪರಿಗಣಿಸಿಲ್ಲ
ಎ-2 ದರ್ಶನ್‌ಗೆ ಅಪರಾಧದ ಹಿನ್ನೆಲೆ ಇದೆ
ಬೆನ್ನು ನೋವು ಅಂತ ವಿನಾಯ್ತಿ ಪಡೆದು ಮರುದಿನವೇ ಶೂಟಿಂಗ್‌ಗೆ ಹೋಗಿದ್ದಾರೆ
ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರುವ ಸುಪ್ರೀಂಕೋರ್ಟ್ನ ದ್ವಿಸದಸ್ಯ ಪೀಠ ಮಹತ್ವದ ತೀರ್ಪನ್ನು ನೀಡುವ ಸಾಧ್ಯತೆ ಇದೆ. ಇದರ ಜೊತೆಗೆ ವಿಶೇಷ ಅಂದ್ರೆ `ಇದ್ರೆ ನೆಮ್ದಿಯಾಗ್ ಇರ್ಬೇಕ್’ ಅನ್ನೋ ಸಾಲುಗಳಲ್ಲಿ ಡೆವಿಲ್ ಸಿನಿಮಾ ಹಾಡು ಶುಕ್ರವಾರ (ಆ.15) ರಿಲೀಸ್ ಆಗಲಿದೆ.
– ಡಿ-ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ 1 ವರ್ಷ
ಚಿತ್ರದುರ್ಗ: ಪುತ್ರಶೋಕಂ ನಿರಂತರಂ ಎಂಬಂತೆ ಮಗನ ಸಾವಿನ ನೋವು ನಿರಂತರವಾಗಿ ಕಾಡುತ್ತಿದೆ ಎಂದು ಮೃತ ರೇಣುಕಾಸ್ವಾಮಿ (Renukaswamy Case) ತಂದೆ ಕಾಶಿನಾಥಯ್ಯ ನೋವು ತೋಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇ 29ರಂದೇ ಕಾರ್ಯ ಮಾಡಿದ್ದೇವೆ. ಇಂದಿಗೆ ರೇಣುಕಾಸ್ವಾಮಿ ನಮ್ಮನ್ನಗಲಿ ಒಂದು ವರ್ಷವಾಗಿದೆ. ಹೀಗಾಗಿ ನಾನು, ನನ್ನ ಹೆಂಡತಿ, ಸೊಸೆ ಹಾಗೂ ಮೊಮ್ಮಗ ಎಲ್ಲರೂ ರೇಣುಕಾಸ್ವಾಮಿ ಫೋಟೊಗೆ ಸಾಂಕೇತಿಕವಾಗಿ ಪೂಜೆ ಸಲ್ಲಿಸಿದ್ದೇವೆ. ಪುತ್ರಶೋಕಂ ನಿರಂತರಂ ಎಂಬಂತೆ ಮಗನ ನೋವು ಕಾಡುತ್ತಲೇ ಇದೆ ಎಂದರು.ಇದನ್ನೂ ಓದಿ: ಪೊಲೀಸರದ್ದೇ ತಪ್ಪು, ಸರ್ಕಾರಕ್ಕೆ ಯಾಕೆ ಮುಜುಗರ ಆಗ್ಬೇಕು: ಸಿದ್ದರಾಮಯ್ಯ ಪ್ರಶ್ನೆ
ಇದೇ ವೇಳೆ ನಟ ದರ್ಶನ್ ಅವರಿಗೆ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡಿರುವ ಕುರಿತು ಮಾತನಾಡಿದ ಅವರು, ಅದೆಲ್ಲ ಕಾನೂನು ವಿಚಾರ. ಕಾನೂನು ಒಂದು ಕ್ರಮಕೈಗೊಳ್ಳುತ್ತದೆ. ಮಗನ ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆ ಆಗಬೇಕು. ಸರ್ಕಾರ, ಕೋರ್ಟ್ ಮೇಲೆ ನಂಬಿಕೆ ಇದ್ದು, ಕ್ರಮ ಆಗುತ್ತದೆ ಎಂದುಕೊಂಡಿದ್ದೇವೆ. ಈವರೆಗೂ ನಟ ದರ್ಶನ್ ನಮ್ಮನ್ನು ಸಂಪರ್ಕಿಸಿಲ್ಲ. ನಾವು ಕೂಡ ಯಾವುದೇ ರೀತಿಯ ರಾಜಿ, ಪಂಚಾಯಿತಿಗೆ ಯತ್ನಿಸಿಲ್ಲ. ಒಂದು ವೇಳೆ ಆ ಸಂದರ್ಭ ಬಂದರೆ ನಮ್ಮ ಸಮಾಜದ ಮುಖಂಡರು ನಿರ್ಧಾರಿಸುತ್ತಾರೆ. ಆದರೆ ನನ್ನ ಮಗನ ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆ ಆಗಬೇಕು. ಸೊಸೆ, ಮೊಮ್ಮಗನ ಜೀವನಕ್ಕೆ ಸರ್ಕಾರ ಅನುಕೂಲ ಮಾಡಿಕೊಡಲಿ ಎಂದು ಮನವಿ ಮಾಡಿಕೊಂಡಿದ್ದಾರೆ
ಚಿತ್ರದುರ್ಗ: ನಟ ದರ್ಶನ್ (Darshan) ಮತ್ತು ಗ್ಯಾಂಗ್‌ನಿಂದ ಕೊಲೆಯಾದ ರೇಣುಕಾಸ್ವಾಮಿ (Renukaswamy) ಪತ್ನಿ ಸಹನಾ ಬುಧವಾರ (ಅ.16) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಚಿತ್ರದುರ್ಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಹನಾಗೆ (Sahana) ಹೆರಿಗೆಯಾಗಿದೆ. ರೇಣುಕಾಸ್ವಾಮಿ ಹತ್ಯೆ ಘಟನೆ ವೇಳೆ 5 ತಿಂಗಳ ಗರ್ಭಿಣಿಯಾಗಿದ್ದ ಸಹನಾ, ಗಂಡನ ಸಾವಿನಿಂದ ಭಾರಿ ಆತಂಕಕ್ಕೀಡಾಗಿದ್ದರು. ರೇಣುಕಾಸ್ವಾಮಿ ಸಾವಿನ ನಂತರ ಆತನ ರೂಪದಲ್ಲಿ ಮನೆಗೆ ಗಂಡು ಮಗು ಮರಳಿ ಬರಬಹುದೆಂಬ ನಿರೀಕ್ಷೆಯಲ್ಲಿದ್ರು. ಅಂತೆಯೇ ರೇಣುಕಾಸ್ವಾಮಿ ಕುಟುಂಬಸ್ಥರ ನಂಬಿಕೆಯಂತೆ ಗಂಡು ಮಗುವಿಗೆ ಸಹನಾ ಜನ್ಮ ನೀಡಿದ್ದಾರೆ.
ಇನ್ನೂ ಈ ಕುರಿತು ಮಾಧುಮಗಳೊಂದಿಗೆ ಪ್ರತಿಕ್ರಿಯಿಸಿದ ರೇಣುಕಾಸ್ವಾಮಿ ತಂದೆ ಕಾಶೀನಾಥ್ ಶಿವನಗೌಡ್ರು ಭಾವುಕರಾಗಿದ್ದಾರೆ. ಬೆಳಿಗ್ಗೆ 6.55ಕ್ಕೆ ಗಂಡು ಮಗುವಿಗೆ ಸಹನಜನ್ಮ ನೀಡಿದ್ದಾರೆ. ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದಾರೆ. ನಮ್ಮ ಸೊಸೆ ಗಂಡು ಮಗುವಿಗೆ ಜನ್ಮ ನೀಡಿರೋದು ಮಗನೇ ಮರಳಿ ಬಂದಷ್ಟು ಸಂತಸವಾಗಿದೆ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಸಿಎಂ ರಾಜೀನಾಮೆ ಸುಳಿವು ಸಿಕ್ಕಿದ್ದು ನಾನು ಸಿಎಂ, ನೀನು ಸಿಎಂ ಅಂತ ಕೈ ನಾಯಕರು ಓಡಾಡ್ತಿದ್ದಾರೆ : ಕಾರಜೋಳ
ಆರೋಪಿ ಧನರಾಜು ಮೆಗ್ಗರ್ ಡಿವೈಸ್ ಬಳಸಿ ಕರೆಂಟ್ ಶಾಕ್ ನೀಡಿದ್ದ ಎನ್ನಲಾಗಿದೆ. ಎ5 ಆರೋಪಿ ನಂದೀಶ್ ಜೊತೆಗೂಡಿ, ಮೃತನಿಗೆ ಕರೆಂಟ್ ಶಾಕ್ ನೀಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಬಂಧಿತ ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಮೆಗ್ಗರ್ ಡಿವೈಸ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೂರು ಫ್ಲೋರ್‌ನ ಡ್ಯೂಪ್ಲೆಕ್ಸ್ ಮನೆಯಲ್ಲಿ ವಾಸ- ಪವಿತ್ರಾ ಐಷಾರಾಮಿ ಜೀವನ ಬಹಿರಂಗ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Case) ವಿಚಾರವಾಗಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದರ್ಶನ್ ಗ್ಯಾಂಗ್ ವಿಚಾರಣೆ ಮುಂದುವರಿದಿದೆ. ರೇಣುಕಾಸ್ವಾಮಿ ಕೊಲೆಯಾಗಿದ್ದು ಎಷ್ಟೊತ್ತಿಗೆ? ಹೇಗೆಲ್ಲಾ ಹಲ್ಲೆ ಮಾಡಿ ಕೊಂದಿದ್ದಾರೆ? ಯಾರು ಇದಕ್ಕೆ ಸಾಥ್ ನೀಡಿದ್ದರು ಎಂಬ ಇಂಚಿಂಚು ಮಾಹಿತಿಯನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ಮಾಹಿತಿಗಳು ಡಿ-ಗ್ಯಾಂಗ್ (D Gang) ಕ್ರೌರ್ಯವನ್ನು ಅನಾವರಣ ಮಾಡಿವೆ.
ಸದ್ಯ ಕಸ್ಟಡಿ ಅವಧಿ ಮುಗಿಯಲು ಇನ್ನೆರಡು ದಿನವಷ್ಟೇ ಬಾಕಿ ಉಳಿದ ಕಾರಣ, ಇನ್ನಷ್ಟು ವಿವರ ಬಾಯ್ಬಿಡಿಸಲು ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ತಾಂತ್ರಿಕ ಸಾಕ್ಷ್ಯಗಳನ್ನೂ ಸಂಗ್ರಹಿಸಿದ್ದಾರೆ. ದರ್ಶನ್ ಸೇರಿ ಎಲ್ಲಾ ಆರೋಪಿಗಳ ಮೊಬೈಲ್ ರಿಟ್ರೈವ್‌ಗೆ ಕಳಿಸಿದ್ದಾರೆ. ದರ್ಶನ್ ಆಪ್ತನೊಬ್ಬನ ಮನೆ ಮೇಲೆ ದಾಳಿ ನಡೆಸಿ, ಸುಪಾರಿ ನೀಡಲು ಇಟ್ಟಿದ್ದರು ಎನ್ನಲಾದ 30 ಲಕ್ಷ ರೂ. ಹಣವನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ. 10ನೇ ಆರೋಪಿ ವಿನಯ್ ಮಾಲೀಕತ್ವದ ಪಬ್ ಮೇಲೆ ರೇಡ್ ಮಾಡಿ, ಸಿಸಿಟಿವಿಯ ಕೆಲ ದೃಶ್ಯಾವಳಿಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಡಿ-ಗ್ಯಾಂಗ್‌ನ ಪವನ್,ನಾಗ ಹೇಳಿದ್ದೇನು?
ರೇಣುಕಾಸ್ವಾಮಿಯ ತಲೆಯನ್ನು ಲಾರಿಗೆ ಜಜ್ಜಿದ ರೀತಿಗೆ ಸಂಜೆಯೇ ಸತ್ತು ಹೋಗಿದ್ದ. ಜೂ.8ರಂದು ಸಂಜೆ 6ರಿಂದ 6:30ರ ಒಳಗೆ ಪ್ರಾಣ ಹೋಗಿತ್ತು. ಹಲ್ಲೆಯ ತೀವ್ರತೆಗೆ 6 ಗಂಟೆಗೆಲ್ಲಾ ರೇಣುಕಾಸ್ವಾಮಿ ಕುಸಿದು ಬಿದ್ದಿದ್ದ. ರೇಣುಕಾಸ್ವಾಮಿ ನೀರು ಕುಡಿಸಿ ಎಬ್ಬಿಸೋದಕ್ಕೆ ನೋಡಿದ್ವಿ.. ಎದ್ದೇಳಲಿಲ್ಲ. ದರ್ಶನ್‌ಗೆ ಫೋನ್ ಮಾಡಿದಾಗ ಡಾಕ್ಟರ್‌ನ ಕರೆಸಿ ಅಂತ ಹೇಳಿದ್ರು, ಗಡಿಬಿಡಿಯಲ್ಲಿ ಇಷ್ಟೆಲ್ಲಾ ಮಾಡೋ ಹೊತ್ತಿಗೆ ಸ್ವಾಮಿ ಪ್ರಾಣ ಹೋಗಿತ್ತು. ರಾತ್ರಿ 8 ಗಂಟೆ ತನಕ ಏನ್ ಮಾಡೋದು ಅಂತಾನೇ ಗೊತ್ತಾಗಲಿಲ್ಲ. ಚಿತ್ರದುರ್ಗದಿಂದ ಬಂದಿದ್ದ ರವಿಗೆ ಹೆಣ ಬಿಸಾಡೋದಕ್ಕೆ ಹೇಳಿದ್ವಿ, ಆದರೆ, ರವಿ ಭಯ ಬಿದ್ದು, ನಾನು ಹಾಗೇ ಮಾಡೋಲ್ಲ ಅಂದ. ವಿನಯ್, ಪ್ರದೋಷ್ ಅಣ್ಣ ಸ್ವಲ್ಪ ಹೊತ್ತು ಹೊರಗೆ ಹೋಗಿದ್ದರು. ಆಮೇಲೆ ಕಾರ್ತಿಕ್ ಟೀಮನ್ನು ಪ್ರದೋಷ್ ಅಣ್ಣ ರೆಡಿ ಮಾಡಿದ್ರು. ರೇಣುಕಾಸ್ವಾಮಿ ಶವವನ್ನು ಕಾರ್ತೀಕ್ ಟೀಂ ತಗೊಂಡು ಹೋಯ್ತು ಅಂತಾ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಡಿ-ಗ್ಯಾಂಗ್‌ನ ದೀಪಕ್ ಹೇಳಿದ್ದೇನು?
ಪಟ್ಟಣಗೆರೆ ಶೆಡ್‌ಗೆ ಬಿರಿಯಾನಿ ತರಿಸಿದ್ವಿ, ರೇಣುಕಾಸ್ವಾಮಿಗೆ ತಿನ್ನೋಕೆ ಬಿರಿಯಾನಿ ನೀಡಿದ್ವಿ. ಆದ್ರೆ, ನಾನು ಸಸ್ಯಹಾರಿ, ತಿನ್ನಲ್ಲ ಎಂದು ಸ್ವಾಮಿ ಹೇಳಿದ. ಆದರೂ, ಸ್ವಾಮಿಗೆ ಬಲವಂತವಾಗಿ ಬಿರಿಯಾನಿ ತಿನ್ನಿಸಿದ್ವಿ. ಸ್ವಾಮಿ ಬಿರಿಯಾನಿಯನ್ನು ತಿನ್ನದೇ ನೆಲಕ್ಕೆ ಉಗುಳಿದ್ದ, ಇದರಿಂದ ಸಿಟ್ಟಗೆದ್ದು ರೇಣುಕಾಸ್ವಾಮಿಯನ್ನು ಥಳಿಸಿದ್ವಿ, ಬಾಸ್ ಬರ್ತಾರೆ, ಒದೆ ತಿನ್ನೋಕೆ ರೆಡಿಯಾಗು ಅಂತಾನೂ ಹೇಳಿದ್ವಿ. ಬಿರಿಯಾನಿ ತಿಂದ್ರೆ ಶಕ್ತಿ ಬರುತ್ತೆ ಅಂತಾ ಹೇಳಿದ್ವಿ ಎಂದು ಇಂಚಿಂಚು ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರೇಣುಕಾಸ್ವಾಮಿಯನ್ನ ಅಪಹರಿಸಿದ್ದು ಹೇಗೆ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಿತ್ಯ ಹೊಸ-ಹೊಸ ವಿಚಾರಗಳು ಬೆಳಕಿಗೆ ಬರ್ತಿವೆ. ರೇಣುಕಾಸ್ವಾಮಿಯನ್ನು ರಘು ಗ್ಯಾಂಗ್ ಜೂನ್ 8ರಂದು ಚಿತ್ರದುರ್ಗದಲ್ಲಿ ಪುಸಲಾಯಿಸಿ ಕಿಡ್ನಾಪ್ ಮಾಡಿತ್ತು. ಇದಕ್ಕೆ ಇಂದು ದೃಶ್ಯ ಸಾಕ್ಷ್ಯವೂ ಸಿಕ್ಕಿದೆ. ಜೂ.8ರಂದು ಬೆಳಗ್ಗೆ 9:56ಕ್ಕೆ ಕುಂಚಿಗನಾಳ್ ಬಳಿ ಸಿನಿಮೀಯ ರೀತಿಯಲ್ಲಿ ರೇಣುಕಸ್ವಾಮಿಯನ್ನು ರಘು ಗ್ಯಾಂಗ್ ಅಪಹರಿಸುತ್ತದೆ. ಆಟೋದಿಂದ ರೇಣುಕಸ್ವಾಮಿಯನ್ನು ಕಾರಿಗೆ ಶಿಫ್ಟ್ ಮಾಡಿಕೊಂಡು ಬೆಂಗಳೂರಿಗೆ ಕರೆತರಲಾಗುತ್ತದೆ. ಕುಂಚಿಗನಾಳ್ ಬಳಿಯ ಪೆಟ್ರೋಲ್ ಬಂಕ್ ಬಳಿ ಪ್ರಕರಣದ 7ನೇ ಆರೋಪಿ ಜಗ್ಗನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮಾರ್ಗಮಧ್ಯೆ ಗುಯಿಲಾಳು ಚೆಕ್‌ಪೋಸ್ಟ್‌ನಲ್ಲಿಯೂ ಇಟಿಯೋಸ್ ಕಾರು ಪಾಸ್ ಆಗುವ ಸಿಸಿಟಿವಿ ದೃಶ್ಯ ʻಪಬ್ಲಿಕ್ ಟಿವಿʼಗೆ ಲಭ್ಯ ಆಗಿದೆ. ಮಾರ್ಗಮಧ್ಯೆ ತುಮಕೂರಲ್ಲಿ ರೇಣುಕಾಸ್ವಾಮಿಯೇ ರಘು ಗ್ಯಾಂಗ್‌ಗೆ ತಿಂಡಿ ಕೊಡಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ತಡರಾತ್ರಿ ಚಿತ್ರದುರ್ಗದಲ್ಲಿ ರಘು ಗ್ಯಾಂಗ್ ಸಮ್ಮುಖದಲ್ಲಿ ಪೊಲೀಸರು ಮಹಜರು ಪ್ರಕ್ರಿಯೆ ಮುಗಿಸಿದ್ದಾರೆ.
ಮಗನ ಬಂಧನದಿಂದ ಮನನೊಂದು ತಂದೆ ಸಾವು:
ಈ ಹೊತ್ತಲ್ಲೇ ಎ6 ಆರೋಪಿ ಜಗ್ಗ, ಎ7 ಆರೋಪಿ ಅನುಕುಮಾರ್ ಇಬ್ಬರನ್ನೂ ಚಿತ್ರದುರ್ಗ ಡಿವೈಎಸ್‌ಪಿ ಬಂಧಿಸಿದ್ದಾರೆ. ಕೂಡಲೇ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ. ಮಗನ ಬಂಧನ ವಿಚಾರ ತಿಳಿದು ತಂದೆ ಚಂದ್ರಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಮಗ ಬರೋವರೆಗೂ ಅಂತ್ಯಕ್ರಿಯೆ ಮಾಡಲ್ಲ ಎಂದು ಕೂತಿದ್ದಾರೆ.
ಇನ್ನೂ ಆರೋಪಿ ಜಗದೀಶ್ ತಾಯಿ ಸುಲೋಚನಮ್ಮ ಪ್ರತಿಕ್ರಿಯಿಸಿ, ಯಾರ ಮಕ್ಕಳು ಕೊಲೆ ಆಗಬಾರದು. ಮಕ್ಕಳು ಸತ್ತರೇ ಆಗುವ ನೋವು ನನಗೂ ಗೊತ್ತು, ನನ್ನ ಮಗ ತಪ್ಪು ಮಾಡಿದರೆ ಶಿಕ್ಷೆ ಆಗಲಿ, ಆದ್ರೆ ನಿಜಾಂಶ ಬಯಲಾಗಬೇಕು ಎಂದು ಅಲವತ್ತುಕೊಡಿದ್ದಾರೆ. ಇತ್ತ, ಬೆಂಗಳೂರಲ್ಲಿ ಸ್ಕಾರ್ಪಿಯೋ ಮಾಲಿಕ ಪುನೀತ್ ಮತ್ತು ಶೆಡ್ ಕ್ಲೀನ್ ಮಾಡಿದ್ದ ಹೇಮಂತ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಈವರೆಗೂ ಸಿಕ್ಕಿಬಿದ್ದವರ ಆರೋಪಿಗಳ ಸಂಖ್ಯೆ 18ಕ್ಕೇರಿದೆ. ಎ-9 ಆರೋಪಿ ರಾಜು ಸದ್ಯ ಪೊಲೀಸರಿಂದ ಕಣ್ಮರೆಯಾಗಿದ್ದಾನೆ.