Tag: D.c Thamanna

  • ಮಿಲ್ಕಿ ಬ್ಯೂಟಿ ತಮನ್ನಾ – ವಿಜಯ್ ವರ್ಮಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?

    ಮಿಲ್ಕಿ ಬ್ಯೂಟಿ ತಮನ್ನಾ – ವಿಜಯ್ ವರ್ಮಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?

    ತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡ್ತಿರುವ ನಟಿ ಅಂದ್ರೆ ತಮನ್ನಾ ಭಾಟಿಯಾ (Thamannaah Bhatia), ನಟ ವಿಜಯ್ ವರ್ಮಾ (Vijay Varma) ಜೊತೆಗಿನ ಲಿಪ್ ಲಾಕ್ ವೀಡಿಯೋ ವೈರಲ್ ಆದ ಮೇಲೆ ಇವರ ಲವ್ ಸ್ಟೋರಿ ವಿಚಾರದ ಬಗ್ಗೆ ಅನೇಕರು ಕ್ಯೂರಿಯಸ್ ಆಗಿದ್ದಾರೆ. ಅಷ್ಟಕ್ಕೂ ಇವರು ಮೊದಲು ಭೇಟಿಯಾಗಿದ್ದು ಎಲ್ಲಿ, ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಎಂಬ ಮಾಹಿತಿ ಇಲ್ಲಿದೆ.

    ತಮನ್ನಾ ಅವರು ಸೌತ್ ಚಿತ್ರರಂಗದ ಜೊತೆಗೆ ಅವರು ಬಾಲಿವುಡ್‌ನಲ್ಲೂ (Bollywood) ಆಕ್ಟೀವ್ ಆಗಿದ್ದಾರೆ. ಕೆಲವು ಹಿಂದಿ ಚಿತ್ರಗಳಲ್ಲಿ ಅವರು ನಟಿಸಿ ಗಮನ ಸೆಳೆದಿದ್ದಾರೆ. `ಲಸ್ಟ್ ಸ್ಟೋರಿಸ್ 2’ನಲ್ಲಿ (Lust Stories 2) ತಮನ್ನಾ ನಟಿಸುತ್ತಿದ್ದಾರೆ. ಇದರಲ್ಲಿ ವಿಜಯ್ ವರ್ಮಾ ಕೂಡ ನಟಿಸಿದ್ದಾರೆ. ಇಬ್ಬರೂ ಮೊದಲ ಬಾರಿಗೆ ಈ ಜೋಡಿ ಭೇಟಿ ಆಗಿದ್ದು `ಲಸ್ಟ್ ಸ್ಟೋರಿಸ್ 2′ ಚಿತ್ರದ ಸೆಟ್‌ನಲ್ಲಿ ಎನ್ನಲಾಗಿದೆ.

     

    View this post on Instagram

     

    A post shared by Tamannaah Bhatia (@tamannaahspeaks)

    ಈ ಸಿನಿಮಾದ ಚಿತ್ರೀಕರಣದ ಸೆಟ್‌ನಲ್ಲಿ ಭೇಟಿ ಆದರು. ಒಬ್ಬರ ಕೆಲಸವನ್ನು ಮತ್ತೊಬ್ಬರು ಮೆಚ್ಚಿಕೊಂಡಿದ್ದಾರೆ. ಈ ಗೆಳೆತನ ಈಗ ಪ್ರೀತಿಗೆ ತಿರುಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಮದುವೆಯ ಬಗ್ಗೆ ಗುಡ್‌ ನ್ಯೂಸ್‌ ಕೇಳಲು ಅಭಿಮಾನಿಗಳು ಕಾಯ್ತಿದ್ದಾರೆ. ಇದನ್ನೂ ಓದಿ: ‘ವಿರಾಟಪುರ ವಿರಾಗಿ’ ಚಿತ್ರವನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ತೋರಿಸುವೆ : ಸಚಿವ ಸಿ.ಸಿ. ಪಾಟೀಲ್

     

    View this post on Instagram

     

    A post shared by Vijay Varma (@itsvijayvarma)

    ಇತ್ತೀಚೆಗೆ ಈ ಜೋಡಿ ಗೋವಾಗೆ ತೆರಳಿತ್ತು. ಅಲ್ಲಿ ಇವರು ಹೊಸ ವರ್ಷವನ್ನು ಸ್ವಾಗತಿಸಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಈ ವೇಳೆ ಅವರು ಪರಸ್ಪರ ಕಿಸ್ ಮಾಡಿಕೊಂಡಿದ್ದರು. ಈ ಮೂಲಕ ಇಬ್ಬರೂ ಪ್ರೀತಿಯಲ್ಲಿರುವ ವಿಚಾರ ಈ ಮೂಲಕ ಅಧಿಕೃತ ಆಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಸುಮಲತಾ ಸಮಾವೇಶಕ್ಕೆ ಹೊರಗಿನಿಂದ ಜನ ಕರೆಸಲಾಗಿದೆ: ಡಿ.ಸಿ ತಮ್ಮಣ್ಣ

    ಸುಮಲತಾ ಸಮಾವೇಶಕ್ಕೆ ಹೊರಗಿನಿಂದ ಜನ ಕರೆಸಲಾಗಿದೆ: ಡಿ.ಸಿ ತಮ್ಮಣ್ಣ

    ಮಂಡ್ಯ: ಸುಮಲತಾ ಸಮಾವೇಶದಲ್ಲಿ ಮಂಡ್ಯ ಜನತೆ ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಹೊರಗಿನ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆಸಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಹೇಳಿಕೆ ನೀಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಡಿ.ಸಿ ತಮ್ಮಣ್ಣ ಅವರು, “ಸುಮಲತಾ ಅವರ ಸಮಾವೇಶದಲ್ಲಿ ನಮ್ಮ ಅಂಬರೀಶ್ ಅವರ ಅಭಿಮಾನಿಗಳು ಹೋಗಿರುತ್ತಾರೆ. ನನಗೆ ತಿಳಿದ ಮಾಹಿತಿ ಪ್ರಕಾರ ಸುಮಲತಾ ಅವರ ಬೃಹತ್ ಸಮಾವೇಶಕ್ಕೆ ಬಂದವರ ಪೈಕಿ ಮಂಡ್ಯ ಜಿಲ್ಲೆಯವರು ಕಡಿಮೆ. ಹೆಚ್ಚಾಗಿ ಹೊರಗಿನಿಂದ ಜನ ಕರೆಸಲಾಗಿದೆ. ಮೈಸೂರು, ಚನ್ನಪಟ್ಟಣ, ರಾಮನಗರದಿಂದ ಜನ ಕರೆಸಲಾಗಿದೆ ಎನ್ನುವ ವಿಷಯ ಗೊತ್ತಾಯಿತು” ಎಂದು ಹೇಳಿದರು.

    ಸಮಾವೇಶದಲ್ಲಿ ನಮ್ಮವರು ಹಾಗೂ ಅವರ ಕಡೆಯವರು ಬಂದಿರುತ್ತಾರೆ. ಹಾಗಂತ ಅಲ್ಲಿ ಇದ್ದ ಜನರೆಲ್ಲಾ ಸುಮಲತಾ ಅವರಿಗೆ ವೋಟ್ ಹಾಕುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವ ಕಾರಣ ಕೆಲ ಕಾಂಗ್ರೆಸ್ ನಮ್ಮ ಜೊತೆ ಬರಲು ಒಪ್ಪಿದ್ದಾರೆ. ಅಲ್ಲದೆ ನಮಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಈಗಾಗಲೇ ಸುಮಲತಾ ಜೊತೆ ಗುರುತಿಸಿಕೊಂಡ ಕಾಂಗ್ರೆಸ್ ಮುಖಂಡರ ಜೊತೆಗೆ ಮಾತುಕತೆ ಮಾಡಲಾಗಿದೆ ಎಂದು ತಿಳಿಸಿದರು.

    ಸುಮಲತಾ ಅವರಿಗೂ ಜನ ಇರಬಹುದು. ಆದರೆ ಅವರಿಗಿಂತ ಹತ್ತು ಪಟ್ಟು ಅಭಿಮಾನಿಗಳು ಕುಮಾರಸ್ವಾಮಿ ಅವರಿಗೆ ಇದ್ದಾರೆ. ನಾವ್ಯಾಕೆ ವಿರೋಧ ಮಾಡಬೇಕು? ದರ್ಶನ್ ಹಾಗೂ ಯಶ್ ಅವರನ್ನು ನಾವು ವಿರೋಧ ಮಾಡಲ್ಲ. ನಾವು ಬೇರೆಯವರ ಬಗ್ಗೆ ಮಾತನಾಡಬಾರದು ಎಂದು ಡಿ.ಸಿ ತಮ್ಮಣ್ಣ ಹೇಳಿದರು.

    ಬುಧವಾರ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸುಮಲತಾ ಅವರು ಭರ್ಜರಿ ರೋಡ್ ಶೋ ಮೂಲಕ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಆಯೋಜನೆಗೊಂಡಿದ್ದ ಸಮಾವೇಶಕ್ಕೆ ಆಗಮಿಸಿದ್ದರು. ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿ ಸುಮಲತಾ ಅವರನ್ನು ಬೆಂಬಲಿಸಿದ್ದರು.