ಚಿಕ್ಕಬಳ್ಳಾಪುರ: ಮಾಂಡೌಸ್ ಚಂಡಮಾರುತದ(Mandous Cyclone) ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ(Chikkaballapura) ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಸೋಮವಾರ ಜಿಲ್ಲಾಧಿಕಾರಿ ಎನ್ ಎಂ ನಾಗರಾಜು ರಜೆ(Holiday) ಘೋಷಣೆ ಮಾಡಿ ಆದೇಶ ಪ್ರಕಟಿಸಿದ್ದಾರೆ. ಇದನ್ನೂ ಓದಿ: ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಭಾರೀ ಮಳೆಯ ಎಚ್ಚರಿಕೆ
ಕನ್ನಡದ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಸೈಕ್ಲೋನ್ ಹೊಡೆತಕ್ಕೆ ಸಿಕ್ಕು ತತ್ತರಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ತಾವು ಎದುರಿಸಿದ ಸೈಕ್ಲೋನ್ ರಾಡಾರ್ ಸಿನಿಮಾದ ಸೈಕ್ಲೋನ್ ಸುತ್ತುವ ಮಧ್ಯ ಭಾಗದಲ್ಲಿ ಇದ್ದೇವೆ ಎನ್ನುವಂತೆ ಭಾಸವಾಯಿತು ಎಂದು ಅವರು ಬರೆದುಕೊಂಡಿದ್ದಾರೆ. ಜೊತೆಗೆ ಸಿನಿಮಾದ ನಿರ್ಮಾಪಕ ದೇವರಾಜ್.ಆರ್ ಕೂಡ ಇದ್ದರು ಎಂದು ಹೇಳಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿಅವರು, ‘ತುರ್ತು ಕೆಲಸದ ಮೇಲೆ ಚೆನ್ನೈಗೆ ಬಂದಿದ್ದೆ, ವಾಪಾಸ್ಸು ಬರಲು ಟಿಕೆಟ್ ಬುಕ್ ಆಗಿದ್ದ ವಿಮಾನ ರದ್ದಾದ ಕಾರಣ ನಾನು ನಮ್ಮ ನಿರ್ಮಾಪಕರು, ರಸ್ತೆಯ ಮೂಲಕ ಬೆಂಗಳೂರು ತಲುಪಲು ನಿರ್ಧರಿಸಿ ಚೆನ್ನೈ ಸಿಟಿಯಿಂದ ಒಂದು ಐವತ್ತು ಕಿಮೀ ಬಂದು ರಸ್ತೆ ಸಾಗಲು ಸಹ ತ್ರಾಸದಾಯಕವಾದ ಸೈಕ್ಲೋನ್ ನೋಡುತ್ತಾ ಕೂತಿರುವ ಕ್ಷಣ. ರಾಡಾರ್ ಚಿತ್ರದಲ್ಲಿ ಸೈಕ್ಲೋನ್ ಸುತ್ತುವ ಮಧ್ಯ ಭಾಗದಲ್ಲಿ ನಾವಿದ್ದೇವೆ ಎಂದು ತೋರಿಸುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಹುಡುಗಿಯ ಜೊತೆ ಸಲ್ಮಾನ್ ಖಾನ್‌ಗೆ ಪ್ಯಾರ್
ಬರಹದ ಜೊತೆಗೆ ವಿಡಿಯೋ ಪೋಸ್ಟ್ ಮಾಡಿದ್ದು, ಅದನ್ನು ನೋಡಿದ ಹಲವರು ಇಂತಹ ಸಾಹಸವನ್ನು ಇನ್ನೊಮ್ಮೆ ಮಾಡಬೇಡಿ ಎಂದು ಪ್ರೀತಿಯಿಂದ ಗದರಿದ್ದಾರೆ. ಆ ಸೈಕ್ಲೋನ್ ನಿಂದ ಪಾರಾಗಿ ಬಂದಿರುವ ಮಂಸೋರೆ ಮತ್ತು ನಿರ್ಮಾಪಕರು ಸುರಕ್ಷಿತವಾಗಿ ಮನೆ ತಲುಪಿದ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ವಿಡಿಯೋ ವೀಕ್ಷಿಸಿದ ಹಲವರು ಆತಂಕವನ್ನು ವ್ಯಕ್ತಪಡಿಸುವ ಮೂಲಕ ಸುರಕ್ಷಿತವಾಗಿ ಮನೆ ತಲುಪಿ ಎಂದು ಹಾರೈಸಿದ್ದರು.
Live Tv
[brid partner=56869869 player=32851 video=960834 autoplay=true]
ನವದೆಹಲಿ: ನೈಋತ್ಯ ಹಾಗೂ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮಾಂಡೌಸ್ ಚಂಡಮಾರುತ ತೀವ್ರಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ ಉತ್ತರ ತಮಿಳುನಾಡು, ಪುದುಚೇರಿ ಹಾಗೂ ದಕ್ಷಿಣ ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಭಾರಿ ಮಳೆಯ ಎಚ್ಚರಿಕೆಯನ್ನು ನೀಡಿದೆ.
ಹವಾಮಾನ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ಮಾಂಡೌಸ್ ಚಂಡಮಾರುತ ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸಲಿದ್ದು, ಡಿಸೆಂಬರ್ 7 ರಂದು ಇದರ ತೀವ್ರತೆ ಹೆಚ್ಚಾಗಲಿದೆ. ಡಿಸೆಂಬರ್ 8 ರಂದು ಉತ್ತರ ತಮಿಳುನಾಡು, ಪುದುಚೇರಿ ಹಾಗೂ ಆಂಧ್ರಪ್ರದೇಶದ ಕರಾವಳಿ ಭಾಗಕ್ಕೆ ತಲುಪಲಿದ್ದು, ನೈಋತ್ಯ ಬಂಗಾಳಕೊಲ್ಲಿ ತಲುಪುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಇದನ್ನೂ ಓದಿ: ಹಿಮಾಚಲದಲ್ಲಿ ಹಾವು, ಏಣಿ ಆಟ – ಪಕ್ಷೇತರರೇ ನಿರ್ಣಾಯಕ?
ಮಾಂಡೌಸ್ ಚಂಡಮಾರುತದ ಪ್ರಭಾವದಿಂದಾಗಿ ಮುಂದಿನ 2 ದಿನಗಳ ಕಾಲ ಹಲವಾರು ರಾಜ್ಯಗಳಲ್ಲಿ ಭಾರೀ ಪ್ರಮಾಣದ ಮಳೆಯಾಗಲಿದೆ. ತಮಿಳುನಾಡಿನ ಕರಾವಳಿ ಭಾಗ, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ. ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಭಾಗ ಮತ್ತು ರಾಯಲಸೀಮಾದ ಅಕ್ಕ ಪಕ್ಕದ ಪ್ರದೇಶಗಳಲ್ಲಿ ಗುರುವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮಾಹಿತಿ ನೀಡಿದೆ. ಇದನ್ನೂ ಓದಿ: 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ – ಗುಜರಾತ್‌ನಲ್ಲಿ ದಾಖಲೆ ಬರೆಯುತ್ತಾ ಬಿಜೆಪಿ?
Deep Depression over Southwest and adjoining Southeast Bay of Bengal intensified into a Cyclonic Storm “Mandous” pronounced as “Man-Dous” (Cyclone Alert for north Tamilnadu, Puducherry and south Andhra Pradesh coasts): Yellow Message. pic.twitter.com/myeuUnZ1if
— India Meteorological Department (@Indiametdept) December 7, 2022
ಡಿಸೆಂಬರ್ 10ರ ವರೆಗೂ ಭಾರೀ ಮಳೆ ಮುಂದುವರಿಯಲಿದ್ದು, ಚಂಡಮಾರುತದ ಪ್ರಭಾವದಿಂದಾಗಿ ಭಾರೀ ಗಾಳಿಯೂ ಬೀಸಲಿದೆ ಎಂದು ತಿಳಿಸಿದೆ.
Live Tv
[brid partner=56869869 player=32851 video=960834 autoplay=true]
ಚಾಮರಾಜನಗರ: ಜಿಲ್ಲೆಯಲ್ಲಿರುವ ಜಲಾಶಯಗಳು ಭರ್ತಿಯಾಗೋದೆ ತಮಿಳುನಾಡಿನಲ್ಲಿ ಉತ್ತಮ ಮಳೆಯಾದ್ರೆ. ಅಸನಿ ಚಂಡಮಾರುತದ ಎಫೆಕ್ಟ್‌ನಿಂದಾಗಿ ತಮಿಳುನಾಡಿನ ದಿಂಬಂ, ತಾಳವಾಡಿಯಲ್ಲಿ ಉತ್ತಮ ಮಳೆ ಬಿದ್ದಿದೆ. ಈ ಹಿನ್ನೆಲೆ ಹಲವು ದಶಕದ ಬಳಿಕ ಅಕ್ಟೋಬರ್, ನವೆಂಬರ್‌ನಲ್ಲಿ ಭರ್ತಿಯಾಗ್ತಿದ್ದ ಅವಳಿ ಜಲಾಶಯಗಳು ಮೇ ನಲ್ಲೇ ಭರ್ತಿಯಾಗಿದೆ.
ಚಾಮರಾಜನಗರದ ಸುವರ್ಣಾವತಿ, ಚಿಕ್ಕಹೊಳೆ ಜಲಾಶಯ ಹಿಂದೆಲ್ಲಾ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಡ್ಯಾಂಗಳು ಭರ್ತಿಯಾಗುತ್ತಿದ್ದವು. ಆದರೆ ಈ ವರ್ಷ ಮೇ ತಿಂಗಳಲ್ಲೇ ಡ್ಯಾಂ ಭರ್ತಿಯಾಗಿದ್ದು ಜಲ ವೈಭವ ವೀಕ್ಷಣೆಗೆ ಸಾರ್ವಜನಿಕರು ಬರುತ್ತಿದ್ದಾರೆ. ಕರ್ನಾಟಕಕ್ಕೆ ಸೇರಿರುವ ಬೇಡಗುಳಿ, ತಮಿಳುನಾಡಿನ ದಿಂಬಂ, ಹಾಸನೂರು ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಜಲಾಶಯಗಳಿಗೆ ಜೀವಕಳೆ ತಂದಿದೆ. ಸುವರ್ಣಾವತಿ ಜಲಾಶಯದ ನೀರು ಸಂಗ್ರಹಣದ ಗರಿಷ್ಠ ಮಟ್ಟ 2,455 ಅಡಿ. ಎರಡು ಅಡಿ ಬಾಕಿಯಿದ್ದು, ಬಹುತೇಕ ಭರ್ತಿ ಹಂತದಲ್ಲಿದೆ. ಅದೇ ರೀತಿ ಚಿಕ್ಕಹೊಳೆ 2,449 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು ಭರ್ತಿಯಾಗಿದೆ. ಸುವರ್ಣಾವತಿ ಜಲಾಶಯ 6,400 ಎಕರೆ ಹಾಗೂ ಚಿಕ್ಕಹೊಳೆ 4,000 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಅಸನಿ ಚಂಡಮಾರುತದಿಂದ ಹವಾಮಾನದಲ್ಲಿ ಉಂಟಾದ ಬದಲಾವಣೆಯಿಂದ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಮಳೆ ಸುರಿದಿದ್ದು, ಜಲಾಶಯಗಳು ನಳನಳಿಸುತ್ತಿವೆ. ಇದನ್ನೂ ಓದಿ: ಜಪಾನ್ ಯುವಕರು ಒಮ್ಮೆಯಾದರೂ ಭಾರತಕ್ಕೆ ಭೇಟಿ ನೀಡಬೇಕು: ಮೋದಿ ಆಹ್ವಾನ
ಈ ಜೋಡಿ ಜಲಾಶಯ ತುಂಬಿರುವುದರಿಂದ ಕೂಡಲೇ ರೈತರಿಗೆ ನೀರು ಹರಿಸುವಂತೆ ಒತ್ತಾಯ ಮಾಡ್ತಿದ್ದಾರೆ. ಅಲ್ಲದೇ ಕೇರಳ, ತಮಿಳುನಾಡು ಸೇರಿದಂತೆ ಎಲ್ಲೆಡೆಯಿಂದ ಪ್ರವಾಸಿಗರು ಬರುವುದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಕೊಟ್ರೆ ಆದಾಯ ಬರುತ್ತೆ. ಬರದನಾಡು ಚಾಮರಾಜನಗರದ ಅವಳಿ ಜಲಾಶಯಗಳು ಅವಧಿಗೂ ಮುಂಚೆಯೇ ತುಂಬಿದ್ರಿಂದ ರೈತರು ಕೂಡ ಖುಷಿಯಲ್ಲಿದ್ದಾರೆ. ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಣೆಯ ಗೊಂದಲಗಳಿಗೆ ಸಚಿವ ಬಿ.ಸಿ.ನಾಗೇಶ್ ತೆರೆ – ಏನಿರುತ್ತೆ, ಏನಿರಲ್ಲ?
ಅಮರಾವತಿ: ಅಸನಿ ಚಂಡಮಾರುತದ ಪ್ರಭಾವದಿಂದಾಗಿ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಸುನ್ನಪಲ್ಲಿಯ ಕರಾವಳಿ ಪ್ರದೇಶಕ್ಕೆ ಬಂಗಾರ ಬಣ್ಣದ ರಥವೊಂದು ತೇಲಿ ಬಂದಿದೆ.
ಸಮುದ್ರದಲ್ಲಿ ತೇಲುತ್ತಿದ್ದ ರಥವನ್ನು ನೋಡಿದ ಗ್ರಾಮಸ್ಥರು ಅದನ್ನು ಹಗ್ಗ ಕಟ್ಟಿ ಎಳೆದು ದಡಕ್ಕೆ ತಂದಿದ್ದಾರೆ. ಚಂಡಮಾರುತದ ತೀವ್ರತೆ ಹೆಚ್ಚಾಗಿರುವುದರಿಂದಾಗಿ ಇದು ಮಯನ್ಮಾರ್, ಮಲೇಷಿಯಾ ಅಥವಾ ಥೈಲೆಂಡ್‍ನಿಂದ ಬಂದಿರಬಹುದೆಂದು ಶಂಕಿಸಲಾಗಿದೆ.
ಈ ರಥವು ನೋಡಲು ಏಷ್ಯಾ ರಾಷ್ಟ್ರಗಳ ಮಠದ ಆಕಾರವನ್ನು ಹೊಂದಿದೆ. ಚಂಡಮಾರುತದ ಪ್ರಭಾವದಿಂದಾಗಿ ಉಂಟಾದ ಎತ್ತರದ ಅಲೆಗಳ ಕಾರಣದಿಂದಾಗಿ ರಥವು ಕರಾವಳಿಗೆ ಕೊಚ್ಚಿ ಹೋಗಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ರಥವನ್ನು ನೋಡಲು ಸುತ್ತಮುತ್ತಲಿನ ಜನರೆಲ್ಲರೂ ಸಮದ್ರದ ದಡದಲ್ಲಿ ಸೇರಿದ್ದರು. ಜೋತೆಗೆ ಈನ ರಥವನ್ನು ಕೌತುಕದಿಂದ ವೀಕ್ಷಿಸಿದರು. ಇದನ್ನೂ ಓದಿ:ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದು ಮದುವೆ ಅಂದಾಗ ಮನೆಯಿಂದ ಹೊರಹಾಕ್ದ!
#WATCH | Andhra Pradesh: A mysterious gold-coloured chariot washed ashore at Sunnapalli Sea Harbour in Srikakulam y’day, as the sea remained turbulent due to #CycloneAsani
SI Naupada says, “It might’ve come from another country. We’ve informed Intelligence & higher officials.” pic.twitter.com/XunW5cNy6O
ಈ ಬಗ್ಗೆ ಸಂತೆಬೊಮ್ಮಾಳಿ ತಹಸೀಲ್ದಾರ್ ಜೆ.ಚಲಮಯ್ಯ ಮಾತನಾಡಿ, ಯಾವುದೇ ದೇಶದಿಂದ ಬಂದಿರದಿರಬಹುದು ಅಥವಾ ಭಾರತೀಯ ಕರಾವಳಿಯಲ್ಲಿ ಎಲ್ಲೋ ಕೆಲವು ಚಲನಚಿತ್ರಗಳ ಚಿತ್ರೀಕರಣಕ್ಕಾಗಿ ರಥವನ್ನು ಬಳಸಲಾಗಿರಬಹುದು. ಇದು ಚಂಡಮಾರುತದ ಪ್ರಭಾವದಿಂದಾಗಿ ಶ್ರೀಕಾಕುಲಂ ತೀರಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ:ಎರಡೇ ದಿನದಲ್ಲಿ ಸಿಕ್ಸ್ ಪ್ಯಾಕ್ – ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು
ಶಿಲ್ಲಾಂಗ್: ಮೇಘಾಲಯದ ರಿ-ಭೋಯ್ ಜಿಲ್ಲೆಯಲ್ಲಿ ಗುರುವಾರ ಚಂಡಮಾರುತವು ಭಾರೀ ಹಾನಿಯನ್ನುಂಟು ಮಾಡಿದೆ. ಚಂಡಮಾರುತದ ಪರಿಣಾಮ ಸುಮಾರು 1000ಕ್ಕೂ ಹೆಚ್ಚು ಮನೆಗಳು ಧ್ವಂಸಗೊಂಡಿದೆ.
ಜಿಲ್ಲೆಯ 47 ಗ್ರಾಮಗಳು ಚಂಡಮಾರುತದಿಂದ ಹಾನಿಗೊಳಗಾಗಿದೆ. ಅನೇಕ ಮನೆಗಳಿಗೆ ಹಾನಿ ಉಂಟಾಗಿದೆ. ಜೊತೆಗೆ ಬಿಡಿಒ ಕಚೇರಿ, ಶಾಲೆ, ಲೋಕೋಪಯೋಗಿ ಇಲಾಖೆ ಕಚೇರಿ, ಪಶುವೈದ್ಯಕೀಯ ಕಚೇರಿಗಳು ಸೇರಿದಂತೆ ಸರ್ಕಾರಿ ಆಸ್ತಿ, ಪಾಸ್ತಿಗಳು ಚಂಡಮಾರುತದಿಂದ ನಾಶಗೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಎಸಿ ಸ್ಫೋಟ – ಓರ್ವ ಸಾವು, ಐವರಿಗೆ ಗಾಯ
ಅದೃಷ್ಟವಶಾತ್ ಚಂಡಮಾರುತದಿಂದ ಯಾವುದೇ ಸಾವು, ನೋವುಗಳು ಸಂಭವಿಸಿಲ್ಲ. ಇದೀಗ ಹಾನಿಗೊಳಗಾದ ಗ್ರಾಮಗಳಲ್ಲಿ ಜನರ ತೆರವು ಕಾರ್ಯ ಮತ್ತು ಜನರನ್ನು ಬೇರೆಡೆ ವರ್ಗಾಯಿಸುವ ಕಾರ್ಯಗಳನ್ನು ನಡೆಸಲಾಗುತ್ತಿಗುತ್ತಿದೆ. ಇನ್ನೂ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಆಯಾ ಬಿಡಿಒಗಳೊಂದಿಗೆ ತುರ್ತು ಸಭೆ ನಡೆಸಲಗುತ್ತಿದೆ. ಪರಿಸ್ಥಿತಿಯ ನಿಭಾಯಿಸ ಅವಲೋಕನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ರಷ್ಯಾದಿಂದ ಬಂತು ಎಸ್ 400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ
ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಮೀನುಗಾರಿಕೆ, ಪ್ರವಾಸೋದ್ಯಮ ಹಾಗೂ ನೌಕಾಯಾನ ಚಟುವಟಿಕೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.
ಮಾರ್ಚ್ 21ರಂದು ಚಂಡಮಾರುತ ದ್ವೀಪಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತುರ್ತು ಹಾಗೂ ರಕ್ಷಣಾ ಕಾರ್ಯಗಳ ಸಿದ್ಧತೆಗಳನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.
ರಕ್ಷಣಾ ಕಾರ್ಯಕ್ಕಾಗಿ ಸೇನೆ, ವಾಯುಪಡೆ ಹಾಗೂ ನೌಕಾಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಎನ್‌ಡಿಆರ್‌ಎಫ್‌ನ ಒಂದು ತುಕಡಿ ಈಗಾಗಲೇ ಪೋರ್ಟ್ಬ್ಲೇರ್‌ನಲ್ಲಿ ಠಿಕಾಣಿ ಹೂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಮಾರಕ ಟಿಕ್ ವೈರಸ್ ಪತ್ತೆ – ಒಮ್ಮೆ ಕಚ್ಚಿದರೆ ಸಾವು ಖಚಿತ
ವರ್ಷದ ಮೊದಲ ಚಂಡಮಾರುತ `ಅಸಾನಿ’ ಮಾರ್ಚ್ 21 ರಂದು ಮಧ್ಯ ಬಂಗಾಳ ಕೊಲ್ಲಿಯಲ್ಲಿ ಆರಂಭವಾಗುವ ಸಾಧ್ಯತೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಚಂಡಮಾರುತವು ಭಾರತದ ಕರಾವಳಿಯನ್ನು ದಾಟುವ ಸಾಧ್ಯತೆಯಿಲ್ಲದಿದ್ದರೂ, ಭಾರೀ ಮಳೆ ಮತ್ತು ಬಲವಾದ ಗಾಳಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ ಅಪ್ಪಳಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಅಂಡಮಾನ್‌ಗೆ ಅಪ್ಪಳಿಸಿ ನಂತರ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಕಡೆಗೆ ಚಲಿಸಲಿದೆ ಎಂದು ಮುನ್ಸೂಚನೆ ನಿಡಿದೆ. ಇದನ್ನೂ ಓದಿ: ಮಿಂಚುಳ್ಳಿ ಲೋಕದಲ್ಲೊಂದು ಪಯಣ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾರ್ಚ್ 16ರಿಂದ 20ರ ವರೆಗೆ ಮಳೆಯ ಆರ್ಭಟ ಉಂಟಾಗಲಿದೆ ಎಂದು ಭಾರತದ ಹವಾಮಾನ ಇಲಾಖೆ ಈ ಹಿಂದೆಯೇ ಮುನ್ಸೂಚನೆ ನೀಡಿತ್ತು. ಅಂತೆಯೇ ಮಾರ್ಚ್ 19ರಂದು ಧಾರಾಕಾರ ಮಳೆಯಾಗಿ ಸಾಕಷ್ಟು ಹಾನಿಯುಂಟುಮಾಡಿದೆ. ಮಾರ್ಚ್ 20ರಂದು ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಹೇಳಿದೆ.
ನವದೆಹಲಿ: ಉತ್ತರ ಗುಜರಾತ್, ಉತ್ತರ ಮತ್ತು ವಾಯುವ್ಯ ಮಹಾರಾಷ್ಟ್ರದಲ್ಲಿ ಇಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯಿಂದಾಗಿ ಪಾಲ್ಘರ್, ಥಾಣೆ, ಮುಂಬೈನಲ್ಲಿ ಹೆಚ್ಚು ಹಾನಿಯಾಗುವ ಸಾಧ್ಯತೆ ಇದೆ. ಡಿ.4ರಂದು ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗೆ ಚಂಡಮಾರುತ ಅಪ್ಪಳಿಸಲಿದೆ ಎಂದು ತಿಳಿಸಿದೆ.
ಮುಂದಿನ 12 ಗಂಟೆಗಳಲ್ಲಿ ಅಂಡಮಾನ್ ಸಮುದ್ರದಲ್ಲಿ ಕಡಿಮೆ ಒತ್ತಡ ಸೃಷ್ಟಿಯಾಗಲಿದೆ. ಇದು ವಾಯುಭಾರ ಕುಸಿತಕ್ಕೆ ಕಾರಣವಾಗಿ 24 ಗಂಟೆಗಳಲ್ಲಿ ಬಂಗಾಳಕೊಲ್ಲಿಯ ಮಧ್ಯ ಭಾಗದಲ್ಲಿ ಚಂಡಮಾರುತ ತೀವ್ರಗೊಳ್ಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: ಶಾಲೆಯಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ- ಮೂರು ಮಕ್ಕಳು ಸಾವು
ಡಿ.4 ರಂದು ಬೆಳಿಗ್ಗೆ ಚಂಡಮಾರುತವು ಉತ್ತರ ಆಂಧ್ರ ಪ್ರದೇಶ ಮತ್ತು ಒಡಿಶಾದ ಕರಾವಳಿ ಪ್ರದೇಶಗಳನ್ನು ತಲುಪಲಿದೆ. ಹೀಗಾಗಿ ಒಡಿಶಾದ ಹಲವೆಡೆ ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳು, ಆಂಧ್ರಪ್ರದೇಶದ ಉತ್ತರ ಕರಾವಳಿಯ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ – ಇಂದಿನಿಂದ ಆಟೋ ದರ ಕಾಸ್ಟ್ಲಿ
ಡಿ.5 ಮತ್ತು 6 ರಂದು ಈಶಾನ್ಯ ರಾಜ್ಯಗಳಲ್ಲೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಬೆಂಗಳೂರು: ಭಾರೀ ಮಳೆಯಿಂದ ಈಗಾಗಲೇ ಕಂಗೆಟ್ಟಿರುವ ರಾಜ್ಯಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ನವೆಂಬರ್ 26ರಿಂದ ಮೂರು ದಿನ ಬೆಂಗಳೂರು ಸೇರಿ ಹಲವೆಡೆ ಮತ್ತೆ ವರುಣಾರ್ಭಟದ ಮುನ್ಸೂಚನೆ ಸಿಕ್ಕಿದೆ.
ಸಮಾಧಾನದ ವಿಚಾರ ಅಂದ್ರೆ ನಾಳೆಯಿಂದ ಮೂರು ದಿನ ವರುಣದೇವ ರಾಜ್ಯದ ಜನತೆಗೆ ಒಂದಿಷ್ಟು ಬಿಡುವು ಕೊಡಲಿದ್ದಾನೆ. ಆದರೆ ಬೆಂಗಳೂರಲ್ಲಿ ಮಾತ್ರ ತುಂತುರು ಮಳೆ ಮುಂದುವರಿಯುವ ಸಾಧ್ಯತೆ ಇದೆ. ಪ್ರಸಕ್ತ ತಿಂಗಳಲ್ಲಿ ಈವರೆಗೂ ಬೆಂಗಳೂರಿನಲ್ಲಿ ವಾಡಿಕೆಗಿಂತ 4 ಪಟ್ಟು ಹೆಚ್ಚು ಮಳೆಯಾಗಿದೆ. ನವೆಂಬರ್ ತಿಂಗಳಲ್ಲಿ 57 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಬರೋಬ್ಬರಿ 267 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಪರಿಷತ್ ಚುನಾವಣೆ- ಕಾಂಗ್ರೆಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ
ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಅಪಾರ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಜನ ರೋಸಿ ಹೋಗಿದ್ದಾರೆ. ಈ ನಡುವೆ ರಾಜ್ಯಕ್ಕೆ ಮತ್ತೊಂದು ಸೈಕ್ಲೋನ್ ಆವರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನವೆಂಬರ್ 26ಕ್ಕೆ ರಾಜ್ಯದಲ್ಲಿ ಮತ್ತೊಂದು ಸೈಕ್ಲೋನ್ ಬರಲಿದ್ದು, ಬಂಗಾಳಕೊಲ್ಲಿಯಲ್ಲಿ ಉಂಟಾಗಲಿರುವ ವಾಯುಭಾರ ಕುಸಿತ ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ದಕ್ಷಿಣ ಒಳನಾಡಿನ ಬಹುತೇಕ ಕಡೆ ಮೂರ್ನಾಲ್ಕು ದಿನ ಮಳೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಅನಾಹುತ – ರಾಜಕಾಲುವೆ ಒಡೆದು ರಸ್ತೆ, ಮನೆಗಳಿಗೆ ನುಗ್ಗಿದ ನೀರು
ವಾಯುಭಾರ ಕುಸಿತದಿಂದಾಗಿ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಚಾಮರಾಜನಗರ, ತುಮಕೂರು ಜಿಲ್ಲೆಗಳಲ್ಲಿ ಕೂಡ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಸೂಚಿಸಲಾಗಿದೆ. ಸದ್ಯದ ಮಳೆ 25ಕ್ಕೆ ಕ್ಷೀಣಿಸಲಿದ್ದು, ಇದಾದ ಬೆನ್ನಲ್ಲೇ ಒಂದೇ ದಿನಕ್ಕೆ ರಾಜ್ಯಕ್ಕೆ ಮತ್ತೊಂದು ಚಂಡಮಾರುತ ಬರುವ ಸಾಧ್ಯತೆಯಿದೆ. ಇದನ್ನೂ ಓದಿ: ರಾಜ್ಯದಲ್ಲಿ ಅಕಾಲಿಕ ಪ್ರವಾಹದಿಂದ ಅಪಾರ ನಷ್ಟ – ಮಳೆಗೆ 24 ಮಂದಿ ಬಲಿ
ಈಗಾಗಲೇ ಮಳೆಯಿಂದಾಗಿ ರಾಜ್ಯದಲ್ಲಿ ಅಪಾರ ಬೆಳೆ, ಮನೆ ಹಾಗೂ ಪ್ರಾಣ ಹಾನಿ ಹೀಗೆ ಅನೇಕ ನಷ್ಟ ಸಂಭವಿಸಿದ್ದು, ಜನ ಕಂಗಲಾಗಿದ್ದು ಚಂಡಮಾರುತದಿಂದ ಮತ್ತಷ್ಟು ಸಮಸ್ಯೆಯಾಗಲಿದೆ.