Tag: Cylinder filling

  • ಅಡುಗೆ ಅನಿಲ ರೀಫಿಲ್ಲಿಂಗ್ ಮಾಡುತ್ತಿದ್ದ ಐವರ ಬಂಧನ!

    ಅಡುಗೆ ಅನಿಲ ರೀಫಿಲ್ಲಿಂಗ್ ಮಾಡುತ್ತಿದ್ದ ಐವರ ಬಂಧನ!

    ರಾಯಚೂರು: ಅಕ್ರಮವಾಗಿ ಅಡುಗೆ ಅನಿಲ ರೀಫಿಲ್ಲಿಂಗ್ ಮಾಡುತ್ತಿದ್ದ ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡಿ ಐವರನ್ನು ಬಂಧಿಸಿರುವ ಘಟನೆ ನಡೆದಿದೆ.

    ಜಿಲ್ಲಾ ಅಪರಾಧ ದಳದ ಪೊಲೀಸರು ನಗರದ ಎರಡು ಕಡೆ ದಾಳಿ ನಡೆಸಿ ಅಕ್ರಮ ಅಡುಗೆ ಅನಿಲ ಸಿಲಿಂಡರ್ ಗಳನ್ನು ಜಪ್ತಿ ಮಾಡಿದ್ದಾರೆ. ಅಕ್ರಮವಾಗಿ ಗ್ಯಾಸ್ ತುಂಬುತ್ತಿದ್ದ ನಾಸೀರ್, ಮೊಹಮ್ಮದ್ ಹಸನ್, ವಾಜೀದ್ ಸೇರಿ ಐವರನ್ನ ಬಂಧಿಸಲಾಗಿದೆ.

    ದಾಳಿ ವೇಳೆ 60 ಸಿಲಿಂಡರ್, 5 ರೀಫಿಲ್ಲಿಂಗ್ ಮೋಟರ್, 3 ತೂಕದ ಯಂತ್ರ ಮತ್ತು 17470 ರೂ ನಗದು ಜಪ್ತಿ ಮಾಡಲಾಗಿದೆ. ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮಾರ್ಕೆಟ್ ಯಾರ್ಡ್‍ನ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.