Tag: cylinder blast

  • ತಂದೆಯ ತಿಥಿ ಕಾರ್ಯದ ದಿನವೇ ಮಗಳ ದಾರುಣ ಸಾವು

    ತಂದೆಯ ತಿಥಿ ಕಾರ್ಯದ ದಿನವೇ ಮಗಳ ದಾರುಣ ಸಾವು

    ಬೆಂಗಳೂರು: ತಂದೆಯ ತಿಥಿ ಕಾರ್ಯಕ್ಕೆಂದು ಮಗಳು ಅಡುಗೆ ಮಾಡುವಾಗ ಸಿಲಿಂಡರ್ ಬ್ಲ್ಯಾಸ್ಟ್ ಆಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಕೆ ಎಸ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದಿದೆ.

    ಮಗಳು ಪರಮೇಶ್ವರಿ (42) ಮೃತ ಮಹಿಳೆ. ಕಾಶಿನಾಥ್‍ರ 6ನೇ ವರ್ಷದ ಪುಣ್ಯತಿಥಿ ಹಿನ್ನೆಲೆ ಕುಟುಂಬಸ್ಥರು ತಿಥಿ ಕಾರ್ಯಕ್ಕೆ ಮಾಂಸಾಹಾರ ಅಡುಗೆ ಮಾಡಲು ಸಿಲಿಂಡರ್ ತರಿಸಿದ್ದರು. ಮನೆ ಚಿಕ್ಕದಾಗಿದ್ದು ಕೋಣೆಯಲ್ಲೇ ಸ್ಟೌವ್ ಇಟ್ಟು ಅಡುಗೆ ಮಾಡಲು ತಯಾರಿ ನಡೆಸಿದ್ದರು. ಇದೇ ವೇಳೆ ಗ್ಯಾಸ್ ಸೋರಿಕೆಯಾಗಿ ಸ್ಟೌವ್ ಬೆಂಕಿಯ ತೀವ್ರತೆಗೆ ಗ್ಯಾಸ್ ಫ್ಲೇಮ್ ದೊಡ್ಡದಾಗಿ ಹೊತ್ತಿಕೊಂಡಿದೆ. ಇದನ್ನೂ ಓದಿ: ಆಫ್‍ಲೈನ್ ಕ್ಲಾಸ್‍ಗೆ ಹೋಗು ಅಂದಿದ್ದಕ್ಕೆ ಹುಡುಗಿ ಆತ್ಮಹತ್ಯೆ

    ಬೆಂಕಿಯ ತೀವ್ರತೆಯ ಪರಿಣಾಮ ಕಾಶಿನಾಥ್‍ರ ಪತ್ನಿ ಸೌಭಾಗ್ಯ (75) ದೇಹ ಹೆಚ್ಚು ಸುಟ್ಟಿದೆ. ಮಗ ಶರವಣ (43) ತಲೆ ಮತ್ತು ಕೈ ಕಾಲು, ಹೊಟ್ಟೆ ಭಾಗ ಸುಟ್ಟಿದೆ. ಸಂಬಂಧಿ ಪರಮಶಿವಂ (47) ಎರಡು ಕೈ ಕಾಲು ಸುಟ್ಟು ಹೋಗಿದೆ. ಪರಮಶಿವಂ ಪತ್ನಿ ಭುವನೇಶ್ವರಿ (40)ತಲೆ, ಎರಡು ಕೈ ಮತ್ತು ಒಂದು ಕಾಲು ಸುಟ್ಟಿದೆ. ಮತ್ತೊಬ್ಬ ಸಂಬಂಧಿ ಮಾಲಾ (60) ಕೈ , ಕತ್ತಿನ ಭಾಗ ಸುಟ್ಟಿದ್ದು, ಗಾಯಾಳುಗಳಿಗೆ ವಿಕ್ಟೋರಿಯಾ ಬರ್ನಿಂಗ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ರಾಜಧಾನಿಯಲ್ಲಿ ಮತ್ತೆ ಶುರುವಾಯ್ತು ದುಷ್ಕರ್ಮಿಗಳ ಪುಂಡಾಟ!

    ಕುಮಾರಸ್ವಾಮಿ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಕ್ರಮ ಗ್ಯಾಸ್ ರೀಫಿಲಿಂಗ್ ದಂಧೆ-  ಸರಣಿ ಸಿಲಿಂಡರ್ ಬ್ಲಾಸ್ಟ್

    ಅಕ್ರಮ ಗ್ಯಾಸ್ ರೀಫಿಲಿಂಗ್ ದಂಧೆ- ಸರಣಿ ಸಿಲಿಂಡರ್ ಬ್ಲಾಸ್ಟ್

    ಬೆಂಗಳೂರು: ಅಕ್ರಮವಾಗಿ ಗ್ಯಾಸ್ ರೀಫಿಲಿಂಗ್ ದಂಧೆ ನಡೆಸುತ್ತಿದ್ದ ಅಂಗಡಿಯಲ್ಲಿ ಏಕಕಾಲಕ್ಕೆ ಸರಣಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಘಟನೆ ಗೋವಿಂದ ರಾಜನಗರದ ಭರತ್ ಗ್ಯಾಸ್ ಏಜೆನ್ಸಿಯಲ್ಲಿ ನಡೆದಿದೆ.

    ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಇಬ್ಬರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಸ್ಥಳದಲ್ಲಿದ್ದ ವಸ್ತುಗಳು ಜಖಂಗೊಂಡಿವೆ. ಪರಿಶೀಲನೆ ವೇಳೆ ಅಕ್ರಮವಾಗಿ ಗ್ಯಾಸ್ ರೀಫಿಲಿಂಗ್ ದಂಧೆ ನಡೆಸುತ್ತಿದ್ದ ವಿಚಾರ ಬೆಳಕಿಗೆ ಬಂದಿದ್ದು. ಸ್ಫೋಟಗೊಂಡ ಬೆನ್ನಲ್ಲೇ ಗ್ಯಾಸ್ ಏಜೆನ್ಸಿ ಮಾಲೀಕ ನಾಪತ್ತೆಯಾಗಿದ್ದಾನೆ. ಇದನ್ನೂ ಓದಿ: ಅಮಲು ಪದಾರ್ಥ ಸೇವಿಸಿ ರಂಪಾಟ – ಉಡುಪಿ ಪೊಲೀಸರಿಗೆ ವಿದ್ಯಾರ್ಥಿಗಳಿಂದ ಅವಾಜ್

    ಪೊಲೀಸರು ಮತ್ತು ಅಗ್ನಿ ಶಾಮಕದಳದವರು ಬಿಲ್ಡಿಂಗ್‍ನಲ್ಲಿದ್ದ ಎಲ್ಲರನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದು ರಕ್ಷಿಸಿದ್ದಾರೆ. ಇದನ್ನೂ ಓದಿ: ಇನ್ನೊಂದು ಮದುವೆಯಾಗ್ತೀನಿ ಎಂದ ತಂದೆಯನ್ನು ಕೊಂದ ಮಗ!

  • ಸಿಲಿಂಡರ್ ಸ್ಪೋಟ – ಬೆಂಗಳೂರಿನ ಮಸೀದಿ ಕಾಂಪ್ಲೆಕ್ಸ್‌ನಲ್ಲಿ ಬೆಂಕಿ

    ಸಿಲಿಂಡರ್ ಸ್ಪೋಟ – ಬೆಂಗಳೂರಿನ ಮಸೀದಿ ಕಾಂಪ್ಲೆಕ್ಸ್‌ನಲ್ಲಿ ಬೆಂಕಿ

    ಬೆಂಗಳೂರು: ಸಿಲಿಂಡರ್ ಸ್ಪೋಟಗೊಂಡು ಬೆಂಕಿ ಆವರಿಸಿದ ಘಟನೆ ನಗರದ ನಾಗವಾರದ ಉಮರ್ ಬಿನ್ ಖತಬ್ ಮಸೀದಿ  ಕಾಂಪ್ಲೆಕ್ಸ್‌ನಲ್ಲಿ ನಡೆದಿದೆ.

    ಮಸೀದಿ ಕಾಂಪ್ಲೆಕ್ಸ್ ನಲ್ಲಿದ್ದ ಗ್ಯಾಸ್ ಸ್ಟವ್ ರಿಪೇರಿ ಮತ್ತು ಗ್ಯಾಸ್ ಮಾರಾಟ ಮಾಡುತ್ತಿದ್ದ ಅಂಗಡಿಯಲ್ಲಿ ಈ ಸಿಲಿಂಡರ್ ಸ್ಪೋಟವಾಗಿದ್ದು, ಘಟನೆಯಲ್ಲಿ ಯಾರಿಗೂ ಯಾವುದೇ ಅನಾಹುತವಾಗಿಲ್ಲ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಬೆಂಕಿ ನಂದಿಸಿದ್ದಾರೆ ಎಂದು ಈ ಬಗ್ಗೆ ಟ್ವಿಟ್ಟರ್‍ನಲ್ಲಿ ಅಗ್ನಿಶಾಮಕ ಇಲಾಖೆ ಮಾಹಿತಿ ತಿಳಿಸಿದ್ದಾರೆ. ಇದನ್ನೂ ಓದಿ: ನಮ್ಮ ಭೂಮಿ ಹೋದರೂ ಪರವಾಗಿಲ್ಲ, ಮೇಕೆದಾಟು ಯೋಜನೆ ಬೇಗ ಆರಂಭವಾಗಬೇಕು: ಡಿಕೆಶಿ

    ಶಾರ್ಟ್ ಸಕ್ರ್ಯೂಟ್ ನಿಂದ ಈ ಸಿಲಿಂಡರ್ ಸ್ಪೋಟಗೊಂಡಿದ್ದು, ಮಸೀದಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ. ಘಟನೆಯಲ್ಲಿ ಮಾಲೀಕರಿಗೆ ಹಾಗೂ ಕೆಲಸದ ಸಿಬ್ಬಂದಿಗೆ ಸಣ್ಣ ಮಟ್ಟದ ಗಾಯಗಳಾಗಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದ್ದು, ಬೆಳಿಗ್ಗೆ 11:30 ರ ಸುಮಾರಿಗೆ ಸ್ಪೋಟ ವಾಗಿದೆ ಎಂದು ಸ್ಥಳೀಯ ನಿವಾಸಿ ರಹಮತುಲ್ಲಾ ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ ಮುಂದೂಡಿ, ರ‍್ಯಾಲಿ-ಸಮಾರಂಭ ನಿಲ್ಲಿಸಿ: ಚುನಾವಣಾ ಆಯೋಗ, ಕೇಂದ್ರಕ್ಕೆ ಕೋರ್ಟ್‌ ಒತ್ತಾಯ

  • ಪತ್ನಿ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಕೊಂದಿದ್ದ ಪಾಪಿ ಪತಿ ಕೊನೆಗೆ ಶವವಾಗಿ ಪತ್ತೆ

    ಪತ್ನಿ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಕೊಂದಿದ್ದ ಪಾಪಿ ಪತಿ ಕೊನೆಗೆ ಶವವಾಗಿ ಪತ್ತೆ

    ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಕ್ರೂರವಾಗಿ ಹತ್ಯೆಗೈದಿದ್ದವನನ್ನು ಪೊಲೀಸರು ಬಂಧಿಸುವಷ್ಟರಲ್ಲಿ ಆರೋಪಿ ಶವವಾಗಿ ಪತ್ತೆಯಾಗಿರುವ ಪ್ರಕರಣ ಬೆಂಗಳೂರಿನ ರಾಜೇಂದ್ರನಗರದಲ್ಲಿ ಬೆಳಕಿಗೆ ಬಂದಿದೆ.

    ಮೃತ ದುರ್ದೈವಿಯನ್ನು ಆಯೇಶಾ ಎಂದು ಗುರುತಿಸಲಾಗಿದ್ದು, ನವೆಂಬರ್ 19ರಂದು ಪತ್ನಿಯ ಶೀಲ ಶಂಕಿಸಿ ಆರೋಪಿ ನಿಸಾರ್ ಪೆಟ್ರೋಲ್ ಸುರಿದು ಕೊಲೆ ಮಾಡಿದ್ದಾನೆ. ಪತ್ನಿಗೆ ಬೆಂಕಿ ಹಚ್ಚಿದ್ದರಿಂದ ಮನೆಯಲ್ಲಿದ್ದ ಸಿಲಿಂಡರ್ ಇದೇ ವೇಳೆ ಬ್ಲಾಸ್ಟ್ ಆಗಿದೆ. ಸಿಲಿಂಡರ್ ಬ್ಲಾಸ್ಟ್‌ನಿಂದಾಗಿ ನಿಸಾರ್ ಕೈ ಹಾಗೂ ಮೈ ಭಾಗಕ್ಕೆ ಗಾಯವಾಗಿದ್ದು, ಆಯೇಶಾ ಮೃತಪಟ್ಟಿದ್ದಾರೆ. ಇದೇ ವೇಳೆ ಆರೋಪಿ ನಿಸಾರ್ ಮನೆಯಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ನಡು ರಸ್ತೆಯಲ್ಲೇ ಶಿಶುವಿನ ತಲೆ ಕಂಡು ಭಯಭೀತರಾದ ಜನ

    ಈ ಘಟನೆ ಬಳಿಕ ಪೊಲೀಸರು ನಿಸಾರ್‌ಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಆದರೆ ನಿಸಾರ್ ಬಸ್ ಹತ್ತಿ ಆಂಧ್ರಪ್ರದೇಶಕ್ಕೆ ತೆರಳಿ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದನು. ಮೈ, ಕೈ ನೋವಿದ್ದರೂ ಆಸ್ಪತ್ರೆಗೆ ಹೋಗದ ನಿಸಾರ್ ಕೊನೆಗೆ ನೋವು ತೀವ್ರಗೊಂಡಾಗ ಮಗನಿಗೆ ಕರೆ ಮಾಡಿದ್ದಾರೆ. ಇದೇ ವೇಳೆ ಆರೋಪಿಯ ಲೊಕೇಶನ್ ಟ್ರೇಸ್ ಮಾಡಿದ ಪೊಲೀಸರಿಗೆ ನಿಸಾರ್ ಮದನಪಲ್ಲಿಯಲ್ಲಿರುವ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: ಸಂಬಂಧಿಕರ ಮನೆಗೆ ಹೋಗಿ ವಾಪಸ್‌ ಬರ್ತಿದ್ದವ ಸೇರಿದ್ದು ಮಸಣ

    ನಂತರ ಆರೋಪಿಯನ್ನು ಬಂಧಿಸಲು ಆಡುಗೋಡಿ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ನಿಸಾರ್ ಶವವಾಗಿ ಪತ್ತೆಯಾಗಿದ್ದಾನೆ. ಮರಣೋತ್ತರ ಪರೀಕ್ಷೆ ವೇಳೆ ಎರಡು ದಿನಗಳ ಹಿಂದೆ ನಿಸಾರ್ ಸಾವನ್ನಪ್ಪಿದ್ದಾಗಿ ವರದಿಯಾಗಿದೆ. ಇದೀಗ ಪೊಲೀಸರು ಯಾರನ್ನು ತನಿಖೆ ಮಾಡಬೇಕೆಂದು ಗೊಂದಲದಲ್ಲಿದ್ದಾರೆ.

  • ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟ – 7 ಮಂದಿಗೆ ಗಾಯ

    ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟ – 7 ಮಂದಿಗೆ ಗಾಯ

    ಬೆಂಗಳೂರು/ಆನೇಕಲ್: ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು 7 ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ನಡೆದಿದೆ.

    cylinder-blast

    ಜಿಗಣಿ ಪೊಲೀಸ್ ಠಾಣೆ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ಮಂಜುನಾಥ್ ರೆಡ್ಡಿ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ಬಾಡಿಗೆಗೆ ಇದ್ದ ಉತ್ತರ ಭಾರತ ಮೂಲದ ಏಳು ಕಾರ್ಮಿಕರು ಗಾಯಗೊಂಡಿದ್ದಾರೆ.  ಇದನ್ನೂ ಓದಿ: ನಟಿ ಆಥಿಯಾ ಶೆಟ್ಟಿ ಜೊತೆಗಿನ ಡೇಟಿಂಗ್ ಗಾಸಿಪ್‌ಗೆ ಬ್ರೇಕ್ ಹಾಕಿದ ರಾಹುಲ್

    ಬೆಳಿಗ್ಗೆ 8 ಗಂಟೆ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡು, ಮನೆ ಬೆಂಕಿಯಿಂದ ಹೊತ್ತಿ ಉರಿದಿದೆ. ಘಟನೆಯಲ್ಲಿ ಕಾರ್ಮಿಕರಾದ ಜಗದೀಶ್ ಶಾಂತಿಬೈ, ಪ್ರಕಾಶ್, ಕಾಡು, ಜೈಮುಲ್, ಮಂಜು, ವಲ್ಲಿ ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ಇದೀಗ ಅವರನ್ನು ಜಿಗಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.  ಇದನ್ನೂ ಓದಿ: ಅಪ್ಪು ಜೊತೆಗಿನ ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಿರುವ ಶಿವಣ್ಣ, ರಾಘಣ್ಣ

     

  • ಸಿಲಿಂಡರ್ ಸ್ಫೋಟ – ಕೂಲಿಕಾರ್ಮಿಕರ 6 ಜೋಪಡಿ ಮನೆ ಭಸ್ಮ!

    ಸಿಲಿಂಡರ್ ಸ್ಫೋಟ – ಕೂಲಿಕಾರ್ಮಿಕರ 6 ಜೋಪಡಿ ಮನೆ ಭಸ್ಮ!

    ಬಾಗಲಕೋಟೆ: ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕೂಲಿಕಾರ್ಮಿಕರ ಆರು ಜೋಪಡಿ ಮನೆಗಳು ಭಸ್ಮವಾದ ಘಟನೆ ಜಿಲ್ಲೆಯ ಇಳಕಲ್ ನಗರದಲ್ಲಿ ನಡೆದಿದೆ.

    ಇಳಕಲ್ ನಗರದ ಪೊಲೀಸ್ ಕ್ವಾಟರ್ಸ್ ಹತ್ತಿರದ ಶರಗುರು ಬಾಷಾ ಕೊಳಚೆ ಪ್ರದೇಶದಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಶಾಂತಮ್ಮ ಅವಾರಿ ಎನ್ನುವವರ ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಈ ವೇಳೆ ಅಕ್ಕಪಕ್ಕದಲ್ಲಿದ್ದ ಜೋಪಡಿ ಮನೆಗಳಿಗೂ ಬೆಂಕಿ ತಗುಲಿದ್ದು, ಮೀನಾಕ್ಷಿ ಶೀಲವೇರಿ, ಆನಂದ ರೊಡ್ಡನ್ನವರ, ಬಸವರಾಜ ನೀಲಿ, ಲಕ್ಷ್ಮೀ ಭಗವತಿ, ಅಮೀನಸಾಬ ಗುಣಸಿ ಎನ್ನುವ ಬಡಕೂಲಿಕಾರ್ಮಿಕರ ಜೋಪಡಿಗಳು ಸುಟ್ಟು ಭಸ್ಮವಾಗಿದೆ.

    ಅದೃಷ್ಟವಶಾತ್ ಸಿಲಿಂಡರ್ ಸ್ಪೋಟಗೊಂಡ ಸಮಯದಲ್ಲಿ ಜೋಪಡಿಗಳಲ್ಲಿ ಯಾರು ಇರದ ಕಾರಣ ಯಾವುದೇ ಜೀವಹಾನಿ ಆಗಿಲ್ಲ. ಆದ್ರೆ ಈ ಮನೆಗಳಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ.

    ಇಳಕಲ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುಂಜಾನೆ ಸಿಲಿಂಡರ್ ಸ್ಫೋಟಗೊಂಡು ಹೊತ್ತಿ ಉರಿದ ಮನೆ!

    ಮುಂಜಾನೆ ಸಿಲಿಂಡರ್ ಸ್ಫೋಟಗೊಂಡು ಹೊತ್ತಿ ಉರಿದ ಮನೆ!

    ಮಂಡ್ಯ: ಬೆಳ್ಳಂಬೆಳಗ್ಗೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯೊಂದು ಹೊತ್ತಿ ಉರಿದ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದ ರಂಗನಾಥ ಬಡಾವಣೆಯಲ್ಲಿ ಇಂದು ನಡೆದಿದೆ.

    ಇಂದು ಮುಂಜಾನೆ ರಂಗನಾಥ ಬಡಾವನೆಯ ನಿವಾಸಿ ಅರ್ಜುನ್ ಕುಮಾರ್ ಎಂಬವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ವೃತ್ತಿಯಲ್ಲಿ ಅರ್ಜುನ್ ಅವರು ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಂಜಾನೆ ಸುಮಾರು 4 ಗಂಟೆ ಹೊತ್ತಿಗೆ ಮನೆಯಲ್ಲಿ ಎಲ್ಲರೂ ಮಲಗಿದ್ದ ಸಮಯದಲ್ಲಿ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ.

    ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದ್ರೆ ಮನೆಯಲ್ಲಿದ್ದ ಕೆಲವು ವಸ್ತುಗಳು ಬೆಂಕಿಗಾಹುತಿಯಾಗಿದೆ. ಅಲ್ಲದೆ ಸಿಲಿಂಡರ್ ಇಟ್ಟಿದ್ದ ಸ್ಥಳ ಸಂಪೂರ್ಣ ಸುಟ್ಟು ಹೋಗಿದ್ದು, ಅಡುಗೆ ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲಾಗಿದೆ. ಸಿಲಿಂಡರ್ ಸ್ಫೋಟಗೊಂಡ ಶಬ್ಧ ಕೇಳುತ್ತಿದ್ದಂತೆಯೇ ಮನೆಮಂದಿಯೆಲ್ಲ ಹೊರಗೆ ಓಡಿಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಅಗ್ನಿ ಶಮನ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸದ್ಯ ಘಟನೆ ಕುರಿತು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸಿಲಿಂಡರ್ ಸ್ಫೋಟ – ಸುಟ್ಟು ಕರಕಲಾಯ್ತು ಸಾಮಾಗ್ರಿಗಳು

    ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸಿಲಿಂಡರ್ ಸ್ಫೋಟ – ಸುಟ್ಟು ಕರಕಲಾಯ್ತು ಸಾಮಾಗ್ರಿಗಳು

    ದಾವಣಗೆರೆ: ಮದುವೆ ಸಂಭ್ರಮದಲ್ಲಿದ್ದ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಪರಿಣಾಮ ಸಾಮಾಗ್ರಿಗಳು ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ರಸ್ತೆಮಾಚಿಕೆರೆ ಗ್ರಾಮದಲ್ಲಿ ನಡೆದಿದೆ.

    ಷಡಕ್ಷರಪ್ಪ ಎಂಬುವವರ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಅಡುಗೆ ಮಾಡಲು ಒಲೆ ಹೊತ್ತಿಸುವಾಗ ಈ ಘಟನೆ ಸಂಭವಿಸಿದ್ದು ಲಕ್ಷಾಂತರ ರೂ. ಮೌಲ್ಯದ ಸಾಮಾಗ್ರಿಗಳು ಸುಟ್ಟು ಭಸ್ಮವಾಗಿದೆ. ಸಿಲಿಂಡರ್ ಸ್ಫೋಟದಿಂದ ಯಾವುದೇ ಪ್ರಾಣಹಾನಿ ಆಗಿಲ್ಲ.

    ಇನ್ನೆರಡು ದಿನಗಳಲ್ಲಿ ಷಡಕ್ಷರಪ್ಪ ಅವರ ಮನೆಯಲ್ಲಿ ಮದುವೆ ಸಮಾರಂಭವಿತ್ತು. ಆದ್ದರಿಂದ ಮನೆಯಲ್ಲಿ ಮದುವೆ ಬೇಕಾದ ಸಾಮಾಗ್ರಿಗಳನ್ನು ತಂದಿಡಲಾಗಿತ್ತು. ದುರದೃಷ್ಟವೆನ್ನುವಂತೆ ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮದುವೆ ಸಾಮಾಗ್ರಿಗಳೆಲ್ಲ ಬೆಂಕಿಗಾಹುತಿಯಾಗಿದೆ.

    ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಿಯಂತ್ರಣ ಮಾಡಿದ್ದಾರೆ. ಅಲ್ಲದೆ ಘಟನೆ ಕುರಿತು ಜಗಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಿಂದ ಯಾವುದೇ ಪ್ರಾಣ ಹಾನಿಯಾಗದಿದ್ದರೂ ಮದುವೆ ಸಂಭ್ರಮದಲ್ಲಿದ್ದ ಮನೆಮಂದಿ ಮುಂದೇನು ಮಾಡುವುದು ಎನ್ನುವ ಚಿಂತೆಯಲ್ಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಡುಗೆ ಮಾಡುವಾಗ್ಲೇ ಸಿಲಿಂಡರ್ ಸ್ಫೋಟ- ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ

    ಅಡುಗೆ ಮಾಡುವಾಗ್ಲೇ ಸಿಲಿಂಡರ್ ಸ್ಫೋಟ- ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ

    ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಹೊಸಕನ್ನಂಬಾಡಿ ಗ್ರಾಮದ ಮನೆಯೊಂದರಲ್ಲಿ ಅಡುಗೆ ಮಾಡುವ ಸಂದರ್ಭದಲ್ಲೇ ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ನಡೆದಿದೆ.

    ಹೊಸಕನ್ನಂಬಾಡಿ ಗ್ರಾಮದ ಸೋಮಚಾರಿ ಎಂಬವರ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಮನೆಯಲ್ಲಿ ಅಡುಗೆ ಮಾಡುವ ವೇಳೆ ಆಕಸ್ಮಿಕವಾಗಿ ಸಿಲಿಂಡರ್ ಸ್ಪೋಟಗೊಂಡಿದೆ ಎಂದು ಶಂಕಿಸಲಾಗಿದೆ. ಅಲ್ಲದೆ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮನೆಯಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗಾಹುತಿಯಾಗಿ, ಮನೆ ಸಂಪೂರ್ಣ ಸುಟ್ಟುಹೋಗಿದೆ.

    ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ. ಸ್ಫೋಟದಿಂದ ಲಕ್ಷಾಂತರ ರೂ. ಬೆಳೆಬಾಳುವ ವಸ್ತುಗಳು ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಅನಿಲ ಸೋರಿಕೆ ತಡೆಗಟ್ಟಲು ಹೋದ ವೇಳೆ ಸಿಲಿಂಡರ್ ಸ್ಫೋಟ!

    ಅನಿಲ ಸೋರಿಕೆ ತಡೆಗಟ್ಟಲು ಹೋದ ವೇಳೆ ಸಿಲಿಂಡರ್ ಸ್ಫೋಟ!

    ಚಾಮರಾಜನಗರ: ಗ್ಯಾಸ್ ಏಜೆನ್ಸಿ ಸಿಬ್ಬಂದಿ ಅಡುಗೆ ಅನಿಲ ಸೋರಿಕೆ ತಡೆಗಟ್ಟಲು ಹೋದ ವೇಳೆ ಸಿಲಿಂಡರ್ ಸ್ಫೋಟಗೊಂಡು ಮನೆ ಆಹುತಿಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ಜರುಗಿದೆ.

    ಗ್ರಾಮದ ನಾಗರಾಜು ಮನೆಯಲ್ಲಿ ಗ್ಯಾಸ್ ಸೋರಿಕೆ ಆಗುತ್ತಿದ್ದ ಹಿನ್ನೆಲೆಯಲ್ಲಿ, ನಾಗರಾಜು ಗ್ಯಾಸ್ ಏಜೆನ್ಸಿಗೆ ಫೋನ್ ಮೂಲಕ ವಿಷಯ ತಿಳಿಸಿದ್ದಾರೆ. ನಂತರ ಮನೆಗೆ ಬಂದ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಸಿಲಿಂಡರ್ ನ ಸೋರಿಕೆ ತಡೆಗಟ್ಟುವಲ್ಲಿ ಮುಂದಾಗಿದ್ದಾನೆ. ಈ ವೇಳೆ ಇದ್ದಕ್ಕಿದ್ದ ಹಾಗೆ ಗ್ಯಾಸ್ ಸ್ಫೋಟಗೊಂಡಿದೆ.

    ಅದೃಷ್ಟವಶಾತ್ ಗ್ಯಾಸ್ ಏಜೆನ್ಸಿ ಸಿಬ್ಬಂದಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಾಮಾರಾಜನಗರ ಗ್ರಾಮಾಂತರ ಆಸ್ಪತ್ರೆಯಲಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಲಿಂಡರ್ ಸ್ಫೋಟಗೊಂಡ ಕಾರಣ ಮನೆಯಲ್ಲಿದ್ದ ಅನೇಕ ವಸ್ತಗಳು ಸುಟ್ಟು ಕರಕಲಾಗಿವೆ.

    ಈ ಬಗ್ಗೆ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv