Tag: Cycle Yatra

  • ರ್‍ಯಾಲಿ ವೇಳೆ ಸೈಕಲ್‍ನಿಂದ ಕೆಳಕ್ಕೆ ಬಿದ್ದ ತೇಜ್ ಪ್ರತಾಪ್ ಯಾದವ್ – ಬೀಳುವುದು ಮೇಲೆಳಲಿಕ್ಕೆ ಎಂದ್ರು

    ರ್‍ಯಾಲಿ ವೇಳೆ ಸೈಕಲ್‍ನಿಂದ ಕೆಳಕ್ಕೆ ಬಿದ್ದ ತೇಜ್ ಪ್ರತಾಪ್ ಯಾದವ್ – ಬೀಳುವುದು ಮೇಲೆಳಲಿಕ್ಕೆ ಎಂದ್ರು

    ಪಟ್ನಾ: ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಇಂದು ಹಮ್ಮಿಕೊಂಡಿದ್ದ ಸೈಕಲ್ ಯಾತ್ರೆಯ ವೇಳೆ ಉರುಳಿಬಿದ್ದು ಎಡವಟ್ಟು ಮಾಡಿಕೊಂಡಿದ್ದಾರೆ. ತೇಜ್ ಪ್ರತಾಪ್ ಯಾದವ್ ಸೈಕಲ್ ಮೇಲಿಂದ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    29 ವರ್ಷದ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಪಕ್ಷದ ಪ್ರಮುಖ ನಾಯಕರಾಗಿರುವ ತೇಜ್ ಪ್ರತಾಪ್, ರಾಜ್ಯ ಸರ್ಕಾರದ ವಿರುದ್ಧ ಪತ್ರಿಭಟನೆ ನಡೆಸಲು ಸೈಕಲ್ ಯಾತ್ರೆಯನ್ನು ಕೈಗೊಂಡಿದ್ದರು. ಯಾತ್ರೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ ಸಹ ಅಂತಿಮ ಹಂತದಲ್ಲಿ ಸೈಕಲ್ ಮೇಲಿಂದ ಉರುಳಿ ಬೀಳುವ ಮೂಲಕ ಎಡವಟ್ಟು ಮಾಡಿಕೊಂಡರು. ಈ ವೇಳೆ ಸ್ಥಳದಲ್ಲಿದ್ದ ಬೆಂಬಲಿಗರು ತೇಜ್ ಪ್ರತಾಪ್ ನೆರವಿಗೆ ಬಂದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯಗಳು ವೈರಲ್ ಆಗುತ್ತಿದಂತೆ ಸ್ಪಷ್ಟನೆ ನೀಡಿರುವ ತೇಜ್ ಪ್ರತಾಪ್, ಜೀವನದಲ್ಲಿ ಜನರು ಬೀಳುವುದು ಮತ್ತೆ ಹೆಚ್ಚಿನ ಶಕ್ತಿಯೊಂದಿದೆ ಮೇಲೆಳಲಿಕ್ಕೆ ಎಂದು ಹೇಳಿದ್ದಾರೆ.

    ಲಾಲು ಪ್ರಸಾದ್ ಯಾದವ್ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ತೇಜ್ ಪ್ರತಾಪ್ ಪಕ್ಷದಲ್ಲಿ ಹೆಚ್ಚು ಸಕ್ರೀಯರಾಗಿದ್ದಾರೆ. ಅಲ್ಲದೇ ಕಳೆದ ಕೆಲ ದಿನಗಳ ಹಿಂದೆ ತೇಜ್ ಪ್ರತಾಪ್ ಯಾದವ್ ಅಭಿನಯದ `ರುದ್ರ ಅವತಾರ’ ಎಂಬ ಸಿನಿಮಾದ ಟೀಸರ್ ಬಿಡುಗಡೆಗೊಳಿಸಿ ಸುದ್ದಿಯಾಗಿದ್ದರು. ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತೇಜ್ ಪ್ರತಾಪ್ ಯಾದವ್ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.