ಯಾದಗಿರಿ: ಸಿಲಿಂಡರ್ ಬ್ಲಾಸ್ಟ್ (Cylinder Blast) ಆಗಿ ಗುಡಿಸಲು ಬೆಂಕಿಗಾಹುತಿಯಾದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯ ಸಾಯಿನಗರದಲ್ಲಿ ನಡೆದಿದೆ.
ಈ ಗುಡಿಸಲು ಆಂಧ್ರಮೂಲದ ಟಿ ಮಧು ಅವರಿಗೆ ಸೇರಿದ್ದಾಗಿದೆ. ಮಧು ಕುಟುಂಬಸ್ಥರು ಸ್ನಾನ ಮಾಡಲು ನೀರು ಕಾಯಿಸಲು ಇಟ್ಟು ಮನೆಯಿಂದ ಹೊರಗೆ ಇದ್ದರು. ಈ ವೇಳೆ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಬೆಂಕಿಯ ಕೆನ್ನಾಲಿಗೆಗೆ ಗುಡಿಸಲು ಹೊತ್ತಿ ಉರಿದಿದ್ದು, ಗುಡಿಸಲು ಪಕ್ಕದಲ್ಲಿದ್ದ ಓರ್ವ ವ್ಯಕ್ತಿಗೆ ಗಾಯಗಳಾಗಿವೆ.
2 ಲಕ್ಷ ರೂಪಾಯಿ ಹಣ, ವಾಷಿಂಗ್ ಮಷೀನ್, ಟಿವಿ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿದೆ. ಭಾನುವಾರ ಮಗಳನ್ನ ಗಂಗಾವತಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಆಪರೇಷನ್ ಮಾಡಸಬೇಕಿತ್ತು. ಆದರೆ ಮಗಳ ಚಿಕಿತ್ಸೆಗಾಗಿ ತಂದಿಟ್ಟಿದ್ದ ಹಣವೂ ಸುಟ್ಟು ಭಸ್ಮವಾಗಿದೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರ ದುರ್ಮರಣ
ಸ್ಥಳಕ್ಕೆ ಬಂದ ಅಗ್ನಿಶಾಮಕದಳದಿಂದ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಈ ಘಟನೆ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಂಡೀಗಢ: ಪಾಣಿಪತ್‌ನ (Panipat) ತಹಸಿಲ್ ಕ್ಯಾಂಪ್ ಪ್ರದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ (Cylinder Blast) ಸ್ಫೋಟಿಸಿ 4 ಮಕ್ಕಳು ಸೇರಿ ಒಂದೇ ಕುಟುಂಬದ ಆರು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮೃತರನ್ನು ಅಬ್ದುಲ್ ಕರೀಂ (48), ಅವರ ಪತ್ನಿ ಅಫ್ರೋಜ್ (45), ಅವರ ಪುತ್ರಿಯರಾದ ಇಶ್ರತ್ (18), ರೇಷ್ಮಾ (16) ಮತ್ತು ಅಫ್ಸಾನಾ (8) ಮತ್ತು ಮಗ ಅಬ್ದುಶ್ ಶಕುರ್ (12) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ರಜಾ ದಿನಗಳಲ್ಲಿ ಸಹೋದ್ಯೋಗಿಗೆ ತೊಂದರೆ ನೀಡಿದ್ರೆ 1 ಲಕ್ಷ ದಂಡ..!
ಕರೀಂ ಅವರು ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರಾಗಿದ್ದರು. ಅವರ ಕುಟುಂಬದೊಂದಿಗೆ ಒಂದು ಕೊಠಡಿಯ ಬಾಡಿಗೆ ವಸತಿಗೃಹದಲ್ಲಿ ವಾಸಿಸುತ್ತಿದ್ದರು. ಪ್ರಕರಣ ಕುರಿತು ಪಾಣಿಪತ್ ಪೊಲೀಸ್ ಅಧೀಕ್ಷಕ ಶಶಾಂಕ್ ಕುಮಾರ್ ಸಾವನ್ ಮಾತನಾಡಿ, ಬೆಳಗ್ಗೆ 6:30 ರ ಸಮಯದಲ್ಲಿ ಅಡುಗೆ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ವಿಷಯ ತಿಳಿದು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸುವಷ್ಟರಲ್ಲಿ, ಸಿಲಿಂಡರ್ ಸ್ಫೋಟಿಸಿದ್ದ ಕೊಠಡಿ ಸುಟ್ಟುಹೋಗಿತ್ತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪಶ್ಚಿಮ ಬಂಗಾಳದಲ್ಲಿರುವ ಕರೀಂ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ನಾಯಿ ಬೊಗಳುವ ವಿಚಾರಕ್ಕೆ ಜಗಳ- ಮಹಿಳೆ ಸಾವು, ಐವರಿಗೆ ಗಾಯ
Live Tv
[brid partner=56869869 player=32851 video=960834 autoplay=true]
ಜೈಪುರ: ಮದುವೆ ಮನೆಯಲ್ಲಿ (Marriage House) ಸಂಭ್ರಮದ ವಾತಾವರಣದಿಂದ ಕೂಡಿರುವಾಗಲೇ ದುರ್ಘಟನೆಯೊಂದು ನಡೆದು, ನಾಲ್ವರು ಅತಿಥಿಗಳು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ (Rajasthan) ಜೋಧ್‌ಪುರ ಬಳಿ ಗುರುವಾರ ನಡೆದಿದೆ.
ಜೋಧ್‌ಪುರದಿಂದ 60 ಕಿ.ಮೀ ದೂರದಲ್ಲಿರುವ ಭುಂಗ್ರಾ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ವರನ ಮನೆಯಿಂದ ಮದುವೆ ಮಂಟಪದೆಡೆಗೆ ಮೆರವಣಿಗೆ ಹೊರಡಬೇಕಿದ್ದ ಸ್ವಲ್ಪ ಹೊತ್ತಿಗೂ ಮೊದಲೇ ಸಿಲಿಂಡರ್ ಸ್ಫೋಟಗೊಂಡು (Cylinder Blast) ನಾಲ್ವರು ಅತಿಥಿಗಳು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸುಮಾರು 60 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಬುರ್ಕಾ ಧರಿಸಿ ಐಟಂ ಸಾಂಗ್‌ಗೆ ಸ್ಟೆಪ್ – ನಾಲ್ವರು ಮುಸ್ಲಿಂ ವಿದ್ಯಾರ್ಥಿನಿಯರು ಅಮಾನತು
Rajasthan: 4 killed, over 60 wedding guests injured in gas cylinder explosion in Jodhpur
ಮೂಲಗಳ ಪ್ರಕಾರ ಮದುವೆ ಊಟವನ್ನು ಸಿದ್ಧಪಡಿಸಲು ಇಟ್ಟಿದ್ದ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಮದುವೆ ಮನೆಯ ಒಂದು ಭಾಗ ಕುಸಿದು ಬಿದ್ದಿದೆ. ಘಟನೆಯಲ್ಲಿ 12 ಜನರ ಸ್ಥಿತಿ ಗಂಭೀರವಾಗಿದೆ.
ಹುಬ್ಬಳ್ಳಿ: ಧಾರವಾಡ (ಜಿಲ್ಲೆಯ ಹುಬ್ಬಳ್ಳಿ (Hubballi) ತಾಲೂಕಿನಲ್ಲಿ 2 ಪ್ರತ್ಯೇಕ ಪ್ರಕರಣದಲ್ಲಿ ಸಿಲಿಂಡರ್ ಸ್ಫೋಟಗೊಂಡ (Cylinder blast) ಪರಿಣಾಮ ಹಲವು ಮನೆಗಳು ಸುಟ್ಟು ಕರಕಲಾಗಿ ಲಕ್ಷಾಂತರ ಮೌಲ್ಯದ ಆಸ್ತಿ ಪಾಸ್ತಿ ನಷ್ಟವಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯ ಪ್ರಮಾಣ ಹೆಚ್ಚಾಗಿ ಸಿಲಿಂಡರ್‌ಗೆ ತಗುಲಿದ ಹಿನ್ನೆಲೆ ಸ್ಫೋಟ ಸಂಭವಿಸಿದೆ. ಇದರಿಂದ 5 ಮನೆಗಳು ಅಗ್ನಿಗೆ ಆಹುತಿಯಾದ ಘಟನೆ ಹುಬ್ಬಳ್ಳಿ ತಾಲೂಕಿನ ಮಂಟೂರ ಗ್ರಾಮದಲ್ಲಿ ನಡೆದಿದೆ.
ಮಲ್ಲೇಶಪ್ಪ, ಖಾಸಿಂ ಸಾಬ್, ದವಲ್ ಸಾಬ್, ಅಶೋಕಪ್ಪ ಹಾಗೂ ರಮೇಶಪ್ಪ ಅವರಿಗೆ ಸೇರಿದ ಮನೆಗಳಿಗೆ ಬೆಂಕಿ ತಗುಲಿದ್ದು, ಇದರಲ್ಲಿ ಖಾಸಿಮ್ ಸಾಬ್ ಮತ್ತು ದವಲ್ ಸಾಬ್ ಅವರ ಮನೆಗಳು ಸಂಪೂರ್ಣ ಬೆಂಕಿಗಾಹುತಿಯಾಗಿ ಮನೆಯಲ್ಲಿದ್ದ ಲಕ್ಷಾಂತರ ರೂ. ಹಣ ಅಗ್ನಿಗಾಹುತಿಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಶವ ಅಂತ ಹೇಳ್ಬೇಡಿ ಚಂದ್ರು ಅಂತ ಕರೆಯಿರಿ- ಗೋಳಾಡಿದ ರೇಣುಕಾಚಾರ್ಯ
ಇನ್ನೊಂದೆಡೆ ಹುಬ್ಬಳ್ಳಿ ತಾಲೂಕಿನ ಕರಡಿಕೊಪ್ಪ ಗ್ರಾಮದಲ್ಲಿ ಮಾಬೂಸಾಬ್ ಅಲ್ಲಿ ಸಾಬ ಸಂಶಿ ಅವರ ಮನೆಯಲ್ಲಿನ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ, ಮನೆಗೆ ಬೆಂಕಿ ಹತ್ತಿಕೊಂಡಿದೆ. ಮನೆಯಲ್ಲಿದ್ದ ದಿನಬಳಕೆ ವಸ್ತುಗಳು ಬೆಂಕಿಗಾಹುತಿಯಾಗಿವೆ. ಸಿಲಿಂಡರ್ ಸ್ಫೋಟಗೊಳ್ಳುತ್ತಲೇ ಮನೆಯವರು ಹೊರಗೆ ಬಂದು ಜೀವ ಉಳಿಸಿಕೊಂಡಿದ್ದಾರೆ. ಈ ಎರಡೂ ಪ್ರಕರಣದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದನ್ನೂ ಓದಿ: 5 ದಿನಗಳ ಬಳಿಕ ರೇಣುಕಾಚಾರ್ಯ ಸಹೋದರನ ಪುತ್ರನ ಶವ ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ ಪತ್ತೆ
Live Tv
[brid partner=56869869 player=32851 video=960834 autoplay=true]
ಚೆನ್ನೈ: ಕೊಯಮತ್ತೂರಿನಲ್ಲಿ (Coimbatore) ಕಾರಿನಲ್ಲಿದ್ದ ಎಲ್‌ಪಿಜಿ ಸಿಲಿಂಡರ್ ಸ್ಫೋಟದಿಂದಾಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ. ಈ ಪ್ರಕರಣವನ್ನು ಪೊಲೀಸರು ಆತ್ಮಹತ್ಯಾ ದಾಳಿ (Suicide Attack) ಎಂದು ಒಪ್ಪಿಕೊಳ್ಳಬೇಕು. ಪ್ರಕರಣವನ್ನು ಎನ್‌ಐಎ (NIA) ತನಿಖೆಗೆ ವಹಿಸಬೇಕು ಎಂದು ತಮಿಳುನಾಡು ಭಾರತೀಯ ಜನತಾ ಪಾರ್ಟಿ (BJP) ಮುಖ್ಯಸ್ಥ ಅಣ್ಣಾಮಲೈ (Annamalai) ಒತ್ತಾಯಿಸಿದ್ದಾರೆ.
ಸಿಲಿಂಡರ್ ಸ್ಫೋಟದಲ್ಲಿ (Cylinder Blast) ಸಾವನ್ನಪ್ಪಿದ ಜಮೇಶಾ ಮುಬಿನ್ ಅಕ್ಟೋಬರ್ 21 ರಂದು ಐಸಿಸ್‌ನಂತೆಯೇ ವಾಟ್ಸಪ್ ಸ್ಟೇಟಸ್ ಅನ್ನು ಪೋಸ್ಟ್ ಮಾಡಿದ್ದ. ಘಟನೆಯ ಬಳಿಕ ಆತನ ಮನೆಯಲ್ಲಿ ಸ್ಫೋಟಕ ವಸ್ತುಗಳೂ ಪತ್ತೆಯಾಗಿದ್ದವು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಆದರೆ ಏಕೆ ಬಂಧಿಸಿದ್ದಾರೆ ಎಂಬ ಮಾಹಿತಿಯನ್ನು ನೀಡಿಲ್ಲ. ಈ ಸ್ಫೋಟದ ಬಗ್ಗೆ ತಮಿಳುನಾಡು ಬಿಜೆಪಿ ಪರವಾಗಿ ನಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೇವೆ. ಈ ಘಟನೆಯನ್ನು ಪೊಲೀಸರು ಆತ್ಮಹತ್ಯಾ ದಾಳಿ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದಿದ್ದಾರೆ. ಇದನ್ನೂ ಓದಿ: ಮೌಢ್ಯಕ್ಕೆ ಸೆಡ್ಡು – ಗ್ರಹಣ ವೇಳೆ ಬಾಳೆಹಣ್ಣು, ಚುರುಮುರಿ ಸೇವಿಸಿದ ಜನ
ವರದಿಗಳ ಪ್ರಕಾರ ಜಮೇಶಾ ಮುಬಿನ್‌ನ ಮನೆಯಿಂದ ಕೆಲವರು ಭಾರವಾದ ಚೀಲವನ್ನು ಹೊತ್ತುಕೊಂಡು ಹೊರಗಡೆ ಹೋಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ಐವರನ್ನು ಬಂಧಿಸಿದ್ದಾರೆ.
ಭಾನುವಾರ ಕೊಯಮತ್ತೂರಿನಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸುವುದಕ್ಕೂ ಮೊದಲು ಜಮೇಶಾ ಮುಬಿನ್ ಕಾರನ್ನು ಚಲಾಯಿಸುತ್ತಿದ್ದ. ಆತ ಚೆಕ್ ಪಾಯಿಂಟ್ ಅನ್ನು ಕೂಡಾ ತಪ್ಪಿಸಲು ಪ್ರಯತ್ನಿಸಿದ್ದಾನೆ ಎಂಬುದು ತಿಳಿದುಬಂದಿದೆ. ಆತನ ಗುರಿ ಏನಾಗಿತ್ತು ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 80 ವರ್ಷ ಆದ್ಮೇಲೆ ಖರ್ಗೆ ಅವರನ್ನ ಡ್ರೈವರ್ ಸೀಟಲ್ಲಿ ಕೂರಿಸಿದ್ದಾರೆ: ಅಶೋಕ್ ಲೇವಡಿ
Live Tv
[brid partner=56869869 player=32851 video=960834 autoplay=true]
ಚೆನ್ನೈ: ಭಾನುವಾರ ತಮಿಳುನಾಡಿನ (Tamilnadu) ಕೊಯಮತ್ತೂರಿನಲ್ಲಿ (Coimbatore) ಕಾರಿನ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು (Cylinder Blast) 25 ವರ್ಷದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ನಡೆದಿತ್ತು. ಆದರೆ ಈ ಘಟನೆ ಇದೀಗ ಭಯೋತ್ಪಾದನೆಯ (Terrorism) ತಿರುವು ಪಡೆದುಕೊಂಡಿದೆ.
ನಿನ್ನೆ ಕೊಯಮತ್ತೂರಿನ ದೇವಾಲಯವೊಂದರ ಬಳಿ ಕಾರಿನ ಸಿಲಿಂಡರ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿ ಜೆಮಿಶಾ ಮುಬೀನ್ ಅವರ ಮನೆಯಲ್ಲಿ ಇದೀಗ ಪೊಲೀಸರು ಅಪಾರ ಪ್ರಮಾಣದ ಸ್ಫೋಟಕಗಳನ್ನು ಪತ್ತೆ ಹಚ್ಚಿದ್ದಾರೆ.
2019ರಲ್ಲಿ ಶ್ರೀಲಂಕಾದ ಈಸ್ಟರ್ ಸಂಡೇ ಸ್ಫೋಟದ ಮಾಸ್ಟರ್ ಮೈಂಡ್ ಜಹ್ರಾನ್ ಹಾಶಿಮ್‌ಗೆ ಸಂಬಂಧಿಸಿದ ಜಾಲದೊಂದಿಗೆ ಜೆಮಿಶಾ ಮುಬೀನ್ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಆತನನ್ನು ಅಧಿಕಾರಿಗಳು ಈ ಹಿಂದೆ ವಿಚಾರಿಸಿದ್ದರು. ಇದೀಗ ಅದೇ ವ್ಯಕ್ತಿ ಸಿಲಿಂಡರ್ ಸ್ಫೋಟದಿಂದ ಸಾವನ್ನಪ್ಪಿದ್ದು, ಈ ಬಗ್ಗೆ ಭಯೋತ್ಪಾದನಾ ಸಂಚಿನ ಕೋನದಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಸವಲಿಂಗ ಶ್ರೀಗಳ ಸಾವಿನ ಸುತ್ತ ಅನುಮಾನಗಳ ಹುತ್ತ – 3 ಪುಟಗಳ ಡೆತ್‍ನೋಟ್ ರಹಸ್ಯ ಬಯಲು!
ಘಟನೆಯ ಬಗ್ಗೆ ರಾಜ್ಯ ಪೊಲೀಸ್ ಮುಖ್ಯಸ್ಥ ಸಿ ಶೈಲೇಂದ್ರ ಬಾಬು ಅವರು ಮಾತನಾಡಿ, ತನಿಖೆಯಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ. ಈ ಘಟನೆಯ ಬಗ್ಗೆ ಎನ್‌ಐಎ ತನಿಖೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ತನಿಖೆ ಪೂರ್ಣವಾದ ಬಳಿಕ ನಿಜಾಂಶ ಏನೆಂಬುದು ತಿಳಿದುಬರಲಿದೆ ಎಂದಿದ್ದಾರೆ.
ಅಮರಾವತಿ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕಟ್ಟಡ ಕುಸಿದು 3 ವರ್ಷದ ಮಗು ಸೇರಿದಂತೆ 4 ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಅನನಪುರ್ ಜಿಲ್ಲೆಯ ಮುಳಕೇಡು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಜೈನಬಿ (60), ದಾದು (36), ಶರ್ಫುನ್ನಿ (28) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ 3 ವರ್ಷದ ಮಗು ಕೂಡಾ ಸಾವನ್ನಪ್ಪಿದೆ. ಇನ್ನೂ ಇಬ್ಬರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಅಕ್ಕಪಕ್ಕದ ಎರಡು ಮನೆಗಳಿಗೂ ಹಾನಿಯಾಗಿದೆ. ಇದನ್ನೂ ಓದಿ:ಮಕ್ಕಳು ಓಡಿ ಹೋಗದಂತೆ ತಡೆಯಲು ಕಾಲಿಗೆ ಕಬ್ಬಿಣ ಸರಪಳಿ ಕಟ್ಟಿದ ಮೌಲಾನಾ
ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರ್ ಗ್ರಾಮದ ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಮೂವರು ಮೃತಪಟ್ಟ ಘಟನೆ ನಡೆದಿದೆ. ಗ್ಯಾಸ್ ಕಟ್ಟರ್ ಮೂಲಕ ಬೋಟ್‍ನ ಕಂಪ್ರೇಸರ್ ಕಟಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಬ್ಲಾಸ್ಟ್ ಆಗಿದೆ ಎಂದು ಸ್ಥಳದಲ್ಲಿದ್ದವರು ಹೇಳಿದ್ದಾರೆ.
ಮಲ್ಲಾರು ಗ್ರಾಮದ ಗುಡ್ಡೆಗೇರಿ ಎಂಬ ಜನವಸತಿ ಪ್ರದೇಶದಲ್ಲಿರುವ ಗುಜರಿ ಅಂಗಡಿಯ ಸುತ್ತಮುತ್ತ ಮನೆಗಳಿದ್ದು, ಅಂಗಡಿಗೆ ತಾಗಿಯೇ ಮಸೀದಿ ಇದೆ. ಬೆಳಗ್ಗೆ 10:30ರ ಸಂದರ್ಭದಲ್ಲಿ ಗುಜರಿ ಅಂಗಡಿಯ ಒಳಗೆ ಸ್ಫೋಟ ಆಗಿತ್ತು. ವಿಷಯ ತಿಳಿದಾಕ್ಷಣ ಪಾದೂರಿನ ಐಎಸ್ ಪಿಆರ್‍ಎಲ್ ಘಟಕದ ಅಗ್ನಿಶಾಮಕ ವಾಹನ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಗುಜರಿ ಅಂಗಡಿಗೆ ಸುತ್ತ ತಗಡುಗಳ ಶೀಟ್‍ಗಳನ್ನು ಅಳವಡಿಸಲಾಗಿದ್ದು, ಮೊದಲು ಅದನ್ನು ತೆಗೆದು ಅಗ್ನಿಶಾಮಕ ವಾಹನವನ್ನು ಒಳಗೆ ತೆಗೆದುಕೊಂಡು ಹೋಗಬೇಕಾಯಿತು.
ಅಗ್ನಿಶಾಮಕದಳದ ನಾಲ್ಕು ವಾಹನಗಳಿಂದ ಕಾರ್ಯಾಚರಣೆ ಮಾಡಲಾಯಿತು. ಬೆಂಕಿ ಉರಿಯುತ್ತಿದ್ದಂತೆ ಸಣ್ಣ ಸಣ್ಣ ಸಿಲಿಂಡರ್‍ಗಳು ಗುಜರಿ ಅಂಗಡಿ ಒಳಗೆ ಬ್ಲಾಸ್ಟ್ ಆಗಿವೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟರೇ ಮತ್ತೊಬ್ಬರು ಸಾಗರ ಮೂಲದ ನಿಯಾಜ್ (40) ಚಿಕಿತ್ಸೆ ಫಲಕಾರಿಯಾಗದೇ ಆಸ್ಪತೆಯಲ್ಲಿ ಮೃತಪಟ್ಟಿದ್ದಾರೆ. ಇನ್ನೂಳಿದಂತೆ ಮೂವರು ಗಾಯಾಳುಗಳನ್ನು ಸ್ಥಳೀಯರು ಮತ್ತು ಅಗ್ನಿಶಾಮಕ ಅಧಿಕಾರಿಗಳು ರಕ್ಷಿಸಿ ಉಡುಪಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇದನ್ನೂ ಓದಿ:ಗುಜರಿ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ – ಇಬ್ಬರು ಸಜೀವ ದಹನ ಓರ್ವ ಗಂಭೀರ
ದಟ್ಟವಾದ ಹೊಗೆ ಮತ್ತು ಬೆಂಕಿ ಸಂಪೂರ್ಣವಾಗಿ ಗುಜರಿ ಅಂಗಡಿಯ ಸುತ್ತ ಆವರಿಸಿದ ಕಾರಣ ಅಗ್ನಿಶಾಮಕ ದಳದವರಿಗೆ ಮತ್ತು ಸ್ಥಳೀಯರಿಗೆ ಅಂಗಡಿಯ ಒಳಗೆ ಹೋಗಿ ಗಾಯಾಳುಗಳನ್ನು ಹೊರತರಲು ಸಾಧ್ಯವಾಗಿಲ್ಲ ಎಂದು ಕಾರ್ಯಾಚರಣೆಯಲ್ಲಿ ತೊಡಗಿದ್ದ ಸ್ಥಳೀಯ ಸಮಾಜಸೇವಕ ಸೂರಿ ಶೆಟ್ಟಿ ಹೇಳಿದರು.
ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಅದೃಷ್ಟವಶಾತ್ ಪಕ್ಕದಲ್ಲಿದ್ದ ಮಸೀದಿ, ಮನೆಗಳಿಗೆ ಬೆಂಕಿ ಆವರಿಸಿಲ್ಲ. ಅಂಗಡಿ ಸುತ್ತಮುತ್ತ ಇದ್ದ ತೆಂಗಿನ ತೋಟ ಬೆಂಕಿಗಾಹುತಿಯಾಗಿದೆ. ನಾನು ಕಂಪನಿಯಿಂದ ಮೂರು ಬಾರಿ ನೀರು ತುಂಬಿಸಿಕೊಂಡು ಬಂದಿದ್ದೇನೆ. ಇನ್ನು ವಿಳಂಬವಾಗಿದ್ದರೆ, ಸುತ್ತಮುತ್ತಲಿನ ಮನೆ ಮತ್ತು ಮಸೀದಿಗೆ ಬೆಂಕಿ ಆವರಿಸಿಕೊಳ್ಳುತ್ತಿತ್ತು ಎಂದು ಐಎಸ್ ಪಿಆರ್‍ಎಲ್ ಫೈರ್ ತಂಡದ ಸಮಾದ್ ಮಜೂರು ಮಾಹಿತಿ ನೀಡಿದರು.
ಬೆಂಕಿ ಬಿದ್ದ ಕಾರಣ ಸುತ್ತಮುತ್ತ ಸ್ವಲ್ಪ ಹಾನಿಯಾಗಿದೆ. ಅಂಗಡಿ ಪಕ್ಕದಲ್ಲಿದ್ದ ಮಸೀದಿಗೆ ಹಾನಿಯಾಗಿದೆ. ಗುಜರಿ ಅಂಗಡಿಗೆ ಸುತ್ತಲೂ ತಗಡು ಶೀಟ್‍ಗಳನ್ನು ಹಾಕಿದ್ದಾರೆ. ಒಳಗೆ ಏನಾಗುತ್ತದೆ ಎಂಬ ಬಗ್ಗೆ ಆರಂಭದಲ್ಲಿ ಗೊತ್ತಾಗಲೇ ಇಲ್ಲ. ಬ್ಯಾರಿಕೇಡ್‍ಗಳನ್ನು ತೆರವು ಮಾಡಿ ಬೆಂಕಿ ನಂದಿಸಬೇಕಾಯ್ತು. ಏಕಕಾಲದಲ್ಲಿ 4 ಅಗ್ನಿಶಾಮಕ ವಾಹನಗಳು ಇದ್ದ ಕಾರಣ ದೊಡ್ಡ ಅನಾಹುತವನ್ನು ತಪ್ಪಿಸಲು ಸಾಧ್ಯವಾಯಿತು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ದೇಶಪ್ರೇಮ ಸಾರುವ ಟ್ಯಾಟೂಗಳಿಗೆ ಉಕ್ರೇನ್‍ನಲ್ಲಿ ಸಖತ್ ಡಿಮ್ಯಾಂಡ್
ಅಂಗಡಿಯಲ್ಲಿ ಗುಜರಿ ಕಟ್ಟಿಂಗ್ ಗೆ ಬಳಸಲಾಗುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಇಬ್ಬರು ಮೃತಪಟ್ಟಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಿ ಅಂಗಡಿಯಲ್ಲಿ ಇರಿಸಲಾದ ಹಳೆಯ ಪ್ರಿಜ್ ಸೇರಿದಂತೆ ಗುಜರಿ ಸಾಮಗ್ರಿಗಳು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕ ದಳದ ತಂಡ ಎರಡು ವಾಹನಗಳಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆಸಿದೆ. ಇದನ್ನೂ ಓದಿ:13 ಗಂಟೆಯಲ್ಲಿ ಶ್ರೀಲಂಕಾದಿಂದ ತಮಿಳುನಾಡಿಗೆ ಸ್ವಿಮ್ಮಿಂಗ್ ಮಾಡಿದ 13ರ ಬಾಲಕಿ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಶೈರ್‍ಬಾಗ್‍ನಲ್ಲಿರುವ ಹೆರಿಗೆ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯೊಳಗೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಆಸ್ಪತ್ರೆಯ ಟಿಕೆಟ್ ವಿಭಾಗದಲ್ಲಿ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿದ್ದು, ಇದೀಗ ಘಟನೆಯಲ್ಲಿ ಕೆಲವು ಆಸ್ಪತ್ರೆ ನೌಕರರು ಸೇರಿದಂತೆ ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಎಂಸಿಸಿಎಚ್‍ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: CBI ಎಂದು ಸುಳ್ಳು ಹೇಳಿ ಲಕ್ಷಾಂತರ ರೂ. ಹಣ, ಕೆಜಿಗಟ್ಟಲೆ ಚಿನ್ನದೋಚಿದರು!
LPG Gas cylinder blast at Ticket counter in Maternity and child care hospital injured 14 including children in #Anathnag clearly indicates compromising of safety #Kashmirpic.twitter.com/DmMwQkjhvP
— Ashraf Wani اشرف وانی (@ashraf_wani) March 1, 2022
ಇದೀಗ ಗಾಯಗೊಂಡವರನ್ನು ಅನಂತನಾಗ್‍ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಯ ಬೇಜವಾಬ್ದಾರಿಯಿಂದ ಘಟನೆ ಸಂಭವಿಸಿದೆ ಎಂದು ರೋಗಿಗಳು ಆರೋಪಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವು