Tag: D.C. thammanna

  • ಡಿ.ಸಿ.ತಮ್ಮಣ್ಣ ವಿವಾದಾತ್ಮಕ ಹೇಳಿಕೆ-ಬೆಂಬಲಿಗರಿಂದ ಸ್ಪಷ್ಟನೆ

    ಡಿ.ಸಿ.ತಮ್ಮಣ್ಣ ವಿವಾದಾತ್ಮಕ ಹೇಳಿಕೆ-ಬೆಂಬಲಿಗರಿಂದ ಸ್ಪಷ್ಟನೆ

    ಮಂಡ್ಯ: ಮತದಾರರ ಮೇಲೆ ಅಶ್ಲೀಲ ಪದ ಬಳಕೆ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಸಚಿವ ತಮ್ಮಣ್ಣ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರ ಬೆಂಬಲಿಗರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮಣ್ಣರ ಹೇಳಿಕೆಗೆ ಸ್ಪಷ್ಟನೆ ನೀಡಿದರು.

    ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮದ್ದೂರು ತಾಲೂಕಿನ ಜೆಡಿಎಸ್ ಕಾರ್ಯಾಧ್ಯಕ್ಷ ದಾಸೇಗೌಡ, ನಾವು ಪ್ರತಿದಿನ ಸಚಿವರಿಗೆ ನಮಗೆ ಅದು ಬೇಕು, ಇದು ಬೇಕೆಂದು ಕೇಳುತ್ತೇವೆ. ಈ ರೀತಿ ಕೇಳುವ ನಮಗೆ ಚುನಾವಣೆ ಸಂದರ್ಭದಲ್ಲಿ ಎಲ್ಲಿ ಹೋಗಿದ್ರಿ ಎಂದು ಆಪ್ತರಿಗೆ ಸಚಿವರು ತರಾಟೆಗೆ ತೆಗೆದುಕೊಂಡರೆ ಹೊರತರೆ ಮತದಾರರನ್ನು ಉದ್ದೇಶಿಸಿ ಮಾತನಾಡಿಲ್ಲ. ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಕೆಲವು ಶಾಸಕರು ತಮಗೆ ಸಿಗುವ ಅನುದಾನದಲ್ಲಿ ಕೆಲಸ ಮಾಡುತ್ತಾರೆ. ಆದ್ರೆ ಸಚಿವ ತಮ್ಮಣ್ಣವರು ಯಾವ ಇಲಾಖೆಯಲ್ಲಿ ಏನೇನೂ ಅನುದಾನ ಸಿಗುತ್ತದೆಯೋ ಎಂದು ಹುಡುಕಿ ಕ್ಷೇತ್ರಕ್ಕೆ ತಂದಿದ್ದಾರೆ ಎಂದು ತಿಳಿಸಿದರು.

    ಕ್ಷೇತ್ರದ ಎಲ್ಲ ಕೆಲಸವನ್ನು ಓರ್ವ ಶಾಸಕ ಮಾಡಲು ಸಾಧ್ಯವಿಲ್ಲ. ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸಹ ಅಭಿವೃದ್ಧಿ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಗುಂಪು ಯೋಜನೆಯಲ್ಲಿ ಕಟ್ಟಿಕೊಂಡ ಮನೆಗಳು ಸೋರುತ್ತಿದ್ದವು. ಮನೆಗಳ ರಿಪೇರಿಗೆ ಶಾಸಕರ ಅನುದಾನ ಸಿಗಲ್ಲ ಎಂದು ತಿಳಿದು ವೈಯಕ್ತಿಕವಾಗಿ 2 ಲಕ್ಷ ರೂ. ನೀಡಿ ದುರಸ್ತಿ ಮಾಡಿದ್ದಾರೆ. ಅಂದು ನಡೆದ ಸಭೆಯಲ್ಲಿ ಕಾರ್ಯಕರ್ತರು ಮತ್ತು ಆಪ್ತರು ಭಾಗಿಯಾಗಿದ್ದರು. ಹಾಗಾಗಿ ನಮ್ಮೆಲ್ಲರಿಗೂ ಕ್ಲಾಸ್ ತೆಗೆದುಕೊಂಡರು. ಸಚಿವರು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಹೇಳುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದರು.

  • ನಮ್ಮತ್ರ ಕೆಲಸ ಕೇಳೋಕೆ ನಾಚಿಕೆಯಾಗಲ್ವಾ- ಡಿಸಿ ತಮ್ಮಣ್ಣ

    ನಮ್ಮತ್ರ ಕೆಲಸ ಕೇಳೋಕೆ ನಾಚಿಕೆಯಾಗಲ್ವಾ- ಡಿಸಿ ತಮ್ಮಣ್ಣ

    – ಸಮಸ್ಯೆ ಹೇಳಿಕೊಳ್ಳಲು ಬಂದ ಜನರಿಗೆ ಬೈದ ಸಚಿವ

    ಮಂಡ್ಯ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲಿನ ಬಳಿಕ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ನಾಲಿಗೆ ಸ್ಥಿಮಿತ ಕಳೆದುಕೊಂಡಿದ್ದಾರೆ.

    ಶುಕ್ರವಾರ ಮದ್ದೂರು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ವೇಳೆ ಈ ಘಟನೆ ನಡೆದಿದೆ. ಕ್ಷೇತ್ರದಲ್ಲಿ ನಿಖಿಲ್‍ಗೆ ಮತ ಹಾಕದ ಜನರ ಮೇಲೆ ಡಿ.ಸಿ ತಮ್ಮಣ್ಣ ವಾಗ್ದಾಳಿ ನಡೆಸಿದ್ದಾರೆ.

    ಶಂಕುಸ್ಥಾಪನೆ ವೇಳೆ ಜನರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದರು. ಈ ವೇಳೆ ತಮ್ಮಣ್ಣ ಜನರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗ್ರಾಮಸ್ಥರು ಮದ್ದೂರಮ್ಮನ ಕೆರೆಯಂಗಳದಲ್ಲಿ ನಡೆದ ಕುಡಿಯುವ ನೀರಿನ ಶಂಕುಸ್ಥಾಪನೆ ವೇಳೆ ದಲಿತ ಕಾಲೋನಿಗೆ ಚರಂಡಿ ಮತ್ತು ಸಮರ್ಪಕ ರಸ್ತೆ ನಿರ್ಮಿಸುವಂತೆ ಕೇಳಿಕೊಂಡಿದ್ದರು.

    ಗ್ರಾಮಸ್ಥರ ಮಾತುಕೇಳಿ ಸಿಟ್ಟಿಗೆದ್ದ ಸಚಿವ ತಮ್ಮಣ್ಣ, ಅಭಿವೃದ್ಧಿಗೆ ನಾವು ಬೇಕು, ಮತ ಹಾಕಲು ವೋಟು ನೀಡಲು ಅವರು ಬೇಕಾ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೆ ಮಣೆಗಾರಿಕೆ ಮಾಡಲು ಬರುತ್ತಾರೆ, ಅಭಿವೃದ್ದಿ ಕೆಲಸಕ್ಕಾಗಿ ನಮ್ಮನ್ನು ಕೇಳುವುದಕ್ಕೆ ನಾಚಿಕೆ ಆಗಲ್ವಾ ಎಂದು ಕಿಡಿಕಾರಿದ್ದಾರೆ.

    ಸಚಿವ ತಮ್ಮಣ್ಣ ಚುನಾವಣೆ ವೇಳೆಯಲ್ಲಿ ತಮ್ಮ ನಾಲಿಗೆ ಹರಿಯಬಿಟ್ಟು ಎಡವಟ್ಟು ಮಾಡಿಕೊಂಡಿದ್ದರು. ತಮ್ಮಣ್ಣ ಅವರು ಹೆಬ್ಬೆರಳು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಲ್ಲದೆ ಹೋದ ಕಡೆಗಳಲ್ಲಿ ಮತ ಹಾಕದ ಮತದಾರರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

  • ಬೆಂಗ್ಳೂರಿಗರಿಗೆ ಶೀಘ್ರದಲ್ಲೇ ಡಬಲ್ ಬೆಲೆಯೇರಿಕೆ ಬರೆ

    ಬೆಂಗ್ಳೂರಿಗರಿಗೆ ಶೀಘ್ರದಲ್ಲೇ ಡಬಲ್ ಬೆಲೆಯೇರಿಕೆ ಬರೆ

    ಬೆಂಗಳೂರು: ರಾಜ್ಯ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಬೆಲೆ ಏರಿಕೆ ಬಿಸಿ ಶೀಘ್ರವೇ ತಟ್ಟಲಿದೆ. ಬಸ್ ಟಿಕೆಟ್ ದರ ಏರಿಕೆ ಹಾಗೂ ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆ ಏರಿಕೆಯ ಚಿಂತನೆ ಜೋರಾಗಿಯೇ ನಡೆಯುತ್ತಿದೆ.

    ರಾಜ್ಯದಲ್ಲಿ ಸಾರಿಗೆ ಬಸ್ ಪ್ರಯಾಣ ದರ ಬೆಲೆಯೇರಿಕೆಯ ಬಿಸಿ ತಡೆದುಕೊಳ್ಳುವ ಮುನ್ನವೇ ಪಾಲಿಕೆಯು ಬೆಂಗಳೂರು ವ್ಯಾಪ್ತಿಯ ಆಸ್ತಿಗಳ ತೆರಿಗೆ ಹೆಚ್ಚಳ ಮಾಡಲು ಚಿಂತನೆ ನಡೆಸಿದೆ. ಕಳೆದ 3 ವರ್ಷಗಳಿಂದ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆ ಆಗಿರಲಿಲ್ಲ. ಕೆಎಂಸಿ ನಿಯಮದ ಪ್ರಕಾರ ಶೇ.20 ರಿಂದ 25 ರಷ್ಟು ಆಸ್ತಿ ತೆರಿಗೆ ಹೆಚ್ಚಳದ ಅಗತ್ಯವಿದೆ ಎಂದು ಅಧಿಕಾರಿಗಳು ಪಾಲಿಕೆ ಕೌನ್ಸಿಲ್ ಮುಂದೆ ಪ್ರಸ್ತಾವನೆ ಇಟ್ಟಿದ್ದಾರೆ.

    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮೇಯರ್ ಗಂಗಾಬಿಕೆ ಅವರು, ಪಕ್ಷಾತೀತವಾಗಿ ಒಪ್ಪಿದರೆ ಮಾತ್ರ ಆಸ್ತಿ ತೆರಿಗೆ ಪರಿಷ್ಕರಣೆ ಬಗ್ಗೆ ಆಲೋಚನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಸಾರಿಗೆ ಇಲಾಖೆ ನಷ್ಟದಲ್ಲಿ ಎಂಬ ಕಾರಣಕ್ಕೆ ಶೇ.18ರಷ್ಟು ಟಿಕೆಟ್ ದರ ಏರಿಕೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ತಲುಪಿದೆ. ಈ ಸತ್ಯವನ್ನು ಖುದ್ದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಬಿಚ್ಚಿಟ್ಟಿದ್ದಾರೆ.

    ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಸಚಿವರು, ಮೂಲಭೂತ ಸೌಕರ್ಯ ಹಾಗೂ ತೈಲ ರಿಯಾಯಿತಿ ಕೊಟ್ಟರೆ ಸಂಸ್ಥೆ ನಡೆಸಬಹುದು. ಇಲ್ಲದಿದ್ದರೆ ಕನಿಷ್ಠ ಸರ್ಕಾರ ಅನುದಾನವನ್ನಾದರೂ ನೀಡಲೇ ಬೇಕು. ಇದು ಯಾವುದು ಆಗದಿದ್ದರೆ ಇದೇ ತಿಂಗಳು 12ರಂದು ನಡೆಯುವ ಸಭೆಯಲ್ಲಿ ಬಸ್ ಪ್ರಯಾಣ ದರ ಶೇ.18 ರಷ್ಟು ಏರಿಕೆ ಮಾಡಲಾಗುವುದು ಎಂದು ತಿಳಿಸಿದ್ದರು.

  • ‘ಡಿ.ಸಿ.ತಮ್ಮಣ್ಣ ಯಾವುದಕ್ಕೂ ರೆಡಿ ಇರು – ನಿನ್ನ ಎದುರಾಳಿ ಅಭಿಷೇಕ್ ಅಂಬರೀಶ್’

    ‘ಡಿ.ಸಿ.ತಮ್ಮಣ್ಣ ಯಾವುದಕ್ಕೂ ರೆಡಿ ಇರು – ನಿನ್ನ ಎದುರಾಳಿ ಅಭಿಷೇಕ್ ಅಂಬರೀಶ್’

    – ಡಿ ಬಾಸ್ ಅಭಿಮಾನಿಗಳಿಂದ ಪೋಸ್ಟ್
    – ತಾಯಿಯ ಬಳಿಕ ಅಭಿಷೇಕ್ ಮದ್ದೂರಿನಲ್ಲಿ ಸ್ಪರ್ಧೆ?

    ಮಂಡ್ಯ: ಡಿ.ಸಿ.ತಮ್ಮಣ್ಣ ಯಾವುದಕ್ಕೂ ರೆಡಿ ಇರು, ಮುಂದೆ ನಿನ್ನ ಎದುರಾಳಿ ಅಭಿಷೇಕ್ ಅಂಬರೀಶ್ ಇರುತ್ತಾರೆ ಎಂದು ನಟ ದರ್ಶನ್ ಅಭಿಮಾನಿಗಳು ಪೋಸ್ಟ್ ಮಾಡಿ ಸವಾಲು ಎಸೆದಿದ್ದಾರೆ.

    ಇದೀಗ ದರ್ಶನ್ ಅಭಿಮಾನಿಗಳ ಪೋಸ್ಟ್ ನಿಂದ ಅಮ್ಮನ ರಾಜಕೀಯ ಎಂಟ್ರಿ ಬಳಿಕ ಅಭಿಷೇಕ್ ಅಂಬರೀಶ್ ರಾಜಕೀಯ ರಂಗ ಪ್ರವೇಶ ಮಾಡಲು ಸಜ್ಜಾಗಿದ್ದಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಪೋಸ್ಟ್ ನಲ್ಲಿ ಏನಿದೆ?
    “ಡಿ.ಸಿ.ತಮ್ಮಣ್ಣ ಯಾವುದಕ್ಕೂ ರೆಡಿ ಇರು. ಮುಂದೆ ನಿನ್ನ ಎದುರಾಳಿ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಆಗಿದ್ದಾರೆ. ಮದ್ದೂರು ವಿಧಾನಸಭಾ ಕ್ಷೇತ್ರ, ತಾಕತ್ ಇದ್ದರೆ ಫೇಸ್ ಮಾಡು” ಎಂದು ಫೇಸ್‍ಬುಕ್‍ನಲ್ಲಿ ಬರೆದು ಅಭಿಮಾನಿಗಳು ಪೋಸ್ಟ್ ಮಾಡಿದ್ದಾರೆ.

    ಮದ್ದೂರು ವಿಧಾನಸಭಾ ಕ್ಷೇತ್ರದ ದೊಡ್ಡರಸಿನಕೆರೆ ಗ್ರಾಮ ಅಂಬರೀಶ್ ಅವರ ಹುಟ್ಟೂರಾಗಿದೆ. ಹೀಗಾಗಿ ಮದ್ದೂರು ಕ್ಷೇತ್ರದಲ್ಲಿ ಅಂಬಿ ಕುಟುಂಬಕ್ಕೆ ಸಾವಿರಾರು ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ಲದೇ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮದ್ದೂರು ಕ್ಷೇತ್ರದಲ್ಲಿ ಹೆಚ್ಚು ಲೀಡ್ ಪಡೆಯಲಿದ್ದಾರೆ ಎಂಬ ಲೆಕ್ಕಾಚಾರವು ಇದೆ.

  • ‘ಅಪ್ಪನಿಗೆ ಹುಟ್ಟಿದ್ರೆ ಟೀಕೆ ಮಾಡ್ರೀ’: ಡಿ.ಸಿ.ತಮ್ಮಣ್ಣ

    ‘ಅಪ್ಪನಿಗೆ ಹುಟ್ಟಿದ್ರೆ ಟೀಕೆ ಮಾಡ್ರೀ’: ಡಿ.ಸಿ.ತಮ್ಮಣ್ಣ

    ಮಂಡ್ಯ: ಅಪ್ಪನಿಗೆ ಹುಟ್ಟಿದ್ರೆ ಟೀಕೆ ಮಾಡ್ರೀ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

    ಮದ್ದೂರು ಎಳನೀರು ಮಾರುಕಟ್ಟೆ ಬಳಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತಿದ್ದ ವೇಳೆ ಮಾತನಾಡಿದ ಸಚಿವರು, ಎಳನೀರು ಮಾರುಕಟ್ಟೆ ಒಳಗೆ ಕೆಲವರು ಮಜಾ ಮಾಡಿಕೊಂಡು ನನ್ನ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ನೀವು ಟೀಕೆ ಮಾಡುವುದನ್ನು ನಾನು ಕೇಳಿದ್ದೇನೆ. ತಾಕತ್ ಇದ್ದರೆ, ಅಪ್ಪನಿಗೆ ಹುಟ್ಟಿದ್ರೆ ಬಂದು ಎದುರಿಗೆ ನಿಂತು ಟೀಕೆ ಮಾಡಿ ಎಂದರು.

    ಎಳನೀರು ಮಾರುಕಟ್ಟೆಯ ಚರಿತ್ರೆ ನನಗೆ ಗೊತ್ತು. ಸಿಎಂ ಕುಮಾರಸ್ವಾಮಿ ಹಾಗೂ ನಾನು ಎಳನೀರು ಮಾರುಕಟ್ಟೆಯ ಅಭಿವೃದ್ಧಿ ಶ್ರಮಿಸಿದ್ದೇವೆ. ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನದ ತಂದು ಸಾಕಷ್ಟು ಕೆಲಸಗಳನ್ನು ಮಾಡಿಸಿದ್ದೇನೆ. ಆದರೆ ಕೆಲವರು ಮಾರುಕಟ್ಟೆಯಲ್ಲಿ ಹಣ ಮಾಡಿಕೊಂಡು ಈಗ ನನ್ನ ವಿರುದ್ಧವೇ ಮಾತನಾಡುತ್ತಿದ್ದಾರೆ. ಅಂತಹವರು ಯಾರಾರು ಇದ್ರೆ ಮುಂದೆ ಬನ್ನಿ ಎಂದು ಸವಾಲು ಹಾಕಿದರು.

    ಪ್ರಚಾರದ ವಾಹನದಲ್ಲಿಯೇ ನಿಂತು ಸಚಿವರು ವಾಗ್ದಾಳಿ ನಡೆಸಿದ್ದರು. ಈ ವೇಳೆ ಕೆಲವರು ಡಿ.ಸಿ.ತಮ್ಮಣ್ಣ ಅವರ ಮನವೊಲಿಸಿ ವಾಹನದಿಂದ ಕೆಳಗೆ ಇಳಿದು ಬರುವಂತೆ ಮನವಿ ಮಾಡಿಕೊಂಡರು. ಎಷ್ಟೇ ಕರೆದರೂ ಸಚಿವರು ಮಾತ್ರ ವಾಗ್ದಾಳಿ ಮುಂದುವರಿಸಿದರು. ಕೆಲ ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ಪರ ಘೋಷಣೆ ಕೂಗಿದರು.

    ನಾನು ಮದ್ದೂರು ಕ್ಷೇತ್ರದಲ್ಲಿ ಇರುವವರೆಗೂ ಇಲ್ಲಿನ ಜನರ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಮುಂದೆ ಬರುವ ಅಭ್ಯರ್ಥಿಗೆ ನಿಮ್ಮ ಕೊಡುಗೆ ಏನು ಅಂತ ನೀವು ಪ್ರಶ್ನಿಸಬೇಕು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಸಿಎಂ ಕುಮಾರಸ್ವಾಮಿ ಹಾಗೂ ನಾನು ಈ ಕ್ಷೇತ್ರಕ್ಕೆ ಅನೇಕ ಕೊಡುಗೆ ನೀಡಿದ್ದೇವೆ. ಈಗ ಕೆಲವರು ರಾಜಕೀಯ ಆರಂಭಿಸಿದ್ದಾರೆ. ಅವರ ಮಾತಿಗೆ ಕಿವಿ ಕೊಡಬೇಡಿ ಎಂದು ಮತದಾರರಲ್ಲಿ ಸಚಿವರು ಮನವಿ ಮಾಡಿಕೊಂಡರು.

  • ಸುಮಲತಾರನ್ನು ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆ ಇತ್ತು: ಸಚಿವ ಡಿ.ಸಿ.ತಮ್ಮಣ್ಣ

    ಸುಮಲತಾರನ್ನು ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆ ಇತ್ತು: ಸಚಿವ ಡಿ.ಸಿ.ತಮ್ಮಣ್ಣ

    ಮಂಡ್ಯ: ಸುಮಲತಾರನ್ನು ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆ ಇತ್ತು ಎಂದು ಮಂಡ್ಯದ ಮದ್ದೂರಿನಲ್ಲಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆ ನೀಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಅವರು, ಸುಮಲತಾರನ್ನೇ ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆ ನನಗಿತ್ತು. ಜೆಡಿಎಸ್ ವರಿಷ್ಠರನ್ನು ಭೇಟಿ ಮಾಡಿಸುವ ಯತ್ನ ಮಾಡಿದ್ದೆ. ಆದರೆ ಸಂಬಂಧಿ ಮಧು ಮೂಲಕ ಮಾಡಿದ ಪ್ರಯತ್ನ ವಿಫಲವಾಯ್ತು ಎಂದು ಹೇಳಿದ್ದಾರೆ.

    ಮಧು ಎಂಬವರು ಸಚಿವ ತಮ್ಮಣ್ಣ ಮತ್ತು ಅಂಬಿ ಕುಟುಂಬದ ಸಂಬಂಧಿ. ಸಂಧಾನಕ್ಕೆ ನಾನು, ನನ್ನ ಮಗ ಸಕಲ ಪ್ರಯತ್ನ ಮಾಡಿದ್ದೇವು. ಸಂಧಾನಕ್ಕೆ ಸುಮಲತಾ ಅವರೇ ಒಪ್ಪಲಿಲ್ಲ. ಎಚ್.ಡಿ ಕುಮಾರಸ್ವಾಮಿ ಹಾಗೂ ಸುಮಲತಾ ನಡುಡುವೆ ಏನು ನಡೆದಿದೆಯೋ ನನಗೆ ಗೊತ್ತಿಲ್ಲ. ಹೀಗಾಗಿ ಕುಮಾರಸ್ವಾಮಿ ಮೇಲೆ ಒತ್ತಡ ಹೇರಲಿಲ್ಲ. ಸುಮಲತಾ ಅವರು ಕುಮಾರಸ್ವಾಮಿಯನ್ನು ಭೇಟಿಯಾಗಿ ನಾನೇ ಅಭ್ಯರ್ಥಿ ಆಗ್ತೀನಿ ಟಿಕೆಟ್ ಕೊಡಿ ಎಂದು ಸುಮಲತಾ ಕೇಳಬೇಕಿತ್ತು. ಆದರೆ ಭೇಟಿಯಾಗೋಕೆ ಅವರೇ ಒಪ್ಪಲಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವರು, ಅಂಬರೀಶ್ ಅವರ ಅಣ್ಣನ ಮಗ ಮಧು ಮೂಲಕ ನಾನು ಹಾಗೂ ನನ್ನ ಮಗ ಸುಮಲತಾ ಬಳಿ ಮಾತನಾಡಿದ್ದೇನೆ. ಸುಮಲತಾ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾಗಲೇ ನಾವು ಕೇಳಿದ್ದೇವೆ. ಅಂಬರೀಶ್ ಹಾಗೂ ಕುಮಾರಸ್ವಾಮಿ ಇಬ್ಬರು ಒಳ್ಳೆಯ ಸ್ನೇಹಿತರು. ಇಬ್ಬರ ನಡುವೆ ಒಳ್ಳೆಯ ಸಂಬಂಧ ಬೆಳೆಯಲಿ ಎಂದು ಇಬ್ಬರು ಕುಳಿತು ಸ್ಪರ್ಧೆ ಬಗ್ಗೆ ಮಾತನಾಡಲಿ ಎಂದು ಈ ರೀತಿ ಮಾಡಿದ್ದೆ ಎಂದರು.

    ಸುಮಲತಾ ಅವರು ನಮ್ಮ ಮನವಿಯನ್ನು ಏಕೆ ತಿರಸ್ಕರಿಸಿದರು ಎಂಬುವುದು ಗೊತ್ತಿಲ್ಲ. ಅವರು ಈ ವಿಷಯದ ಬಗ್ಗೆ ಒಲವು ತೋರಿಸದ ಕಾರಣ ಒತ್ತಾಯಿಸಲಿಲ್ಲ. ನಾನು ಸುಮಲತಾ ಅವರ ಜೊತೆ ನೇರವಾಗಿ ಮಾತನಾಡಿಲ್ಲ. ಮಧು ಮೂಲಕ ನಾವು ಈ ವಿಷಯದ ಬಗ್ಗೆ ಮಾತನಾಡಿದ್ದೇವೆ. ದೇವೇಗೌಡರು ಹಾಗೂ ಸುಮಲತಾ ಅವರು ನಮಗೆ ಸಂಬಂಧಿಕರೇ. ಸುಮಲತಾ ಅವರು ಈ ಬಗ್ಗೆ ಒಲವು ತೋರಿಸಿದ್ದರೆ, ನಾವು ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹಾಕುತ್ತಿದ್ದೇವು ಎಂದು ತಮ್ಮಣ್ಣ ಸ್ಪಷ್ಟಪಡಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಂಬಂಧಿಕರ ನಡುವೆಯೇ ಅಸಮಾಧಾನಕ್ಕೆ ಕಾರಣವಾಯ್ತು ಮಂಡ್ಯ ರಾಜಕೀಯ..!

    ಸಂಬಂಧಿಕರ ನಡುವೆಯೇ ಅಸಮಾಧಾನಕ್ಕೆ ಕಾರಣವಾಯ್ತು ಮಂಡ್ಯ ರಾಜಕೀಯ..!

    ಮಂಡ್ಯ: ಮನೆಗೆ ಬಂದವರಿಗೆ ಸುಮಲತಾ ಒಂದು ಲೋಟ ನೀರು ಕೊಟ್ಟಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಹೇಳಿಕೆಗೆ ರೆಬೆಲ್ ಸ್ಟಾರ್ ಅಂಬರೀಶ್ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯ ರಾಜಕೀಯ ಸಂಬಂಧಿಕರ ನಡುವೆ ಅಸಮಾಧಾನಕ್ಕೆ ಕಾರಣವಾಗಿದೆ.

    ಸಾರಿಗೆ ಸಚಿವ ಡಿಸಿ.ತಮ್ಮಣ್ಣ ಮತ್ತು ಅಂಬರೀಶ್ ಇಬ್ಬರು ಸಂಬಂಧಿಕರಾಗಬೇಕು. ಇಬ್ಬರೂ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದವರಾಗಿದ್ದಾರೆ. ಈಗ ತಮ್ಮಣ್ಣ ಹೇಳಿಕೆಗೆ ಡೊಡ್ಡರಸಿನಕೆರೆ ಗ್ರಾಮದ ಅಂಬಿ ಸಂಬಂಧಿಕರು ನಾವು ನೀವು ಎಲ್ಲ ಸಂಬಂಧಿಕರು ಎಂದು ಹೇಳಿ ಆಕ್ರೋಶ ಹೊರಹಾಕುತ್ತಿದ್ದಾರೆ.

    ಅಂಬರೀಶ್ ಮನೆಗೆ ಹೋದಾಗ ನಿಮಗೆ ನೀರು ಕೊಡದೆ ಊಟ ಕೊಡದೆ ಕಳುಹಿಸಿದ್ದಾರ..? ನಾವೆಲ್ಲ ಸಂಬಂಧಿಕರು, ಸಂಬಂಧವನ್ನು ಉಳಿಸಿಕೊಂಡು ಹೋಗಬೇಕು. ವಯಸ್ಸಾಯ್ತ ತಾಳ್ಮೆಯಿಂದ ಮಾತನಾಡಬೇಕು. ಗೆಲ್ಲೋದು ಸೋಲೋದು ಮುಖ್ಯವಲ್ಲ. ನಮ್ಮ ಅತ್ತಿಗೆ ಬಳಿ ಜನ ಬೆಂಬಲ ಇದೆ. ನೇರವಾಗಿ ಫೇಸ್ ಮಾಡಿ. ಚಿತ್ರರಂಗದವರನ್ನು ಕೆಟ್ಟದಾಗಿ ಮಾತನಾಡಬೇಕಾಗಿಲ್ಲ. ಯಾಕೆಂದರೆ ನಿಖಿಲ್, ಕುಮಾರಸ್ವಾಮಿ ಇಬ್ಬರು ಚಿತ್ರರಂಗದಿಂದ ಬಂದವರಾಗಿದ್ದಾರೆ. ನಮ್ಮ ಸಂಬಂಧಿಕರು ಎಂದು ನಾವು ನಿಮ್ಮ ಪರವಾಗಿ ಓಡಾಡಿದ್ದು ಎಂದು ಅಂಬರೀಶ್ ಚಿಕ್ಕಪ್ಪನ ಮಗ ಅಮರ್ ಕಿಡಿಕಾರಿದ್ದಾರೆ.

    ತಂದೆ ಸಮಾನರಾದ ಡಿ.ಸಿ.ತಮಣ್ಣ ನೀವು ಸುಮಕ್ಕನ ಬಗ್ಗೆ ಇಷ್ಟು ಕೀಳಾಗಿ ಮಾತನಾಡುತ್ತೀರಿ ಎಂದು ಅಂದುಕೊಂಡಿರಲಿಲ್ಲ. ಸುಮಕ್ಕ ನಿಮ್ಮ ಮಗಳ ಸಮಾನ. ತಪ್ಪು ಮಾಡಿದ್ದರೆ ತಿದ್ದಿ ಹೇಳಬೇಕಿತ್ತು. ನಮ್ಮ ಮನೆ ಸೇರಿದಂತೆ, ಎಷ್ಟು ಜನ ಸಚಿವರ ಮನೆಯಲ್ಲಿ ಅವರ ಹೆಂಡತಿಯರು ನೀರು, ಊಟ ಕೊಡುತ್ತಾರೆ. ಆಂಟಿ ಗೊತ್ತಿಲ್ಲದವರನ್ನು ಮಾತನಾಡಿಸುತ್ತಾರ..?. ಸಂಬಂಧದಲ್ಲಿ ನಾನು ನಿಮ್ಮ ಮಗಳಾಗಬೇಕು. ಸುಮಕ್ಕನೂ ನಿಮ್ಮ ಮಗಳಾಗಬೇಕು. ಅಪ್ಪನೇ ಮಗಳ ಬಗ್ಗೆ ಮಾತಾಡಿದರೆ ನೋವಾಗುತ್ತದೆ. ಕ್ಷಮೆ ಕೇಳಿದರೂ ನೋವನ್ನು ಮರೆಯಲು ಆಗಲ್ಲ. ಸಂಬಂಧ ಬೇರೆ, ಪಕ್ಷ ಬೇರೆ ಅದನ್ನು ತಿಳಿಯಿರಿ ಎಂದು ಅಂಬರೀಶ್ ಸಂಬಂಧಿ ವಸಂತ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಷ್ಟು ಜನಕ್ಕೆ ಒಂದು ಲೋಟ ಕುಡಿಯಲು ನೀರು ಕೊಟ್ಟಿದ್ದಾರೆ – ಸುಮಲತಾ ವಿರುದ್ಧ ತಮ್ಮಣ್ಣ ವಾಗ್ದಾಳಿ

    ಎಷ್ಟು ಜನಕ್ಕೆ ಒಂದು ಲೋಟ ಕುಡಿಯಲು ನೀರು ಕೊಟ್ಟಿದ್ದಾರೆ – ಸುಮಲತಾ ವಿರುದ್ಧ ತಮ್ಮಣ್ಣ ವಾಗ್ದಾಳಿ

    ಮಂಡ್ಯ: ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಕಣಕ್ಕೆ ನಿಲ್ಲಲು ಮುಂದಾಗಿರುವ ಸುಮಲತಾ ವಿರುದ್ಧ ಸಚಿವ ಡಿ.ಸಿ ತಮ್ಮಣ್ಣ ವಾಗ್ದಾಳಿ ನಡೆಸಿದ್ದಾರೆ.

    ಜಿಲ್ಲೆಯ ಮದ್ದೂರು ತಾಲೂಕಿನ ಕೂಳಗೆರೆ ಗ್ರಾಮದಲ್ಲಿ ಮಾತನಾಡಿದ ತಮ್ಮಣ್ಣ, ಅಂಬರೀಶ್ ಶಾಸಕರು, ಸಚಿವರು ಆಗಿದ್ದಾಗ ಅವರ ಮನೆಗೆ ಹೋದಾಗ ಎಷ್ಟು ಜನ ಸಾಮಾನ್ಯರನ್ನ ಈಯಮ್ಮ ಮಾತಾಡಿಸಿದ್ದಾರೆ. ಎಷ್ಟು ಜನಕ್ಕೆ ಒಂದು ಲೋಟ ಕುಡಿಯಲು ನೀರು ಕೊಟ್ಟಿದ್ದಾರೆ. ನೀನು ಯಾವೂರಪ್ಪ? ಏನಪ್ಪ ನಿಮ್ಮ ಸಮಸ್ಯೆ ಅಂತ ಕೇಳಿದ್ದಾರ ಎಂದು ಪ್ರಶ್ನೆ ಮಾಡಿದ್ದಾರೆ.

    ಇವತ್ತು ಅವರ ಹೆಸರು ಹೇಳಿಕೊಂಡು ಬಂದು ನಾನೇನೋ ಉದ್ಧಾರ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಈ ಹಿಂದೆ ಒಬ್ಬ ಹೆಣ್ಣು ಮಗಳು ಬಂದು ಹೋದಳು, ಏನ್ ಮಾಡಿದ್ಲು ಎಂದು ರಮ್ಮಾ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಣ್ಣದವರ ಮಾತಿಗೆ ಜಿಲ್ಲೆಯ ಜನರು ಬೆರಗು ಆಗೋದು ಬೇಡ. ಯಾರಿಗೆ ಈ ಸಮಾಜದ ಬಗ್ಗೆ ಚಿಂತನೆ ಮಾಡುತ್ತಾರೆ. ಸದಾ ರೈತರ ಬಗ್ಗೆ ಚಿಂತಿಸುತ್ತಾರೆ, ಯಾರು ನಮ್ಮ ನೋವಿಗೆ ಕಷ್ಟಕ್ಕೆ ಸ್ಪಂದಿಸಿ ನಮ್ಮ ಜೊತೆಗೆ ನಿಲ್ಲುತ್ತಾರೆ ಅಂತಹವರನ್ನು ಆಯ್ಕೆ ಮಾಡಿ ಎಂದರು.

    ಬಣ್ಣದ ಮಾತಿಗೆ ಬೆರಗಾಗಿ ನಮ್ಮ ಯುವಕರು ದಾರಿ ತಪ್ಪಿದರೆ, ನಮ್ಮ ಸರ್ವನಾಶಕ್ಕೆ ನಾವೇ ಕಾರಣರಾಗುತ್ತೇವೆ. ಯಾಕೆಂದರೆ ಮತದಾರರು ತಮ್ಮ ಕ್ಷೇತ್ರದ ಹಣೆ ಬರಹವನ್ನು ಬರೆಯುವಂತರು ನೀವು. ರೈತರ ಮಗನಾದ ನಿಖಿಲ್‍ರನ್ನು ಈ ಬಾರಿ ಆಯ್ಕೆ ಮಾಡುವಂತೆ ಕ್ಷೇತ್ರದ ಮತದಾರಿಗೆ ಸಚಿವ ತಮ್ಮಣ್ಣ ಮನವಿ ಮಾಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೀಘ್ರದಲ್ಲಿ ಆರ್‌ಟಿಓ ಅಧಿಕಾರಿಗಳ ನೇಮಕಾತಿ – ಡಿಸಿ ತಮ್ಮಣ್ಣ

    ಶೀಘ್ರದಲ್ಲಿ ಆರ್‌ಟಿಓ ಅಧಿಕಾರಿಗಳ ನೇಮಕಾತಿ – ಡಿಸಿ ತಮ್ಮಣ್ಣ

    – ಆರ್‌ಟಿಓ ಅಧಿಕಾರಿ ನೇಮಕಾತಿಯ ಪರೀಕ್ಷೆ ಹೇಗೆ ಇರುತ್ತೆ?

    ಬೆಂಗಳೂರು: ಒಬ್ಬ ಅಧಿಕಾರಿ ಎರಡರಿಂದ ಮೂರು ಆರ್‌ಟಿಓ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಶೀಘ್ರವೇ ಖಾಲಿಯಿರುವ 271 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂದು ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ನಾನು ಸಚಿವನಾದ ಮೇಲೆ ಸಾರಿಗೆ ಇಲಾಖೆಯಲ್ಲಿ ಖಾಲಿಯಿದ್ದ 2.5 ಸಾವಿರ ಹುದ್ದೆ ಭರ್ತಿಯಾಗಿವೆ. ಈಗಾಗಲೇ ಚಾಲಕ, ನಿರ್ವಾಹಕ ಹಾಗೂ ಮೆಕ್ಯಾನಿಕಲ್ ಹುದ್ದೆಗಳು ಕೂಡ ಭರ್ತಿಯಾಗಿವೆ. ರಾಜ್ಯದಲ್ಲಿ ಆರ್‌ಟಿಓ ಅಧಿಕಾರಿಗಳ ಕೊರತೆ ಎದರುರಾಗಿದ್ದು, ಈ ನಿಟ್ಟಿನಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

    ಪರೀಕ್ಷೆ ಹೇಗಿರುತ್ತೇ?:
    ಆರ್‌ಟಿಓ ಅಧಿಕಾರಿಗಳ ನೇಮಕಾತಿ ನಿಟ್ಟಿನಲ್ಲಿ ಕೆಪಿಎಸ್‍ಸಿ ಜೊತೆಗೆ ಚರ್ಚೆ ನಡೆಸಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷ ತರಬೇತಿ ಇರುತ್ತದೆ. ತರಬೇತಿ ಬಳಿಕವೂ ಒಂದು ಪರೀಕ್ಷೆ ನಡೆಸಿ, ಉತ್ತೀರ್ಣರಾಗುವ ಅಭ್ಯರ್ಥಿಗಳಿಗೆ ಸರ್ಕಾರಿ ಕೆಲಸ ನೀಡಲಾಗುತ್ತದೆ ಎಂದು ತಿಳಿಸಿದರು.

    ಚೆಕ್ ಪೋಸ್ಟ್‍ಗಳಲ್ಲಿ ಹಣ ವಸೂಲಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಚೆಕ್‍ಪೋಸ್ಟ್‍ಗಳನ್ನ ಮೇಲ್ದರ್ಜೆಗೇರಿಸಲು ಚಿಂತನೆ ನಡೆಸಲಾಗಿದೆ. ವಾಹನಗಳಿಗೆ ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸಿ, ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಈ ಮೂಲಕ ಪ್ರತಿಯೊಂದು ವ್ಯವಹಾರ ದಾಖಲಾಗಲಿದ್ದು, ಹಣ ವಸೂಲಿ ಮಾಹಿತಿ ಸಿಕ್ಕರೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದರು.

    ಈ ಯೋಜನೆ ಯಾವಾಗ ಕಾರ್ಯರೂಪಕ್ಕೆ ಬರುತ್ತದೆ ಎಂದು ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆ, ಎಲ್ಲವನ್ನೂ ಈಗಲೇ ಸರಿ ಮಾಡೋಕೆ ಆಗಲ್ಲ. ಹಂತ ಹಂತವಾಗಿ ಸರಿಪಡಿಸುತ್ತೇವೆ ಎಂದು ಸಚಿವರು ಗರಂ ಆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುಂದಿನ ವಾರದಿಂದ ಬಸ್ ಪ್ರಯಾಣದ ದರ ಏರಿಕೆ- ಡಿ.ಸಿ.ತಮ್ಮಣ್ಣ

    ಮುಂದಿನ ವಾರದಿಂದ ಬಸ್ ಪ್ರಯಾಣದ ದರ ಏರಿಕೆ- ಡಿ.ಸಿ.ತಮ್ಮಣ್ಣ

    ಮಂಡ್ಯ: ಬಸ್ ಪ್ರಯಾಣದ ದರ ಹೆಚ್ಚಿಸುವ ಕುರಿತು ಈ ಹಿಂದೆ ಸುಳಿವು ನೀಡಿದ್ದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು, ಮುಂದಿನ ವಾರದಲ್ಲಿಯೇ ದರ ಏರಿಕೆಯಾಗಲಿದೆ ಸ್ಪಷ್ಟನೆ ನೀಡಿದ್ದಾರೆ.

    ಜಿಲ್ಲೆಯ ಮದ್ದೂರಿನಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡುತ್ತಿದೆ. ಇದರಿಂದಾಗಿಯೇ ಬಸ್ ಪ್ರಯಾಣದ ದರ ಏರಿಕೆ ಮಾಡಲಾಗುತ್ತಿದೆ ಎಂದ ಅವರು, ಸಾರಿಗೆ ಇಲಾಖೆ ನಷ್ಟದಲ್ಲಿದ್ದು, ವೆಚ್ಚವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸದ್ಯದಲ್ಲಿಯೇ ಬಸ್ ಪ್ರಯಾಣ ದರ ಏರಿಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

    ನಾನು ಅಧಿಕಾರಕ್ಕೆ ಬಂದ ತಕ್ಷಣವೇ ಬಸ್ ಪ್ರಯಾಣದ ದರ ಏರಿಕೆಗೆ ಪ್ರಸ್ತಾಪ ಸಲ್ಲಿಕೆಯಾಗಿತ್ತು. ಆದರೆ ನಾನು ಅದನ್ನು ತಡೆಹಿಡಿದಿದ್ದೆ. ಈಗ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗುತ್ತಿದೆ. ಹೀಗಾಗಿ ಈ ಹಿಂದೆ ಅಧಿಕಾರಿಗಳು ಸಲ್ಲಿಸಿರುವ ಬಸ್ ಪ್ರಯಾಣದ ದರದ ಆಧಾರದ ಮೇಲೆ ದರವನ್ನು ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದರು.

    ಪ್ರಯಾಣದ ದರ ಹೆಚ್ಚಾದರೆ ಪ್ರಯಾಣಿಕರಿಗೆ ಹೊರೆಯಾಗುವುದಿಲ್ಲವೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಪೆಟ್ರೋಲ್ ಹಾಗೂ ಡೀಸೆಲ್‍ಗೆ ಹೆಚ್ಚು ಹಣ ಪಾವತಿಸಿ ಖರೀದಿಸುತ್ತಿದ್ದಾರೆ. ಇದು ಅವರಿಗೆ ಹೊರೆ ಆಗುತ್ತಿಲ್ಲವೇ? ಹಾಗೇ ಬಸ್ ಪ್ರಯಾಣದ ದರ ಏರಿಕೆಯಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರು.

    ಇನ್ನು ಭಾರತ್ ಬಂದ್ ಬೆಂಬಲ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಬಂದ್‍ಗೆ ಜೆಡಿಎಸ್ ಪಕ್ಷದಿಂದ ಬೆಂಬಲ ನೀಡಿದ್ದೇವೆ. ಪಕ್ಷದ ಕಾರ್ಯಕರ್ತರು ಕೂಡ ಬಂದ್ ಅನ್ನು ಬೆಂಬಲಿಸುತ್ತಾರೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv