ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟು 28 ವರ್ಷ. ಈ ಜರ್ನಿಯನ್ನ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮ ಪಡುತ್ತಿದ್ದಾರೆ. 1997ರಲ್ಲಿ ಮಹಾಭಾರತ ಸಿನಿಮಾ ಮೂಲಕ ಬಣ್ಣ ಹಚ್ಚಿದ ನಟ ದರ್ಶನ್ ಸುದೀರ್ಘ 28 ವರ್ಷಗಳನ್ನ ಚಿತ್ರರಂಗದಲ್ಲಿ ಪೂರೈಸಿದ್ದಾರೆ. ನಟ ದರ್ಶನ್ ಈ ಜರ್ನಿಯಲ್ಲಿ ಮಾಡಿದ ಭಿನ್ನ ವಿಭಿನ್ನ ಪಾತ್ರಗಳಿಂದ ಅಭಿಮಾನಿಗಳಿಂದ ‘ಡಿ’ ಬಾಸ್ ಎಂದು ಕರೆಸಿಕೊಂಡಿದ್ದಾರೆ.
28 ವರ್ಷಗಳಿಂದ ನಿಯತ್ತಿನಿಂದ ಕಟ್ಟಿರುವ ಸ್ವಂತ್ ಬ್ರ್ಯಾಂಡ್ ಇದು. ಯಾರಿಂದಲೂ ಸುಲಭವಾಗಿ ಕೆಡವಲು ಸಾಧ್ಯವಿಲ್ಲ ಎಂದು ಬರೆದುಕೊಂಡು ದರ್ಶನ್ ಅವರ ಅಭಿಮಾನಿಗಳ ಅಧಿಕೃತ ಡಿ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಸದ್ಯ ದರ್ಶನ್ ಡೆವಿಲ್ ಸಿನಿಮಾವನ್ನ ಮುಗಿಸಿದ್ದಾರೆ. ಡೆವಿಲ್ ಸಿನಿಮಾದ ಒಂದೊಂದೇ ಅಪ್‌ಡೇಟ್ ನೀಡ್ತಿದ್ದಾರೆ. ಇದೇ ಆ.15 ಕ್ಕೆ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಲಿದೆ. ಇದನ್ನೂ ಓದಿ: ವಿಷ್ಣು ಸರ್ ನನ್ನಂಥ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಶಾಶ್ವತ – ನಟ ಉಪೇಂದ್ರ
ಮತ್ತೊಂದು ಕಡೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 7 ಜನ ಆರೋಪಿಗಳಿಗೆ ಸುಪ್ರೀಂ ಸಂಕಷ್ಟ ಎದುರಾಗಿದೆ. ಸುಪ್ರೀಂ ಕೋರ್ಟ್ ಆದೇಶ ಕಾಯ್ದಿರಿಸಿರೋದು ದರ್ಶನ್ & ಗ್ಯಾಂಗ್‌ಗೆ ಟೆನ್ಷನ್ ಉಂಟು ಮಾಡಿದೆ. ಬೇಲ್ ಭವಿಷ್ಯ ಏನಾಗಲಿದೆ ಅಂತಾ ದರ್ಶನ್ & ಗ್ಯಾಂಗ್ ಎದುರು ನೋಡುತ್ತಿದೆ.
ನಟಿ ರಮ್ಯಾ (Ramya) ಮತ್ತು ದರ್ಶನ್ ಫ್ಯಾನ್ಸ್ (Darshan Fans) ನಡುವಿನ ಕಿತ್ತಾಟ ಇದೀಗ ಪೊಲೀಸ್ ಕಮಿಷನರ್ ಕಚೇರಿ ತಲುಪಿದೆ. ಬರೋಬ್ಬರಿ 48 ಸೋಷಿಯಲ್ ಮೀಡಿಯಾ ಅಕೌಂಟ್‌ನಿಂದ ತಮಗೆ ಅಶ್ಲೀಲ ಮೆಸೇಜ್ ಬಂದಿರುವುದಾಗಿ ರಮ್ಯಾ ದೂರಿನಲ್ಲಿ ತಿಳಿಸಿದ್ದಾರೆ. ಅಶ್ಲೀಲ ಮೆಸೇಜ್ ಕಳುಹಿಸಿದವರಿಗೆ ಶಿಕ್ಷೆ ಆಗಲಿದೆ ಎನ್ನುವ ವಿಶ್ವಾಸವನ್ನೂ ಅವರು ವ್ಯಕ್ತ ಪಡಿಸಿದ್ದಾರೆ. ಜೊತೆಗೆ ನಟ ದರ್ಶನ್ (Darshan) ಮೇಲೆಯೂ ಕಿಡಿಕಾರಿರುವ ರಮ್ಯಾ, ಚಿತ್ರೋದ್ಯಮದಲ್ಲಿ ತಮಗೆ ಯಾರ ಬೆಂಬಲ ಸಿಗದಿದ್ದರೂ ಒಂಟಿ ಹೋರಾಟ ಇದ್ದೇ ಇರುತ್ತದೆ ಅನ್ನುವ ಮಾತುಗಳನ್ನೂ ಆಡಿದ್ದಾರೆ.
ನಟ ದರ್ಶನ್‌ಗೆ ಸಿಕ್ಕಿರೋ ಜಾಮೀನು ಕುರಿತಂತೆ ಸುಪ್ರೀಂ ಕೋರ್ಟ್ ನೀಡಿದ್ದ ಅಭಿಪ್ರಾಯವನ್ನು ನಟಿ ರಮ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸುಪ್ರೀಂ ಕೋರ್ಟ್‌ನಿಂದ ಸಾಮಾನ್ಯರಿಗೆ ನ್ಯಾಯ ಸಿಗುತ್ತೆ ಅಂತ ನಂಬಿದ್ದು ನಿಜವಾಗಿದೆ ಅಂತ ಅವರು ಬರೆದುಕೊಂಡಿದ್ದರು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಅಂತಾನೂ ಪೋಸ್ಟ್ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ರಮ್ಯಾಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದರು. ಆ ಮೆಸೇಜ್ ಸ್ಕ್ರೀನ್ ಶಾಟ್ ತೆಗೆದು ಮತ್ತೆ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದರು ರಮ್ಯಾ.
ಬರೋಬ್ಬರಿ 48 ಅಕೌಂಟ್‌ನಿಂದ ಬಂದಿದ್ದ ಅಶ್ಲೀಲ ಮೆಸೇಜ್ ಕುರಿತಂತೆ ಮತ್ತೆ ಕಿಡಿಕಾರಿದ್ದರು ರಮ್ಯಾ. ಇವರಿಗೆ ಕಾನೂನು ಮೂಲಕವೇ ಪಾಠ ಮಾಡಬೇಕು ಅಂತ ನಿರ್ಧಾರಕ್ಕೂ ಬಂದ್ರು. ಹಾಗಾಗಿ ಬೆಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿದ ರಮ್ಯಾ, ತಮಗೆ ಅಶ್ಲೀಲ ಮೆಸೇಜ್ ಕಳುಹಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದ್ದಾರೆ. ಅವರಿಗೆ ಶಿಕ್ಷೆ ಆಗುವ ಮೂಲಕ ಸಮಾಜಕ್ಕೆ ದೊಡ್ಡ ಸಂದೇಶ ಹೋಗಬೇಕು ಅನ್ನೋ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ರಮ್ಯಾ ದೂರಿನಲ್ಲಿದೆ?
ದರ್ಶನ್ ವಿರುದ್ಧದ ಕೊಲೆ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಇತ್ತು. ಕೋರ್ಟ್ ಕಲಾಪಗಳನ್ನು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಮಾಜಿ ಸಂಸದೆಯಾಗಿ ವಿವಿಧ ಸುದ್ದಿ ವರದಿಯನ್ನು ಹಂಚಿಕೊಂಡಿದ್ದೆ. ಸುಪ್ರೀಂಕೋರ್ಟ್ ಕಾರ್ಯಕಲಾಪದ ವರದಿಯನ್ನ ಹಂಚಿಕೊಂಡಿದ್ದೆ. ಆ ಕಾರಣಕ್ಕಾಗಿ ವಿವಿಧ ಖಾತೆಗಳಿಂದ ಅಸಹ್ಯಕರ ಸಂದೇಶ, ಭಯಾನಕವಾಗಿ ಅವಹೇಳನಕಾರಿ ಸಂದೇಶಗಳನ್ನ ಕಳುಹಿಸಿದ್ದರು. ನನಗೆ ಕಳುಹಿಸಲಾದ ಸಂದೇಶಗಳು ಸ್ತ್ರೀದ್ವೇಷದಿಂದ ಕೂಡಿದ್ದವು. ಅವುಗಳನ್ನ ದೂರಿನಲ್ಲಿ ಉಲ್ಲೇಖಿಸಲು ಸಹ ಸಾಧ್ಯವಾಗ್ತಿಲ್ಲ. ದೂರಿನೊಂದಿಗೆ ಸಂದೇಶಗಳ ಲಿಂಕ್‌ಗಳನ್ನ ಲಗತ್ತಿಸುತ್ತಿದ್ದೇನೆ. ದರ್ಶನ್ ಅಭಿಮಾನಿಗಳ ಪೋಸ್ಟ್ ಅತಿರೇಖವಾಗಿದೆ. ಅವರು ಬಳಸಿರುವ ಭಾಷೆ ಅಶ್ಲೀಲ ಮತ್ತು ಕೊಳಕು, ನನ್ನ ಜೀವಕ್ಕೆ ನೇರ ಬೆದರಿಕೆಯೊಡ್ಡಿವೆ. ದುಷ್ಕರ್ಮಿಗಳ ವಿರುದ್ಧ ಅತ್ಯಂತ ಕಠಿಣಕ್ರಮಕೈಗೊಳ್ಳಬೇಕು ಎಂದು ನಾಲ್ಕು ಪುಟಗಳ ದೂರಿನಲ್ಲಿ ನಟಿ ರಮ್ಯಾ ಉಲ್ಲೇಖ ಮಾಡಿದ್ದಾರೆ.
ಇನ್ನು, ರೇಣುಕಾಸ್ವಾಮಿ ಕೊಲೆ ಆದಾಗಲೇ ದರ್ಶನ್ ತಮ್ಮ ಫ್ಯಾನ್ಸ್ಗೆ ಎಚ್ಚರಿಕೆ ನೀಡಿದ್ದರೆ, ತಮಗೆ ಇಂದು ಅಶ್ಲೀಲ ಮೆಸೇಜ್ ಬರುತ್ತಿರಲಿಲ್ಲ ಅಂತ ದರ್ಶನ್ ವಿರುದ್ಧವೂ ಕಿಡಿಕಾರಿದ್ದಾರೆ. ಇಷ್ಟು ಕೆಟ್ಟದಾಗಿ ಕಾಮೆಂಟ್ಸ್ ಮಾಡುವ ಫ್ಯಾನ್ಸ್ಗೆ ಬುದ್ಧಿ ಹೇಳುವ ಕೆಲಸ ಮಾಡುವುದು ಅವರ ಜವಾಬ್ದಾರಿಯೂ ಹೌದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ದುರುಳರು ಕಳುಹಿಸಿದ್ದ ಅಶ್ಲೀಲ ಮೆಸೇಜ್ ಕುರಿತಂತೆ ರಮ್ಯಾ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತುತ್ತಿದ್ದಂತೆ ನಟಿ ರಕ್ಷಿತಾ ಪ್ರೇಮ್ ಕೂಡ ಸಭ್ಯತೆಯ ಪಾಠ ಮಾಡಿದ್ದರು. ಜೊತೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ತಮ್ಮದೇ ಆದ ರೀತಿಯಲ್ಲಿ ಪೋಸ್ಟ್ ಮಾಡಿದ್ದರು. `ಮೂರ್ಖರನ್ನು ಅವರ ಮಾತಿನಿಂದಲೇ ಗುರುತಿಸಬಹುದು. ಮೌನವು ಬುದ್ಧಿವಂತನ ಲಕ್ಷಣ ಅಂತ ಅರ್ಥ ಬರುವಂಥ ಸಾಲುಗಳ ಫೋಟೋವನ್ನು ಅವರು ಹಂಚಿಕೊಂಡಿದ್ದರು. ಇದು ರಮ್ಯಾಗೆ ಕೊಟ್ಟಿರೋ ಟಾಂಗ್ ಅಂತಾನೇ ಚರ್ಚೆ ಶುರುವಾಗಿತ್ತು. ರಕ್ಷಿತಾ ಮತ್ತು ವಿಜಯಲಕ್ಷ್ಮಿ ತಮ್ಮ ಬೆಂಬಲಕ್ಕೆ ಇದ್ದಾರೆ ಅಂತ ಭಾವಿಸ್ತೇನೆ. ಅವರು ನನಗೆ ಟಾಂಗ್ ಕೊಟ್ಟು ಪೋಸ್ಟ್ ಮಾಡಿಲ್ಲ ಅಂದಿದ್ದಾರೆ ನಟಿ ರಮ್ಯಾ.
ಅಶ್ಲೀಲ ಸಂದೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ದೂರು ಕೊಟ್ಟಿದ್ದರು. ಇದರ ಬೆನ್ನಲ್ಲೇ ನಟ ದರ್ಶನ್ ಫ್ಯಾನ್ಸ್ ವಿರುದ್ಧ ಸೆಂಟ್ರಲ್ ಸೈಬರ್ ಕ್ರೈಂನಲ್ಲಿ ಎಫ್‌ಐಆರ್ ದಾಖಲಾಗಿದೆ. ಎ1 ಪ್ರಮೋದ್ ಗೌಡ ಸೇರಿ 43 ಅಕೌಂಟ್‌ಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸೆಕ್ಷನ್ 75 – ಲೈಂಗಿಕ ದೌರ್ಜನ್ಯ, ಸೆಕ್ಷನ್ 79 – ಮಹಿಳೆಗೆ ಅಪಮಾನ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ಇನ್ನೂ, ಸಿಸಿಬಿ ಜಂಟಿ ಕಮೀಷನರ್ ಅಜಯ್ ಹಿಲೋರಿ, ಡಿಸಿಪಿ ಖಾಸೀಂ ಅವರು, ಸೈಬರ್ ಠಾಣೆಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದರು.
ಈವರೆಗೂ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದ್ದ ಅಶ್ಲೀಲ ಮೆಸೇಜ್ ವಾರ್, ಇದೀಗ ಕಾನೂನು ಸ್ವರೂಪ ಪಡೆದುಕೊಂಡಿದೆ. ಒಂದು ಕಡೆ ಸ್ವತಃ ರಮ್ಯಾ ಅವರೇ ದೂರು ನೀಡಿದ್ದಾರೆ. ಮತ್ತೊಂದು ಕಡೆ ರಾಜ್ಯ ಮಹಿಳಾ ಆಯೋಗ ಕೂಡ ಸುಮೊಟೋ ಕೇಸ್ ದಾಖಲಿಸಿಕೊಂಡು, ತಪ್ಪಿತಸ್ಥರ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದೆ.
ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಫ್ಯಾನ್ಸ್ (Darshan Fans) ವಿರುದ್ಧ ಸ್ಯಾಂಡಲ್‌ವುಡ್ ಕ್ವೀನ್, ನಟಿ ರಮ್ಯಾ (Ramya) ಗರಂ ಆಗಿದ್ದಾರೆ. ಕೊಲೆಯಾಗಿರುವ ರೇಣುಕಾಸ್ವಾಮಿ ಕುಟುಂಬದ ಪರ ರಮ್ಯಾ ನಿಂತಿರುವುದು ದರ್ಶನ್ ಫ್ಯಾನ್ಸ್ ಕೋಪಕ್ಕೆ ಕಾರಣವಾಗಿದೆ. ಹಾಗಾಗಿ ನಿರಂತರವಾಗಿ ರಮ್ಯಾಗೆ ಸೋಷಿಯಲ್ ಮೀಡಿಯಾ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದಾರೆ ದರ್ಶನ್ ಅಭಿಮಾನಿಗಳು. ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ಕಳುಹಿಸುತ್ತಿರುವ ಅಶ್ಲೀಲ ಮೆಸೇಜ್‌ಗಳನ್ನು ತಮ್ಮದೇ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ ರಮ್ಯಾ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ಪದೇ ಪದೇ ದರ್ಶನ್ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗುತ್ತಿದ್ದಾರೆ ನಟಿ ರಮ್ಯಾ. ಈ ಆಕ್ರೋಶ ಅತಿರೇಕಕ್ಕೆ ಹೋದ ಕಾರಣದಿಂದಾಗಿ ನಟಿ ರಮ್ಯಾ ಕೂಡ ದರ್ಶನ್ ಫ್ಯಾನ್ಸ್‌ನ ಮುಖವಾಡ ಕಳಚುತ್ತಿದ್ದಾರೆ. ತಮಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿರುವ ದರ್ಶನ್ ಫ್ಯಾನ್ಸ್ ಹೆಸರಿನ ಸೋಷಿಯಲ್ ಮೀಡಿಯಾ ಅಕೌಂಟ್‌ಗಳ ಸ್ಕ್ರೀನ್‌ಶಾಟ್ ತೆಗೆದು, ಅಪ್ಲೋಡ್ ಮಾಡುತ್ತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಹೆಸರು ಕೇಳಿ ಬಂದಾಗ, ಅವತ್ತು ಕೂಡ ರಮ್ಯಾ ಮಾತಾಡಿದ್ದರು. ದರ್ಶನ್‌ರಿಂದ ತಪ್ಪಾಗಿದ್ದರೆ ಕಠಿಣ ಶಿಕ್ಷೆಯೇ ಆಗಬೇಕು ಅಂತ ಪ್ರತಿಕ್ರಿಯೆ ನೀಡಿದ್ದರು. ಜಾಮೀನು ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದಾಗಲೂ ದರ್ಶನ್ ವಿರುದ್ಧವೇ ಪೋಸ್ಟ್ ಮಾಡಿದ್ದರು. ಹಾಗಾಗಿ ದರ್ಶನ್ ಫ್ಯಾನ್ಸ್ ರಮ್ಯಾ ವಿರುದ್ಧ ತಿರುಗಿ ಬಿದ್ದಿದ್ದರು. ಈಗೀಗ ತೀರಾ ವೈಯಕ್ತಿಕವಾಗಿ ರಮ್ಯಾಗೆ ಟೀಕೆ ಮಾಡುತ್ತಿದ್ದಾರೆ. ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದಾರೆ. ಆ ಎಲ್ಲಾ ಸ್ಕ್ರೀನ್‌ಶಾಟ್ ಅನ್ನು ರಮ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಕೆಂಡಾಮಂಡಲರಾಗಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿರೋ ಮೋಹಕತಾರೆ, ಕಾನೂನು ಹೋರಾಟ ಮಾಡೋದಾಗಿ ತಿಳಿಸಿದ್ದಾರೆ. ಎಲ್ಲಾ ಮೆಸೇಜ್‌ಗಳೊಂದಿಗೆ ದೂರು ಕೊಡೋದಾಗಿ ತಿಳಿಸಿದ್ದಾರೆ. ಸುದೀಪ್, ಯಶ್ ಅಲ್ಲ, ಅವರ ಹೆಂಡತಿ ಮಕ್ಕಳನ್ನೂ ಬಿಟ್ಟಿಲ್ಲ. ಚಿಕ್ಕಚಿಕ್ಕ ಮಕ್ಕಳ ಬಗ್ಗೆ ಕೆಟ್ಟಕೆಟ್ಟ ಪದ ಬಳಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಶ್ಲೀಲ ಕಮೆಂಟ್ ಅಕೌಂಟ್‌ಗಳನ್ನು ಬಹಿರಂಗ ಪಡಿಸಿದ ರಮ್ಯಾ, ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. `ರೇಣುಕಾಸ್ವಾಮಿ ಹಾಗೂ ಡಿಬಾಸ್ ಫ್ಯಾನ್ಸ್ ಸಂದೇಶಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಇವರೆಲ್ಲಾ ಸ್ತ್ರೀದ್ವೇಷ ಮನೋಭಾವದವರು. ಇಂಥವರಿಂದಲೇ ಹೆಣ್ಣು ಮಕ್ಕಳು ದೌರ್ಜನ್ಯ, ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ’ ಅಂತ ಡಿ ಬಾಸ್ ಫ್ಯಾನ್ಸ್ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ ರಮ್ಯಾ. `ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಏಕೆ ಬೇಕು ಎಂಬುದಕ್ಕೆ ನಿಮ್ಮ ಕಾಮೆಂಟ್‌ಗಳು ಸಾಕ್ಷಿ. ನಿಮ್ಮ ಮಸೇಜ್‌ಗಳಿಂದ ನಿಮ್ಮ ಯೋಗ್ಯತೆ ಇಷ್ಟರಲ್ಲೇ ಗೊತ್ತಾಗುತ್ತೆ’ ಎಂದು ತೀಕ್ಷ್ಣವಾಗಿ ತಿವಿದಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan), ಅಭಿಮಾನಿಗಳ ಪಾಲಿನ ʻಡಿ ಬಾಸ್ʼಇಂದು 48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಸಾಧನೆಯ ಶಿಖರವೇರುತ್ತಿರುವಾಗ ಸಾಗರದಷ್ಟು ಸವಾಲು ಎದುರಾದರೂ ಮೆಟ್ಟಿ ನಿಲ್ಲುವ ಶಕ್ತಿ ನಿನ್ನಲ್ಲಿದೆ. ಸದಾ ಸಂತೋಷ ಹಾಗೂ ಯಶಸ್ಸಿನ ಜೀವನ ನಿನ್ನದಾಗಲಿ ಎಂದು ಶುಭ ಹಾರೈಸುವೆ…
Wishing you a great year ahead , of growth, joy, good health and… pic.twitter.com/sjWppSM7DH
— Sumalatha Ambareesh ???????? ಸುಮಲತಾ ಅಂಬರೀಶ್ (@sumalathaA) February 16, 2025
ಸಾಮಾನ್ಯವಾಗಿ ದರ್ಶನ್ ಹುಟ್ಟುಹಬ್ಬವೆಂದರೆ ಅವರ ಅಭಿಮಾನಿಗಳಿಗೆ ಸಡಗರ, ಅಂದು ಅನೇಕ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳುತ್ತಿದ್ದರು. ಮನೆಯ ಮುಂದೆ ಹಬ್ಬದ ವಾತಾವರಣ ಇರುತ್ತಿತ್ತು. ಆದರೆ ಈ ಬಾರಿ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಇತ್ತೀಚೆಗಷ್ಟೇ ವಿಡಿಯೋ ಮಾಡಿ ತಮ್ಮ ಅಭಿಮಾನಿಗಳಿಗೆ ದರ್ಶನ್ ವಿನಂತಿ ಮಾಡಿಕೊಂಡಿದ್ದರು.
ಆತ್ಯಾಪ್ತರಿಗಷ್ಟೇ ಆಹ್ವಾನ:
ದರ್ಶನ್ ಹುಟ್ಟುಹಬ್ಬದ ಸರಳ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅತ್ಯಾಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು. ದರ್ಶನ್ ಪತ್ನಿ ವಿಜಯಲಕ್ಷ್ಮಿ ಆತ್ಮೀಯರಿಗಷ್ಟೇ ಆಹ್ವಾನ ನೀಡಿದ್ದರು. ರಾತ್ರಿ ದರ್ಶನ್ ನಿವಾಸದಲ್ಲೇ ನಡೆದ ಹುಟ್ಟುಹಬ್ಬದ ಸರಳ ಸಂಭ್ರಮದಲ್ಲಿ ನಿರ್ಮಾಪಕಿ ಶೈಲಜಾ ನಾಗ್, ಸಂಗೀತ ನಿರ್ದೇಶಕ ಹರಿಕೃಷ್ಣ, ನಟಿ ರಕ್ಷಿತಾ ಪ್ರೇಮ್, ನಟ ಧನ್ವಿರ್, ದರ್ಶನ್ ಸಹೋದರ ದಿನಕರ್ ತೂಗುದೀಪ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಕೇಕ್ ಕತ್ತರಿಸಿ, ದರ್ಶನ್‌ಗೆ ಶುಭ ಹಾರೈಸಿದರು.
ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಸಾಧನೆಯ ಶಿಖರವೇರುತ್ತಿರುವಾಗ ಸಾಗರದಷ್ಟು ಸವಾಲು ಎದುರಾದರೂ ಮೆಟ್ಟಿ ನಿಲ್ಲುವ ಶಕ್ತಿ ನಿನ್ನಲ್ಲಿದೆ. ಸದಾ ಸಂತೋಷ ಹಾಗೂ ಯಶಸ್ಸಿನ ಜೀವನ ನಿನ್ನದಾಗಲಿ ಎಂದು ಶುಭ ಹಾರೈಸುವೆ…
Wishing you a great year ahead , of growth, joy, good health and… pic.twitter.com/sjWppSM7DH
— Sumalatha Ambareesh ???????? ಸುಮಲತಾ ಅಂಬರೀಶ್ (@sumalathaA) February 16, 2025
ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ….
ಇನ್ನೂ ದರ್ಶನ್ ಹುಟ್ಟುಹಬ್ಬಕ್ಕೆ ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಸಹ ಶುಭಾಶಯಗ ಕೋರಿದ್ದಾರೆ. ಈ ಸಂದೇಶವನ್ನು ತಮ್ಮ ಎಕ್ಸ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಸಾಧನೆಯ ಶಿಖರವೇರುತ್ತಿರುವಾಗ ಸಾಗರದಷ್ಟು ಸವಾಲು ಎದುರಾದರೂ ಮೆಟ್ಟಿ ನಿಲ್ಲುವ ಶಕ್ತಿ ನಿನ್ನಲ್ಲಿದೆ. ಸದಾ ಸಂತೋಷ ಹಾಗೂ ಯಶಸ್ಸಿನ ಜೀವನ ನಿನ್ನದಾಗಲಿ ಎಂದು ಶುಭ ಹಾರೈಸುವೆ ಎಂದು ಬರೆದುಕೊಂಡಿದ್ದಾರೆ.
ಅಲ್ಲದೇ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿದ್ದ ಸಂದರ್ಭದಿಂದಲೂ ಜೊತೆಯಾಗಿದ್ದ ನಟ ಧನ್ವೀರ್ (Dhanveer) ಸಹ ಶುಭಾಶಯ ತಿಳಿಸಿದ್ದಾರೆ. ಧನ್ವೀರ್ ದರ್ಶನ್ ಜೊತೆಗಿನ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿ, ಸಂತೋಷ ಮತ್ತು ಯಶಸ್ಸು ಸದಾ ನಿಮ್ಮ ಜೊತೆಗಿರಲಿ. ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ. ಹುಟ್ಟುಹಬ್ಬದ ಶುಭಾಶಯಗಳು ಅಣ್ಣ (ಬಾಸ್) #ಉಸಿರಿರುವವರೆಗೂ ಇರ್ತಿವಿ ನಿಮ್ಮಿಂದೆ ಎಂದು ಬರೆದುಕೊಂಡಿದ್ದಾರೆ.
ಬರೋಬ್ಬರಿ 1300 ಪುಟಗಳ ಈ ಚಾರ್ಜ್ ಶೀಟ್‌ನಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಕೆಲ ಸಾಕ್ಷ್ಯಗಳ ಹೇಳಿಕೆಗಳು, ಪುನೀತ್ ಮೊಬೈಲ್‌ನಿಂದ ರಿಟ್ರೀವ್ ಮಾಡಲಾದ 8 ಪೋಟೋಗಳು ಸೇರಿದಂತೆ ಮಹತ್ವದ ದಾಖಲೆಗಳನ್ನು ಸೇರಿಸಿ ಸಲ್ಲಿಕೆ ಮಾಡಲಾಗಿದೆ. ಇದನ್ನೂ ಓದಿ: 2028ರ ಚುನಾವಣೆಯ ಗೆಲುವಿಗೆ ಇದು ಮುನ್ನುಡಿ: ಡಿಕೆ ಶಿವಕುಮಾರ್
ಚಿಕ್ಕೋಡಿ(ಬೆಳಗಾವಿ): ಚಾಲೆಂಜಿಗ್ ಸ್ಟಾರ್ ದರ್ಶನ ಅಭಿಮಾನಿಗಳು ಅವರ ಮೇಲಿನ ಪ್ರೀತಿಯಿಂದಾಗಿ ವಿಶಿಷ್ಟವಾಗಿ ತಮ್ಮ ಅಭಿಮಾನವನ್ನ ಪ್ರದರ್ಶನ ಮಾಡುತ್ತಾರೆ. ಅದೇ ರೀತಿ ಉತ್ತರ ಕರ್ನಾಟಕದಲ್ಲಿ ಆಚರಣೆ ಮಾಡುವ ಕಾರ ಹುಣ್ಣಿಮೆಯಲ್ಲೂ ಡಿ ಬಾಸ್ ಅಭಿಮಾನಿಗಳು ವಿಭಿನ್ನವಾಗಿ ತಮ್ಮ ಬಾಸ್ ಮೇಲೆ ಪ್ರೀತಿ ತೋರಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಆಚರಣೆ ಮಾಡುವ ರೈತರ ಹಬ್ಬ ಕಾರ ಹುಣ್ಣಿಮೆಯ ನಿಮಿತ್ತ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಮನೇವಾಡಿ ಗ್ರಾಮದಲ್ಲಿ ಎತ್ತುಗಳ ಮೇಲೆ ದರ್ಶನ ಚಿತ್ರ ಬಿಡಿಸಿ ಅವರ ಅಭಿಮಾನಿಗಳು ಡಿ ಬಾಸ್ ಮೇಲಿನ ಅಭಿಮಾನ ತೋರಿದ್ದಾರೆ. ಕಾರ ಹುಣ್ಣಿಮೆ ಸಂದರ್ಭದಲ್ಲಿ ಎತ್ತುಗಳನ್ನ ಬಣ್ಣದಿಂದ ಶೃಂಗರಿಸುವದು ಮೊದಲಿನಿಂದ ವಾಡಿಕೆ ಆದರೆ ಈ ಬಾರಿ ಶಮನೇವಾಡಿ ಗ್ರಾಮದ ಪ್ರದೀಪ ಖೋತ ಎನ್ನುವರ ಎತ್ತುಗಳ ಮೇಲೆ ಡಿ ಬಾಸ್ ಭಾವಚಿತ್ರ ಹಾಗೂ ಅವರ ಅಭಿನಯದ ಚಿತ್ರಗಳ ಟೈಟಲ್ ಹೆಸರುಗಳನ್ನ ಬಿಡಿಸಿದ್ದಾರೆ. ಡಿ ಬಾಸ್ ಅಭಿಮಾನಿಯಾಗಿರುವ ನಾಗರಾಜ ಮಾಲಗತ್ತಿ ಎಂಬ ಕಲಾವಿದ ಎತ್ತುಗಳ ಮೇಲೆ ಚಿತ್ರ ಬಿಡಿಸಿದ್ದಾರೆ. ಗ್ರಾಮದ ಡಿ ಬಾಸ್ ಅಭಿಮಾನಿಗಳು ಈ ರೀತಿ ಹೊಸ ಪ್ರಯತ್ನ ಮಾಡಿ ದರ್ಶನ ಅವರ ಮೇಲಿನ ಅಭಿಮಾನವನ್ನ ವ್ಯಕ್ತಪಡಿಸಿದ್ದಾರೆ.
ಪ್ರಾಣಿಗಳ ಮೇಲೆ ವಿಶೇಷ ಕಾಳಜಿ ಇರುವ ಚಾಲೆಂಜಿಗ್ ಸ್ಟಾರ್ ದರ್ಶನ ಅವರಿಗೆ ಈ ರೀತಿ ಎತ್ತುಗಳ ಚಿತ್ರ ಬಿಡಿಸಿ ದರ್ಶನ ಅವರಿಗೆ ಅರ್ಪಿಸಲಾಗಿದೆ. ಮರಾಠಿ ಪ್ರಾಬಲ್ಯವಿರುವ ಗಡಿ ಭಾಗದಲ್ಲಿ ಕನ್ನಡ ಚಿತ್ರ ನಟನಿಗೆ ಈ ರೀತಿ ಅಭಿಮಾನ ತೋರುತ್ತಿರುವದು ವಿಶೇಷವೇ ಸರಿ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಡಿ ಬಾಸ್ ಅಭಿಮಾನಿಗಳು ಕಾರಹುಣ್ಣಿಮೆ ನಿಮಿತ್ತ ಎತ್ತುಗಳ ಮೇಲೆ ದರ್ಶನ ಅವರ ಭಾವಚಿತ್ರದ ಜೊತೆಗೆ ಅವರು ಅಭಿನಯಿಸಿರುವ ಐರಾವತ, ರಾಬರ್ಟ ಚಲನಚಿತ್ರದ ಟೈಟಲ್ ಬಿಡಿಸಿರುವ ವಿಡಿಯೋಗಳು ಈಗ ಎಲ್ಲೆಡೆ ವೈರಲ್ ಆಗುತ್ತಿವೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ಕಾರ್ಯವೈಖರಿ ಬಗ್ಗೆ ಡಿ.ರೂಪ ಮತ್ತೆ ಅಸಮಧಾನ
ಒಟ್ಟಿನಲ್ಲಿ ಉತ್ತರ ಕರ್ನಾಟಕದ ರೈತರ ಹಬ್ಬ ಕಾರ ಹುಣ್ಣಿಮೆಯಲ್ಲೂ ಡಿ ಬಾಸ್ ದರ್ಶನ ಮಿಂಚುತ್ತಿದ್ದಾರೆ. ಗಡಿ ಭಾಗದಲ್ಲೂ ಡಿ ಬಾಸ್ ಬಗ್ಗೆ ಅವರ ಅಭಿಮಾನಿಗಳು ತೋರುತ್ತಿರುವ ಅಭಿಮಾನವನ್ನ ಮೆಚ್ಚಲೇಬೇಕು.
ಹುಬ್ಬಳ್ಳಿ: ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಕಳೆದ ರಾತ್ರಿ ‘ರಾಬರ್ಟ್’ ಅಬ್ಬರಿಸಿದ್ದಾನೆ.
ಹೌದು. ಡಿ ಬಾಸ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಿತು. ಲಕ್ಷಾಂತರ ಅಭಿಮಾನಿಗಳು ಡಿ ಬಾಸ್ ದರ್ಶನ ಪಡೆದ್ರು. ನಗರದ ರೈಲ್ವೆ ಮೈದಾನದಲ್ಲಿ ನಡೆದ ರಾಬರ್ಟ್’ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಲಕ್ಷದಷ್ಟು ಅಭಿಮಾನಿಗಳು ಜಮಾಯಿಸಿದ್ರು.
ದರ್ಶನ್ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಶಿಳ್ಳೆ, ಕೇಕೆ ಮುಗಿಲುಮುಟ್ಟಿತ್ತು. ಸಮಾರಂಭದಲ್ಲಿ ನಾಯಕಿ ನಟಿ ಆಶಾ ಭಟ್, ದೇವರಾಜ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ರವಿಶಂಕರ್, ವಿನೋದ್ ಪ್ರಭಾಕರ್, ತರುಣ್ ಸುಧೀರ್ ಸೇರಿದಂತೆ ಇಡೀ ಚಿತ್ರ ತಂಡ ಭಾಗವಹಿಸಿತ್ತು.
ಈ ವೇಳೆ ದರ್ಶನ್ ಡೈಲಾಗ್ ಹೊಡೆದ್ರು. ತಮ್ಮ ನೆನಪುಗಳನ್ನ ಹಚ್ಚಿಕೊಂಡರು. ಹಾಡು-ಡ್ಯಾನ್ಸ್‍ನಿಂದ ವೇದಿಕೆ ರಂಗೇರಿತ್ತು. ಸಮಾರಂಭದಲ್ಲಿ ಸಚಿವರಾದ ಜಗದೀಶ್ ಶೆಟ್ಟರ್, ಬಿ.ಸಿ.ಪಾಟೀಲ್ ಕೂಡ ಭಾಗವಹಿಸಿದ್ರು.
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿ ತಂಡ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ಇಂದು ಮಾಸ್ ಅಭಿಮಾನಿಗಳಿಗೆ ಬಾ, ಬಾ, ಬಾ ನಾ ರೆಡಿ ಹಾಡನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.
ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ತಮ್ಮ ಸಂಗೀತ ಮೂಲಕವೇ ಕೇಳುಗರನ್ನ ಹಿಡಿದಿಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಹಾಡಿನ ಸಾಹಿತ್ಯ ಮಾಸ್ ಹೀರೋ ದರ್ಶನ್ ಅವರಿಗಾಗಿ ರಚಿತವಾಗಿವೆ. ಹಡಗು ಹಿಡಿದು ಪಡೆಯೇ ಬರಲಿ, ಹೊಸಕಿ ಬಿಡುವೆ ಕಾಲಡಿ, ಡಿ.. ಡಿ… ಬಾ ನಾ ರೆಡಿ ಸಾಲುಗಳಿಂದ ಹಾಡು ಆರಂಭಗೊಳ್ಳುತ್ತದೆ.
ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ನಮ್ಮ #Roberrt ಚಿತ್ರದ ಮೊದಲ ಹಾಡು #BaBaBaNaReady ಈಗ ನಿಮ್ಮ ಮುಂದೆ. ನೋಡಿ ಆಶೀರ್ವದಿಸಿ 🙂
ಸಿನಿಮಾ ನಿರ್ದೇಶಕ ತರುಣ್ ಸುದೀರ್, ಇದು ಡಿ ಬಾಸ್ ಅಭಿಮಾನಿಗಳಿಗೆ ಉಡುಗೊರೆ ಆಗಲಿದೆ ಎಂದು ಫೆಬ್ರವರಿ 29ರಂದು ತಿಳಿಸಿದ್ದರು. ಟ್ವೀಟ್ ಮೂಲಕ ಹಾಡು ಬಿಡುಗಡೆಯ ಬಗ್ಗೆ ತರುಣ್ ಸುಧೀರ್ ಮಾಹಿತಿ ನೀಡಿದ್ದರು. ಮೊದಲ ಬಾರಿಗೆ ತ್ರಿಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ. ತೆರೆಯ ಮೇಲೆ ಮೂರು ಪಾತ್ರಗಳನ್ನು ಕಣ್ತುಂಬಿಕೊಳ್ಳಲು ಅಭಿಮಾನಿ ಬಳಗ ಕಾಯುತ್ತಿದೆ.
ದರ್ಶನ್ ಹುಟ್ಟುಹಬ್ಬದಂದು ಚಿತ್ರತಂಡ ಚಕ್ರವರ್ತಿಯ ಅಭಿಮಾನಿಗಳಿಗೆ ಟೀಸರ್ ಉಡುಗೊರೆಯಾಗಿ ನೀಡಿತ್ತು. ರಾಮನ ಭಂಟ ಹನುಮನ ಲುಕ್‍ನಲ್ಲಿ ಯಜಮಾನನನ್ನು ನೋಡಿದ್ದ ಫ್ಯಾನ್ಸ್ ಫಿದಾ ಆಗಿದ್ದರು. ಈ ಚಕ್ರವರ್ತಿ ಹೆಗಲ ಮೇಲೆ ಪುಟ್ಟ ರಾಮ ವಿರಾಜಮಾನವಾಗಿದ್ದನು. ಆದ್ರೆ ಚಿತ್ರತಂಡ ಪುಟ್ಟರಾಮನ ಪಾತ್ರದ ಬಗ್ಗೆ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಹೀಗೆ ಪ್ರತಿ ರಿವೀಲ್‍ನಲ್ಲಿಯೂ ಚಿತ್ರತಂಡ ಸಿನಿಮಾದ ಕಥೆಯ ರಹಸ್ಯವನ್ನು ಕಾಪಾಡಿಕೊಂಡು ಬಂದಿದೆ.
ಸಂಜಯ್, ಅಕ್ಬರ್ ಹಾಗೂ ರಾಬರ್ಟ್ ಎಂದು ಮೂರು ಪಾತ್ರದಲ್ಲಿ ದರ್ಶನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಶಾ ಭಟ್ ಸಿನಿಮಾದ ನಾಯಕಿಯಾಗಿದ್ದು, ಜಗಪತಿ ಬಾಬು ವಿಲನ್ ಆಗಿ ದರ್ಶನ್‍ಗೆ ಟಕ್ಕರ್ ಕೊಟ್ಟಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಸಿನಿಮಾದ ಆ್ಯಕ್ಷನ್ ಕಟ್ ಹೇಳಿದ್ದು, ಉಮಾಪತಿ ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದಾರೆ.