Tag: Cycle Ravi

  • ರೌಡಿಶೀಟರ್ ಸೈಕಲ್ ರವಿಯೊಂದಿಗೆ ಪ್ರಭಾವಿ ಕಾಂಗ್ರೆಸ್ ರಾಜಕಾರಣಿಗೆ ನಂಟು!

    ರೌಡಿಶೀಟರ್ ಸೈಕಲ್ ರವಿಯೊಂದಿಗೆ ಪ್ರಭಾವಿ ಕಾಂಗ್ರೆಸ್ ರಾಜಕಾರಣಿಗೆ ನಂಟು!

    ಬೆಂಗಳೂರು: ಸುಮಾರು 10 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ರೌಡಿಶೀಟರ್ ಸೈಕಲ್ ರವಿಗೆ ರಾಜಕಾರಣಿಯೊಂದಿಗೆ ನಂಟಿತ್ತು ಎಂಬ ಮಾಹಿತಿಯೊಂದು ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಹೌದು. ಮಂಡ್ಯದ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ಜೊತೆ ಸೈಕಲ್ ರವಿ ನಿಕಟ ಸಂಪರ್ಕ ಹೊಂದಿದ್ದನು. ನಿಕಟ ಸಂಪರ್ಕ ಹೊಂದಿದ್ದ ರವಿ ಸಚ್ಚಿದಾನಂದ ಅವರ ಜೊತೆ ಮಾತನಾಡಲಿಕ್ಕಾಗಿಯೇ ಬೇರೆ ಸಿಮ್ ಖರೀದಿ ಮಾಡಿದ್ದಾನಾ ಎಂಬ ಪ್ರಶ್ನೆಯೊಂದು ಮೂಡಿದೆ.

    ಶ್ರೀರಂಗಪಟ್ಟಣದ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಸಚ್ಚಿದಾನಂದ ಜೊತೆಗಿನ ನಂಟು ಇದೀಗ ಪೊಲೀಸರ ತಾಂತ್ರಿಕ ತನಿಖೆಯಿಂದ ಬಯಲಾಗಿದೆ. ಯಾವುದೇ ವ್ಯವಹಾರ ಮಾಡ್ಬೇಕು ಅಂದ್ರೂ ಅವರಿಬ್ಬರೂ ಇದೇ ನಂಬರ್ ಅಲ್ಲಿ ಮಾತನಾಡುತ್ತಿದ್ದರು ಎನ್ನುವ ವಿಚಾರವನ್ನು ಪೊಲೀಸ್ ಮೂಲಗಳು ತಿಳಿಸಿವೆ.

    ಚುನಾವಣಾ ಪ್ರಚಾರದ ವೇಳೆ ಮಂಡ್ಯದಲ್ಲಿ ಡಿ ಕೆ ಶಿವಕುಮಾರ್ ಅಚವರಿಗೆ ಇದೇ ಸಚ್ಚಿದಾನಂದ ಸೇಬಿನ ಹಾರ ಹಾಕಿ ಸನ್ಮಾನಿಸಿದ್ದರು. ಸೈಕಲ್ ರವಿ ಮತ್ತು ಸ್ಯಾಂಡಲ್ ವುಡ್ ನಟನ ನಡುವೆ ರಾಜಿ ಪಂಚಾಯಿತಿ ಮಾಡಿದ್ದು ಇವರೇ ಆಗಿದ್ದು, ದ್ವೇಷ ಬೇಡ ನಟನೊಂದಿಗೆ ರಾಜಿ ಪಂಚಾಯಿತಿ ಮಾಡಿಕೊ ಅಂತ ಸೈಕಲ್ ರವಿಗೆ ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ.

    ಸೈಕಲ್ ರವಿ ಹಿನ್ನೆಲೆ:
    ಆರೋಪಿ ರವಿ ಮೇಲೆ 1998 ರಲ್ಲಿ ಮೊದಲ ಬಾರಿಗೆ ಬನಶಂಕರಿಯಲ್ಲಿ ರೌಡಿಶೀಟರ್ ಪಟ್ಟ ದಾಖಲಾಗಿತ್ತು. ಕೆಪಿ ಅಗ್ರಹಾರದಲ್ಲಿ ಸಣ್ಣ ಪುಟ್ಟ ಗಲಾಟೆಯಲ್ಲಿ ಭಾಗಿಯಾಗಿದ್ದ ರವಿ, ಸುಬ್ರಹ್ಮಣ್ಯಪುರ ಮುಖ್ಯ ಕೇಂದ್ರವಾಗಿಸಿಕೊಂಡು ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ. ಪ್ರಮುಖವಾಗಿ ಕೊಲೆ, ಕೊಲೆಯತ್ನ, ಅಪಹರಣ, ಧಮ್ಕಿ, ಹಫ್ತಾವಸೂಲಿ ಸೇರಿ 30 ಕ್ಕೂ ಹೆಚ್ಚು ಪ್ರಕರಣಗಳು ಆತನ ಮೇಲೆ ದಾಖಲಾಗಿದೆ. ಕುಖ್ಯಾತ ರೌಡಿ ಲಿಂಗ ಮರ್ಡರ್, ಕೆಂಗೇರಿಯಲ್ಲಿ ಜಾನಿ, ಟಾಮಿ ಜೊಡಿ ಮರ್ಡರ್ ಸೇರಿದಂತೆ, ನಗರದಲ್ಲಿ ಜೆಪಿನಗರ ತಲಘಟ್ಟಪುರ, ಬನಶಂಕರಿ, ಸುಬ್ರಹ್ಮಣ್ಯಪುರ ಕೆಂಗೇರಿ ರಾಜರಾಜೇಶ್ವರಿ ನಗರ ಕೆಜಿ ನಗರ ಕೆಪಿ ಅಗ್ರಹಾರ ಸೇರಿ 14 ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳಿದಂತೆ ಸೈಕಲ್ ರವಿ ಬೆಂಗಳೂರಿನ ಮತ್ತೊಬ್ಬ ಕುಖ್ಯಾತ ರೌಡಿಶೀಟರ್ ಹೆಬ್ಬೆಟ್ ಮಂಜನ ಸ್ನೇಹಿತನಾಗಿದ್ದಾನೆ.

    ಬಂಧನವಾಗಿದ್ದು ಹೇಗೆ?:
    ಜೂನ್ 27ರಂದು ರಾಜರಾಜೇಶ್ವರಿನಗರದ ನೈಸ್‍ರೋಡ್ ಬಳಿ ರೌಡಿ ಸೈಕಲ್ ರವಿ ಬಂಧನಕ್ಕೆ ಪೊಲೀಸರು ಮುಂದಾಗಿದ್ದರು. ಈ ವೇಳೆ ಸೈಕಲ್ ರವಿ ಪೊಲೀಸ್ ಕಾನ್ಸ್ ಟೇಬಲ್ ಸತೀಶ್ ಮೇಲೆ ಹಲ್ಲೆಗೆ ಯತ್ನಿಸಿದ್ದನು. ಆತ್ಮ ರಕ್ಷಣೆಗೆ ಮುಂದಾದ ಸಿಸಿಬಿ ಇನ್ಸ್ ಪೆಕ್ಟರ್ ಪ್ರಕಾಶ್ ಹಾಗೂ ಪಿಐ ಮಲ್ಲಿಕಾರ್ಜುನ್ ತಕ್ಷಣವೇ 2 ಸುತ್ತಿನ ಗುಂಡು ಹಾರಿಸಿ, ಸೈಕಲ್ ರವಿಯನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನದಲ್ಲಿ ಇರಿಸಿಕೊಂಡು ತನಿಖೆ ನಡೆಸಿದ್ದರು.

  • ರಾಕಿಂಗ್ ಸ್ಟಾರ್ ಯಶ್ ಕೊಲ್ಲಲು ಸ್ಕೆಚ್!

    ರಾಕಿಂಗ್ ಸ್ಟಾರ್ ಯಶ್ ಕೊಲ್ಲಲು ಸ್ಕೆಚ್!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ನಡೆಸಲಾಗಿತ್ತು ಎಂಬ ಸ್ಪೋಟಕ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕುಖ್ಯಾತ ರೌಡಿ ಸೈಕಲ್ ರವಿಯೇ ನಟ ಯಶ್ ಹತ್ಯೆಗೆ ಸಂಚು ಮಾಡಿದ್ದ. ಪೊಲೀಸರ ವಿಚಾರಣೆ ವೇಳೆ 2 ವರ್ಷಗಳ ಹಿಂದೆಯೇ ನಟ ಯಶ್ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಎಂಬ ಆಘಾತ ಸುದ್ದಿಯನ್ನು ಬಾಯಿಬಿಟ್ಟಿದ್ದಾನೆ.

    2016 ರಲ್ಲಿ ಬರ್ತ್ ಡೇ ಕಾರ್ಯಕ್ರಮಕ್ಕೆಂದು ಯಶ್ ಕನಕಪುರ ಫಾರ್ಮ್ ಹೌಸ್‍ ಗೆ ಹೋಗಿದ್ದರು. ಅಲ್ಲಿ ಸೈಕಲ್ ರವಿ ಹಾಗೂ ಕೋದಂಡ ಸ್ಕೆಚ್ ಯಶ್ ಕೊಲೆ ಮಾಡಲು  ಮಾಡಿದ್ದರು. ಕೋದಂಡನ ಮೂಲಕ ಯಶ್ ಅವರನ್ನು ಕೊಲ್ಲಲು ಸ್ಕೆಚ್ ಹಾಕಲಾಗಿತ್ತು. ಸ್ಕೆಚ್ ರೀತಿಯಲ್ಲಿ ಕುಡಿದ ಮತ್ತಿನಲ್ಲಿಯೇ ಯಶ್ ಕಾರಿನ ಮೇಲೆ ಪುಡಿ ರೌಡಿಗಳು ಕಲ್ಲು ತೂರಾಟ ಮಾಡಿದ್ದರು. ಆದರೆ ಅಂದು ಯಶ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.

    ಅಂದು ಯಶ್ ಹತ್ಯೆಗೆ ಮೊತ್ತೊಬ್ಬ ನಟನ ಕೈವಾಡ ಇದೆ ಎಂದು ಆರೋಪ ಕೇಳಿಬಂದಿದೆ. ಆದರೆ ನಟನ ಸಂಚಿನ ಬಗ್ಗೆಯೂ ಪೊಲೀಸರು ತೀವ್ರ ತನಿಖೆ ಮಾಡುತ್ತಿದ್ದಾರೆ. ಸದ್ಯಕ್ಕೆ ತನಿಖೆಯ ಯಾವುದೇ ಮಾಹಿತಿಯನ್ನು ಪೊಲೀಸರು ಬಹಿರಂಗ ಪಡಿಸುತ್ತಿಲ್ಲ.

    ಕೋದಂಡ ಯಾರು? ಸದ್ಯಕ್ಕೆ ಕೋದಂಡ ಎಲ್ಲಿದ್ದಾನೆ ಎಂಬ ಸುಳಿಯೂ ಸಿಗುತ್ತಿಲ್ಲ. ಅವನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಕೋದಂಡ ಹಲವು ಪ್ರಕರಣಗಲ್ಲಿ ಬೇಕಾಗಿರುವ ಆರೋಪಿಯಾಗಿದ್ದು, ಇದುವರೆಗೂ ಪೊಲೀಸರ ಬಲೆಗೆ ಬಿದ್ದಿಲ್ಲ. ಕೋದಂಡ ಮತ್ತು ಸೈಕಲ್ ರವಿ ಇಬ್ಬರು ರೌಡಿಗಳಾಗಿದ್ದು, ವಿರೋಧಿಗಳಾಗಿದ್ದರು. ಆದರೆ ಒಬ್ಬರನ್ನು ಮುಗಿಸುವ ಸಲುವಾಗಿ ಇಬ್ಬರು ರಾಜಿ ಮಾಡಿಕೊಂಡಿದ್ದರು.

    ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ್ದ ಹಿನ್ನೆಲೆಯಲ್ಲಿ ನಿರ್ಮಾಪಕ ಜಯಣ್ಣ ಅವರ ಜೊತೆ ಹೋಗಿ ಯಶ್ ಕಮಿಷನರ್ ಕಚೇರಿಗೆ ಹೋಗಿ ಯಶ್ ಮೌಖಿಕ ದೂರು ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ. ದೂರಿನ ಆಧಾರದ ಮೇಲೆ ಮೈಸೂರು ಕರ್ನಾಟಕ ಭಾಗದಲ್ಲಿ ಬೆಂಗಳೂರಿನ ಕೆಲವು ರೌಡಿಗಳನ್ನು ವಶಕ್ಕೆ ಪಡೆದ ವಿಚಾರಣೆ ಮಾಡಿದ್ದು, ಜೈಲಿಗೂ ಕಳುಹಿಸಿದ್ದರು.

    ಹತ್ಯೆಯ ಸಂಚಿನ ಪ್ರಕರಣ ಬೆಳಕಿಗೆ ಬಂದ ನಂತರ ಯಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾನು ಈ ಬಗ್ಗೆ ಲೈವ್ ಆಗಿ ಮಾತನಾಡುತ್ತೇನೆ ಎಂದು ಯಶ್ ಹೇಳಿದ್ದಾರೆ. ಜೂನ್ 27 ರಂದು ಸಿಸಿಬಿ ಪೊಲೀಸರು ಶೂಟೌಟ್ ಮಾಡಿ ರೌಡಿ ಸೈಕಲ್ ರವಿಯನ್ನು ಬಂಧಿಸಿದ್ದರು.

  • ಸೈಕಲ್ ರವಿ ಜೊತೆ ನಂಟು ಆರೋಪದಲ್ಲಿ ಜಮೀರ್ ರಾಜಕೀಯ-ವಿಚಾರಣೆ ನಡೆಸಿದ್ದಕ್ಕೆ ಅಲ್ತಾಫ್‍ಖಾನ್ ಕಿಡಿ

    ಸೈಕಲ್ ರವಿ ಜೊತೆ ನಂಟು ಆರೋಪದಲ್ಲಿ ಜಮೀರ್ ರಾಜಕೀಯ-ವಿಚಾರಣೆ ನಡೆಸಿದ್ದಕ್ಕೆ ಅಲ್ತಾಫ್‍ಖಾನ್ ಕಿಡಿ

    ಬೆಂಗಳೂರು: ಸೈಕಲ್ ರವಿ ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾಮರಾಜಪೇಟೆಯ ಜೆಡಿಎಸ್ ನ ಪರಾಜಿತ ಅಭ್ಯರ್ಥಿ ಅಲ್ತಾಫ್‍ ಖಾನ್ ನನ್ನು ಸಿಸಿಬಿ ಪೊಲಿಸರು ವಿಚಾರಣೆ ನಡೆಸಿದ್ರು.

    ಸೈಕಲ್ ರವಿ ಮತ್ತು ಅಲ್ತಾಫ್ ಖಾನ್ ನಡುವೆ ಸಂಪರ್ಕ ಇದೆ ಎಂಬ ನಿಟ್ಟಿನಲ್ಲಿ ವಿಚಾರಣೆ ನಡೆಸಿದ್ದು, ಸಂಪರ್ಕದ ಬಗ್ಗೆ ಡಿಟೇಲ್ ನ್ನು ಕಲೆಹಾಕಿದ್ದಾರೆ. ಇದನ್ನೂ ಓದಿ: ಸೈಕಲ್ ರವಿ ಜೊತೆ ನಂಟು ಪ್ರಕರಣ – ಸಿಸಿಬಿ ಪೊಲೀಸರಿಂದ ಸಾಧುಕೋಕಿಲಾ ವಿಚಾರಣೆ

    ವಿಚಾರಣೆ ಬಳಿಕ ಅಲ್ತಾಫ್ ಖಾನ್ ಮಾತನಾಡಿ, ಇದೆಲ್ಲಾ ರಾಜಕೀಯ ಗಿಮಿಕ್ಕು. ರಾಜಕೀಯ ಗಿಮಿಕ್ಕಿಗಾಗಿ ಜಮೀರ್ ಅಹಮದ್ ಈ ರೀತಿ ಮಾಡ್ತಾ ಇದ್ದಾನೆ. ಆದರೆ ಸೈಕಲ್ ರವಿನಾ ನಾನು 18 ವರ್ಷದ ಹಿಂದೆ ನೋಡಿದ್ದೆ. ಸೈಕಲ್ ರವಿ ತಮ್ಮ ಮಹೇಶ್ ನಮ್ಮ ಕ್ಷೇತ್ರದ ನಿವಾಸಿಯಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನನ್ನ ಪರವಾಗಿ ಕೆಲಸ ಮಾಡ್ತಾ ಇದ್ರು. ಈ ಸಂದರ್ಭದಲ್ಲಿ ಸೈಕಲ್‍ರವಿ ನನ್ನ ಜೊತೆ ಕಾಲ್ ಮಾಡಿ ಮಾತಾಡಿದ್ರು. ಇದನ್ನೂ ಓದಿ: ರೌಡಿಶೀಟರ್‌ಗೆ ಹಾಸ್ಯನಟ ಸಾಧುಕೋಕಿಲ ಕರೆ!

    ಆದರೆ ಮಾತಾಡಿದ್ದು ಸೈಕಲ್ ರವಿನೋ ಯಾರೋ ನನಗೆ ಸರಿಯಾಗಿ ಗೊತ್ತಿಲ್ಲ. ಆದ್ರೆ ಅವರ ನಂಬರ್ ನಿಂದ ಕಾಲ್ ಬಂದಿದ್ದು ನಿಜ. ಎಲೆಕ್ಷನ್ ಬ್ಯುಸಿನಲ್ಲಿದ್ದಿದ್ದರಿಂದ ಸರಿಯಾಗಿ ಗೊತ್ತಾಗಲಿಲ್ಲ. ಆದರೆ ಇವತ್ತು ಸಿಸಿಬಿ ಪೊಲಿಸರು ಸೈಕಲ್ ರವಿಗೂ ನನಗೂ ಸಂಪರ್ಕ ಇದೆ ಅಂತಾಹೇಳಿ ವಿಚಾರಣೆ ಕರೆದಿದ್ರು. ವಿಚಾರಣೆ ಮಾಡಿದ್ರು. ಆದರೆ ಟಿವಿಯಲ್ಲಿ ಏನೇನೋ ಬರ್ತಿದೆ. ಬೇಕಿದ್ರೆ ತನಿಖೆ ಮಾಡಲಿ ನಾನು ಎಲ್ಲವನ್ನು ಎದುರಿಸುವುದಾಗಿ ಹೇಳಿದ್ರು.

  • ಸೈಕಲ್ ರವಿ ಜೊತೆ ನಂಟು ಪ್ರಕರಣ – ಸಿಸಿಬಿ ಪೊಲೀಸರಿಂದ ಸಾಧುಕೋಕಿಲಾ ವಿಚಾರಣೆ

    ಸೈಕಲ್ ರವಿ ಜೊತೆ ನಂಟು ಪ್ರಕರಣ – ಸಿಸಿಬಿ ಪೊಲೀಸರಿಂದ ಸಾಧುಕೋಕಿಲಾ ವಿಚಾರಣೆ

    ಬೆಂಗಳೂರು: ಪಾತಕಿ ಸೈಕಲ್ ರವಿ ಜೊತೆ ನಂಟು ಹೊಂದಿರುವ ಆರೋಪ ಎದುರಿಸುತ್ತಿರುವ ಸ್ಯಾಂಡಲ್‍ವುಡ್‍ನ ಹಾಸ್ಯ ಕಲಾವಿದ ಸಾಧುಕೋಕಿಲಾ ಅವರನ್ನ ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.

    ಇಂದು ಬೆಳಗ್ಗೆ 11 ಗಂಟೆ ಹೊತ್ತಿಗೆ ಸಿಸಿಬಿನ ಕಚೇರಿಗೆ ಬಂದಿದ್ದ ಸಾಧು ಕೋಕಿಲಾ, ಮಧ್ಯಾಹ್ನ ಸಿಸಿಬಿ ಕಚೇರಿಯಿಂದ ವಿಚಾರಣೆ ಮುಗಿಸಿ ನಿರ್ಗಮಿಸಿದ್ದಾರೆ. ಆದರೆ ಈ ವೇಳೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ರೌಡಿಶೀಟರ್‌ಗೆ ಹಾಸ್ಯನಟ ಸಾಧುಕೋಕಿಲ ಕರೆ!

    ಸೈಕಲ್ ರವಿಗೆ ಸಾಧು ಕೋಕಿಲಾ ಏಳೆಂಟು ಬಾರಿ ಕರೆ ಮಾಡಿದ್ದ ಬಗ್ಗೆ ಸಾಕ್ಷ್ಯ ಸಿಕ್ಕಿದ ಹಿನ್ನೆಲೆಯಲ್ಲಿ ಸಾಧುಕೋಕಿಲಾರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು.

    ಜೂನ್ 27ರಂದು ರಾಜರಾಜೇಶ್ವರಿನಗರದ ನೈಸ್‍ರೋಡ್ ಬಳಿ ರೌಡಿ ಸೈಕಲ್ ರವಿ ಬಂಧನಕ್ಕೆ ಪೊಲೀಸರು ಮುಂದಾಗಿದ್ದರು. ಈ ವೇಳೆ ಸೈಕಲ್ ರವಿ ಪೊಲೀಸ್ ಕಾನ್ಸ್ ಟೇಬಲ್ ಸತೀಶ್ ಮೇಲೆ ಹಲ್ಲೆಗೆ ಯತ್ನಿಸಿದ್ದನು. ಆತ್ಮ ರಕ್ಷಣೆಗೆ ಮುಂದಾದ ಸಿಸಿಬಿ ಇನ್ಸ್ ಪೆಕ್ಟರ್ ಪ್ರಕಾಶ್ ಹಾಗೂ ಪಿಐ ಮಲ್ಲಿಕಾರ್ಜುನ್ ತಕ್ಷಣವೇ 2 ಸುತ್ತಿನ ಗುಂಡು ಹಾರಿಸಿ, ಸೈಕಲ್ ರವಿಯನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನದಲ್ಲಿ ಇರಿಸಿಕೊಂಡು ತನಿಖೆ ನಡೆಸಿದ್ದರು.