Tag: Cycling Competition

  • ಚಿಕ್ಕಬಳ್ಳಾಪುರ: ಪ್ರಥಮ ಭಾರಿಗೆ ನಂದಿಗಿರಿಧಾಮದಲ್ಲಿ ಸೈಕ್ಲಿಂಗ್ ಸ್ಪರ್ಧೆ

    ಚಿಕ್ಕಬಳ್ಳಾಪುರ: ಪ್ರಥಮ ಭಾರಿಗೆ ನಂದಿಗಿರಿಧಾಮದಲ್ಲಿ ಸೈಕ್ಲಿಂಗ್ ಸ್ಪರ್ಧೆ

    ಚಿಕ್ಕಬಳ್ಳಾಪುರ: ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಮುಂದಾಗಿರುವ ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಸ್ಪೆಕ್ಟ್ರಮ್ ರೇಸಿಂಗ್ ಖಾಸಗಿ ಸಂಸ್ಥೆ ಸಹಯೋಗದೊಂದಿಗೆ ಇದೇ ಪ್ರಥಮ ಭಾರಿಗೆ ನಂದಿಗಿರಿಧಾಮದಲ್ಲಿ ಸೈಕ್ಲಿಂಗ್ ಸ್ಪರ್ಧೆ ಆಯೋಜಿಸಿದೆ.

    ನಂದಿಗಿರಿಧಾಮದ ಬೆಟ್ಟದ ಕ್ರಾಸ್‍ನಿಂದ ಬೆಟ್ಟದ ತುದಿ ವರೆಗೆ 8 ಕಿ.ಮೀ. ನಷ್ಟು ದೂರ ಸೈಕಲ್ ಸವಾರರು ಸೈಕಲ್ ರೇಸ್‍ನಲ್ಲಿ ಭಾಗವಹಿಸಿದ್ರು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್ ಸೈಕಲ್ ಏರಿ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೇಶವರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಓ ಮಂಜುನಾಥ್ ಸೇರಿದಂತೆ ಕೆಲವು ಅಧಿಕಾರಿಗಳು ಕಾಲ್ನಡಿಗೆಯಿಂದ ಬೆಟ್ಟ ಏರುವುದರ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

    ಮತ್ತೊಂದೆಡೆ ನಂದಿಗಿರಿಧಾಮದಲ್ಲಿ ಸೈಕ್ಲಿಂಗ್ ಸ್ಪರ್ಧೆಯ ಹಿನ್ನೆಲೆಯಲ್ಲಿ ಗಿರಿಧಾಮಕ್ಕೆ ಬರುವ ಪ್ರವಾಸಿಗರ ವಾಹನಗಳನ್ನು ಬೆಟ್ಟದ ಕ್ರಾಸ್‍ನಲ್ಲಿ ತಡೆದಿದ್ದರಿಂದ ಪೊಲೀಸರ ವಿರುದ್ಧ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದರು.

    ಇದನ್ನೂ ಓದಿ:  ವೀಕೆಂಡ್ ಅಂತ ನಂದಿ ಹಿಲ್ಸ್ ಗೆ ಹೋಗ್ತಿದ್ದೀರಾ? ಈ ಸುದ್ದಿ ಓದಿ