Tag: Cyber Security

  • ದೇಶದ ಸಾಫ್ಟ್‌ವೇರ್‌ ರಫ್ತಿನಲ್ಲಿ 40% ಕರ್ನಾಟಕದ್ದು, ನಾವೇ ನಂಬರ್‌ 1: ಪ್ರಿಯಾಂಕ್‌ ಖರ್ಗೆ

    ದೇಶದ ಸಾಫ್ಟ್‌ವೇರ್‌ ರಫ್ತಿನಲ್ಲಿ 40% ಕರ್ನಾಟಕದ್ದು, ನಾವೇ ನಂಬರ್‌ 1: ಪ್ರಿಯಾಂಕ್‌ ಖರ್ಗೆ

    ಬೆಂಗಳೂರು: ಜಗತ್ತು ಇಂದು ಎದುರಿಸುತ್ತಿರುವ ಹಲವಾರು ಸವಾಲುಗಳನ್ನು ಪರಿಹರಿಸುವಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನ (Information Technology) ಕ್ಷೇತ್ರ ನಿರತವಾಗಿದೆ. ಹವಾಮಾನ ಬದಲಾವಣೆಯ ಪರಿಹಾರ, ಆರೋಗ್ಯ ರಕ್ಷಣೆ ಹಾಗೂ ಸೈಬರ್ ಸುರಕ್ಷತೆಯನ್ನು (Cyber Security) ಖಾತ್ರಿಪಡಿಸುವ ಪ್ರಯತ್ನದಲ್ಲಿ ನಾವಿದ್ದೇವೆ, ನಾವು ಗಡಿಗಳನ್ನು ಮೀರಿ ಸಮಗ್ರ ಪರಿಹಾರಗಳನ್ನ ರೂಪಿಸಬೇಕಾಗಿದೆ. ಮಾತ್ರವಲ್ಲದೇ ಒಟ್ಟಾರೆಯಾಗಿ ಮಾನವ ಕುಲಕ್ಕೆ ಪ್ರಯೋಜನವಾಗುವಂತಹ ಆವಿಷ್ಕಾರಗಳಿಗೆ ಆದ್ಯತೆ ನೀಡಬೇಕಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) 2023ರ ನವೆಂಬರ್‌ 29ರಿಂದ ಮೂರು ದಿನಗಳ ಕಾಲ ನಡೆಯಲಿರುವ 26ನೇ ಬೆಂಗಳೂರು ಟೆಕ್‌ ಸಮಿಟ್‌ ಹಿನ್ನೆಲೆಯಲ್ಲಿಂದು ನಡೆದ ಗ್ಲೋಬಲ್‌ ಇನೋವೇಷನ್‌ ಅಲಿಯನ್ಸ್‌ ಪಾಲುದಾರರ ಸಭೆಯಲ್ಲಿ ಅವರು ಮಾತನಾಡಿದ್ದಾರೆ.

    ಸಾಫ್ಟ್‌ವೇರ್ ರಫ್ತಿನ ವಿಷಯದಲ್ಲಿ ಕರ್ನಾಟಕ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ದೇಶದ ಒಟ್ಟಾರೆ ಸಾಫ್ಟ್‌ವೇರ್ ರಫ್ತು ಪ್ರಮಾಣದಲ್ಲಿ ಶೇ.40 ರಾಜ್ಯದ್ದಾಗಿದೆ ಎಂದು ಹೇಳಿದ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬೆಂಗಳೂರು ವಿಶ್ವದ 4ನೇ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿದ್ದು ನಾವು ವಿಶ್ವದ ಅತ್ಯುತ್ತಮ ನುರಿತ ಉದ್ಯೋಗಿಗಳನ್ನ ಹೊಂದಿದ್ದೇವೆ. ಭವಿಷ್ಯಕ್ಕಾಗಿ ಹೆಚ್ಚು ಚೇತರಿಸಿಕೊಳ್ಳುವ ಅಗತ್ಯವಿದ್ದು, ಕರ್ನಾಟಕ ಸರ್ಕಾರ ನಾವೀನ್ಯತೆಗಳ ಸವಾಲುಗಳಿಗೆ ಸಿದ್ಧವಾಗಿದೆ. ಉದಯೋನ್ಮುಖ ತಂತ್ರಜ್ಞಾನಗಳಿಗಾಗಿ ನಾವು ಕೌಶಲ್ಯ ಸಲಹಾ ಸಮಿತಿಯನ್ನ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈಗ ಇಸ್ರೋದಿಂದ ಸೂರ್ಯನ ಅಧ್ಯಯನ – ಆದಿತ್ಯ ಉಡಾವಣೆಗೆ ಮುಹೂರ್ತ ಫಿಕ್ಸ್ 

    ಸೈಬರ್‌ ಸೆಕ್ಯುರಿಟಿ, ಅಗ್ರಿ ಇನೋವೇಶನ್, ಡೇಟಾ ಸೈನ್ಸ್ ಮತ್ತು ಎಐ, ಏರೋಸ್ಪೇಸ್, ಸೆಮಿಕಂಡಕ್ಟರ್ ಫೇಬಲ್ಸ್, ಮಿಷಿನ್ ಇಂಟೆಲಿಜೆನ್ಸ್ ಮತ್ತು ರೊಬೊಟಿಕ್ಸ್, ಅನಿಮೇಷನ್ ಮುಂತಾದ ಕ್ಷೇತ್ರಗಳಲ್ಲಿ ನಮ್ಮ ಪರಿಣತಿಯಿದೆ. ಆಟೋಮೊಬೈಲ್ ಟೆಕ್, ಗೇಮಿಂಗ್ ವೇಗವರ್ಧಕ ಮತ್ತು ವರ್ತುಲ ಆರ್ಥಿಕ ಪ್ರಯೋಗಾಲಯ ಮುಂತಾದ ಕ್ಷೇತ್ರಗಳಲ್ಲಿಯೂ ನಮ್ಮ ಪರಿಸರ ವ್ಯವಸ್ಥೆಗಳೊಂದಿಗೆ ಸಹಕರಿಸಲು ನಾವು ಬಯಸುತ್ತೇವೆ ಎಂದೂ ಸಚಿವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಯುವತಿ ಪ್ರಕರಣ ವಾಪಸ್ ಪಡೆಯದ್ದಕ್ಕೆ ಆಕೆಯ ತಾಯಿಯನ್ನೇ ವಿವಸ್ತ್ರಗೊಳಿಸಿ ಥಳಿಸಿದ್ರು!

    ಆಸ್ಟ್ರೇಲಿಯಾ, ಕೆನಡ, ಫ್ರಾನ್ಸ್‌ ಇಸ್ರೇಲ್‌, ಜರ್ಮನಿ, ನೆದರ್ಲೆಂಡ್, ಜಪಾನ್‌, ಸ್ವಿ‌ಡ್ಜರ್ಲೆಂಡ್‌ ಹಾಗೂ ಬ್ರಿಟನ್‌ ದೇಶಗಳ ರಾಯಭಾರಿ ಕಚೇರಿಗಳ ಪ್ರತಿನಿಧಿಗಳು ಮಾತನಾಡಿ, ಆಯಾ ರಾಷ್ಟ್ರಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಸಾಧನೆಗಳ ಬಗ್ಗೆ ತಿಳಿಸಿದರು. ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಏಕ್‌ರೂಪ್‌ ಕೌರ್‌, ಮಾಹಿತಿ ತಂತ್ರಜ್ಞಾನ ಇಲಾಖೆಯ ನಿರ್ದೇಶಕರಾದ ದರ್ಶನ್‌ ಸಭೆಯಲ್ಲಿ ಮಾತನಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾಲಾ ಪಠ್ಯಕ್ರಮಗಳಲ್ಲಿ ‘ಸೈಬರ್ ಸುರಕ್ಷತೆ’ ಅಧ್ಯಯನ ಅಳವಡಿಕೆ

    ಶಾಲಾ ಪಠ್ಯಕ್ರಮಗಳಲ್ಲಿ ‘ಸೈಬರ್ ಸುರಕ್ಷತೆ’ ಅಧ್ಯಯನ ಅಳವಡಿಕೆ

    ತಿರುವನಂತಪುರಂ: ‘ಸೈಬರ್ ಸುರಕ್ಷತೆ’ ಈಗ ಕೇರಳದ ಶಾಲಾ ಪಠ್ಯಕ್ರಮದ ಒಂದು ಭಾಗವಾಗಿದೆ.

    ರಾಜ್ಯದ ಪ್ರೌಢಶಾಲೆಗಳಲ್ಲಿ ‘ಲಿಟಲ್ ಕೈಟ್ಸ್’ ಘಟಕಗಳ ಮೂಲಕ ಮೂರು ಲಕ್ಷ ತಾಯಂದಿರಿಗೆ ಸೈಬರ್ ಸುರಕ್ಷತೆ ತರಬೇತಿ ನೀಡಬೇಕೆಂದು ಸರ್ಕಾರ ನಿರ್ಧರಿಸಿದೆ. ಈ ತರಬೇತಿ ಕೇಂದ್ರವನ್ನು ರಾಜ್ಯ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಉದ್ಘಾಟಿಸಿದರು. ಇದನ್ನೂ ಓದಿ:  ಕಾಂಗ್ರೆಸ್ ತೊರೆದ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ

    Getting started in cybersecurity – 6 essential skills to consider | 2021-07-15 | Security Magazine

    ಈ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕಾರ್ಯಕ್ರಮದ ಭಾಗವಾಗಿ ಎರಡು ಲಕ್ಷ ತಾಯಂದಿರಿಗೆ ‘ಸೈಬರ್ ಸುರಕ್ಷತೆ’ ಬಗ್ಗೆ ತರಬೇತಿ ನೀಡಬೇಕು ಎಂಬ ಯೋಜನೆ ಇತ್ತು. ಆದರೆ ನಂತರ ಅದನ್ನು 3 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ‘ಸೈಬರ್ ಸುರಕ್ಷತೆ’ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯ ಎಂದು ತಿಳಿಸಿದರು.

    ಕಾರ್ಯಕ್ರಮಕ್ಕೆ ಅಪಾರ ಮೆಚ್ಚುಗೆ ಮತ್ತು ಪ್ರತಿಕ್ರಿಯೆಯನ್ನು ನೋಡಿದ ಅವರು, ವಿದ್ಯಾರ್ಥಿಗಳು ಮತ್ತು ತಾಯಂದಿರು ಸೇರಿದಂತೆ 10 ಲಕ್ಷ ಫಲಾನುಭವಿಗಳಿಗೆ ಸೈಬರ್ ಸುರಕ್ಷತೆ ತರಬೇತಿಯನ್ನು ನೀಡಲಾಗುವುದು ಎಂದು ಘೋಷಿಸಿದರು.

    Types of Cybersecurity Careers | University of Nevada, Reno

    ತರಬೇತಿಯ ವಿಷಯಗಳು ಸ್ಮಾರ್ಟ್‍ಫೋನ್‍ಗಳು, ಇಂಟರ್ನೆಟ್ ಮತ್ತು ಅದರ ಸುರಕ್ಷಿತ ಬಳಕೆಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಹೊಸ ತಂತ್ರಜ್ಞಾನಗಳ ಪರಿಚಯ, ಒಟಿಪಿಗಳು ಮತ್ತು ಪಿನ್‍ಗಳಂತಹ ಪಾಸ್‍ವರ್ಡ್‍ಗಳ ಸುರಕ್ಷತೆ, ನಕಲಿ ಸುದ್ದಿಗಳನ್ನು ಗುರುತಿಸುವುದು ಮತ್ತು ತಡೆಗಟ್ಟುವುದು, ಸೈಬರ್ ದಾಳಿಗಳು ಮತ್ತು ಆನ್‍ಲೈನ್ ವಹಿವಾಟುಗಳನ್ನು ಕೈಗೊಳ್ಳುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತರಗತಿಯನ್ನು ಮಾಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಮಾನಸಿಕ ಖಿನ್ನತೆಗೆ ಒಳಗಾಗಿ MBBS ವಿದ್ಯಾರ್ಥಿ ಆತ್ಮಹತ್ಯೆ

    ರಾಜ್ಯಾದ್ಯಂತ 2,000 ಪ್ರೌಢಶಾಲೆಗಳಲ್ಲಿ ‘ಲಿಟಲ್ ಕೈಟ್ಸ್’ ಘಟಕಗಳನ್ನು ತೆಗೆಯಬೇಕು. ಈ ಮೂಲಕ 30 ಜನರಿಗೆ, 5 ಸೆಷನ್‍ನಲ್ಲಿ ಮೂರು ಗಂಟೆಗಳ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ವಿವರಿಸಿದರು.

  • ಬ್ಯಾಂಕ್‍ನಲ್ಲಿಟ್ಟ ದುಡ್ಡು ಸೇಫ್ ಅಲ್ಲ- ಸದ್ದಿಲ್ಲದೆ ಜನರ ಹಣ ಅಕೌಂಟ್‍ನಿಂದ ಮಾಯ!

    ಬ್ಯಾಂಕ್‍ನಲ್ಲಿಟ್ಟ ದುಡ್ಡು ಸೇಫ್ ಅಲ್ಲ- ಸದ್ದಿಲ್ಲದೆ ಜನರ ಹಣ ಅಕೌಂಟ್‍ನಿಂದ ಮಾಯ!

    – ಸೈಬರ್ ಸೆಕ್ಯೂರಿಟಿಯಿಂದ ಆರ್‍ಬಿಐಗೆ ಎಚ್ಚರಿಕೆ ರವಾನೆ

    ಬೆಂಗಳೂರು: ಸ್ಕಿಮರ್ ಜಾಲದ ಬೆನ್ನಲ್ಲೆ ಬೆಂಗಳೂರಿಗರಿಗೆ ಶಾಕಿಂಗ್ ಸುದ್ದಿಯೊಂದು ಸಿಕ್ಕಿದೆ. ಬ್ಯಾಂಕ್‍ನಲ್ಲಿ ಇಟ್ಟ ದುಡ್ಡು ಸೇಫ್ ಅಲ್ಲ ಎಂದು ಸೈಬರ್ ಸೆಕ್ಯೂರಿಟಿಯಿಂದ ಆರ್‍ಬಿಐಗೆ ಎಚ್ಚರಿಕೆ ರವಾನಿಸಲಾಗಿದೆ.

    ಹೌದು. ಎಟಿಎಂಗೆ ದತ್ತಾಂಶಗಳನ್ನು ಕದಿಯುವ ಸ್ಕಿಮರ್ ಆಳವಡಿಸಿ ಜನರ ದುಡ್ಡನ್ನು ಕದಿಯವ ಖತರ್‍ನಾಕ್‍ಗಳನ್ನು ಪೊಲೀಸರು ಹಿಡಿದ ಬೆನ್ನಲ್ಲೆ ಬ್ಯಾಂಕ್‍ನ ಇಂಟರ್‍ನೆಟ್‍ಗೆ ಕನ್ನ ಹಾಕುವ ಟೀಮ್ ಬಗ್ಗೆ ಬೆಳಕಿಗೆ ಬಂದಿದೆ.

    ಬ್ಯಾಂಕುಗಳಲ್ಲಿರುವ ನಿಮ್ಮ ಆಕೌಂಟ್ ಡೀಟೈಲ್ಸ್ ತಿಳಿದುಕೊಂಡು ಕನ್ನ ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಸೈಬರ್ ಸಂಸ್ಥೆಯ ಸಹಾಯ ಯಾಚಿಸಿವೆ. ಇಂಟರ್ನಲ್ ಮಾಹಿತಿ ಸೋರಿಕೆಯಾಗ್ತಿರೋದು ಬ್ಯಾಂಕುಗಳಿಂದಾನೆ ಅನ್ನೋದು ಇನ್ನೊಂದು ಸ್ಫೋಟಕ ಸತ್ಯ.

    ಬ್ಯಾಂಕ್ ಡೇಟಾ ಲೀಕ್ ಹೇಗೆ?: ಬ್ಯಾಂಕ್ ಸಿಬ್ಬಂದಿಗಳನ್ನು ಟಾರ್ಗೆಟ್ ಮಾಡಿಕೊಂಡು ಅವರಿಗೆ ಪೆನ್‍ಡ್ರೈವ್ ಅಥವಾ ಯಾವುದಾದರೂ ಸಿಡಿಯನ್ನು ನೀಡಲಾಗುತ್ತದೆ. ಇದನ್ನು ಬ್ಯಾಂಕ್ ಸಿಬ್ಬಂದಿಗಳು ಕಚೇರಿಯ ಕಂಪ್ಯೂಟರ್‍ಗೆ ಹಾಕಿದ ತಕ್ಷಣ ವೈರಸ್ ಆಟ್ಯಾಕ್ ಆಗಿ ಮಾಹಿತಿ ಲೀಕ್ ಆಗುತ್ತದೆ.

    ಇತ್ತೀಚೆಗೆ ಬ್ಯಾಂಕ್ ಸಿಬ್ಬಂದಿಗಳ ಇ-ಮೇಲ್‍ಗಳಿಗೆ ವೈರಸ್ ಇರುವ ಲಿಂಕ್‍ಗಳನ್ನು ಕಳಿಸಲಾಗುತ್ತಿದೆ. ಈ ಲಿಂಕ್‍ಗಳನ್ನು ಕಚೇರಿ ಕಂಪ್ಯೂಟರ್‍ನಲ್ಲಿ ಒಪನ್ ಮಾಡಿದರೆ ಅಕೌಂಟ್ ಡೀಟೈಲ್ಸ್ ಕಳ್ಳರ ಪಾಲಾಗುತ್ತದೆ. ಇದರಿಂದ ಅದೆಷ್ಟೋ ಜನರ ದುಡ್ಡು ಸದ್ದಿಲ್ಲದೆ ಅಕೌಂಟ್‍ನಿಂದ ಮಾಯವಾಗಿದೆ.

    ಇದಕ್ಕಾಗಿ ಸೈಬರ್ ಸೆಕ್ಯೂರಿಟಿ ಸಂಸ್ಥೆಯವರು ಆರ್‍ಬಿಐಗೆ ಪತ್ರ ಬರೆದಿದ್ದು, ಇದರ ಬಗ್ಗೆ ಗಮನ ಹರಿಸಿ, ಒಂದು ಕಮಿಟಿ ರಚನೆ ಮಾಡಿ. ಎಟಿಎಂಗೆ ವಿಸಿಟ್ ಹಾಗೂ ಬ್ಯಾಂಕ್ ಉದ್ಯೋಗಿಗಳಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಅಂತಾ ಹೇಳಿದ್ದಾರೆ.