Tag: cylinder blast

  • ರಾತ್ರಿ ವೇಳೆ ಭೀಕರ ಸಿಲಿಂಡರ್ ಸ್ಫೋಟ – ಹಸುಗೂಸು ಸೇರಿ ಒಂದೇ ಕುಟುಂಬದ 7 ಮಂದಿಗೆ ಗಂಭೀರ ಗಾಯ

    ರಾತ್ರಿ ವೇಳೆ ಭೀಕರ ಸಿಲಿಂಡರ್ ಸ್ಫೋಟ – ಹಸುಗೂಸು ಸೇರಿ ಒಂದೇ ಕುಟುಂಬದ 7 ಮಂದಿಗೆ ಗಂಭೀರ ಗಾಯ

    ಬೆಳಗಾವಿ: ರಾತ್ರಿ ವೇಳೆ ಭೀಕರ ಸಿಲಿಂಡರ್ ಸ್ಫೋಟ (Cylinder Blast) ಸಂಭವಿಸಿದ ಪರಿಣಾಮ 9 ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ 7 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಗೋಕಾಕ್ (Gokak) ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ನಡೆದಿದೆ.

    ರಾತ್ರಿ ಮನೆಮಂದಿಯೆಲ್ಲಾ ಮಲಗಿದ್ದ ವೇಳೆ ಮನೆಯಲ್ಲಿದ್ದ ಸಿಲಿಂಡರ್ ಗ್ಯಾಸ್ (Gas) ಸೋರಿಕೆಯಾಗಿತ್ತು. ಈ ವೇಳೆ ಗ್ಯಾಸ್ ವಾಸನೆಗೆ ಮೊಬೈಲ್ ಟಾರ್ಚ್ ಆನ್ ಮಾಡಿ ನೋಡಲು ಹೋದಾಗ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಮನೆಯ ಹಂಚು ಹಾರಿ ಹೋಗಿದೆ. ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಇದನ್ನೂ ಓದಿ: 353ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಗುಡ್‌ಬೈ – ಬಡತನ, ಪೋಷಕರ ನಿರಾಸಕ್ತಿಯೇ ಕಾರಣ

    ಘಟನೆಯಲ್ಲಿ ರಾಜಶ್ರೀ ನಿರ್ವಾಣಿ (42), ಅಶೋಕ ನಿರ್ವಾಣಿ (45), ಸೋಮನಗೌಡ (44), ದೀಪಾ (42), ನವೀನ (14), ವಿದ್ಯಾ (13), ಬಸನಗೌಡ ನಿರ್ವಾಣಿ (9 ತಿಂಗಳು) ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ದೇಶದಲ್ಲಿ ಮತ್ತೆ ಕೊರೊನಾ ಆತಂಕ; ಪಕ್ಕದ ಕೇರಳದಲ್ಲಿ ಜೆಎನ್.1 ಸೋಂಕು ಪತ್ತೆ – ಕರ್ನಾಟಕದಲ್ಲೂ ಹೈ ಅಲರ್ಟ್

  • ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಬ್ಲಾಸ್ಟ್ – ಯುವಕ ಗಂಭೀರ

    ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಬ್ಲಾಸ್ಟ್ – ಯುವಕ ಗಂಭೀರ

    ಬೆಂಗಳೂರು: ಗ್ಯಾಸ್ ಸೋರಿಕೆಯಾಗಿ (Gas Leak) ಸಿಲಿಂಡರ್ ಬ್ಲಾಸ್ಟ್ (Cylinder Blast)  ಆದ ಪರಿಣಾಮ ಯುವಕ ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರಿನ (Bengaluru) ಬೇಗೂರು (Begur) ಬಳಿಯ ಲಕ್ಷ್ಮಿಪುರದಲ್ಲಿ ನಡೆದಿದೆ.

    ಬೊಮ್ಮನಹಳ್ಳಿ ಸಮೀಪದ ಗಾರ್ವೇಬಾವಿಪಾಳ್ಯದಲ್ಲಿ ಘಟನೆ ನಡೆದಿದ್ದು, ಬಿಹಾರ (Bihar) ಮೂಲದ ಅಂಕಿತ್ ರಾಜ್ (25) ಎಂಬ ಯುವಕ ಘಟನೆಯಲ್ಲಿ ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಪದ್ಮಾವತಿ ಎಂಬವರಿಗೆ ಸೇರಿದ ಕಟ್ಟಡದಲ್ಲಿ ಯುವಕರು ಬಾಡಿಗೆಗೆ ವಾಸವಿದ್ದರು. ಮನೆಯಲ್ಲಿದ್ದ ಗ್ಯಾಸ್ ಲೀಕ್ ಆಗಿತ್ತು. ಇಂದು ಬೆಳಗ್ಗೆ ಅಂಕಿತ್ ಗ್ಯಾಸ್ ಹಚ್ಚಲು ಹೋಗಿದ್ದ ಸಂದರ್ಭ ಏಕಾಏಕಿ ಸ್ಫೋಟಗೊಂಡಿದೆ. ಅಡುಗೆ ಮಾಡಲು ಹೋದ ವೇಳೆ ಘಟನೆ ನಡೆದಿದ್ದು, ಸಿಲಿಂಡರ್ ಬ್ಲಾಸ್ಟ್‌ನಿಂದ ಮನೆಯ ಕಿಟಕಿ, ಗಾಜುಗಳು ಜಖಂಗೊಂಡಿವೆ. ಇದನ್ನೂ ಓದಿ: ಹಾಸನದಿಂದ ಜೀರೋ ಟ್ರಾಫಿಕ್‌ನಲ್ಲಿ ಬಂದ್ರೂ ಅರ್ಧ ಗಂಟೆ ಚಿಕಿತ್ಸೆಗೆ ವಿಳಂಬ – ನಿಮಾನ್ಸ್‌ನಲ್ಲಿ ಕಂದಮ್ಮ ಸಾವು

    ಸ್ಫೋಟದ ತೀವ್ರತೆಗೆ ಮನೆ ಸಂಪೂರ್ಣ ಛಿದ್ರಗೊಂಡಿದ್ದು, ಅಕ್ಕ ಪಕ್ಕದ ಹತ್ತಾರು ಮನೆಗಳಿಗೆ ಹಾನಿಯಾಗಿದೆ. ಅಂಕಿತ್ ರಾಜ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, 65% ರಷ್ಟು ಸುಟ್ಟ ಗಾಯಗಳಾಗಿವೆ. ಈತನಿಗೆ ಬೊಮ್ಮನಹಳ್ಳಿ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಬೇಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹಣಕಾಸಿನ ವಿಚಾರಕ್ಕೆ ಟಿಪ್ಪರ್ ಹರಿಸಿ ವ್ಯಕ್ತಿಯ ಹತ್ಯೆ – ಇಬ್ಬರು ಗಂಭೀರ

  • ಸಿಲಿಂಡರ್ ಸ್ಫೋಟಕ್ಕೆ ಮನೆ ಛಿದ್ರ ಛಿದ್ರ – ಮೂವರು ಗಂಭೀರ

    ಸಿಲಿಂಡರ್ ಸ್ಫೋಟಕ್ಕೆ ಮನೆ ಛಿದ್ರ ಛಿದ್ರ – ಮೂವರು ಗಂಭೀರ

    ಚಿಕ್ಕಬಳ್ಳಾಪುರ: ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಏಕಾಏಕಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಮುನ್ಸಿಪಾಲ್ ಕಾಲೇಜಿನ ಮುಂಭಾಗ ನಡೆದಿದೆ.

    ನಗರದ ಫರ್ಜಾನಾ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆ ಮಾಲೀಕರಾದ ಫರ್ಜಾನಾ ಕೆಲಸಕ್ಕೆ ತೆರಳಿದ್ದ ವೇಳೆ ಅವರ ಮಗ ರಫೀಕ್ (4) ಹಾಗೂ ಮಗಳು ಹರ್ಷಿಯಾ ಭಾನು (16) ಮನೆಯಲ್ಲಿದ್ದರು. ಈ ವೇಳೆ ಮನೆಯಿಂದ ಗ್ಯಾಸ್ ವಾಸನೆ ಬರುತ್ತಿದೆ ಎಂದು ಪಕ್ಕದ ಮನೆಯ ಹೇಮಾವತಿ (18) ಎಂಬಾಕೆ ಬಂದಿದ್ದಾಳೆ. ಈ ವೇಳೆ ತಕ್ಷಣ ಬೆಂಕಿ ಹೊತ್ತಿಕೊಂಡಿದ್ದು ಸ್ಫೋಟ (Cylinder Blast) ಸಂಭವಿಸಿದೆ.

    ಘಟನೆಯಲ್ಲಿ ಮೂವರು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರಿಗೂ 35 ರಿಂದ 40% ಸುಟ್ಟ ಗಾಯಗಳಾಗಿದ್ದು ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನೆಯಲ್ಲಿ ಮನೆಯಲ್ಲಿದ್ದ ಪಾತ್ರೆ ಹಾಗೂ ಸಾಮಾನುಗಳು ಎಲ್ಲವೂ ಚೆಲ್ಲಾಪಿಲ್ಲಿಯಾಗಿವೆ. ಮನೆಯ ಮೇಲಿನ ತಗಡಿನ ಶೀಟ್‍ಗಳು ಹಾರಿ ಹೋಗಿವೆ. ಹಿಂಬದಿಯ ಮನೆಯ ಎರಡು ಬೈಕ್‍ಗಳು ಹಾನಿಗೊಳಗಾಗಿವೆ.

    ಈ ಬಗ್ಗೆ `ಪಬ್ಲಿಕ್ ಟಿವಿ’ ವರದಿಗಾರರಿಂದ ಮಾಹಿತಿ ಪಡೆದ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಆರ್ಥಿಕ ಸಹಾಯ ಮಾಡಿದ್ದು, ಸೂಕ್ತ ಚಿಕಿತ್ಸೆ ಕೊಡಿಸುವ ಭರವಸೆ ನೀಡಿ ಅವರ ಅಮ್ಮ ಅಂಬುಲೆನ್ಸ್ ಮೂಲಕ ಗಾಯಾಳು ಹೇಮಾವತಿಯನ್ನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ.

    ಈ ಸಂಬಂಧ ಚಿಕ್ಕಬಳ್ಳಾಪುರ (Chikkaballapur) ನಗರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್‍ಐ ನಂಜುಂಡಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಸಿಲಿಂಡರ್ ಸ್ಫೋಟ – ನಿರ್ಗತಿಕರಿಗೆ ಆಸರೆಯಾಗಿದ್ದ ರಮೇಶ್ ಕೊನೆಯುಸಿರು

    ಸಿಲಿಂಡರ್ ಸ್ಫೋಟ – ನಿರ್ಗತಿಕರಿಗೆ ಆಸರೆಯಾಗಿದ್ದ ರಮೇಶ್ ಕೊನೆಯುಸಿರು

    ಮಡಿಕೇರಿ: ನಿರ್ಗತಿಕರಿಗೆ ಆಸರೆಯಾಗಿದ್ದ ಸಮಾಜ ಸೇವಕ, ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಿಂದ ಚಿರಪರಿಚಿತರಾಗಿದ ರಮೇಶ್ (Ramesh) ಮನೆಯಲ್ಲಿ ಸಿಲಿಂಡರ್ ಸ್ಫೋಟದಿಂದ (Cylinder Blast) ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

    ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ರಮೇಶ್ ತೀವ್ರವಾಗಿ ಗಾಯಗೊಂಡಿದ್ದರು. ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ನಸುಕಿನ ಜಾವ 3:30ರ ವೇಳೆಗೆ ರಮೇಶ್ ನಿಧನರಾಗಿದ್ದಾರೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ಇಂದು ಕೊನೆಯ ದಿನ – ಬನ್ನಿ ಪಾಲ್ಗೊಳ್ಳಿ

    ರಮೇಶ್ ಕೊಡಗು (Kodagu) ಜಿಲ್ಲೆಯಲ್ಲಿ ವಿಕಾಸ್ ಜನಸೇವಾ ಟ್ರಸ್ಟ್‌ನ ಆಶ್ರಮ ಸ್ಥಾಪಿಸಿದ್ದರು. ಕಳೆದ 8 ವರ್ಷಗಳಿಂದ ನೂರಾರು ಅನಾಥರಿಗೆ, ವೃದ್ಧರಿಗೆ, ನಿರ್ಗತಿಕರಿಗೆ ಆಸರೆಯಾಗಿದ್ದರು. ಇದೀಗ ರಮೇಶ್ ತಮ್ಮ ಪತ್ನಿ, ಮೂವರು ಹೆಣ್ಣು ಮಕ್ಕಳು, ತಂದೆ ಹಾಗೂ ಆಶ್ರಮದಲ್ಲಿ ತಾವು ಆಸರೆಯಾಗಿದ್ದ 36 ಅನಾಥರನ್ನು ಅಗಲಿದ್ದಾರೆ. ಇದನ್ನೂ ಓದಿ: ಪಟಾಕಿ ದುರಂತ ಸ್ಥಳಕ್ಕೆ ಡಿಕೆಶಿ ಭೇಟಿ- ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟ – ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೇ ಸಾವು

    ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟ – ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೇ ಸಾವು

    ಕೋಲಾರ: ಗ್ಯಾಸ್ ಸೋರಿಕೆಯಾಗಿ (Gas Leak) ಸಿಲಿಂಡರ್ ಸಿಡಿದು (Cylinder Blast) ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ದಂಪತಿ (Couple) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಕೋಲಾರ ತಾಲೂಕಿನ ಮಣಿಘಟ್ಟ ರಸ್ತೆಯಲ್ಲಿರುವ ಮಧುಸೂಧನ್ ತೋಟದ ಮನೆಯಲ್ಲಿ ಸೆಪ್ಟೆಂಬರ್ 16ರಂದು ಈ ಘಟನೆ ನಡೆದಿದ್ದು, ಗಂಭೀರ ಗಾಯಗೊಂಡಿದ್ದ ದಂಪತಿ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುಪ್ಪಡಹಳ್ಳಿ ಗ್ರಾಮದ ದಂಪತಿ ಕೋಲಾರ ತಾಲೂಕಿನ ಮಣಿಘಟ್ಟ ರಸ್ತೆಯಲ್ಲಿರುವ ಮಧುಸೂಧನ್ ತೋಟದ ಮನೆಯಲ್ಲಿ ವಾಸವಿದ್ದರು. ಇದನ್ನೂ ಓದಿ: ಪೊಲೀಸ್ ಕಸ್ಟಡಿಯಿಂದ ಎಸ್ಕೇಪ್‌ಗೆ ಯತ್ನ – 2ನೇ ಮಹಡಿಯಿಂದ ಜಿಗಿದು ಕೈಕಾಲು ಮುರಿದುಕೊಂಡ ಬಿಜೆಪಿ ಕಾರ್ಯಕರ್ತ

    ಕಾಫಿ ಮಾಡುವ ವೇಳೆ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಅವಘಡ ಸಂಭವಿಸಿತ್ತು. ಘಟನೆಯ ಪರಿಣಾಮ ತೀವ್ರ ಗಾಯಗೊಂಡ ದಂಪತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತ ದಂಪತಿಯನ್ನು ಗಿರೀಶ್ ಹಾಗೂ ನಂದಿನಿ ಎಂದು ಗುರುತಿಸಲಾಗಿದೆ. ಸಿಲಿಂಡರ್ ಬ್ಲಾಸ್ಟ್‌ನಿಂದ ದಂಪತಿಗೆ ಗಂಭೀರ ಗಾಯಗಳಾಗಿದ್ದು, ಬೆಂಗಳೂರಿನ (Bengaluru) ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ನೇತ್ರಾವತಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಅಪಾರ್ಟ್‍ಮೆಂಟ್‍ನಿಂದ ಜಿಗಿದು ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಣೇಶ ಹಬ್ಬದ ಸಾಮಗ್ರಿ ಇಟ್ಟಿದ್ದ ಗೋಡೌನ್‌ಗೆ ಬೆಂಕಿ

    ಗಣೇಶ ಹಬ್ಬದ ಸಾಮಗ್ರಿ ಇಟ್ಟಿದ್ದ ಗೋಡೌನ್‌ಗೆ ಬೆಂಕಿ

    ಬೆಂಗಳೂರು: ಗಣೇಶ ಹಬ್ಬದ (Ganesha Festival) ಸಾಮಗ್ರಿಗಳನ್ನು (Things) ಇಟ್ಟಿದ್ದ ಗೋಡೌನ್‌ಗೆ (Godown) ಬೆಂಕಿ (Fire) ಹತ್ತಿದ್ದು, ಗೋಡೌನ್ ಹೊತ್ತಿ ಉರಿದ ಘಟನೆ ಟಿಪ್ಪುನಗರದಲ್ಲಿ (Tippu Nagara) ನಡೆದಿದೆ.

    ಕಾಟನ್ ಪೇಟೆಯ (Cotton Pet) ವಿನಾಯಕ ಥಿಯೇಟರ್‌ನ 10ನೇ ಕ್ರಾಸ್‌ನಲ್ಲಿ ಘಟನೆ ನಡೆದಿದ್ದು, ಗೋದಾಮಿನಲ್ಲಿದ್ದ 2 ಸಿಲಿಂಡರ್ ಬ್ಲಾಸ್ಟ್ (Cylinder Blast) ಆದ ಕಾರಣದಿಂದ ಬೆಂಕಿ ಹೊತ್ತಿಕೊಂಡಿದೆ. ಘಟನೆಯ ಪರಿಣಾಮ ಗೋಡೌನ್ ಪಕ್ಕದಲ್ಲಿದ್ದ 3-4 ಮನೆಗಳಿಗೂ ಬೆಂಕಿ ತಗುಲಿದೆ. ಇದನ್ನೂ ಓದಿ: ಹಳೇ ದ್ವೇಷಕ್ಕೆ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

    ಘಟನೆ ನಡೆದ ಸ್ಥಳಕ್ಕೆ ಎರಡು ಅಗ್ನಿಶಾಮಕ (Fire Engine) ವಾಹನ ದೌಡಾಯಿಸಿದ್ದು, ಅಗ್ನಿಶಾಮಕ ಇಲಾಖೆ ಹಾಗೂ ಕಾಟನ್‌ಪೇಟೆ ಪೊಲೀಸರು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನ ಟೈಯರ್ ಬ್ಲಾಸ್ಟ್ – ಅಪಘಾತದಲ್ಲಿ ಮೂವರು ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಲಿಂಡರ್ ಸ್ಫೋಟದಲ್ಲಿ ಕಾರ್ಮಿಕನಿಗೆ ಗಾಯ – ಚಿಕಿತ್ಸೆ ಕೊಡಿಸದೆ ಅಮಾನವೀಯತೆ ತೋರಿದ ಮಾಲೀಕ

    ಸಿಲಿಂಡರ್ ಸ್ಫೋಟದಲ್ಲಿ ಕಾರ್ಮಿಕನಿಗೆ ಗಾಯ – ಚಿಕಿತ್ಸೆ ಕೊಡಿಸದೆ ಅಮಾನವೀಯತೆ ತೋರಿದ ಮಾಲೀಕ

    ಹಾಸನ: ಸಿಲಿಂಡರ್ ಸ್ಫೋಟದಲ್ಲಿ (Cylinder Blast) ಗಾಯಗೊಂಡ ಕಾರ್ಮಿಕನಿಗೆ ಬೇಕರಿ ಮಾಲೀಕ ಚಿಕಿತ್ಸೆ ಕೊಡಿಸದೆ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಹಾಸನದಲ್ಲಿ (Hassan) ನಡೆದಿದೆ.

    ಸಕಲೇಶಪುರ (Sakleshpur) ಮೂಲದ ಅಭಿ ಗಂಭೀರವಾಗಿ ಗಾಯಗೊಂಡಿರುವ ಯುವಕ. ಕಳೆದ ಎರಡು ತಿಂಗಳ ಹಿಂದೆಯಷ್ಟೆ  ತೆಲಂಗಾಣದಲ್ಲಿರುವ (Telangana) ಬೇಲೂರಿನ ಪ್ರತಾಪ್‍ಗೌಡ ಎಂಬುವವರ ಬೇಕರಿಗೆ ಕೆಲಸಕ್ಕೆ ಸೇರಿದ್ದ. ಜೂ.2 ರಂದು ಬೆಳಿಗ್ಗೆ ಯುವಕ ಬೇಕರಿ ಬಾಗಿಲು ತೆಗೆದ ವೇಳೆ ಸಿಲಿಂಡರ್ ಸ್ಪೋಟವಾಗಿದ್ದು ತೀವ್ರವಾಗಿ ಗಾಯಗೊಂಡಿದ್ದ. ಸುಟ್ಟ ಗಾಯಗಳಿಂದ ನರಳುತ್ತಿದ್ದ ಕಾರ್ಮಿಕನನ್ನು ಅಕ್ಕಪಕ್ಕದ ಅಂಗಡಿಯವರು ಹಾಗೂ ಸಾರ್ವಜನಿಕರು ತೆಲಂಗಾಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಇದನ್ನೂ ಓದಿ:‌ ಒಡಿಶಾ ರೈಲು ದುರಂತ – ಪರಿಹಾರದ ಹಣಕ್ಕಾಗಿ ಸತ್ತ ವ್ಯಕ್ತಿಯನ್ನು ಪತಿ ಎಂದ ಮಹಿಳೆ

    ಈ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ್ದ ಪ್ರತಾಪ್‍ಗೌಡ ಐದು ಸಾವಿರ ಹಣ ನೀಡಿ ಊರಿಗೆ ವಾಪಸ್ ತೆರಳುವಂತೆ ಹೇಳಿದ್ದಾನೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದರೂ ಸಹ ಅಭಿ ಬಸ್ಸಿನಲ್ಲೇ ಪ್ರಯಾಣಿಸಿ ಹಾಸನದ ಜಿಲ್ಲಾಸ್ಪತ್ರೆ ದಾಖಲಾಗಿದ್ದಾನೆ. ಈಗ ಊಟ ತಿಂಡಿಗೆ ಹಣವಿಲ್ಲದೆ ಬಡ ಕಾರ್ಮಿಕ ಅಭಿ ಪರದಾಡುತ್ತಿದ್ದಾನೆ.

    ಈಗ ದೂರವಾಣಿ ಕರೆ ಮಾಡಿದರು ಬೇಕರಿ ಮಾಲೀಕ ಸ್ವೀಕರಿಸುತ್ತಿಲ್ಲ. ಪದೇ ಪದೇ ಫೋನ್ ಮಾಡುತ್ತಿದ್ದರಿಂದ ಪ್ರತಾಪ್‍ಗೌಡ ತನ್ನ ಸಂಬಂಧಿಕರನ್ನು ಆಸ್ಪತ್ರೆಗೆ ಹೋಗಿ ಆರೋಗ್ಯ ವಿಚಾರಿಸುವಂತೆ ತಿಳಿಸಿದ್ದು, ಅದರಂತೆ ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಸಿ ಹೋಗಿದ್ದಾರೆ. ಇಲ್ಲಿ ಚಿಕಿತ್ಸೆ ಪಡೆಯಲು ಆಗದಿದ್ದರೆ ಬೇಲೂರಿಗೆ ಬಾ ಅಲ್ಲಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹೇಳಿ ಹೋಗಿದ್ದಾರೆ. ಇದಲ್ಲದೆ ಅಭಿ ಕೆಲಸ ಮಾಡಿರುವ 2 ತಿಂಗಳ ಸಂಬಳವನ್ನು ನೀಡಿಲ್ಲ.

    ತಂದೆ ತಾಯಿ ಇಲ್ಲದ ಅನಾಥ ಯುವಕ ಅಭಿ ಕಳೆದ ಎಂಟು ವರ್ಷಗಳಿಂದ ಹಾಸನ ನಗರದ ಹರ್ಷಮಹಲ್ ರಸ್ತೆಯಲ್ಲಿರುವ ಬಾಲ ಮಂದಿರದಲ್ಲಿ ಆಶ್ರಯ ಪಡೆದಿದ್ದ. ಬಳಿಕ ಇತ್ತೀಚೆಗೆ ಉದ್ಯೋಗಕ್ಕಾಗಿ ತೆಲಂಗಾಣಕ್ಕೆ ತೆರಳಿದ್ದ. ಇದನ್ನೂ ಓದಿ: ಶುಕ್ರ ಗ್ರಹ ಈಗ ಪಳಪಳ ಹೊಳೆಯುತ್ತಾನೆ ಕಣ್ತುಂಬಿಕೊಳ್ಳಿ

  • ಸಿಲಿಂಡರ್ ಸ್ಫೋಟ – 1 ವರ್ಷದ ಮಗು ಸೇರಿ ಮೂವರಿಗೆ ಗಂಭೀರ ಗಾಯ

    ಸಿಲಿಂಡರ್ ಸ್ಫೋಟ – 1 ವರ್ಷದ ಮಗು ಸೇರಿ ಮೂವರಿಗೆ ಗಂಭೀರ ಗಾಯ

    ರಾಯಚೂರು: ಮನೆಯೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್ (Cylinder) ಸ್ಫೋಟಗೊಂಡಿದ್ದು, ಒಂದೂವರೆ ವರ್ಷದ ಮಗು ಸೇರಿದಂತೆ ಮೂವರಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ರಾಯಚೂರಿನ (Raichuru) ನೇತಾಜಿ ನಗರದಲ್ಲಿ ನಡೆದಿದೆ.

    ಶಂಶುದ್ದೀನ್ ಅವರ ಮನೆಯಲ್ಲಿ ಅವಘಡ ಸಂಭವಿಸಿದ್ದು, ಸ್ಫೋಟದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ಮಹಿಳೆಯೊಬ್ಬರು ಹಾರಿ ಬಿದ್ದಿದ್ದಾರೆ. ಇದನ್ನೂ ಓದಿ: ರಥಕ್ಕೆ ಕಳಸ ಕಟ್ಟುತ್ತಿದ್ದಾಗ ಆಯತಪ್ಪಿ ಬಿದ್ದು ವ್ಯಕ್ತಿ ಸಾವು – ಜಾತ್ರೆ ಮುಂದೂಡಿದ ಗ್ರಾಮಸ್ಥರು

    ಸಿಲಿಂಡರ್‌ ಸ್ಫೋಟದ (Cylinder Blast) ವೇಳೆ ಮನೆಯಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಒಂದೂವರೆ ವರ್ಷದ ಮಗುವಿಗೆ ಗಂಭೀರ ಗಾಯಗಳಾಗಿವೆ. ಅಂಜುಮ್, ನಫೀಜಾ ಬಾನು ಹಾಗೂ ಪದ್ಮಾವತಿ ಗಾಯಾಳುಗಳು. ಗಾಯಾಳುಗಳನ್ನು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸಿಲಿಂಡರ್‌ನಲ್ಲಿ ಸೇಫ್ಟಿ ಪಿನ್ ಇಲ್ಲದಿದ್ದುದೇ ಸ್ಫೋಟಕ್ಕೆ ಕಾರಣ ಎನ್ನಲಾಗಿದೆ. 10 ದಿನಗಳ ಹಿಂದೆ ಗ್ಯಾಸ್ ಸಿಲಿಂಡರ್ ಅನ್ನು ಡೆಲಿವರಿ ಮಾಡಲಾಗಿತ್ತು. ಗ್ಯಾಸ್ ಏಜೆನ್ಸಿಯವರ ನಿರ್ಲಕ್ಷ್ಯವೇ ಸ್ಫೋಟಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಗ್ಯಾಸ್ ಬದಲಿಸಲು ಮುಂದಾದಾಗ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮೆನೆಯಲ್ಲಿದ್ದ ವಸ್ತುಗಳೆಲ್ಲವೂ ಛಿದ್ರ ಛಿದ್ರವಾಗಿದೆ. ಘಟನೆ ನೇತಾಜಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಟ್ರ್ಯಾಕ್ಟರ್-ಟೆಂಪೋ ನಡುವೆ ಡಿಕ್ಕಿ – ತಂದೆ, ಮೂವರು ಮಕ್ಕಳ ದುರ್ಮರಣ

  • ಸಿಲಿಂಡರ್ ಸ್ಫೋಟ: ಧಾರಾವಾಹಿ ಶೂಟಿಂಗ್ ಸೆಟ್ ಸಂಪೂರ್ಣ ಭಸ್ಮ

    ಸಿಲಿಂಡರ್ ಸ್ಫೋಟ: ಧಾರಾವಾಹಿ ಶೂಟಿಂಗ್ ಸೆಟ್ ಸಂಪೂರ್ಣ ಭಸ್ಮ

    ಹಿಂದಿಯ ಪ್ರಸಿದ್ಧ ಧಾರಾವಾಹಿ (Serial) ಸೆಟ್ (Set) ನಲ್ಲಿ ಭೀಕರ ಅಗ್ನಿದುರಂತ ಸಂಭವಿಸಿದ್ದು, ಇಡೀ ಸೆಟ್ ಬೆಂಕಿ ಆಹುತಿಯಾಗಿದೆ. ಹಿಂದಿಯ ಗಮ್ ಹೈ ಕಿಸೀಕೆ ಪ್ಯಾರ್ ಮೈ ಧಾರಾವಾಹಿಯ ಚಿತ್ರೀಕರಣ ಮುಂಬೈನ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿತ್ತು. ಈ ಧಾರಾವಾಹಿಗಾಗಿ ದೊಡ್ಡಮಟ್ಟದಲ್ಲಿ ಸೆಟ್ ಹಾಕಲಾಗಿತ್ತು. ಮಾರ್ಚ್ 10ರಂದು ಸೆಟ್ ನಲ್ಲಿದ್ದ ಸಿಲಿಂಡರ್ (Cylinder Blast) ಸ್ಫೋಟವಾಗಿದೆ. ಸುಮಾರು ನಾಲ್ಕು ಗಂಟೆ ಹೊತ್ತಿಗೆ ನಡೆದ ಘಟನೆಯಲ್ಲಿ ಪೂರ್ತಿ ಸೆಟ್ ಬೆಂಕಿಯಲ್ಲಿ ಭಸ್ಮವಾಗಿದೆ.

    ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಕಿ ನಂದಿಸುವಂತಹ ಯಾವುದೇ ಉಪಕರಣಗಳು ಸೆಟ್ ನಲ್ಲಿ ಇಲ್ಲದ ಕಾರಣದಿಂದಾಗಿ ವೇಗವಾಗಿ ಬೆಂಕಿ ಆವರಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಫಿಲ್ಮ್ ಸಿಟಿ ನಿರ್ದೇಶಕರ ವಿರುದ್ಧವೂ ಪ್ರಕರಣ ದಾಖಲಾಗಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪೇಂದ್ರ

    ಈ ಘಟನೆ ನಡೆದ ಸಂದರ್ಭದಲ್ಲಿ ಮಕ್ಕಳ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಬೆಂಕಿ ಬಿದ್ದ ವಿಷಯ ತಿಳಿಯುತ್ತಿದ್ದಂತೆಯೇ ಕೂಡಲೇ ಮಕ್ಕಳನ್ನು ಅಲಿಂದ ಬಚಾವ್ ಮಾಡಲಾಗಿದೆ. ಪಕ್ಕದಲ್ಲೇ ಮತ್ತೊಂದು ಧಾರಾವಾಹಿಯ ಸೆಟ್ ಕೂಡ ಹಾಕಲಾಗಿತ್ತು. ಅದಕ್ಕೂ ಹಾನಿಯಾಗಿದೆ ಎಂದಿದೆ ಧಾರಾವಾಹಿ ತಂಡ.

  • ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟ – 13 ವರ್ಷದ ಬಾಲಕ ಸಾವು

    ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟ – 13 ವರ್ಷದ ಬಾಲಕ ಸಾವು

    ಬೆಂಗಳೂರು: ಸಿಲಿಂಡರ್ ಸ್ಫೋಟದಿಂದ (cylinder blast) 13 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಬೆಂಗಳೂರಿನ ಹೆಬ್ಬಾಳ ಸಮೀಪದ ಗುಡ್ಡದಹಳ್ಳಿಯಲ್ಲಿ ನಡೆದಿದೆ.

    ಯಾದಗಿರಿ ಜಿಲ್ಲೆಯ ರಾಮಸಮುದ್ರ ಮೂಲದ ಸರವ್ವ – ಮಲ್ಲಪ್ಪ ಎಂಬುವವರ ಪುತ್ರ ಮಹೇಶ್ (13) ಮೃತಪಟ್ಟ ಬಾಲಕ. ಮಹೇಶ್‌ ಆತನ ತಂದೆ, ತಾಯಿಯೊಂದಿಗೆ ಹೆಬ್ಬಾಳದ ಗುಡ್ಡದಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅಷ್ಟೇ ಅಲ್ಲದೇ ಆತನ ಪೋಷಕರು ಜೀವನೋಪಾಯಕ್ಕಾಗಿ ಗಾರೆ ಕೆಲಸ, ಮನೆಗೆಲಸಗಳನ್ನು ಮಾಡುತ್ತಿದ್ದಾರೆ.

    crime

    ಭಾನುವಾರದ ಹಿನ್ನೆಲೆಯಲ್ಲಿ ಮಹೇಶ್‌ ಮನೆಯ ಪಕ್ಕದಲ್ಲೇ ಇರುವ ಗ್ಯಾಸ್ ರೀ ಫಿಲ್ಲಿಂಗ್ ಬಳಿ ಬಂದಿದ್ದ. ಅದೇ ವೇಳೆ, ರೀ ಫಿಲ್ಲಿಂಗ್ ಮಾಡ್ತಿದ್ದ ಸಿಲಿಂಡರ್ ಬ್ಲಾಸ್ಟ್ ಆಗಿತ್ತು. ಸ್ಫೋಟದ ತೀವ್ರತೆಗೆ ಅಂಗಡಿಯ ಪಕ್ಕದಲ್ಲಿದ್ದ ಮಹೇಶ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಇದನ್ನೂ ಓದಿ: ಹಿಂದೂ, ಮುಸ್ಲಿಮರ ಮಧ್ಯೆ ಜಗಳ ಹಚ್ಚುವ ಈ ಸರ್ಕಾರಗಳನ್ನ ಕಿತ್ತೊಗೆಯಬೇಕು – ಖರ್ಗೆ ಕರೆ

    ಘಟನೆ ವೇಳೆ ತಕ್ಷಣ ಮಹೇಶ್‍ನನ್ನು ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲು ಮಾಡಲು ಕರೆದೊಯ್ಯಲಾಗುತ್ತಿತ್ತು. ಆದರೆ ಮಹೇಶ್ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಗ್ಯಾಸ್ ರೀ ಫಿಲ್ಲಿಂಗ್ ಮಾಡೋಕೆ ಜಾಗ ಬಾಡಿಗೆ ಕೊಟ್ಟಿದ್ದ ದೇವರಾಜ್, ರೀ ಫಿಲ್ಲಿಂಗ್ ಮಾಡುತ್ತಿದ್ದ ಲಿಕಾಯತ್ ಎನ್ನುವವರು ಘಟನಾ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಲಕ್ಷಾಂತರ ಮೌಲ್ಯದ ಬ್ರಾಂಡೆಡ್ ಮದ್ಯ ವಶ – ಆರೋಪಿ ಬಂಧನ