Tag: Cyprus

  • ಪ್ರಧಾನಿ ಮೋದಿಗೆ ಸೈಪ್ರಸ್‌ನ ಅತ್ಯುನ್ನತ ಗೌರವ

    ಪ್ರಧಾನಿ ಮೋದಿಗೆ ಸೈಪ್ರಸ್‌ನ ಅತ್ಯುನ್ನತ ಗೌರವ

    ನವದೆಹಲಿ: ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರಿಗೆ (PM Modi) ಸೈಪ್ರಸ್ (Cyprus)  ದೇಶದ ಅತ್ಯುನ್ನತ ಪ್ರಶಸ್ತಿ `ಗ್ರ‍್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕರಿಯೋಸ್ III’ (Grand Cross of the Order of Makarios III) ನೀಡಿ ಗೌರವಿಸಲಾಗಿದೆ.

    ಸೈಪ್ರಸ್ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರು ಪ್ರಧಾನಿ ಮೋದಿ ಅವರಿಗೆ ಸೈಪ್ರಸ್‌ನ ಅತ್ಯುನ್ನತ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಸೈಪ್ರಸ್ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಇದು ನರೇಂದ್ರ ಮೋದಿಗೆ ಮಾತ್ರವಲ್ಲ, 140 ಕೋಟಿ ಭಾರತೀಯರಿಗೂ ಸಂದ ಗೌರವವಿದು. ಇದು ಅವರ ಸಾಮರ್ಥ್ಯ ಮತ್ತು ಆಕಾಂಕ್ಷೆಗಳಿಗೆ ಸಂದ ಗೌರವ. ಇದು ನಮ್ಮ ಸಂಸ್ಕೃತಿ, ಸಹೋದರತ್ವ ಮತ್ತು ವಸುಧೈವ ಕುಟುಂಬಕಂ ಎಂಬ ಸಿದ್ಧಾಂತಕ್ಕೆ ಸಂದ ಗೌರವ ಎಂದರು.ಇದನ್ನೂ ಓದಿ: ರ‍್ಯಾಪಿಡೊ ಚಾಲಕನಿಂದ ಹಲ್ಲೆ – ಒಂದೇ ಏಟಿಗೆ ಕೆಳಗೆ ಬಿದ್ದ ಯುವತಿ, ಸ್ಥಳೀಯರಿಂದ ರಕ್ಷಣೆ

    ನಾನು ಇದನ್ನು ಭಾರತ ಮತ್ತು ಸೈಪ್ರಸ್ ನಡುವಿನ ಸ್ನೇಹ ಸಂಬಂಧಗಳು, ನಮ್ಮ ಮೌಲ್ಯಗಳು ಮತ್ತು ಪರಸ್ಪರ ತಿಳುವಳಿಕೆಗೆ ಅರ್ಪಿಸುತ್ತೇನೆ. ನಾನು ಈ ಗೌರವವನ್ನು ಎಲ್ಲಾ ಭಾರತೀಯರ ಪರವಾಗಿ ಬಹಳ ನಮ್ರತೆ ಮತ್ತು ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ. ಈ ಪ್ರಶಸ್ತಿಯು ಶಾಂತಿ, ಭದ್ರತೆ, ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ನಮ್ಮ ಜನರಿಗೆ ನಮ್ಮ ಅಚಲ ಬದ್ಧತೆಯ ಸಂಕೇತವಾಗಿದೆ ಎಂದು ಹೇಳಿದರು.

    ಆರ್ಡರ್ ಆಫ್ ಮಕರಿಯೋಸ್ III ಸೈಪ್ರಸ್ ನೀಡುವ ನೈಟ್‌ಹುಡ್ ಗೌರವವಾಗಿದ್ದು, ಇದಕ್ಕೆ ಸೈಪ್ರಸ್‌ನ ಮೊದಲ ಅಧ್ಯಕ್ಷ ಆರ್ಚ್ಬಿಷಪ್ ಮಕರಿಯೋಸ್ III ಅವರ ಹೆಸರಿಡಲಾಗಿದೆ. ಇದು ಗ್ರ‍್ಯಾಂಡ್ ಕಾಲರ್ ಪ್ರಶಸ್ತಿಯ ನಂತರ ಸೈಪ್ರಸ್‌ನ ಎರಡನೇ ಅತ್ಯುನ್ನತ ಶ್ರೇಣಿಯ ಪ್ರಶಸ್ತಿಯಾಗಿದ್ದು, ರಾಷ್ಟ್ರಾಧ್ಯಕ್ಷರು, ರಾಜತಾಂತ್ರಿಕರು, ಅಥವಾ ಸೈಪ್ರಸ್‌ಗೆ ಅಸಾಧಾರಣ ಕೊಡುಗೆ ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.

    ಈ ಪ್ರಶಸ್ತಿಯನ್ನು 1991ರಲ್ಲಿ ಸೈಪ್ರಸ್ ಗಣರಾಜ್ಯವು ಔಪಚಾರಿಕವಾಗಿ ನೀಡಲು ಪ್ರಾರಂಭಿಸಿತು. ಸೈಪ್ರಸ್‌ನ ಮೊದಲ ರಾಷ್ಟ್ರಾಧ್ಯಕ್ಷ ಮತ್ತು ಸ್ವಾತಂತ್ರ‍್ಯ ಚಳವಳಿಯ ನಾಯಕ ಆರ್ಚ್ಬಿಷಪ್ ಮಕರಿಯೋಸ್ IIIರವರ ಗೌರವಾರ್ಥವಾಗಿ ನೀಡಲಾಗುತ್ತಿದೆ. ಸೈಪ್ರಸ್‌ಗೆ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಿದವರಿಗೆ ಅಥವಾ ರಾಷ್ಟ್ರದ ಗೌರವವನ್ನು ಉನ್ನತೀಕರಿಸಿದವರಿಗೆ ನೀಡಲಾಗುತ್ತದೆ. ಪ್ರಶಸ್ತಿಯ ಚಿಹ್ನೆಯು ಸೈಪ್ರಸ್‌ನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ.ಇದನ್ನೂ ಓದಿ: ವಿಮಾನ ದುರಂತದ ಹೆಣದ ಮೇಲೆ ನಾವು ರಾಜಕೀಯ ಮಾಡಲ್ಲ, ಅದು ಬಿಜೆಪಿ, ಜೆಡಿಎಸ್ ಕೆಲಸ: ಡಿಕೆಶಿ

  • ಬೆಂಗ್ಳೂರು ಮಾತ್ರವಲ್ಲ ವಿದೇಶಗಳ ಶಾಲೆಗಳಿಗೂ ಹುಸಿ ಬಾಂಬ್ ಬೆದರಿಕೆ

    ಬೆಂಗ್ಳೂರು ಮಾತ್ರವಲ್ಲ ವಿದೇಶಗಳ ಶಾಲೆಗಳಿಗೂ ಹುಸಿ ಬಾಂಬ್ ಬೆದರಿಕೆ

    – Beeble.com ಇ-ಮೇಲ್ ಮೂಲಕ ಬೆದರಿಕೆ

    – ಬೆಂಗಳೂರಿನ 48 ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ 48 ಎಫ್‌ಐಆರ್

    ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಶಾಲೆಗಳಿಗೆ ಬಂದ ಹುಸಿ ಬಾಂಬ್ ಬೆದರಿಕೆ (Bomb Threat) ಇ-ಮೇಲ್ (E-Mail) ಪ್ರಕರಣ ಪೊಲೀಸರಿಗೆ ತಲೆ ಬಿಸಿ ಉಂಟುಮಾಡಿದೆ. ಬೇರೆ ಬೇರೆ ದೇಶಗಳಲ್ಲೂ ಇದೇ ಥರನಾಗಿ ಬೆದರಿಕೆಯೊಡ್ಡಿದ್ದು, ದುಷ್ಕರ್ಮಿಗಳನ್ನ ಸೆರೆಹಿಡಿಯಲು ಬಲೆ ಬೀಸಿದ್ದಾರೆ.

    ಶುಕ್ರವಾರ ಇಡೀ ದಿನ ರಾಜ್ಯದ ಎಲ್ಲಾ ಜನರ ಬಾಯಲ್ಲೂ ಶಾಲೆಗಳಿಗೆ ಬಂದಿದ್ದು ಬಾಂಬ್ ಬೆದರಿಕೆ ಇ-ಮೇಲ್‌ನದ್ದೇ ಮಾತು. ಪೋಷಕರಂತೂ ಇನ್ನೂ ಗಾಬರಿಯಿಂದ ಹೊರಬಂದಿಲ್ಲ. ಈ ನಡುವೆ ಇಮೇಲ್ ಜಾಡು ಹಿಡಿದು ಹೊರಟ ಪೊಲೀಸರಿಗೆ ದೂರದ ಸೈಪ್ರಸ್ (Cyprus) ದೇಶದ ಕಡೆ ಶಂಕೆ ತೋರಿಸುತ್ತಿದೆ. ದುಷ್ಕರ್ಮಿಗಳು `Beeble.comʼ  ಮೂಲಕ ಮೇಲ್ ಮಾಡಿದ್ದಾರೆ. ಆದ್ರೆ ನಿಖರವಾಗಿ ಯಾರು ಮೇಲ್ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಐಪಿ ಅಡ್ರೆಸ್ ನೀಡುವಂತೆ ಸೈಪ್ರಸ್‌ನಲ್ಲಿರುವ ಬೀಬಲ್.ಕಾಮ್‌ಗೆ ಪೊಲೀಸ್ ಇಲಾಖೆ ಪತ್ರ ಬರೆದಿದೆ. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲೂ ಯೋಗಿ ಸರ್ಕಾರದ ಬುಲ್ಡೋಜರ್ ದಾಳಿ – ಕಟ್ಟಡಗಳು ಧ್ವಂಸ

    ಈ ಬೆದರಿಕೆ ಇಮೇಲ್‌ಗಳು ಕೇವಲ ಬೆಂಗಳೂರಿಗಷ್ಟೇ ಸೀಮಿತವಾಗಿಲ್ಲ. ಕಳೆದ ಒಂದೂವರೆ ತಿಂಗಳಲ್ಲಿ ಮಲೇಷ್ಯಾ, ಜರ್ಮನಿ, ಟ್ರಿನಿಡಾಡ್ ದೇಶಗಳ ನೂರಾರು ಶಾಲೆಗಳಿಗೆ ಇದೇ ರೀತಿಯ ಬಾಂಬ್ ಬೆದರಿಕೆ ಸಂದೇಶಗಳನ್ನ ಕಳುಹಿಸಲಾಗಿತ್ತು. ಯಾರು? ಎಲ್ಲಿಂದ? ಯಾವ ಐಪಿ ಅಡ್ರೆಸ್‌ನಿಂದ ಮೇಲ್ ಮಾಡಿದ್ದಾರೆ? ಎಂದು ಆ ದೇಶಗಳಲ್ಲಿ ಇನ್ನೂ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಇಂದು ಸಂಜೆ ಹೈದರಾಬಾದ್‌ಗೆ ತೆರಳಲಿದ್ದಾರೆ ಟ್ರಬಲ್‌ ಶೂಟರ್‌ ಡಿಕೆಶಿ

    ಬೆಂಗಳೂರಲ್ಲಿ ಈಗಾಗಲೆ 3ನೇ ಬಾರಿಗೆ ಈ ರೀತಿಯ ಮೇಲ್ ಬಂದಿದ್ದು, ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರ್ಕಾರದ ಮೂಲಕ ಬೆದರಿಕೆ ಸಂದೇಶ ಬಂದಿದ್ದ ದೇಶಗಳ ಜೊತೆ ಮಾತುಕತೆ ನಡೆಸಿ, ತನಿಖೆಯ ಮಾಹಿತಿ ಪಡೆದುಕೊಳ್ಳಲು ತಯಾರಿ ನಡೆಸಿದೆ. ಈ ಬಾರಿ ದುಷ್ಕರ್ಮಿಗಳನ್ನ ಪತ್ತೆ ಹಚ್ಚಲು ಪೊಲೀಸರು ಶ್ರಮಹಾಕುತ್ತಿದ್ದಾರೆ. ಇದನ್ನೂ ಓದಿ: ಆನೇಕಲ್‌ನಲ್ಲಿ ತಡರಾತ್ರಿ ಗುಪ್ತಚರ ಇಲಾಖೆಯಿಂದ ದಂಪತಿ ವಿಚಾರಣೆ

    ಶುಕ್ರವಾರ ಘಟನೆ ಸಂಬಂಧ ಬೆಂಗಳೂರು ಒಂದರಲ್ಲೇ 48 ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ 48 ಎಫ್‌ಐಆರ್‌ಗಳು ದಾಖಲಾಗಿವೆ. ಎಲ್ಲವನ್ನೂ ಕ್ರೂಢೀಕರಿಸಿ ನಂತರ ಒಟ್ಟಿಗೆ ತನಿಖೆ ನಡೆಸಲಾಗುತ್ತದೆ. ಇದನ್ನೂ ಓದಿ: ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್ – ಭಾನುವಾರ ರಾತ್ರಿ 11:45ರ ವರೆಗೂ ಮೆಟ್ರೋ ವಿಸ್ತರಣೆ

  • ಮೆಟ್ರೋದಲ್ಲಿ ಟಿಕೆಟ್ ಇಲ್ಲದೇ ಗೇಟ್ ಹಾರಿ ವಿದೇಶಿ ಯೂಟ್ಯೂಬರ್‌ನಿಂದ ಹುಚ್ಚಾಟ

    ಮೆಟ್ರೋದಲ್ಲಿ ಟಿಕೆಟ್ ಇಲ್ಲದೇ ಗೇಟ್ ಹಾರಿ ವಿದೇಶಿ ಯೂಟ್ಯೂಬರ್‌ನಿಂದ ಹುಚ್ಚಾಟ

    – ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್

    ಬೆಂಗಳೂರು: ವಿದೇಶಿ ಯೂಟ್ಯೂಬರ್ (Foreign Youtuber) ಓರ್ವ ನಮ್ಮ ಮೆಟ್ರೋ (Namma  Metro) ಪ್ರಯಾಣದ ವೇಳೆ ಟಿಕೆಟ್ (Ticket) ತೆಗೆದುಕೊಳ್ಳದೆ ಗೇಟ್ ಹಾರಿ ಪ್ರಯಾಣಿಸಿದ್ದು, ಈ ಬಗ್ಗೆ ಖುದ್ದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಾನೆ.

    ಸೈಪ್ರಸ್ (Cyprus) ದೇಶದ ಫಿಡಿಯಾಸ್ ಪನಾಯೊಟೌ ಎಂಬ ಯೂಟ್ಯೂಬರ್ ಭಾರತದ ಮೆಟ್ರೋದಲ್ಲಿ ಟಿಕೆಟ್ ತೆಗೆದುಕೊಳ್ಳದೆ ಗೇಟ್ ಹಾರಿ ಪ್ರಯಾಣಿಸಿದ್ದಾನೆ. ಅಲ್ಲದೇ ಟಿಕೆಟ್ ಇಲ್ಲದೆ ಮೆಟ್ರೋದಲ್ಲಿ ಹೇಗೆ ಪ್ರಯಾಣ ಮಾಡುವುದು ಎಂಬುದನ್ನು ಹೇಳಿಕೊಡುತ್ತೇನೆ ಎಂದು ವಿಡಿಯೋ ಕೂಡಾ ಮಾಡಿದ್ದಾನೆ. ಇದನ್ನೂ ಓದಿ: ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯಾದ್ಯಂತ ಏಕಕಾಲಕ್ಕೆ ಜನತಾ ದರ್ಶನ

     

    View this post on Instagram

     

    A post shared by Fidias Panayiotou (@fidias0)

    ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿನ ಆಗಮನ ಮತ್ತು ನಿರ್ಗಮನ ಗೇಟ್‌ಗಳಲ್ಲಿ ಈತ ಟಿಕೆಟ್ ಪಡೆಯದೇ ಗೇಟ್ ದಾಟಿ ಪ್ರವೇಶ ಪಡೆದು, ಮೆಟ್ರೋ ಪ್ರಯಾಣ ಮಾಡಿ ಮತ್ತೊಂದು ನಿಲ್ದಾಣದಲ್ಲಿ ಇಳಿದು ನಿರ್ಗಮನ ಗೇಟ್‌ನಲ್ಲಿ ಮತ್ತೆ ಗೇಟ್ ದಾಟಿ ಹೊರ ಬಂದಿದ್ದಾನೆ. ಇದನ್ನು ವಿಡಿಯೋ ಮಾಡಿ ಇನ್ಸ್ಟಾಗ್ರಾಂನಲ್ಲಿ (Instagram) ಅಪ್ಲೋಡ್ ಕೂಡಾ ಮಾಡಿದ್ದಾನೆ. ಇದನ್ನೂ ಓದಿ: ಅಮೆರಿಕದಲ್ಲಿ ಮನುಷ್ಯನಿಗೆ ಹಂದಿ ಹೃದಯ ಜೋಡಣೆ

    ಸಾಮಾಜಿಕ ಜಾಲತಾಣಗಳಲ್ಲಿ ಇಂತಹದ್ದೇ ಕೆಲ ಆಟೋಟೋಪದ ಮೂಲಕ ಫಿಡಿಯಾಸ್ ಅನೇಕ ಫಾಲೋವರ್ಸ್ ಹೊಂದಿದ್ದು, ವಿದೇಶಿ ಪ್ರಜೆಯ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸದ್ಯ ಟಿಕೆಟ್ ಪಡೆಯದೇ ಅನೈತಿಕವಾಗಿ ಪ್ರಯಾಣ ಮಾಡಿರುವುದಕ್ಕೆ ಆತನ ವಿರುದ್ಧ ದೂರ ದಾಖಲಿಸಲು ನಮ್ಮ ಮೆಟ್ರೋ ನಿಗಮ ಮುಂದಾಗಿದೆ. ಇದನ್ನೂ ಓದಿ: ಕೋಟಿ ಖರ್ಚು ಮಾಡಿ ಅಯೋಧ್ಯೆ ಶೈಲಿಯ ರಾಮಮಂದಿರ ನಿರ್ಮಾಣ – ವಿಘ್ನೇಶ್ವರನಿಗೂ ವಿಶೇಷ ಮಂಟಪ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಯೋತ್ಪಾದನೆಯಿಂದ ಭಾರತ ನೊಂದಷ್ಟು ಬೇರಾವ ದೇಶವೂ ನೊಂದಿಲ್ಲ: ಜೈಶಂಕರ್

    ಭಯೋತ್ಪಾದನೆಯಿಂದ ಭಾರತ ನೊಂದಷ್ಟು ಬೇರಾವ ದೇಶವೂ ನೊಂದಿಲ್ಲ: ಜೈಶಂಕರ್

    ನವದೆಹಲಿ: ನಾವು ನಮ್ಮ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನೇ ಬಯಸುತ್ತೇವೆ. ಆದರೆ ಇದರ ಅರ್ಥ ಭಯೋತ್ಪಾದನೆಯನ್ನು (Terrorism) ಕ್ಷಮಿಸುತ್ತೇವೆ ಎಂದಲ್ಲ. ಭಯೋತ್ಪಾದನೆಯಿಂದ ಭಾರತ (India) ನೊಂದಷ್ಟು ಬೇರಾವ ದೇಶವೂ ನೊಂದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ (S Jaishankar) ಹೇಳಿಕೆ ನೀಡಿದ್ದಾರೆ.

    ಶುಕ್ರವಾರ ಜೈಶಂಕರ್ ಅವರು ಸೈಪ್ರಸ್‌ಗೆ (Cyprus) ಭೇಟಿ ನೀಡಿದ್ದು, ಅಲ್ಲಿನ ಭಾಷಣದ ವೇಳೆ ಅವರು ನೆರೆಯ ಪಾಕಿಸ್ತಾನ (Pakistan) ಹಾಗೂ ಚೀನಾ (China) ದೇಶಗಳಿಗೆ ತಿರುಗೇಟು ನಿಡಿದ್ದಾರೆ. ನಮ್ಮ ನೆರೆಯ ದೇಶಗಳೊಂದಿಗೆ ಒಳ್ಳೆಯ ಸಂಬಂಧ ಬಯಸಿದರೂ ನಮ್ಮ ಮೇಲಾಗಿರುವ ಭಯೋತ್ಪಾದನೆಯನ್ನು ನಾವು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಈ ವಿಷಯದ ಬಗ್ಗೆ ಯಾವುದೇ ರಾಜಿಯಿಲ್ಲ ಎಂದು ಒತ್ತಿ ಹೇಳಿದರು.

    ಚೀನಾದೊಂದಿಗಿನ ಗಡಿ ಸಮಸ್ಯೆಗಳ ಕುರಿತು ಮಾತನಾಡಿದ ಜೈಶಂಕರ್, ಕೋವಿಡ್ ಸಮಯದಲ್ಲಿ ಸವಾಲುಗಳು ತೀವ್ರಗೊಂಡಿವೆ. ಚೀನಾದೊಂದಿಗಿನ ನಮ್ಮ ಸಂಬಂಧಗಳು ಸಾಮಾನ್ಯವಾಗಿಲ್ಲ. ಅರುಣಾಚಲದ ತವಾಂಗ್ ಸೆಕ್ಟರ್‌ನಲ್ಲಿ ಚೀನಾ ಮತ್ತು ಭಾರತೀಯ ಸೈನಿಕರು ಘರ್ಷಣೆ ನಡೆಸಿದ ದಿನಗಳ ಬಳಿಕ ನಮ್ಮ ಗಡಿಯಲ್ಲಿ ನಮಗೆ ಸವಾಲುಗಳಿವೆ. ಅದು ಕೋವಿಡ್ ಸಮಯದಲ್ಲಿ ತೀವ್ರಗೊಂಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಾವು ಕೂಗಾಡಿದ್ರೂ ಸಹಾಯಕ್ಕೆ ಯಾರೊಬ್ಬರೂ ಬರಲಿಲ್ಲ- ಪಂತ್ ರಕ್ಷಿಸಿದ ಬಸ್ ಡ್ರೈವರ್‌ ಬಿಚ್ಚಿಟ್ಟ ಸತ್ಯ

    ಚೀನಾದೊಂದಿಗಿನ ಸಂಬಂಧಗಳು ಸಾಮಾನ್ಯವಾಗಿಲ್ಲ ಏಕೆಂದರೆ ಎಲ್‌ಎಸಿ ಪ್ರದೇಶವನ್ನು ಏಕಪಕ್ಷೀಯವಾಗಿ ಬದಲಾಯಿಸುವ ಯಾವುದೇ ಪ್ರಯತ್ನವನ್ನು ನಾವು ಒಪ್ಪುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು.

    ಭಾರತ ಹಾಗೂ ಸೈಪ್ರಸ್ ದೇಶಗಳು ರಾಜತಾಂತ್ರಿಕ ಸಂಬಂಧಗಳ 60 ನೇ ವರ್ಷವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಜೈಶಂಕರ್ ಸೈಪ್ರಸ್‌ಗೆ ಭೇಟಿ ನೀಡಿದ್ದಾರೆ. ಅವರ ಭೇಟಿಯ ಸಮಯದಲ್ಲಿ, ಸೈಪ್ರಿಯೋಟ್ ಕೌಂಟರ್ಪಾರ್ಟ್ ಕಸೌಲಿಡೆಸ್ ಅವರನ್ನು ಭೇಟಿ ಮಾಡಿದ್ದಾರೆ. ಬಳಿಕ ರಕ್ಷಣಾ ಮತ್ತು ಮಿಲಿಟರಿ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದನ್ನೂ ಓದಿ: ತಿರುಪತಿ ಗರ್ಭಗುಡಿ 8 ತಿಂಗಳು ಬಂದ್ ಇಲ್ಲ – ಮುಖ್ಯ ಅರ್ಚಕರ ಸ್ಪಷನೆ

    Live Tv
    [brid partner=56869869 player=32851 video=960834 autoplay=true]