Tag: cyclone michaung

  • ‘ಮಿಚಾಂಗ್’‌ ಎಫೆಕ್ಟ್‌; 5,060 ಕೋಟಿ ಪರಿಹಾರ ನೀಡಿ – ಪ್ರಧಾನಿಗೆ ತ.ನಾಡು ಸಿಎಂ ಪತ್ರ

    ‘ಮಿಚಾಂಗ್’‌ ಎಫೆಕ್ಟ್‌; 5,060 ಕೋಟಿ ಪರಿಹಾರ ನೀಡಿ – ಪ್ರಧಾನಿಗೆ ತ.ನಾಡು ಸಿಎಂ ಪತ್ರ

    ಚೆನ್ನೈ: ತಮಿಳುನಾಡಿನಲ್ಲಿ (Tamil Nadu) ಮಿಚಾಂಗ್‌ ಚಂಡಮಾರುತದಿಂದ (Cyclone Michaung) ಅಪಾರ ಪ್ರಮಾಣದ ಹಾನಿಯಾಗಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ (M.K.Stalin) ಬುಧವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಪರಿಹಾರಕ್ಕೆ ಮನವಿ ಮಾಡಿದ್ದಾರೆ.

    ತಕ್ಷಣದ ಮಧ್ಯಂತರ ಪರಿಹಾರವಾಗಿ 5,060 ಕೋಟಿ ರೂ. ನೀಡುವಂತೆ ಪ್ರಧಾನಿಗೆ ಕೇಳಿಕೊಂಡಿದ್ದಾರೆ. ರಾಜ್ಯದಲ್ಲಿ ಚಂಡಮಾರುತದಿಂದ ಆಗಿರುವ ಹಾನಿಯನ್ನು ಪರಿಶೀಲಿಸಲು ಕೇಂದ್ರ ತಂಡವನ್ನು ಕಳುಹಿಸುವಂತೆ ಸಿಎಂ ಸ್ಟಾಲಿನ್ ಪ್ರಧಾನಿಗೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮಿಚಾಂಗ್‌ ಚಂಡಮಾರುತ ಅಬ್ಬರ, ಕಾಳಹಸ್ತಿಗೆ ಜಲದಿಗ್ಬಂಧನ – ಕರ್ನಾಟಕದಲ್ಲೂ ಮುಂದಿನ 5 ದಿನ ಮಳೆ ಸಾಧ್ಯತೆ

    ದೆಹಲಿಯಲ್ಲಿರುವ ಡಿಎಂಕೆ ಸಂಸದ ಟಿಆರ್ ಬಾಲು ಅವರು ಪ್ರಧಾನಿ ಮೋದಿಯವರಿಗೆ ಖುದ್ದಾಗಿ ಪತ್ರವನ್ನು ನೀಡಲಿದ್ದಾರೆ. ಬುಧವಾರ ಬೆಳಗ್ಗೆ ತಮಿಳುನಾಡು ಸಿಎಂ ಕೂಡ ಚಂಡಮಾರುತ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದ್ದಾರೆ.

    ನಮ್ಮನ್ನು ಸುತ್ತುವರಿದಿರುವ ಮಿಚಾಂಗ್ ಚಂಡಮಾರುತದ ದುಷ್ಪರಿಣಾಮಗಳನ್ನು ತ್ವರಿತವಾಗಿ ನಿರ್ವಹಿಸಲು ಸಚಿವರು, ಅಧಿಕಾರಿಗಳು, ಪೊಲೀಸರು, ನೈರ್ಮಲ್ಯ ಕಾರ್ಯಕರ್ತರು ಮತ್ತು ಕಾರ್ಪೊರೇಷನ್ ಕಾರ್ಮಿಕರನ್ನೊಳಗೊಂಡ ಇಡೀ ಸರ್ಕಾರ ಶ್ರಮಿಸುತ್ತಿದೆ. ಇನ್ನೂ ಅನೇಕ ಸಹೋದ್ಯೋಗಿಗಳು ತಕ್ಷಣ ಪರಿಹಾರಕ್ಕೆ ಕೈಜೋಡಿಸಬೇಕು ಎಂದು ನಾನು ವಿನಂತಿಸುತ್ತೇನೆ. ಕ್ಷೇತ್ರದಲ್ಲಿ ಸಹಾಯ ಮಾಡುವ ಕ್ಲಬ್‌ನ ಸದಸ್ಯರೊಂದಿಗೆ ಕೆಲಸ ಮಾಡಿ. ಪೀಡಿತ ಪ್ರದೇಶಗಳ ಸದಸ್ಯರು ಬೇಗನೆ ಬನ್ನಿ ಎಂದು ಎಕ್ಸ್‌ನಲ್ಲಿ ಸ್ಟಾಲಿನ್‌ ಪೋಸ್ಟ್‌ ಹಾಕಿದ್ದಾರೆ. ಇದನ್ನೂ ಓದಿ: ವಿಭಜನೆಯ ಸಿದ್ಧಾಂತ 70 ವರ್ಷದಿಂದ ಬಂದ ಅಭ್ಯಾಸ, ಜನ ಈಗ ಎಚ್ಚೆತ್ತಿದ್ದಾರೆ: ಕಾಂಗ್ರೆಸ್ಸನ್ನು ಕುಟುಕಿದ ಮೋದಿ

    ಮಿಚಾಂಗ್ ಚಂಡಮಾರುತದಿಂದ ಉಂಟಾದ ಭಾರೀ ಮಳೆಯ ನಂತರ ಚೆನ್ನೈನಲ್ಲಿ ಪ್ರವಾಹವು ಇಲ್ಲಿಯವರೆಗೆ 17 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

    ಅಡ್ಯಾರ್ ನದಿ ತೀರದ ತಗ್ಗು ಪ್ರದೇಶಗಳಲ್ಲಿ ವಾಸಿಸುವವರಿಗೆ ಗ್ರೇಟರ್ ಚೆನ್ನೈ ಕಾರ್ಪೊರೇಷನ್‌ನ ಸಮನ್ವಯದೊಂದಿಗೆ ಜಿಸಿಪಿ ಸಾರ್ವಜನಿಕ ವಿಳಾಸ ವ್ಯವಸ್ಥೆಯ ಮೂಲಕ ಪ್ರವಾಹ ಎಚ್ಚರಿಕೆ ಪ್ರಕಟಣೆಗಳನ್ನು ಮಾಡುತ್ತಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

    ನಗರದಲ್ಲಿ ಪ್ರವಾಹದಂತೆ ಕೂಡಿರುವ ಮಳೆನೀರನ್ನು ಹೊರಹಾಕುವ ಪ್ರಯತ್ನ ನಡೆಯುತ್ತಿದೆ. ತಮಿಳುನಾಡಿನ ಕೊಯಮತ್ತೂರು ಪಾಲಿಕೆಯು, ಪ್ರವಾಹ ಪರಿಹಾರ ಕಾರ್ಯಾಚರಣೆಗಳಿಗಾಗಿ ಚೆನ್ನೈಗೆ ಹನ್ನೆರಡು 41-HP ಮೋಟಾರ್‌ಗಳನ್ನು ಕಳುಹಿಸಿದೆ.

  • ಮಿಚಾಂಗ್‌ ಚಂಡಮಾರುತ ಅಬ್ಬರ, ಕಾಳಹಸ್ತಿಗೆ ಜಲದಿಗ್ಬಂಧನ – ಕರ್ನಾಟಕದಲ್ಲೂ ಮುಂದಿನ 5 ದಿನ ಮಳೆ ಸಾಧ್ಯತೆ

    ಮಿಚಾಂಗ್‌ ಚಂಡಮಾರುತ ಅಬ್ಬರ, ಕಾಳಹಸ್ತಿಗೆ ಜಲದಿಗ್ಬಂಧನ – ಕರ್ನಾಟಕದಲ್ಲೂ ಮುಂದಿನ 5 ದಿನ ಮಳೆ ಸಾಧ್ಯತೆ

    ಚೆನ್ನೈ: ಭಾರೀ ನಷ್ಟ ಉಂಟು ಮಾಡಿದ ತೀವ್ರ ಸ್ವರೂಪದ ಮಿಚಾಂಗ್‌ ಚಂಡಮಾರುತ (Cyclone Michaung) ಆಂಧ್ರದ ಬಾಪಟ್ಲಾ ಸಮೀಪ ತೀರವನ್ನು ತಾಕಿದೆ. ತೂಫಾನ್ ಪರಿಣಾಮ ಕೋಸ್ತಾ ಆಂಧ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

    ರಸ್ತೆಗಳು ಮಾತ್ರವಲ್ಲದೇ ಕೆಲ ಊರುಗಳೂ ಜಲಾವೃತವಾಗಿವೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ತಿರುಮಲ ತಿರುಪತಿ (Tirumala Temple) ಜಲಮಯವಾಗಿದ್ದು, ಜಲಪಾತಗಳಿಗೆ ಜೀವಕಳೆ ಪಡೆದಿವೆ. ಕಾಳಹಸ್ತಿ ಜಲದಿಗ್ಬಂಧನದಲ್ಲಿದೆ. ಸಮುದ್ರದಲ್ಲಿ ಅಲೆಗಳಂತೂ ಎರಡು ಮೀಟರ್ ಎತ್ತರದವರೆಗೂ ಏಳುತ್ತಿದ್ದವು. ಮತ್ತೊಂದ್ಕಡೆ, ಚೆನ್ನೈ (Chennai Rain) ಮೇಲೆ ಮಿಚಾಂಗ್‌ ಪ್ರಭಾವ ಕಡಿಮೆ ಆಗಿದೆ. ಆದ್ರೆ ಕೆಲವು ಕಡೆ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಇದನ್ನೂ ಓದಿ: ಹಿಂದೂ ಯುವಕನ ಕೈ ಹಿಡಿದ ಮುಸ್ಲಿಂ ಯುವತಿ – ಠಾಣೆ ಎದುರೇ ಹಾರ ಬದಲಿಸಿದ ಜೋಡಿ

    ನಟ ವಿಶಾಲ್ (Actor Vishal) ನಿವಾಸ ಜಲಾವೃತವಾಗಿದೆ. ವಿಶಾಲ್ ಮನೆಯಲ್ಲಿದ್ದ ನಟ ಅಮೀರ್ ಖಾನ್‌ರನ್ನು ರಕ್ಷಣಾ ಪಡೆಗಳು ರಕ್ಷಿಸಿವೆ. ಇಂದು (ಡಿ.6) ಸಹ ಆಂಧ್ರ, ತಮಿಳುನಾಡು, ಒಡಿಶಾದಲ್ಲಿ ಭಾರೀ ಮಳೆ ಆಗುವ ಮುನ್ಸೂಚನೆ ಇದೆ. ಒಡಿಶಾ ಕೂಡ ಅಲರ್ಟ್ ಆಗಿದ್ದು, ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ 26 ಜನ ಮೀನುಗಾರರ ರಕ್ಷಣೆ

    ರಾಜ್ಯದಲ್ಲಿ 5 ದಿನ ಮಳೆ ಸಾಧ್ಯತೆ: ಕರ್ನಾಟಕದ ಹಲವು ಭಾಗದಲ್ಲಿ ಮೂರ್ನಾಲ್ಕು ದಿನದಿಂದ ಚಳಿಯ ವಾತಾವರಣವಿದೆ. ಮುಂದಿನ ಐದು ದಿನಗಳ ಕಾಲ ಅಲ್ಲಲ್ಲಿ ಮಳೆಯಾಗುವ (Rain In Karnataka) ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಪಾಂಡಿಚೇರಿ ರಾಜ್ಯಗಳಲ್ಲಿ ಆಗುತ್ತಿರುವ ಮಿಚಾಂಗ್‌ ಚಂಡಮಾರುತದ ಪ್ರಭಾವ ಕರ್ನಾಟಕದ ಮೇಲೆ ಆಗುವ ಸಾಧ್ಯತೆಗಳಿಲ್ಲ.

    ಆದಾಗ್ಯೂ ಕರ್ನಾಟಕದ ಕರಾವಳಿ ಜಿಲ್ಲೆಗಳೂ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಡಿಸೆಂಬರ್‌ 10ರವರಗೆ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಡಿಸೆಂಬರ್‌ 6ರ ಬುಧವಾರ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರವಾಗಿ ಮಳೆಯಾಗುವ ಸಾಧ್ಯತೆಗಳಿವೆ. ಕರಾವಳಿಯಲ್ಲಿ ಮಾತ್ರ ಒಣ ಹವೆಯ ವಾತಾವರಣ ಕಂಡು ಬರಲಿದೆ. ಇದನ್ನೂ ಓದಿ: ವಿಭಜನೆಯ ಸಿದ್ಧಾಂತ 70 ವರ್ಷದಿಂದ ಬಂದ ಅಭ್ಯಾಸ, ಜನ ಈಗ ಎಚ್ಚೆತ್ತಿದ್ದಾರೆ: ಕಾಂಗ್ರೆಸ್ಸನ್ನು ಕುಟುಕಿದ ಮೋದಿ  

    ಡಿಸೆಂಬರ್‌ 7 ರ ಗುರುವಾರದಂದು ಉತ್ತರ ಒಳನಾಡಿನ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರವಾಗಿ ಮಳೆಯಾಗಬಹುದು. ಅದೇ ರೀತಿ ಕರಾವಳಿ ಜಿಲ್ಲೆಯಲ್ಲಿ ಮಾತ್ರ ಮಳೆ ಸಾಧ್ಯತೆ ಕಡಿಮೆ. ಈ ಭಾಗದಲ್ಲಿ ಒಣ ಹವೆಯ ವಾತಾವರಣ ಇರುವ ಸಾಧ್ಯತೆಗಳು ಅಧಿಕವಾಗಿವೆ.

    ಡಿಸೆಂಬರ್‌ 8ರ ಶುಕ್ರವಾರದಂದು ಕರ್ನಾಟಕ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಜಿಲ್ಲೆಗಳು, ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ. ಇದೆ. ಎಲ್ಲೆಡೆ ಒಣ ಹವೆಯ ವಾತಾವರಣ ಇರಲಿದೆ.

    ಡಿಸೆಂಬರ್‌ 9ರ ಶನಿವಾರದಂದು ಕರಾವಳಿ ಭಾಗದ ಮೂರೂ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರವಾದ ಮಳೆಯಾಗುವ ಸಾಧ್ಯತೆಗಳಿವೆ. ಅದೇ ರೀತಿ ಬೆಂಗಳೂರು, ಮೈಸೂರು,ತುಮಕೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗಬಹುದು. ಆದರೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶನಿವಾರ ಒಣಹವೆಯ ವಾತಾವರಣ ಕಂಡು ಬರಲಿದೆ.

    ಡಿಸೆಂಬರ್‌ 10ರ ಭಾನುವಾರದಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಆದರೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

  • ಬುಧವಾರ ನಡೆಯಬೇಕಿದ್ದ INDIA ಒಕ್ಕೂಟದ ಸಭೆ ಮುಂದೂಡಿಕೆ

    ಬುಧವಾರ ನಡೆಯಬೇಕಿದ್ದ INDIA ಒಕ್ಕೂಟದ ಸಭೆ ಮುಂದೂಡಿಕೆ

    ನವದೆಹಲಿ: ಪ್ರತಿ ಪಕ್ಷದ ನಾಯಕರ ಅಲಭ್ಯತೆ ಹಿನ್ನಲೆ ಬುಧವಾರ ನಡೆಯಬೇಕಿದ್ದ INDIA ಒಕ್ಕೂಟದ ಸಭೆಯನ್ನು ಮುಂದೂಡಲಾಗಿದೆ.

    ಪಂಚರಾಜ್ಯಗಳ ಚುನಾವಣೆ ಹಿನ್ನಲೆ ಒಕ್ಕೂಟದ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಫಲಿತಾಂಶ ಪ್ರಕಟವಾದ ಬಳಿಕ ಲೋಕಸಭೆ ಚುನಾವಣೆ (Lok Sabha Election) ಬಗ್ಗೆ ಚರ್ಚಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ದೆಹಲಿಯಲ್ಲಿ ಸಭೆ ನಡೆಸಲು ನಿರ್ಧರಿಸಿದ್ದರು‌.

    ಮಿಚಾಂಗ್‌ ಚಂಡಮಾರುತದಿಂದ (Cyclone Michaung) ಚೆನ್ನೈ ವಿಮಾನ ನಿಲ್ದಾಣವನ್ನು ಮುಚ್ಚಿದ್ದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಅವರು ದೆಹಲಿಗೆ ಭೇಟಿ ನೀಡಲು ಮತ್ತು ಸಭೆಗೆ ಬರಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

    ನಿತೀಶ್ ಕುಮಾರ್ ಅವರು ಅಸ್ವಸ್ಥರಾಗಿದ್ದು, ಪಶ್ಚಿಮ‌ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ ಸಭೆಗೆ ಗೈರಾಗುವ ಬಗ್ಗೆ‌‌ ಮೊದಲೇ ಮಾಹಿತಿ‌ ನೀಡಿದ್ದರು. ಇದನ್ನೂ ಓದಿ: ಹಾಡಹಗಲೇ ಕರ್ಣಿ ಸೇನಾ ಮುಖ್ಯಸ್ಥನ ಗುಂಡಿಕ್ಕಿ ಕೊಲೆ

    ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಕೂಡಾ ಸಭೆಯಲ್ಲಿ ಭಾಗಿಯಾಗಿರುವ ಖಚಿತ ಪಡಿಸಿದ್ದರು. ಆಮ್ ಆದ್ಮಿ ಪಕ್ಷವು ಸಭೆಯಲ್ಲಿ ಭಾಗಿಯಾಗುವ ಬಗ್ಗೆ ಯಾವುದೇ ದೃಢೀಕರಣ ನೀಡಿರಲಿಲ್ಲ.

    ಪ್ರಮುಖ ನಾಯಕರ ಅಲಭ್ಯತೆ ಹಿನ್ನಲೆ ಸಭೆಯನ್ನು ಮುಂದೂಡಲು ನಿರ್ಧರಿಸಿದ್ದು ಮುಂದಿನ ಎರಡು ವಾರಗಳಲ್ಲಿ ಮತ್ತೆ ಸಭೆಗೆ ದಿನಾಂಕ‌ ನಿಗದಿ ಮಾಡಲು ಕಾಂಗ್ರೆಸ್‌ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ. ಸಭೆ ರದ್ದಾದ ಹಿನ್ನಲೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ತಮ್ಮ ವಿಮಾನ ಟಿಕೆಟ್‌ಗಳನ್ನು ರದ್ದುಗೊಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

     

    ಕಡೆಯ ಒಕ್ಕೂಟದ ಸಭೆಯನ್ನು ಶಿವಸೇನಾ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಆಯೋಜಿಸಿದ್ದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಐದು ರಾಜ್ಯಗಳ ಮುಖ್ಯಮಂತ್ರಿಗಳು ಹಾಜರಿದ್ದರು. ಎರಡು ದಿನಗಳ ಚರ್ಚೆಗಳಲ್ಲಿ, ಮೈತ್ರಿಯು ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಪ್ರಮುಖ ಚುನಾವಣಾ ವಿಷಯಗಳನ್ನು ಚರ್ಚಿಸಿ ಸಮನ್ವಯ ಸಮಿತಿಯನ್ನು ರಚಿಸಿತು. ಲೋಕಸಭಾ ಚುನಾವಣೆಯಲ್ಲಿ ಸಾಧ್ಯವಾದಷ್ಟು ಒಟ್ಟಾಗಿ ಹೋರಾಡಲು ಮೂರು ಅಂಶಗಳ ನಿರ್ಣಯವನ್ನು ಅಂಗೀಕರಿಸಿತು.

  • ಪ್ರವಾಹ ಪೀಡಿತ ಜನರ ಜೊತೆ ನಿಂತುಕೊಂಡ ನಟ ಸೂರ್ಯ

    ಪ್ರವಾಹ ಪೀಡಿತ ಜನರ ಜೊತೆ ನಿಂತುಕೊಂಡ ನಟ ಸೂರ್ಯ

    ಮಿಚಾಂಗ್ ಚಂಡಮಾರುತಕ್ಕೆ ಚೆನ್ನೈ ತತ್ತರಿಸಿ ಹೋಗಿದೆ. ತಮಿಳು ನಾಡಿನ ಸಾಕಷ್ಟು ಪ್ರದೇಶಗಳು ಜಲಾವೃತಗೊಂಡಿವೆ. ಅಲ್ಲಿನವರ ಬದುಕು ನೀರಿನಲ್ಲಿ ಮುಳುಗಿದೆ. ಇಂತಹ ಸಂದರ್ಭದಲ್ಲಿ ತಮಿಳಿನ ಹೆಸರಾಂತ ನಟರಾದ ಸೂರ್ಯ (Surya), ಕಾರ್ತಿ ಸಹಾಯ ಹಸ್ತ ಚಾಚಿದ್ದಾರೆ. ತಿರುವಳ್ಳೂರು ಜಿಲ್ಲೆ, ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ ಸೇರಿದಂತೆ ಹಲವು ಪ್ರವಾಹ ಪೀಡಿತ ಊರಿಗಳಿಗೆ ನೆರವು ನೀಡಿದ್ದಾರೆ. ಆರಂಭಿಕ ಮೊತ್ತವಾಗಿ ಹತ್ತು ಲಕ್ಷ ರೂಪಾಯಿ ನೀಡಿದ್ದು, ಇನ್ನೂ ಹೆಚ್ಚಿನ ನೆರವು ನೀಡಲಿದ್ದಾರೆ.

    ಹೇಗಿದೆ ಪರಿಸ್ಥಿತಿ?

    ಮಿಚಾಂಗ್ ಚಂಡಮಾರುತ (Cyclone Michaung) ರೌದ್ರರೂಪಕ್ಕೆ ತಮಿಳುನಾಡು (Tamilnadu), ಆಂಧ್ರದಲ್ಲಿ (Andhra Pradesh) ಭಾರೀ ಮಳೆಯಾಗಿದೆ. ಕಳೆದ 80 ವರ್ಷಗಳಲ್ಲಿ ಕಂಡು ಕೇಳರಿಯದ ಭಾರೀ ಬಿರುಗಾಳಿ ಸಹಿತ ಮಳೆಗೆ ಚೆನ್ನೈ ನಗರವಂತೂ ಪ್ರವಾಹ ಕಾರಣ ಹೆಚ್ಚು ಕಡಿಮೆ ಸ್ತಂಭಿಸಿದೆ. ಬಿಟ್ಟುಬಿಡದೇ ಸುರಿತಿರೋ ಮಳೆಯ (Rain) ಪರಿಣಾಮ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.

    ಚೆನ್ನೈನಲ್ಲಿ 5 ಮಂದಿ ಬಲಿಯಾಗಿದ್ದು, ನೀರುಪಾಲಾಗುತ್ತಿದ್ದ 20ಕ್ಕೂ ಹೆಚ್ಚು ಜನರನ್ನು ರಕ್ಷಣಾ ಪಡೆಗಳು ಕಾಪಾಡಿವೆ. ನಗರದ 14 ರೈಲ್ವೇ ಸಬ್‍ವೇಗಳು ಬಂದ್ ಆಗಿವೆ. ರೈಲು-ವಿಮಾನ-ರಸ್ತೆ ಸಂಚಾರದಲ್ಲಿ ತೀವ್ರ ವ್ಯತ್ಯಯವಾಗಿವೆ. ಚೆನ್ನೈ ಏರ್ ಪೋರ್ಟ್‍ನಲ್ಲಿ ನೀರು ಆವರಿಸಿದೆ. ಪ್ರಮುಖ ರಸ್ತೆಗಳು ಜಲಮಯವಾಗಿವೆ. ಚೆನ್ನೈ ಸಾರಿಗೆ ಬಸ್‍ಗಳು ಸಹ ರಸ್ತೆಗೆ ಇಳಿದಿಲ್ಲ. ಮನೆಗಳಿಗೂ ನೀರು ನುಗ್ಗಿದೆ. ವಾಹನಗಳು ನೀರಲ್ಲಿ ಮುಳುಗಿವೆ. ಕೋರ್ಟ್-ಕಚೇರಿ, ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯುತ್, ನೀರು ಸರಬರಾಜು ವ್ಯವಸ್ಥೆ ಅಸ್ಥವ್ಯಸ್ತವಾಗಿದೆ. ಸಾಧ್ಯವಾದಷ್ಟು ಜನ ಮನೆಗೆ ಸೀಮಿತ ಆಗಬೇಕು ಎಂದು ಸರ್ಕಾರ ಕೋರಿದೆ.

    ಕಾಂಚಿಪುರಂ, ಚೆಂಗಲ್‍ಪಟ್ಟು, ತಿರುವಳ್ಳುವರ್ ಜಿಲ್ಲೆಗಳಲ್ಲೂ ವ್ಯಾಪಕ ಮಳೆ ಆಗುತ್ತಿದೆ. ಆಂಧ್ರದ ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ಆಗುತ್ತಿದೆ. ತಿರುಮಲದಲ್ಲಿ ಮಳೆ ಕಾರಣ ಭಕ್ತರು ಪರದಾಡಿದರು. ಇಂದು ಮಧ್ಯಾಹ್ನ 12 ಗಂಟೆಗೆ ಮಿಚೌಂಗ್ ಚಂಡಮಾರುತ ನಿಜಾಂಪಟ್ಟಣಂ ಬಳಿ ತೀರ ದಾಟಲಿದೆ. ನಂತರ ಕೋಸ್ತಾ ಆಂಧ್ರ ತೀರಕ್ಕೆ ಸಮನಾಂತವಾರವಾಗಿ ಚಲಿಸಲಿದೆ.

     

    ಸದ್ಯ ಚೆನ್ನೈನಿಂದ 90 ಕಿಲೋಮೀಟರ್ ದೂರದಲ್ಲಿ ಚಲಿಸುತ್ತಿದೆ. 90ರಿಂದ 100 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಸಮುದ್ರ ಪ್ರಕುಬ್ಧಗೊಂಡಿದೆ. ಚೆನ್ನೈ ತಲುಪಬೇಕಿದ್ದ 27ಕ್ಕೂ ಹೆಚ್ಚು ವಿಮಾನಗಳು ಬೆಂಗಳೂರು ಸೇರಿವೆ. ಕರ್ನಾಟಕದಿಂದ ತಮಿಳುನಾಡಿಗೆ ತೆರಳುವ ರೈಲು ಸೇವೆ ಕೂಡ ಬಂದ್ ಆಗಿದೆ.

  • Rain Alert: ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲೂ ಭಾರೀ ಮಳೆ ಸಾಧ್ಯತೆ

    Rain Alert: ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲೂ ಭಾರೀ ಮಳೆ ಸಾಧ್ಯತೆ

    ಬೆಂಗಳೂರು: ರೌದ್ರ ರೂಪ ತಾಳಿದ ಮಿಂಚಾಂಗ್‌ ಚಂಡ ಮಾರುತಕ್ಕೆ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಈ ಬೆನ್ನಲ್ಲೇ ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕೆಲ ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

    ಮಿಚಾಂಗ್‌ ಚಂಡ ಮಾರುತದ ಎಫೆಕ್ಟ್‌ನಿಂದ ರಾಜ್ಯದಲ್ಲೂ ಮೋಡ ಕವಿವ ವಾತಾವರಣ ಇದೆ. ಅಲ್ಲಲ್ಲಿ ಮಳೆ ಹನಿಗಳು ಬೀಳುತ್ತಿದ್ದು ಚಳಿಯ ವಾತಾವರಣ ಸೃಷ್ಟಿಸಿದೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ಆರೋಪ ಸತ್ಯಕ್ಕೆ ದೂರವಾದದ್ದು: ಚನ್ನರಾಜ ಹಟ್ಟಿಹೊಳಿ

    ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕೆಲ ಭಾಗಗಳಲ್ಲಿ ಮಳೆ ಸಾಧ್ಯತೆಯಿದೆ. ಬೆಂಗಳೂರಿನ ಕೆಲವೆಡೆ ಸಾಧಾರಣ ಮಳೆಯಾಗಲಿದೆ. ನಗರದಲ್ಲಿಂದು ಗರಿಷ್ಠ 27 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಮುಂದಿನ 24 ಗಂಟೆಗಳ ನಂತರ ಈ ತಾಪಮಾನ ಬದಲಾಗಲಿದ್ದು, ಗರಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್‌ಗೆ ಬರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್ – ಮನೆಯ 2ನೇ ಯಜಮಾನರ ಖಾತೆಗೆ ಅನ್ನಭಾಗ್ಯ ಹಣ

    ಮಿಚಾಂಗ್‌ ಚಂಡಮಾರುತದಿಂದ ಕಳೆದ 80 ವರ್ಷಗಳಲ್ಲಿ ಕಂಡು ಕೇಳರಿಯದಂತಹ ಮಳೆಯಾಗಿದೆ. ಬಿರುಗಾಳಿ ಸಹಿತ ಭಾರೀ ಮಳೆಗೆ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಅನೇಕ ರಸ್ತೆಗಳು ಜಲಾವೃತಗೊಂಡಿವೆ. ಬಿಟ್ಟುಬಿಡದೇ ಸುರಿತಿರೋ ಮಳೆಯ ಪರಿಣಾಮ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಚೆನ್ನೈನಲ್ಲಿ 6 ಮಂದಿ ಬಲಿಯಾಗಿದ್ದು, ನೀರುಪಾಲಾಗ್ತಿದ್ದ 20ಕ್ಕೂ ಹೆಚ್ಚು ಜನರನ್ನು ರಕ್ಷಣಾ ಪಡೆಗಳು ಕಾಪಾಡಿವೆ. ನಗರದ 14 ರೈಲ್ವೇ ಸಬ್‌ವೇಗಳು ಬಂದ್ ಆಗಿವೆ. ರೈಲು-ವಿಮಾನ-ರಸ್ತೆ ಸಂಚಾರದಲ್ಲಿ ತೀವ್ರ ವ್ಯತ್ಯಯವಾಗಿವೆ.. ಚೆನ್ನೈ ವಿಮಾನ ನಿಲ್ದಾಣದಲ್ಲಿ ನೀರು ಆವರಿಸಿದೆ. ಪ್ರಮುಖ ರಸ್ತೆಗಳು ಜಲಮಯವಾಗಿವೆ. ಇದನ್ನೂ ಓದಿ: ನಿಮ್ಗೂ ದೇಶದ ಸಂಪತ್ತಿನಲ್ಲಿ ಪಾಲು ಸಿಗಬೇಕು, ಅನ್ಯಾಯ ಆಗೋಕೆ ಬಿಡಲ್ಲ – ಮುಸ್ಲಿಂ ಸಮಾವೇಶದಲ್ಲಿ ಸಿಎಂ ಅಭಯ

  • ರಾಜ್ಯದ ಹವಾಮಾನ ವರದಿ: 05-12-2023

    ರಾಜ್ಯದ ಹವಾಮಾನ ವರದಿ: 05-12-2023

    ಮಿಚಾಂಗ್ – ಚಂಡಮಾರುತದ (Cyclone Michaung) ಪರಿಣಾಮ ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮಿಚಾಂಗ್ ಚಂಡಮಾರುತ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಇಲಾಖೆ ತಿಳಿಸಿದೆ.

    ಆಂಧ್ರ, ಒಡಿಶಾ, ತಮಿಳುನಾಡಲ್ಲಿ ಭಾರೀ ಮಳೆ ಸಾಧ್ಯತೆ ಹಿನ್ನೆಲೆ ರಾಜ್ಯದಲ್ಲೂ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಸದ್ಯ ಬಂಗಾಳಕೊಲ್ಲಿಯಲ್ಲಿ 18 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಗಂಟೆಗೆ 100 ಕಿಮೀ ವೇಗದಲ್ಲಿ ಈ ಚಂಡಮಾರುತ ಇರಲಿದ್ದು, ಆಂಧ್ರದ ನೆಲ್ಲೂರು, ಮಚಲಿಪಟ್ಟಣದ ಕರಾವಳಿಗೆ ಅಪ್ಪಳಿಸಲಿದೆ. ಕರ್ನಾಟಕಕ್ಕೂ ಸೈಕ್ಲೋನ್ ಎಫೆಕ್ಟ್ ತಟ್ಟುವ ಸಾಧ್ಯತೆಗಳು ದಟ್ಟವಾಗಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆಯಾಗುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-18
    ಮಂಗಳೂರು: 33-25
    ಶಿವಮೊಗ್ಗ: 32-19
    ಬೆಳಗಾವಿ: 31-18
    ಮೈಸೂರು: 31-19

    ಮಂಡ್ಯ: 31-19
    ಮಡಿಕೇರಿ: 27-16
    ರಾಮನಗರ: 29-19
    ಹಾಸನ: 29-18
    ಚಾಮರಾಜನಗರ: 30-19
    ಚಿಕ್ಕಬಳ್ಳಾಪುರ: 26-18

    ಕೋಲಾರ: 26-18
    ತುಮಕೂರು: 27-18
    ಉಡುಪಿ: 33-24
    ಕಾರವಾರ: 34-24
    ಚಿಕ್ಕಮಗಳೂರು: 29-17
    ದಾವಣಗೆರೆ: 32-19

    ಹುಬ್ಬಳ್ಳಿ: 32-20
    ಚಿತ್ರದುರ್ಗ: 30-19
    ಹಾವೇರಿ: 33-20
    ಬಳ್ಳಾರಿ: 30-22
    ಗದಗ: 32-19
    ಕೊಪ್ಪಳ: 32-21

    ರಾಯಚೂರು: 29-22
    ಯಾದಗಿರಿ: 29-22
    ವಿಜಯಪುರ: 31-21
    ಬೀದರ್: 26-19
    ಕಲಬುರಗಿ: 29-22
    ಬಾಗಲಕೋಟೆ: 32-21

  • Cyclone Michaung ಎಫೆಕ್ಟ್- ರಾಜ್ಯದಲ್ಲಿ ಇನ್ನೆರಡು ದಿನ ಭಾರೀ ಮಳೆಯ ಎಚ್ಚರಿಕೆ

    Cyclone Michaung ಎಫೆಕ್ಟ್- ರಾಜ್ಯದಲ್ಲಿ ಇನ್ನೆರಡು ದಿನ ಭಾರೀ ಮಳೆಯ ಎಚ್ಚರಿಕೆ

    ಬೆಂಗಳೂರು: ಮಿಚೌಂಗ್ ಚಂಡಮಾರುತದ (Cyclone Michaung) ಪರಿಣಾಮ ರಾಜ್ಯದಲ್ಲಿ ಇನ್ನೆರಡು ದಿನ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯೊಂದನ್ನು ನೀಡಿದೆ.

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮಿಚೌಂಗ್ ಚಂಡಮಾರುತ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಎರಡು ದಿನ ಭಾರೀ ಮಳೆಯಾಗುವ (Rain) ಸಾಧ್ಯತೆಗಳಿವೆ ಎಂದು ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.

    ರಾಜಧಾನಿಯಲ್ಲಿ ಚಂಡಮಾರುತ ಎಫೆಕ್ಟ್ ನಿಂದಾಗಿ ಇಂದು ಬೆಳ್ಳಂಬೆಳಗ್ಗೆ ಚುಮುಚುಮು ಚಳಿ ಶುರುವಾಗಿದೆ. ಆಂಧ್ರ, ಒಡಿಶಾ, ತಮಿಳುನಾಡಲ್ಲಿ ಭಾರೀ ಮಳೆ ಸಾಧ್ಯತೆ ಹಿನ್ನೆಲೆ ರಾಜ್ಯದಲ್ಲೂ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: Cyclone Michaung- ನೆಲ್ಲೂರಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಗೆ ಬಾಲಕ ದುರ್ಮರಣ

    ಸದ್ಯ ಬಂಗಾಳಕೊಲ್ಲಿಯಲ್ಲಿ 18 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಗಂಟೆಗೆ 100 ಕಿಮೀ ವೇಗದಲ್ಲಿ ಈ ಚಂಡಮಾರುತ ಇರಲಿದ್ದು, ಆಂಧ್ರದ ನೆಲ್ಲೂರು, ಮಚಲಿಪಟ್ಟಣದ ಕರಾವಳಿಗೆ ಅಪ್ಪಳಿಸಲಿದೆ. ಈ ಹಿನ್ನೆಲೆ ಕರ್ನಾಟಕಕ್ಕೂ ಸೈಕ್ಲೋನ್ ಎಫೆಕ್ಟ್ ತಟ್ಟುವ ಸಾಧ್ಯತೆಗಳು ದಟ್ಟವಾಗಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.